Luke · chapter 9 · verse 26
Luke 9:26 in Kannada
ಯಾವನಾದರೂ ನನ್ನ ಮತ್ತು ನನ್ನ ವಾಕ್ಯಗಳ ವಿಷಯದಲ್ಲಿ ನಾಚಿಕೊಳ್ಳುವದಾದರೆ ಮನುಷ್ಯಕುಮಾರನು ತನ್ನ ಮತ್ತು ತನ್ನ ತಂದೆಯ ಪ್ರಭಾವದೊಡನೆಯೂ ಪರಿಶುದ್ಧದೂತರೊಂದಿಗೂ ಬರುವಾಗ ಅವನ ವಿಷಯದಲ್ಲಿ ಆತನು ನಾಚಿಕೊಳ್ಳು ವನು.
Yaavanaadaroo nanna mattu nanna vaakyagala vishayadalli naachikolluvadaadare manushyakumaaranu tanna mattu tanna tandeya prabhaavadodaneyoo parishuddhadootarondigoo baruvaaga avana vishayadalli aatanu naachikollu vanu.
Luke 9:26 in English
- King James Version (KJV)
- For whosoever shall be ashamed of me and of my words, of him shall the Son of man be ashamed, when he shall come in his own glory, and [in his] Father’s, and of the holy angels.
- World English Bible (WEB)
- For whoever will be ashamed of me and of my words, of him will the Son of Man be ashamed when he comes in his glory, and the glory of the Father, and of the holy angels.
- American Standard Version (ASV)
- For whosoever shall be ashamed of me and of my words, of him shall the Son of man be ashamed, when he cometh in his own glory, and [the glory] of the Father, and of the holy angels.
- Bible in Basic English (BBE)
- For if any man has a feeling of shame because of me or of my words, the Son of man will have shame because of him when he comes in his glory and the glory of the Father and of the holy angels.
- Darby Translation (DBY)
- For whosoever shall have been ashamed of me and of my words, of him will the Son of man be ashamed when he shall come in his glory, and [in that] of the Father, and of the holy angels.
- Webster's Bible (WBS)
- For whoever shall be ashamed of me, and of my words, of him will the Son of man be ashamed, when he shall come in his own glory, and [in that of his] Father, and of the holy angels.
- Young's Literal Translation (YLT)
- 'For whoever may be ashamed of me, and of my words, of this one shall the Son of Man be ashamed, when he may come in his glory, and the Father's, and the holy messengers';
Read in context
- 24ಯಾವನಾದರೂ ತನ್ನ ಪ್ರಾಣವನ್ನು ಉಳಿಸಿಕೊಳ್ಳುವದಾದರೆ ಅದನ್ನು ಕಳಕೊಳ್ಳುವನು; ಆದರೆ ನನ್ನ ನಿಮಿತ್ತವಾಗಿ ಯಾವನಾದರೂ ತನ್ನ ಪ್ರಾಣವನ್ನು ಕಳಕೊಂಡರೆ ಅದನ್ನು ಉಳಿಸಿಕೊಳ್ಳುವನು.
- 25ಇದಲ್ಲದೆ ಒಬ್ಬ ಮನುಷ್ಯನು ಲೋಕವನ್ನೆಲ್ಲಾ ಸಂಪಾದಿಸಿಕೊಂಡು ತನ್ನನ್ನು ತಾನೇ ಹಾಳು ಮಾಡಿ ಕೊಂಡರೆ ಇಲ್ಲವೆ ನಷ್ಟಪಡಿಸಿಕೊಂಡರೆ ಅವನಿಗೆ ಪ್ರಯೋಜನವೇನು?
- 26ಯಾವನಾದರೂ ನನ್ನ ಮತ್ತು ನನ್ನ ವಾಕ್ಯಗಳ ವಿಷಯದಲ್ಲಿ ನಾಚಿಕೊಳ್ಳುವದಾದರೆ ಮನುಷ್ಯಕುಮಾರನು ತನ್ನ ಮತ್ತು ತನ್ನ ತಂದೆಯ ಪ್ರಭಾವದೊಡನೆಯೂ ಪರಿಶುದ್ಧದೂತರೊಂದಿಗೂ ಬರುವಾಗ ಅವನ ವಿಷಯದಲ್ಲಿ ಆತನು ನಾಚಿಕೊಳ್ಳು ವನು.
- 27ಆದರೆ ನಾನು ನಿಮಗೆ ಸತ್ಯವಾಗಿ ಹೇಳು ತ್ತೇನೆ, ಇಲ್ಲಿ ನಿಂತುಕೊಂಡಿರುವ ಕೆಲವರು ದೇವರ ರಾಜ್ಯವನ್ನು ನೋಡುವ ತನಕ ಮರಣವನ್ನು ರುಚಿಸುವದೇ ಇಲ್ಲ ಅಂದನು.
- 28ಈ ಮಾತುಗಳನ್ನು ಹೇಳಿ ಸುಮಾರು ಎಂಟು ದಿನಗಳಾದ ಮೇಲೆ ಆದದ್ದೇನಂದರೆ, ಆತನು ಪೇತ್ರ ಯೋಹಾನ ಮತ್ತು ಯಾಕೋಬರನ್ನು ಕರಕೊಂಡು ಪ್ರಾರ್ಥನೆ ಮಾಡುವದಕ್ಕಾಗಿ ಬೆಟ್ಟವನ್ನೇರಿದನು.
Cross references
- Matthew 10:32–33 ಮತ್ತಾಯನು 10:32–33ಯಾವನಾದರೂ ಮನುಷ್ಯರ ಮುಂದೆ ನನ್ನನ್ನು ಒಪ್ಪಿಕೊಂಡರೆ ನಾನು ಸಹ ಪರಲೋಕದಲ್ಲಿ ನನ್ನ ತಂದೆಯ ಮುಂದೆ ಅವನನ್ನು ಒಪ್ಪಿಕೊಳ್ಳುವೆನು; ಯಾವನಾದರೂ ಮನುಷ್ಯರ ಮುಂದೆ ನನ್ನನ್ನು ಅಲ್ಲಗಳೆದರೆ ಪರಲೋಕ ದಲ್ಲಿರುವ ನನ್ನ ತಂದೆಯ ಮುಂದೆ ನಾನೂ ಅವನನ್ನು ಅಲ್ಲಗಳೆಯುವೆನು.
- 2 Timothy 2:12 2 ತಿಮೊಥೆಯನಿಗೆ 2:12ನಾವು ಬಾಧೆಪಡುವವರಾಗಿದ್ದರೆ ಆತನೊಂದಿಗೆ ನಾವು ಸಹ ಆಳುವೆವು; ಆತನನ್ನು ಅಲ್ಲಗಳೆದರೆ ಆತನು ಸಹ ನಮ್ಮನ್ನು ಅಲ್ಲಗಳೆಯುವನು.
- Luke 12:8–9 ಲೂಕನು 12:8–9ಇದಲ್ಲದೆ ನಾನೂ ನಿಮಗೆ ಹೇಳುವದೇನಂದರೆ--ಯಾವನಾದರೂ ಮನು ಷ್ಯರ ಮುಂದೆ ನನ್ನನ್ನು ಒಪ್ಪಿಕೊಂಡರೆ ಮನುಷ್ಯ ಕುಮಾರನು ಸಹ ದೇವದೂತರ ಮುಂದೆ ಅವನನ್ನು ಒಪ್ಪಿಕೊಳ್ಳುವನು. ಆದರೆ ಯಾವನು ಮನುಷ್ಯರ ಮುಂದೆ ನನ್ನನ್ನು ಅಲ್ಲಗಳೆಯುವನೋ ಅವನು ದೇವದೂತರ ಮುಂದೆ ಅಲ್ಲಗಳೆಯಲ್ಪಡುವನು.
- Romans 1:16 ರೋಮಾಪುರದವರಿಗೆ 1:16ಕ್ರಿಸ್ತನ ಸುವಾರ್ತೆಯ ವಿಷಯದಲ್ಲಿ ನಾನು ನಾಚಿಕೆಪಡುವದಿಲ್ಲ; ಅದು ಮೊದಲು ಯೆಹೂದ್ಯ ರಿಗೂ ತರುವಾಯ ಗ್ರೀಕರಿಗೂ ಅಂತೂ ನಂಬುವ ಪ್ರತಿಯೊಬ್ಬನಿಗೂ ರಕ್ಷಣೆಗಾಗಿ ದೇವರ ಶಕ್ತಿಯಾಗಿದೆ.
- Mark 8:38 ಮಾರ್ಕನು 8:38ಆದದರಿಂದ ಯಾವನಾದರೂ ವ್ಯಭಿಚಾರಿಣಿಯಾದ ಈ ಪಾಪಿಷ್ಠ ಸಂತತಿಯಲ್ಲಿ ನನ್ನ ಮತ್ತು ನನ್ನ ಮಾತುಗಳ ವಿಷಯ ವಾಗಿ ನಾಚಿಕೊಳ್ಳುವನೋ ಅವನ ವಿಷಯದಲ್ಲಿ ಮನುಷ್ಯಕುಮಾರನು ಸಹ ತನ್ನ ತಂದೆಯ ಮಹಿಮೆ ಯಲ್ಲಿ ಪರಿಶುದ್ಧ ದೂತರೊಡನೆ ಬರುವಾಗ ನಾಚಿ ಕೊಳ್ಳುವನು ಎಂದು ಹೇಳಿದನು.
- Matthew 16:27 ಮತ್ತಾಯನು 16:27ಯಾಕಂದರೆ ಮನುಷ್ಯಕುಮಾರನು ತನ್ನ ತಂದೆಯ ಮಹಿಮೆಯಲ್ಲಿ ತನ್ನ ದೂತರೊಡನೆ ಬಂದಾಗ ಆತನು ಪ್ರತಿಯೊಬ್ಬ ನಿಗೂ ಅವನವನ ಕೆಲಸಗಳಿಗೆ ತಕ್ಕಂತೆ ಪ್ರತಿಫಲವನ್ನು ಕೊಡುವನು ಎಂದು ಹೇಳಿದನು.ನಿಮಗೆ ನಿಜವಾಗಿ ಹೇಳುವದೇನಂದರೆ--ಇಲ್ಲಿ ನಿಂತವರಲ್ಲಿ ಕೆಲವರು ಮನುಷ್ಯಕುಮಾರನು ತನ್ನ ರಾಜ್ಯದಲ್ಲಿ ಬರುವದನ್ನು ನೋಡುವವರೆಗೆ ಮರಣದ ರುಚಿಯನ್ನು ನೋಡುವದೇ ಇಲ್ಲ ಅಂದನು.
- Revelation 21:8 ಪ್ರಕಟನೆ 21:8ಆದರೆ ಭಯ ಗ್ರಸ್ಥರು, ನಂಬಿಕೆಯಿಲ್ಲದವರು, ಅಸಹ್ಯವಾದವರು, ಕೊಲೆಗಾರರು, ಜಾರರು, ಮಾಟಗಾರರು, ವಿಗ್ರಹಾ ರಾಧಕರು ಎಲ್ಲಾ ಸುಳ್ಳುಗಾರರು ಇವರಿಗೆ ಸಿಕ್ಕುವ ಪಾಲು ಬೆಂಕಿ ಗಂಧಕಗಳು ಉರಿಯುವ ಕೆರೆಯೇ; ಅದು ಎರಡನೆಯ ಮರಣವು ಎಂದು ನನಗೆ ಹೇಳಿದನು.
- Matthew 25:31 ಮತ್ತಾಯನು 25:31ಮನುಷ್ಯಕುಮಾರನು ತನ್ನ ಮಹಿಮೆಯಲ್ಲಿ ಎಲ್ಲಾ ಪರಿಶುದ್ಧ ದೂತರೊಂದಿಗೆ ಬರುವಾಗ ತನ್ನ ಮಹಿಮೆಯ ಸಿಂಹಾಸನದ ಮೇಲೆ ಕೂತುಕೊಳ್ಳುವನು;
- John 12:43 ಯೋಹಾನನು 12:43ಯಾಕಂದರೆ ಅವರು ದೇವರ ಹೊಗಳಿ ಕೆಗಿಂತ ಮನುಷ್ಯರ ಹೊಗಳಿಕೆಯನ್ನೇ ಹೆಚ್ಚಾಗಿ ಪ್ರೀತಿಸಿದರು.
- Matthew 7:22–23 ಮತ್ತಾಯನು 7:22–23ಆ ದಿನದಲ್ಲಿ--ಕರ್ತನೇ, ಕರ್ತನೇ ನಿನ್ನ ಹೆಸರಿನಲ್ಲಿ ನಾವು ಪ್ರವಾದಿಸಲಿಲ್ಲವೇ? ಮತ್ತು ನಿನ್ನ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸಲಿಲ್ಲವೇ? ಇದಲ್ಲದೆ ನಿನ್ನ ಹೆಸರಿನಲ್ಲಿ ಬಹಳ ಮಹತ್ಕಾರ್ಯಗಳನ್ನು ಮಾಡಲಿಲ್ಲವೇ ಎಂದು ಬಹಳ ಜನರು ನನಗೆ ಹೇಳುವರು. ಆಗ ನಾನು ಅವರಿಗೆ--ನಾನು ನಿಮ್ಮನ್ನು ಎಂದಿಗೂ ಅರಿಯೆನು; ದುಷ್ಟತನ ಮಾಡುವ ನೀವು ನನ್ನಿಂದ ತೊಲಗಿ ಹೋಗಿರಿ ಎಂದು ಹೇಳಿಬಿಡುವೆನು.
- Revelation 20:11 ಪ್ರಕಟನೆ 20:11ಆಮೇಲೆ ಬೆಳ್ಳಗಿರುವ ಮಹಾಸಿಂಹಾಸನವನ್ನೂ ಅದರ ಮೇಲೆ ಕೂತಿದ್ದಾತನನ್ನೂ ನಾನು ಕಂಡೆನು. ಆತನೆದುರಿನಿಂದ ಭೂಮ್ಯಾಕಾಶಗಳು ಓಡಿಹೋಗಿ ಅವುಗಳಿಗೆ ಸ್ಥಳವಿಲ್ಲದಂತಾಯಿತು.
- Psalm 22:6–8 ಕೀರ್ತನೆಗಳು 22:6–8ನಾನು ಹುಳವೇ, ಮನುಷ್ಯನಲ್ಲ; ಮನುಷ್ಯರಿಂದ ನಿಂದಿಸಲ್ಪಟ್ಟವನೂ ಜನರಿಂದ ತಿರಸ್ಕರಿಸಲ್ಪಟ್ಟವನೂ ಆಗಿದ್ದೇನೆ. ನನ್ನನ್ನು ನೋಡುವವರೆಲ್ಲರು ನನ್ನನ್ನು ಗೇಲಿ ಮಾಡಿ ನಗುವರು, ಅವರು ತುಟಿ ಅಗಲಮಾಡಿ ತಲೆ ಆಡಿಸುತ್ತಾ-- ಆತನು ಕರ್ತನ ಮೇಲೆ ಭರವಸ ವಿಟ್ಟಿದ್ದಾನಲ್ಲಾ; ಆತನು ಅವನನ್ನು ತಪ್ಪಿಸಿ ಅವನನ್ನು ಬಿಡಿಸಲಿ; ಆತನು ಅವನಲ್ಲಿ ಸಂತೋಷಪಡುತ್ತಾ ನಲ್ಲಾ ಅನ್ನುತ್ತಾರೆ.