Luke · chapter 2 · verse 17
Luke 2:17 in Kannada
ಅವರು ಆತನನ್ನು ನೋಡಿದ ಮೇಲೆ ಈ ಶಿಶುವಿನ ವಿಷಯವಾಗಿ ತಮಗೆ ತಿಳಿಯಪಡಿಸಿದ ಮಾತನ್ನು ಎಲ್ಲಾ ಕಡೆಯಲ್ಲಿಯೂ ಪ್ರಕಟಮಾಡಿದರು.
Avaru aatanannu nodida mele ee shishuvina vishayavaagi tamage tiliyapadisida maatannu ellaa kadeyalliyoo prakatamaadidaru.
Luke 2:17 in English
- King James Version (KJV)
- And when they had seen [it], they made known abroad the saying which was told them concerning this child.
- World English Bible (WEB)
- When they saw it, they publicized widely the saying which was spoken to them about this child.
- American Standard Version (ASV)
- And when they saw it, they made known concerning the saying which was spoken to them about this child.
- Bible in Basic English (BBE)
- And when they saw it, they gave them an account of the things which had been said to them about the child.
- Darby Translation (DBY)
- and having seen [it] they made known about the country the thing which had been said to them concerning this child.
- Webster's Bible (WBS)
- And when they had seen [it] , they made known abroad the saying which was told them concerning this child.
- Young's Literal Translation (YLT)
- and having seen, they made known abroad concerning the saying spoken to them concerning the child.
Read in context
- 15ದೂತನು ಅವರ ಬಳಿಯಿಂದ ಪರಲೋಕಕ್ಕೆ ಹೋದ ಮೇಲೆ ಕುರುಬರು--ಕರ್ತನು ನಮಗೆ ಪ್ರಕಟ ಮಾಡಿದ ಈ ಸಂಭವವನ್ನು ನಾವು ಈಗಲೇ ಬೇತ್ಲೆಹೇಮಿಗೆ ಹೋಗಿ ನೋಡೋಣ ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.
- 16ಅವರು ಅವಸರದಿಂದ ಬಂದು ಮರಿಯಳನ್ನೂ ಯೋಸೇಫ ನನ್ನೂ ಗೋದಲಿಯಲ್ಲಿ ಮಲಗಿದ್ದ ಶಿಶುವನ್ನೂ ಕಂಡುಕೊಂಡರು.
- 17ಅವರು ಆತನನ್ನು ನೋಡಿದ ಮೇಲೆ ಈ ಶಿಶುವಿನ ವಿಷಯವಾಗಿ ತಮಗೆ ತಿಳಿಯಪಡಿಸಿದ ಮಾತನ್ನು ಎಲ್ಲಾ ಕಡೆಯಲ್ಲಿಯೂ ಪ್ರಕಟಮಾಡಿದರು.
- 18ಕುರುಬರು ಹೇಳಿದ ವಿಷಯ ಗಳನ್ನು ಕೇಳಿದವರೆಲ್ಲರೂ ಆಶ್ಚರ್ಯಪಟ್ಟರು.
- 19ಆದರೆ ಮರಿಯಳು ಈ ಎಲ್ಲಾ ವಿಷಯಗಳನ್ನು ತನ್ನ ಹೃದಯದಲ್ಲಿಟ್ಟು ಕೊಂಡು ಆಲೋಚಿಸುತ್ತಿದ್ದಳು.
Cross references
- Luke 8:39 ಲೂಕನು 8:39ನೀನು ನಿನ್ನ ಸ್ವಂತ ಮನೆಗೆ ಹಿಂತಿರುಗಿ ಹೋಗಿ ದೇವರು ನಿನಗೆ ಎಂಥಾ ಮಹತ್ವವಾದವುಗಳನ್ನು ಮಾಡಿದ್ದಾನೆಂಬದನ್ನು ತೋರಿಸು ಅಂದನು. ಅವನು ತನ್ನ ಮಾರ್ಗವಾಗಿ ಹೊರಟು ಯೇಸು ತನಗೆ ಎಂಥಾ ದೊಡ್ಡ ಕಾರ್ಯಗಳನ್ನು ಮಾಡಿದ್ದಾನೆಂದು ಪಟ್ಟಣದಲ್ಲೆಲಾ ಪ್ರಚಾರಮಾಡಿದನು.
- Psalm 66:16 ಕೀರ್ತನೆಗಳು 66:16ದೇವರಿಗೆ ಭಯಪಡುವವರೆಲ್ಲರೇ, ಬನ್ನಿರಿ, ಕೇಳಿರಿ; ಆತನು ನನ್ನ ಪ್ರಾಣಕ್ಕೆ ಮಾಡಿದ್ದನ್ನು ಪ್ರಕಟಿ ಸುವೆನು.
- Psalm 71:17–18 ಕೀರ್ತನೆಗಳು 71:17–18ಓ ದೇವರೇ, ನನ್ನ ಯೌವನದಿಂದ ನನಗೆ ನೀನು ಕಲಿಸಿದ್ದೀ; ಈ ವರೆಗೂ ನಿನ್ನ ಅದ್ಭುತ ಕಾರ್ಯಗಳನ್ನು ತಿಳಿಸುವೆನು. ಓ ದೇವರೇ, ನಾನು ಮುಪ್ಪಿನವನೂ ನರೆ ಕೂದಲಿನವನೂ ಆದಾಗ ಈ ಸಂತತಿಯವರಿಗೆ ನಿನ್ನ ಶಕ್ತಿಯನ್ನೂ ಮುಂದೆ ಬರುವ ಪ್ರತಿಯೊಬ್ಬನಿಗೆ ನಿನ್ನ ಅಧಿಕಾರವನ್ನೂ ತಿಳಿಸುವ ವರೆಗೂ ನನ್ನನ್ನು ಕೈಬಿಡಬೇಡ.
- Luke 2:38 ಲೂಕನು 2:38ಆ ಕ್ಷಣದಲ್ಲಿ ಅವಳು ಬಂದು ಕರ್ತನನ್ನು ಅದೇ ರೀತಿಯಾಗಿ ಕೊಂಡಾಡಿ ಯೆರೂಸಲೇಮಿನಲ್ಲಿ ವಿಮೋಚನೆಗಾಗಿ ಎದುರು ನೋಡುತ್ತಿದ್ದವರೆಲ್ಲರೊಂದಿಗೆ ಆತನ ವಿಷಯ ವಾಗಿ ಮಾತನಾಡಿದಳು.
- Psalm 16:9–10 ಕೀರ್ತನೆಗಳು 16:9–10ಆದದರಿಂದ ನನ್ನ ಹೃದಯವು ಸಂತೋಷಿಸಿ ನನ್ನ ಹೆಮ್ಮೆಯು ಉಲ್ಲಾಸಪಡುತ್ತದೆ; ನನ್ನ ಶರೀರವು ಸಹ ನಿರೀಕ್ಷೆಯಿಂದ ವಿಶ್ರಾಂತಿಸುವದು. ಯಾಕಂದರೆ ನೀನು ನನ್ನ ಆತ್ಮವನ್ನು ನರಕದಲ್ಲಿ ಬಿಟ್ಟುಬಿಡುವದಿಲ್ಲ; ನಿನ್ನ ಪರಿಶುದ್ಧನ ಕೊಳೆಯುವಿಕೆಯನ್ನು ನೋಡ ಗೊಡಿಸುವದಿಲ್ಲ.ಜೀವದ ಮಾರ್ಗವನ್ನು ನನಗೆ ತಿಳಿಸುವಿ; ನಿನ್ನ ಸಮ್ಮುಖದಲ್ಲಿ ಪರಿಪೂರ್ಣ ಸಂತೋಷ ವೂ ನಿನ್ನ ಬಲಗಡೆಯಲ್ಲಿ ಶಾಶ್ವತ ಭಾಗ್ಯವೂ ಇರುತ್ತವೆ.
- Malachi 3:16 ಮಲಾಕಿಯ 3:16ಆಗ ಕರ್ತನಿಗೆ ಭಯಪಡುವವರು ಒಬ್ಬರ ಸಂಗಡಲೊಬ್ಬರು ಆಗಾಗ್ಗೆ ಮಾತಾಡಿಕೊಂಡರು; ಕರ್ತನು ಕಿವಿಗೊಟ್ಟು ಅದನ್ನು ಕೇಳಿದನು; ಇದಲ್ಲದೆ ಕರ್ತನಿಗೆ ಭಯಪಡುವವರಿಗೋಸ್ಕರವೂ ಆತನ ಹೆಸರನ್ನು ನೆನಸುವವರಿಗೋಸ್ಕರವೂ ಆತನ ಮುಂದೆ ಜ್ಞಾಪಕದ ಪುಸ್ತಕವು ಬರೆಯಲ್ಪಟ್ಟಿತು.
- John 1:41–46 ಯೋಹಾನನು 1:41–46ಇವನು ಮೊದಲು ತನ್ನ ಸ್ವಂತ ಸಹೋದರನಾದ ಸೀಮೋನನನ್ನು ಕಂಡು ಅವ ನಿಗೆ--ನಾವು ಮೆಸ್ಸೀಯನನ್ನು ಕಂಡುಕೊಂಡೆವು ಎಂದು ಹೇಳಿದನು (ಮೆಸ್ಸೀಯನು ಅಂದರೆ ಕ್ರಿಸ್ತನು ಎಂದರ್ಥ). 42ಆಗ ಅಂದ್ರೆಯನು ಸೀಮೋನನ್ನು ಯೇಸುವಿನ ಬಳಿಗೆ ಕರಕೊಂಡು ಬಂದನು. ಯೇಸು ಅವನನ್ನು ನೋಡಿ--ನೀನು ಯೋನನ ಮಗನಾದ ಸೀಮೋನನು, ನೀನು ಕೇಫನೆಂದು ಕರೆಯಲ್ಪಡುವಿ ಅಂದನು. (ಕೇಫ ಅಂದರೆ ಕಲ್ಲು ಎಂದರ್ಥ). ಮರುದಿನ ಯೇಸು ಗಲಿಲಾಯಕ್ಕೆ ಹೊರಟು ಹೋಗಬೇಕೆಂದಿದ್ದಾಗ ಫಿಲಿಪ್ಪನನ್ನು ಕಂಡು ಅವ ನಿಗೆ--ನನ್ನನ್ನು ಹಿಂಬಾಲಿಸು ಅಂದನು. ಫಿಲಿಪ್ಪನು ಅಂದ್ರೆಯನ ಮತ್ತು ಪೇತ್ರನ ಪಟ್ಟಣವಾದ ಬೇತ್ಸಾಯಿ ದವನು. ಫಿಲ್ಫಿಪನು ನತಾನಯೇಲನನ್ನು ಕಂಡು ಅವನಿಗೆ--ನ್ಯಾಯಪ್ರಮಾಣದಲ್ಲಿ ಮೋಶೆಯು ಮತ್ತು ಪ್ರವಾದಿಗಳು ಯಾವಾತನ ವಿಷಯವಾಗಿ ಬರೆದರೋ ಆತನನ್ನು ನಾವು ಕಂಡುಕೊಂಡೆವು; ಆತನು ಯೋಸೇ ಫನ ಮಗನಾದ ನಜರೇತಿನ ಯೇಸುವು ಅಂದನು. ಅದಕ್ಕೆ ನತಾನಯೇಲನು ಅವನಿಗೆ--ನಜರೇತಿ ನಿಂದ ಒಳ್ಳೇದೇನಾದರೂ ಬರುವದೋ? ಅಂದಾಗ ಫಿಲಿಪ್ಪನು ಅವನಿಗೆ--ಬಂದು ನೋಡು ಅಂದನು.