Luke · chapter 6 · verse 49
Luke 6:49 in Kannada
ಆದರೆ (ನನ್ನ ಮಾತುಗಳನ್ನು) ಕೇಳಿ ಅದರಂತೆ ಮಾಡದೆ ಇರುವವನು ಅಸ್ತಿವಾರ ವಿಲ್ಲದೆ ಮಣ್ಣಿನ ಮೇಲೆ ಮನೆಯನ್ನು ಕಟ್ಟಿದ ಮನುಷ್ಯನಿಗೆ ಹೋಲಿಕೆಯಾಗಿದ್ದಾನೆ; ಪ್ರವಾಹವು ಅದಕ್ಕೆ ರಭಸವಾಗಿ ಬಡಿದದ್ದರಿಂದ ಕೂಡಲೆ ಅದು ಬಿತ್ತು; ಇದರಿಂದ ಆ ಮನೆಯ ನಾಶನವು ದೊಡ್ಡದಾಗಿತ್ತು.
Aadare (nanna maatugalannu) keli adarante maadade iruvavanu astivaara villade mannina mele maneyannu kattida manushyanige holikeyaagiddaane; pravaahavu adakke rabhasavaagi badidaddarinda koodale adu bittu; idarinda aa maneya naashanavu doddadaagittu.
Luke 6:49 in English
- King James Version (KJV)
- But he that heareth, and doeth not, is like a man that without a foundation built an house upon the earth; against which the stream did beat vehemently, and immediately it fell; and the ruin of that house was great.
- World English Bible (WEB)
- But he who hears and doesn’t do, is like a man who built a house on the earth without a foundation, against which the stream broke, and immediately it fell; and the ruin of that house was great.”
- American Standard Version (ASV)
- But he that heareth, and doeth not, is like a man that built a house upon the earth without a foundation; against which the stream brake, and straightway it fell in; and the ruin of that house was great.
- Bible in Basic English (BBE)
- But he who gives hearing, without doing, is like a man building a house on the earth without a base for it; and when the force of the river came against it, straight away it came down; and the destruction of that house was great.
- Darby Translation (DBY)
- And he that has heard and not done, is like a man who has built a house on the ground without [a] foundation, on which the stream broke, and immediately it fell, and the breach of that house was great.
- Webster's Bible (WBS)
- But he that heareth, and doeth not, is like a man that, without a foundation, built a house on the earth, against which the stream beat vehemently, and immediately it fell, and the ruin of that house was great.
- Young's Literal Translation (YLT)
- 'And he who heard and did not, is like to a man having builded a house upon the earth, without a foundation, against which the stream brake forth, and immediately it fell, and the ruin of that house became great.'
Read in context
- 47ಯಾವನು ನನ್ನ ಬಳಿಗೆ ಬಂದು ನಾನು ಹೇಳುವವುಗಳನ್ನು ಕೇಳಿ ಅವುಗಳನ್ನು ಮಾಡು ತ್ತಾನೋ ಅವನು ಯಾರಿಗೆ ಸಮಾನನಾಗಿದ್ದಾನೆಂದು ನಾನು ನಿಮಗೆ ತೋರಿಸುತ್ತೇನೆ.
- 48ಅವನು ಆಳವಾಗಿ ಅಗಿದು ಬಂಡೆಯ ಮೇಲೆ ಅಸ್ತಿವಾರವನ್ನು ಹಾಕಿ ಮನೆಯನ್ನು ಕಟ್ಟಿದ ಮನುಷ್ಯನಿಗೆ ಸಮಾನನಾಗಿದ್ದಾನೆ; ಪ್ರಳಯವು ಎದ್ದು ಪ್ರವಾಹವು ಆ ಮನೆಗೆ ರಭಸ ವಾಗಿ ಬಡಿದರೂ ಅದನ್ನು ಕದಲಿಸಲಿಕ್ಕಾಗದೆ ಹೋಯಿತು; ಯಾಕಂದರೆ ಅದು ಬಂಡೆಯ ಮೇಲೆ ಕಟ್ಟಲ್ಪಟ್ಟಿತು.ಆದರೆ (ನನ್ನ ಮಾತುಗಳನ್ನು) ಕೇಳಿ ಅದರಂತೆ ಮಾಡದೆ ಇರುವವನು ಅಸ್ತಿವಾರ ವಿಲ್ಲದೆ ಮಣ್ಣಿನ ಮೇಲೆ ಮನೆಯನ್ನು ಕಟ್ಟಿದ ಮನುಷ್ಯನಿಗೆ ಹೋಲಿಕೆಯಾಗಿದ್ದಾನೆ; ಪ್ರವಾಹವು ಅದಕ್ಕೆ ರಭಸವಾಗಿ ಬಡಿದದ್ದರಿಂದ ಕೂಡಲೆ ಅದು ಬಿತ್ತು; ಇದರಿಂದ ಆ ಮನೆಯ ನಾಶನವು ದೊಡ್ಡದಾಗಿತ್ತು.
- 49ಆದರೆ (ನನ್ನ ಮಾತುಗಳನ್ನು) ಕೇಳಿ ಅದರಂತೆ ಮಾಡದೆ ಇರುವವನು ಅಸ್ತಿವಾರ ವಿಲ್ಲದೆ ಮಣ್ಣಿನ ಮೇಲೆ ಮನೆಯನ್ನು ಕಟ್ಟಿದ ಮನುಷ್ಯನಿಗೆ ಹೋಲಿಕೆಯಾಗಿದ್ದಾನೆ; ಪ್ರವಾಹವು ಅದಕ್ಕೆ ರಭಸವಾಗಿ ಬಡಿದದ್ದರಿಂದ ಕೂಡಲೆ ಅದು ಬಿತ್ತು; ಇದರಿಂದ ಆ ಮನೆಯ ನಾಶನವು ದೊಡ್ಡದಾಗಿತ್ತು.
Cross references
- Ezekiel 33:31 ಯೆಹೆಜ್ಕೇಲನು 33:31ಬೇರೆ ಜನರು ಬರುವ ಹಾಗೆ ಅವರು ನಿನ್ನ ಬಳಿಗೆ ಬಂದು ಜನರು ಕುಳಿತುಕೊಳ್ಳುವ ಹಾಗೆ ನಿನ್ನ ಮುಂದೆ ಕುಳಿತುಕೊಳ್ಳುವರು; ಅವರು ನಿನ್ನ ವಾಕ್ಯಗಳನ್ನು ಕೇಳುವರು, ಆದರೆ ಅವರು ಅವುಗಳನ್ನು ಮಾಡುವದಿಲ್ಲ. ಅವರು ತಮ್ಮ ಬಾಯಿಂದ ಹೆಚ್ಚಾದ ಪ್ರೀತಿಯನ್ನು ತೋರಿಸುವರು; ಆದರೆ ಅವರ ಹೃದಯವು ಲೋಭತ್ವದ ಕಡೆಗೆ ಹೋಗುವದು.
- James 1:22–26 ಯಾಕೋಬನು 1:22–26ನೀವು ವಾಕ್ಯದ ಪ್ರಕಾರ ನಡೆಯುವವರಾಗಿರ್ರಿ; ಅದನ್ನು ಕೇಳುವವರು ಮಾತ್ರವೇ ಆಗಿದ್ದು ನಿಮ್ಮನ್ನು ನೀವೇ ಮೋಸಗೊಳಿಸ ಬೇಡಿರಿ. ಯಾವನಾದರೂ ವಾಕ್ಯವನ್ನು ಕೇಳುವವ ನಾಗಿದ್ದು ಅದರ ಪ್ರಕಾರ ನಡೆಯದಿದ್ದರೆ ಅವನು ಕನ್ನಡಿಯಲ್ಲಿ ತನ್ನ ಹುಟ್ಟು ಮುಖವನ್ನು ನೋಡಿದ ಮನುಷ್ಯನಂತಿರುವನು. ಇವನು ತನ್ನನ್ನು ನೋಡಿ ಕೊಂಡು ಹೋಗಿ ತಾನು ಹೀಗಿದ್ದೇನೆಂಬದನ್ನು ಆ ಕ್ಷಣವೇ ಮರೆತುಬಿಡುವನು. ಆದರೆ ಬಿಡುಗಡೆ ಯನ್ನುಂಟುಮಾಡುವ ಪರಿಪೂರ್ಣವಾದ ನಿಯಮ ವನ್ನು ಲಕ್ಷ್ಯಕೊಟ್ಟು ನೋಡಿ ಇನ್ನೂ ನೋಡುತ್ತಲೇ ಇರುವವನು (ವಾಕ್ಯವನ್ನು) ಕೇಳಿ ಮರೆತುಹೋಗುವವ ನಾಗಿರದೆ ಅದರ ಪ್ರಕಾರ ನಡೆಯುವವನಾಗಿದ್ದು ತನ್ನ ಕ್ರಿಯೆಯಿಂದ ಧನ್ಯನಾಗುವನು. ನಿಮ್ಮಲ್ಲಿ ಭಕ್ತನೆಂದೆ ಣಿಸಿಕೊಳ್ಳುವ ಯಾವನಾದರೂ ತನ್ನ ನಾಲಿಗೆಗೆ ಕಡಿವಾಣವನ್ನು ಹಾಕದೆ ತನ್ನ ಹೃದಯವನ್ನು ಮೋಸ ಗೊಳಿಸುವವನಾದರೆ ಅವನ ಭಕ್ತಿ ನಿಷ್ಪ್ರಯೋಜನ ವಾಗಿದೆ.ಸಂಕಟದಲ್ಲಿ ಬಿದ್ದ ದಿಕ್ಕಿಲ್ಲದವರನ್ನೂ ವಿಧವೆ ಯರನ್ನೂ ಪರಾಮರಿಸಿ ತನಗೆ ಪ್ರಪಂಚದ ದೋಷವು ಹತ್ತದಂತೆ ನೋಡಿಕೊಂಡಿರುವದೇ ತಂದೆಯಾದ ದೇವರ ಸನ್ನಿಧಾನದಲ್ಲಿ ಶುದ್ಧವೂ ನಿರ್ಮಲವೂ ಆಗಿರುವ ಭಕ್ತಿ.
- 2 Peter 1:5–9 2 ಪೇತ್ರನು 1:5–9ಈಕಾರಣದಿಂದಲೇ ನೀವು ಪೂರ್ಣ ಜಾಗ್ರತೆಯಿಂದ ನಿಮಗಿರುವ ನಂಬಿಕೆಗೆ ಸದ್ಗುಣವನ್ನೂ ಸದ್ಗುಣಕ್ಕೆ ಜ್ಞಾನವನ್ನೂ ಜ್ಞಾನಕ್ಕೆ ದಮೆಯನ್ನೂ ದಮೆಗೆ ತಾಳ್ಮೆಯನ್ನೂ ತಾಳ್ಮೆಗೆ ಭಕ್ತಿಯನ್ನೂ ಭಕ್ತಿಗೆ ಸಹೋದರ ಕರುಣೆಯನ್ನೂ ಸಹೋದರ ಕರುಣೆಗೆ ಪ್ರೀತಿಯನ್ನೂ ಕೂಡಿಸಿರಿ. ಇವು ನಿಮ್ಮಲ್ಲಿದ್ದು ಹೆಚ್ಚುತ್ತಾ ಬಂದರೆ ನಮ್ಮ ಕರ್ತನಾದ ಯೇಸು ಕ್ರಿಸ್ತನ ಪರಿಜ್ಞಾನದಲ್ಲಿ ನಿಮ್ಮನ್ನು ಬಂಜೆಯರೂ ನಿಷ್ಪಲರೂ ಆಗದಂತೆ ಮಾಡುತ್ತವೆ. ಇವುಗಳಿಲ್ಲದವನು ಕುರುಡನಾಗಿದ್ದಾನೆ; ಅವನು ದೂರದೃಷ್ಟಿಯಿಲ್ಲದವನಾಗಿದ್ದು ತನ್ನ ಹಿಂದಣ ಪಾಪಗಳಿಂದ ಶುದ್ಧನಾದದ್ದನ್ನು ಮರೆತುಬಿಟ್ಟಿದ್ದಾನೆ.
- Matthew 23:3 ಮತ್ತಾಯನು 23:3ಆದದರಿಂದ ಅವರು ನಿಮಗೆ ಹೇಳುವವು ಗಳನ್ನೆಲ್ಲಾ ಕೈಕೊಂಡು ನಡೆಯಿರಿ; ಅವರ ಕ್ರಿಯೆಗಳ ಪ್ರಕಾರ ನೀವು ಮಾಡಬೇಡಿರಿ; ಯಾಕಂದರೆ ಅವರು ಹೇಳುತ್ತಾರೆ, ಮಾಡುವದಿಲ್ಲ.
- Matthew 13:20–22 ಮತ್ತಾಯನು 13:20–22ಮತ್ತು ಬಂಡೆಯ ಸ್ಥಳಗಳಲ್ಲಿ ಬೀಜವನ್ನು ಅಂಗೀಕರಿಸಿದವನು ಇವನೇ; ಇವನು ವಾಕ್ಯವನ್ನು ಕೇಳಿದ ಕೂಡಲೆ ಸಂತೋಷದಿಂದ ಅದನ್ನು ಅಂಗೀಕರಿಸುತ್ತಾನೆ; ಆದರೂ ಅವನಲ್ಲಿ ಬೇರಿಲ್ಲದ ಕಾರಣ ಸ್ವಲ್ಪಕಾಲ ಮಾತ್ರ ಇರುವನು; ಯಾಕಂದರೆ ವಾಕ್ಯಕ್ಕಾಗಿ ಸಂಕಟ ಇಲ್ಲವೆ ಹಿಂಸೆ ಬಂದಾಗ ತಕ್ಷಣವೇ ಅವನು ಅಭ್ಯಂತರ ಪಡುವನು. ಮುಳ್ಳುಗಳಲ್ಲಿ ಬೀಜವನ್ನು ಅಂಗೀಕರಿಸಿದವನು ಸಹ ಇವನೇ; ಇವನು ವಾಕ್ಯವನ್ನು ಕೇಳುತ್ತಾನೆ; ಆದರೆ ಈ ಪ್ರಪಂಚದ ಚಿಂತೆಯೂ ಐಶ್ವರ್ಯದ ಮೋಸವೂ ವಾಕ್ಯವನ್ನು ಅಡಗಿಸುವ ದರಿಂದ ಅವನು ಫಲ ಕೊಡಲಾರನು.
- 1 John 2:3–4 1 ಯೋಹಾನನು 2:3–4ನಾವು ಆತನ ಆಜ್ಞೆಗಳನ್ನು ಕೈಕೊಂಡು ನಡೆಯು ವದರಿಂದಲೇ ಆತನನ್ನು ಬಲ್ಲವರಾಗಿದ್ದೇವೆಂದು ತಿಳು ಕೊಳ್ಳುತ್ತೇವೆ. ಒಬ್ಬನು--ನಾನು ಆತನನ್ನು ಬಲ್ಲೆನೆಂದು ಹೇಳಿ ಆತನ ಆಜ್ಞೆಗಳನ್ನು ಕೈಕೊಳ್ಳದಿದ್ದರೆ ಅವನು ಸುಳ್ಳುಗಾರನಾಗಿದ್ದಾನೆ; ಸತ್ಯವು ಅವನಲ್ಲಿ ಇಲ್ಲ.
- John 15:2 ಯೋಹಾನನು 15:2ನನ್ನಲ್ಲಿ ಫಲಫಲಿಸದ ಪ್ರತಿಯೊಂದು ಕೊಂಬೆಯನ್ನು ಆತನು ತೆಗೆದುಹಾಕುತ್ತಾನೆ; ಫಲಕೊಡುವ ಪ್ರತಿಯೊಂದು ಕೊಂಬೆಯು ಹೆಚ್ಚಾಗಿ ಫಲಕೊಡುವ ಹಾಗೆ ಅದನ್ನು ಶುದ್ಧಿ ಮಾಡುತ್ತಾನೆ.
- Mark 4:17 ಮಾರ್ಕನು 4:17ತಮ್ಮಲ್ಲಿ ಬೇರು ಇಲ್ಲದ ಕಾರಣ ಸ್ವಲ್ಪ ಕಾಲ ಮಾತ್ರ ಇರುವಂಥವರಾಗಿದ್ದಾರೆ; ತರುವಾಯ ವಾಕ್ಯದ ನಿಮಿತ್ತ ಉಪದ್ರವವಾಗಲೀ ಹಿಂಸೆಯಾಗಲೀ ಬಂದಾಗ ಕೂಡಲೆ ಅವರು ಅಭ್ಯಂತರಪಡುತ್ತಾರೆ.
- Luke 12:47 ಲೂಕನು 12:47ಇದಲ್ಲದೆ ತನ್ನ ಒಡೆಯನ ಚಿತ್ತವನ್ನು ತಿಳಿದು ತನ್ನನ್ನು ಸಿದ್ಧಮಾಡಿಕೊಳ್ಳದೆ ಇಲ್ಲವೆ ಅವನ ಚಿತ್ತಕ್ಕೆ ಅನುಸಾರವಾಗಿ ಮಾಡದೆ ಇದ್ದ ಸೇವಕನು ಬಹಳ ಪೆಟ್ಟುಗಳನ್ನು ತಿನ್ನುವನು.
- Proverbs 28:18 ಜ್ಞಾನೋಕ್ತಿಗಳು 28:18ಯಥಾರ್ಥ ವಾಗಿ ನಡೆಯುವವನು ರಕ್ಷಿಸಲ್ಪಡುವನು; ತನ್ನ ಮಾರ್ಗ ಗಳಲ್ಲಿ ವಕ್ರವಾಗಿ ನಡೆದುಕೊಳ್ಳುವವನು ತಟ್ಟನೆ ಬೀಳು ವನು.
- Luke 10:12–16 ಲೂಕನು 10:12–16ಆದರೆ ಆ ದಿನದಲ್ಲಿ ಆ ಪಟ್ಟಣಕ್ಕಿಂತಲೂ ಸೊದೋಮಿನ ಗತಿಯು ಹೆಚ್ಚಾಗಿ ತಾಳಬಹುದಾಗಿರುವದು ಎಂದು ನಾನು ನಿಮಗೆ ಹೇಳುತ್ತೇನೆ. ಖೊರಾಜಿನೇ, ನಿನಗೆ ಅಯ್ಯೋ! ಬೇತ್ಸಾಯಿದವೇ, ನಿನಗೆ ಅಯ್ಯೋ! ನಿನ್ನಲ್ಲಿ ನಡೆದ ಮಹತ್ಕಾರ್ಯಗಳು ತೂರ್ ಸೀದೋನ್ಗಳಲ್ಲಿ ನಡೆದಿದ್ದರೆ ಅಲ್ಲಿಯವರು ಬಹಳ ಕಾಲದ ಹಿಂದೆಯೇ ಗೋಣೀತಟ್ಟನ್ನು ಸುತ್ತಿಕೊಂಡು ಬೂದಿಯಲ್ಲಿ ಕೂತು ಮಾನಸಾಂತರ ಪಡುತ್ತಿದ್ದರು. ಆದರೆ ನ್ಯಾಯ ತೀರ್ಪಿನಲ್ಲಿ ನಿಮ್ಮ ಗತಿಗಿಂತಲೂ ತೂರ್ ಸೀದೋನ್ಗಳ ಗತಿಯು ಹೆಚ್ಚಾಗಿ ತಾಳಬಹು ದಾಗಿರುವದು. ಆಕಾಶದವರೆಗೂ ಎತ್ತಲ್ಪಟ್ಟಿರುವ ಕಪೆರ್ನೌಮೇ, ನೀನು ಕೆಳಗೆ ಪಾತಾಳಕ್ಕೆ ದೊಬ್ಬ ಲ್ಪಡುವಿ. ನಿಮ್ಮ ಮಾತನ್ನು ಕೇಳುವವನು ನನ್ನ ಮಾತನ್ನು ಕೇಳುತ್ತಾನೆ; ನಿಮ್ಮನ್ನು ತಿರಸ್ಕರಿಸುವವನು ನನ್ನನ್ನು ತಿರಸ್ಕರಿಸುತ್ತಾನೆ; ನನ್ನನ್ನು ತಿರಸ್ಕರಿಸುವವನು ನನ್ನನ್ನು ಕಳುಹಿಸಿದಾತನನ್ನು ತಿರಸ್ಕರಿಸುತ್ತಾನೆ ಅಂದನು.
- James 2:17–26 ಯಾಕೋಬನು 2:17–26ಹಾಗೆಯೇ ಕ್ರಿಯೆಗಳಿಲ್ಲದಿದ್ದರೆ ನಂಬಿಕೆಯು ಒಂಟಿಯಾಗಿದ್ದು ಸತ್ತದ್ದಾಗಿದೆ. ಹೌದು, ಒಬ್ಬ ಮನುಷ್ಯನು--ನಿನಗೆ ನಂಬಿಕೆಯುಂಟು, ನನಗೆ ಕ್ರಿಯೆಗಳುಂಟು; ನೀನು ಕ್ರಿಯೆಗಳಿಲ್ಲದೆ ನಿನ್ನ ನಂಬಿಕೆ ಯನ್ನು ನನಗೆ ತೋರಿಸು; ನಾನು ನನ್ನ ಕ್ರಿಯೆಗಳ ಮುಖಾಂತರ ನನ್ನ ನಂಬಿಕೆಯನ್ನು ನಿನಗೆ ತೋರಿಸುತ್ತೇನೆ ಎಂದು ಹೇಳಬಹುದು. ದೇವರು ಒಬ್ಬನೇ ಎಂದು ನೀನು ನಂಬುವವನು, ನೀನು ಒಳ್ಳೇದು ಮಾಡುತ್ತೀ. ದೆವ್ವಗಳು ಕೂಡ ಹಾಗೆಯೇ ನಂಬಿ ನಡುಗುತ್ತವೆ. ಆದರೆ ಓ ವ್ಯರ್ಥವಾದವನೇ, ಕ್ರಿಯೆಗಳಿಲ್ಲದ ನಂಬಿಕೆಯು ಸತ್ತದ್ದೆಂದು ತಿಳಿದುಕೊಳ್ಳಲು ನಿನಗೆ ಇಷ್ಟವಿದೆಯೋ? ನಮ್ಮ ಪಿತೃವಾದ ಅಬ್ರಹಾಮನು ತನ್ನ ಮಗನಾದ ಇಸಾಕನನ್ನು ಯಜ್ಞವೇದಿಯ ಮೇಲೆ ಅರ್ಪಿಸಿದಾಗ ನೀತಿ ನಿರ್ಣಯವನ್ನು ಹೊಂದಿದ್ದು ಕ್ರಿಯೆಗಳಿಂದಲ್ಲವೇ? ಅವನ ನಂಬಿಕೆಯು ಹೇಗೆ ತನ್ನ ಕ್ರಿಯೆಗಳೊಂದಿಗೆ ಕಾರ್ಯ ನಡಿಸಿ ಆ ಕ್ರಿಯೆ ಗಳಿಂದಲೇ ನಂಬಿಕೆಯು ಸಿದ್ಧಿಗೆ ಬಂತೆಂಬದನ್ನು ನೀನು ಕಾಣುತ್ತೀಯಲ್ಲಾ? ಹೀಗೆ--ಅಬ್ರಹಾಮನು ದೇವರನ್ನು ನಂಬಿದನು; ಆ ನಂಬಿಕೆಯು ಅವನ ಲೆಕ್ಕಕ್ಕೆ ನೀತಿಯೆಂದು ಎಣಿಸಲ್ಪಟ್ಟಿತು ಎಂಬ ಬರಹವು ಹೇಳುವಂತೆ ನೆರವೇರಿತು. ಅವನು ದೇವರ ಸ್ನೇಹಿತ ನೆಂದು ಕರೆಯಲ್ಪಟ್ಟನು. ಹೀಗೆ ಮನುಷ್ಯನು ಕ್ರಿಯೆ ಗಳಿಂದ ನೀತಿವಂತನೆಂದು ನಿರ್ಣಯಿಸಲ್ಪಡುತ್ತಾನೆ ಹೊರತು ಬರೀ ನಂಬಿಕೆಯಿಂದಲ್ಲವೆಂದು ನೀವು ನೋಡುತ್ತೀರಿ. ಅದೇ ರೀತಿಯಾಗಿ ಸೂಳೆಯಾದ ರಹಾಬಳು ಸಹ ಗೂಢಚಾರರನ್ನು ಸೇರಿಸಿಕೊಂಡು ಬೇರೆ ದಾರಿಯಿಂದ ಅವರನ್ನು ಕಳುಹಿಸಿದ್ದರಲ್ಲಿ ಕ್ರಿಯೆಗಳಿಂದಲೇ ನೀತಿ ನಿರ್ಣಯವನ್ನು ಹೊಂದ ಲಿಲ್ಲವೇ?ಆತ್ಮವಿಲ್ಲದ ದೇಹವು ಸತ್ತದ್ದಾಗಿರುವ ಪ್ರಕಾರವೇ ಕ್ರಿಯೆಗಳಿಲ್ಲದ ನಂಬಿಕೆಯೂ ಸತ್ತದ್ದೇ. ಆತ್ಮವಿಲ್ಲದ ದೇಹವು ಸತ್ತದ್ದಾಗಿರುವ ಪ್ರಕಾರವೇ ಕ್ರಿಯೆಗಳಿಲ್ಲದ ನಂಬಿಕೆಯೂ ಸತ್ತದ್ದೇ.