Luke · chapter 7 · verse 2
Luke 7:2 in Kannada
ಆಗ ಒಬ್ಬ ಶತಾಧಿಪತಿಗೆ ಪ್ರಿಯನಾಗಿದ್ದ ಆಳು ಅಸ್ವಸ್ಥನಾಗಿ ಸಾಯುವಹಾಗಿದ್ದನು.
Aaga obba shataadhipatige priyanaagidda aalu asvasthanaagi saayuvahaagiddanu.
Luke 7:2 in English
- King James Version (KJV)
- And a certain centurion’s servant, who was dear unto him, was sick, and ready to die.
- World English Bible (WEB)
- A certain centurion’s servant, who was dear to him, was sick and at the point of death.
- American Standard Version (ASV)
- And a certain centurion’s servant, who was dear unto him, was sick and at the point of death.
- Bible in Basic English (BBE)
- And a certain captain had a servant who was very dear to him; this servant was ill and near to death.
- Darby Translation (DBY)
- And a certain centurion's bondman who was dear to him was ill and about to die;
- Webster's Bible (WBS)
- And a certain centurion's servant, who was dear to him, was sick, and ready to die.
- Young's Literal Translation (YLT)
- and a certain centurion's servant being ill, was about to die, who was much valued by him,
Read in context
- 1ತನ್ನ ಎಲ್ಲಾ ಮಾತುಗಳನ್ನು ಜನರೆಲ್ಲರೂ ಕೇಳುವಂತೆ ಹೇಳಿ ಮುಗಿಸಿದ ಮೇಲೆ ಆತನು ಕಪೆರ್ನೌಮಿನಲ್ಲಿ ಪ್ರವೇಶಿಸಿದನು.
- 2ಆಗ ಒಬ್ಬ ಶತಾಧಿಪತಿಗೆ ಪ್ರಿಯನಾಗಿದ್ದ ಆಳು ಅಸ್ವಸ್ಥನಾಗಿ ಸಾಯುವಹಾಗಿದ್ದನು.
- 3ಅವನು ಯೇಸುವಿನ ವಿಷಯ ಕೇಳಿದಾಗ ಆತನು ಬಂದು ತನ್ನ ಆಳನ್ನು ಗುಣ ಮಾಡಬೇಕೆಂದು ಬೇಡಿಕೊಳ್ಳುವಂತೆ ಯೆಹೂದ್ಯರ ಹಿರಿಯರನ್ನು ಆತನ ಬಳಿಗೆ ಕಳುಹಿಸಿದನು.
- 4ಅವರು ಯೇಸುವಿನ ಬಳಿಗೆ ಬಂದು ಆತನಿಗೆ ಒತ್ತಾಯ ಮಾಡಿ--ನೀನು (ಅವನ ಆಳನ್ನು) ಸ್ವಸ್ಥಮಾಡಬೇಕು; ಯಾಕಂದರೆ ಅವನು ಯೋಗ್ಯನಾಗಿದ್ದಾನೆ.
Cross references
- John 4:46–47 ಯೋಹಾನನು 4:46–47ಹೀಗೆ ಯೇಸು ತಾನು ನೀರನ್ನು ದ್ರಾಕ್ಷಾರಸ ವನ್ನಾಗಿ ಮಾಡಿದ ಗಲಿಲಾಯದ ಕಾನಾನಿಗೆ ತಿರಿಗಿ ಬಂದನು. ಆಗ ಕಪೆರ್ನೌಮಿನಲ್ಲಿದ್ದ ಒಬ್ಬ ಪ್ರಧಾನನ ಮಗನು ಅಸ್ವಸ್ಥನಾಗಿದ್ದನು. ಯೇಸು ಯೂದಾಯ ದಿಂದ ಗಲಿಲಾಯಕ್ಕೆ ಬಂದನೆಂದು ಅವನು ಕೇಳಿದಾಗ ಆತನ ಬಳಿಗೆ ಹೋಗಿ ತಾನು ಬಂದು ತನ್ನ ಮಗನನ್ನು ಸ್ವಸ್ಥಪಡಿಸಬೇಕೆಂದು ಆತನನ್ನು ಬೇಡಿಕೊಂಡನು; ಯಾಕಂದರೆ ಅವನು ಸಾಯುವ ಹಾಗಿದ್ದನು.
- Genesis 24:27 ಆದಿಕಾಂಡ 24:27ನನ್ನ ಯಜಮಾನನಾದ ಅಬ್ರಹಾಮನ ಕರ್ತನಾದ ದೇವರು ಸ್ತುತಿಹೊಂದಲಿ; ಆತನು ನನ್ನ ಯಜಮಾನನನ್ನು ಅನಾಥನನ್ನಾಗಿ ಬಿಡದೆ ತನ್ನ ಕೃಪೆಯನ್ನೂ ಸತ್ಯವನ್ನೂ ತೋರಿಸಿದ್ದಾನೆ. ನಾನು ಮಾರ್ಗದಲ್ಲಿರುವಾಗ ಕರ್ತನು ನನ್ನನ್ನು ನನ್ನ ಯಜಮಾನನ ಸಹೋದರನ ಮನೆಗೆ ನಡಿಸಿದ್ದಾನೆ ಅಂದನು.
- 2 Kings 5:2–3 2 ಅರಸುಗಳು 5:2–3ಅರಾಮ್ಯರು ಗುಂಪುಗುಂಪಾಗಿ ಹೊರಟು ಇಸ್ರಾಯೇಲ್ ದೇಶದಿಂದ ಒಬ್ಬ ಹುಡುಗಿಯನ್ನು ಸೆರೆಯಾಗಿ ಹಿಡುಕೊಂಡು ಬಂದರು. ಅವಳು ನಾಮಾ ನನ ಹೆಂಡತಿಗೆ ಸೇವಕಳಾಗಿದ್ದಳು. ಅವಳು ತನ್ನ ಯಜಮಾನಿಗೆ--ನನ್ನ ದಣಿಯು ಸಮಾರ್ಯದಲ್ಲಿರುವ ಪ್ರವಾದಿಯ ಬಳಿಯಲ್ಲಿರುತ್ತಿದ್ದರೆ ಅವನು ಇವನ ಕುಷ್ಠರೋಗವನ್ನು ವಾಸಿಮಾಡುತ್ತಿದ್ದನು ಅಂದಳು.
- Luke 23:47 ಲೂಕನು 23:47ಆಗ ಶತಾಧಿ ಪತಿಯು ನಡೆದದ್ದನ್ನು ನೋಡಿ--ನಿಶ್ಚಯವಾಗಿ ಈತನು ನೀತಿವಂತನಾಗಿದ್ದನು ಎಂದು ಹೇಳಿ ದೇವರನ್ನು ಮಹಿಮೆಪಡಿಸಿದನು.
- Matthew 27:54 ಮತ್ತಾಯನು 27:54ಆಗ ಶತಾಧಿಪತಿಯು ಮತ್ತು ಅವನ ಸಂಗಡ ಯೇಸುವನ್ನು ಕಾಯುತ್ತಿದ್ದವರು ಭೂಕಂಪವನ್ನೂ ಬೇರೆ ಸಂಭವಗಳು ನಡೆದದ್ದನ್ನೂ ನೋಡಿ ಬಹಳವಾಗಿ ಭಯಪಟ್ಟು-- ನಿಜವಾಗಿಯೂ ಈತನು ದೇವಕುಮಾರನಾಗಿದ್ದನು ಅಂದರು
- Genesis 39:4–6 ಆದಿಕಾಂಡ 39:4–6ಆದದರಿಂದ ಯೋಸೇಫನು ಅವನ ದೃಷ್ಟಿಯಲ್ಲಿ ಕೃಪೆಹೊಂದಿ ಅವನ ಸೇವೆಮಾಡಿದನು. ಪೋಟೀಫರನು ಅವನನ್ನು ತನ್ನ ಮನೆಯ ಮೇಲೆ ಮೇಲ್ವಿಚಾರಕನನ್ನಾಗಿ ಮಾಡಿ ತನಗಿದ್ದದ್ದನ್ನೆಲ್ಲಾ ಅವನ ಕೈಗೆ ಒಪ್ಪಿಸಿದನು. ಅವನನ್ನು ಮನೆಯಲ್ಲಿಯೂ ತನಗಿದ್ದ ಎಲ್ಲಾದರ ಮೇಲೆಯೂ ಮೇಲ್ವಿಚಾರಕನನ್ನಾಗಿ ಮಾಡಿದಂದಿನಿಂದ ಕರ್ತನು ಆ ಐಗುಪ್ತದವನ ಮನೆಯನ್ನು ಯೋಸೇಫನ ನಿಮಿತ್ತ ವಾಗಿ ಆಶೀರ್ವದಿಸಿದನು. ಮನೆಯಲ್ಲಿಯೂ ಹೊಲ ದಲ್ಲಿಯೂ (ಅವನಿಗಿದ್ದ) ಎಲ್ಲಾದರ ಮೇಲೆಯೂ ಕರ್ತನ ಆಶೀರ್ವಾದವಿತ್ತು. ಹೀಗಿರುವದರಿಂದ ಅವನು ತನಗಿದ್ದದ್ದನ್ನೆಲ್ಲಾ ಯೋಸೇಫನಿಗೆ ಒಪ್ಪಿಸಿ ತಾನು ತಿನ್ನುವ ರೊಟ್ಟಿಯ ವಿಷಯದಲ್ಲಿ ಹೊರತು ಬೇರೆ ಯಾವದರ ವಿಷಯದಲ್ಲೂ ಚಿಂತಿಸಲಿಲ್ಲ. ಯೋಸೇಫನು ಸುರೂಪಿಯೂ ಸೌಂದರ್ಯವಂತನೂ ಆಗಿದ್ದನು.
- Genesis 24:2–14 ಆದಿಕಾಂಡ 24:2–14ಆಗ ಅಬ್ರಹಾಮನು ತನಗೆ ಇದ್ದವುಗಳ ಮೇಲೆಲ್ಲಾ ಆಡಳಿತ ಮಾಡುವ ತನ್ನ ಮನೆಯ ಹಿರೀ ಸೇವಕನಿಗೆ ಹೇಳಿದ್ದೇ ನಂದರೆ--ನಿನ್ನ ಕೈಯನ್ನು ನನ್ನ ತೊಡೆಯ ಕೆಳಗೆ ಇಡು; ನೀನು ನನ್ನ ಸುತ್ತಲೂ ವಾಸವಾಗಿರುವ ಕಾನಾನ್ಯರ ಕುಮಾರ್ತೆಯರೊಳಗಿಂದ ನನ್ನ ಮಗನಿಗೆ ಹೆಂಡತಿಯನ್ನು ತಕ್ಕೊಳ್ಳುವದಿಲ್ಲವೆಂದೂ ನನ್ನ ದೇಶಕ್ಕೂ ಬಂಧುಗಳ ಬಳಿಗೂ ಹೋಗಿ ನನ್ನ ಮಗನಾದ ಇಸಾಕನಿಗೆ ಹೆಂಡತಿಯನ್ನು ತೆಗೆದುಕೊಳ್ಳ ಬೇಕೆಂದೂ ಪರಲೋಕ ಭೂಲೋಕಗಳ ದೇವರಾಗಿ ರುವ ಕರ್ತನ ಮೇಲೆ ನೀನು ಆಣೆಯಿಡುವಂತೆ ಮಾಡುತ್ತೇನೆ ಅಂದನು. ಆ ಸೇವಕನು ಅವನಿಗೆ-- ಒಂದು ವೇಳೆ ನನ್ನ್ನ ಹಿಂದೆ ಈ ದೇಶಕ್ಕೆ ಬರುವಹಾಗೆ ಆ ಕನ್ಯೆಗೆ ಮನಸ್ಸಿಲ್ಲದೆ ಹೋದರೆ ನೀನು ಬಿಟ್ಟುಬಂದ ದೇಶಕ್ಕೆ ನಿನ್ನ ಮಗನನ್ನು ತಿರಿಗಿ ಕರಕೊಂಡು ಹೋಗ ಬೇಕೋ ಅಂದನು. ಅಬ್ರಹಾಮನು ಅವನಿಗೆ-- ನನ್ನ ಮಗನನ್ನು ತಿರಿಗಿ ಅಲ್ಲಿಗೆ ಕರಕೊಂಡು ಹೋಗಲೇ ಬಾರದು. ನನ್ನ ತಂದೆಯ ಮನೆಯಿಂದಲೂ ಬಂಧು ಗಳ ದೇಶದೊಳಗಿಂದಲೂ ನನ್ನನ್ನು ಹೊರಗೆ ಕರೆದು ನನ್ನ ಸಂಗಡ ಮಾತನಾಡಿ--ನಿನ್ನ ಸಂತಾನಕ್ಕೆ ಈ ದೇಶವನ್ನು ಕೊಡುವೆನು ಎಂದು ನನಗೆ ಪ್ರಮಾಣ ಮಾಡಿದ ಪರಲೋಕದ ದೇವರಾದ ಕರ್ತನು ಅಲ್ಲಿಂದ ನನ್ನ ಮಗನಿಗೆ ಹೆಂಡತಿಯನ್ನು ತೆಗೆದುಕೊಳ್ಳುವ ಹಾಗೆ ತನ್ನ ದೂತನನ್ನು ನಿನ್ನ ಮುಂದೆ ಕಳುಹಿಸುವನು. ಆದರೆ ನಿನ್ನ ಹಿಂದೆ ಬರುವದಕ್ಕೆ ಆ ಕನ್ಯೆಗೆ ಮನಸ್ಸಿಲ್ಲದಿದ್ದರೆ ನನಗೆ ಮಾಡಿದ ಈ ಪ್ರಮಾಣದಿಂದ ನೀನು ಬಿಡುಗಡೆಯಾಗಿರುವಿ. ನನ್ನ ಮಗನನ್ನು ಮಾತ್ರ ಅಲ್ಲಿಗೆ ತಿರಿಗಿ ಕರಕೊಂಡು ಹೋಗಬಾರದು ಅಂದನು. ಆಗ ಆ ಸೇವಕನು ತನ್ನ ಕೈಯನ್ನು ತನ್ನ ಯಜಮಾನ ನಾದ ಅಬ್ರಹಾಮನ ತೊಡೆಯ ಕೆಳಗೆ ಇಟ್ಟು ಆ ವಿಷಯದಲ್ಲಿ ಅವನಿಗೆ ಪ್ರಮಾಣ ಮಾಡಿದನು. ಆಗ ಆ ಸೇವಕನು ತನ್ನ ಯಜಮಾನನ ಒಂಟೆಗಳಲ್ಲಿ ಹತ್ತು ಒಂಟೆಗಳನ್ನು ತೆಗೆದುಕೊಂಡು ಹೋದನು. ಅವನ ಯಜಮಾನನ ಎಲ್ಲಾ ಆಸ್ತಿಯು ಅವನ ಕೈಯಲ್ಲಿ ಇತ್ತು. ಅವನು ಎದ್ದು ನಾಹೋರನ ಪಟ್ಟಣವಾದ ಮೆಸೊಪೊತಾಮ್ಯಕ್ಕೆ ಹೋದನು. ಸಂಜೆಯಾದಾಗ ನೀರಿಗಾಗಿ ಸ್ತ್ರೀಯರು ಪಟ್ಟಣದ ಹೊರಗೆ ಬರುವ ಸಮಯದಲ್ಲಿ ಬಾವಿಯ ಬಳಿಯಲ್ಲಿ ಒಂಟೆಗಳು ಮೊಣಕಾಲೂರಿ ಮಲಗುವಂತೆ ಅವನು ಮಾಡಿದನು. ಆಗ ಅವನು--ನನ್ನ ಯಜಮಾನನಾದ ಅಬ್ರಹಾ ಮನ ದೇವರಾಗಿರುವ ಕರ್ತನೇ, ಈಹೊತ್ತು ನನಗೆ ತ್ವರೆಯಾಗಿ ಕಾರ್ಯಕೈಗೂಡುವಂತೆ ಮಾಡಿ ನನ್ನ ಯಜಮಾನನಾದ ಅಬ್ರಹಾಮನಿಗೆ ದಯೆ ತೋರಿಸು. ಇಗೋ, ನಾನು ನೀರಿನ ಬಾವಿಯ ಬಳಿಯಲ್ಲಿ ನಿಂತುಕೊಂಡಿದ್ದೇನೆ; ಊರಿನ ಜನರ ಕುಮಾರ್ತೆಯರು ನೀರು ಸೇದುವದಕ್ಕೆ ಬರುತ್ತಾರೆ. ನಾನು ಯಾವ ಹುಡುಗಿಗೆ--(ನೀರು) ಕುಡಿಯುವ ಹಾಗೆ ನಿನ್ನ ಕೊಡವನ್ನು ಇಳಿಸು ಎಂದು ಕೇಳಿ ಕೊಂಡಾಗ --ನೀನು ಕುಡಿ, ನಿನ್ನ ಒಂಟೆಗಳಿಗೆ ಸಹ ಕುಡಿಯುವದಕ್ಕೆ ಕೊಡುತ್ತೇನೆ ಎಂದು ಹೇಳುವಳೋ ಆಕೆಯನ್ನೇ ನೀನು ನಿನ್ನ ಸೇವಕನಾದ ಇಸಾಕನಿಗೆ ನೇಮಕ ಮಾಡಿದ್ದಾಗಿರಲಿ. ಇದರಿಂದ ನೀನು ನನ್ನ ಯಜಮಾನನಿಗೆ ದಯೆ ತೋರಿಸಿದ್ದೀ ಎಂದು ನಾನು ತಿಳುಕೊಳ್ಳುವೆನು ಎಂದು ಬೇಡಿಕೊಂಡನು.
- Luke 8:42 ಲೂಕನು 8:42ಯಾಕಂದರೆ ಅವನಿ ಗಿದ್ದ ಹೆಚ್ಚು ಕಡಿಮೆ ಹನ್ನೆರಡು ವರುಷದವಳಾದ ಒಬ್ಬಳೇ ಮಗಳು ಸಾಯುವಹಾಗಿದ್ದಳು. ಆದರೆ ಆತನು ಹೋಗುತ್ತಿದ್ದಾಗ ಜನರು ಆತನನ್ನು ನೂಕಾ ಡುತ್ತಿದ್ದರು.
- Job 31:5 ಯೋಬನು 31:5ನಾನು ವ್ಯರ್ಥವಾಗಿ ನಡೆದುಕೊಂಡಿದ್ದರೆ ಮೋಸಕ್ಕೆ ನನ್ನ ಕಾಲು ತ್ವರೆಪಟ್ಟರೆ
- Proverbs 29:21 ಜ್ಞಾನೋಕ್ತಿಗಳು 29:21ಬಾಲ್ಯದಿಂದ ತನ್ನ ಸೇವಕನನ್ನು ಕೋಮಲವಾಗಿ ಸಾಕುವವನು ತರುವಾಯ ತನಗೆ ಮಗನಂತೆ ಆಗುವನು.
- John 11:2–3 ಯೋಹಾನನು 11:2–3(ಕರ್ತನಿಗೆ ತೈಲವನ್ನು ಹಚ್ಚಿ ತನ್ನ ತಲೇಕೂದಲಿನಿಂದ ಆತನ ಪಾದಗಳನ್ನು ಒರಸಿದ ಈ ಮರಿಯಳ ಸಹೋ ದರನಾದ ಲಾಜರನು ಅಸ್ವಸ್ಥನಾಗಿದ್ದನು). ಆದದ ರಿಂದ ಅವನ ಸಹೋದರಿಯರು--ಕರ್ತನೇ, ಇಗೋ, ನೀನು ಪ್ರೀತಿಮಾಡುತ್ತಿರುವವನು ಅಸ್ವಸ್ಥನಾಗಿದ್ದಾನೆ ಎಂದು ಆತನಿಗೆ ಹೇಳಿಕಳುಹಿಸಿದರು.