Luke · chapter 7 · verse 1
Luke 7:1 in Kannada
ತನ್ನ ಎಲ್ಲಾ ಮಾತುಗಳನ್ನು ಜನರೆಲ್ಲರೂ ಕೇಳುವಂತೆ ಹೇಳಿ ಮುಗಿಸಿದ ಮೇಲೆ ಆತನು ಕಪೆರ್ನೌಮಿನಲ್ಲಿ ಪ್ರವೇಶಿಸಿದನು.
Tanna ellaa maatugalannu janarellaroo keluvante heli mugisida mele aatanu kapernauminalli praveshisidanu.
Luke 7:1 in English
- King James Version (KJV)
- Now when he had ended all his sayings in the audience of the people, he entered into Capernaum.
- World English Bible (WEB)
- After he had finished speaking in the hearing of the people, he entered into Capernaum.
- American Standard Version (ASV)
- After he had ended all his sayings in the ears of the people, he entered into Capernaum.
- Bible in Basic English (BBE)
- After he had come to the end of all his words in the hearing of the people, he went into Capernaum.
- Darby Translation (DBY)
- And when he had completed all his words in the hearing of the people, he entered into Capernaum.
- Webster's Bible (WBS)
- Now when he had ended all his sayings in the audience of the people, he entered into Capernaum.
- Young's Literal Translation (YLT)
- And when he completed all his sayings in the ears of the people, he went into Capernaum;
Read in context
- 1ತನ್ನ ಎಲ್ಲಾ ಮಾತುಗಳನ್ನು ಜನರೆಲ್ಲರೂ ಕೇಳುವಂತೆ ಹೇಳಿ ಮುಗಿಸಿದ ಮೇಲೆ ಆತನು ಕಪೆರ್ನೌಮಿನಲ್ಲಿ ಪ್ರವೇಶಿಸಿದನು.
- 2ಆಗ ಒಬ್ಬ ಶತಾಧಿಪತಿಗೆ ಪ್ರಿಯನಾಗಿದ್ದ ಆಳು ಅಸ್ವಸ್ಥನಾಗಿ ಸಾಯುವಹಾಗಿದ್ದನು.
- 3ಅವನು ಯೇಸುವಿನ ವಿಷಯ ಕೇಳಿದಾಗ ಆತನು ಬಂದು ತನ್ನ ಆಳನ್ನು ಗುಣ ಮಾಡಬೇಕೆಂದು ಬೇಡಿಕೊಳ್ಳುವಂತೆ ಯೆಹೂದ್ಯರ ಹಿರಿಯರನ್ನು ಆತನ ಬಳಿಗೆ ಕಳುಹಿಸಿದನು.
Cross references
- Matthew 8:5–13 ಮತ್ತಾಯನು 8:5–13ಇದಾದ ಮೇಲೆ ಯೇಸು ಕಪೆರ್ನೌಮಿನಲ್ಲಿ ಪ್ರವೇಶಿಸಿದಾಗ ಒಬ್ಬ ಶತಾಧಿಪತಿಯು ಆತನ ಬಳಿಗೆ ಬಂದು-- ಕರ್ತನೇ, ನನ್ನ ಸೇವಕನು ಪಾರ್ಶ್ವವಾಯು ರೋಗದಿಂದ ಬಹಳವಾಗಿ ಸಂಕಟಪಡುತ್ತಾ ಮನೆ ಯಲ್ಲಿ ಮಲಗಿದ್ದಾನೆ ಎಂದು ಹೇಳಿ ಬೇಡಿಕೊಂಡನು. ಯೇಸು ಅವನಿಗೆ--ನಾನು ಬಂದು ಅವನನ್ನು ಸ್ವಸ್ಥಮಾಡುತ್ತೇನೆ ಅಂದನು. ಅದಕ್ಕೆ ಶತಾಧಿಪತಿಯು ಪ್ರತ್ಯುತ್ತರವಾಗಿ--ಕರ್ತನೇ, ನೀನು ನನ್ನ ಮನೆ ಯೊಳಗೆ ಬರುವದಕ್ಕೆ ನಾನು ಯೋಗ್ಯನಲ್ಲ; ಆದರೆ ನೀನು ಒಂದು ಮಾತು ಮಾತ್ರ ಹೇಳು, ಆಗ ನನ್ನ ಸೇವಕನು ಸ್ವಸ್ಥನಾಗುವನು. ಯಾಕಂದರೆ ನಾನು ಅಧಿಕಾರದ ಕೆಳಗಿರುವ ಒಬ್ಬ ಮನುಷ್ಯನಾಗಿದ್ದರೂ ನನ್ನ ಅಧೀನದಲ್ಲಿ ಸೈನಿಕರಿದ್ದಾರೆ; ಮತ್ತು ನಾನು ಇವನಿಗೆ--ಹೋಗು ಅಂದರೆ ಇವನು ಹೋಗುತ್ತಾನೆ; ಮತ್ತೊಬ್ಬನಿಗೆ--ಬಾ ಅಂದರೆ ಅವನು ಬರುತ್ತಾನೆ; ಮತ್ತು ನನ್ನ ಸೇವಕನಿಗೆ--ಇದನ್ನು ಮಾಡು ಎಂದು ಹೇಳಿದರೆ ಅವನು ಮಾ ಯೇಸು ಅದನ್ನು ಕೇಳಿ ಆಶ್ಚರ್ಯಪಟ್ಟು ತನ್ನ ಹಿಂದೆ ಬರುತ್ತಿದ್ದವರಿಗೆ--ನಾನು ಇಂಥಾ ದೊಡ್ಡ ನಂಬಿಕೆಯನ್ನು ಕಾಣಲಿಲ್ಲ, ಇಸ್ರಾಯೇಲಿನಲ್ಲಿಯೂ ಕಾಣಲಿಲ್ಲ ಎಂದು ನಿಮಗೆ ನಿಜವಾಗಿ ಹೇಳುತ್ತೇನೆ ಅಂದನು. ನಾನು ನಿಮಗೆ ಹೇಳುವದೇನಂದರೆ--ಬಹಳ ಜನರು ಪೂರ್ವದಿಂದಲೂ ಪಶ್ಚಿಮದಿಂದಲೂ ಬಂದು ಪರ ಲೋಕರಾಜ್ಯದಲ್ಲಿ ಅಬ್ರಹಾಮ್ ಇಸಾಕ್ ಯಾಕೋಬ್ ಅವರೊಂದಿಗೆ ಕೂತುಕೊಳ್ಳುವರು. ಆದರೆ ರಾಜ್ಯದ ಮಕ್ಕಳು ಹೊರಗೆ ಕತ್ತಲೆಯಲ್ಲಿ ದೊಬ್ಬಲ್ಪಡುವರು; ಅಲ್ಲಿ ಗೋಳಾಟವೂ ಹಲ್ಲು ಕಡಿಯೋಣವೂ ಇರುವವು. ಯೇಸು ಆ ಶತಾಧಿಪತಿಗೆ--ಹೋಗು, ನೀನು ನಂಬಿದಂತೆಯೇ ನಿನಗಾಗಲಿ ಎಂದು ಹೇಳಿದನು. ಮತ್ತು ಅವನ ಸೇವಕನು ಅದೇ ಗಳಿಗೆಯಲ್ಲಿ ಸ್ವಸ್ಥನಾದನು.
- Luke 7:1–10 ಲೂಕನು 7:1–10ತನ್ನ ಎಲ್ಲಾ ಮಾತುಗಳನ್ನು ಜನರೆಲ್ಲರೂ ಕೇಳುವಂತೆ ಹೇಳಿ ಮುಗಿಸಿದ ಮೇಲೆ ಆತನು ಕಪೆರ್ನೌಮಿನಲ್ಲಿ ಪ್ರವೇಶಿಸಿದನು. ಆಗ ಒಬ್ಬ ಶತಾಧಿಪತಿಗೆ ಪ್ರಿಯನಾಗಿದ್ದ ಆಳು ಅಸ್ವಸ್ಥನಾಗಿ ಸಾಯುವಹಾಗಿದ್ದನು. ಅವನು ಯೇಸುವಿನ ವಿಷಯ ಕೇಳಿದಾಗ ಆತನು ಬಂದು ತನ್ನ ಆಳನ್ನು ಗುಣ ಮಾಡಬೇಕೆಂದು ಬೇಡಿಕೊಳ್ಳುವಂತೆ ಯೆಹೂದ್ಯರ ಹಿರಿಯರನ್ನು ಆತನ ಬಳಿಗೆ ಕಳುಹಿಸಿದನು. ಅವರು ಯೇಸುವಿನ ಬಳಿಗೆ ಬಂದು ಆತನಿಗೆ ಒತ್ತಾಯ ಮಾಡಿ--ನೀನು (ಅವನ ಆಳನ್ನು) ಸ್ವಸ್ಥಮಾಡಬೇಕು; ಯಾಕಂದರೆ ಅವನು ಯೋಗ್ಯನಾಗಿದ್ದಾನೆ. ಅವನು ನಮ್ಮ ಜನಾಂಗವನ್ನು ಪ್ರೀತಿಸುವದಲ್ಲದೆ ನಮಗಾಗಿ ಒಂದು ಸಭಾಮಂದಿರವನ್ನು ಕಟ್ಟಿಸಿದ್ದಾನೆ ಎಂದು ಬೇಡಿಕೊಂಡರು. ಆಗ ಯೇಸು ಅವರೊಂದಿಗೆ ಹೋದನು. ಆತನು ಮನೆಗೆ ಇನ್ನೂ ಸ್ವಲ್ಪ ದೂರ ಇರುವಾಗ ಶತಾಧಿಪತಿಯು ಸ್ನೇಹಿತರನ್ನು ಆತನ ಬಳಿಗೆ ಕಳುಹಿಸಿ ಆತನಿಗೆ--ಕರ್ತನೇ, ನಿನ್ನನ್ನು ತೊಂದರೆಪಡಿಸಿ ಕೊಳ್ಳಬೇಡ; ಯಾಕಂದರೆ ನೀನು ನನ್ನ ಮನೆಯಲ್ಲಿ ಪ್ರವೇಶಿಸುವದಕ್ಕೆ ನಾನು ಯೋಗ್ಯನಲ್ಲ. ಇಲ್ಲವೆ ನಾನೂ ನಿನ್ನ ಬಳಿಗೆ ಬರುವದಕ್ಕೆ ಯೋಗ್ಯನಲ್ಲವೆಂದು ಎಣಿಸಿಕೊಂಡಿದ್ದೇನೆ; ಆದರೆ ನೀನು ಒಂದು ಮಾತು ಹೇಳು, ಆಗ ನನ್ನ ಆಳು ಗುಣಹೊಂದುವನು; ನಾನು ಸಹ ಅಧಿಕಾರದ ಕೆಳಗಿರುವವನು; ನನ್ನ ಅಧೀನದಲ್ಲಿಯೂ ಸೈನಿಕರಿದ್ದಾರೆ ಮತ್ತು ನಾನು ಒಬ್ಬನಿಗೆ--ಹೋಗು ಅಂದರೆ ಅವನು ಹೋಗುತ್ತಾನೆ; ಮತ್ತೊಬ್ಬನಿಗೆ--ಬಾ ಅಂದರೆ ಅವನು ಬರುತ್ತಾನೆ; ನನ್ನ ಸೇವಕನಿಗೆ--ಇದನ್ನು ಮಾಡು ಅಂದರೆ ಅವನು ಅದನ್ನು ಮಾಡುತ್ತಾನೆ ಎಂದು ಹೇಳಿ ಕಳುಹಿಸಿ ಯೇಸು ಇವುಗಳನ್ನು ಕೇಳಿದಾಗ ಅವನ ವಿಷಯದಲ್ಲಿ ಆಶ್ಚರ್ಯಪಟ್ಟು ತಿರುಗಿಕೊಂಡು ತನ್ನನ್ನು ಹಿಂಬಾಲಿಸು ತ್ತಿದ್ದವರಿಗೆ--ಇಂಥ ದೊಡ್ಡ ನಂಬಿಕೆಯನ್ನು ನಾನು ಇಸ್ರಾಯೇಲಿನಲ್ಲಿ ಸಹ ಕಾಣಲಿಲ್ಲವೆಂದು ನಿಮಗೆ ಹೇಳುತ್ತೇನೆ ಅಂದನು. ಕಳುಹಿಸಲ್ಪಟ್ಟವರು ಮನೆಗೆ ಹಿಂದಿರುಗಿದಾಗ ಅಸ್ವಸ್ಥನಾಗಿದ್ದ ಆ ಆಳು ಸ್ವಸ್ಥನಾಗಿರುವದನ್ನು ಕಂಡರು.
- Matthew 7:28–29 ಮತ್ತಾಯನು 7:28–29ಯೇಸು ಈ ಮಾತುಗಳನ್ನು ಹೇಳಿ ಮುಗಿಸಿದ ತರುವಾಯ ಜನರು ಆತನ ಬೋಧನೆಗೆ ಆಶ್ಚರ್ಯ ಪಟ್ಟರು.ಯಾಕಂದರೆ ಆತನು ಶಾಸ್ತ್ರಿಗಳಂತೆ ಬೋಧಿಸದೆ ಆಧಿಕಾರವಿದ್ದವನಂತೆ ಅವರಿಗೆ ಬೋಧಿಸಿದನು. ಯಾಕಂದರೆ ಆತನು ಶಾಸ್ತ್ರಿಗಳಂತೆ ಬೋಧಿಸದೆ ಆಧಿಕಾರವಿದ್ದವನಂತೆ ಅವರಿಗೆ ಬೋಧಿಸಿದನು.