Luke · chapter 10 · verse 15
Luke 10:15 in Kannada
ಆಕಾಶದವರೆಗೂ ಎತ್ತಲ್ಪಟ್ಟಿರುವ ಕಪೆರ್ನೌಮೇ, ನೀನು ಕೆಳಗೆ ಪಾತಾಳಕ್ಕೆ ದೊಬ್ಬ ಲ್ಪಡುವಿ.
Aakaashadavaregoo ettalpattiruva kapernaume, neenu kelage paataalakke dobba lpaduvi.
Luke 10:15 in English
- King James Version (KJV)
- And thou, Capernaum, which art exalted to heaven, shalt be thrust down to hell.
- World English Bible (WEB)
- You, Capernaum, who are exalted to heaven, will be brought down to Hades.
- American Standard Version (ASV)
- And thou, Capernaum, shalt thou be exalted unto heaven? thou shalt be brought down unto Hades.
- Bible in Basic English (BBE)
- And you, Capernaum, were you not lifted up to heaven? you will go down to hell.
- Darby Translation (DBY)
- And thou, Capernaum, who hast been raised up to heaven, shalt be brought down even to hades.
- Webster's Bible (WBS)
- And thou, Capernaum, which art exalted to heaven, shall be thrust down to hell.
- Young's Literal Translation (YLT)
- 'And thou, Capernaum, which unto the heaven wast exalted, unto hades thou shalt be brought down.
Read in context
- 13ಖೊರಾಜಿನೇ, ನಿನಗೆ ಅಯ್ಯೋ! ಬೇತ್ಸಾಯಿದವೇ, ನಿನಗೆ ಅಯ್ಯೋ! ನಿನ್ನಲ್ಲಿ ನಡೆದ ಮಹತ್ಕಾರ್ಯಗಳು ತೂರ್ ಸೀದೋನ್ಗಳಲ್ಲಿ ನಡೆದಿದ್ದರೆ ಅಲ್ಲಿಯವರು ಬಹಳ ಕಾಲದ ಹಿಂದೆಯೇ ಗೋಣೀತಟ್ಟನ್ನು ಸುತ್ತಿಕೊಂಡು ಬೂದಿಯಲ್ಲಿ ಕೂತು ಮಾನಸಾಂತರ ಪಡುತ್ತಿದ್ದರು.
- 14ಆದರೆ ನ್ಯಾಯ ತೀರ್ಪಿನಲ್ಲಿ ನಿಮ್ಮ ಗತಿಗಿಂತಲೂ ತೂರ್ ಸೀದೋನ್ಗಳ ಗತಿಯು ಹೆಚ್ಚಾಗಿ ತಾಳಬಹು ದಾಗಿರುವದು.
- 15ಆಕಾಶದವರೆಗೂ ಎತ್ತಲ್ಪಟ್ಟಿರುವ ಕಪೆರ್ನೌಮೇ, ನೀನು ಕೆಳಗೆ ಪಾತಾಳಕ್ಕೆ ದೊಬ್ಬ ಲ್ಪಡುವಿ.
- 16ನಿಮ್ಮ ಮಾತನ್ನು ಕೇಳುವವನು ನನ್ನ ಮಾತನ್ನು ಕೇಳುತ್ತಾನೆ; ನಿಮ್ಮನ್ನು ತಿರಸ್ಕರಿಸುವವನು ನನ್ನನ್ನು ತಿರಸ್ಕರಿಸುತ್ತಾನೆ; ನನ್ನನ್ನು ತಿರಸ್ಕರಿಸುವವನು ನನ್ನನ್ನು ಕಳುಹಿಸಿದಾತನನ್ನು ತಿರಸ್ಕರಿಸುತ್ತಾನೆ ಅಂದನು.
- 17ತರುವಾಯ ಆ ಎಪ್ಪತ್ತು ಮಂದಿ ಸಂತೋಷದಿಂದ ಹಿಂತಿರುಗಿ--ಕರ್ತನೇ, ನಿನ್ನ ಹೆಸರಿನಲ್ಲಿ ದೆವ್ವಗಳು ಸಹ ನಮಗೆ ಅಧೀನವಾದವು ಅಂದರು.
Cross references
- Isaiah 14:13–15 ಯೆಶಾಯ 14:13–15ನೀನು ನಿನ್ನ ಹೃದಯದಲ್ಲಿ ನಾನು ಆಕಾಶಕ್ಕೆ ಏರಿ ದೇವರ ನಕ್ಷತ್ರಗಳ ಮೇಲೆ ನನ್ನ ಸಿಂಹಾಸನವನ್ನು ಘನತೆಗೇರಿಸುವೆನು; ಉತ್ತರ ದಿಕ್ಕಿನ ಕಡೆಗಿರುವ ಸಮೂಹ ಪರ್ವತದ ಮೇಲೆಯೂ ನಾನು ಆಸೀನನಾ ಗುವೆನು. ಉನ್ನತವಾದ ಮೇಘ ಮಂಡಲದ ಮೇಲೆ ಏರಿ ಮಹೋನ್ನತನಿಗೆ ಸಮಾನನಾಗುತ್ತೇನೆ ಅಂದು ಕೊಂಡಿದ್ದೆಯಲ್ಲಾ; ಆದಾಗ್ಯೂ ಪಾತಾಳದ ಕುಣಿಯ ಪಾರ್ಶ್ವಗಳಿಗೆ ಇಳಿಸಲ್ಪಡುವಿ.
- 2 Peter 2:4 2 ಪೇತ್ರನು 2:4ಹೇಗೆಂದರೆ ದೂತರು ಪಾಪಮಾಡಿದಾಗ ದೇವರು ಅವರನ್ನು ಸುಮ್ಮನೆ ಬಿಡದೆ ನರಕಕ್ಕೆ ದೊಬ್ಬಿ ನ್ಯಾಯ ತೀರ್ಪನ್ನು ಹೊಂದುವದಕ್ಕೆ ಇಡಲ್ಪಟ್ಟವರಾಗಿರ ಬೇಕೆಂದು ಕತ್ತಲೆಯ ಸಂಕೋಲೆಗಳಿಗೆ ಒಪ್ಪಿಸಿದನು.
- Matthew 4:13 ಮತ್ತಾಯನು 4:13ಮತ್ತು ಆತನು ನಜರೇತನ್ನು ಬಿಟ್ಟು ಜೆಬುಲೋನ್, ನೆಫ್ತಲೀಮ್ ಮೇರೆಗಳ ಸಮುದ್ರತೀರದಲ್ಲಿರುವ ಕಪೆರ್ನೌಮಿಗೆ ಬಂದು ಅಲ್ಲಿ ವಾಸಿಸಿದನು.
- Luke 13:28 ಲೂಕನು 13:28ಆದರೆ ನೀವು ಅಬ್ರಹಾಮ ಇಸಾಕ ಯಾಕೋಬ ಮತ್ತು ಎಲ್ಲಾ ಪ್ರವಾದಿಗಳು ದೇವರರಾಜ್ಯದಲ್ಲಿ ಇರುವದನ್ನೂ ನೀವು ಮಾತ್ರ ಹೊರಗೆ ದೊಬ್ಬಲ್ಪಟ್ಟಿರುವದನ್ನೂ ನೋಡು ವಾಗ ಅಲ್ಲಿ ನಿಮಗೆ ಗೋಳಾಟವೂ ಹಲ್ಲುಕಡಿ ಯೋಣವೂ ಇರುವವು.
- Matthew 11:23 ಮತ್ತಾಯನು 11:23ಆಕಾಶದವರೆಗೂ ಹೆಚ್ಚಿಸಲ್ಪಟ್ಟ ಕಪೆರ್ನೌಮೇ, ನೀನು ಕೆಳಗೆ ಪಾತಾಳಕ್ಕೆ ದೊಬ್ಬಲ್ಪಡುವಿ; ಯಾಕಂದರೆ ನಿನ್ನೊಳಗೆ ನಡೆದಿರುವ ಮಹತ್ಕಾರ್ಯಗಳು ಸೊದೋಮಿನಲ್ಲಿ ನಡೆದಿದ್ದರೆ ಅದು ಈ ದಿನದವರೆಗೂ ಇರುತ್ತಿತ್ತು.
- Ezekiel 32:27 ಯೆಹೆಜ್ಕೇಲನು 32:27ಸುನ್ನತಿಯಿಲ್ಲದವರಲ್ಲಿ ಬಿದ್ದಂತ ತಮ್ಮ ಯುದ್ಧದ ಆಯುಧಗಳ ಸಂಗಡ ಪಾತಾಳಕ್ಕೆ ಇಳಿದಂತ ಶೂರರ ಸಂಗಡ ಇವರು ಮಲಗಬೇಡವೇ? ಅವರು ತಮ್ಮ ಕತ್ತಿಗಳನ್ನು ತಮ್ಮ ತಲೆಗಳ ಕೆಳಗೆ ಇಟ್ಟುಕೊಂಡಿದ್ದಾರೆ; ಅವರು ಜೀವಿತರ ದೇಶದಲ್ಲಿ ಶೂರರಿಗೆ ಭಯಂಕರ ರಾಗಿದ್ದಾಗ್ಯೂ ಅವರ ಅಕ್ರಮಗಳು ಅವರ ಎಲುಬು ಗಳ ಮೇಲೆ ಇರುವವು.
- Jeremiah 51:53 ಯೆರೆಮೀಯ 51:53ಬಾಬೆಲ್ ಆಕಾಶಕ್ಕೆ ಏರಿದರೂ ಅದರ ಬಲದ ಉನ್ನತ ಸ್ಥಾನವನ್ನು ಭದ್ರಮಾಡಿದರೂ ಸೂರೆಮಾಡು ವವರು ನನ್ನಿಂದ ಅವಳಿಗೆ ವಿರೋಧವಾಗಿ ಬರುವರೆಂದು ಕರ್ತನು ಅನ್ನುತ್ತಾನೆ.
- Ezekiel 26:20 ಯೆಹೆಜ್ಕೇಲನು 26:20ನಿನ್ನನ್ನು ಅಧೋಲೋಕಕ್ಕೆ ತಳ್ಳಿ ಪಾತಾಳಕ್ಕೆ ಇಳಿದ ನಿಮ್ಮ ಪೂರ್ವ ಕಾಲದವರೊಂದಿಗೆ ವಾಸಿಸುವಂತೆ ಮಾಡುವೆನು. ನಾನು ನಿನ್ನ ಮಹಿಮೆಯನ್ನು ಜೀವ ಲೋಕದಲ್ಲಿ ನೆಲೆಗೊಳಿಸದ ನಿರ್ನಿವಾಸಿಯಾಗುವಂತೆ ನಿನ್ನನ್ನು ಪಾತಾಳಕ್ಕಿಳಿದವರ ಸಹವಾಸಕ್ಕೆ ಸೇರಿಸುವೆನು.ನಾನೂ ನಿನ್ನನ್ನು ದಿಗಿಲುಪಡಿಸುವೆನು, ಇನ್ನು ಮೇಲೆ ನೀನು ಇರುವದಿಲ್ಲ; ಆಮೇಲೆ ನಿನ್ನನ್ನು ಎಷ್ಟು ಹುಡು ಕಿದರೂ ನೀನು ಸಿಗುವದಿಲ್ಲ ಎಂದು ದೇವರಾದ ಕರ್ತನು ಹೇಳುತ್ತಾನೆ.
- Obadiah 1:4 ಓಬದ್ಯ 1:4ನೀನು ಹದ್ದಿನಂತೆ ಏರಿಕೊಂಡು ನಿನ್ನ ಗೂಡನ್ನು ನಕ್ಷತ್ರಗಳಲ್ಲಿ ಇಟ್ಟರೂ ಅಲ್ಲಿಂದ ನಿನ್ನನ್ನು ಇಳಿಸುವೆನೆಂದು ಕರ್ತನು ಅನ್ನುತ್ತಾನೆ.
- Isaiah 5:14 ಯೆಶಾಯ 5:14ಹೀಗಿರುವದರಿಂದ ಪಾತಾಳವು ತನಗೆ ತಾನೇ ದೊಡ್ಡದಾಗಿ ಮಿತಿಯಿಲ್ಲದಷ್ಟು ತನ್ನ ಬಾಯಿಯನ್ನು ತೆರೆಯಲು ಅವರ ಮಹಿಮೆ, ಸಮೂ ಹವು, ಕೋಲಾಹಲ, ಉಲ್ಲಾಸಪಡುವದು ಇವೆಲ್ಲವೂ ಅದರಲ್ಲಿ ಬೀಳುವವು.
- Matthew 10:28 ಮತ್ತಾಯನು 10:28ಶರೀರವನ್ನು ಕೊಲ್ಲುವವರಿಗೆ ಹೆದರಬೇಡಿರಿ; ಯಾಕಂದರೆ ಅವರು ಆತ್ಮವನ್ನು ಕೊಲ್ಲಲು ಶಕ್ತರಲ್ಲ; ಆದರೆ ಆತ್ಮ ಮತ್ತು ಶರೀರ ಎರಡನ್ನೂ ನರಕದಲ್ಲಿ ನಾಶಮಾಡಲು ಶಕ್ತನಾಗಿರು ವಾತನಿಗೇ ಭಯಪಡಿರಿ.
- Ezekiel 32:18 ಯೆಹೆಜ್ಕೇಲನು 32:18ಮನುಷ್ಯಪುತ್ರನೇ, ಐಗುಪ್ತದ ಜನಸಮೂಹದ ವಿಷಯವಾಗಿ ಗೋಳಾಡು. ಅದನ್ನು, ಅದರ ಸಂಗಡ ಘನವುಳ್ಳ ಜನಾಂಗಗಳ ಕುಮಾರ್ತೆ ಯರನ್ನು ಭೂಮಿಯ ಕೆಳಗಿನ ಭಾಗಗಳಿಗೆ ಕುಣಿಯೊ ಳಗೆ ಇಳಿಯುವವರ ಜೊತೆ ತಳ್ಳಿಬಿಡು.