Luke · chapter 22 · verse 3
Luke 22:3 in Kannada
ಹನ್ನೆರಡು ಮಂದಿಯಲ್ಲಿ ಎಣಿಕೆ ಯಾಗಿದ್ದ ಇಸ್ಕರಿಯೋತನೆಂಬ ಅಡ್ಡಹೆಸರಿನ ಯೂದ ನಲ್ಲಿ ಸೈತಾನನು ಪ್ರವೇಶಿಸಿದನು.
Hanneradu mandiyalli enike yaagidda iskariyotanemba addahesarina yooda nalli saitaananu praveshisidanu.
Luke 22:3 in English
- King James Version (KJV)
- Then entered Satan into Judas surnamed Iscariot, being of the number of the twelve.
- World English Bible (WEB)
- Satan entered into Judas, who was also called Iscariot, who was counted with the twelve.
- American Standard Version (ASV)
- And Satan entered into Judas who was called Iscariot, being of the number of the twelve.
- Bible in Basic English (BBE)
- And Satan came into Judas Iscariot, who was one of the twelve.
- Darby Translation (DBY)
- And Satan entered into Judas, who was surnamed Iscariote, being of the number of the twelve.
- Webster's Bible (WBS)
- Then Satan entered into Judas surnamed Iscariot, being of the number of the twelve.
- Young's Literal Translation (YLT)
- And the Adversary entered into Judas, who is surnamed Iscariot, being of the number of the twelve,
Read in context
- 1ಆಗ ಪಸ್ಕವೆಂಬ ಹುಳಿಯಿಲ್ಲದ ರೊಟ್ಟಿಯ ಹಬ್ಬವು ಸವಿಾಪವಾಗಿತ್ತು.
- 2ಪ್ರಧಾನ ಯಾಜಕರೂ ಶಾಸ್ತ್ರಿಗಳೂ ಆತನನ್ನು ಹೇಗೆ ಕೊಲ್ಲ ಬೇಕೆಂದು ಹುಡುಕುತ್ತಿದ್ದರು. ಆದರೆ ಅವರು ಜನರಿಗೆ ಭಯಪಟ್ಟರು.
- 3ಹನ್ನೆರಡು ಮಂದಿಯಲ್ಲಿ ಎಣಿಕೆ ಯಾಗಿದ್ದ ಇಸ್ಕರಿಯೋತನೆಂಬ ಅಡ್ಡಹೆಸರಿನ ಯೂದ ನಲ್ಲಿ ಸೈತಾನನು ಪ್ರವೇಶಿಸಿದನು.
- 4ಅವನು ಪ್ರಧಾನ ಯಾಜಕರ ಬಳಿಗೂ ಸೈನ್ಯಾಧಿಪತಿಗಳ ಬಳಿಗೂ ಹೋಗಿ ತಾನು ಹೇಗೆ ಆತನನ್ನು ಅವರಿಗೆ ಹಿಡುಕೊಡುವ ದೆಂಬದನ್ನು ಅವರ ಕೂಡ ಮಾತನಾಡಿದನು.
- 5ಆಗ ಅವರು ಸಂತೋಷಪಟ್ಟು ಅವನಿಗೆ ಹಣ ಕೊಡುವದಕ್ಕೆ ಒಡಂಬಟ್ಟರು.
Cross references
- John 13:2 ಯೋಹಾನನು 13:2ಊಟವಾದ ಮೇಲೆ ಆತನನ್ನು ಹಿಡುಕೊಡಬೇಕೆಂಬದನ್ನು ಸೀಮೋ ನನ ಮಗನಾದ ಯೂದ ಇಸ್ಕರಿಯೋತನ ಹೃದಯದಲ್ಲಿ ಸೈತಾನನು ಆಲೋಚನೆ ಹುಟ್ಟಿಸಿದನು.
- Mark 14:10–11 ಮಾರ್ಕನು 14:10–11ಆಗ ಹನ್ನೆರಡು ಮಂದಿಯಲ್ಲಿ ಒಬ್ಬನಾದ ಯೂದ ಇಸ್ಕರಿಯೋತನು ಯೇಸುವನ್ನು ಪ್ರಧಾನ ಯಾಜಕರಿಗೆ ಹಿಡುಕೊಡುವಂತೆ ಅವರ ಬಳಿಗೆ ಹೋದನು. ಅವರು ಅದನ್ನು ಕೇಳಿ ಸಂತೋಷಪಟ್ಟು ಅವನಿಗೆ ಹಣ ಕೊಡುತ್ತೇವೆಂದು ಮಾತುಕೊಟ್ಟರು. ಅವನು ಆತನನ್ನು ಅನುಕೂಲವಾಗಿ ಹಿಡುಕೊಡುವದು ಹೇಗೆಂದು ಹುಡುಕುತ್ತಿದ್ದನು.
- John 13:26–27 ಯೋಹಾನನು 13:26–27ಅದಕ್ಕೆ ಯೇಸು--ನಾನು ರೊಟ್ಟಿಯ ತುಂಡನ್ನು ಅದ್ದಿ ಯಾವನಿಗೆ ಕೊಡುತ್ತೇನೋ ಅವನೇ ಎಂದು ಉತ್ತರ ಕೊಟ್ಟನು. ಆ ರೊಟ್ಟಿಯ ತುಂಡನ್ನು ಅದ್ದಿ ಆತನು ಸೀಮೋನನ ಮಗನಾದ ಯೂದ ಇಸ್ಕರಿಯೋತನಿಗೆ ಕೊಟ್ಟನು. ರೊಟ್ಟಿಯ ತುಂಡನ್ನು ತಕ್ಕೊಂಡ ಮೇಲೆ ಸೈತಾನನು ಅವನೊಳಗೆ ಹೊಕ್ಕನು. ಆಗ ಯೇಸು ಅವನಿಗೆ--ನೀನು ಮಾಡುವ ದನ್ನು ಬೇಗನೆ ಮಾಡು ಎಂದು ಹೇಳಿದನು.
- Psalm 55:12–14 ಕೀರ್ತನೆಗಳು 55:12–14ನನ್ನನ್ನು ನಿಂದಿಸಿದವನು ಶತ್ರುವಲ್ಲ; ಶತ್ರುವಾದರೆ ತಾಳಿಕೊಳ್ಳುತ್ತಿದ್ದೆನು; ನಿನಗೆ ವಿರೋಧವಾಗಿ ಹೆಚ್ಚಿಸಿ ಕೊಳ್ಳುವವನು ನನ್ನ ಹಗೆಯವನಲ್ಲ; ಹಗೆಯವನಾದರೆ ಅವನಿಗೆ ಅಡಗಿಕೊಳ್ಳುತ್ತಿದ್ದೆನು. ಆದರೆ ನೀನು ನನ್ನ ಜೊತಗಾರನೂ ನಡಿಸುವವನೂ ನನ್ನ ಪರಿಚಿತನೂ ಆಗಿದ್ದೀ. ನಾವು ಒಟ್ಟಾಗಿ ಇಂಪಾದ ಸಂಭಾಷಣೆ ಮಾಡಿದೆವು; ದೇವರ ಆಲಯಕ್ಕೆ ಗುಂಪಿನೊಂದಿಗೆ ನಡೆದುಹೋದೆವು.
- John 13:18 ಯೋಹಾನನು 13:18ನಾನು ನಿಮ್ಮೆಲ್ಲರ ವಿಷಯದಲ್ಲಿ ಮಾತ ನಾಡುವದಿಲ್ಲ; ನಾನು ಆರಿಸಿಕೊಂಡವರನ್ನು ಬಲ್ಲೆನು; ಆದರೆ--ನನ್ನೊಂದಿಗೆ ರೊಟ್ಟಿಯನ್ನು ತಿನ್ನುವವನು ನನಗೆ ವಿರೋಧವಾಗಿ ತನ್ನ ಹಿಮ್ಮಡಿಯನ್ನು ಎತ್ತಿದ್ದಾನೆ ಎಂಬ ಬರಹವು ನೆರವೇರಬೇಕಾಗಿದೆ.
- Acts 5:3 ಅಪೊಸ್ತಲರ ಕೃತ್ಯಗಳು 5:3ಆಗ ಪೇತ್ರನು--ಅನನೀಯನೇ, ಪವಿತ್ರಾತ್ಮನಿಗೆ ಸುಳ್ಳು ಹೇಳಿ ಹೊಲದ ಕ್ರಯದಲ್ಲಿ ಒಂದು ಭಾಗವನ್ನು ತೆಗೆದಿಡುವಂತೆ ಸೈತಾನನು ನಿನ್ನ ಹೃದಯವನ್ನು ತುಂಬಿ ಕೊಂಡದ್ದು ಯಾಕೆ?
- Luke 22:21 ಲೂಕನು 22:21ಆದರೂ ಇಗೋ, ನನ್ನನ್ನು ಹಿಡುಕೊಡುವವನ ಕೈ ನನ್ನ ಸಂಗಡ ಮೇಜಿನ ಮೇಲೆ ಇದೆ.
- Psalm 41:9 ಕೀರ್ತನೆಗಳು 41:9ಹೌದು, ನನ್ನ ರೊಟ್ಟಿಯನ್ನು ತಿಂದಂಥ, ನಾನು ಭರವಸವಿಟ್ಟಂಥ, ನನ್ನ ಆಪ್ತ ಸ್ನೇಹಿತನು ನನಗೆ ವಿರೋಧವಾಗಿ ತನ್ನ ಕಾಲನ್ನು ಅಡ್ಡಗೊಟ್ಟಿದ್ದಾನೆ.
- Matthew 26:14–16 ಮತ್ತಾಯನು 26:14–16ಆಗ ಹನ್ನೆರಡು ಮಂದಿಯಲ್ಲಿ ಒಬ್ಬನಾದ ಯೂದ ಇಸ್ಕರಿಯೋತ್ ಎಂಬವನು ಪ್ರಧಾನ ಯಾಜಕರ ಬಳಿಗೆ ಹೋಗಿ-- ನಾನು ಆತನನ್ನು ನಿಮಗೆ ಒಪ್ಪಿಸಿಕೊಟ್ಟರೆ ನೀವು ನನಗೆ ಏನು ಕೊಡುತ್ತೀರಿ ಅಂದನು. ಆಗ ಅವರು ಅವನೊಂದಿಗೆ ಮೂವತ್ತು ಬೆಳ್ಳಿಯ ನಾಣ್ಯಗಳಿಗೆ ಒಪ್ಪಂದ ಮಾಡಿಕೊಂಡರು. ಅಂದಿನಿಂದ ಅವನು ಆತನನ್ನು ಹಿಡಿದುಕೊಡು ವದಕ್ಕೆ ಸಂದರ್ಭವನ್ನು ಹುಡುಕುತ್ತಿದ್ದನು.
- John 6:70–71 ಯೋಹಾನನು 6:70–71ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವ ರಿಗೆ--ಹನ್ನೆರಡು ಮಂದಿಯಾದ ನಿಮ್ಮನ್ನು ನಾನು ಆರಿಸಿ ಕೊಂಡೆನಲ್ಲವೇ? ಆದರೆ ನಿಮ್ಮಲ್ಲಿ ಒಬ್ಬನು ಸೈತಾನನಾ ಗಿದ್ದಾನೆ ಅಂದನು.ಸೀಮೋನನ ಮಗನಾದ ಇಸ್ಕರಿಯೋತ್ ಯೂದನ ವಿಷಯವಾಗಿ ಆತನು ಹೇಳಿ ದನು. ಯಾಕಂದರೆ ಹನ್ನೆರಡು ಮಂದಿಯಲ್ಲಿ ಒಬ್ಬನಾದ ಇವನು ಆತನನ್ನು ಹಿಡುಕೊಡುವದಕ್ಕಿದ್ದನು. ಸೀಮೋನನ ಮಗನಾದ ಇಸ್ಕರಿಯೋತ್ ಯೂದನ ವಿಷಯವಾಗಿ ಆತನು ಹೇಳಿ ದನು. ಯಾಕಂದರೆ ಹನ್ನೆರಡು ಮಂದಿಯಲ್ಲಿ ಒಬ್ಬನಾದ ಇವನು ಆತನನ್ನು ಹಿಡುಕೊಡುವದಕ್ಕಿದ್ದನು.
- Luke 6:16 ಲೂಕನು 6:16ಯಾಕೋಬನ ಸಹೋದರನಾದ ಯೂದ, ಮತ್ತು ದ್ರೋಹಿಯಾದ ಇಸ್ಕರಿಯೋತ ಯೂದ ಎಂಬವರೇ.
- John 12:6 ಯೋಹಾನನು 12:6ಅವನು ಬಡವರಿಗೋಸ್ಕರ ಚಿಂತಿಸಿದ್ದಕ್ಕಾಗಿ ಅಲ್ಲ, ಅವನು ಕಳ್ಳನಾಗಿದ್ದು ಹಣದ ಚೀಲವನ್ನು ಇಟ್ಟು ಕೊಂಡು ಅದರಲ್ಲಿ ಹಾಕಿದ್ದನ್ನು ತಕ್ಕೊಳ್ಳುವವನಾಗಿದ್ದ ದರಿಂದಲೇ ಇದನ್ನು ಹೇಳಿದನು.