Luke · chapter 17 · verse 26
Luke 17:26 in Kannada
ನೋಹನ ದಿವಸಗಳಲ್ಲಿ ಹೇಗೆ ಇತ್ತೋ ಅದೇ ರೀತಿಯಲ್ಲಿ ಮನುಷ್ಯಕುಮಾರನ ದಿವಸಗಳಲ್ಲಿಯೂ ಇರುವದು.
Nohana divasagalalli hege itto ade reetiyalli manushyakumaarana divasagalalliyoo iruvadu.
Luke 17:26 in English
- King James Version (KJV)
- And as it was in the days of Noe, so shall it be also in the days of the Son of man.
- World English Bible (WEB)
- As it was in the days of Noah, even so it will also be in the days of the Son of Man.
- American Standard Version (ASV)
- And as it came to pass in the days of Noah, even so shall it be also in the days of the Son of man.
- Bible in Basic English (BBE)
- And as it was in the days of Noah, so will it be in the day of the Son of man.
- Darby Translation (DBY)
- And as it took place in the days of Noe, thus also shall it be in the days of the Son of man:
- Webster's Bible (WBS)
- And as it was in the days of Noah, so shall it be also in the days of the Son of man.
- Young's Literal Translation (YLT)
- 'And, as it came to pass in the days of Noah, so shall it be also in the days of the Son of Man;
Read in context
- 24ಯಾಕಂದರೆ ಮಿಂಚು ಆಕಾಶದ ಒಂದು ಭಾಗದಲ್ಲಿ ಮಿಂಚಿ ಆಕಾಶದ ಮತ್ತೊಂದು ಭಾಗದಲ್ಲಿ ಹೇಗೆ ಹೊಳೆಯುತ್ತದೆಯೋ ಹಾಗೆಯೇ ಮನುಷ್ಯಕುಮಾರನು ತನ್ನ ದಿನದಲ್ಲಿ ಇರುವನು.
- 25ಆದರೆ ಆತನು ಮೊದಲು ಅನೇಕ ಶ್ರಮೆಗಳನ್ನು ಅನುಭವಿಸಿ ಈ ಸಂತತಿಯವರಿಂದ ತಿರಸ್ಕರಿಸಲ್ಪಡುವದು ಅಗತ್ಯವಾ ಗಿದೆ.
- 26ನೋಹನ ದಿವಸಗಳಲ್ಲಿ ಹೇಗೆ ಇತ್ತೋ ಅದೇ ರೀತಿಯಲ್ಲಿ ಮನುಷ್ಯಕುಮಾರನ ದಿವಸಗಳಲ್ಲಿಯೂ ಇರುವದು.
- 27ನೋಹನು ನಾವೆಯಲ್ಲಿ ಸೇರಿದ ದಿನದ ವರೆಗೂ ಅವರು ತಿನ್ನುತ್ತಾ ಕುಡಿಯುತ್ತಾ ಮದುವೆಮಾಡಿಕೊಳ್ಳುತ್ತಾ ಮತ್ತು ಮದುವೆಮಾಡಿ ಕೊಡುತ್ತಾ ಇದ್ದರು. ಆಗ ಜಲಪ್ರಳಯವು ಬಂದು ಅವರೆಲ್ಲರನ್ನು ನಾಶಮಾಡಿತ್ತು.
- 28ಅದೇ ಪ್ರಕಾರ ಲೋಟನ ದಿವಸಗಳಲ್ಲಿಯೂ ಇತ್ತು. ಅವರು ತಿನ್ನು ತ್ತಿದ್ದರು, ಕುಡಿಯುತ್ತಿದ್ದರು; ಅವರು ಕೊಂಡುಕೊಳ್ಳು ತ್ತಿದ್ದರು, ಮಾರುತ್ತಿದ್ದರು; ಅವರು ನೆಡುತ್ತಿದ್ದರು ಮತ್ತು ಕಟ್ಟುತ್ತಿದ್ದರು.
Cross references
- Matthew 24:37–39 ಮತ್ತಾಯನು 24:37–39ಆದರೆ ನೋಹನ ದಿವಸಗಳು ಇದ್ದಂತೆಯೇ ಮನುಷ್ಯ ಕುಮಾರನ ಬರೋಣವೂ ಇರುವದು. ನೋಹನು ನಾವೆಯಲ್ಲಿ ಸೇರಿದ ದಿವಸದ ವರೆಗೆ ಪ್ರಳಯವು ಬರುವದಕ್ಕಿಂತ ಮುಂಚಿನ ಆ ದಿವಸಗಳಲ್ಲಿ ಜನರು ತಿನ್ನುತ್ತಾ ಕುಡಿಯುತ್ತಾ ಮದುವೆ ಮಾಡಿಕೊಳ್ಳುತ್ತಾ ಮದುವೆ ಮಾಡಿಕೊಡುತ್ತಾ ಇದ್ದರು. ಪ್ರಳಯವು ಬಂದು ಅವರನ್ನು ಬಡುಕೊಂಡು ಹೊಗುವವರೆಗೂ ಅವರಿಗೆ ತಿಳಿದಿರಲಿಲ್ಲ; ಹಾಗೆಯೇ ಮನುಷ್ಯ ಕುಮಾರನ ಬರೋಣವೂ ಇರುವದು.
- Luke 17:24 ಲೂಕನು 17:24ಯಾಕಂದರೆ ಮಿಂಚು ಆಕಾಶದ ಒಂದು ಭಾಗದಲ್ಲಿ ಮಿಂಚಿ ಆಕಾಶದ ಮತ್ತೊಂದು ಭಾಗದಲ್ಲಿ ಹೇಗೆ ಹೊಳೆಯುತ್ತದೆಯೋ ಹಾಗೆಯೇ ಮನುಷ್ಯಕುಮಾರನು ತನ್ನ ದಿನದಲ್ಲಿ ಇರುವನು.
- Genesis 7:7–23 ಆದಿಕಾಂಡ 7:7–23ಆಗ ನೋಹನು ಅವನ ಹೆಂಡತಿಯೂ ಕುಮಾರರೂ ಅವರ ಹೆಂಡತಿಯರೂ ಜಲಪ್ರಳಯವನ್ನು ತಪ್ಪಿಸಿ ಕೊಳ್ಳುವದಕ್ಕಾಗಿ ನಾವೆಯೊಳಗೆ ಹೋದರು. ಶುದ್ಧ ಪ್ರಾಣಿಗಳಲ್ಲಿಯೂ ಅಶುದ್ಧ ಪ್ರಾಣಿಗಳಲ್ಲಿಯೂ ಪಕ್ಷಿ ಗಳಲ್ಲಿಯೂ ಭೂಮಿಯ ಮೇಲೆ ಹರಿದಾಡುವವು ಗಳೆಲ್ಲವೂ ದೇವರು ನೋಹನಿಗೆ ಆಜ್ಞಾಪಿಸಿದ ಪ್ರಕಾರ ಗಂಡು ಹೆಣ್ಣಾಗಿರುವ ಎರಡೆರಡು ನೋಹನ ಬಳಿಗೆ ನಾವೆಯಲ್ಲಿ ಹೋದವು. ಏಳು ದಿವಸಗಳಾದ ಮೇಲೆ ಪ್ರಳಯದ ನೀರು ಭೂಮಿಯ ಮೇಲೆ ಇತ್ತು. ನೋಹನ ಜೀವಮಾನದ ಆರುನೂರನೆಯ ವರುಷದ ಎರಡನೆಯ ತಿಂಗಳಿನ ಅಂದರೆ ಅದೇ ತಿಂಗಳಿನ ಹದಿನೇಳನೆಯ ದಿವಸದಲ್ಲಿಯೇ ಮಹಾ ಅಗಾಧದ ಬುಗ್ಗೆಗಳೆಲ್ಲಾ ಒಡೆದವು. ಆಕಾಶದ ಕಿಟಕಿ ಗಳು ತೆರೆಯಲ್ಪಟ್ಟವು. ನಾಲ್ವತ್ತು ಹಗಲು ನಾಲ್ವತು ರಾತ್ರಿ ಭೂಮಿಯ ಮೇಲೆ ಮಳೆ ಸುರಿಯಿತು. ಅದೇ ದಿನದಲ್ಲಿ ನೋಹನೂ ಅವನ ಕುಮಾರರಾದ ಶೇಮ್ ಹಾಮ್ ಯೆಫೆತ್ ಇವರೂ ನೋಹನ ಹೆಂಡತಿಯೂ ಅವರ ಕೂಡ ಅವನ ಕುಮಾರರ ಮೂವರು ಹೆಂಡತಿಯರೂ ನಾವೆಯಲ್ಲಿ ಪ್ರವೇಶಿಸಿ ದರು. ಇದಲ್ಲದೆ ಅವುಗಳ ಜಾತ್ಯಾನುಸಾರವಾಗಿ ಎಲ್ಲಾ ವಿಧವಾದ ಪ್ರಾಣಿ ಪಶು ಪಕ್ಷಿ ಕ್ರಿಮಿಗಳೂ ಪ್ರವೇಶಿಸಿದವು. ಹೀಗೆ ಜೀವಶ್ವಾಸವಿರುವ ಎಲ್ಲಾ ಶರೀರಗಳಲ್ಲಿಯೂ ಎರಡೆರಡು ನೋಹನ ಬಳಿಗೆ ನಾವೆಯೊಳಗೆ ಹೋದವು. ದೇವರು ಅಪ್ಪಣೆ ಕೊಟ್ಟಿದ್ದ ಪ್ರಕಾರ ಒಳಗೆ ಸೇರಿದವುಗಳು ಗಂಡು ಹೆಣ್ಣಾಗಿದ್ದ ಸಕಲ ಶರೀರಗಳು ಒಳಗೆ ಹೋದವು. ಆಗ ಕರ್ತನು ಅವನನ್ನು ಒಳಗೆ ಸೇರಿಸಿ (ಬಾಗಲನ್ನು) ಮುಚ್ಚಿದನು. ನಾಲ್ವತ್ತು ದಿನ ಭೂಮಿಯ ಮೇಲೆ ಪ್ರಳಯವು ಇತ್ತು; ಆಗ ನೀರುಗಳು ಹೆಚ್ಚಿ ನಾವೆಯನ್ನು ಎತ್ತಲು ಅದು ಭೂಮಿಯಿಂದ ಎತ್ತಲ್ಪಟ್ಟಿತು. ನೀರು ಪ್ರಬಲವಾಗಿ ಭೂಮಿಯ ಮೇಲೆ ಬಹಳವಾಗಿ ಹೆಚ್ಚಿದಾಗ ಆ ನಾವೆಯು ನೀರಿನ ಮೇಲೆ ಹೋಯಿತು. ಇದಲ್ಲದೆ ನೀರು ಭೂಮಿಯ ಮೇಲೆ ಅತ್ಯಧಿಕವಾಗಿ ಪ್ರಬಲವಾದದ್ದರಿಂದ ಆಕಾಶದ ಕೆಳಗಿರುವ ಎತ್ತರ ವಾದ ಎಲ್ಲಾ ಬೆಟ್ಟಗಳು ಮುಚ್ಚಲ್ಪಟ್ಟವು. ನೀರುಗಳು ಬೆಟ್ಟಗಳನ್ನು ಮುಚ್ಚಿ ಅವುಗಳ ಮೇಲೆ ಹದಿನೈದು ಮೊಳದ ವರೆಗೆ ಏರಿತು. ಆಗ ಪಶು ಪಕ್ಷಿ ಮೃಗ ಭೂಮಿಯಲ್ಲಿ ಹರಿದಾಡುವ ಕ್ರಿಮಿ ಎಲ್ಲಾ ಮನುಷ್ಯರು ಸಹಿತವಾಗಿ ಅಂತೂ ಭೂಮಿಯ ಮೇಲೆ ಚಲಿಸುವ ಎಲ್ಲಾ ಶರೀರಗಳು ಸತ್ತುಹೋದವು. ಒಣ ನೆಲದ ಮೇಲಿದ್ದಂಥ ಮೂಗಿನಲ್ಲಿ ಶ್ವಾಸವಿರುವ ವುಗಳೆಲ್ಲಾ ಸತ್ತುಹೋದವು. ಮನುಷ್ಯರೂ ಪಶು ಗಳೂ ಕ್ರಿಮಿಗಳೂ ಆಕಾಶದ ಪಕ್ಷಿಗಳೂ ಭೂಮಿಯ ಮೇಲಿರುವ ಎಲ್ಲಾ ಜೀವರಾಶಿಗಳೂ ನಾಶವಾದವು. ಅವು ಭೂಮಿಯ ಮೇಲಿಂದ ಅಳಿಸಲ್ಪಟ್ಟವು. ನೋಹನೂ ಅವನ ಸಂಗಡ ನಾವೆಯಲ್ಲಿದ್ದವರೂ ಮಾತ್ರ ಜೀವದಿಂದ ಉಳಿಸಲ್ಪಟ್ಟರು.ಜಲವು ಭೂಮಿಯ ಮೇಲೆ ನೂರೈವತ್ತು ದಿನ ಪ್ರಬಲ ವಾಯಿತು.
- 1 Peter 3:19–20 1 ಪೇತ್ರನು 3:19–20ಆತನು ಆತ್ಮನಿಂದಲೇ ಸೆರೆಯಲ್ಲಿದ್ದ ಆತ್ಮಗಳಿಗೆ ಹೋಗಿ ಸಾರಿದನು; ಆದರೆ ನೋಹನ ದಿನಗಳಲ್ಲಿ ನಾವೆಯನ್ನು ಕಟ್ಟುತ್ತಿರಲು ದೇವರ ದೀರ್ಘಶಾಂತಿಯು ಒಂದು ಸಾರಿ ಕಾದಿದ್ದಾಗ ಆತನಿಗೆ ಅವಿಧೇಯರಾ ಗಿದ್ದವರ ಬಳಿಗೆ ಹೋಗಿ ಆತನು ಸಾರಿದನು. ಆ ನಾವೆಯೊಳಗೆ ಕೆಲವರು ಅಂದರೆ ಎಂಟೇ ಜನರು ನೀರಿನ ಮೂಲಕ ರಕ್ಷಣೆ ಹೊಂದಿದರು.
- Luke 17:22 ಲೂಕನು 17:22ಆತನು ತನ್ನ ಶಿಷ್ಯರಿಗೆ--ಮನುಷ್ಯಕುಮಾರನ ದಿವಸಗಳಲ್ಲಿ ಒಂದನ್ನು ನೋಡಬೇಕೆಂದು ನೀವು ಅಪೇಕ್ಷಿಸಿದರೂ ಅದನ್ನು ನೋಡದಂಥ ದಿನಗಳು ಬರುವವು.
- Job 22:15–18 ಯೋಬನು 22:15–18ದುಷ್ಟ ಜನರು ನಡೆದ ಪೂರ್ವಕಾಲದ ದಾರಿ ಯನ್ನು ನೋಡಿಕೊಂಡಿಯೋ? ಅವರು ಆ ಕಾಲ ದಲ್ಲಿ ಕಡಿಯಲ್ಪಟ್ಟರು; ಅವರ ಅಸ್ತಿವಾರವು ಪ್ರವಾಹ ದಲ್ಲಿ ಕೊರೆದು ಹೋಯಿತು. ನಮ್ಮನ್ನು ಬಿಟ್ಟು ಹೋಗು ಎಂದೂ ಸರ್ವಶಕ್ತನು ನಮಗೆ ಏನು ಮಾಡುವನೆಂದೂ ದೇವರಿಗೆ ಹೇಳಿದವರು ಅವರೇ. ಆದರೆ ಆತನು ಅವರ ಮನೆಗಳನ್ನು ಒಳ್ಳೇದರಿಂದ ತುಂಬಿದ್ದಾನೆ; ಆದರೂ ದುಷ್ಟರ ಆಲೋಚನೆಯು ನನಗೆ ದೂರವಾಗಿದೆ.
- 2 Peter 2:5 2 ಪೇತ್ರನು 2:5ಆತನು ಪುರಾತನ ಲೋಕವನ್ನು ಸುಮ್ಮನೆ ಬಿಡದೆ ಭಕ್ತಿಹೀನರ ಮೇಲೆ ಜಲಪ್ರಳಯವನ್ನು ಬರಮಾಡಿ ದನು; ಆದರೆ ನೀತಿಯನ್ನು ಸಾರುತ್ತಿದ್ದ ಎಂಟನೆಯ ವನಾದ ನೋಹನನ್ನು ರಕ್ಷಿಸಿದನು.
- Genesis 6:5 ಆದಿಕಾಂಡ 6:5ಮನುಷ್ಯನ ದುಷ್ಟತ್ವವು ಭೂಮಿಯಲ್ಲಿ ಹೆಚ್ಚಿದ್ದನ್ನೂ ಅವನ ಹೃದಯದ ಆಲೋಚನೆಗಳ ಕಲ್ಪನೆಗಳೆಲ್ಲಾ ಯಾವಾಗಲೂ ಬರೀ ಕೆಟ್ಟವುಗಳೆಂದೂ ದೇವರು ನೋಡಿದನು.
- 2 Peter 3:6 2 ಪೇತ್ರನು 3:6ಆ ನೀರುಗಳಿಂದಲೇ ಆ ಕಾಲದಲ್ಲಿದ್ದ ಲೋಕವು ಜಲಪ್ರಳಯದಲ್ಲಿ ನಾಶ ವಾಯಿತು.
- Hebrews 11:7 ಇಬ್ರಿಯರಿಗೆ 11:7ನಂಬಿಕೆಯಿಂದಲೇ ನೋಹನು ಇನ್ನೂ ಕಾಣದಿದ್ದವುಗಳ ವಿಷಯವಾಗಿ ದೇವರಿಂದ ಎಚ್ಚರಿಸ ಲ್ಪಟ್ಟು ಭಯಗ್ರಸ್ತನಾಗಿ ತನ್ನ ಮನೆಯವರ ರಕ್ಷಣೆಗಾಗಿ ನಾವೆಯನ್ನು ಸಿದ್ಧ ಮಾಡಿದನು. ಆದರಿಂದ ಅವನು ಲೋಕದವರನ್ನು ಖಂಡಿಸಿ ತರುವಾಯ ನಂಬಿಕೆಯಿಂ ದುಂಟಾಗುವ ನೀತಿಗೆ ಬಾಧ್ಯನಾದನು.
- Genesis 6:7 ಆದಿಕಾಂಡ 6:7ಇದಲ್ಲದೆ ಕರ್ತನು--ನಾನು ಸೃಷ್ಟಿಸಿದ ಮನುಷ್ಯ ನನ್ನೂ ಮನುಷ್ಯನ ಸಂಗಡ ಸಕಲ ಮೃಗ, ಕ್ರಿಮಿ, ಆಕಾಶದ ಪಕ್ಷಿಗಳನ್ನೂ ಭೂಮುಖದಿಂದ ನಾಶಮಾಡು ವೆನು; ನಾನು ಅವರನ್ನು ಉಂಟುಮಾಡಿದ್ದಕ್ಕೆ ಅದು ಪಶ್ಚಾತ್ತಾಪಪಡುವಂತೆ ಆಯಿತು ಅಂದನು.
- Luke 18:8 ಲೂಕನು 18:8ಆತನು ಬೇಗನೆ ಅವರಿಗೆ ನ್ಯಾಯ ತೀರಿಸುವನೆಂದು ನಾನು ನಿಮಗೆ ಹೇಳುತ್ತೇನೆ. ಆದಾಗ್ಯೂ ಮನುಷ್ಯಕುಮಾರನು ಬಂದಾಗ ಭೂಮಿಯ ಮೇಲೆ ನಂಬಿಕೆಯನ್ನು ಕಾಣುವನೋ ಅಂದನು.