Mark · chapter 5 · verse 22
Mark 5:22 in Kannada
ಆಗ ಇಗೋ, ಸಭಾಮಂದಿರದ ಅಧಿಕಾರಿ ಗಳಲ್ಲಿ ಯಾಯಿರನೆಂದು ಹೆಸರಿದ್ದ ಒಬ್ಬನು ಬಂದು ಆತನನ್ನು ಕಂಡು ಆತನ ಪಾದಗಳಿಗೆ ಬಿದ್ದು--
Aaga igo, sabhaamandirada adhikaari galalli yaayiranendu hesaridda obbanu bandu aatanannu kandu aatana paadagalige biddu--
Mark 5:22 in English
- King James Version (KJV)
- And, behold, there cometh one of the rulers of the synagogue, Jairus by name; and when he saw him, he fell at his feet,
- World English Bible (WEB)
- Behold, one of the rulers of the synagogue, Jairus by name, came; and seeing him, he fell at his feet
- American Standard Version (ASV)
- And there cometh one of the rulers of the synagogue, Jaïrus by name; and seeing him, he falleth at his feet,
- Bible in Basic English (BBE)
- And one of the rulers of the Synagogue, Jairus by name, came, and seeing him, went down at his feet,
- Darby Translation (DBY)
- And [behold] there comes one of the rulers of the synagogue, by name Jairus, and seeing him, falls down at his feet;
- Webster's Bible (WBS)
- And behold, there cometh one of the rulers of the synagogue, Jairus by name; and when he saw him, he fell at his feet,
- Young's Literal Translation (YLT)
- and lo, there doth come one of the chiefs of the synagogue, by name Jairus, and having seen him, he doth fall at his feet,
Read in context
- 20ಅವನು ಹೊರಟು ಹೋಗಿ ಯೇಸು ತನಗೆ ಎಂಥೆಂಥಾ ಮಹತ್ಕಾರ್ಯಗಳನ್ನು ಮಾಡಿದನೆಂಬದನ್ನು ದೆಕಪೊಲಿ ಯದಲ್ಲಿ ಪ್ರಕಟಿಸಲಾರಂಭಿಸಿದನು. ಆಗ ಎಲ್ಲರೂ ಆಶ್ಚರ್ಯಪಟ್ಟರು.
- 21ಯೇಸು ತಿರಿಗಿ ದೋಣಿಯಲ್ಲಿ ಆಚೇದಡಕ್ಕೆ ಹೋದಾಗ ಬಹಳ ಜನರು ಆತನ ಬಳಿಗೆ ಕೂಡಿಬಂದರು; ಆಗ ಆತನು ಸಮುದ್ರದ ಸವಿಾಪದ ಲ್ಲಿದ್ದನು.
- 22ಆಗ ಇಗೋ, ಸಭಾಮಂದಿರದ ಅಧಿಕಾರಿ ಗಳಲ್ಲಿ ಯಾಯಿರನೆಂದು ಹೆಸರಿದ್ದ ಒಬ್ಬನು ಬಂದು ಆತನನ್ನು ಕಂಡು ಆತನ ಪಾದಗಳಿಗೆ ಬಿದ್ದು--
- 23ನನ್ನ ಚಿಕ್ಕಮಗಳು ಸಾಯುವ ಸ್ಥಿತಿಯಲ್ಲಿ ಮಲಗಿದ್ದಾಳೆ, ಅವಳು ಸ್ವಸ್ಥಳಾಗುವಂತೆ ನೀನು ಬಂದು ನಿನ್ನ ಕೈಗಳನ್ನು ಅವಳ ಮೇಲೆ ಇಡು; ಆಗ ಅವಳು ಬದುಕುವಳು ಎಂದು ಆತನನ್ನು ಬಹಳವಾಗಿ ಬೇಡಿಕೊಂಡನು.
- 24ಆಗ ಯೇಸು ಅವನ ಸಂಗಡ ಹೋದನು; ಮತ್ತು ಬಹಳ ಜನರು ನೂಕಾಡುತ್ತಾ ಆತನ ಹಿಂದೆ ಹೋದರು.
Cross references
- Luke 13:14 ಲೂಕನು 13:14ಯೇಸು ಸಬ್ಬತ್ ದಿನದಲ್ಲಿ ಸ್ವಸ್ಥಪಡಿಸಿದ ಕಾರಣ ಸಭಾಮಂದಿರದ ಅಧಿಕಾರಿಯು ಕೋಪದಿಂದ ಜನರಿಗೆ--ಆರು ದಿವಸಗಳಲ್ಲಿ ಮನು ಷ್ಯರು ಕೆಲಸ ಮಾಡತಕ್ಕದ್ದು. ಆದದರಿಂದ ಅವುಗಳಲ್ಲಿ ಅವರು ಬಂದು ಸ್ವಸ್ಥತೆ ಹೊಂದಲಿ; ಸಬ್ಬತ್ ದಿನದಲ್ಲಿ ಬೇಡ ಅಂದನು.
- Acts 18:8 ಅಪೊಸ್ತಲರ ಕೃತ್ಯಗಳು 18:8ಸಭಾಮಂದಿರದ ಮುಖ್ಯಾಧಿಕಾರಿಯಾದ ಕ್ರಿಸ್ಪನು ತನ್ನ ಮನೆಯವರೆಲ್ಲರ ಸಹಿತ ಕರ್ತನಲ್ಲಿ ನಂಬಿಕೆಯಿಟ್ಟನು. ಕೊರಿಂಥ ದಲ್ಲಿ ಅನೇಕರು ಕೇಳಿ ನಂಬಿ ಬಾಸ್ತಿಸ್ಮ ಮಾಡಿಸಿಕೊಂಡರು.
- Acts 18:17 ಅಪೊಸ್ತಲರ ಕೃತ್ಯಗಳು 18:17ಆಗ ಗ್ರೀಕರೆಲ್ಲರೂ ಸಭಾಮಂದಿರದ ಮುಖ್ಯ ಅಧಿಕಾರಿಯಾಗಿದ್ದ ಸೋಸ್ಥೆನ ನನ್ನು ಹಿಡಿದುಕೊಂಡು ನ್ಯಾಯಸ್ಥಾನದ ಮುಂದೆ ಹೊಡೆದರು. ಗಲ್ಲಿಯೋನನಾದರೋ ಅವುಗಳಲ್ಲಿ ಒಂದಕ್ಕಾದರೂ ಲಕ್ಷ್ಯಕೊಡಲಿಲ್ಲ.
- Acts 13:15 ಅಪೊಸ್ತಲರ ಕೃತ್ಯಗಳು 13:15ನ್ಯಾಯಪ್ರಮಾಣ ಮತ್ತು ಪ್ರವಾದಿಗಳಗ್ರಂಥವು ಪಾರಾಯಣವಾದ ಮೇಲೆ ಸಭಾಮಂದಿರದ ಅಧಿಕಾರಿ ಗಳು--ಜನರೇ, ಸಹೋದರರೇ, ಜನರಿಗೆ ಹೇಳತಕ್ಕ ಬುದ್ಧಿಮಾತೇನಾದರೂ ನಿಮಗಿದ್ದರೆ ಹೇಳಿರಿ ಎಂದು ಅವರಿಗೆ ಹೇಳಿ ಕಳುಹಿಸಿದರು.
- Mark 5:35–36 ಮಾರ್ಕನು 5:35–36ಆತನು ಇನ್ನೂ ಮಾತನಾಡುತ್ತಿರುವಾಗ ಸಭಾ ಮಂದಿರದ ಅಧಿಕಾರಿಯ ಮನೆಯಿಂದ ಕೆಲವರು ಅಲ್ಲಿಗೆ ಬಂದು--ನಿನ್ನ ಮಗಳು ಸತ್ತಿದ್ದಾಳೆ; ಬೋಧಕ ನಿಗೆ ಇನ್ನು ನೀನು ತೊಂದರೆಪಡಿಸುವದು ಯಾಕೆ? ಅಂದರು. ಹಾಗೆ ಹೇಳಿದ್ದನ್ನು ಯೇಸು ಕೇಳಿದ ಕೂಡಲೆ ಆ ಸಭಾಮಂದಿರದ ಅಧಿಕಾರಿಗೆ--ಭಯ ಪಡಬೇಡ, ನಂಬಿಕೆ ಮಾತ್ರ ಇರಲಿ ಅಂದನು.
- Mark 5:33 ಮಾರ್ಕನು 5:33ಆದರೆ ಆ ಸ್ತ್ರೀಯು ತನ್ನಲ್ಲಿ ಆದದ್ದನ್ನು ತಿಳುಕೊಂಡು ಭಯದಿಂದ ನಡುಗುತ್ತಾ ಬಂದು ಆತನ ಮುಂದೆ ಅಡ್ಡಬಿದ್ದು ಸತ್ಯವನ್ನೆಲ್ಲಾ ಆತನಿಗೆ ತಿಳಿಸಿದಳು.
- Matthew 9:18–26 ಮತ್ತಾಯನು 9:18–26ಆತನು ಈ ವಿಷಯಗಳನ್ನು ಅವರೊಂದಿಗೆ ಮಾತನಾಡುತ್ತಿದ್ದಾಗ ಇಗೋ, ಒಬ್ಬ ಅಧಿಕಾರಿಯು ಬಂದು ಆತನನ್ನು ಆರಾಧಿಸಿ--ನನ್ನ ಮಗಳು ಇದೀಗಲೇ ಸತ್ತು ಹೋಗಿರುವಳು; ಆದರೆ ನೀನು ಬಂದು ಆಕೆಯ ಮೇಲೆ ನಿನ್ನ ಕೈಯನ್ನಿಡು; ಆಗ ಅವಳು ಬದುಕುವಳು ಎಂದು ಹೇಳಿದನು. ಆಗ ಯೇಸು ಎದ್ದು ತನ್ನ ಶಿಷ್ಯರೊಂದಿಗೆ ಅವನ ಹಿಂದೆ ಹೋದನು. ಆಗ ಇಗೋ, ಹನ್ನೆರಡು ವರುಷಗಳಿಂದಲೂ ರಕ್ತಸ್ರಾವ ರೋಗವಿದ್ದ ಒಬ್ಬ ಸ್ತ್ರೀಯು ಹಿಂದೆ ಬಂದು ಆತನ ಉಡುಪಿನ ಅಂಚನ್ನು ಮುಟ್ಟಿದಳು. ಯಾಕಂದರೆ--ನಾನು ಆತನ ಉಡುಪನ್ನು ಮುಟ್ಟಿದರೆ ಸಾಕು, ಗುಣವಾಗುವೆನು ಎಂದು ಆಕೆಯು ತನ್ನೊಳಗೆ ಅಂದುಕೊಂಡಿದ್ದಳು. ಆದರೆ ಯೇಸು ಹಿಂತಿರುಗಿ ಆಕೆಯನ್ನು ನೋಡಿ--ಮಗಳೇ, ಸಮಾಧಾನದಿಂದಿರು; ನಿನ್ನ ನಂಬಿಕೆಯು ನಿನ್ನನ್ನು ಸ್ವಸ್ಥ ಮಾಡಿಯದೆ ಅಂದನು. ಅದೇ ಗಳಿಗೆಯಲ್ಲಿ ಆ ಸ್ತ್ರೀಯು ಸ್ವಸ್ಥಳಾದಳು. ತರುವಾಯ ಯೇಸು ಆ ಅಧಿಕಾರಿಯ ಮನೆ ಯೊಳಗೆ ಬಂದು ಕೊಳಲೂದುವವರನ್ನೂ ಗೊಂದಲ ಮಾಡುವ ಜನರನ್ನೂ ನೋಡಿ ಅವರಿಗೆ--ಸ್ಥಳ ಬಿಡಿರಿ; ಯಾಕಂದರೆ ಹುಡುಗಿಯು ಸತ್ತಿಲ್ಲ, ನಿದ್ರೆ ಮಾಡುತ್ತಾಳೆ ಅಂದನು. ಅದಕ್ಕವರು ಆತನನ್ನು ಹಾಸ್ಯ ಮಾಡಿ ನಕ್ಕರು. ಆದರೆ ಜನರು ಹೊರಗೆ ಹಾಕಲ್ಪಟ್ಟ ಮೇಲೆ ಆತನು ಒಳಗೆ ಹೋಗಿ ಆಕೆಯ ಕೈಯನ್ನು ಹಿಡಿದಾಗ ಆಕೆಯು ಎದ್ದಳು. ಇದರ ಕೀರ್ತಿಯು ಆ ದೇಶದಲ್ಲೆಲ್ಲಾ ಹರಡಿತು.
- Luke 5:8 ಲೂಕನು 5:8ಸೀಮೋನ್ ಪೇತ್ರನು ಅದನ್ನು ಕಂಡಾಗ ಯೇಸುವಿನ ಮೊಣಕಾಲಿಗೆ ಬಿದ್ದು--ನನ್ನನ್ನು ಬಿಟ್ಟು ಹೋಗು; ಓ ಕರ್ತನೇ, ನಾನು ಪಾಪಾತ್ಮನು ಅಂದನು.
- Luke 8:41–56 ಲೂಕನು 8:41–56ಆಗ ಇಗೋ, ಸಭಾಮಂದಿರದ ಅಧಿಕಾರಿಯಾಗಿದ್ದ ಯಾಯಾರನೆಂಬ ಹೆಸರಿನ ಮನುಷ್ಯನು ಬಂದು ಯೇಸುವಿನ ಪಾದಗಳ ಮುಂದೆ ಬಿದ್ದು ತನ್ನ ಮನೆಗೆ ಬರಬೇಕೆಂದು ಬೇಡಿಕೊಂಡನು. ಯಾಕಂದರೆ ಅವನಿ ಗಿದ್ದ ಹೆಚ್ಚು ಕಡಿಮೆ ಹನ್ನೆರಡು ವರುಷದವಳಾದ ಒಬ್ಬಳೇ ಮಗಳು ಸಾಯುವಹಾಗಿದ್ದಳು. ಆದರೆ ಆತನು ಹೋಗುತ್ತಿದ್ದಾಗ ಜನರು ಆತನನ್ನು ನೂಕಾ ಡುತ್ತಿದ್ದರು. ಆಗ ಹನ್ನೆರಡು ವರುಷಗಳಿಂದಲೂ ರಕ್ತಸ್ರಾವ ರೋಗವಿದ್ದು ತನ್ನ ಜೀವನಕ್ಕೆ ಇದ್ದದ್ದನ್ನು ವೈದ್ಯರಿಗೆ ವೆಚ್ಚಮಾಡಿದ್ದಾಗ್ಯೂ ಯಾರಿಂದಲೂ ವಾಸಿಯಾಗದೆ ಇದ್ದ ಒಬ್ಬ ಸ್ತ್ರೀಯು ಆತನ ಹಿಂದೆ ಬಂದು ಆತನ ಉಡುಪಿನ ಅಂಚನ್ನು ಮುಟ್ಟಿದಳು; ಕೂಡಲೆ ಆಕೆಯ ರಕ್ತಸ್ರಾವವು ನಿಂತುಹೋಯಿತು. ಆಗ ಯೇಸು--ನನ್ನನ್ನು ಮುಟ್ಟಿದವರು ಯಾರು ಅಂದನು. ಎಲ್ಲರೂ ಅಲ್ಲಗಳೆದಾಗ ಪೇತ್ರನು ಮತ್ತು ಅವನ ಕೂಡ ಇದ್ದವರು ಆತನಿಗೆ--ಬೋಧಕನೇ, ಸಮೂಹವು ನಿನ್ನನ್ನು ನೂಕುತ್ತಾ ನಿನ್ನ ಮೇಲೆ ಬೀಳುತ್ತಿರಲಾಗಿ ನೀನು--ನನ್ನನ್ನು ಯಾರು ಮುಟ್ಟಿದರು ಎಂದು ಕೇಳುತ್ತೀಯಲ್ಲಾ ಅಂದರು. ಆದರೆ ಯೇಸು--ಯಾರೋ ಒಬ್ಬರು ನನ್ನನ್ನು ಮುಟ್ಟಿದ್ದಾರೆ; ಯಾಕಂದರೆ ನನ್ನಿಂದ ಶಕ್ತಿಯು ಹೊರಟಿತೆಂದು ನನಗೆ ತಿಳಿಯಿತು ಅಂದನು. ಆ ಸ್ತ್ರೀಯು ತಾನು ಮರೆಯಾಗಿಲ್ಲವೆಂದು ತಿಳಿದು ನಡುಗುತ್ತಾ ಬಂದು ಆತನ ಮುಂದೆ ಬಿದ್ದು ಯಾವ ಕಾರಣದಿಂದ ಆಕೆಯು ಆತನನ್ನು ಮುಟ್ಟಿದ ಳೆಂದೂ ಹೇಗೆ ತಾನು ಕೂಡಲೆ ಸ್ವಸ್ಥಳಾದಳೆಂದೂ ಎಲ್ಲಾ ಜನರ ಮುಂದೆ ಆತನಿಗೆ ತಿಳಿಯಪಡಿಸಿದಳು. ಆಗ ಆತನು ಆಕೆಗೆ--ಮಗಳೇ, ಸಮಾಧಾನ ದಿಂದಿರು; ನಿನ್ನ ನಂಬಿಕೆಯು ನಿನ್ನನ್ನು ಸ್ವಸ್ಥ ಮಾಡಿಯದೆ; ಸ್ವಸ್ಥಳಾಗಿ ಹೋಗು ಅಂದನು. ಆತನು ಇನ್ನೂ ಮಾತನಾಡುತ್ತಿದ್ದಾಗ ಸಭಾಮಂದಿ ರದ ಅಧಿಕಾರಿಯ ಮನೆಯಿಂದ ಒಬ್ಬನು ಬಂದು ಅವನಿಗೆ--ನಿನ್ನ ಮಗಳು ಸತ್ತಿದ್ದಾಳೆ, ಬೋಧಕನಿಗೆ ತೊಂದರೆ ಕೊಡಬೇಡ ಅಂದನು. ಆದರೆ ಯೇಸು ಅದನ್ನು ಕೇಳಿ ಪ್ರತ್ಯುತ್ತರವಾಗಿ ಅವನಿಗೆ--ಭಯಪಡ ಬೇಡ, ನಂಬಿಕೆ ಮಾತ್ರ ಇರಲಿ; ಅವಳು ಸ್ವಸ್ಥಳಾಗುವಳು ಎಂದು ಹೇಳಿದನು. ಆತನು ಮನೆಯೊಳಕ್ಕೆ ಬಂದಾಗ ಪೇತ್ರ ಯಾಕೋಬ ಯೋಹಾನ ಮತ್ತು ಹುಡುಗಿಯ ತಂದೆತಾಯಿಗಳ ಹೊರತು ಯಾರನ್ನೂ ಒಳಗೆ ಹೋಗಗೊಡಿಸಲಿಲ್ಲ. ಎಲ್ಲರೂ ಅಳುತ್ತಾ ಹುಡುಗಿಗಾಗಿ ಗೋಳಾಡುತ್ತಿದ್ದರು. ಆದರೆ ಆತನು-- ಅಳಬೇಡಿರಿ, ಆಕೆಯು ಸತ್ತಿಲ್ಲ; ಆದರೆ ನಿದ್ರೆ ಮಾಡು ತ್ತಾಳೆ ಅಂದನು. ಆಕೆಯು ಸತ್ತಿದ್ದಾಳೆಂದು ತಿಳಿದಿದ್ದ ರಿಂದ ಅವರು ಆತನನ್ನು ಹಾಸ್ಯಮಾಡಿ ನಕ್ಕರು ಆದರೆ ಆತನು ಅವರೆಲ್ಲರನ್ನು ಹೊರಗೆ ಕಳುಹಿಸಿ ಆಕೆಯ ಕೈಹಿಡಿದು-- ಹುಡುಗಿಯೇ, ಎದ್ದೇಳು ಎಂದು ಕರೆದನು. ಆಗ ಆಕೆಯು ಬದುಕಿ ಕೂಡಲೆ ಎದ್ದಳು; ಆಕೆಗೆ ಊಟಕ್ಕೆ ಕೊಡುವಂತೆ ಆತನು ಅಪ್ಪಣೆ ಕೊಟ್ಟನು.ಆಗ ಆಕೆಯ ತಂದೆತಾಯಿಗಳು ಬೆರಗಾದರು; ಆದರೆ ನಡೆದದ್ದನ್ನು ಅವರು ಯಾರಿಗೂ ಹೇಳಬಾರದೆಂದು ಆತನು ಅವರಿಗೆ ಖಂಡಿತವಾಗಿ ಹೇಳಿದನು. ಆಗ ಆಕೆಯ ತಂದೆತಾಯಿಗಳು ಬೆರಗಾದರು; ಆದರೆ ನಡೆದದ್ದನ್ನು ಅವರು ಯಾರಿಗೂ ಹೇಳಬಾರದೆಂದು ಆತನು ಅವರಿಗೆ ಖಂಡಿತವಾಗಿ ಹೇಳಿದನು.
- Luke 8:28 ಲೂಕನು 8:28ಅವನು ಯೇಸುವನ್ನು ನೋಡಿದಾಗ ಆತನ ಮುಂದೆ ಬಿದ್ದು--ಯೇಸುವೇ, ಮಹೋನ್ನತ ನಾದ ದೇವರಕುಮಾರನೇ, ನನ್ನ ಗೊಡವೆ ನಿನಗೆ ಯಾಕೆ? ನನ್ನನ್ನು ಸಂಕಟಪಡಿಸಬೇಡವೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ ಎಂದು ಗಟ್ಟಿಯಾದ ಸ್ವರದಿಂದ ಕೂಗಿ ಹೇಳಿದನು.
- Matthew 2:11 ಮತ್ತಾಯನು 2:11ಅವರು ಮನೆಯೊಳಕ್ಕೆ ಬಂದಾಗ ಆ ಶಿಶುವನ್ನು ಆತನ ತಾಯಿಯಾದ ಮರಿಯಳೊಂದಿಗೆ ಕಂಡುಕೊಂಡು ಸಾಷ್ಟಾಂಗವೆರಗಿ ಆತನನ್ನು ಆರಾಧಿಸಿದರು; ತರುವಾಯ ತಮ್ಮ ಬೊಕ್ಕಸಗಳನ್ನು ತೆರೆದು ಚಿನ್ನ ಧೂಪ ರಕ್ತಬೋಳಗಳನ್ನು ಆತನಿಗೆ ಕಾಣಿಕೆಯಾಗಿ ಅರ್ಪಿಸಿದರು.
- Mark 5:38 ಮಾರ್ಕನು 5:38ಆತನು ಆ ಸಭಾಮಂದಿರದ ಅಧಿಕಾರಿಯ ಮನೆಗೆ ಬಂದು ಗೊಂದಲವನ್ನೂ ಬಹಳವಾಗಿ ಗೋಳಾಡುತ್ತಾ ಅಳುತ್ತಿರುವವರನ್ನೂ ಕಂಡನು.
Original words (Greek)
- And · G2532καί kaí
- behold · G2400ἰδού idoú
- cometh · G2064ἔρχομαι érchomai
- one · G1520εἷς heîs
- synagogue · G752ἀρχισυνάγωγος archisynágōgos
- Jairus · G2383Ἰάειρος Iáeiros
- name · G3686ὄνομα ónoma
- and · G2532καί kaí
- saw · G1492εἴδω eídō
- him · G846αὐτός autós
- fell · G4098πίπτω píptō
- at · G4314πρός prós
- his · G846αὐτός autós
- feet · G4228πούς poús