Proverbs · chapter 11 · verse 13
Proverbs 11:13 in Kannada
ಚಾಡಿಕೋರನು ರಹಸ್ಯಗಳನ್ನು ಬಹಿರಂಗ ಪಡಿಸುತ್ತಾನೆ. ನಂಬಿಕೆಯ ಆತ್ಮವುಳ್ಳವನು ಸಂಗತಿಯನ್ನು ಮುಚ್ಚುತ್ತಾನೆ.
Chaadikoranu rahasyagalannu bahiranga padisuttaane. Nambikeya aatmavullavanu sangatiyannu muchchuttaane.
Proverbs 11:13 in English
- King James Version (KJV)
- A talebearer revealeth secrets: but he that is of a faithful spirit concealeth the matter.
- World English Bible (WEB)
- One who brings gossip betrays a confidence, but one who is of a trustworthy spirit is one who keeps a secret.
- American Standard Version (ASV)
- He that goeth about as a tale-bearer revealeth secrets; But he that is of a faithful spirit concealeth a matter.
- Bible in Basic English (BBE)
- He who goes about talking of others makes secrets public, but the true-hearted man keeps things covered.
- Darby Translation (DBY)
- He that goeth about talebearing revealeth secrets; but he that is of a faithful spirit concealeth the matter.
- Webster's Bible (WBS)
- A tale-bearer revealeth secrets: but he that is of a faithful spirit concealeth the matter.
- Young's Literal Translation (YLT)
- A busybody is revealing secret counsel, And the faithful of spirit is covering the matter.
Read in context
- 11ಯಥಾರ್ಥವಂತರ ಆಶೀರ್ವಾದದಿಂದ ಪಟ್ಟ ಣವು ಹೆಚ್ಚಿಸಲ್ಪಡುತ್ತದೆ. ದುಷ್ಟರ ಬಾಯಿಂದ ಅದು ಕೆಡವಲ್ಪಡುತ್ತದೆ.
- 12ಜ್ಞಾನವಿಲ್ಲದವನು ತನ್ನ ನೆರೆಯ ವನನ್ನು ಹೀನೈಸುತ್ತಾನೆ; ವಿವೇಕಿಯು ಮೌನವಾಗಿರು ತ್ತಾನೆ.
- 13ಚಾಡಿಕೋರನು ರಹಸ್ಯಗಳನ್ನು ಬಹಿರಂಗ ಪಡಿಸುತ್ತಾನೆ. ನಂಬಿಕೆಯ ಆತ್ಮವುಳ್ಳವನು ಸಂಗತಿಯನ್ನು ಮುಚ್ಚುತ್ತಾನೆ.
- 14ಆಲೋಚನೆ ಇಲ್ಲದಿರುವಲ್ಲಿ ಜನರು ಬೀಳುತ್ತಾರೆ; ಸಲಹೆಗಾರರ ಸಮೂಹದಲ್ಲಿ ಭದ್ರತೆ ಇದೆ.
- 15ಅನ್ಯನಿಗೆ ಹೊಣೆಯಾಗುವವನು ಹಾನಿಗೆ ಗುರಿಯಾಗುತ್ತಾನೆ; ಹೊಣೆಗಾರತ್ವವನ್ನು ಹಗೆಮಾಡಿ ಕೊಳ್ಳುವವನು ಭದ್ರವಾಗಿರುವನು.
Cross references
- Proverbs 20:19 ಜ್ಞಾನೋಕ್ತಿಗಳು 20:19ತಿರುಗುವ ಚಾಡಿ ಕೋರನು ಗುಟ್ಟುಗಳನ್ನು ರಟ್ಟುಮಾಡುತ್ತಾನೆ. ಆದ ಕಾರಣ ತನ್ನ ತುಟಿಗಳಿಂದ ಮುಖಸ್ತುತಿ ಮಾಡುವವನ ಗೊಡವೆಗೆ ಹೋಗಬೇಡ.
- Leviticus 19:16 ಯಾಜಕಕಾಂಡ 19:16ನಿನ್ನ ಜನರ ಮಧ್ಯದಲ್ಲಿ ಚಾಡಿಗಾರನಾಗಿ ತಿರುಗಾಡಬೇಡ; ನಿನ್ನ ನೆರೆಯವನ ರಕ್ತಾಪರಾಧಕ್ಕೆ ಕಾರಣನಾಗಬೇಡ; ನಾನೇ ಕರ್ತನು.
- Proverbs 25:9 ಜ್ಞಾನೋಕ್ತಿಗಳು 25:9ನಿನ್ನ ನೆರೆಯವನೊಂದಿಗೆ ನಿನ್ನ ವ್ಯಾಜ್ಯವನ್ನು ಚರ್ಚಿಸು; ಗುಟ್ಟನ್ನು ಬೇರೊಬ್ಬನಿಗೆ ಹೊರಪಡಿಸಬೇಡ;
- 1 Timothy 5:13 1 ತಿಮೊಥೆಯನಿಗೆ 5:13ಇದಲ್ಲದೆ ಅವರು ಮನೆಯಿಂದ ಮನೆಗೆ ತಿರುಗಾಡುತ್ತಾ ಮೈಗಳ್ಳತನವನ್ನು ಕಲಿಯುತ್ತಾರೆ; ಮೈಗಳ್ಳರಾಗುವದ ಲ್ಲದೆ ಹರಟೆ ಮಾತನ್ನಾಡುವರು ಮತ್ತು ಇತರರ ಕೆಲಸ ದಲ್ಲಿ ಕೈಹಾಕುವವರಾಗಿ ಆಡಬಾರದ ಮಾತುಗಳನ್ನಾಡು ತ್ತಾರೆ.
- Proverbs 26:20–22 ಜ್ಞಾನೋಕ್ತಿಗಳು 26:20–22ಕಟ್ಟಿಗೆ ಇಲ್ಲದಿರುವಲ್ಲಿ ಬೆಂಕಿಯು ಆರಿ ಹೋಗುತ್ತದೆ--ಹಾಗಯೇ ಚಾಡಿಕೋರನು ಇಲ್ಲ ದಿರುವಲ್ಲಿ ಜಗಳ ಶಮನವಾಗುವದು. ಕೆಂಡಗಳಿಗೆ ಇದ್ದಲು, ಬೆಂಕಿಗೆ ಕಟ್ಟಿಗೆ; ಹಾಗೆಯೇ ಜಗಳವನ್ನು ಕೆರಳಿಸುವಂತೆ ಕಲಹಮಾಡುವವನು ಇರುವನು. ಚಾಡಿಕೋರನ ಮಾತುಗಳು ಗಾಯಗಳ ಹಾಗೆ ಹೊಟ್ಟೆಯೊಳಕ್ಕೆ ಇಳಿಯುತ್ತವೆ.
- Joshua 2:14 ಯೆಹೋಶುವ 2:14ಆ ಮನುಷ್ಯರು ಆಕೆಗೆ--ನೀನು ಈ ನಮ್ಮ ಕಾರ್ಯವನ್ನು ಬಹಿರಂಗಮಾಡದೆ ಇದ್ದರೆ ನಮ್ಮ ಪ್ರಾಣವು ನಿಮಗೋಸ್ಕರ ಇರುವದು. ಕರ್ತನು ನಮಗೆ ಈ ದೇಶವನ್ನು ಕೊಟ್ಟಾಗ ಸತ್ಯದಿಂದಲೂ ದಯ ದಿಂದಲೂ ನಡೆದುಕೊಳ್ಳುವೆವು ಅಂದರು.
- Joshua 2:20 ಯೆಹೋಶುವ 2:20ಇದಲ್ಲದೆ ಈ ನಮ್ಮ ಕಾರ್ಯ ವನ್ನು ತಿಳಿಸಿದರೆ ನೀನು ನಮಗೆ ಇಟ್ಟ ಆಣೆಗೆ ನಾವು ಬಿಡುಗಡೆಯಾಗಿರುವೆವು ಅಂದರು.
- Jeremiah 38:27 ಯೆರೆಮೀಯ 38:27ಆಗ ಪ್ರಧಾನರೆಲ್ಲರೂ ಯೆರೆವಿಾಯನ ಬಳಿಗೆ ಬಂದು ಅವನನ್ನು ಕೇಳಿದರು. ಅವನು ಅರಸನು ಆಜ್ಞಾಪಿಸಿದ ಈ ಮಾತುಗಳನ್ನೆಲ್ಲಾ ಅವರಿಗೆ ತಿಳಿಸಿದನು; ಆಗ ಅವರು ಸುಮ್ಮನಾದರು; ಆ ಕಾರ್ಯದ ವಿಷಯ ವನ್ನು ಅವರು ಗ್ರಹಿಸಲಿಲ್ಲ.ಈ ಪ್ರಕಾರ ಯೆರೂ ಸಲೇಮು ಹಿಡಿಯಲ್ಪಡುವ ದಿವಸದ ವರೆಗೆ ಯೆರೆ ವಿಾಯನು ಸೆರೆಮನೆಯ ಅಂಗಳದಲ್ಲಿ ವಾಸವಾ ಗಿದ್ದನು; ಯೆರೂಸಲೇಮು ಹಿಡಿಯಲ್ಪಡುವಾಗ ಅವನು ಅಲ್ಲೇ ಇದ್ದನು.
- Proverbs 14:5 ಜ್ಞಾನೋಕ್ತಿಗಳು 14:5ನಂಬತಕ್ಕ ಸಾಕ್ಷಿಯು ಸುಳ್ಳಾಡನು; ಅಬದ್ದಸಾಕ್ಷಿಯು ಸುಳ್ಳುಗಳನ್ನೇ ಉಚ್ಚರಿ ಸುತ್ತಾನೆ.
- Nehemiah 6:17–19 ನೆಹೆಮೀಯ 6:17–19ಹೇಗಿದ್ದರೂ ಆ ದಿವಸಗಳಲ್ಲಿ ಯೆಹೂದದಲ್ಲಿದ್ದ ಮುಖ್ಯಸ್ಥರು ಟೋಬೀಯನ ಬಳಿಗೆ ಬಹಳ ಪತ್ರ ಗಳನ್ನು ಕಳುಹಿಸಿದರು. ಟೋಬೀಯನ ಪ್ರತ್ಯುತ್ತರ ಗಳು ಅವರಿಗೆ ಬಂದವು. ಯಾಕಂದರೆ ಅವನು ಅರಾಹನ ಮಗನಾದ ಶೆಕೆನ್ಯನ ಅಳಿಯನಾದದ ರಿಂದಲೂ ಅವನ ಮಗನಾದ ಯೆಹೋಹಾನಾನನು ಬೆರೆಕ್ಯನ ಮಗನಾದ ಮೆಷುಲ್ಲಾಮನ ಮಗಳನ್ನು ತಕ್ಕೊಂಡದ್ದರಿಂದಲೂ ಯೆಹೂದದಲ್ಲಿ ಅನೇಕರು ಅವನಿಗೆ ಪ್ರಮಾಣಮಾಡಿದರು.ಇದಲ್ಲದೆ ಅವರು ಅವನ ಸತ್ಕಾರ್ಯಗಳನ್ನು ನನ್ನ ಮುಂದೆ ಹೇಳಿ ನನ್ನ ಕಾರ್ಯಗಳನ್ನು ಅವನಿಗೆ ತಿಳಿಸಿದರು. ಆದರೆ ಟೋಬೀ ಯನು ನನ್ನನ್ನು ಭಯಪಡಿಸುವದಕ್ಕೆ ಪತ್ರಗಳನ್ನು ಕಳುಹಿಸಿದನು. ಇದಲ್ಲದೆ ಅವರು ಅವನ ಸತ್ಕಾರ್ಯಗಳನ್ನು ನನ್ನ ಮುಂದೆ ಹೇಳಿ ನನ್ನ ಕಾರ್ಯಗಳನ್ನು ಅವನಿಗೆ ತಿಳಿಸಿದರು. ಆದರೆ ಟೋಬೀ ಯನು ನನ್ನನ್ನು ಭಯಪಡಿಸುವದಕ್ಕೆ ಪತ್ರಗಳನ್ನು ಕಳುಹಿಸಿದನು.