Luke · chapter 21 · verse 1
Luke 21:1 in Kannada
ಇದಲ್ಲದೆ ಐಶ್ವರ್ಯವಂತರು ತಮ್ಮ ಕಾಣಿಕೆಗಳನ್ನು ಬೊಕ್ಕಸದಲ್ಲಿ ಹಾಕುವದನ್ನು ಆತನು ಕಣ್ಣೆತ್ತಿ ನೋಡಿದನು.
Idallade aishvaryavantaru tamma kaanikegalannu bokkasadalli haakuvadannu aatanu kannetti nodidanu.
Luke 21:1 in English
- King James Version (KJV)
- And he looked up, and saw the rich men casting their gifts into the treasury.
- World English Bible (WEB)
- He looked up and saw the rich people who were putting their gifts into the treasury.
- American Standard Version (ASV)
- And he looked up, and saw the rich men that were casting their gifts into the treasury.
- Bible in Basic English (BBE)
- And looking up, he saw the men of wealth putting their offerings in the money-box.
- Darby Translation (DBY)
- And he looked up and saw the rich casting their gifts into the treasury;
- Webster's Bible (WBS)
- And he looked up, and saw rich men casting their gifts into the treasury.
- Young's Literal Translation (YLT)
- And having looked up, he saw those who did cast their gifts to the treasury — rich men,
Read in context
- 1ಇದಲ್ಲದೆ ಐಶ್ವರ್ಯವಂತರು ತಮ್ಮ ಕಾಣಿಕೆಗಳನ್ನು ಬೊಕ್ಕಸದಲ್ಲಿ ಹಾಕುವದನ್ನು ಆತನು ಕಣ್ಣೆತ್ತಿ ನೋಡಿದನು.
- 2ಒಬ್ಬ ಬಡ ವಿಧವೆಯು ಸಹ ಎರಡು ಕಾಸುಗಳನ್ನು ಅದರಲ್ಲಿ ಹಾಕುವದನ್ನು ಆತನು ನೋಡಿದನು.
- 3ಆತನು--ನಾನು ನಿಮಗೆ ನಿಜವಾಗಿ ಹೇಳುತ್ತೇನೆ, ಈ ಬಡ ವಿಧವೆಯು ಅವರೆಲ್ಲರಿಗಿಂತಲೂ ಹೆಚ್ಚು ಹಾಕಿದ್ದಾಳೆ;
Cross references
- Mark 12:41–44 ಮಾರ್ಕನು 12:41–44ಯೇಸು ಬೊಕ್ಕಸದ ಎದುರಾಗಿ ಕೂತುಕೊಂಡು ಜನರು ಹೇಗೆ ಬೊಕ್ಕಸದಲ್ಲಿ ಹಣ ಹಾಕುತ್ತಿದ್ದಾ ರೆಂಬದನ್ನು ನೋಡುತ್ತಿದ್ದನು; ಅನೇಕ ಐಶ್ವರ್ಯವಂತರು ಹೆಚ್ಚೆಚ್ಚಾಗಿ ಹಾಕಿದರು. ಆಗ ಅಲ್ಲಿ ಒಬ್ಬ ಬಡ ವಿಧವೆಯು ಬಂದು ಒಂದು ಫಾರ್ದಿಂಗದಷ್ಟು ಎರಡು ನಾಣ್ಯಗಳನ್ನು ಹಾಕಿದಳು. ಆಗ ಆತನು ತನ್ನ ಶಿಷ್ಯರನ್ನು ಹತ್ತಿರಕ್ಕೆ ಕರೆದು ಅವರಿಗೆ-- ಈ ಬೊಕ್ಕಸದಲ್ಲಿ ಹಾಕಿದವರೆಲ್ಲರಿಗಿಂತ ಈ ಬಡ ವಿಧವೆಯು ಹೆಚ್ಚಾಗಿ ಹಾಕಿದ್ದಾಳೆ ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.ಯಾಕಂದರೆ ಎಲ್ಲರೂ ತಮ್ಮ ಸಮೃದ್ಧಿಯಲ್ಲಿ ಹಾಕಿದರು; ಆದರೆ ಈಕೆಯು ತನ್ನ ಕೊರತೆಯಲ್ಲಿ ತನಗಿದ್ದದ್ದನ್ನೆಲ್ಲಾ ಅಂದರೆ ತನ್ನ ಜೀವನವನ್ನೆಲ್ಲಾ ಹಾಕಿದ್ದಾಳೆ ಅಂದನು. ಯಾಕಂದರೆ ಎಲ್ಲರೂ ತಮ್ಮ ಸಮೃದ್ಧಿಯಲ್ಲಿ ಹಾಕಿದರು; ಆದರೆ ಈಕೆಯು ತನ್ನ ಕೊರತೆಯಲ್ಲಿ ತನಗಿದ್ದದ್ದನ್ನೆಲ್ಲಾ ಅಂದರೆ ತನ್ನ ಜೀವನವನ್ನೆಲ್ಲಾ ಹಾಕಿದ್ದಾಳೆ ಅಂದನು.
- John 8:20 ಯೋಹಾನನು 8:20ಯೇಸು ದೇವಾಲಯದಲ್ಲಿ ಬೋಧಿಸುತ್ತಿದ್ದಾಗ ಬೊಕ್ಕಸದ ಬಳಿಯಲ್ಲಿ ಈ ಮಾತುಗಳನ್ನು ಆಡಿದನು; ಆದರೆ ಆತನ ಗಳಿಗೆ ಇನ್ನೂ ಬಾರದೆ ಇದ್ದದರಿಂದ ಯಾರೂ ಆತನ ಮೇಲೆ ಕೈಹಾಕಲಿಲ್ಲ.
- Matthew 27:6 ಮತ್ತಾಯನು 27:6ಆಗ ಪ್ರಧಾನ ಯಾಜಕರು ಆ ಬೆಳ್ಳಿಯ ನಾಣ್ಯಗಳನ್ನು ತೆಗೆದುಕೊಂಡು--ಇವುಗಳನ್ನು ಬೊಕ್ಕಸದಲ್ಲಿ ಹಾಕು ವದು ನ್ಯಾಯವಲ್ಲ; ಯಾಕಂದರೆ ಅದು ರಕ್ತದಕ್ರಯ ವಾಗಿದೆ ಅಂದರು.
- 2 Chronicles 36:18 2 ಪೂರ್ವಕಾಲವೃತ್ತಾಂತ 36:18ಇದಲ್ಲದೆ ದೊಡ್ಡವೂ ಸಣ್ಣವೂ ಆದ ಕರ್ತನ ಮನೆಯ ಎಲ್ಲಾ ಸಾಮಾನುಗಳು ಕರ್ತನ ಆಲಯದ ಬೊಕ್ಕಸಗಳು ಅರಸನ ಬೊಕ್ಕಸಗಳು ಅವನ ಪ್ರಧಾನರ ಬೊಕ್ಕಸಗಳು ಇವುಗಳನ್ನೆಲ್ಲಾ ಬಾಬೆಲಿಗೆ ತರಿಸಿದನು.
- Nehemiah 13:13 ನೆಹೆಮೀಯ 13:13ಆಗ ನಾನು ಯಾಜಕನಾದ ಶೆಲೆಮ್ಯನನ್ನೂ ಶಾಸ್ತ್ರಿಯಾದ ಚಾದೋಕನನ್ನೂ ಲೇವಿ ಯರಲ್ಲಿರುವ ಪೆದಾಯನನ್ನೂ ಅವರಿಗೆ ಸಹಾಯವಾಗಿ ಮತ್ತನ್ಯನ ಮಗನಾದ ಜಕ್ಕೂರನ ಮಗನಾದ ಹಾನಾ ನನನ್ನೂ ಬೊಕ್ಕಸಗಳ ಮೇಲೆ ನೇಮಿಸಿದೆನು; ಅವರು ನಂಬಿಗಸ್ತರೆಂದು ಎಣಿಸಲ್ಪಟ್ಟಿದ್ದರು. ತಮ್ಮ ಸಹೋ ದರರಿಗೆ ವಿಭಾಗಿಸುವದು ಅವರ ಕೆಲಸವಾಗಿತ್ತು.
- 2 Kings 24:13 2 ಅರಸುಗಳು 24:13ಕರ್ತನು ಹೇಳಿದ ಪ್ರಕಾರವೇ ಅವನು ಅಲ್ಲಿಂದ ಕರ್ತನ ಮನೆಯ ಎಲ್ಲಾ ಬೊಕ್ಕಸಗಳನ್ನೂ ಅರಮನೆಯ ಬೊಕ್ಕಸಗಳನ್ನೂ ಇಸ್ರಾಯೇಲಿನ ಅರಸನಾದ ಸೊಲೊಮೋನನು ಕರ್ತನ ಮನೆಯಲ್ಲಿ ಮಾಡಿದ ಬಂಗಾರದ ಎಲ್ಲಾ ಪಾತ್ರೆಗಳನ್ನೂ ತುಂಡು ತುಂಡಾಗಿ ಕತ್ತರಿಸಿಬಿಟ್ಟನು.
- Joshua 6:19 ಯೆಹೋಶುವ 6:19ಎಲ್ಲಾ ಬೆಳ್ಳಿ ಬಂಗಾರವೂ ಹಿತ್ತಾಳೆ ಕಬ್ಬಿಣ ಪಾತ್ರೆಗಳೂ ಕರ್ತನಿಗೆ ವಿಾಸಲಾಗಿರ ಬೇಕು. ಅವು ಕರ್ತನ ಭಂಡಾರಕ್ಕೆ ಸೇರಬೇಕು ಅಂದನು.
- Mark 7:11–13 ಮಾರ್ಕನು 7:11–13ಆದರೆ ನೀವು--ಒಬ್ಬ ಮನುಷ್ಯನು ತನ್ನ ತಂದೆಗಾಗಲೀ ಅಥವಾ ತಾಯಿ ಗಾಗಲೀ--ನೀನು ನನ್ನಿಂದ ಹೊಂದಲಿಕ್ಕಿರುವ ಪ್ರಯೋಜನವು ಕೊರ್ಬಾನ್ (ಅಂದರೆ ಒಂದು ದಾನ) ಆಗಿದೆ ಎಂದು ಹೇಳಿದರೆ ಅವನು ಸ್ವತಂತ್ರ ನಾಗುವನು ಎಂದು ಅನ್ನುತ್ತೀರಿ; ಅವನು ತನ್ನ ತಂದೆಗಾದರೂ ತಾಯಿಗಾದರೂ ಏನನ್ನೂ ನೀವು ಮಾಡಗೊಡಿಸದೆ ನೀವು ಕಲಿಸಿರುವ ನಿಮ್ಮ ಸಂಪ್ರದಾಯದ ಮೂಲಕ ದೇವರ ವಾಕ್ಯವನ್ನು ನಿರರ್ಥಕಮಾಡುತ್ತೀರಿ, ಇಂಥ ಅನೇಕವಾದವುಗಳನ್ನು ನೀವು ಮಾಡುತ್ತೀರಿ ಅಂದನು.