Luke · chapter 10 · verse 13
Luke 10:13 in Kannada
ಖೊರಾಜಿನೇ, ನಿನಗೆ ಅಯ್ಯೋ! ಬೇತ್ಸಾಯಿದವೇ, ನಿನಗೆ ಅಯ್ಯೋ! ನಿನ್ನಲ್ಲಿ ನಡೆದ ಮಹತ್ಕಾರ್ಯಗಳು ತೂರ್ ಸೀದೋನ್ಗಳಲ್ಲಿ ನಡೆದಿದ್ದರೆ ಅಲ್ಲಿಯವರು ಬಹಳ ಕಾಲದ ಹಿಂದೆಯೇ ಗೋಣೀತಟ್ಟನ್ನು ಸುತ್ತಿಕೊಂಡು ಬೂದಿಯಲ್ಲಿ ಕೂತು ಮಾನಸಾಂತರ ಪಡುತ್ತಿದ್ದರು.
Khoraajine, ninage ayyo! Betsaayidave, ninage ayyo! Ninnalli nadeda mahatkaaryagalu toor seedongalalli nadediddare alliyavaru bahala kaalada hindeye goneetattannu suttikondu boodiyalli kootu maanasaantara paduttiddaru.
Luke 10:13 in English
- King James Version (KJV)
- Woe unto thee, Chorazin! woe unto thee, Bethsaida! for if the mighty works had been done in Tyre and Sidon, which have been done in you, they had a great while ago repented, sitting in sackcloth and ashes.
- World English Bible (WEB)
- “Woe to you, Chorazin! Woe to you, Bethsaida! For if the mighty works had been done in Tyre and Sidon which were done in you, they would have repented long ago, sitting in sackcloth and ashes.
- American Standard Version (ASV)
- Woe unto thee, Chorazin! woe unto thee, Bethsaida! for if the mighty works had been done in Tyre and Sidon, which were done in you, they would have repented long ago, sitting in sackcloth and ashes.
- Bible in Basic English (BBE)
- A curse is on you, Chorazin! A curse is on you, Beth-saida! For if such works of power had been done in Tyre and Sidon as have been done in you, they would have been turned from their sins, in days gone by, seated in the dust.
- Darby Translation (DBY)
- Woe to thee, Chorazin! woe to thee, Bethsaida! for if the works of power which have taken place in you had taken place in Tyre and Sidon, they had long ago repented, sitting in sackcloth and ashes.
- Webster's Bible (WBS)
- Woe to thee, Chorazin! woe to thee Bethsaida! for if the mighty works had been done in Tyre and Sidon, which have been done in you, they had a great while ago repented sitting in sackcloth and ashes.
- Young's Literal Translation (YLT)
- 'Woe to thee, Chorazin; woe to thee, Bethsaida; for if in Tyre and Sidon had been done the mighty works that were done in you, long ago, sitting in sackcloth and ashes, they had reformed;
Read in context
- 11ನಮ್ಮ ಮೇಲೆ ಅಂಟಿಕೊಂಡಿರುವ ನಿಮ್ಮ ಪಟ್ಟಣದ ಧೂಳನ್ನೇ ನಿಮಗೆ ವಿರೋಧವಾಗಿ ನಾವು ಝಾಡಿಸಿಬಿಡುತ್ತೇವೆ; ಆದಾಗ್ಯೂ ದೇವರ ರಾಜ್ಯವು ನಿಮ್ಮ ಸವಿಾಪಕ್ಕೆ ಬಂದಿದೆ ಎಂಬದು ನಿಮಗೆ ಖಚಿತವಾಗಿ ತಿಳಿದಿರಲಿ ಎಂದು ಹೇಳಿರಿ.
- 12ಆದರೆ ಆ ದಿನದಲ್ಲಿ ಆ ಪಟ್ಟಣಕ್ಕಿಂತಲೂ ಸೊದೋಮಿನ ಗತಿಯು ಹೆಚ್ಚಾಗಿ ತಾಳಬಹುದಾಗಿರುವದು ಎಂದು ನಾನು ನಿಮಗೆ ಹೇಳುತ್ತೇನೆ.
- 13ಖೊರಾಜಿನೇ, ನಿನಗೆ ಅಯ್ಯೋ! ಬೇತ್ಸಾಯಿದವೇ, ನಿನಗೆ ಅಯ್ಯೋ! ನಿನ್ನಲ್ಲಿ ನಡೆದ ಮಹತ್ಕಾರ್ಯಗಳು ತೂರ್ ಸೀದೋನ್ಗಳಲ್ಲಿ ನಡೆದಿದ್ದರೆ ಅಲ್ಲಿಯವರು ಬಹಳ ಕಾಲದ ಹಿಂದೆಯೇ ಗೋಣೀತಟ್ಟನ್ನು ಸುತ್ತಿಕೊಂಡು ಬೂದಿಯಲ್ಲಿ ಕೂತು ಮಾನಸಾಂತರ ಪಡುತ್ತಿದ್ದರು.
- 14ಆದರೆ ನ್ಯಾಯ ತೀರ್ಪಿನಲ್ಲಿ ನಿಮ್ಮ ಗತಿಗಿಂತಲೂ ತೂರ್ ಸೀದೋನ್ಗಳ ಗತಿಯು ಹೆಚ್ಚಾಗಿ ತಾಳಬಹು ದಾಗಿರುವದು.
- 15ಆಕಾಶದವರೆಗೂ ಎತ್ತಲ್ಪಟ್ಟಿರುವ ಕಪೆರ್ನೌಮೇ, ನೀನು ಕೆಳಗೆ ಪಾತಾಳಕ್ಕೆ ದೊಬ್ಬ ಲ್ಪಡುವಿ.
Cross references
- Isaiah 23:1–18 ಯೆಶಾಯ 23:1–18ತೂರಿನ ವಿಷಯವಾದ ದೈವೋಕ್ತಿ. ತಾರ್ಷೀಷಿನ ಹಡಗುಗಳೇ, ಗೋಳಾ ಡಿರಿ; ಅದು ಹಾಳಾಗಿರುವದರಿಂದ ನಿಮಗೆ ಮನೆಯಿಲ್ಲ ಮತ್ತು ಒಳಗೆ ಪ್ರವೇಶವೂ ಇಲ್ಲ. ಇದು ಕಿತ್ತೀಮ್ ದೇಶದವರಿಂದ ಅವರಿಗೆ ತಿಳಿಯಿತು. ದ್ವೀಪಗಳ ನಿವಾಸಿಗಳೇ, ಸಮುದ್ರವನ್ನು ದಾಟುವ ಚೀದೋನಿನ ವರ್ತಕರಿಂದ ಸಮೃದ್ಧಿಯನ್ನು ಹೊಂದಿದವರೇ, ಮೌನ ವಾಗಿರ್ರಿ. ವಿಶಾಲವಾದ ನೀರುಗಳಿಂದ ಸೀಹೋರಿನ ಧಾನ್ಯವೂ ನದಿಯ ಸುಗ್ಗಿಯೂ ನೈಲಿನ ಬೆಳೆಯಿಂ ದಲೂ ಅದಕ್ಕೆ ಆದಾಯವಾಗಿತ್ತು. ಅನೇಕ ಜನಾಂಗ ಗಳಿಗೆ ವ್ಯಾಪಾರ ಸ್ಥಳವಾಗಿತ್ತು. ಚೀದೋನೇ, ನಾಚಿಕೆ ಪಡು, ಸಮುದ್ರವು, ಸಮುದ್ರದುರ್ಗವೂ--ನಾವು ಪ್ರಸವವೇದನೆ ಪಡುವದಿಲ್ಲ, ಹೆರುವದಿಲ್ಲ; ಇಲ್ಲವೆ ಮಕ್ಕಳನ್ನು ಬೆಳೆಸುವದಿಲ್ಲ ಕನ್ಯಾಸ್ತ್ರೀಯರನ್ನು ಸಾಕಿ ಸಲ ಹಲಿಲ್ಲ ಎಂದು ಹೇಳಿದೆಯಷ್ಟೆ. ಐಗುಪ್ತದ ಸುದ್ದಿಗೆ ಆದ ಹಾಗೆ ತೂರಿನ ಸುದ್ದಿಗೆ ಬಹಳ ವೇದನೆಪಡು ವರು. ತಾರ್ಷೀಷಿಗೆ ದಾಟಿಹೋಗಿರಿ, ದ್ವೀಪ ನಿವಾ ಸಿಗಳೇ ಗೋಳಾಡಿರಿ. ನಿಮ್ಮ ಉಲ್ಲಾಸದ ಪಟ್ಟಣವೂ ಪೂರ್ವಕಾಲದ ಹಳೆಯ ಸಂಪ್ರದಾಯದಿಂದ ಬಂದಿದ್ದೂ ಇದೆಯೋ? ಅವಳ ಸ್ವಂತ ಕಾಲುಗಳು ಅದನ್ನು ದೂರ ದೇಶದಲ್ಲಿ ನಿವಾಸಿಸುವದಕ್ಕೆ ತಕ್ಕೊಂಡು ಹೋ ಗುವವು. ಅದು ಕಿರೀಟದಾಯಕವಾದ ಪಟ್ಟಣವು ಅದರ ವರ್ತಕರಾದ ಪ್ರಭುಗಳು, ವ್ಯಾಪಾರಿಗಳು ಭೂಮಿಯಲ್ಲಿ ಘನವುಳ್ಳವರಾಗಿದ್ದಾರೆ. ಇಂಥ ತೂರಿಗೆ ವಿರುದ್ಧವಾಗಿ ಈ ಆಲೋಚನೆ ಮಾಡಿದವರು ಯಾರು? ಗರ್ವದ ಸಕಲ ವೈಭವವನ್ನು ಹೊಲಸು ಮಾಡಬೇ ಕೆಂತಲೂ ಭೂಮಿಯಲ್ಲಿ ಘನವುಳ್ಳವರೆಲ್ಲರನ್ನು ಅವ ಮಾನಪಡಿಸಬೇಕೆಂತಲೂ ಸೈನ್ಯಗಳ ಕರ್ತನೇ, ಹೀಗೆ ಸಂಕಲ್ಪಿಸಿದ್ದಾನೆ. ತಾರ್ಷೀಷಿನ ಮಗಳೇ, ನದಿಯಂತೆ ನಿನ್ನ ದೇಶದಲ್ಲಿ ಹಾದುಹೋಗು, ಅಲ್ಲಿ ಇನ್ನು ಬಲವು ಇರುವುದೇ ಇಲ್ಲ. ಆತನು ಸಮುದ್ರದ ಮೇಲೆ ತನ್ನ ಕೈಚಾಚಿ ರಾಜ್ಯಗಳನ್ನು ನಡುಗಿಸಿದ್ದಾನೆ; ಕರ್ತನು ವ್ಯಾಪಾರದ ಪಟ್ಟಣವನ್ನು (ಕಾನಾನ್) ಅದರ ದುರ್ಗ ಗಳನ್ನು ನಾಶಮಾಡಬೇಕೆಂದು ಆಜ್ಞಾಪಿಸಿದ್ದಾನೆ. ಆತನು ಹೇಳಿದ್ದೇನಂದರೆ--ಹಿಂಸೆಗೆ ಈಡಾದ ಕನ್ಯೆಯಂತಿರುವ ಚೀದೋನ್ ನಗರಿಯೇ, ಇನ್ನು ಮೇಲೆ ನಿನಗೆ ಹರ್ಷವೇ ಇಲ್ಲ; ಎದ್ದು ಕಿತ್ತೀಮಿಗೆ ಸಮುದ್ರದ ಮೇಲೆ ಹಾದುಹೋಗು ಅಲ್ಲಿಯೂ ನಿನಗೆ ವಿಶ್ರಾಂತಿ ಇರದು. ಇಗೋ, ಕಸ್ದೀಯರ ದೇಶವು! ಅಶ್ಶೂರರು ಅದನ್ನು ಅರಣ್ಯ ನಿವಾಸಿಗಳಿಗೆ ಈಡು ಮಾಡುವತನಕ ಈ ಜನರು ಇರಲಿಲ್ಲ. (ನಿರ್ನಾ ಮವಾಗಿರಲಿಲ್ಲ) ಅವರು ಗೋಪುರಗಳನ್ನೂ ಅದರ ಅರಮನೆಗಳನ್ನೂ ಕಟ್ಟಿಸಿಕೊಂಡು ಅದನ್ನು ಹಾಳು ಮಾಡಿದ್ದಾರೆ. ತಾರ್ಷೀಷಿನ ಹಡಗುಗಳೇ, ಗೋ ಳಾಡಿರಿ! ನಮ್ಮ ಆಶ್ರಯಸ್ಥಾನವು ಹಾಳಾಯಿತು. ಆ ದಿವಸದಲ್ಲಿ ಆಗುವದೇನಂದರೆ, ತೂರ್ ಪಟ್ಟಣವು ಒಬ್ಬ ಅರಸನ ದಿವಸಗಳ ಪ್ರಕಾರ ಎಪ್ಪತ್ತು ವರುಷಗಳ ತನಕ (ಮೂಲ ದಿನಗಳು) ಜ್ಞಾಪಕಕ್ಕೆ ಬಾರದೇ ಇರುವದು; ಎಪ್ಪತ್ತು ವರುಷಗಳ ಕೊನೆಯಲ್ಲಿ ತೂರ್ ಪಟ್ಟಣವು ಸೂಳೆಯರ ವಿಷಯವಾದ ಗೀತೆಯ ಹಾಗಾಗುವದು. ಮರೆತುಹೋದ ಸೂಳೆಯೇ, ಕಿನ್ನರಿಯನ್ನು ತಕ್ಕೋ, ಪಟ್ಟಣಗಳಲ್ಲಿ ಅಲೆಯುತ್ತಾ ನೀನು ನೆನಪಾಗುವ ಹಾಗೆ ಚೆನ್ನಾಗಿ ನುಡಿಸಿ ಬಹಳ ಗೀತೆಗಳನ್ನು ಹಾಡು (ಎಂಬದೇ). ಎಪ್ಪತ್ತು ವರುಷ ಗಳಾದ ಮೇಲೆ ಆಗುವದೇನಂದರೆ -- ಕರ್ತನು ತೂರನ್ನು ಪರಾಮರಿಸುವನು (ಹಿತ ತರುವನು). ಅದು ತನ್ನ ಆದಾಯಕ್ಕಾಗಿ ಹಿಂದಿರುಗಿ ಭೂಲೋಕ ದಲ್ಲಿರುವ ಎಲ್ಲಾ ರಾಜ್ಯಗಳ ಸಂಗಡ ಭೂಮಿಯ ಮೇಲೆ ಸೂಳೆತನ ಮಾಡುವದು.(ಆದರೆ) ಅವಳ ವ್ಯಾಪಾರವೂ ಆದಾಯವೂ ಬೊಕ್ಕಸದಲ್ಲಿ ಹಾಕದೆ ಇಲ್ಲವೆ ಇಟ್ಟುಕೊಳ್ಳದೆ ಕರ್ತನಿಗೆ ಪರಿಶುದ್ಧವಾಗು ವದು. ಅವಳ ವ್ಯಾಪಾರವು ಕರ್ತನ ಸನ್ನಿಧಾನದಲ್ಲಿ ವಾಸಿಸುವ ವರೆಗೆ ಬೇಕಾದಷ್ಟು ಅನ್ನವನ್ನೂ ಶ್ರೇಷ್ಠವಾದ ಉಡುಪನ್ನೂ ಒದಗಿಸಲು ಅನು ಕೂಲವಾಗುವದು. (ಆದರೆ) ಅವಳ ವ್ಯಾಪಾರವೂ ಆದಾಯವೂ ಬೊಕ್ಕಸದಲ್ಲಿ ಹಾಕದೆ ಇಲ್ಲವೆ ಇಟ್ಟುಕೊಳ್ಳದೆ ಕರ್ತನಿಗೆ ಪರಿಶುದ್ಧವಾಗು ವದು. ಅವಳ ವ್ಯಾಪಾರವು ಕರ್ತನ ಸನ್ನಿಧಾನದಲ್ಲಿ ವಾಸಿಸುವ ವರೆಗೆ ಬೇಕಾದಷ್ಟು ಅನ್ನವನ್ನೂ ಶ್ರೇಷ್ಠವಾದ ಉಡುಪನ್ನೂ ಒದಗಿಸಲು ಅನು ಕೂಲವಾಗುವದು.
- Joel 3:4–8 ಯೋವೇಲ 3:4–8ಹೌದು, ಓ ತೂರೇ, ಚೀದೋನೇ, ಪಾಲೆಸ್ತಿನದ ಎಲ್ಲಾ ಪ್ರಾಂತ್ಯಗಳೇ, ನನ್ನ ಕೂಡ ನಿಮಗೇನು? ನನಗೆ ಮುಯ್ಯಿಗೆ ಮುಯ್ಯಿ ಸಲ್ಲಿಸುವಿರೋ? ನೀವು ನನಗೆ ಸಲ್ಲಿಸಿದರೆ ಜಾಗ್ರತೆಯಾಗಿಯೂ ತ್ವರೆಯಾಗಿಯೂ ನಿಮ್ಮ ತಲೆಯ ಮೇಲೆ ಮುಯ್ಯಿಗೆ ಮುಯ್ಯಿ ತರಿಸುವೆನು. ನೀವು ನನ್ನ ಬೆಳ್ಳಿಯನ್ನೂ ನನ್ನ ಬಂಗಾರವನ್ನೂ ತೆಗೆದುಕೊಂಡು ನನ್ನ ಒಳ್ಳೇ ರಮ್ಯವಾದವುಗಳನ್ನು ನಿಮ್ಮ ದೇವಸ್ಥಾನಗಳಿಗೆ ತಕ್ಕೊಂಡು ಹೋಗಿದ್ದೀರಿ. ಯೆಹೂದದ ಮಕ್ಕಳನ್ನೂ ಯೆರೂಸಲೇಮಿನ ಮಕ್ಕ ಳನ್ನೂ ತಮ್ಮ ಪ್ರಾಂತ್ಯಗಳಿಂದ ದೂರ ಮಾಡುವ ಹಾಗೆ ಗ್ರೀಕರಿಗೆ ಮಾರಿದ್ದೀರಿ. ಇಗೋ, ಎಲ್ಲಿ ಅವ ರನ್ನು ಮಾರಿದ್ದಿರೋ ಆ ಸ್ಥಳದಿಂದ ನಾನು ಅವರನ್ನು ಎಬ್ಬಿಸಿ ನಿಮ್ಮ ತಲೆಯ ಮೇಲೆ ಮುಯ್ಯಿಗೆ ಮುಯ್ಯಿ ತರಿಸುವೆನು. ನಿಮ್ಮ ಕುಮಾರರನ್ನೂ ನಿಮ್ಮ ಕುಮಾರ್ತೆ ಯರನ್ನೂ ಯೆಹೂದನ ಮಕ್ಕಳ ಕೈಯಲ್ಲಿ ಮಾರುವೆನು; ಇವರು ಅವರನ್ನು ದೂರ ಜನವಾದ ಶೆಬದನರಿಗೆ ಮಾರುವರು; ಕರ್ತನು ಅದನ್ನು ಹೇಳಿದ್ದಾನೆ.
- Ezekiel 26:1–26 ಯೆಹೆಜ್ಕೇಲನು 26:1–26ಹನ್ನೊಂದನೇ ವರುಷದ ತಿಂಗಳಿನ ಮೊದಲನೇ ದಿನದಲ್ಲಿ ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇನಂದರೆ-- ಮನುಷ್ಯಪುತ್ರನೇ, ತೂರ್, ಯೆರೂಸಲೇಮಿನ ವಿಷಯವಾಗಿ ಆಹಾ, ಜನರ ದ್ವಾರವಾಗಿದ್ದದ್ದು ಮುರಿದು ಹೋಯಿತು, ಅದು ನನ್ನ ಕಡೆಗೆ ತಿರುಗಿಕೊಂಡಿದೆ, ಯೆರೂಸಲೇಮು ಹಾಳಾದ ಕಾರಣ ನಾನು ತುಂಬಿಕೊಳ್ಳುವೆನು ಎಂದು ಹೇಳಿದ್ದರಿಂದ ದೇವರಾದ ಕರ್ತನು ಹೀಗೆ ಹೇಳು ತ್ತಾನೆ--ಇಗೋ, ತೂರ್ ದೇಶವೇ, ನಾನು ನಿನಗೆ ವಿರೋಧವಾಗಿದ್ದೇನೆ, ಸಮುದ್ರವು ತನ್ನ ಅಲೆಗಳನ್ನು ಹೇಗೆ ಬರಮಾಡುವದೋ ಹಾಗೆಯೇ ನಾನು ನಿನಗೆ ವಿರೋಧವಾಗಿ ಅನೇಕ ಜನಾಂಗಗಳನ್ನು ನಿನ್ನ ಮೇಲೆ ಬರಮಾಡುವೆನು. ಅವರು ತೂರಿನ ಗೋಡೆಗಳನ್ನು ಕೆಡಿಸಿ ಅದರ ಗೋಪುರಗಳನ್ನು ಒಡೆದು ಬಿಡುವರು, ನಾನು ಅದರ ದೂಳನ್ನು ಅದರಿಂದ ಒರಿಸಿ ಅದನ್ನು ಬಂಡೆಯ ತುದಿಯಂತೆ ಮಾಡುವೆನು. ಅದು ಸಮು ದ್ರದ ಮಧ್ಯದಲ್ಲಿ ಬಲೆಗಳನ್ನು ಹಾಕುವ ಸ್ಥಳವಾಗಿ ರುವದು; ನಾನೇ ಅದನ್ನು ಹೇಳಿದ್ದೇನೆಂದು ದೇವರಾದ ಕರ್ತನು ಹೇಳುತ್ತಾನೆ. ಅದು ಜನಾಂಗಗಳಿಗೆ ಕೊಳ್ಳೆ ಯಾಗಿರುವದು, ಇದಲ್ಲದೆ ಬಯಲು ಭೂಮಿಯಲ್ಲಿ ರುವ ಅದರ ಕುಮಾರ್ತೆಯರು ಖಡ್ಗದಿಂದ ಕೊಲ್ಲಲ್ಪಡು ವರು, ಆಗ ನಾನೇ ಕರ್ತನೆಂದು ಎಲ್ಲರಿಗೂ ತಿಳಿಯುವದು. ದೇವರಾದ ಕರ್ತನು ಹೀಗೆ ಹೇಳು ತ್ತಾನೆ--ಇಗೋ, ಉತ್ತರದ ರಾಜಾಧಿರಾಜನೂ ಬಾಬೆಲಿನ ಅರಸನೂ ಆದ ನೆಬೂಕದ್ನೆಚ್ಚರನನ್ನು ಕುದುರೆಗಳ ಸಂಗಡಲೂ ಸವಾರರ ಸಂಗಡಲೂ ರಥಗಳ ಸಂಗಡಲೂ ಬಹು ಜನರ ಸಂಗಡಲೂ ತೂರಿನ ಮೇಲೆ ತರುತ್ತೇನೆ. ಅವನು ಬಯಲು ಭೂಮಿಯಲ್ಲಿನ ನಿನ್ನ ಕುಮಾರ್ತೆಯರನ್ನು ಖಡ್ಗದಿಂದ ಕೊಂದು ನಿನಗೆ ವಿರೋಧವಾಗಿ ಕೋಟೆಯನ್ನು ಕಟ್ಟಿ ದಿಬ್ಬ ಹಾಕಿ ನಿನಗೆ ವಿರೋಧವಾಗಿ ಖೇಡ್ಯವನ್ನು ಎತ್ತುವನು; ತನ್ನ ಯುದ್ಧಯಂತ್ರಗಳನ್ನು ನಿನ್ನ ಗೋಡೆಗಳಿಗೆ ವಿರೋಧ ವಾಗಿ ತಾಕಿಸುವೆನು ನಿನ್ನ ಗೋಪುರಗಳನ್ನು ತನ್ನ ಕೊಡಲಿಗಳಿಂದ ಒಡೆದು ಬಿಡುವನು. ಅವನ ಲೆಕ್ಕವಿಲ್ಲದ ಕುದುರೆಗಳಿಂದ ಎದ್ದ ಧೂಳು ನಿನ್ನನ್ನು ಮುಚ್ಚುವದು; ಗೋಡೆಯಿಲ್ಲದ ಕೋಟೆಯೊಳಗೆ ಶತ್ರು ಗಳು ಪ್ರವೇಶಿಸುವ ಪ್ರಕಾರ ಅವರು ನಿನ್ನ ಬಾಗಿಲು ಗಳಲ್ಲಿ ಪ್ರವೇಶಿಸುವಾಗ ಸವಾರರ, ರಥಗಳ, ಚಕ್ರಗಳ ಶಬ್ದದಿಂದ ನಿನ್ನ ಗೋಡೆಗಳು ಕದಲುವವು. ಅವನು ತನ್ನ ಕುದುರೆಗಳ ಗೊರಸುಗಳಿಂದ ನಿನ್ನ ಬೀದಿಗಳನ್ನೆಲ್ಲಾ ತುಳಿಸುವನು; ಜನರನ್ನು ಕತ್ತಿಯಿಂದ ಕೊಲ್ಲುವನು; ಬಲವಾದ ಕೋಟೆಗಳು ನೆಲಕ್ಕೆ ಬೀಳುವವು. ಅವರು ನಿನ್ನ ಸಂಪತ್ತನ್ನು ಕಸಿದುಕೊಂಡು, ಸರಕುಗಳನ್ನು ಕೊಳ್ಳೇ ಹೊಡೆದು, ಗೋಡೆಗಳನ್ನು ಒಡೆದು, ರಮ್ಯವಾದ ಮನೆಗಳನ್ನು ಕೆಡವಿ, ಕಲ್ಲುಗಳನ್ನೂ ಮರಗಳನ್ನೂ ದೂಳನ್ನೂ ನೀರಿನಲ್ಲಿ ಹಾಕುವರು. ಆಗ ನಿನ್ನ ಹಾಡು ಗಳ ಶಬ್ದವನ್ನು ನಿಲ್ಲಿಸುವೆನು, ಇನ್ನು ನಿನ್ನ ಕಿನ್ನರಿಗಳ ಧ್ವನಿ ಕೇಳಲ್ಪಡುವದಿಲ್ಲ. ನಿನ್ನನ್ನು ಬಂಡೆಯ ತುದಿ ಯಂತೆ ಮಾಡುವೆನು. ನೀನು ಅಲ್ಲಿ ಬಲೆ ಹಾಸುವ ಸ್ಥಳವಾಗುವಿ. ಇನ್ನು ನೀನು ಕಟ್ಟಲ್ಪಡುವದಿಲ್ಲ; ಯಾಕಂ ದರೆ ಕರ್ತನಾದ ನಾನೇ ಅದನ್ನು ಹೇಳಿದ್ದೇನೆಂದು ದೇವರಾದ ಕರ್ತನು ಹೇಳುತ್ತಾನೆ. ದೇವರಾದ ಕರ್ತನು ತೂರಿಗೆ ಹೀಗೆ ಹೇಳು ತ್ತಾನೆ--ನಿಮ್ಮನ್ನು ಬೀಳುವಿಕೆಯ ಶಬ್ದದಿಂದಲೂ ಗಾಯ ಪಟ್ಟವರು ಕೂಗುವಾಗಲೂ ನಿನ್ನ ಮಧ್ಯದಲ್ಲಿ ಕೊಲೆ ಯಾಗುವಾಗಲೂ ದ್ವೀಪಗಳು ನಡುಗುವದಿಲ್ಲವೇ? ಆಮೇಲೆ ಸಮುದ್ರದ ಎಲ್ಲಾ ಪ್ರಭುಗಳು ತಮ್ಮ ಸಿಂಹಾಸನಗಳನ್ನು ಬಿಟ್ಟು ಇಳಿಯುವರು; ತಮ್ಮ ನಿಲು ವಂಗಿಗಳನ್ನು ತೆಗೆದುಹಾಕುವರು, ಚಿತ್ರವಾಗಿ ಹೊಲಿದ ತಮ್ಮ ವಸ್ತ್ರಗಳನ್ನು ಇಟ್ಟುಬಿಡುವರು; ನಡುಗುವಿಕೆಯನ್ನು ಹೊದ್ದುಕೊಳ್ಳುವರು; ನೆಲದ ಮೇಲೆ ಕುಳಿತುಕೊಳ್ಳು ವರು, ಕ್ಷಣಕ್ಷಣಕ್ಕೂ ನಡುಗುವರು, ನಿನ್ನ ವಿಷಯ ವಾಗಿ ಆಶ್ಚರ್ಯಪಡುವರು. ನಿನ್ನ ವಿಷಯದಲ್ಲಿ ಗೋಳಾಟವನ್ನೆತ್ತಿ ನಿನಗೆ ಹೇಳುವದೇನಂದರೆ, ಸಮು ದ್ರಗಳ ಬಳಿಯಲ್ಲಿ ವಾಸಿಸಿದವಳೇ, ಹೆಸರು ಗೊಂಡ ಪಟ್ಟಣವೇ, ನೀನೂ ತನ್ನ ನಿವಾಸಿಗಳೂ ಸಮುದ್ರದಲ್ಲಿ ಬಲವಾಗಿದ್ದವಳೇ, ಅದರ ಸಮುದ್ರ ಸಂಚಾರವನ್ನೂ ಭಯಪಡಿಸಿದವಳೇ, ಅಯ್ಯೋ, ಹೇಗೆ ನಾಶವಾದಿ? ಈಗ ನೀನು ಬೀಳುವ ದಿವಸದಲ್ಲಿ ದ್ವೀಪಗಳು ನಡುಗುವವು ಹೌದು, ನೀನು ಹೋಗಿಬಿಡುವದರಿಂದ ಸಮುದ್ರದಲ್ಲಿರುವ ದ್ವೀಪಗಳು ಗಾಬರಿಯಾಗುವವು. ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನಾನು ನಿನ್ನನ್ನು ನಿವಾಸಿಗಳಿಲ್ಲದ ಪಟ್ಟಣದ ಹಾಗೆ ಹಾಳಾದ ಪಟ್ಟಣವಾಗಿ ಮಾಡುವಾಗ ಹೆಚ್ಚು ನೀರು ಮುಚ್ಚುವ ಹಾಗೆ ಅಗಾಧವನ್ನು ನಿನ್ನ ಮೇಲೆ ಬರ ಮಾಡುವೆನು. ನಿನ್ನನ್ನು ಅಧೋಲೋಕಕ್ಕೆ ತಳ್ಳಿ ಪಾತಾಳಕ್ಕೆ ಇಳಿದ ನಿಮ್ಮ ಪೂರ್ವ ಕಾಲದವರೊಂದಿಗೆ ವಾಸಿಸುವಂತೆ ಮಾಡುವೆನು. ನಾನು ನಿನ್ನ ಮಹಿಮೆಯನ್ನು ಜೀವ ಲೋಕದಲ್ಲಿ ನೆಲೆಗೊಳಿಸದ ನಿರ್ನಿವಾಸಿಯಾಗುವಂತೆ ನಿನ್ನನ್ನು ಪಾತಾಳಕ್ಕಿಳಿದವರ ಸಹವಾಸಕ್ಕೆ ಸೇರಿಸುವೆನು.ನಾನೂ ನಿನ್ನನ್ನು ದಿಗಿಲುಪಡಿಸುವೆನು, ಇನ್ನು ಮೇಲೆ ನೀನು ಇರುವದಿಲ್ಲ; ಆಮೇಲೆ ನಿನ್ನನ್ನು ಎಷ್ಟು ಹುಡು ಕಿದರೂ ನೀನು ಸಿಗುವದಿಲ್ಲ ಎಂದು ದೇವರಾದ ಕರ್ತನು ಹೇಳುತ್ತಾನೆ. ನಾನೂ ನಿನ್ನನ್ನು ದಿಗಿಲುಪಡಿಸುವೆನು, ಇನ್ನು ಮೇಲೆ ನೀನು ಇರುವದಿಲ್ಲ; ಆಮೇಲೆ ನಿನ್ನನ್ನು ಎಷ್ಟು ಹುಡು ಕಿದರೂ ನೀನು ಸಿಗುವದಿಲ್ಲ ಎಂದು ದೇವರಾದ ಕರ್ತನು ಹೇಳುತ್ತಾನೆ.
- Matthew 11:20–23 ಮತ್ತಾಯನು 11:20–23ತರುವಾಯ ತಾನು ಹೆಚ್ಚಾದ ಮಹತ್ಕಾರ್ಯ ಗಳನ್ನು ನಡಿಸಿದ ಪಟ್ಟಣಗಳು ಮಾನಸಾಂತರಪಡದೆ ಇದ್ದದರಿಂದ ಆತನು ಅವುಗಳನ್ನು ಗದರಿಸತೊ ಡಗಿ -- ಖೊರಾಜಿನೇ, ನಿನಗೆ ಅಯ್ಯೋ! ಬೆತ್ಸಾಯಿದವೇ, ನಿನಗೆ ಅಯ್ಯೋ! ಯಾಕಂದರೆ ನಿನ್ನೊಳಗೆ ನಡೆದ ಮಹತ್ಕಾರ್ಯಗಳು ತೂರ್ ಮತ್ತು ಸೀದೋನ್ಗಳಲ್ಲಿ ನಡೆಯುತ್ತಿದ್ದರೆ ಅವುಗಳು ಆಗಲೇ ಗೋಣೀತಟ್ಟನ್ನು ಸುತ್ತಿಕೊಂಡು ಬೂದಿಯಲ್ಲಿ ಕೂತು ಮಾನಸಾಂತರಪಡುತ್ತಿದ್ದವು. ಆದರೆ ನಾನು ನಿಮಗೆ ಹೇಳುವದೇನಂದರೆ-- ನ್ಯಾಯತೀರ್ಪಿನ ದಿನದಲ್ಲಿ ನಿಮಗಿಂತಲೂ ತೂರ್ ಮತ್ತು ಸೀದೋನ್ಗಳ ಗತಿಯು ಹೆಚ್ಚು ತಾಳಬಹುದಾಗಿರುವದು. ಆಕಾಶದವರೆಗೂ ಹೆಚ್ಚಿಸಲ್ಪಟ್ಟ ಕಪೆರ್ನೌಮೇ, ನೀನು ಕೆಳಗೆ ಪಾತಾಳಕ್ಕೆ ದೊಬ್ಬಲ್ಪಡುವಿ; ಯಾಕಂದರೆ ನಿನ್ನೊಳಗೆ ನಡೆದಿರುವ ಮಹತ್ಕಾರ್ಯಗಳು ಸೊದೋಮಿನಲ್ಲಿ ನಡೆದಿದ್ದರೆ ಅದು ಈ ದಿನದವರೆಗೂ ಇರುತ್ತಿತ್ತು.
- Acts 28:25–28 ಅಪೊಸ್ತಲರ ಕೃತ್ಯಗಳು 28:25–28ಹೀಗೆ ಅವರಲ್ಲಿ ವಿಭಾಗವಾದಾಗ ಪೌಲನು ಅವರಿಗೆ--ಯೆಶಾಯನು ಪವಿತ್ರಾತ್ಮನಿಂದ ನಮ್ಮ ಪಿತೃಗಳಿಗೆ ವಿಹಿತ ವಾಗಿ ಹೇಳಿದ್ದೇನಂದರೆ-- ನೀವು ಕೇಳಿದರೂ ಕೇಳಿ ಗ್ರಹಿಸುವದಿಲ್ಲ; ನೋಡಿದರೂ ನೋಡಿ ಕಾಣುವದಿಲ್ಲ; ಯಾಕಂದರೆ ಅವರು ತಮ್ಮ ಕಣ್ಣುಗಳಿಂದ ನೋಡಿ ಕಿವಿಗಳಿಂದ ಕೇಳಿ ಹೃದಯದಿಂದ ಗ್ರಹಿಸಿ ಮಾರ್ಪಾಟು ಹೊಂದದಂತೆಯೂ ನಾನು ಅವರನ್ನು ಸ್ವಸ್ಥ ಮಾಡ ದಂತೆಯೂ ಈ ಜನರ ಹೃದಯವು ಕೊಬ್ಬೇರಿತು; ಕೇಳುವದಕ್ಕೆ ಅವರ ಕಿವಿಗಳು ಮಂದವಾದವು; ಅವರು ತಮ್ಮ ಕಣ್ಣುಗಳನ್ನು ಮುಚ್ಚಿಕೊಂಡಿದ್ದಾರೆ ಆದಕಾರಣ ದೇವರ ರಕ್ಷಣೆಯು ಅನ್ಯಜನಾಂಗದವರಿಗೆ ಕಳುಹಿಸಲ್ಪಟ್ಟಿದೆ; ಅದನ್ನು ಅವರು ಕೇಳುವರು ಎಂಬದಾಗಿ ನಿಮಗೆ ತಿಳಿದಿರಲಿ ಅಂದನು.
- Job 42:6 ಯೋಬನು 42:6ಆದದರಿಂದ ನನ್ನನ್ನು ಅಸಹ್ಯಿಸಿಕೊಂಡು ದೂಳಿಯ ಲ್ಲಿಯೂ ಬೂದಿಯಲ್ಲಿಯೂ ಪಶ್ಚಾತ್ತಾಪ ಪಡುತ್ತೇನೆ ಅಂದನು.
- 1 Timothy 4:2 1 ತಿಮೊಥೆಯನಿಗೆ 4:2ಅವರು ಕಪಟದಲ್ಲಿ ಸುಳ್ಳಾಡುವವರೂ ತಮ್ಮ ಮನಸ್ಸಾಕ್ಷಿಯ ಮೇಲೆ ಕಾಸಿದ ಕಬ್ಬಿಣದಿಂದ ಬರೆ ಹಾಕಲ್ಪಟ್ಟವರೂ ಆಗಿದ್ದು
- John 3:5–6 ಯೋಹಾನನು 3:5–6ಯೇಸು ಪ್ರತ್ಯುತ್ತರವಾಗಿ ಅವನಿಗೆ--ನಿನಗೆ ನಿಜನಿಜ ವಾಗಿ ಹೇಳುತ್ತೇನೆ, ಒಬ್ಬನು ನೀರಿನಿಂದಲೂ ಆತ್ಮ ನಿಂದಲೂ ಹುಟ್ಟದಿದ್ದರೆ ಅವನು ದೇವರ ರಾಜ್ಯದೊಳಗೆ ಪ್ರವೇಶಿಸಲಾರನು. ಶರೀರದಿಂದ ಹುಟ್ಟಿದ್ದು ಶರೀ ರವೇ; ಆತ್ಮನಿಂದ ಹುಟ್ಟಿದ್ದು ಆತ್ಮವೇ.
- Mark 8:22–26 ಮಾರ್ಕನು 8:22–26ತರುವಾಯ ಆತನು ಬೇತ್ಸಾಯಿದಕ್ಕೆ ಬಂದಾಗ ಅವರು ಒಬ್ಬ ಕುರುಡನನ್ನು ಆತನ ಬಳಿಗೆ ತಂದು ಅವನನ್ನು ಮುಟ್ಟಬೇಕೆಂದು ಆತನನ್ನು ಬೇಡಿಕೊಂಡರು. ಆತನು ಆ ಕುರುಡನ ಕೈಹಿಡಿದು ಊರಿನ ಹೊರಗೆ ಕರಕೊಂಡು ಹೋಗಿ ಅವನ ಕಣ್ಣುಗಳ ಮೇಲೆ ಉಗುಳಿ ತನ್ನ ಕೈಗಳನ್ನು ಅವನ ಮೇಲೆ ಇಟ್ಟು ಏನಾದರೂ ಕಾಣುತ್ತದೋ ಎಂದು ಅವನನ್ನು ಕೇಳಿದನು. ಅವನು ಮೇಲಕ್ಕೆ ನೋಡಿ--ಮನುಷ್ಯರು ಮರಗಳ ಹಾಗೆ ನಡೆದಾಡುವದನ್ನು ನೋಡುತ್ತೇನೆ ಅಂದನು. ತರುವಾಯ ಆತನು ತಿರಿಗಿ ಅವನ ಕಣ್ಣುಗಳ ಮೇಲೆ ತನ್ನ ಕೈಗಳನ್ನಿಟ್ಟು ಅವನು ಮೇಲಕ್ಕೆ ನೋಡುವಂತೆ ಮಾಡಿದನು; ಆಗ ಅವನು ಗುಣಹೊಂದಿದವನಾಗಿ ಪ್ರತಿ ಮನುಷ್ಯನನ್ನು ಸ್ಪಷ್ಟವಾಗಿ ನೋಡಿದನು. ತರುವಾಯ ಆತನು ಅವನಿಗೆ--ನೀನು ಊರೊಳಕ್ಕೆ ಹೋಗಬೇಡ ಇಲ್ಲವೆ ಊರಲ್ಲಿ ಯಾರಿಗೂ ಹೇಳಬೇಡ ಎಂದು ಹೇಳಿ ಅವನನ್ನು ಅವನ ಮನೆಗೆ ಕಳುಹಿಸಿ ಬಿಟ್ಟನು.
- Romans 9:29–33 ರೋಮಾಪುರದವರಿಗೆ 9:29–33ಯೆಶಾಯನು ಮುಂದಾಗಿ--ಸೈನ್ಯಗಳ ಕರ್ತನು ನಮಗಾಗಿ ಸಂತಾನ ವನ್ನು ಉಳಿಸದೆ ಹೋಗಿದ್ದರೆ ನಾವು ಸೊದೋಮಿನ ಹಾಗೆ ಇರುತ್ತಿದ್ದೆವು; ಗೊಮೋರದ ಸ್ಥಿತಿಯು ನಮ್ಮದಾ ಗುತ್ತಿತ್ತು ಎಂದು ಹೇಳಿದನು. ಹಾಗಾದರೆ ನಾವು ಏನು ಹೇಳೋಣ? ನೀತಿ ಯನ್ನು ಹೊಂದುವದಕ್ಕೆ ಪ್ರಯತ್ನಮಾಡದ ಅನ್ಯ ಜನರಿಗೆ ನೀತಿಯು ಅಂದರೆ ನಂಬಿಕೆಯಿಂದುಂಟಾಗುವ ನೀತಿಯು ದೊರಕಿತು. ಆದರೆ ನ್ಯಾಯಪ್ರಮಾಣ ದಿಂದುಂಟಾದ ನೀತಿಯನ್ನು ಅನುಸರಿಸಿದ ಇಸ್ರಾಯೇ ಲ್ಯರು ನ್ಯಾಯಪ್ರಮಾಣದ ನೀತಿಯನ್ನು ಹೊಂದದೆ ಹೋಗಿದ್ದಾರೆ. ಅದಕ್ಕೆ ಕಾರಣವೇನು? ಅವರು ನಂಬಿಕೆಯನ್ನು ಆಧಾರಮಾಡಿಕೊಳ್ಳದೆ ನ್ಯಾಯ ಪ್ರಮಾಣದ ಕ್ರಿಯೆಗಳನ್ನು ಆಧಾರಮಾಡಿಕೊಂಡದ್ದೇ ಕಾರಣ.ಇಗೋ, ನಾನು ಚೀಯೋನಿನಲ್ಲಿ ಎಡವುವ ಕಲ್ಲನ್ನೂ ಮುಗ್ಗರಿಸುವ ಬಂಡೆಯನ್ನೂ ಇಡುತ್ತೇ ನೆಂತಲೂ ಅದರ ಮೇಲೆ ನಂಬಿಕೆಯಿಡುವವನು ಆಶಾ ಭಂಗಪಡುವದಿಲ್ಲವೆಂತಲೂ ಬರೆದಿರುವ ಪ್ರಕಾರ ಆ ಎಡವುವ ಕಲ್ಲಿಗೆ ಅವರು ಎಡವಿಬಿದ್ದರು ಎಂಬದೇ. ಇಗೋ, ನಾನು ಚೀಯೋನಿನಲ್ಲಿ ಎಡವುವ ಕಲ್ಲನ್ನೂ ಮುಗ್ಗರಿಸುವ ಬಂಡೆಯನ್ನೂ ಇಡುತ್ತೇ ನೆಂತಲೂ ಅದರ ಮೇಲೆ ನಂಬಿಕೆಯಿಡುವವನು ಆಶಾ ಭಂಗಪಡುವದಿಲ್ಲವೆಂತಲೂ ಬರೆದಿರುವ ಪ್ರಕಾರ ಆ ಎಡವುವ ಕಲ್ಲಿಗೆ ಅವರು ಎಡವಿಬಿದ್ದರು ಎಂಬದೇ.
- Romans 11:8–11 ರೋಮಾಪುರದವರಿಗೆ 11:8–11(ಬರೆದಿರುವಂತೆ ದೇವರು ಅವರಿಗೆ ತೂಕಡಿಕೆಯ ಆತ್ಮವನ್ನೂ ಕಾಣದ ಕಣ್ಣುಗಳನ್ನೂ ಕೇಳದ ಕಿವಿಗಳನ್ನೂ ಕೊಟ್ಟಿದ್ದಾನೆ). ಉಳಿದವರು ಈ ದಿನದ ವರೆಗೂ ಕುರುಡರಾಗಿದ್ದಾರೆ. ಇದಲ್ಲದೆ ದಾವೀದನು--ಅವರ ಊಟವು ಅವರಿಗೆ ಉರ್ಲೂ ಬೋನೂ ಅಭ್ಯಂತರವೂ ಪ್ರತಿಫಲವೂ ಆಗಲಿ. ನೋಡದಂತೆ ಅವರ ಕಣ್ಣು ಗಳು ಮೊಬ್ಬಾಗಲಿ; ಅವರ ಬೆನ್ನು ಯಾವಾಗಲೂ ಬೊಗ್ಗಿಕೊಂಡಿರಲಿ ಎಂದು ಅನ್ನುತ್ತಾನೆ. ಹಾಗಾದರೆ--ಅವರು ಬಿದ್ದುಹೋಗುವಂತೆ ಎಡವಿದರೆಂದು ನಾನು ಹೇಳಬೇಕೋ? ಹಾಗೆ ಎಂದಿಗೂ ಆಗಬಾರದು; ಆದರೆ ಅವರಲ್ಲಿ ಹುರುಡು ಹುಟ್ಟಿಸುವದಕ್ಕಾಗಿ ಅವರ ಬೀಳುವಿಕೆಯ ಮೂಲಕವೇ ಅನ್ಯಜನರಿಗೆ ರಕ್ಷಣೆಯುಂಟಾಯಿತು.
- Ezekiel 3:6–7 ಯೆಹೆಜ್ಕೇಲನು 3:6–7ನೀನು ಕಠಿಣ ಭಾಷೆಯಲ್ಲಿ ಸೋಜಿಗದ ಮಾತುಗಳನ್ನಾಡುವವರ ಬಳಿಗೆ ಕಳುಹಿಸಲ್ಪಟ್ಟವನಲ್ಲ; ಇಂಥವರ ಕಡೆಗೆ ನಾನು ನಿನ್ನನ್ನು ಕಳುಹಿಸಿದ್ದ ಪಕ್ಷದಲ್ಲಿ ನಿಶ್ಚಯವಾಗಿ ಅವರು ನಿನ್ನ ಮಾತಿಗೆ ಕಿವಿಗೊಡುತ್ತಿದ್ದರು. ಆದರೆ ಇಸ್ರಾ ಯೇಲಿನ ಮನೆತನದವರು ನಿನಗೆ ಕಿವಿಗೊಡುವದಿಲ್ಲ; ಅವರು ನನಗೆ ಕಿವಿಗೊಟ್ಟಿಲ್ಲ. ಯಾಕಂದರೆ ಎಲ್ಲಾ ಇಸ್ರಾಯೇಲಿನ ಮನೆತನದವರು ಕಠಿಣ ಹೃದಯ ದವರೂ ನಿರ್ಲಜ್ಜರೂ (ನಾಚಿಕೆಗೆಟ್ಟವರೂ) ಆಗಿದ್ದಾರೆ.