Luke · chapter 1 · verse 64
Luke 1:64 in Kannada
ಕೂಡಲೆ ಅವನ ಬಾಯಿ ತೆರೆಯಲ್ಪಟ್ಟು ಅವನ ನಾಲಿಗೆಯು ಸಡಿಲವಾಯಿತು ಮತ್ತು ಅವನು ಮಾತ ನಾಡಿ ದೇವರನ್ನು ಕೊಂಡಾಡಿದನು.
Koodale avana baayi tereyalpattu avana naaligeyu sadilavaayitu mattu avanu maata naadi devarannu kondaadidanu.
Luke 1:64 in English
- King James Version (KJV)
- And his mouth was opened immediately, and his tongue [loosed], and he spake, and praised God.
- World English Bible (WEB)
- His mouth was opened immediately and his tongue freed, and he spoke, blessing God.
- American Standard Version (ASV)
- And his mouth was opened immediately, and his tongue [loosed], and he spake, blessing God.
- Bible in Basic English (BBE)
- And straight away his mouth was open and his tongue was free and he gave praise to God.
- Darby Translation (DBY)
- And his mouth was opened immediately, and his tongue, and he spake, blessing God.
- Webster's Bible (WBS)
- And his mouth was opened immediately, and his tongue [loosed] , and he spoke, and praised God.
- Young's Literal Translation (YLT)
- and his mouth was opened presently, and his tongue, and he was speaking, praising God.
Read in context
- 62ಅವನು ಯಾವ ಹೆಸರಿ ನಿಂದ ಕರೆಯಲ್ಪಡಬೇಕೆಂದು ಅವನ ತಂದೆಗೆ ಅವರು ಸನ್ನೆ ಮಾಡಿದರು.
- 63ಆಗ ಅವನು ಒಂದು ಬರೆಯುವ ಹಲಗೆಯನ್ನು ಕೇಳಿ ಅವನ ಹೆಸರು ಯೋಹಾನನು ಎಂದು ಬರೆದನು. ಆಗ ಅವರೆಲ್ಲರೂ ಆಶ್ಚರ್ಯಪಟ್ಟರು.
- 64ಕೂಡಲೆ ಅವನ ಬಾಯಿ ತೆರೆಯಲ್ಪಟ್ಟು ಅವನ ನಾಲಿಗೆಯು ಸಡಿಲವಾಯಿತು ಮತ್ತು ಅವನು ಮಾತ ನಾಡಿ ದೇವರನ್ನು ಕೊಂಡಾಡಿದನು.
- 65ಆಗ ಅವರ ಸುತ್ತಲೂ ಮತ್ತು ಎಲ್ಲಾ ಯೂದಾಯದ ಬೆಟ್ಟದ ಸೀಮೆಯಲ್ಲಿಯೂ ಈ ಸಂಗತಿಗಳೆಲ್ಲಾ ಹರಡಿದವು.
- 66ಕೇಳಿದವರೆಲ್ಲರೂ ಅವುಗಳನ್ನು ತಮ್ಮ ಹೃದಯದಲ್ಲಿ ಇಟ್ಟುಕೊಂಡು--ಈ ಕೂಸೂ ಎಂಥದ್ದಾಗುವನೊ ಎಂದು ಅಂದುಕೊಂಡರು. ಕರ್ತನ ಹಸ್ತವು ಅವನ ಸಂಗಡ ಇತ್ತು.
Cross references
- Luke 1:20 ಲೂಕನು 1:20ಇಗೋ, ತಕ್ಕ ಕಾಲದಲ್ಲಿ ನೆರವೇರುವ ನನ್ನ ಮಾತುಗಳನ್ನು ನೀನು ನಂಬದೆ ಹೋದದರಿಂದ ಈ ಸಂಗತಿಗಳು ಈಡೇರುವ ದಿನದ ವರೆಗೆ ನೀನು ಮೂಕನಾಗಿದ್ದು ಮಾತನಾಡಲಾರದೆ ಇರುವಿ ಅಂದನು.
- Jeremiah 1:9 ಯೆರೆಮೀಯ 1:9ಆಗ ಕರ್ತನು ಕೈಚಾಚಿ ನನ್ನ ಬಾಯಿಯನ್ನು ಮುಟ್ಟಿದನು; ನನಗೆ--ಇಗೋ, ನನ್ನ ವಾಕ್ಯಗಳನ್ನು ನಿನ್ನ ಬಾಯಲ್ಲಿ ಇಟ್ಟಿದ್ದೇನೆ.
- Exodus 4:15–16 ವಿಮೋಚನಕಾಂಡ 4:15–16ಅವನ ಸಂಗಡ ನೀನು ಮಾತನಾಡಿ ಹೇಳಬೇಕಾದ ಮಾತು ಗಳನ್ನು ಅವನಿಗೆ ತಿಳಿಸಬೇಕು. ನಿನ್ನ ಬಾಯಿಗೂ ಅವನ ಬಾಯಿಗೂ ಸಹಾಯವಾಗಿದ್ದು ನೀನು ಮಾಡತಕ್ಕದ್ದನ್ನು ಕಲಿಸುವೆನು. ಅವನು ನಿನಗಾಗಿ ಜನರ ಸಂಗಡ ಮಾತನಾಡುವನು. ಅವನು ನಿನಗೆ ಬಾಯಿಯಾಗಿ ರುವನು; ನೀನು ಅವನಿಗೆ ದೇವರಂತಿರುವಿ.
- Ezekiel 33:22 ಯೆಹೆಜ್ಕೇಲನು 33:22ಆಗ ಅವನು ತಪ್ಪಿಸಿಕೊಂಡು ಬರುವ ದಕ್ಕಿಂತ ಮೊದಲೇ, ಸಾಯಂಕಾಲದಲ್ಲಿ ಕರ್ತನ ಕೈ ನನ್ನ ಮೇಲೆ ಇತ್ತು. ಅವನು ಮುಂಜಾನೆ ನನ್ನ ಬಳಿಗೆ ಬರುವ ತನಕ ನನ್ನ ಬಾಯಿ ತೆರೆಯಲ್ಪಟ್ಟಿದೆ; ನನ ಬಾಯಿ ತೆರೆದಿತ್ತು. ನಾನು ಮೂಕನಾಗಿರಲಿಲ್ಲ.
- Psalm 51:15 ಕೀರ್ತನೆಗಳು 51:15ಓ ಕರ್ತನೇ, ನನ್ನ ತುಟಿಗಳನ್ನು ತೆರೆ; ಆಗ ನನ್ನ ಬಾಯಿ ನಿನ್ನ ಸ್ತೋತ್ರವನ್ನು ಪ್ರಕಟಮಾಡುವದು.
- Mark 7:32–37 ಮಾರ್ಕನು 7:32–37ಆಗ ಅವರು ತೊದಲು ಮಾತನಾಡುವ ಒಬ್ಬ ಕಿವುಡನನ್ನು ಆತನ ಬಳಿಗೆ ತಂದು ಆತನು ತನ್ನ ಕೈಯನ್ನು ಅವನ ಮೇಲೆ ಇಡಬೇಕೆಂದು ಆತನನ್ನು ಬೇಡಿಕೊಂಡರು. ಆತನು ಅವನನ್ನು ಜನಸಮೂಹದಿಂದ ಆಚೆಗೆ ಕರಕೊಂಡು ಹೋಗಿ ತನ್ನ ಬೆರಳುಗಳನ್ನು ಅವನ ಕಿವಿಗಳಲ್ಲಿಟ್ಟು ಉಗುಳಿ ಅವನ ನಾಲಿಗೆಯನ್ನು ಮುಟ್ಟಿದನು; ಮತ್ತು ಆತನು ಪರಲೋಕದ ಕಡೆಗೆ ನೋಡುತ್ತಾ ನಿಟ್ಟುಸಿರುಬಿಟ್ಟು ಅವನಿಗೆ--ಎಪ್ಫಥಾ ಅಂದನು. ಅಂದರೆ ತೆರೆಯಲ್ಪಡಲಿ ಎಂದರ್ಥ. ಕೂಡಲೆ ಅವನ ಕಿವಿಗಳು ತೆರೆಯಲ್ಪಟ್ಟವು; ಅವನ ನಾಲಿಗೆಯ ನರವು ಸಡಿಲ ವಾಯಿತು; ಮತ್ತು ಅವನು ಸ್ಪಷ್ಟವಾಗಿ ಮಾತನಾಡಿ ದನು. ಯಾವ ಮನುಷ್ಯನಿಗೂ ಇದನ್ನು ಹೇಳಬಾರ ದೆಂದು ಆತನು ಅವರಿಗೆ ಖಂಡಿತವಾಗಿ ಹೇಳಿದನು; ಆದರೆ ಎಷ್ಟು ಖಂಡಿತವಾಗಿ ಹೇಳಿದರೂ ಅವರು ಅದನ್ನು ಮತ್ತಷ್ಟು ಹೆಚ್ಚಾಗಿ ಪ್ರಚಾರ ಮಾಡಿದರು.ಜನರು ಅತ್ಯಂತಾಶ್ಚರ್ಯಪಟ್ಟು-- ಆತನು ಎಲ್ಲವುಗಳನ್ನು ಚೆನ್ನಾಗಿ ಮಾಡಿದ್ದಾನೆ; ಕಿವುಡರು ಕೇಳುವಂತೆಯೂ ಮೂಕರು ಮಾತನಾಡುವಂತೆಯೂ ಮಾಡಿದ್ದಾನೆ ಎಂದು ಅಂದುಕೊಂಡರು. ಜನರು ಅತ್ಯಂತಾಶ್ಚರ್ಯಪಟ್ಟು-- ಆತನು ಎಲ್ಲವುಗಳನ್ನು ಚೆನ್ನಾಗಿ ಮಾಡಿದ್ದಾನೆ; ಕಿವುಡರು ಕೇಳುವಂತೆಯೂ ಮೂಕರು ಮಾತನಾಡುವಂತೆಯೂ ಮಾಡಿದ್ದಾನೆ ಎಂದು ಅಂದುಕೊಂಡರು.
- Daniel 4:34–37 ದಾನಿಯೇಲನು 4:34–37ಆ ಕೊನೆಯ ದಿನಗಳಲ್ಲಿ ನೆಬೂಕದ್ನೆಚ್ಚರನಾದ ನಾನು ನನ್ನ ಕಣ್ಣುಗಳನ್ನು ಪರ ಲೋಕದ ಕಡೆಗೆ ಎತ್ತಿದೆನು; ನನ್ನ ತಿಳುವಳಿಕೆ ನನಗೆ ತಿರುಗಿ ಬಂತು; ಆಗ ನಾನು ಮಹೋನ್ನತನನ್ನು ಸ್ತುತಿಸಿ ನಿರಂತರವಾಗಿ ಜೀವಿಸುವಾತನೂ ನಿತ್ಯವಾದ ಆಳ್ವಿಕೆ ಯನ್ನು ಆಳುವಾತನನ್ನು ತಲತಲಾಂತರಗಳ ವರೆಗೂ ರಾಜ್ಯ ಉಳ್ಳಾತನನ್ನು ಹೊಗಳಿ ಘನಪಡಿಸಿದೆನು. ಭೂ ನಿವಾಸಿಗಳೆಲ್ಲರೂ ಏನೂ ಇಲ್ಲದ ಹಾಗೆ ಎಣಿಸಲ್ಪಟ್ಟಿ ದ್ದಾರೆ; ಆತನು ಪರಲೋಕದ ಸೈನ್ಯದಲ್ಲಿಯೂ ಭೂ ನಿವಾಸಿಗಳಲ್ಲಿಯೂ ತನ್ನ ಚಿತ್ತದ ಪ್ರಕಾರವೇ ಮಾಡು ತ್ತಾನೆ. ಯಾರೂ ಆತನ ಹಸ್ತವನ್ನು ಹಿಂತೆಗೆಯಲಾರರು; ನೀನು ಏನು ಮಾಡುತ್ತಿರುವಿ ಎಂದು ಆತನಿಗೆ ಯಾರೂ ಕೇಳಲಾರರು. ಇದೇ ಸಮಯದಲ್ಲಿ ನನ್ನ ಬುದ್ದಿಯು ನನಗೆ ತಿರುಗಿ ಬಂತು. ನನ್ನ ರಾಜ್ಯದ ಮಹಿಮೆಗಾಗಿ ನನ್ನ ಘನವೂ ನನ್ನ ತೇಜಸ್ಸೂ ತಿರಿಗಿ ಬಂದವು; ನನ್ನ ಆಲೋಚನೆ ಗಾರರೂ ನನ್ನ ಪ್ರಭುಗಳೂ ನನ್ನನ್ನು ಹುಡುಕಿದರು. ನಾನು ನನ್ನ ರಾಜ್ಯದಲ್ಲಿ ಸ್ಥಾಪಿಸಲ್ಪಟ್ಟು ನನಗೆ ವಿಶೇಷವಾದ ಮಹತ್ತು ಕೂಡಿಸಲ್ಪಟ್ಟಿತು.ಈಗ ನೆಬೂಕದ್ನೆಚ್ಚರನಾದ ನಾನು ಪರಲೋಕದ ಅರಸನನ್ನು ಸ್ತುತಿಸಿ, ಹೆಚ್ಚಿಸಿ, ಘನಪಡಿಸುತ್ತೇನೆ; ಆತನ ಕ್ರಿಯೆಗಳೆಲ್ಲಾ ಸತ್ಯವೇ; ಆತನ ಮಾರ್ಗಗಳು ನ್ಯಾಯವೇ; ಗರ್ವದಲ್ಲಿ ನಡೆಯುವವರನ್ನು ಆತನೇ ತಗ್ಗಿಸಬಲ್ಲನು. ಈಗ ನೆಬೂಕದ್ನೆಚ್ಚರನಾದ ನಾನು ಪರಲೋಕದ ಅರಸನನ್ನು ಸ್ತುತಿಸಿ, ಹೆಚ್ಚಿಸಿ, ಘನಪಡಿಸುತ್ತೇನೆ; ಆತನ ಕ್ರಿಯೆಗಳೆಲ್ಲಾ ಸತ್ಯವೇ; ಆತನ ಮಾರ್ಗಗಳು ನ್ಯಾಯವೇ; ಗರ್ವದಲ್ಲಿ ನಡೆಯುವವರನ್ನು ಆತನೇ ತಗ್ಗಿಸಬಲ್ಲನು.
- Psalm 30:7–12 ಕೀರ್ತನೆಗಳು 30:7–12ಕರ್ತನೇ, ನಿನ್ನ ಕಟಾ ಕ್ಷದಿಂದ ನನ್ನ ಬೆಟ್ಟವು ಸ್ಥಿರವಾಗಿ ನಿಲ್ಲುವಂತೆ ಮಾಡಿದ್ದೀ, ನಿನ್ನ ಮುಖವನ್ನು ಮರೆಮಾಡಲು ಕಳವಳಗೊಂಡೆನು. ಓ ಕರ್ತನೇ, ನಾನು ನಿನಗೆ ಕೂಗಿಕೊಂಡೆನು; ಕರ್ತ ನಿಗೆ ವಿಜ್ಞಾಪನೆ ಮಾಡಿದೆನು. ನಾನು ಕುಣಿಯಲ್ಲಿಳಿ ದರೆ ನನ್ನ ರಕ್ತದಲ್ಲಿ ಲಾಭವೇನು? ಧೂಳು ನಿನ್ನನ್ನು ಕೊಂಡಾಡುವದೋ? ಅದು ನಿನ್ನ ಸತ್ಯವನ್ನು ತಿಳಿಸು ವದೋ? ಓ ಕರ್ತನೇ, ಕೇಳು; ನನ್ನ ಮೇಲೆ ಕರುಣೆಯಿಡು. ಕರ್ತನೇ, ನನಗೆ ಸಹಾಯಕನಾಗಿರು. ನೀನು ನನ್ನ ಗೋಳಾಟವನ್ನು ಕುಣಿದಾಟಕ್ಕೆ ತಿರು ಗಿಸಿದ್ದೀ; ನನ್ನ ಗೋಣಿತಟ್ಟನ್ನು ತೆಗೆದುಹಾಕಿ ಸಂತೋಷ ದಿಂದ ನನ್ನ ನಡುವನ್ನು ಕಟ್ಟಿದ್ದೀ.ಹೀಗೆ ನನ್ನ ಹೆಚ್ಚಳವು ಮೌನವಾಗಿರದೆ ನಿನ್ನನ್ನು ಕೀರ್ತಿಸುವದು. ನನ್ನ ದೇವರಾದ ಓ ಕರ್ತನೇ, ಯುಗಯುಗಕ್ಕೂ ನಿನ್ನನ್ನು ಕೊಂಡಾಡುವೆನು. ಹೀಗೆ ನನ್ನ ಹೆಚ್ಚಳವು ಮೌನವಾಗಿರದೆ ನಿನ್ನನ್ನು ಕೀರ್ತಿಸುವದು. ನನ್ನ ದೇವರಾದ ಓ ಕರ್ತನೇ, ಯುಗಯುಗಕ್ಕೂ ನಿನ್ನನ್ನು ಕೊಂಡಾಡುವೆನು.
- Psalm 118:18–19 ಕೀರ್ತನೆಗಳು 118:18–19ಕರ್ತನು ನನ್ನನ್ನು ಕಠಿಣವಾಗಿ ಶಿಕ್ಷಿಸಿದನು; ಮರಣಕ್ಕೆ ನನ್ನನ್ನು ಒಪ್ಪಿಸಲಿಲ್ಲ. ನೀತಿಯ ಬಾಗಲುಗಳನ್ನು ನನಗೆ ತೆರೆಯಿರಿ; ಅವುಗಳೊಳಗೆ ಪ್ರವೇಶಿಸಿ ಕರ್ತನನ್ನು ಕೊಂಡಾಡು ವೆನು.
- Ezekiel 3:27 ಯೆಹೆಜ್ಕೇಲನು 3:27ಆದರೆ ನಾನು ನಿನ್ನ ಸಂಗಡ ಮಾತನಾಡುವಾಗ ನಾನು ನಿನ್ನ ಬಾಯನ್ನು ತೆರೆ ಯುವೆನು. ಆಗ ನೀನು ಅವರಿಗೆ ಹೇಳಬೇಕಾದದ್ದೇನಂದರೆ--ದೇವರಾದ ಕರ್ತನು ಹೀಗೆ ಹೇಳುತ್ತಾನೆ --ಕೇಳುವವನು ಕೇಳಲಿ, ಕೇಳದವನು ಕೇಳದೇ ಇರಲಿ. ಅವರು ತಿರುಗಿ ಬೀಳುವ ಮನೆಯವರಾಗಿದ್ದಾರೆ.
- Matthew 9:33 ಮತ್ತಾಯನು 9:33ಮತ್ತು ದೆವ್ವವು ಹೊರಗೆ ಹಾಕಲ್ಪಟ್ಟ ಮೇಲೆ ಮೂಕನು ಮಾತಾಡಿದನು; ಆಗ ಜನಸಮೂಹಗಳವರು ಬೆರ ಗಾಗಿ--ಇಂಥದ್ದು ಎಂದೂ ಇಸ್ರಾಯೇಲಿನಲ್ಲಿ ಕಂಡಿಲ್ಲ ಎಂದು ಹೇಳಿದರು.
- Ezekiel 29:21 ಯೆಹೆಜ್ಕೇಲನು 29:21ಆ ದಿನದಲ್ಲಿ ನಾನು ಇಸ್ರಾಯೇಲ್ಯರ ಮನೆ ತನದವರ ಕೊಂಬನ್ನು ಚಿಗುರಿಸುವೆನು. ಅವರ ಮಧ್ಯ ದಲ್ಲಿ ನಿನ್ನ ಬಾಯನ್ನು ತೆರೆಯುವಂತೆ ಮಾಡುವೆನು. ನಾನೇ ಕರ್ತನೆಂದು ಅವರು ತಿಳಿಯುವರು.