2 Kings · chapter 10 · verse 27
2 Kings 10:27 in Kannada
ಇದಲ್ಲದೆ ಅವರು ಬಾಳನ ವಿಗ್ರಹ ವನ್ನು ಒಡೆದುಹಾಕಿ ಬಾಳನ ಮನೆಯನ್ನು ಕೆಡವಿಬಿಟ್ಟು ಅದನ್ನು ಈ ಹೊತ್ತಿನ ವರೆಗೂ ತಿಪ್ಪೆಯಾಗಿ ಮಾಡಿದರು.
Idallade avaru baalana vigraha vannu odeduhaaki baalana maneyannu kedavibittu adannu ee hottina varegoo tippeyaagi maadidaru.
2 Kings 10:27 in English
- King James Version (KJV)
- And they brake down the image of Baal, and brake down the house of Baal, and made it a draught house unto this day.
- World English Bible (WEB)
- They broke down the pillar of Baal, and broke down the house of Baal, and made it a latrine, to this day.
- American Standard Version (ASV)
- And they brake down the pillar of Baal, and brake down the house of Baal, and made it a draught-house, unto this day.
- Bible in Basic English (BBE)
- The altar of Baal was pulled down and the house of Baal was broken up and made an unclean place, as it is to this day.
- Darby Translation (DBY)
- and they broke down the column of Baal, and broke down the house of Baal, and made it a draught-house to this day.
- Webster's Bible (WBS)
- And they broke down the image of Baal, and broke down the house of Baal, and made it a draught-house to this day.
- Young's Literal Translation (YLT)
- and break down the standing-pillar of Baal, and break down the house of Baal, and appoint it for a draught-house unto this day.
Read in context
- 25ಅವನು ದಹನಬಲಿಯನ್ನು ಅರ್ಪಿಸಿ ತೀರಿಸಿದ ತರುವಾಯ ಏನಾಯಿತಂದರೆ, ಯೇಹುವು ಕಾವಲುಗಾರನಿಗೂ ಅಧಿಪತಿಗಳಿಗೂನೀವು ಒಳಗೆ ಹೋಗಿ ಯಾವನೂ ಹೊರಗೆ ಬಾರದ ಹಾಗೆ ಅವರನ್ನು ಸಂಹರಿಸಿರಿ ಅಂದನು.
- 26ಹಾಗೆಯೇ ಅವರನ್ನು ಕತ್ತಿಯಿಂದ ಸಂಹರಿಸಿದರು. ಕಾವಲು ಗಾರನೂ ಅಧಿಪತಿಗಳೂ ಅವರನ್ನು ಹೊರಗೆ ಹಾಕಿದ ತರುವಾಯ ಬಾಳನ ಮನೆಯ ಪಟ್ಟಣಕ್ಕೆ ಹೋಗಿ ಬಾಳನ ಮನೆಯಿಂದ ವಿಗ್ರಹವನ್ನು ತಂದು ಅವುಗಳನ್ನು ಸುಟ್ಟುಬಿಟ್ಟರು.
- 27ಇದಲ್ಲದೆ ಅವರು ಬಾಳನ ವಿಗ್ರಹ ವನ್ನು ಒಡೆದುಹಾಕಿ ಬಾಳನ ಮನೆಯನ್ನು ಕೆಡವಿಬಿಟ್ಟು ಅದನ್ನು ಈ ಹೊತ್ತಿನ ವರೆಗೂ ತಿಪ್ಪೆಯಾಗಿ ಮಾಡಿದರು.
- 28ಹೀಗೆಯೇ ಯೇಹುವು ಬಾಳನನ್ನು ಇಸ್ರಾಯೇಲಿ ನಲ್ಲಿಂದ ನಾಶಮಾಡಿಬಿಟ್ಟನು.
- 29ಆದರೆ ಬೇತೇಲ್, ದಾನ್ನಲ್ಲಿಯೂ ಇರುವ ಬಂಗಾರದ ಹೋರಿಗಳಿಂದ ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಪಾಪಗಳನ್ನು ಯೇಹುವು ತೊರೆದುಬಿಡಲಿಲ್ಲ.
Cross references
- Ezra 6:11 ಎಜ್ರನು 6:11ನಾನು ಕೊಡುವ ಅಪ್ಪಣೆ ಏನಂದರೆ--ಯಾವನಾದರೂ ಈ ಮಾತನ್ನು ಬದಲು ಮಾಡಿದರೆ ಅವನ ಮನೆಯಿಂದ ಮರ ಕಿತ್ತು ನೆಡಲ್ಪಡಲಿ; ಅವನು ಅದರಲ್ಲಿ ಗಲ್ಲಿಗೆ ಹಾಕಲ್ಪಡಲಿ; ಅವನ ಮನೆಯು ಇದರ ನಿಮಿತ್ತ ತಿಪ್ಪೆ ಮಾಡಲ್ಪಡಲಿ.
- Daniel 2:5 ದಾನಿಯೇಲನು 2:5ಅರಸನು ಕಸ್ದೀ ಯರಿಗೆ ಪ್ರತ್ಯುತ್ತರವಾಗಿ--ಆ ಕನಸಿನ ಸಂಗತಿಯು ನನ್ನನ್ನು ಬಿಟ್ಟು ಹೋಯಿತು; ನೀವು ಕನಸನ್ನು ಅದರ ಅರ್ಥದೊಂದಿಗೆ ನನಗೆ ತಿಳಿಸದಿದ್ದರೆ ನೀವು ತುಂಡು ತುಂಡಾಗಿ ಕತ್ತರಿಸಲ್ಪಡುವಿರಿ; ನಿಮ್ಮ ಮನೆಗಳು ತಿಪ್ಪೆ ಗುಂಡಿಗಳನ್ನಾಗಿ ಮಾಡಿಸುವೆನು.
- Daniel 3:29 ದಾನಿಯೇಲನು 3:29ಆದದರಿಂದ ನಾನು ನಿರ್ಣಯಮಾಡುವದರಿಂದ ಸಕಲ ಪ್ರಜೆ, ಜನಾಂಗ ಮತ್ತು ಭಾಷೆಗಳಲ್ಲಿ ಯಾರು ಶದ್ರಕ್ ಮೇಷಕ್ ಅಬೇದ್ನೆಗೋ ಎಂಬವರ ದೇವ ರಿಗೆ ವಿರೋಧವಾಗಿ ದೂಷಣೆ ಮಾಡುವರೋ ಅವರು ತುಂಡುತುಂಡಾಗಿ ಕತ್ತರಿಸಲ್ಪಟ್ಟು ಅವರ ಮನೆಗಳು ತಿಪ್ಪೆಗುಂಡಿಗಳಾಗಿ ಮಾಡಲ್ಪಡುವದು. ಈ ವಿಧವಾಗಿ ರಕ್ಷಿಸುವ ದೇವರು ಇನ್ಯಾರು ಇರುವದಿಲ್ಲ.ಆಗ ಅರಸನು ಶದ್ರಕ್ ಮೇಷಕ್ ಅಬೇದ್ನೆಗೋ ಎಂಬ ವರನ್ನು ಬಾಬೆಲ್ ಪ್ರಾಂತ್ಯದಲ್ಲಿ ಉನ್ನತ ಪದವಿಗೆ ತಂದನು.
- 1 Kings 16:32 1 ಅರಸುಗಳು 16:32ಇದಲ್ಲದೆ ತಾನು ಸಮಾರ್ಯದಲ್ಲಿ ಕಟ್ಟಿಸಿದ ಬಾಳನ ಮನೆಯಲ್ಲಿ ಬಾಳನಿಗೆ ಬಲಿಪೀಠವನ್ನು ಕಟ್ಟಿಸಿ ದನು,
- Deuteronomy 7:5 ಧರ್ಮೋಪದೇಶಕಾಂಡ 7:5ಅವರಿಗೆ ಮಾಡಬೇಕಾದ ದ್ದೇನಂದರೆ ಅವರ ಬಲಿಪೀಠಗಳನ್ನು ಒಡೆದುಹಾಕ ಬೇಕು; ಅವರ ವಿಗ್ರಹಗಳನ್ನು ಮುರಿದುಹಾಕಬೇಕು; ಅವರ ತೋಪುಗಳನ್ನು ಕಡಿದುಹಾಕಬೇಕು; ಅವರು ಕೆತ್ತಿದ ವಿಗ್ರಹಗಳನ್ನು ಬೆಂಕಿಯಿಂದ ಸುಡಬೇಕು.
- Leviticus 26:30 ಯಾಜಕಕಾಂಡ 26:30ಇದಲ್ಲದೆ ನಾನು ನಿಮ್ಮ ಉನ್ನತ ಸ್ಥಳಗಳನ್ನು ಹಾಳುಮಾಡಿ ನಿಮ್ಮ ಪ್ರತಿಮೆಗಳನ್ನು ಕಡಿದುಹಾಕಿ ವಿಗ್ರಹಗಳ ಮೇಲೆ ನಿಮ್ಮ ಹೆಣಗಳನ್ನು ಹಾಕುವೆನು; ನನ್ನ ಪ್ರಾಣವು ನಿಮ್ಮನ್ನು ಹೇಸಿಕೊಳ್ಳು ವದು.
- 2 Kings 18:4 2 ಅರಸುಗಳು 18:4ಅವನು ಉನ್ನತ ಸ್ಥಳಗಳನ್ನು ತೆಗೆದುಹಾಕಿ, ವಿಗ್ರಹ ಗಳನ್ನು ಒಡೆದುಬಿಟ್ಟು, ತೋಪುಗಳನ್ನು ಕಡಿದುಹಾಕಿ, ಮೋಶೆಯು ಮಾಡಿದ ತಾಮ್ರದ ಸರ್ಪವನ್ನು ಚೂರುಚೂರು ಮಾಡಿದನು. ಆ ದಿವಸಗಳ ವರೆಗೂ ಇಸ್ರಾ ಯೇಲಿನ ಮಕ್ಕಳು ಅದಕ್ಕೆ ಧೂಪಸುಡುತ್ತಿದ್ದರು. ಅದನ್ನು ತಾಮ್ರದ ತುಂಡು ಎಂದು ಅವನು ಕರೆದನು.
- Deuteronomy 7:25 ಧರ್ಮೋಪದೇಶಕಾಂಡ 7:25ಅವರ ದೇವರುಗಳ ವಿಗ್ರಹಗಳನ್ನು ಬೆಂಕಿಯಿಂದ ಸುಡಬೇಕು; ಅವುಗಳ ಮೇಲಿರುವ ಬೆಳ್ಳಿ ಬಂಗಾರವನ್ನು ಆಶಿಸಿ ನೀನು ತಕ್ಕೊಳ್ಳಬಾರದು; ಅದು ನಿನಗೆ ಉರ್ಲಾ ದೀತು; ಅದು ನಿನ್ನ ದೇವರಾದ ಕರ್ತನಿಗೆ ಅಸಹ್ಯವೇ.ನೀನು ಅದರಂತೆ ಶಾಪಕ್ಕೊಳಗಾಗದ ಹಾಗೆ ಅಸಹ್ಯವಾದದ್ದನ್ನು ನಿನ್ನ ಮನೆಗೆ ತಕ್ಕೊಂಡು ಬರ ಬಾರದು; ಅದನ್ನು ಸಂಪೂರ್ಣವಾಗಿ ಅಸಹ್ಯಿಸಬೇಕು; ಸಂಪೂರ್ಣವಾಗಿ ಹೇಸಿಕೊಳ್ಳಬೇಕು; ಯಾಕಂದರೆ ಅದು ಶಪಿಸಲ್ಪಟ್ಟದ್ದೇ.
- 2 Kings 23:7–14 2 ಅರಸುಗಳು 23:7–14ಸ್ತ್ರೀಯರು ವಿಗ್ರಹದ ತೋಪಿಗೋಸ್ಕರ ಮನೆಗಳನ್ನು ನೇಯುತ್ತಿದ್ದ ಕಡೆಯಲ್ಲಿ ಕರ್ತನ ಮನೆಯ ಬಳಿಯಲ್ಲಿ ಇದ್ದ ಪುರುಷ ಸಂಗಮರ ಮನೆಗಳನ್ನು ಕೆಡವಿಸಿದನು. ಇದಲ್ಲದೆ ಅವನು ಯೆಹೂದದ ಪಟ್ಟಣಗಳಿಂದ ಯಾಜಕರೆಲ್ಲರನ್ನು ಬರ ಮಾಡಿ ಗೆಬ ಮೊದಲುಗೊಂಡು ಬೇರ್ಷೆಬದ ವರೆಗೂ ಯಾಜಕರು ಧೂಪ ಸುಡುತ್ತಿದ್ದ ಉನ್ನತ ಸ್ಥಳಗಳನ್ನು ಹೊಲೆಮಾಡಿ ಪಟ್ಟಣದ ಬಾಗಲಿನ ಎಡಪಾರ್ಶ್ವದಲ್ಲಿದ್ದ ಪಟ್ಟಣದ ಅಧಿಪತಿಯಾದ ಯೆಹೋಶುವನ ಬಾಗಲಿನ ದ್ವಾರದಲ್ಲಿದ್ದ ಬಾಗಲುಗಳ ಉನ್ನತ ಸ್ಥಳಗಳನ್ನು ಕೆಡವಿ ಹಾಕಿದನು. ಆದರೆ ಉನ್ನತ ಸ್ಥಳಗಳ ಯಾಜಕರು ಯೆರೂಸಲೇಮಿನಲ್ಲಿರುವ ಕರ್ತನ ಬಲಿಪೀಠದ ಬಳಿ ಯಲ್ಲಿ ಸೇರದೆ ತಮ್ಮ ಸಹೋದರರ ಮಧ್ಯದಲ್ಲಿ ಹುಳಿ ಇಲ್ಲದ ರೊಟ್ಟಿಯನ್ನು ತಿನ್ನುತ್ತಾ ಇದ್ದರು. ಯಾವನೂ ತನ್ನ ಮಗನನ್ನಾದರೂ ಮಗಳನ್ನಾದರೂ ಮೋಲೆಕನಿ ಗೋಸ್ಕರ ಬೆಂಕಿದಾಟಿಸದ ಹಾಗೆ ಹಿನ್ನೋಮನ ಮಕ್ಕಳ ತಗ್ಗಿನಲ್ಲಿದ್ದ ತೋಫೆತನ್ನು ಹೊಲೆಮಾಡಿದನು. ಬೈಲ ಲ್ಲಿರುವ ಪ್ರಧಾನನಾದ ನಾತಾನ್ ಮೆಲೆಕನ ಕೊಠಡಿಯ ಹತ್ತಿರ ಇದ್ದ ಕರ್ತನ ಮನೆಯ ದ್ವಾರದ ಬಳಿಯಲ್ಲಿ ಯೆಹೂದದ ಅರಸುಗಳು ಸೂರ್ಯನಿಗೆ ಕೊಟ್ಟ ಕುದುರೆ ಗಳನ್ನು ತೆಗೆದುಹಾಕಿ ಸೂರ್ಯನ ರಥಗಳನ್ನು ಬೆಂಕಿ ಯಿಂದ ಸುಟ್ಟುಬಿಟ್ಟನು. ಯೆಹೂದದ ಅರಸರು ಉಂಟು ಮಾಡಿದ ಆಹಾಜನ ಮೇಲು ಮಾಳಿಗೆಯ ಮೇಲೆ ಇದ್ದ ಬಲಿಪೀಠಗಳನ್ನೂ ಮನಸ್ಸೆಯು ಕರ್ತನ ಮನೆಯ ಎರಡು ಅಂಗಳಗಳಲ್ಲಿ ಮಾಡಿದ ಬಲಿಪೀಠ ಗಳನ್ನೂ ಅರಸನು ಕೆಡವಿಸಿ ಅಲ್ಲಿಂದ ಅದರ ಧೂಳನ್ನು ಕಿದ್ರೋನ್ ಹಳ್ಳದಲ್ಲಿ ಹಾಕಿಸಿದನು. ಇದಲ್ಲದೆ ಯೆರೂಸಲೇಮಿನ ಮುಂದೆ ಮೋಸದ ಬೆಟ್ಟದ ಬಲ ಪಾರ್ಶ್ವದಲ್ಲಿದ್ದ ಚೀದೋನ್ಯರ ಅಸಹ್ಯಕರವಾದ ಅಷ್ಟೋ ರೆತಿಗೂ ಮೋವಾಬ್ಯರ ಅಸಹ್ಯಕರವಾದ ಕೆಮೋಷ ನಿಗೂ ಅಮ್ಮೋನಿನ ಮಕ್ಕಳ ಅಸಹ್ಯಕರವಾದ ಮಿಲ್ಕೋ ಮ್ನಿಗೂ ಇಸ್ರಾಯೇಲಿನ ಅರಸನಾದ ಸೊಲೊ ಮೋನನು ಕಟ್ಟಿಸಿದ ಉನ್ನತ ಸ್ಥಳಗಳನ್ನೂ ಅರಸನು ಹೊಲೆಮಾಡಿ ವಿಗ್ರಹಗಳನ್ನು ಮುರಿದು ವಿಗ್ರಹದ ತೋಪುಗಳನ್ನು ಕಡಿದುಬಿಟ್ಟು ಅವುಗಳ ಸ್ಥಳಗಳನ್ನು ಮನುಷ್ಯರ ಎಲುಬುಗಳಿಂದ ತುಂಬಿಸಿದನು.
- 2 Chronicles 34:3–7 2 ಪೂರ್ವಕಾಲವೃತ್ತಾಂತ 34:3–7ಅವನು ಇನ್ನೂ ಹುಡುಗನಾಗಿರುವಾಗ ತನ್ನ ಆಳ್ವಿಕೆಯ ಎಂಟನೇ ವರುಷದಲ್ಲಿ ತನ್ನ ಪಿತೃವಾದ ದಾವೀದನ ದೇವರನ್ನು ಹುಡುಕಲು ಆರಂಭಿಸಿದನು. ಅವನ ಆಳ್ವಿಕೆಯ ಹನ್ನೆರಡನೇ ವರುಷದಲ್ಲಿ ಉನ್ನತ ಸ್ಥಳಗಳನ್ನೂ ತೋಪುಗಳನ್ನೂ ಕೆತ್ತಿದ ವಿಗ್ರಹಗಳನ್ನೂ ಎರಕಹೊಯಿದ ವಿಗ್ರಹಗಳನ್ನೂ ತೆಗೆದುಹಾಕಿ ಯೆಹೂದ ಯೆರೂಸಲೇಮನ್ನು ಶುಚಿಮಾಡಲು ಆರಂಭಿಸಿದನು. ಅವರು ಬಾಳನ ಬಲಿಪೀಠಗಳನ್ನು ಅವನ ಸಮ್ಮುಖದಿಂದ ಕೆಡವಿಹಾಕಿದರು. ಅವುಗಳ ಮೇಲಿರುವ ಸೂರ್ಯಸ್ತಂಭಗಳನ್ನು ಕಡಿದುಹಾಕಿ ತೋಪುಗಳನ್ನೂ ಕೆತ್ತಿದ ವಿಗ್ರಹಗಳನ್ನೂ ಎರಕ ಹೊಯ್ದ ವಿಗ್ರಹಗಳನ್ನೂ ಒಡೆದುಬಿಟ್ಟು ಪುಡಿಪುಡಿ ಮಾಡಿ, ಅವುಗಳಿಗೆ ಬಲಿ ಅರ್ಪಿಸಿದವರ ಸಮಾಧಿ ಗಳ ಮೇಲೆ ಚೆಲ್ಲಿಸಿ ಪೂಜಾರಿಗಳ ಎಲುಬುಗಳನ್ನು ಅವರ ಬಲಿಪೀಠಗಳ ಮೇಲೆ ಸುಟ್ಟುಬಿಟ್ಟು, ಯೆಹೂ ದವನ್ನೂ ಯೆರೂಸಲೇಮನ್ನೂ ಶುಚಿಮಾಡಿದರು. ಹೀಗೆಯೇ ಅವರು ತಮ್ಮ ಗುದ್ದಲಿಗಳಿಂದ ಮನಸ್ಸೆ ಎಫ್ರಾಯಾಮ್ ಸಿಮೆಯೋನ್ ಪಟ್ಟಣಗಳು ಮೊದಲು ಗೊಂಡು ನಫ್ತ್ತಾಲಿಯ ವರೆಗೂ ಸುತ್ತಲೂ ಮಾಡಿದರು. ಅವನು ಬಲಿಪೀಠಗಳನ್ನೂ ತೋಪುಗಳನ್ನೂ ಕೆಡವಿ ಹಾಕಿ ಕೆತ್ತಿದ ವಿಗ್ರಹಗಳನ್ನು ಕುಟ್ಟಿ ಪುಡಿಪುಡಿ ಮಾಡಿ ಇಸ್ರಾಯೇಲ್ ದೇಶದಲ್ಲೆಲ್ಲಿಯೂ ಇರುವ ಸಮಸ್ತ ವಿಗ್ರಹಗಳನ್ನು ಕೆಡಿಸಿದ ತರುವಾಯ ಯೆರೂಸಲೇಮಿಗೆ ಹಿಂತಿರುಗಿದನು.