Leviticus · chapter 4 · verse 15
Leviticus 4:15 in Kannada
ಸಭೆಯ ಹಿರಿಯರು ಕರ್ತನ ಮುಂದೆ ಆ ಹೋರಿಯ ತಲೆಯ ಮೇಲೆ ತಮ್ಮ ಕೈಗಳನ್ನಿಟ್ಟು ಅದನ್ನು ಕರ್ತನ ಮುಂದೆ ವಧಿಸಬೇಕು.
Sabheya hiriyaru kartana munde aa horiya taleya mele tamma kaigalannittu adannu kartana munde vadhisabeku.
Leviticus 4:15 in English
- King James Version (KJV)
- And the elders of the congregation shall lay their hands upon the head of the bullock before the LORD: and the bullock shall be killed before the LORD.
- World English Bible (WEB)
- The elders of the congregation shall lay their hands on the head of the bull before the LORD; and the bull shall be killed before the LORD.
- American Standard Version (ASV)
- And the elders of the congregation shall lay their hands upon the head of the bullock before Jehovah; and the bullock shall be killed before Jehovah.
- Bible in Basic English (BBE)
- And let the chiefs of the people put their hands on its head before the Lord, and put the ox to death before the Lord.
- Darby Translation (DBY)
- and the elders of the assembly shall lay their hands on the head of the bullock before Jehovah; and one shall slaughter the bullock before Jehovah.
- Webster's Bible (WBS)
- And the elders of the congregation shall lay their hands upon the head of the bullock before the LORD: and the bullock shall be killed before the LORD.
- Young's Literal Translation (YLT)
- and the elders of the company have laid their hands on the head of the bullock, before Jehovah, and [one] hath slaughtered the bullock before Jehovah.
Read in context
- 13ಮಾಡಬಾರದ ಕೆಲಸಗಳನ್ನು ಕರ್ತನ ಆಜ್ಞೆಗಳಿಗೆ ವಿರೋಧವಾಗಿ ಯಾವದನ್ನಾದರೂ ಇಸ್ರಾಯೇಲಿನ ಸಭೆಯವರು ಅರಿಯದೆ ಮಾಡಿ ಅಪರಾಧಿಗಳಾಗಿದ್ದರೆ ಅದು ಸಭೆಗೆ ಕಣ್ಮರೆಯಾಗಿದ್ದರೆ
- 14ಅವರು ಮಾಡಿದ ಪಾಪವು ಗೊತ್ತಾದಾಗ ಆ ಪಾಪಕ್ಕಾಗಿ ಸಭೆಯು ಒಂದು ಎಳೇ ಹೋರಿಯನ್ನು ಸಭೆಯ ಗುಡಾರದ ಮುಂದೆ ತರಬೇಕು.
- 15ಸಭೆಯ ಹಿರಿಯರು ಕರ್ತನ ಮುಂದೆ ಆ ಹೋರಿಯ ತಲೆಯ ಮೇಲೆ ತಮ್ಮ ಕೈಗಳನ್ನಿಟ್ಟು ಅದನ್ನು ಕರ್ತನ ಮುಂದೆ ವಧಿಸಬೇಕು.
- 16ಅಭಿಷಿಕ್ತ ನಾದ ನಿಮ್ಮ ಯಾಜಕನು ಆ ಹೋರಿಯ ರಕ್ತವನ್ನು ಸಭೆಯ ಗುಡಾರಕ್ಕೆ ತರಬೇಕು.
- 17ಆ ಯಾಜಕನು ತನ್ನ ಬೆರಳನ್ನು ಸ್ವಲ್ಪ ರಕ್ತದಲ್ಲಿ ಅದ್ದಿ ಅದನ್ನು ಕರ್ತನ ಮುಂದೆ, ಅಂದರೆ ಪರದೆಯ ಮುಂದೆ ಏಳುಸಾರಿ ಚಿಮುಕಿಸಬೇಕು.
Cross references
- Leviticus 1:4 ಯಾಜಕಕಾಂಡ 1:4ಅವನು ತನ್ನ ಕೈಯನ್ನು ದಹನಬಲಿಯ ತಲೆಯ ಮೇಲೆ ಇಡಬೇಕು: ಹೀಗೆ ಅದು ಅವನಿಗೋಸ್ಕರ ಅವನ ಪ್ರಾಯಶ್ಚಿತ್ತಕ್ಕಾಗಿ ಅಂಗೀಕಾರವಾಗುವದು.
- Leviticus 4:4 ಯಾಜಕಕಾಂಡ 4:4ಅವನು ಆ ಹೋರಿ ಯನ್ನು ಸಭೆಯ ಗುಡಾರದ ಬಾಗಿಲ ಬಳಿಯಲ್ಲಿ ಕರ್ತನ ಎದುರಿಗೆ ತಂದು ತನ್ನ ಕೈಯನ್ನು ಅದರ ತಲೆಯ ಮೇಲಿಟ್ಟು ಆ ಹೋರಿಯನ್ನು ಕರ್ತನ ಮುಂದೆ ವಧಿಸ ಬೇಕು.
- Deuteronomy 21:3–9 ಧರ್ಮೋಪದೇಶಕಾಂಡ 21:3–9ಹತನಾದವನಿಗೆ ಸವಿಾಪವಾದ ಊರು ಯಾವದೋ ಆ ಊರಿನ ಹಿರಿಯರು ಕೆಲಸ ಮಾಡದಂಥ, ನೊಗದಲ್ಲಿ ಎಳೆದಂಥ, ಒಂದು ಕಡಸನ್ನು ತಮಗೆ ತಕ್ಕೊಳ್ಳಬೇಕು. ಆ ಮೇಲೆ ಆ ಊರಿನ ಹಿರಿಯರು ಆ ಮಣಕವನ್ನು ನಿತ್ಯ ಹರಿಯುವ ಹಳ್ಳದ ಬಳಿಗೆ ಬೇಸಾಯವಾಗದಂಥ, ಬೀಜಹಾಕದಂಥ, ಸ್ಥಳಕ್ಕೆ ತಕ್ಕೊಂಡು ಹೋಗಿ ಅಲ್ಲಿ ಹಳ್ಳದಲ್ಲಿ ಮಣಕದ ಕುತ್ತಿಗೆಯನ್ನು ಕೊಯ್ಯಬೇಕು. ಆ ಮೇಲೆ ಲೇವಿಯ ಕುಮಾರರಾದ ಯಾಜಕರು ಹತ್ತಿರ ಬರಬೇಕು; ಅವರನ್ನು ನಿನ್ನ ದೇವರಾದ ಕರ್ತನು ತನಗೆ ಸೇವೆಮಾಡುವದಕ್ಕೂ ಕರ್ತನ ಹೆಸರಿನಲ್ಲಿ ಆಶೀರ್ವಾದ ಕೊಡುವದಕ್ಕೂ ಆದುಕೊಂಡಿದ್ದಾನೆ; ಅವರ ಮಾತಿನಿಂದ ಎಲ್ಲಾ ವಿವಾದ ಗಳಿಗೂ ಎಲ್ಲಾ ಪೆಟ್ಟುಗಳಿಗೂ ತೀರ್ಪು ಆಗಬೇಕು. ಆ ಮೇಲೆ ಹತನಾದವನಿಗೆ ಸವಿಾಪವಾಗಿರುವ ಆ ಊರಿನ ಹಿರಿಯರೆಲ್ಲರು ಹಳ್ಳದಲ್ಲಿ ಕೊಯ್ದ ಮಣಕದ ಮೇಲೆ ಕೈಗಳನ್ನು ತೊಳಕೊಂಡು ಉತ್ತರಕೊಟ್ಟು ಹೇಳತಕ್ಕದ್ದೇನಂದರೆ--ನಮ್ಮ ಕೈಗಳು ಈ ರಕ್ತವನ್ನು ಚೆಲ್ಲಲಿಲ್ಲ; ನಮ್ಮ ಕಣ್ಣುಗಳು ಅದನ್ನು ನೋಡಲಿಲ್ಲ. ಓ ಕರ್ತನೇ, ನೀನು ವಿಮೋಚಿಸಿದ ನಿನ್ನ ಜನರಾದ ಇಸ್ರಾಯೇಲ್ಯರಿಗೆ ಕರುಣೆಯುಳ್ಳವನಾಗಿರು. ನಿನ್ನ ಜನ ರಾದ ಇಸ್ರಾಯೇಲ್ಯರ ಮೇಲೆ ನಿರ್ದೋಷವಾದ ರಕ್ತಾಪರಾಧವನ್ನು ಹೊರಿಸಬೇಡ ಎಂಬದೇ. ಆ ರಕ್ತಾಪರಾಧವು ಅವರಿಗೆ ಕ್ಷಮಿಸಲ್ಪಡುವದು. ಈ ಪ್ರಕಾರ ನೀನು ಕರ್ತನ ಮುಂದೆ ಸರಿಯಾದದ್ದನ್ನು ಮಾಡಿದರೆ ರಕ್ತಾಪರಾಧವನ್ನು ನಿನ್ನಿಂದ ತೆಗೆದುಹಾಕುವಿ.
- Numbers 8:10 ಅರಣ್ಯಕಾಂಡ 8:10ನೀನು ಲೇವಿ ಯರನ್ನು ಕರ್ತನ ಎದುರಿನಲ್ಲಿ ಕರತರಬೇಕು. ಆಗ ಇಸ್ರಾಯೇಲ್ ಮಕ್ಕಳು ತಮ್ಮ ಕೈಗಳನ್ನು ಲೇವಿಯರ ಮೇಲೆ ಇಡಬೇಕು.
- Exodus 24:1 ವಿಮೋಚನಕಾಂಡ 24:1ಆತನು ಮೋಶೆಗೆ--ನೀನೂ ಆರೋನನೂ ನಾದಾಬನೂ ಅಬೀಹೂ ಇಸ್ರಾಯೇಲಿನ ಹಿರಿಯರಲ್ಲಿ ಎಪ್ಪತ್ತು ಮಂದಿಯೂ ಕರ್ತನ ಬಳಿಗೆ ಬಂದು ದೂರದಲ್ಲಿ ಆರಾಧಿಸಿರಿ.
- Leviticus 8:14 ಯಾಜಕಕಾಂಡ 8:14ಪಾಪದ ಬಲಿಗಾಗಿ ಅವನು ಹೋರಿಯನ್ನು ತಂದನು. ಆರೋನನೂ ಅವನ ಕುಮಾರರೂ ಪಾಪದ ಬಲಿಗಾಗಿ ಆ ಹೋರಿಯ ತಲೆಯ ಮೇಲೆ ತಮ್ಮ ಕೈಗಳನ್ನು ಇಟ್ಟರು.
- Numbers 11:16 ಅರಣ್ಯಕಾಂಡ 11:16ಕರ್ತನು ಮೋಶೆಗೆ ಹೇಳಿದ್ದೇನಂದರೆ--ಜನರ ಹಿರಿಯರೆಂದೂ ಅವರ ಮೇಲಿನ ಉದ್ಯೋಗಸ್ಥರೆಂದೂ ನೀನು ತಿಳಿದುಕೊಂಡಂಥ ಇಸ್ರಾಯೇಲ್ಯರ ಹಿರಿಯರೊ ಳಗೆ ಎಪ್ಪತ್ತು ಮಂದಿಯನ್ನು ನನ್ನ ಬಳಿಗೆ ಕೂಡಿಸಿ ಸಭೆಯ ಗುಡಾರದ ಕಡೆಗೆ ಕರಕೊಂಡು ಬಾ. ಅವರು ಅಲ್ಲಿ ನಿನ್ನ ಸಂಗಡ ನಿಂತಿರಲಿ.
- Leviticus 8:22 ಯಾಜಕಕಾಂಡ 8:22ಅವನು ಪ್ರತಿಷ್ಠೆಯ ಟಗರಾದ ಮತ್ತೊಂದು ಟಗರನ್ನು ತಂದನು; ಆರೋನನೂ ಅವನ ಕುಮಾ ರರೂ ಆ ಟಗರಿನ ತಲೆಯ ಮೇಲೆ ತಮ್ಮ ಕೈಗಳನ್ನು ಇಟ್ಟರು.
- Leviticus 16:21 ಯಾಜಕಕಾಂಡ 16:21ಆರೋನನು ಆ ಜೀವವುಳ್ಳ ಆಡಿನ ತಲೆಯ ಮೇಲೆ ತನ್ನ ಎರಡೂ ಕೈಗಳನ್ನು ಇಟ್ಟು ಇಸ್ರಾಯೇಲ್ ಮಕ್ಕಳ ಎಲ್ಲಾ ಅಕ್ರಮಗಳನ್ನೂ ಎಲ್ಲಾ ಪಾಪಗಳಲ್ಲಿರುವ ದ್ರೋಹಗಳನ್ನೂ ಅರಿಕೆ ಮಾಡಿ ಅವುಗಳನ್ನು ಆಡಿನ ತಲೆಯ ಮೇಲೆ ಇರಿಸಿ ಯೋಗ್ಯನಾದ ಒಬ್ಬ ಮನುಷ್ಯನ ಕೈಯಿಂದ ಅದನ್ನು ಅಡವಿಯೊಳಗೆ ಕಳುಹಿಸಿಬಿಡಬೇಕು.
- Exodus 24:9 ವಿಮೋಚನಕಾಂಡ 24:9ಆಗ ಮೋಶೆಯೂ ಅರೋನನೂ ನಾದಾಬನೂ ಅಬೀಹುವೂ ಇಸ್ರಾಯೇಲಿನ ಹಿರಿಯರಲ್ಲಿ ಎಪ್ಪತ್ತು ಜನರೂ ಏರಿಹೋದರು.
- Numbers 11:25 ಅರಣ್ಯಕಾಂಡ 11:25ಕರ್ತನು ಮೇಘದೊಳಗೆ ಇಳಿದು ಬಂದು ಅವನ ಸಂಗಡ ಮಾತನಾಡಿ ಅವನ ಮೇಲಿರುವ ಆತ್ಮದಲ್ಲಿ ಪಾಲನ್ನು ತೆಗೆದು ಹಿರಿಯರಾದ ಎಪ್ಪತ್ತು ಮಂದಿಯ ಮೇಲೆ ಇಟ್ಟನು. ಆತ್ಮವು ಅವರ ಮೇಲೆ ನೆಲೆಯಾಗಿ ದ್ದಾಗ ಅವರು ಪ್ರವಾದಿಸಿದರು. ಅದನ್ನು ನಿಲ್ಲಿಸಲಿಲ್ಲ.