Mark · chapter 8 · verse 29
Mark 8:29 in Kannada
ಅದಕ್ಕೆ ಆತನು ಅವರಿಗೆ -- ಆದರೆ ನಾನು ಯಾರೆಂದು ನೀವು ಅನ್ನುತ್ತೀರಿ ಎಂದು ಕೇಳಲು ಪೇತ್ರನು ಪ್ರತ್ಯುತ್ತರವಾಗಿ ಆತನಿಗೆ--ನೀನು ಕ್ರಿಸ್ತನೇ ಅಂದನು.
Adakke aatanu avarige -- aadare naanu yaarendu neevu annutteeri endu kelalu petranu pratyuttaravaagi aatanige--neenu kristane andanu.
Mark 8:29 in English
- King James Version (KJV)
- And he saith unto them, But whom say ye that I am? And Peter answereth and saith unto him, Thou art the Christ.
- World English Bible (WEB)
- He said to them, “But who do you say that I am?” Peter answered, “You are the Christ.”
- American Standard Version (ASV)
- And he asked them, But who say ye that I am? Peter answereth and saith unto him, Thou art the Christ.
- Bible in Basic English (BBE)
- And he said to them, But who do you say I am? Peter said in answer, You are the Christ.
- Darby Translation (DBY)
- And he asked them, But ye, who do ye say that I am? And Peter answering says to him, Thou art the Christ.
- Webster's Bible (WBS)
- And he saith to them, But who say ye that I am? And Peter answereth and saith to him, Thou art the Christ.
- Young's Literal Translation (YLT)
- And he saith to them, 'And ye — who do ye say me to be?' and Peter answering saith to him, 'Thou art the Christ.'
Read in context
- 27ತರುವಾಯ ಯೇಸುವೂ ಆತನ ಶಿಷ್ಯರೂ ಕೈಸ ರೈಯ ಫಿಲಿಪ್ಪಿ ಊರುಗಳಿಗೆ ಹೋದರು. ಆತನು ದಾರಿ ಯಲ್ಲಿ ತನ್ನ ಶಿಷ್ಯರಿಗೆ--ನಾನು ಯಾರೆಂದು ಜನರು ಅನ್ನುತ್ತಾರೆ ಎಂದು ಕೇಳಿದನು.
- 28ಅವರು ಪ್ರತ್ಯುತ್ತರ ವಾಗಿ--ಬಾಪ್ತಿಸ್ಮ ಮಾಡಿಸುವ ಯೋಹಾನನು; ಮತ್ತೆ ಕೆಲವರು--ಎಲೀಯನು; ಇನ್ನು ಕೆಲವರು--ಪ್ರವಾದಿ ಗಳಲ್ಲಿ ಒಬ್ಬನು ಅನ್ನುತ್ತಾರೆ ಎಂದು ಹೇಳಿದರು.
- 29ಅದಕ್ಕೆ ಆತನು ಅವರಿಗೆ -- ಆದರೆ ನಾನು ಯಾರೆಂದು ನೀವು ಅನ್ನುತ್ತೀರಿ ಎಂದು ಕೇಳಲು ಪೇತ್ರನು ಪ್ರತ್ಯುತ್ತರವಾಗಿ ಆತನಿಗೆ--ನೀನು ಕ್ರಿಸ್ತನೇ ಅಂದನು.
- 30ತನ್ನ ವಿಷಯ ವಾಗಿ ಅವರು ಯಾರಿಗೂ ಹೇಳಬಾರದೆಂದು ಆತನು ಅವರಿಗೆ ಖಂಡಿತವಾಗಿ ಹೇಳಿದನು.
- 31ಮನುಷ್ಯ ಕುಮಾರನು ಅನೇಕ ಶ್ರಮೆಗಳನ್ನು ಅನುಭವಿಸಿ ಹಿರಿಯ ರಿಂದಲೂ ಪ್ರಧಾನ ಯಾಜಕರಿಂದಲೂ ಶಾಸ್ತ್ರಿಗಳಿಂ ದಲೂ ತಿರಸ್ಕರಿಸಲ್ಪಟ್ಟವನಾಗಿ ಕೊಲ್ಲಲ್ಪಟ್ಟು ಮೂರು ದಿವಸಗಳಾದ ಮೇಲೆ ಏಳುವದು ಅವಶ್ಯವೆಂದು ಅವ ರಿಗೆ ಬೋಧಿಸಲಾರಂಭಿಸಿದನು.
Cross references
- 1 John 4:15 1 ಯೋಹಾನನು 4:15ಯೇಸು ದೇವರ ಮಗನಾಗಿ ದ್ದಾನೆಂದು ಯಾವನು ಒಪ್ಪಿಕೊಳ್ಳುತ್ತಾನೋ ಅವನಲ್ಲಿ ದೇವರು ನೆಲೆಗೊಂಡಿದ್ದಾನೆ, ಅವನು ದೇವರಲ್ಲಿ ನೆಲೆಗೊಂಡಿದ್ದಾನೆ.
- Matthew 16:15–16 ಮತ್ತಾಯನು 16:15–16ಆತನು ಅವರಿಗೆ--ಆದರೆ ನೀವು ನನ್ನನ್ನು ಯಾರನ್ನುತ್ತೀರಿ ಎಂದು ಕೇಳಿ ದನು. ಅದಕ್ಕೆ ಸೀಮೋನ ಪೇತ್ರನು ಪ್ರತ್ಯುತ್ತರ ವಾಗಿ--ನೀನು ಕ್ರಿಸ್ತನು, ಜೀವವುಳ್ಳ ದೇವರಕುಮಾರನು ಎಂದು ಹೇಳಿದನು.
- 1 John 5:1 1 ಯೋಹಾನನು 5:1ಯೇಸುವು ಕ್ರಿಸ್ತನಾಗಿದ್ದಾನೆಂದು ನಂಬುವ ಯಾವನಾದರೂ ದೇವರಿಂದ ಹುಟ್ಟಿದವನಾಗಿದ್ದಾನೆ; ತನ್ನನ್ನು ಹುಟ್ಟಿಸಿದಾತನನ್ನು ಪ್ರೀತಿ ಸುವ ಪ್ರತಿಯೊಬ್ಬನು ಆತನಿಂದ ಹುಟ್ಟಿದವನನ್ನು ಸಹ ಪ್ರೀತಿಸುತ್ತಾನೆ.
- Luke 9:20 ಲೂಕನು 9:20ಆತನು ಅವರಿಗೆ--ಆದರೆ ನಾನು ಯಾರಾಗಿದ್ದೇನೆಂದು ನೀವು ಅನ್ನುತ್ತೀರಿ ಎಂದು ಕೇಳಲು ಪೇತ್ರನು ಪ್ರತ್ಯುತ್ತರ ವಾಗಿ--ದೇವರ ಕ್ರಿಸ್ತನು ಎಂದು ಹೇಳಿದನು.
- John 11:27 ಯೋಹಾನನು 11:27ಆಕೆಯು ಆತನಿಗೆ--ಹೌದು, ಕರ್ತನೇ, ಲೋಕಕ್ಕೆ ಬರಬೇಕಾಗಿದ್ದ ದೇವರಮಗನಾದ ಕ್ರಿಸ್ತನು ನೀನೇ ಎಂದು ನಾನು ನಂಬುತ್ತೇನೆ ಅಂದಳು.
- John 4:42 ಯೋಹಾನನು 4:42ಆ ಸ್ತ್ರೀಗೆ-- ನಾವು ಈಗ ನಂಬುವದು ನಿನ್ನ ಮಾತಿನಿಂದಲ್ಲ; ಯಾಕಂದರೆ ನಾವೇ ಸ್ವತಃ ಈತನ ಮಾತನ್ನು ಕೇಳಿದ್ದೇವೆ ಮತ್ತು ಈತನು ನಿಜವಾಗಿಯೂ ಲೋಕರಕ್ಷಕನಾದ ಕ್ರಿಸ್ತನೆಂದು ಬಲ್ಲೆವು ಅಂದರು.
- Acts 9:20 ಅಪೊಸ್ತಲರ ಕೃತ್ಯಗಳು 9:20ಅವನು ಕೂಡಲೆ ಸಭಾಮಂದಿರಗಳಲ್ಲಿ ಕ್ರಿಸ್ತನ ವಿಷಯವಾಗಿ ಆತನೇ ದೇವಕುಮಾರನೆಂದು ಸಾರಿ ದನು.
- John 6:69 ಯೋಹಾನನು 6:69ನೀನು ಜೀವವುಳ್ಳ ದೇವರಮಗನಾದ ಆ ಕ್ರಿಸ್ತನೆಂದು ನಾವು ಖಂಡಿತವಾಗಿ ನಂಬಿದ್ದೇವೆ ಅಂದನು.
- John 1:41–49 ಯೋಹಾನನು 1:41–49ಇವನು ಮೊದಲು ತನ್ನ ಸ್ವಂತ ಸಹೋದರನಾದ ಸೀಮೋನನನ್ನು ಕಂಡು ಅವ ನಿಗೆ--ನಾವು ಮೆಸ್ಸೀಯನನ್ನು ಕಂಡುಕೊಂಡೆವು ಎಂದು ಹೇಳಿದನು (ಮೆಸ್ಸೀಯನು ಅಂದರೆ ಕ್ರಿಸ್ತನು ಎಂದರ್ಥ). 42ಆಗ ಅಂದ್ರೆಯನು ಸೀಮೋನನ್ನು ಯೇಸುವಿನ ಬಳಿಗೆ ಕರಕೊಂಡು ಬಂದನು. ಯೇಸು ಅವನನ್ನು ನೋಡಿ--ನೀನು ಯೋನನ ಮಗನಾದ ಸೀಮೋನನು, ನೀನು ಕೇಫನೆಂದು ಕರೆಯಲ್ಪಡುವಿ ಅಂದನು. (ಕೇಫ ಅಂದರೆ ಕಲ್ಲು ಎಂದರ್ಥ). ಮರುದಿನ ಯೇಸು ಗಲಿಲಾಯಕ್ಕೆ ಹೊರಟು ಹೋಗಬೇಕೆಂದಿದ್ದಾಗ ಫಿಲಿಪ್ಪನನ್ನು ಕಂಡು ಅವ ನಿಗೆ--ನನ್ನನ್ನು ಹಿಂಬಾಲಿಸು ಅಂದನು. ಫಿಲಿಪ್ಪನು ಅಂದ್ರೆಯನ ಮತ್ತು ಪೇತ್ರನ ಪಟ್ಟಣವಾದ ಬೇತ್ಸಾಯಿ ದವನು. ಫಿಲ್ಫಿಪನು ನತಾನಯೇಲನನ್ನು ಕಂಡು ಅವನಿಗೆ--ನ್ಯಾಯಪ್ರಮಾಣದಲ್ಲಿ ಮೋಶೆಯು ಮತ್ತು ಪ್ರವಾದಿಗಳು ಯಾವಾತನ ವಿಷಯವಾಗಿ ಬರೆದರೋ ಆತನನ್ನು ನಾವು ಕಂಡುಕೊಂಡೆವು; ಆತನು ಯೋಸೇ ಫನ ಮಗನಾದ ನಜರೇತಿನ ಯೇಸುವು ಅಂದನು. ಅದಕ್ಕೆ ನತಾನಯೇಲನು ಅವನಿಗೆ--ನಜರೇತಿ ನಿಂದ ಒಳ್ಳೇದೇನಾದರೂ ಬರುವದೋ? ಅಂದಾಗ ಫಿಲಿಪ್ಪನು ಅವನಿಗೆ--ಬಂದು ನೋಡು ಅಂದನು. ಯೇಸು ತನ್ನ ಬಳಿಗೆ ಬರುವ ನತಾನಯೇಲನನ್ನು ಕಂಡು ಅವನ ವಿಷಯವಾಗಿ--ಇಗೋ, ಇವನು ನಿಜ ವಾಗಿಯೂ ಇಸ್ರಾಯೇಲನು; ಇವನಲ್ಲಿ ಕಪಟವಿಲ್ಲ ಅಂದನು. ನತಾನಯೇಲನು ಆತನಿಗೆ--ನೀನು ನನ್ನನ್ನು ಹೇಗೆ ಬಲ್ಲೆ? ಅಂದನು; ಯೇಸು ಪ್ರತ್ಯುತ್ತರ ವಾಗಿ ಅವನಿಗೆ--ಫಿಲಿಪ್ಪನು ನಿನ್ನನ್ನು ಕರೆಯುವದಕ್ಕಿಂತ ಮುಂಚೆ ನೀನು ಆ ಅಂಜೂರ ಮರದ ಕೆಳಗೆ ಇದ್ದಾಗ ನಾನು ನಿನ್ನನ್ನು ನೋಡಿದೆನು ಅಂದನು. ನತಾನ ಯೇಲನು ಪ್ರತ್ಯುತ್ತರವಾಗಿ ಆತನಿಗೆ--ರಬ್ಬಿಯೇ, ನೀನು ದೇವರಕುಮಾರನು; ನೀನು ಇಸ್ರಾಯೇಲಿನ ಅರಸನು ಅಂದನು.
- 1 Peter 2:7 1 ಪೇತ್ರನು 2:7ಆದದರಿಂದ ನಂಬುವವರಾದ ನಿಮಗೆ ಆತನು ಅಮೂಲ್ಯನಾಗಿದ್ದಾನೆ. ಅವಿಧೇಯರಿಗಾ ದರೋ ಮನೆಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು.
- Acts 8:36 ಅಪೊಸ್ತಲರ ಕೃತ್ಯಗಳು 8:36ಅವರು ದಾರಿಯಲ್ಲಿ ಹೋಗುತ್ತಿರುವಾಗ ನೀರಿನ ಬಳಿಗೆ ಬಂದರು. ಕಂಚುಕಿಯು--ಅಗೋ, ನೀರು; ಬಾಪ್ತಿಸ್ಮ ಮಾಡಿಸಿಕೊಳ್ಳುವದಕ್ಕೆ ನನಗೆ ಅಡ್ಡಿ ಏನು ಅಂದನು.
- Mark 4:11 ಮಾರ್ಕನು 4:11ಅದಕ್ಕೆ ಆತನು ಅವರಿಗೆ--ದೇವರ ರಾಜ್ಯದ ಮರ್ಮವನ್ನು ತಿಳಿದುಕೊಳ್ಳಲು ನಿಮಗೆ ಕೊಡಲ್ಪಟ್ಟಿದೆ. ಆದರೆ ಹೊರಗಿನವರಿಗೆ ಇವೆಲ್ಲವುಗಳು ಸಾಮ್ಯಗಳಿಂದ ಹೇಳಲ್ಪಡುತ್ತವೆ.