Luke · chapter 14 · verse 13
Luke 14:13 in Kannada
ಆದರೆ ನೀನು ಔತಣ ಮಾಡಿಸಿದಾಗ ಬಡವರನ್ನೂ ಊನವಾದವರನ್ನೂ ಕುಂಟರನ್ನೂ ಕುರುಡರನ್ನೂ ಕರೆ;
Aadare neenu autana maadisidaaga badavarannoo oonavaadavarannoo kuntarannoo kurudarannoo kare;
Luke 14:13 in English
- King James Version (KJV)
- But when thou makest a feast, call the poor, the maimed, the lame, the blind:
- World English Bible (WEB)
- But when you make a feast, ask the poor, the maimed, the lame, or the blind;
- American Standard Version (ASV)
- But when thou makest a feast, bid the poor, the maimed, the lame, the blind:
- Bible in Basic English (BBE)
- But when you give a feast, send for the poor and the blind and those who are broken in body:
- Darby Translation (DBY)
- But when thou makest a feast, call poor, crippled, lame, blind:
- Webster's Bible (WBS)
- But when thou makest a feast, call the poor, the maimed, the lame, the blind:
- Young's Literal Translation (YLT)
- but when thou mayest make a feast, be calling poor, maimed, lame, blind,
Read in context
- 11ಯಾವನು ತನ್ನನ್ನು ತಾನೇ ಹೆಚ್ಚಿಸಿಕೊಳ್ಳು ತ್ತಾನೋ ಅವನು ತಗ್ಗಿಸಲ್ಪಡುವನು ಮತ್ತು ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು ಅಂದನು.
- 12ಆತನು ತನ್ನನ್ನು ಕರೆದವನಿಗೆ ಸಹ ಹೇಳಿದ್ದೇ ನಂದರೆ--ನೀನು ಮಧ್ಯಾಹ್ನದ ಊಟಕ್ಕೆ ಇಲ್ಲವೆ ಸಾಯಂಕಾಲದ ಊಟಕ್ಕೆ ಸಿದ್ಧಪಡಿಸಿದಾಗ ನಿನ್ನ ಸ್ನೇಹಿತರನ್ನಾಗಲೀ ನಿನ್ನ ಸಹೋದರರನ್ನಾಗಲೀ ನಿನ್ನ ಬಂಧುಗಳನ್ನಾಗಲೀ ಇಲ್ಲವೆ ಐಶ್ವರ್ಯವಂತರಾದ ನೆರೆಯವರನ್ನಾಗಲೀ ಕರೆಯಬೇಡ; ಯಾಕಂದರೆ ಅ
- 13ಆದರೆ ನೀನು ಔತಣ ಮಾಡಿಸಿದಾಗ ಬಡವರನ್ನೂ ಊನವಾದವರನ್ನೂ ಕುಂಟರನ್ನೂ ಕುರುಡರನ್ನೂ ಕರೆ;
- 14ಆಗ ಅವರು ನಿನಗೆ ಪ್ರತ್ಯುಪಕಾರ ಮಾಡುವದಕ್ಕೆ ಆಗದಿರುವ ದರಿಂದ ನೀನು ಧನ್ಯನಾಗುವಿ. ಯಾಕಂದರೆ ನೀತಿವಂತರ ಪುನರುತ್ಥಾನದಲ್ಲಿ ನಿನಗೆ ಪ್ರತ್ಯುಪಕಾರವಾಗುವದು.
- 15ಆಗ ಆತನ ಸಂಗಡ ಊಟಕ್ಕೆ ಕೂತವರಲ್ಲಿ ಒಬ್ಬನು ಈ ಸಂಗತಿಗಳನ್ನು ಕೇಳಿ ಆತನಿಗೆ--ದೇವರ ರಾಜ್ಯದಲ್ಲಿ ಊಟಮಾಡುವವನು ಧನ್ಯನು ಎಂದು ಹೇಳಿದನು.
Cross references
- Luke 14:21 ಲೂಕನು 14:21ಹೀಗೆ ಆ ಸೇವಕನು ಬಂದು ತನ್ನ ಯಜಮಾನನಿಗೆ ಈ ವಿಷಯಗಳನ್ನು ತಿಳಿಸಿದನು. ಆಗ ಆ ಮನೇಯಜಮಾನನು ಕೋಪಗೊಂಡು ತನ್ನ ಸೇವಕನಿಗೆ--ನೀನು ಬೇಗನೆ ಪಟ್ಟಣದ ಬೀದಿಗಳಿಗೂ ಸಂದುಗಳಿಗೂ ಹೋಗಿ ಬಡವರನ್ನೂ ಊನವಾದ ವರನ್ನೂ ಕುಂಟರನ್ನೂ ಕುರುಡರನ್ನೂ ಇಲ್ಲಿ ಒಳಗೆ ಕರಕೆ
- Isaiah 58:10 ಯೆಶಾಯ 58:10ಹಸಿದವನ ಕಡೆಗೆ ನಿನ್ನ ಮನಸ್ಸು ಹೋಗುವಂತೆ ಮಾಡಿ, ಕುಂದಿ ಹೋದವನ ಪ್ರಾಣವನ್ನು ತೃಪ್ತಿಪಡಿಸಿದರೆ ಆಗ ನಿನ್ನ ಬೆಳಕು ಕತ್ತಲೆಯಲ್ಲಿ ಉದಯಿಸುವದು. ನಿನ್ನ ಅಂಧ ಕಾರವು ಮಧ್ಯಾಹ್ನದ ಹಾಗೆ ಇರುವದು.
- Isaiah 58:7 ಯೆಶಾಯ 58:7ನಿನ್ನ ರೊಟ್ಟಿಯನ್ನು ಹಸಿದವರಿಗೆ ಹಂಚುವದೂ ಅಲೆಯು ತ್ತಿರುವ ಬಡವರನ್ನು ನಿನ್ನ ಮನೆಗೆ ಬರಮಾಡಿ ಕೊಳ್ಳುವದೂ ಬೆತ್ತಲೆಯವರನ್ನು ಕಂಡಾಗೆಲ್ಲ ಅವರಿಗೆ ಹೊದಿಸುವದೂ ನಿನ್ನ ಸ್ವಂತ ಶರೀರದಂತಿರುವವ ನಿಗೆ ನಿನ್ನನ್ನು ಮರೆಮಾಡಿಕೊಳ್ಳದಿರುವದೂ ಇದೇ ಅಲ್ಲವೋ?
- Proverbs 14:31 ಜ್ಞಾನೋಕ್ತಿಗಳು 14:31ಬಡವರನ್ನು ಹಿಂಸಿಸುವವನು ತನ್ನ ಸೃಷ್ಟಿಕರ್ತನನ್ನು ಹೀನೈಸುವನು; ಆತನನ್ನು ಸನ್ಮಾನಿಸುವವನು ಬಡವರನ್ನು ಕನಿಕರಿಸುತ್ತಾನೆ.
- Job 29:15–16 ಯೋಬನು 29:15–16ನಾನು ಕುರುಡನಿಗೆ ಕಣ್ಣೂ ಕುಂಟನಿಗೆ ಕಾಲೂ ಆಗಿದ್ದೆನು. ದರಿದ್ರರಿಗೆ ನಾನು ತಂದೆಯಾಗಿದ್ದೆನು; ನಾನರಿಯದವನ ವ್ಯಾಜ್ಯವನ್ನು ಪರಿಶೋಧಿಸಿದೆನು.
- Hebrews 13:2 ಇಬ್ರಿಯರಿಗೆ 13:2ಪರರಿಗೆ ಸತ್ಕಾರ ಮಾಡುವದನ್ನು ಮರೆಯಬೇಡಿರಿ; ಅದನ್ನು ಮಾಡುವಲ್ಲಿ ಕೆಲವರು ತಿಳಿಯದೆ ದೂತರನ್ನು ಸತ್ಕರಿಸಿದ್ದಾರೆ.
- Nehemiah 8:10 ನೆಹೆಮೀಯ 8:10ಇದಲ್ಲದೆ ಅವನು ಅವರಿಗೆ--ನೀವು ಹೋಗಿ ಕೊಬ್ಬಿದ್ದನ್ನು ತಿಂದು ಸಿಹಿ ಯಾದದ್ದನ್ನು ಕುಡಿದು ಯಾರಿಗೆ ಸಿದ್ಧಮಾಡಿದ್ದು ಏನೂ ಇಲ್ಲವೋ ಅವರಿಗೆ ಭಾಗಗಳನ್ನು ಕಳುಹಿಸಿ ಕೊಡಿರಿ. ಯಾಕಂದರೆ ಈ ದಿನವು ನಮ್ಮ ಕರ್ತನಿಗೆ ಪರಿಶುದ್ಧ ವಾಗಿದೆ. ಕರ್ತನ ಆನಂದವು ನಿಮ್ಮ ಬಲವಾಗಿರು ವದರಿಂದ ನೀವು ವ್ಯಥೆಪಡಬೇಡಿರಿ.
- Job 31:16–20 ಯೋಬನು 31:16–20ನಾನು ಬಡವರ ಇಷ್ಟವನ್ನು ಹಿಂತೆಗೆದಿದ್ದರೆ ವಿಧ ವೆಯ ಕಣ್ಣುಗಳನ್ನು ನಿರಾಶೆಪಡಿಸಿದ್ದರೆ, ದಿಕ್ಕಿಲ್ಲದ ವನು ಅದರಲ್ಲಿ ಉಣ್ಣದ ಹಾಗೆ ನಾನು ಮಾತ್ರ ನನ್ನ ತುತ್ತು ಉಂಡಿದ್ದರೆ, (ಯಾಕಂದರೆ ನನ್ನ ಯೌವನದಿಂದ ನನ್ನೊಂದಿಗೆ ನಾನು ಅವನನ್ನು ತಂದೆ ಯಂತೆ ಬೆಳೆಸಿದೆನಲ್ಲಾ. ನನ್ನ ತಾಯಿಯ ಗರ್ಭದಿಂದ ಅವಳನ್ನು ನಡಿಸಿದೆನಲ್ಲಾ). ಬಟ್ಟೆ ಇಲ್ಲದೆ ನಾಶ ವಾಗುವವನನ್ನೂ ದರಿದ್ರನಿಗೆ ಹೊದಿಕೆ ಇಲ್ಲದಿರುವ ದನ್ನೂ ನಾನು ನೋಡಿದ್ದರೆ ಅವನ ಸೊಂಟವು ನನ್ನನ್ನು ಆಶೀರ್ವದಿಸದಿದ್ದರೆ ನನ್ನ ಕುರಿ ಮಂದೆಯ ಉಣ್ಣೆಯಿಂದ ಅವನಿಗೆ ಬೆಚ್ಚಗೆ ಆಗದಿದ್ದರೆ
- Matthew 22:10 ಮತ್ತಾಯನು 22:10ಆಗ ಆ ಸೇವಕರು ಹೆದ್ದಾರಿಗಳಿಗೆ ಹೋಗಿ ತಾವು ಕಂಡವರ ನ್ನೆಲ್ಲಾ ಅಂದರೆ ಕೆಟ್ಟವರನ್ನೂ ಒಳ್ಳೆಯವರನ್ನೂ ಒಟ್ಟು ಗೂಡಿಸಿದರು; ಹೀಗೆ ಮದುವೆಗೆ ಅತಿಥಿಗಳು ತುಂಬಿ ಕೊಂಡರು.
- Deuteronomy 16:14 ಧರ್ಮೋಪದೇಶಕಾಂಡ 16:14ಆ ಹಬ್ಬದಲ್ಲಿ ನೀನೂ ನಿನ್ನ ಮಗನೂ ಮಗಳೂ ದಾಸನೂ ದಾಸಿಯೂ ನಿನ್ನ ಬಾಗಲುಗಳಲ್ಲಿರುವ ಲೇವಿಯನೂ ಅನ್ಯನೂ ದಿಕ್ಕಿಲ್ಲದವನೂ ವಿಧವೆಯೂ ಸಂತೋಷಪಡಬೇಕು.
- Matthew 14:14–21 ಮತ್ತಾಯನು 14:14–21ಆಗ ಯೇಸು ಹೊರಟುಹೋಗಿ ಜನರ ಮಹಾಸಮೂಹವನ್ನು ಕಂಡು ಅವರ ಮೇಲೆ ಕನಿಕರ ಪಟ್ಟು ಅವರಲ್ಲಿದ್ದ ರೋಗಿಗಳನ್ನು ಸ್ವಸ್ಥಮಾಡಿದನು. ಸಾಯಂಕಾಲವಾದಾಗ ಆತನ ಶಿಷ್ಯರು ಆತನ ಬಳಿಗೆ ಬಂದು--ಇದು ಅಡವಿಯ ಸ್ಥಳ, ಸಮಯವು ದಾಟಿತು; ಜನರು ಹಳ್ಳಿಗಳಿಗೆ ಹೋಗಿ ತಮಗಾಗಿ ಆಹಾರವನ್ನು ಕೊಂಡುಕೊಳ್ಳುವಂತೆ ಅವರನ್ನು ಕಳುಹಿಸಿಬಿಡು ಅಂದರು. ಆದರೆ ಯೇಸು ಅವ ರಿಗೆ--ಅವರು ಹೋಗುವದು ಅವಶ್ಯವಿಲ್ಲ; ಅವರು ಊಟಮಾಡುವದಕ್ಕೆ ನೀವೇ ಕೊಡಿರಿ ಎಂದು ಹೇಳಿದನು. ಅವರು ಆತನಿಗೆ--ನಮ್ಮ ಹತ್ತಿರ ಐದು ರೊಟ್ಟಿ ಎರಡು ಮಾನುಗಳು ಮಾತ್ರ ಇವೆ ಎಂದು ಹೇಳಿದರು. ಆತನು--ಅವುಗಳನ್ನು ನನ್ನ ಬಳಿಗೆ ತಕ್ಕೊಂಡು ಬನ್ನಿರಿ ಅಂದನು. ಜನ ಸಮೂಹವು ಹುಲ್ಲಿನಮೇಲೆ ಕೂತುಕೊಳ್ಳಬೇಕೆಂದು ಆತನು ಅಪ್ಪಣೆಕೊಟ್ಟು ಆ ಐದು ರೊಟ್ಟಿ ಎರಡು ಮಾನುಗಳನ್ನು ತಕ್ಕೊಂಡು ಪರಲೋಕದ ಕಡೆಗೆ ನೋಡಿ ಆಶೀರ್ವದಿಸಿ ಮುರಿದು ಆ ರೊಟ್ಟಿಗಳನ್ನು ತನ್ನ ಶಿಷ್ಯರಿಗೆ ಕೊಟ್ಟನು ಮತ್ತು ಶಿಷ್ಯರು ಜನಸಮೂಹಕ್ಕೆ ಕೊಟ್ಟರು. ಅವರೆಲ್ಲರೂ ತಿಂದು ತೃಪ್ತರಾದರು; ಮತ್ತು ಅವರು ಉಳಿದ ತುಂಡುಗಳನ್ನು ಕೂಡಿಸಿ ಹನ್ನೆ ರಡು ಪುಟ್ಟಿಗಳಲ್ಲಿ ತುಂಬಿಸಿದರು. ಊಟ ಮಾಡಿ ದವರು ಸ್ತ್ರೀಯರೂ ಮಕ್ಕಳೂ ಅಲ್ಲದೆ ಗಂಡಸರೇ ಹೆಚ್ಚು ಕಡಿಮೆ ಐದು ಸಾವಿರ ಇದ್ದರು.
- Deuteronomy 14:29 ಧರ್ಮೋಪದೇಶಕಾಂಡ 14:29ಆಗ (ನಿನ್ನ ಸಂಗಡ ಪಾಲನ್ನೂ ಸ್ವಾಸ್ತ್ಯವನ್ನೂ ಹೊಂದದ) ಲೇವಿಯನೂ ನಿನ್ನ ಬಾಗಲು ಗಳಲ್ಲಿರುವ ಅನ್ಯದೇಶದವನೂ ದಿಕ್ಕಿಲ್ಲದವನೂ ವಿಧ ವೆಯೂ ಬಂದು ನಿನ್ನ ದೇವರಾದ ಕರ್ತನು ನಿನ್ನನ್ನು ನೀನು ಮಾಡುವ ಎಲ್ಲಾ ಕೈಕೆಲಸದಲ್ಲಿ ಆಶೀರ್ವದಿಸುವ ಹಾಗೆ ತಿಂದು ತೃಪ್ತರಾಗಲಿ.