Mark · chapter 6 · verse 7
Mark 6:7 in Kannada
ಆತನು ಹನ್ನೆರಡು ಮಂದಿಯನ್ನು ತನ್ನ ಬಳಿಗೆ ಕರೆದು ಅವರಿಗೆ ಅಶುದ್ಧಾತ್ಮಗಳ ಮೇಲೆ ಅಧಿಕಾರ ಕೊಟ್ಟು ಇಬ್ಬಿಬ್ಬರನ್ನು ಕಳುಹಿಸಲಾರಂಭಿಸಿದನು.
Aatanu hanneradu mandiyannu tanna balige karedu avarige ashuddhaatmagala mele adhikaara kottu ibbibbarannu kaluhisalaarambhisidanu.
Mark 6:7 in English
- King James Version (KJV)
- And he called [unto him] the twelve, and began to send them forth by two and two; and gave them power over unclean spirits;
- World English Bible (WEB)
- He called to himself the twelve, and began to send them out two by two; and he gave them authority over the unclean spirits.
- American Standard Version (ASV)
- And he calleth unto him the twelve, and began to send them forth by two and two; and he gave them authority over the unclean spirits;
- Bible in Basic English (BBE)
- And he gave orders to the twelve, and sent them out two by two; and he gave them authority over the unclean spirits;
- Darby Translation (DBY)
- And he calls the twelve to [him]; and he began to send them out two [and] two, and gave to them power over the unclean spirits;
- Webster's Bible (WBS)
- And he calleth [to him] the twelve, and began to send them forth by two and two; and gave them power over unclean spirits;
- Young's Literal Translation (YLT)
- and he doth call near the twelve, and he began to send them forth two by two, and he was giving them power over the unclean spirits,
Read in context
- 5ಆತನು ಅಲ್ಲಿ ಕೆಲವು ರೋಗಿಗಳ ಮೇಲೆ ತನ್ನ ಕೈಗಳನ್ನಿಟ್ಟು ಸ್ವಸ್ಥಪಡಿಸಿದನೇ ಹೊರತು ಬೇರೆ ಯಾವ ಮಹತ್ಕಾರ್ಯವನ್ನೂ ಮಾಡುವದಕ್ಕಾಗಲಿಲ್ಲ.
- 6ಆತನು ಅವರ ಅಪನಂಬಿಕೆ ಯ ದೆಸೆಯಿಂದ ಆಶ್ಚರ್ಯಪಟ್ಟನು; ಮತ್ತು ಸುತ್ತಲಿನ ಹಳ್ಳಿಗಳಿಗೆ ಹೋಗಿ ಬೋಧಿಸುತ್ತಾ ಇದ್ದನು.
- 7ಆತನು ಹನ್ನೆರಡು ಮಂದಿಯನ್ನು ತನ್ನ ಬಳಿಗೆ ಕರೆದು ಅವರಿಗೆ ಅಶುದ್ಧಾತ್ಮಗಳ ಮೇಲೆ ಅಧಿಕಾರ ಕೊಟ್ಟು ಇಬ್ಬಿಬ್ಬರನ್ನು ಕಳುಹಿಸಲಾರಂಭಿಸಿದನು.
- 8ಅವರು ತಮ್ಮ ಪ್ರಯಾಣಕ್ಕಾಗಿ ಒಂದು ಕೋಲಿನ ಹೊರತು ಚೀಲವನ್ನಾಗಲೀ ರೊಟ್ಟಿಯನ್ನಾಗಲೀ ಹವ್ಮೆಾಣಿಯಲ್ಲಿ ಹಣವನ್ನಾಗಲೀ ತಕ್ಕೊಳ್ಳಬಾರ ದೆಂತಲೂ
- 9ಕೆರಗಳನ್ನು ಮೆಟ್ಟಿಕೊಂಡಿರಬೇಕೆಂದೂ ಎರಡು ಅಂಗಿಗಳನ್ನು ಹಾಕಿಕೊಳ್ಳಬಾರದೆಂದೂ ಆಜ್ಞಾ ಪಿಸಿದನು.
Cross references
- Ecclesiastes 4:9–10 ಪ್ರಸಂಗಿ 4:9–10ಒಬ್ಬನಿಗಿಂತ ಇಬ್ಬರು ಲೇಸು; ತಮ್ಮ ಪ್ರಯಾಸಕ್ಕೆ ಅವರಿಗೆ ಒಳ್ಳೆಯ ಪ್ರತಿಫಲವಿದೆ. ಒಬ್ಬನು ಬಿದ್ದರೆ ಇನ್ನೊಬ್ಬನು ತನ್ನ ಸಂಗಡಿಗನನ್ನು ಎತ್ತುವನು; ಅವನು ಒಬ್ಬೊಂಟಿಗನಾಗಿ ಬಿದ್ದರೆ ಅಯ್ಯೋ! ಅವನಿಗೆ ಸಹಾಯ ಮಾಡುವದಕ್ಕೆ ಇನ್ನೊಬ್ಬ ನಿಲ್ಲ.
- Matthew 10:1–5 ಮತ್ತಾಯನು 10:1–5ಆತನು ತನ್ನ ಹನ್ನೆರಡು ಮಂದಿ ಶಿಷ್ಯರನ್ನು ತನ್ನ ಬಳಿಗೆ ಕರೆದು ಅಶುದ್ಧಾತ್ಮಗಳನ್ನು ಬಿಡಿಸುವಂತೆಯೂ ಎಲ್ಲಾ ತರವಾದ ರೋಗವನ್ನು ಮತ್ತು ಎಲ್ಲಾ ತರವಾದ ಅಸ್ವಸ್ಥತೆಯನ್ನು ಸ್ವಸ್ಥ ಮಾಡು ವಂತೆಯೂ ಅವರಿಗೆ ಅಧಿಕಾರ ಕೊಟ್ಟನು. ಹನ್ನೆರಡು ಮಂದಿ ಅಪೊಸ್ತಲರ ಹೆಸರುಗಳು: ಮೊದಲನೆಯವನು ಪೇತ್ರನೆಂದು ಕರೆಯಲ್ಪಟ್ಟ ಸೀಮೋನ, ಅವನ ಸಹೋದರನಾದ ಅಂದ್ರೆಯ, ಜೆಬೆದಾಯನ ಮಗನಾದ ಯಾಕೋಬ ಮತ್ತು ಅವನ ಸಹೋದರನಾದ ಯೋಹಾನ, ಫಿಲಿಪ್ಪ, ಬಾರ್ತೊ ಲೊಮಾಯ, ತೋಮ, ಸುಂಕದವನಾದ ಮತ್ತಾಯ ಅಲ್ಫಾಯನ ಮಗನಾದ ಯಾಕೋಬ, ತದ್ದಾಯನೆಂಬ ಅಡ್ಡ ಹೆಸರಿನ ಲೆಬ್ಬಾಯ, ಕಾನಾನ್ಯನಾದ ಸೀಮೋನ ಮತ್ತು ಆತನನ್ನು ಹಿಡಿದುಕೊಟ್ಟ ಯೂದ ಇಸ್ಕರಿಯೋತ ಎಂಬಿವುಗಳೇ. ಯೇಸು ಈ ಹನ್ನೆರಡು ಮಂದಿಯನ್ನು ಕಳುಹಿ ಸುವಾಗ ಅವರಿಗೆ ಅಪ್ಪಣೆಕೊಟ್ಟು ಹೇಳಿದ್ದೇನಂ ದರೆ--ಅನ್ಯಜನರ ದಾರಿಯಲ್ಲಿ ಹೋಗಬೇಡಿರಿ ಮತ್ತು ಸಮಾರ್ಯರ ಯಾವ ಪಟ್ಟಣದಲ್ಲಿಯೂ ನೀವು ಪ್ರವೇಶಿಸಬೇಡಿರಿ.
- Luke 10:17–20 ಲೂಕನು 10:17–20ತರುವಾಯ ಆ ಎಪ್ಪತ್ತು ಮಂದಿ ಸಂತೋಷದಿಂದ ಹಿಂತಿರುಗಿ--ಕರ್ತನೇ, ನಿನ್ನ ಹೆಸರಿನಲ್ಲಿ ದೆವ್ವಗಳು ಸಹ ನಮಗೆ ಅಧೀನವಾದವು ಅಂದರು. ಆಗ ಆತನು ಅವರಿಗೆ--ಸೈತಾನನು ಮಿಂಚಿನ ಹಾಗೆ ಆಕಾಶದಿಂದ ಬೀಳುವದನ್ನು ನಾನು ನೋಡಿದೆನು. ಇಗೋ, ಸರ್ಪಗಳನ್ನೂ ಚೇಳುಗಳನ್ನೂ ತುಳಿಯುವದಕ್ಕೆ ಮತ್ತು ವಿರೋಧಿಯ ಎಲ್ಲಾ ಶಕ್ತಿಯ ಮೇಲೆ ನಾನು ನಿಮಗೆ ಅಧಿಕಾರ ಕೊಡುತ್ತೇನೆ; ಯಾವದೂ ಯಾವ ರೀತಿಯಲ್ಲಿಯೂ ನಿಮಗೆ ಕೇಡು ಮಾಡ ಲಾರದು. ಆದಾಗ್ಯೂ ದುರಾತ್ಮಗಳು ನಿಮಗೆ ಅಧೀನವಾದವೆಂದು ಸಂತೋಷಪಡಬೇಡಿರಿ; ಆದರೆ ನಿಮ್ಮ ಹೆಸರುಗಳು ಪರಲೋಕದಲ್ಲಿ ಬರೆಯಲ್ಪಟ್ಟಿರು ವದರಿಂದಲೇ ಸಂತೋಷಿಸಿರಿ ಅಂದನು.
- Luke 9:1–6 ಲೂಕನು 9:1–6ತರುವಾಯ ಆತನು ತನ್ನ ಹನ್ನೆರಡು ಮಂದಿ ಶಿಷ್ಯರನ್ನು ಒಟ್ಟಿಗೆ ಕರೆದು ಅವರಿಗೆ ಎಲ್ಲಾ ದೆವ್ವಗಳನ್ನು ಬಿಡಿಸುವದಕ್ಕೂ ರೋಗಗಳನ್ನು ಸ್ವಸ್ಥ ಮಾಡುವದಕ್ಕೂ ಶಕ್ತಿಯನ್ನು ಮತ್ತು ಅಧಿಕಾರವನ್ನು ಕೊಟ್ಟನು. ದೇವರ ರಾಜ್ಯವನ್ನು ಸಾರುವದಕ್ಕೂ ರೋಗಿಗಳನ್ನು ಸ್ವಸ್ಥಮಾಡುವದಕ್ಕೂ ಆತನು ಅವರನ್ನು ಕಳುಹಿಸಿಕೊಟ್ಟನು. ಆತನು ಅವರಿಗೆ--ನೀವು ಪ್ರಯಾಣಕ್ಕಾಗಿ ಕೋಲುಗಳನ್ನಾಗಲೀ ಚೀಲವನ್ನಾ ಗಲೀ ರೊಟ್ಟಿಯನ್ನಾಗಲೀ ಹಣವನ್ನಾಗಲೀ ಏನೂ ತಕ್ಕೊಳ್ಳಬೇಡಿರಿ; ಇದಲ್ಲದೆ ನಿಮಗೆ ಎರಡು ಅಂಗಿಗಳೂ ಇರಬಾರದು. ನೀವು ಯಾವದಾದರೂ ಮನೆಯನ್ನು ಪ್ರವೇಶಿಸಿದಾಗ ಅಲ್ಲೇ ಇದ್ದು ಅಲ್ಲಿಂದಲೇ ಹೊರಡಿರಿ. ಯಾರಾದರೂ ನಿಮ್ಮನ್ನು ಅಂಗೀಕರಿಸದೆ ಹೋದರೆ ನೀವು ಆ ಪಟ್ಟಣದ ಹೊರಗೆ ಹೋದಾಗ ಅವರಿಗೆ ವಿರೋಧವಾಗಿ ಸಾಕ್ಷಿಯಾಗಿರುವಂತೆ ನಿಮ್ಮ ಪಾದ ಗಳಿಗೆ ಹತ್ತಿದ ಧೂಳನ್ನು ಝಾಡಿಸಿಬಿಡಿರಿ ಅಂದನು. ಅವರು ಊರುಗಳನ್ನು ಹಾದು ಹೋಗುವಾಗ ಸುವಾರ್ತೆಯನ್ನು ಸಾರುತ್ತಾ ಎಲ್ಲಾ ಕಡೆಗಳಲ್ಲಿ ಸ್ವಸ್ಥ ಮಾಡುತ್ತಾ ಹೋದರು.
- Luke 10:1 ಲೂಕನು 10:1ಇವುಗಳಾದ ಮೇಲೆ ಕರ್ತನು ಬೇರೆ ಎಪ್ಪತ್ತು ಮಂದಿಯನ್ನು ಸಹ ನೇಮಿಸಿ ತಾನೇ ಸ್ವತಃ ಹೋಗಬೇಕೆಂದಿದ್ದ ಪ್ರತಿಯೊಂದು ಪಟ್ಟಣಕ್ಕೂ ಸ್ಥಳಕ್ಕೂ ಇಬ್ಬಿಬ್ಬರನ್ನಾಗಿ ತನ್ನ ಮುಂದಾಗಿ ಕಳುಹಿಸಿದನು.
- Luke 6:13–16 ಲೂಕನು 6:13–16ಬೆಳಗಾದ ಮೇಲೆ ಆತನು ತನ್ನ ಶಿಷ್ಯರನ್ನು ತನ್ನ ಹತ್ತಿರಕ್ಕೆ ಕರೆದು ಅವರಲ್ಲಿ ಹನ್ನೆರಡು ಮಂದಿಯನ್ನು ಆರಿಸಿಕೊಂಡದ್ದಲ್ಲದೆ ಅವರಿಗೆ ಅಪೊಸ್ತಲರೆಂದು ಹೆಸರಿಟ್ಟನು. ಅವರು (ಆತನು ಪೇತ್ರನೆಂದು ಕರೆದ) ಸೀಮೋನ, ಅವನ ಸಹೋದರನಾದ ಅಂದ್ರೆಯ, ಯಾಕೋಬ,ಯೋಹಾನ, ಫಿಲಿಪ್ಪ, ಬಾರ್ತೊಲೊಮಾಯ, ಮತ್ತಾಯ, ತೋಮ, ಅಲ್ಫಾಯನ ಮಗನಾದ ಯಾಕೋಬ, ಮತಾಭಿಮಾನಿಯೆಂದು ಕರೆಯಲ್ಪಟ್ಟ ಸೀಮೋನ, ಯಾಕೋಬನ ಸಹೋದರನಾದ ಯೂದ, ಮತ್ತು ದ್ರೋಹಿಯಾದ ಇಸ್ಕರಿಯೋತ ಯೂದ ಎಂಬವರೇ.
- Revelation 11:3 ಪ್ರಕಟನೆ 11:3ಇದಲ್ಲದೆ ನನ್ನ ಇಬ್ಬರು ಸಾಕ್ಷಿಗಳು ಗೋಣಿತಟ್ಟನ್ನು ಹೊದ್ದುಕೊಂಡು ಸಾವಿರದ ಇನ್ನೂರ ಅರವತ್ತು ದಿನಗಳ ತನಕ ಪ್ರವಾದಿಸುವ ಹಾಗೆ ಅವರಿಗೆ ಅಧಿಕಾರ ಕೊಡುವೆನು.
- Luke 10:3–12 ಲೂಕನು 10:3–12ಹೋಗಿರಿ, ಇಗೋ, ತೋಳಗಳ ಮಧ್ಯದಲ್ಲಿ ಕುರಿಮರಿಗಳನ್ನು ಕಳುಹಿಸುವಂತೆ ನಾನು ನಿಮ್ಮನ್ನು ಕಳುಹಿಸುತ್ತೇನೆ. ಹವ್ಮೆಾಣಿಯನ್ನಾಗಲೀ ಚೀಲವನ್ನಾಗಲೀ ಕೆರಗಳನ್ನಾಗಲೀ ತಕ್ಕೊಳ್ಳಬೇಡಿರಿ; ಮತ್ತು ದಾರಿಯಲ್ಲಿ ಯಾರನ್ನೂ ವಂದಿಸಬೇಡಿರಿ. ನೀವು ಯಾವ ಮನೆಯಲ್ಲಿಯಾದರೂ ಪ್ರವೇಶಿಸುವಾಗ ಮೊದಲು--ಈ ಮನೆಗೆ ಸಮಾಧಾನವಾಗಲಿ ಎಂದು ಹೇಳಿರಿ. ಅಲ್ಲಿ ಸಮಾಧಾನದ ಮಗನು ಇದ್ದರೆ ನಿಮ್ಮ ಸಮಾಧಾನವು ಅವರ ಮೇಲೆ ಇರುವದು; ಇಲ್ಲದಿದ್ದರೆ ಅದು ನಿಮಗೆ ಹಿಂದಿರು ಗುವದು. ಅದೇ ಮನೆಯಲ್ಲಿದ್ದು ಅವರು ಕೊಟ್ಟದ್ದನ್ನು ತಿಂದು ಕುಡಿಯಿರಿ; ಯಾಕಂದರೆ ಕೆಲಸದವನು ತನ್ನ ಕೂಲಿಗೆ ಯೋಗ್ಯನು. ಮನೆಯಿಂದ ಮನೆಗೆ ಹೋಗ ಬೇಡಿರಿ; ಯಾವದಾದರೂ ಪಟ್ಟಣದೊಳಗೆ ನೀವು ಪ್ರವೇಶಿಸುವಾಗ ಅವರು ನಿಮ್ಮನ್ನು ಸೇರಿಸಿಕೊಂಡರೆ ನಿಮ್ಮ ಮುಂದೆ ಇಡುವಂಥವುಗಳನ್ನು ತಿನ್ನಿರಿ. ಅಲ್ಲಿರುವ ರೋಗಿಗಳನ್ನು ಸ್ವಸ್ಥಮಾಡಿರಿ; ಮತ್ತು ಅವರಿಗೆ--ದೇವರ ರಾಜ್ಯವು ನಿಮ್ಮ ಸವಿಾಪಕ್ಕೆ ಬಂದಿದೆ ಎಂದು ಹೇಳಿರಿ. ಆದರೆ ನೀವು ಪ್ರವೇಶಿ ಸುವ ಯಾವ ಪಟ್ಟಣದಲ್ಲಿಯಾದರೂ ಅವರು ನಿಮ್ಮನ್ನು ಸೇರಿಸಿಕೊಳ್ಳದಿದ್ದರೆ ನೀವು ಹೊರಟು ಅದೇ ಬೀದಿ ಗಳಲ್ಲಿ ಹೋಗಿ-- ನಮ್ಮ ಮೇಲೆ ಅಂಟಿಕೊಂಡಿರುವ ನಿಮ್ಮ ಪಟ್ಟಣದ ಧೂಳನ್ನೇ ನಿಮಗೆ ವಿರೋಧವಾಗಿ ನಾವು ಝಾಡಿಸಿಬಿಡುತ್ತೇವೆ; ಆದಾಗ್ಯೂ ದೇವರ ರಾಜ್ಯವು ನಿಮ್ಮ ಸವಿಾಪಕ್ಕೆ ಬಂದಿದೆ ಎಂಬದು ನಿಮಗೆ ಖಚಿತವಾಗಿ ತಿಳಿದಿರಲಿ ಎಂದು ಹೇಳಿರಿ. ಆದರೆ ಆ ದಿನದಲ್ಲಿ ಆ ಪಟ್ಟಣಕ್ಕಿಂತಲೂ ಸೊದೋಮಿನ ಗತಿಯು ಹೆಚ್ಚಾಗಿ ತಾಳಬಹುದಾಗಿರುವದು ಎಂದು ನಾನು ನಿಮಗೆ ಹೇಳುತ್ತೇನೆ.
- Mark 3:13–14 ಮಾರ್ಕನು 3:13–14ತರುವಾಯ ಆತನು ಬೆಟ್ಟದ ಮೇಲೆ ಹೋಗಿ ತನಗೆ ಬೇಕಾದವರನ್ನು ಕರೆಯಲು ಅವರು ಆತನ ಬಳಿಗೆ ಬಂದರು. ಆತನು ಹನ್ನೆರಡು ಮಂದಿಯನ್ನು ತನ್ನೊಂದಿಗೆ ಇರುವದಕ್ಕೂ (ಸುವಾರ್ತೆ) ಸಾರುವದ ಕ್ಕಾಗಿ ತಾನು ಅವರನ್ನು ಕಳುಹಿಸುವದಕ್ಕೂ
- Matthew 10:9–14 ಮತ್ತಾಯನು 10:9–14ನಿಮ್ಮ ಹಮ್ಮಾಣಿಗಳಲ್ಲಿ ಬಂಗಾರ, ಬೆಳ್ಳಿ ಮತ್ತು ಹಿತ್ತಾಳೆ ಇಟ್ಟುಕೊಳ್ಳಬೇಡಿರಿ. ಪ್ರಯಾಣಕ್ಕೆ ಹಸಿಬೆಯನ್ನಾಗಲೀ ಎರಡು ಮೇಲಂಗಿಗಳ ನ್ನಾಗಲೀ ಕೆರಗಳನ್ನಾಗಲೀ ಕೋಲುಗಳನ್ನಾಗಲೀ ತಕ್ಕೊ ಳ್ಳಬೇಡಿರಿ; ಯಾಕಂದರೆ ಕೆಲಸ ಮಾಡುವವನು ತನ್ನ ಆಹಾರಕ್ಕೆ ಯೋಗ್ಯನಾಗಿದ್ದಾನೆ. ನೀವು ಯಾವದಾದರೂ ಪಟ್ಟಣದೊಳ ಗಾಗಲೀ ಊರೊಳಗಾಗಲೀ ಪ್ರವೇಶಿಸುವಾಗ ಅದರಲ್ಲಿ ಯಾರು ಯೋಗ್ಯರಾಗಿದ್ದಾರೆಂದು ವಿಚಾರಿ ಸಿರಿ; ಮತ್ತು ಅಲ್ಲಿಂದ ಹೊರಡುವ ವರೆಗೆ ಅಲ್ಲಿಯೇ ಇಳುಕೊಂಡಿರ್ರಿ; ನೀವು ಒಂದು ಮನೆಯೊಳಕ್ಕೆ ಬಂದಾಗ ಅವರನ್ನು ವಂದಿಸಿರಿ. ಆ ಮನೆಯು ಯೋಗ್ಯವಾಗಿದ್ದರೆ ನಿಮ್ಮ ಸಮಾಧಾನವು ಅದರ ಮೇಲೆ ಬರಲಿ; ಆದರೆ ಅದು ಅಯೋಗ್ಯವಾಗಿದ್ದರೆ ನಿಮ್ಮ ಸಮಾಧಾನವು ನಿಮಗೆ ಹಿಂದಿರುಗಲಿ. ಯಾರಾದರೂ ನಿಮ್ಮನ್ನು ಸೇರಿಸಿಕೊಳ್ಳದೆ ಹೋದರೆ ಇಲ್ಲವೆ ನಿಮ್ಮ ಮಾತುಗಳನ್ನು ಕೇಳದೆ ಹೋದರೆ ನೀವು ಆ ಮನೆಯಿಂದಾಗಲೀ ಪಟ್ಟಣದಿಂದಾಗಲೀ ಹೊರಡುವಾಗ ನಿಮ್ಮ ಪಾದಗಳ ಧೂಳನ್ನು ಝಾಡಿಸಿ ಬಿಡಿರಿ.
- Exodus 4:14–15 ವಿಮೋಚನಕಾಂಡ 4:14–15ಕರ್ತನು ಮೋಶೆಯ ಮೇಲೆ ಕೋಪಗೊಂಡು--ಲೇವಿಯನಾದ ಆರೋನನು ನಿನ್ನ ಸಹೋದರನಲ್ಲವೇ? ಅವನು ಚೆನ್ನಾಗಿ ಮಾತನಾಡ ಬಲ್ಲನೆಂದು ನಾನು ಬಲ್ಲೆನು. ಇಗೋ, ಅವನು ನಿನ್ನನ್ನು ಎದುರು ಗೊಳ್ಳುವದಕ್ಕೆ ಬರುತ್ತಾನೆ. ಅವನು ನಿನ್ನನ್ನು ನೋಡಿ ತನ್ನ ಹೃದಯದಲ್ಲಿ ಆನಂದಿಸುವನು. ಅವನ ಸಂಗಡ ನೀನು ಮಾತನಾಡಿ ಹೇಳಬೇಕಾದ ಮಾತು ಗಳನ್ನು ಅವನಿಗೆ ತಿಳಿಸಬೇಕು. ನಿನ್ನ ಬಾಯಿಗೂ ಅವನ ಬಾಯಿಗೂ ಸಹಾಯವಾಗಿದ್ದು ನೀನು ಮಾಡತಕ್ಕದ್ದನ್ನು ಕಲಿಸುವೆನು.
- Mark 16:17 ಮಾರ್ಕನು 16:17ಇದಲ್ಲದೆ ನಂಬುವವರಿಂದ ಈ ಸೂಚಕಕಾರ್ಯಗಳು ಉಂಟಾಗುವವು; ಅವರು ನನ್ನ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸುವರು; ಅವರು ಹೊಸ ಭಾಷೆಗಳಲ್ಲಿ ಮಾತನಾಡುವರು;
Original words (Greek)
- And · G2532καί kaí
- called · G4341προσκαλέομαι proskaléomai
- twelve · G1427δώδεκα dṓdeka
- and · G2532καί kaí
- began · G756ἄρχομαι árchomai
- send · G649ἀποστέλλω apostéllō
- them · G846αὐτός autós
- forth · G649ἀποστέλλω apostéllō
- two · G1417δύο dýo
- two · G1417δύο dýo
- and · G2532καί kaí
- gave · G1325δίδωμι dídōmi
- them · G846αὐτός autós
- power · G1849ἐξουσία exousía
- unclean · G169ἀκάθαρτος akáthartos
- spirits · G4151πνεῦμα pneûma