Luke · chapter 14 · verse 27
Luke 14:27 in Kannada
ಯಾವನಾದರೂ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನ ಹಿಂದೆಬಾರದಿದ್ದರೆ ಅವನು ನನ್ನ ಶಿಷ್ಯನಾಗಿರಲಾರನು.
Yaavanaadaroo tanna shilubeyannu hottukondu nanna hindebaaradiddare avanu nanna shishyanaagiralaaranu.
Luke 14:27 in English
- King James Version (KJV)
- And whosoever doth not bear his cross, and come after me, cannot be my disciple.
- World English Bible (WEB)
- Whoever doesn’t bear his own cross and come after me, can’t be my disciple.
- American Standard Version (ASV)
- Whosoever doth not bear his own cross, and come after me, cannot be my disciple.
- Bible in Basic English (BBE)
- Whoever does not take up his cross and come after me may not be my disciple.
- Darby Translation (DBY)
- and whoever does not carry his cross and come after me cannot be my disciple.
- Webster's Bible (WBS)
- And whoever doth not bear his cross, and come after me, cannot be my disciple.
- Young's Literal Translation (YLT)
- and whoever doth not bear his cross, and come after me, is not able to be my disciple.
Read in context
- 25ಇದಲ್ಲದೆ ದೊಡ್ಡ ಸಮೂಹಗಳು ಆತನ ಸಂಗಡ ಹೋಗುತ್ತಿರಲು ಆತನು ತಿರುಗಿಕೊಂಡು ಅವರಿಗೆ--
- 26ಯಾವನಾದರೂ ನನ್ನ ಬಳಿಗೆ ಬಂದು ತನ್ನ ತಂದೆ ಯನ್ನಾಗಲೀ ತಾಯಿಯನ್ನಾಗಲೀ ಹೆಂಡತಿಯನ್ನಾಗಲೀ ಮಕ್ಕಳನ್ನಾಗಲೀ ಸಹೋದರರನ್ನಾಗಲೀ ಸಹೋದರಿ ಯರನ್ನಾಗಲೀ ಹೌದು, ತನ್ನ ಸ್ವಂತ ಪ್ರಾಣವನ್ನು ಸಹ ಹಗೆಮಾಡದಿದ್ದರೆ ಅವನು ನನ್ನ ಶಿಷ್ಯನಾಗಿರ ಲಾರನು.
- 27ಯಾವನಾದರೂ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನ ಹಿಂದೆಬಾರದಿದ್ದರೆ ಅವನು ನನ್ನ ಶಿಷ್ಯನಾಗಿರಲಾರನು.
- 28ನಿಮ್ಮಲ್ಲಿ ಯಾವನಾದರೂ ಗೋಪುರವನ್ನು ಕಟ್ಟುವದಕ್ಕೆ ಉದ್ದೇಶವುಳ್ಳವನಾದರೆ ಅವನು ಮೊದಲು ಕೂತುಕೊಂಡು ಅದನ್ನು ಪೂರೈಸು ವದಕ್ಕೆ ಬೇಕಾದ ಖರ್ಚು ತನ್ನಲ್ಲಿ ಉಂಟೋ ಎಂದು ಲೆಕ್ಕ ಮಾಡುವದಿಲ್ಲವೋ?
- 29ಒಂದು ವೇಳೆ ಹಾಗೆ ಲೆಕ್ಕ ಮಾಡದೆ ಅವನು ಅದಕ್ಕೆ ಅಸ್ತಿವಾರ ಹಾಕಿದ ಮೇಲೆ ಅದನ್ನು ಪೂರೈಸದಿದ್ದರೆ ನೋಡುವವರೆಲ್ಲರೂ ಅವನಿಗೆ ಹಾಸ್ಯ ಮಾಡುವದಕ್ಕೆ ಆರಂಭಿಸಿ--
Cross references
- Matthew 10:38 ಮತ್ತಾಯನು 10:38ತನ್ನ ಶಿಲುಬೆ ಯನ್ನು ತೆಗೆದುಕೊಳ್ಳದೆ ನನ್ನನ್ನು ಹಿಂಬಾಲಿಸುವವನು ನನಗೆ ಯೋಗ್ಯನಲ್ಲ.
- Luke 9:23–25 ಲೂಕನು 9:23–25ಆತನು ಅವರೆಲ್ಲರಿಗೆ--ಯಾವನಾದರೂ ನನ್ನ ಹಿಂದೆ ಬರುವದಾದರೆ ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ಪ್ರತಿದಿನ ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ; ಯಾವನಾದರೂ ತನ್ನ ಪ್ರಾಣವನ್ನು ಉಳಿಸಿಕೊಳ್ಳುವದಾದರೆ ಅದನ್ನು ಕಳಕೊಳ್ಳುವನು; ಆದರೆ ನನ್ನ ನಿಮಿತ್ತವಾಗಿ ಯಾವನಾದರೂ ತನ್ನ ಪ್ರಾಣವನ್ನು ಕಳಕೊಂಡರೆ ಅದನ್ನು ಉಳಿಸಿಕೊಳ್ಳುವನು. ಇದಲ್ಲದೆ ಒಬ್ಬ ಮನುಷ್ಯನು ಲೋಕವನ್ನೆಲ್ಲಾ ಸಂಪಾದಿಸಿಕೊಂಡು ತನ್ನನ್ನು ತಾನೇ ಹಾಳು ಮಾಡಿ ಕೊಂಡರೆ ಇಲ್ಲವೆ ನಷ್ಟಪಡಿಸಿಕೊಂಡರೆ ಅವನಿಗೆ ಪ್ರಯೋಜನವೇನು?
- Mark 10:21 ಮಾರ್ಕನು 10:21ಆಗ ಯೇಸು ಅವನನ್ನು ದೃಷ್ಟಿಸಿ ನೋಡುತ್ತಾ ಅವನನ್ನು ಪ್ರೀತಿಸಿ ಅವನಿಗೆ--ನಿನಗೆ ಒಂದು ಕಡಿಮೆ ಇದೆ; ನೀನು ಹೊರಟುಹೋಗಿ ನಿನಗಿರುವದನ್ನೆಲ್ಲಾ ಮಾರಿ ಬಡವರಿಗೆ ಕೊಡು; ಆಗ ಪರಲೋಕದಲ್ಲಿ ನಿನಗೆ ಸಂಪತ್ತಿರುವದು; ಮತ್ತು ನೀನು ಬಂದು ಶಿಲುಬೆಯನ್ನು ತಕ್ಕೊಂಡು ನನ್ನನ್ನು ಹಿಂಬಾಲಿಸು ಅಂದ
- Matthew 16:24–26 ಮತ್ತಾಯನು 16:24–26ತರುವಾಯ ಯೇಸು ತನ್ನ ಶಿಷ್ಯರಿಗೆ--ಯಾವ ನಾದರೂ ನನ್ನ ಹಿಂದೆ ಬರುವದಕ್ಕೆ ಅಪೇಕ್ಷಿಸಿದರೆ ಅವನು ತನ್ನನ್ನು ತಾನೇ ನಿರಾಕರಿಸಿ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ. ಯಾಕಂದರೆ ತನ್ನ ಪ್ರಾಣವನ್ನು ಉಳಿಸಿಕೊಳ್ಳುವವನು ಅದನ್ನು ಕಳ ಕೊಳ್ಳುವನು; ಮತ್ತು ನನ್ನ ನಿಮಿತ್ತವಾಗಿ ತನ್ನ ಪ್ರಾಣ ವನ್ನು ಕಳಕೊಳ್ಳುವವನು ಅದನ್ನು ಕಂಡುಕೊಳ್ಳುವನು. ಒಬ್ಬ ಮನುಷ್ಯನು ಇಡೀ ಲೋಕವನ್ನು ಸಂಪಾದಿಸಿ ಕೊಂಡು ತನ್ನ ಆತ್ಮವನ್ನು ನಷ್ಟಪಡಿಸಿ ಕೊಂಡರೆ ಅವನಿಗೆ ಲಾಭವೇನು? ಇಲ್ಲವೆ ತನ್ನ ಆತ್ಮಕ್ಕೆ ಬದಲಾಗಿ ಒಬ್ಬ ಮನುಷ್ಯನು ಏನು ಕೊಟ್ಟಾನು?
- Mark 8:34–37 ಮಾರ್ಕನು 8:34–37ಆತನು ಜನರನ್ನು ತನ್ನ ಶಿಷ್ಯರ ಕೂಡ ತನ್ನ ಬಳಿಗೆ ಕರೆದು ಅವರಿಗೆ--ಯಾವನಾದರೂ ನನ್ನ ಹಿಂದೆ ಬರುವದಾದರೆ ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನನ್ನು ಹಿಂಬಾಲಿ ಸಲಿ. ಯಾಕಂದರೆ ತನ್ನ ಪ್ರಾಣವನ್ನು ಉಳಿಸಿಕೊಳ್ಳ ಬೇಕೆಂದಿರುವ ಯಾವನಾದರೂ ಅದನ್ನು ಕಳಕೊಳ್ಳು ವನು; ಆದರೆ ನನ್ನ ನಿಮಿತ್ತವಾಗಿಯೂ ಸುವಾರ್ತೆಯ ನಿಮಿತ್ತವಾಗಿಯೂ ಯಾವನು ತನ್ನ ಪ್ರಾಣವನ್ನು ಕಳ ಕೊಳ್ಳುವನೋ ಅವನು ಅದನ್ನು ಉಳಿಸಿಕೊಳ್ಳುವನು. ಒಬ್ಬ ಮನುಷ್ಯನು ಲೋಕವನ್ನೆಲ್ಲಾ ಸಂಪಾದಿಸಿ ಕೊಂಡರೂ ತನ್ನ ಸ್ವಂತ ಆತ್ಮವನ್ನು ನಷ್ಟಪಡಿಸಿಕೊಂಡರೆ ಅವನಿಗೆ ಲಾಭವೇನು? ಇಲ್ಲವೆ ಒಬ್ಬನು ತನ್ನ ಆತ್ಮಕ್ಕೆ ಬದಲಾಗಿ ಏನು ಕೊಡುವನು?ಆದದರಿಂದ ಯಾವನಾದರೂ ವ್ಯಭಿಚಾರಿಣಿಯಾದ ಈ ಪಾಪಿಷ್ಠ ಸಂತತಿಯಲ್ಲಿ ನನ್ನ ಮತ್ತು ನನ್ನ ಮಾತುಗಳ ವಿಷಯ ವಾಗಿ ನಾಚಿಕೊಳ್ಳುವನೋ ಅವನ ವಿಷಯದಲ್ಲಿ ಮನುಷ್ಯಕುಮಾರನು ಸಹ ತನ್ನ ತಂದೆಯ ಮಹಿಮೆ ಯಲ್ಲಿ ಪರಿಶುದ್ಧ ದೂತರೊಡನೆ ಬರುವಾಗ ನಾಚಿ ಕೊಳ್ಳುವನು ಎಂದು ಹೇಳಿದನು.
- 2 Timothy 3:12 2 ತಿಮೊಥೆಯನಿಗೆ 3:12ಹೌದು, ಕ್ರಿಸ್ತ ಯೇಸುವಿನಲ್ಲಿ ಭಕ್ತಿ ಯುಳ್ಳವರಾಗಿ ಜೀವಿಸುವದಕ್ಕೆ ಮನಸ್ಸು ಮಾಡುವವ ರೆಲ್ಲರೂ ಹಿಂಸೆಗೊಳಗಾಗುವರು.
- Acts 14:22 ಅಪೊಸ್ತಲರ ಕೃತ್ಯಗಳು 14:22ನಾವು ಬಹು ಸಂಕಟಗಳನ್ನು ಅನುಭವಿಸಿ ದೇವರ ರಾಜ್ಯದೊಳಗೆ ಸೇರಬೇಕೆಂಬ ದಾಗಿ ಹೇಳಿ ನಂಬಿಕೆಯಲ್ಲಿ ಸ್ಥಿರವಾಗಿರಬೇಕೆಂದು ಅವರನ್ನು ಎಚ್ಚರಿಸಿದರು.
- Matthew 13:21 ಮತ್ತಾಯನು 13:21ಆದರೂ ಅವನಲ್ಲಿ ಬೇರಿಲ್ಲದ ಕಾರಣ ಸ್ವಲ್ಪಕಾಲ ಮಾತ್ರ ಇರುವನು; ಯಾಕಂದರೆ ವಾಕ್ಯಕ್ಕಾಗಿ ಸಂಕಟ ಇಲ್ಲವೆ ಹಿಂಸೆ ಬಂದಾಗ ತಕ್ಷಣವೇ ಅವನು ಅಭ್ಯಂತರ ಪಡುವನು.
- 2 Timothy 1:12 2 ತಿಮೊಥೆಯನಿಗೆ 1:12ಇದರ ನಿಮಿತ್ತದಿಂದಲೇ ಈ ಶ್ರಮೆಗಳನ್ನು ಅನುಭವಿಸುತ್ತಾ ಇದ್ದೇನೆ; ಆದರೂ ನಾನು ನಾಚಿಕೆಪಡುವದಿಲ್ಲ; ಯಾಕಂ ದರೆ ನಾನು ನಂಬಿರುವಾತನನ್ನು ಬಲ್ಲೆನು, ನಾನು ಆತನಿಗೆ ಒಪ್ಪಿಸಿದ್ದನ್ನು ಆತನು ಆ ದಿನಕ್ಕಾಗಿ ಕಾಪಾಡು ವದಕ್ಕೆ ಶಕ್ತನಾಗಿದ್ದಾನೆಂದೂ ದೃಢವಾಗಿ ನಂಬಿದ್ದೇನೆ.
- John 19:17 ಯೋಹಾನನು 19:17ಆತನು ತನ್ನ ಶಿಲುಬೆಯನ್ನು ಹೊತ್ತುಕೊಂಡು ಕಪಾಲವೆಂದು ಕರೆಯಲ್ಪಟ್ಟ ಸ್ಥಳಕ್ಕೆ ಹೋದನು. ಅದು ಇಬ್ರಿಯ ಭಾಷೆಯಲ್ಲಿ ಗೊಲ್ಗೊಥಾ (ಬುರುಡೆಗಳ ಸ್ಥಳ) ಎಂದು ಕರೆಯಲ್ಪಡುತ್ತದೆ.
- Mark 15:21 ಮಾರ್ಕನು 15:21ಅಲೆಕ್ಸಾಂದ್ರ ಮತ್ತು ರೂಫ ಎಂಬವರ ತಂದೆಯಾದ ಕುರೇನ್ಯದ ಸೀಮೋನ ಎಂಬವನು ಗ್ರಾಮದಿಂದ ಬಂದು ಹಾದುಹೋಗುತ್ತಿರುವಾಗ ಆತನ ಶಿಲುಬೆಯನ್ನು ಹೊರುವಂತೆ ಅವರು ಅವನನ್ನು ಬಲವಂತ ಮಾಡಿದರು.