Luke · chapter 12 · verse 47
Luke 12:47 in Kannada
ಇದಲ್ಲದೆ ತನ್ನ ಒಡೆಯನ ಚಿತ್ತವನ್ನು ತಿಳಿದು ತನ್ನನ್ನು ಸಿದ್ಧಮಾಡಿಕೊಳ್ಳದೆ ಇಲ್ಲವೆ ಅವನ ಚಿತ್ತಕ್ಕೆ ಅನುಸಾರವಾಗಿ ಮಾಡದೆ ಇದ್ದ ಸೇವಕನು ಬಹಳ ಪೆಟ್ಟುಗಳನ್ನು ತಿನ್ನುವನು.
Idallade tanna odeyana chittavannu tilidu tannannu siddhamaadikollade illave avana chittakke anusaaravaagi maadade idda sevakanu bahala pettugalannu tinnuvanu.
Luke 12:47 in English
- King James Version (KJV)
- And that servant, which knew his lord’s will, and prepared not [himself], neither did according to his will, shall be beaten with many [stripes].
- World English Bible (WEB)
- That servant who knew his lord’s will, and didn’t prepare nor do what he wanted, will be beaten with many stripes,
- American Standard Version (ASV)
- And that servant, who knew his lord’s will, and made not ready, nor did according to his will, shall be beaten with many [stripes];
- Bible in Basic English (BBE)
- And the servant who had knowledge of his lord's desires and was not ready for him and did not do as he was ordered, will be given a great number of blows;
- Darby Translation (DBY)
- But that bondman who knew his own lord's will, and had not prepared [himself] nor done his will, shall be beaten with many [stripes];
- Webster's Bible (WBS)
- And that servant who knew his lord's will, and prepared not [himself] , neither did according to his will, shall be beaten with many [stripes] .
- Young's Literal Translation (YLT)
- 'And that servant, who having known his lord's will, and not having prepared, nor having gone according to his will, shall be beaten with many stripes,
Read in context
- 45ಆದರೆ ಆ ಸೇವಕನು--ನನ್ನ ಒಡೆಯನು ಬರುವದಕ್ಕೆ ತಡಮಾಡುತ್ತಾನೆ ಎಂದು ತನ್ನ ಹೃದಯದಲ್ಲಿ ಅಂದು ಕೊಂಡು ಗಂಡಾಳು ಹೆಣ್ಣಾಳುಗಳನ್ನು ಹೊಡೆಯು ವದಕ್ಕೂ ತಿಂದು ಕುಡಿದು ಮತ್ತನಾಗುವದಕ್ಕೂ ಆರಂಭಿಸಿದರೆ
- 46ಅವನು ನಿರೀಕ್ಷಿಸದ ದಿನದಲ್ಲಿಯೂ ತಿಳಿಯದ ಗಳಿಗೆಯಲ್ಲಿಯೂ ಆ ಸೇವಕನ ಒಡೆಯನು ಬಂದು ಅವನನ್ನು ಕಠಿಣವಾಗಿ ಛೇದಿಸಿ ಅವನಿಗೆ ನಂಬಿಕೆಯಿಲ್ಲದವರ ಕೂಡ ಪಾಲನ್ನು ನೇಮಕ ಮಾಡುವನು.
- 47ಇದಲ್ಲದೆ ತನ್ನ ಒಡೆಯನ ಚಿತ್ತವನ್ನು ತಿಳಿದು ತನ್ನನ್ನು ಸಿದ್ಧಮಾಡಿಕೊಳ್ಳದೆ ಇಲ್ಲವೆ ಅವನ ಚಿತ್ತಕ್ಕೆ ಅನುಸಾರವಾಗಿ ಮಾಡದೆ ಇದ್ದ ಸೇವಕನು ಬಹಳ ಪೆಟ್ಟುಗಳನ್ನು ತಿನ್ನುವನು.
- 48ಆದರೆ ಪೆಟ್ಟುಗಳಿಗೆ ಯೋಗ್ಯವಾದವುಗಳನ್ನು ತಿಳಿಯದೆ ಮಾಡಿದವನು ಸ್ವಲ್ಪ ಪೆಟ್ಟುಗಳನ್ನು ತಿನ್ನುವನು. ಯಾಕಂದರೆ ಯಾವನಿಗೆ ಹೆಚ್ಚುಕೊಡಲ್ಪಟ್ಟಿದೆಯೋ ಅವನಿಂದ ಹೆಚ್ಚು ಕೇಳಲ್ಪಡು ವದು; ಯಾವನಿಗೆ ಮನುಷ್ಯರು ಹೆಚ್ಚಾಗಿ ಒಪ್ಪಿಸಿರುವರೋ ಅವನಿಂದ ಅವರು ಹೆಚ್ಚಾಗಿ ಕೇಳುವ
- 49ನಾನು ಭೂಮಿಯ ಮೇಲೆ ಬೆಂಕಿಯನ್ನು ಹಾಕುವದಕ್ಕಾಗಿ ಬಂದೆನು; ಅದು ಈಗಾಗಲೇ ಹೊತ್ತಿಕೊಂಡಿದ್ದರೆ ಮತ್ತೇನು ನನಗೆ ಬೇಕು?
Cross references
- James 4:17 ಯಾಕೋಬನು 4:17ಹೀಗಿರುವದರಿಂದ ಒಳ್ಳೇದನ್ನು ಮಾಡಬೇಕೆಂದು ತಿಳಿದು ಅದನ್ನು ಮಾಡದೆ ಇರುವವನಿಗೆ ಅದು ಪಾಪವಾಗಿದೆ.
- John 9:41 ಯೋಹಾನನು 9:41ಅದಕ್ಕೆ ಯೇಸು ಅವರಿಗೆ--ನೀವು ಕುರುಡರಾಗಿದ್ದರೆ ನಿಮ್ಮಲ್ಲಿ ಪಾಪವು ಇರುತ್ತಿರ ಲಿಲ್ಲ. ಆದರೆ--ನಾವು ನೋಡುತ್ತೇವೆಂದು ನೀವು ಹೇಳುವದರಿಂದ ನಿಮ್ಮ ಪಾಪವು ಉಳಿದದೆ ಅಂದನು.
- John 12:48 ಯೋಹಾನನು 12:48ನನ್ನನ್ನು ತಿರಸ್ಕರಿಸಿ ನನ್ನ ಮಾತುಗಳನ್ನು ಅಂಗೀಕರಿಸದಿರುವವನಿಗೆ ತೀರ್ಪು ಮಾಡುವಂಥದು ಒಂದು ಇದೆ; ಅದು ನಾನು ಹೇಳಿದ ಮಾತೇ; ಅದು ಕಡೇ ದಿನದಲ್ಲಿ ಅವನಿಗೆ ತೀರ್ಪು ಮಾಡುವದು.
- John 15:22–24 ಯೋಹಾನನು 15:22–24ನಾನು ಬಂದು ಅವರಿಗೆ ಹೇಳದಿದ್ದರೆ ಅವರಲ್ಲಿ ಪಾಪವು ಇರುತ್ತಿದ್ದಿಲ್ಲ; ಆದರೆ ಈಗ ಅವರ ಪಾಪಕ್ಕೆ ನೆವವಿಲ್ಲ. ನನ್ನನ್ನು ದ್ವೇಷಮಾಡುವವನು ನನ್ನ ತಂದೆಯನ್ನು ಸಹ ದ್ವೇಷಮಾಡುತ್ತಾನೆ. ಬೇರೆ ಯಾರೂ ಮಾಡದಿರುವ ಕ್ರಿಯೆಗಳನ್ನು ನಾನು ಅವರೊಳಗೆ ಮಾಡದಿದ್ದರೆ ಅವರಿಗೆ ಪಾಪವು ಇರು ತ್ತಿರಲಿಲ್ಲ; ಆದರೆ ಈಗ ಅವರು ನನ್ನನ್ನು ಮತ್ತು ನನ್ನ ತಂದೆಯನ್ನು ನೋಡಿ ದ್ವೇಷಮಾಡಿದ್ದಾರೆ.
- Deuteronomy 25:2–3 ಧರ್ಮೋಪದೇಶಕಾಂಡ 25:2–3ಇದಲ್ಲದೆ ಆ ದುಷ್ಟನು ಹೊಡೆಯಲ್ಪಡಲು ಯೋಗ್ಯನಾದರೆ ನ್ಯಾಯಾಧಿಪತಿಯು ಅವನನ್ನು ನೆಲಕ್ಕೆ ಬೀಳಿಸಿ ಅವನ ದುಷ್ಟತ್ವದ ಪ್ರಕಾರ ಅವನಿಗೆ ಲೆಕ್ಕದಿಂದ ಹೊಡಿಸಬೇಕು. ನಾಲ್ವತ್ತು ಏಟು ಅವನಿಗೆ ಹೊಡಿಸಬಹುದು, ಹೆಚ್ಚಲ್ಲ ಇದಕ್ಕಿಂತ ಹೆಚ್ಚು. ಅವನಿಗೆ ಬಹಳ ಏಟುಗಳನ್ನು ಹೊಡೆದರೆ ನಿನ್ನ ಸಹೋದರನು ನಿನ್ನ ಕಣ್ಣುಗಳಿಗೆ ನೀಚನೆಂದು ಕಾಣಿಸಾನು.
- Acts 17:30 ಅಪೊಸ್ತಲರ ಕೃತ್ಯಗಳು 17:30ಈ ಅಜ್ಞಾನಕಾಲಗಳನ್ನು ದೇವರುಲಕ್ಷ್ಯಕ್ಕೆ ತರಲಿಲ್ಲ; ಈಗಲಾದರೋ ಆತನು ಎಲ್ಲಾ ಕಡೆಯಲ್ಲಿರುವ ಮನು ಷ್ಯರೆಲ್ಲರೂ ಮಾನಸಾಂತರಪಡಬೇಕೆಂದು ಅಪ್ಪಣೆ ಕೊಡುತ್ತಾನೆ.
- Numbers 15:30–31 ಅರಣ್ಯಕಾಂಡ 15:30–31ಆದರೆ ಯಾವನಾದರೂ ಅಂದರೆ ದೇಶದಲ್ಲಿ ಹುಟ್ಟಿದವನಾಗಲಿ ಪರಕೀಯನಾಗಲಿ ಹಟದಿಂದ ಪಾಪಮಾಡಿದರೆ ಅವನು ಕರ್ತನನ್ನು ನಿಂದಿಸುತ್ತಾನೆ. ಆ ಮನುಷ್ಯನು ತನ್ನ ಜನರ ಮಧ್ಯದಿಂದ ತೆಗೆದುಹಾಕ ಲ್ಪಡಬೇಕು. ಅವನು ಕರ್ತನ ವಾಕ್ಯವನ್ನು ಅವಮಾನ ಮಾಡಿ ಆತನ ಆಜ್ಞೆಗಳನ್ನು ವಿಾರಿದ್ದರಿಂದ ಆ ಮನು ಷ್ಯನು ನಿಶ್ಚಯವಾಗಿ ತೆಗೆದುಹಾಕಲ್ಪಡಬೇಕು. ಅವನ ಅಕ್ರಮವು ಅವನ ಮೇಲಿರುವದು ಎಂದು ಹೇಳಿದನು.
- 2 Corinthians 2:15–16 2 ಕೊರಿಂಥದವರಿಗೆ 2:15–16ರಕ್ಷಣೆ ಹೊಂದಿದವರಲ್ಲಿಯೂ ನಾಶವಾಗುವವರಲ್ಲಿಯೂ ನಾವು ದೇವರಿಗಾಗಿ ಕ್ರಿಸ್ತನ ಪರಿಮಳವಾಗಿದ್ದೇವೆ. ನಾವು ನಾಶವಾಗುವವರಿಗೆ ಮರಣದಿಂದಾದ ಮರಣದ ವಾಸನೆಯಾಗಿಯೂ ರಕ್ಷಿಸಲ್ಪಟ್ಟವರಿಗೆ ಜೀವದಿಂದಾದ ಜೀವದ ಸುವಾಸನೆ ಯಾಗಿಯೂ ಇದ್ದೇವೆ; ಹೀಗಿರುವಾಗ ಇವುಗಳಿಗೆ ಯೋಗ್ಯನು ಯಾರು?ನಾವು ದೇವರ ವಾಕ್ಯವನ್ನು ಕಲಬೆರಿಕೆ ಮಾಡುವವರಾದ ಹೆಚ್ಚು ಪಾಲಿನ ಜನರ ಹಾಗಿರದೆ ನಿಷ್ಕಪಟಿಗಳಾಗಿ ದೇವರಿಂದ ಹೊಂದಿದ ವರಿಗೆ ತಕ್ಕ ಹಾಗೆ ಕ್ರಿಸ್ತನಲ್ಲಿದ್ದುಕೊಂಡು ದೇವರ ಸಮಕ್ಷಮದಲ್ಲಿಯೇ ಮಾತನಾಡುತ್ತೇವೆ.
- John 19:11 ಯೋಹಾನನು 19:11ಅದಕ್ಕೆ ಯೇಸು--ಮೇಲಿನಿಂದ ನಿನಗೆ ಕೊಡಲ್ಪಡದಿದ್ದರೆ ನನ್ನ ಮೇಲೆ ನಿನಗೆ ಯಾವ ಅಧಿಕಾರವೂ ಇರುತ್ತಿರಲಿಲ್ಲ. ಆದಕಾರಣ ನನ್ನನ್ನು ನಿನಗೆ ಒಪ್ಪಿಸಿದವನಿಗೆ ಹೆಚ್ಚಾದ ಪಾಪ ಉಂಟು ಎಂದು ಉತ್ತರ ಕೊಟ್ಟನು.
- Luke 10:12–15 ಲೂಕನು 10:12–15ಆದರೆ ಆ ದಿನದಲ್ಲಿ ಆ ಪಟ್ಟಣಕ್ಕಿಂತಲೂ ಸೊದೋಮಿನ ಗತಿಯು ಹೆಚ್ಚಾಗಿ ತಾಳಬಹುದಾಗಿರುವದು ಎಂದು ನಾನು ನಿಮಗೆ ಹೇಳುತ್ತೇನೆ. ಖೊರಾಜಿನೇ, ನಿನಗೆ ಅಯ್ಯೋ! ಬೇತ್ಸಾಯಿದವೇ, ನಿನಗೆ ಅಯ್ಯೋ! ನಿನ್ನಲ್ಲಿ ನಡೆದ ಮಹತ್ಕಾರ್ಯಗಳು ತೂರ್ ಸೀದೋನ್ಗಳಲ್ಲಿ ನಡೆದಿದ್ದರೆ ಅಲ್ಲಿಯವರು ಬಹಳ ಕಾಲದ ಹಿಂದೆಯೇ ಗೋಣೀತಟ್ಟನ್ನು ಸುತ್ತಿಕೊಂಡು ಬೂದಿಯಲ್ಲಿ ಕೂತು ಮಾನಸಾಂತರ ಪಡುತ್ತಿದ್ದರು. ಆದರೆ ನ್ಯಾಯ ತೀರ್ಪಿನಲ್ಲಿ ನಿಮ್ಮ ಗತಿಗಿಂತಲೂ ತೂರ್ ಸೀದೋನ್ಗಳ ಗತಿಯು ಹೆಚ್ಚಾಗಿ ತಾಳಬಹು ದಾಗಿರುವದು. ಆಕಾಶದವರೆಗೂ ಎತ್ತಲ್ಪಟ್ಟಿರುವ ಕಪೆರ್ನೌಮೇ, ನೀನು ಕೆಳಗೆ ಪಾತಾಳಕ್ಕೆ ದೊಬ್ಬ ಲ್ಪಡುವಿ.
- Matthew 11:22–24 ಮತ್ತಾಯನು 11:22–24ಆದರೆ ನಾನು ನಿಮಗೆ ಹೇಳುವದೇನಂದರೆ-- ನ್ಯಾಯತೀರ್ಪಿನ ದಿನದಲ್ಲಿ ನಿಮಗಿಂತಲೂ ತೂರ್ ಮತ್ತು ಸೀದೋನ್ಗಳ ಗತಿಯು ಹೆಚ್ಚು ತಾಳಬಹುದಾಗಿರುವದು. ಆಕಾಶದವರೆಗೂ ಹೆಚ್ಚಿಸಲ್ಪಟ್ಟ ಕಪೆರ್ನೌಮೇ, ನೀನು ಕೆಳಗೆ ಪಾತಾಳಕ್ಕೆ ದೊಬ್ಬಲ್ಪಡುವಿ; ಯಾಕಂದರೆ ನಿನ್ನೊಳಗೆ ನಡೆದಿರುವ ಮಹತ್ಕಾರ್ಯಗಳು ಸೊದೋಮಿನಲ್ಲಿ ನಡೆದಿದ್ದರೆ ಅದು ಈ ದಿನದವರೆಗೂ ಇರುತ್ತಿತ್ತು. ಆದರೆ ನಾನು ನಿನಗೆ ಹೇಳುವದೇನಂದರೆ --ನ್ಯಾಯತೀರ್ಪಿನ ದಿನದಲ್ಲಿ ನಿನಗಿಂತಲೂ ಸೊದೋಮಿನ ಗತಿಯು ಹೆಚ್ಚು ತಾಳಬಹುದಾಗಿರುವದು.