Matthew · chapter 15 · verse 32
Matthew 15:32 in Kannada
ತರುವಾಯ ಯೇಸು ತನ್ನ ಶಿಷ್ಯರನ್ನು ಕರೆದು-- ನಾನು ಈ ಜನಸಮೂಹವನ್ನು ಕನಿಕರಿಸುತ್ತೇನೆ; ಯಾಕ ಂದರೆ ಈಗ ಬಿಟ್ಟೂಬಿಡದೆ ಮೂರು ದಿನಗಳಿಂದ ಅವರು ನನ್ನೊಂದಿಗಿದ್ದಾರೆ; ಮತ್ತು ಅವರಿಗೆ ತಿನ್ನುವದಕ್ಕೆ ಏನೂ ಇಲ್ಲ; ದಾರಿಯಲ್ಲಿ ಅವರು ಬಳಲಿಹೋದಾರೆಂದು ಅವ ರನ್ನು ಉಪವಾಸವಾಗಿ ಕಳುಹಿಸು
Taruvaaya yesu tanna shishyarannu karedu-- naanu ee janasamoohavannu kanikarisuttene; yaaka ndare eega bittoobidade mooru dinagalinda avaru nannondigiddaare; mattu avarige tinnuvadakke enoo illa; daariyalli avaru balalihodaarendu ava rannu upavaasavaagi kaluhisu
Matthew 15:32 in English
- King James Version (KJV)
- Then Jesus called his disciples [unto him], and said, I have compassion on the multitude, because they continue with me now three days, and have nothing to eat: and I will not send them away fasting, lest they faint in the way.
- World English Bible (WEB)
- Jesus summoned his disciples and said, “I have compassion on the multitude, because they have continued with me now three days and have nothing to eat. I don’t want to send them away fasting, or they might faint on the way.”
- American Standard Version (ASV)
- And Jesus called unto him his disciples, and said, I have compassion on the multitude, because they continue with me now three days and have nothing to eat: and I would not send them away fasting, lest haply they faint on the way.
- Bible in Basic English (BBE)
- And Jesus got his disciples together and said, I have pity for the people, because they have now been with me three days and have no food: and I will not send them away without food, or they will have no strength for the journey.
- Darby Translation (DBY)
- But Jesus, having called his disciples to [him], said, I have compassion on the crowd, because they have stayed with me already three days and they have not anything they can eat, and I would not send them away fasting lest they should faint on the way.
- Webster's Bible (WBS)
- Then Jesus called his disciples [to him] , and said, I have compassion on the multitude, because they continue with me now three days, and have nothing to eat: and I will not send them away fasting, lest they faint in the way.
- Young's Literal Translation (YLT)
- And Jesus having called near his disciples, said, 'I have compassion upon the multitude, because now three days they continue with me, and they have not what they may eat; and to let them away fasting I will not, lest they faint in the way.'
Read in context
- 30ಆಗ ಜನರ ದೊಡ್ಡ ಸಮೂಹಗಳು ಕುಂಟರನ್ನು ಕುರುಡರನ್ನು ಮೂಕರನ್ನು ಊನವಾದವರನ್ನು ಮತ್ತು ಬೇರೆ ಅನೇಕರನ್ನು ತಮ್ಮೊಂದಿಗೆ ಕರಕೊಂಡು ಯೇಸು ವಿನ ಪಾದಗಳ ಬಳಿಗೆ ತಂದರು. ಮತ್ತು ಆತನು ಅವರನ್ನು ಸ್ವಸ್ಥಪಡಿಸಿದನು.
- 31ಮೂಕರು ಮಾತನಾಡು ವದನ್ನೂ ಊನವಾದವರು ಸ್ವಸ್ಥರಾಗಿರುವದನ್ನೂ ಕುಂಟರು ನಡೆದಾಡುವದನ್ನೂ ಕುರುಡರು ನೋಡುವ ದನ್ನೂ ಜನಸಮೂಹದವರು ಕಂಡು ಆಶ್ಚರ್ಯದಿಂದ ಇಸ್ರಾಯೇಲಿನ ದೇವರನ್ನು ಮಹಿಮೆಪಡಿಸಿದರು.
- 32ತರುವಾಯ ಯೇಸು ತನ್ನ ಶಿಷ್ಯರನ್ನು ಕರೆದು-- ನಾನು ಈ ಜನಸಮೂಹವನ್ನು ಕನಿಕರಿಸುತ್ತೇನೆ; ಯಾಕ ಂದರೆ ಈಗ ಬಿಟ್ಟೂಬಿಡದೆ ಮೂರು ದಿನಗಳಿಂದ ಅವರು ನನ್ನೊಂದಿಗಿದ್ದಾರೆ; ಮತ್ತು ಅವರಿಗೆ ತಿನ್ನುವದಕ್ಕೆ ಏನೂ ಇಲ್ಲ; ದಾರಿಯಲ್ಲಿ ಅವರು ಬಳಲಿಹೋದಾರೆಂದು ಅವ ರನ್ನು ಉಪವಾಸವಾಗಿ ಕಳುಹಿಸು
- 33ಅದಕ್ಕೆ ಆತನ ಶಿಷ್ಯರು ಆತನಿಗೆ--ಇಂಥಾ ದೊಡ್ಡ ಸಮೂಹವನ್ನು ತೃಪ್ತಿಪಡಿಸುವಂತೆ ಈ ಅರಣ್ಯದಲ್ಲಿ ನಮಗೆ ಎಲ್ಲಿಂದ ರೊಟ್ಟಿಯು ಸಿಕ್ಕೀತು ಅಂದರು.
- 34ಆಗ ಯೇಸು ಅವರಿಗೆ--ನಿಮ್ಮ ಹತ್ತಿರ ಎಷ್ಟು ರೊಟ್ಟಿಗಳಿವೆ ಎಂದು ಕೇಳಿದನು. ಅವರು--ಏಳು ರೊಟ್ಟಿಗಳು ಮತ್ತು ಕೆಲವು ಚಿಕ್ಕ ಮಾನುಗಳಿವೆ ಅಂದರು.
Cross references
- Matthew 9:36 ಮತ್ತಾಯನು 9:36ಆದರೆ ಆತನು ಜನರ ಸಮೂಹಗಳನ್ನು ಕಂಡು ಅವರ ಮೇಲೆ ಕನಿಕರಪಟ್ಟನು; ಯಾಕಂದರೆ ಅವರು ಕುರುಬನಿಲ್ಲದ ಕುರಿಗಳಂತೆ ಚದರಿಸಲ್ಪಟ್ಟು ಬಳಲಿದವರಾಗಿದ್ದರು.
- Luke 12:29–30 ಲೂಕನು 12:29–30ನೀವು ಏನು ತಿನ್ನಬೇಕು ಇಲ್ಲವೆ ನೀವು ಏನು ಕುಡಿಯಬೇಕು ಎಂದು ತವಕಪಡಬೇಡಿರಿ; ನೀವು ಅನುಮಾನದ ಮನಸ್ಸಿನವ ರಾಗಿರಬೇಡಿರಿ. ಯಾಕಂದರೆ ಇವೆಲ್ಲವುಗಳಿಗಾಗಿ ಲೋಕದ ಜನಾಂಗಗಳು ಬಹಳವಾಗಿ ತವಕಪಡುತ್ತಾರೆ; ಆದರೆ ಇವುಗಳು ನಿಮಗೆ ಅಗತ್ಯವೆಂದು ನಿಮ್ಮ ತಂದೆಯು ಬಲ್ಲನು.
- Acts 27:33 ಅಪೊಸ್ತಲರ ಕೃತ್ಯಗಳು 27:33ಬೆಳಗಾಗುತ್ತಿರುವಷ್ಟರಲ್ಲಿ ಆಹಾರವನ್ನು ತೆಗೆದುಕೊಳ್ಳಬೇಕೆಂದು ಪೌಲನು ಅವರೆಲ್ಲರನ್ನು ಬೇಡಿ ಕೊಳ್ಳುವವನಾಗಿ--ಏನೂ ಆಹಾರವನ್ನು ತೆಗೆದು ಕೊಳ್ಳದೆ ಕಾದುಕೊಂಡು ಉಪವಾಸವಾಗಿರುವದು ಇದು ಹದಿನಾಲ್ಕನೆಯ ದಿವಸ.
- Matthew 14:14–21 ಮತ್ತಾಯನು 14:14–21ಆಗ ಯೇಸು ಹೊರಟುಹೋಗಿ ಜನರ ಮಹಾಸಮೂಹವನ್ನು ಕಂಡು ಅವರ ಮೇಲೆ ಕನಿಕರ ಪಟ್ಟು ಅವರಲ್ಲಿದ್ದ ರೋಗಿಗಳನ್ನು ಸ್ವಸ್ಥಮಾಡಿದನು. ಸಾಯಂಕಾಲವಾದಾಗ ಆತನ ಶಿಷ್ಯರು ಆತನ ಬಳಿಗೆ ಬಂದು--ಇದು ಅಡವಿಯ ಸ್ಥಳ, ಸಮಯವು ದಾಟಿತು; ಜನರು ಹಳ್ಳಿಗಳಿಗೆ ಹೋಗಿ ತಮಗಾಗಿ ಆಹಾರವನ್ನು ಕೊಂಡುಕೊಳ್ಳುವಂತೆ ಅವರನ್ನು ಕಳುಹಿಸಿಬಿಡು ಅಂದರು. ಆದರೆ ಯೇಸು ಅವ ರಿಗೆ--ಅವರು ಹೋಗುವದು ಅವಶ್ಯವಿಲ್ಲ; ಅವರು ಊಟಮಾಡುವದಕ್ಕೆ ನೀವೇ ಕೊಡಿರಿ ಎಂದು ಹೇಳಿದನು. ಅವರು ಆತನಿಗೆ--ನಮ್ಮ ಹತ್ತಿರ ಐದು ರೊಟ್ಟಿ ಎರಡು ಮಾನುಗಳು ಮಾತ್ರ ಇವೆ ಎಂದು ಹೇಳಿದರು. ಆತನು--ಅವುಗಳನ್ನು ನನ್ನ ಬಳಿಗೆ ತಕ್ಕೊಂಡು ಬನ್ನಿರಿ ಅಂದನು. ಜನ ಸಮೂಹವು ಹುಲ್ಲಿನಮೇಲೆ ಕೂತುಕೊಳ್ಳಬೇಕೆಂದು ಆತನು ಅಪ್ಪಣೆಕೊಟ್ಟು ಆ ಐದು ರೊಟ್ಟಿ ಎರಡು ಮಾನುಗಳನ್ನು ತಕ್ಕೊಂಡು ಪರಲೋಕದ ಕಡೆಗೆ ನೋಡಿ ಆಶೀರ್ವದಿಸಿ ಮುರಿದು ಆ ರೊಟ್ಟಿಗಳನ್ನು ತನ್ನ ಶಿಷ್ಯರಿಗೆ ಕೊಟ್ಟನು ಮತ್ತು ಶಿಷ್ಯರು ಜನಸಮೂಹಕ್ಕೆ ಕೊಟ್ಟರು. ಅವರೆಲ್ಲರೂ ತಿಂದು ತೃಪ್ತರಾದರು; ಮತ್ತು ಅವರು ಉಳಿದ ತುಂಡುಗಳನ್ನು ಕೂಡಿಸಿ ಹನ್ನೆ ರಡು ಪುಟ್ಟಿಗಳಲ್ಲಿ ತುಂಬಿಸಿದರು. ಊಟ ಮಾಡಿ ದವರು ಸ್ತ್ರೀಯರೂ ಮಕ್ಕಳೂ ಅಲ್ಲದೆ ಗಂಡಸರೇ ಹೆಚ್ಚು ಕಡಿಮೆ ಐದು ಸಾವಿರ ಇದ್ದರು.
- Mark 8:1–10 ಮಾರ್ಕನು 8:1–10ಆ ದಿವಸಗಳಲ್ಲಿ (ಯೇಸುವನ್ನು ಹಿಂಬಾಲಿಸುತ್ತಿದ್ದ) ದೊಡ್ಡ ಜನಸಮೂಹಕ್ಕೆ ಊಟಕ್ಕೇನೂ ಇರಲಿಲ್ಲ. ಆಗ ಯೇಸು ತನ್ನ ಶಿಷ್ಯರನ್ನು ಹತ್ತಿರಕ್ಕೆ ಕರೆದು ಅವರಿಗೆ-- ಜನ ಸಮೂಹವನ್ನು ನಾನು ಕನಿಕರಿಸುತ್ತೇನೆ; ಯಾಕಂದರೆ ಮೂರು ದಿನ ಗಳಿಂದ ಇವರು ನನ್ನೊಂದಿಗಿದ್ದಾರೆ ಮತ್ತು ಅವರಿಗೆ ಊಟಕ್ಕೇನೂ ಇಲ್ಲ. ನಾನು ಅವರನ್ನು ಉಪವಾಸ ವಾಗಿ ಅವರ ಮನೆಗಳಿಗೆ ಕಳುಹಿಸಿದರೆ ದಾರಿಯಲ್ಲಿ ಬಳಲಿ ಹೋಗುವರು; ಯಾಕಂದರೆ ಅವರಲ್ಲಿ ಕೆಲ ವರು ದೂರದಿಂದ ಬಂದಿದ್ದಾರೆ ಅಂದನು. ಅದಕ್ಕೆ ಆತನ ಶಿಷ್ಯರು ಪ್ರತ್ಯುತ್ತರವಾಗಿ ಆತನಿಗೆ-- ಒಬ್ಬನು ಈ ಅಡವಿಯಲ್ಲಿ ರೊಟ್ಟಿಯಿಂದ ಈ ಜನರನ್ನು ಎಲ್ಲಿಂದ ತೃಪ್ತಿಪಡಿಸಾನು ಅಂದರು. ಆತನು ಅವರಿಗೆ--ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ ಎಂದು ಕೇಳಿದ್ದಕ್ಕೆ ಅವರು --ಏಳು ರೊಟ್ಟಿಗಳು ಇವೆ ಅಂದರು. ಆಗ ಜನರು ನೆಲದ ಮೇಲೆ ಕೂತುಕೊಳ್ಳುವಂತೆ ಆತನು ಅಪ್ಪಣೆ ಕೊಟ್ಟು ಆ ಏಳು ರೊಟ್ಟಿಗಳನ್ನು ತಕ್ಕೊಂಡು ಸ್ತೋತ್ರ ಮಾಡಿ ಮುರಿದು ಜನರಿಗೆ ಹಂಚುವದಕ್ಕಾಗಿ ತನ್ನ ಶಿಷ್ಯರಿಗೆ ಕೊಟ್ಟನು; ಅವರು ಜನರಿಗೆ ಹಂಚಿದರು. ಇದಲ್ಲದೆ ಅವರಲ್ಲಿ ಕೆಲವು ಸಣ್ಣ ವಿಾನುಗಳಿದ್ದವು; ಆತನು ಅವುಗಳನ್ನೂ ಆಶೀರ್ವದಿಸಿ ಅವರಿಗೆ ಹಂಚು ವಂತೆ ಆಜ್ಞಾಪಿಸಿದನು. ಅವರೆಲ್ಲರೂ ತಿಂದು ತೃಪ್ತರಾ ದರು; ಮುರಿದ ಮಿಕ್ಕತುಂಡುಗಳನ್ನು ಅವರು ಏಳು ಪುಟ್ಟಿ ತುಂಬಿದರು. ಊಟಮಾಡಿದವರು ಸುಮಾರು ನಾಲ್ಕು ಸಾವಿರ ಮಂದಿ; ಆತನು ಅವರನ್ನು ಕಳುಹಿಸಿ ಬಿಟ್ಟನು. ಕೂಡಲೆ ಆತನು ತನ್ನ ಶಿಷ್ಯರೊಂದಿಗೆ ಒಂದು ದೋಣಿಯನ್ನು ಹತ್ತಿದಲ್ಮನೂಥ ಭಾಗಗಳಿಗೆ ಬಂದನು.
- Mark 9:22 ಮಾರ್ಕನು 9:22ಅದು ಅವನನ್ನು ನಾಶಪಡಿಸಲು ಅನೇಕ ಸಾರಿ ಬೆಂಕಿಯೊಳಗೂ ನೀರಿನೊಳಗೂ ಹಾಕಿತು; ಆದರೆ ನೀನು ಏನಾದರೂ ಮಾಡಲು ಸಾಧ್ಯ ವಿದ್ದರೆ ನಮ್ಮ ಮೇಲೆ ಕರುಣೆಯಿಟ್ಟು ನಮಗೆ ಸಹಾಯ ಮಾಡು ಅಂದನು.
- Matthew 6:32–33 ಮತ್ತಾಯನು 6:32–33(ಯಾಕಂದರೆ ಇವೆಲ್ಲವುಗಳಿಗಾಗಿ ಅನ್ಯಜನರು ತವಕ ಪಡುತ್ತಾರೆ;) ಆದರೆ ಇವೆಲ್ಲವುಗಳು ನಿಮಗೆ ಅಗತ್ಯವಾಗಿವೆ ಎಂದು ಪರಲೋಕದ ನಿಮ್ಮ ತಂದೆಗೆ ತಿಳಿದದೆ. ಆದರೆ ಮೊದಲು ನೀವು ದೇವರ ರಾಜ್ಯವನ್ನೂ ಆತನ ನೀತಿಯನ್ನೂ ಹುಡುಕಿರಿ. ಇವುಗಳ ಕೂಡ ಅವೆಲ್ಲವುಗಳು ಕೂಡಿಸಲ್ಪಡುವವು.ಆದಕಾರಣ ನಾಳೆಗೋಸ್ಕರ ಚಿಂತೆ ಮಾಡಬೇಡಿರಿ; ಯಾಕಂದರೆ ನಾಳಿನ ದಿನವು ತನಗೆ ಸಂಬಂಧ ಪಟ್ಟವುಗಳಿಗಾಗಿ ತಾನೇ ಚಿಂತಿಸುವದು. ಆ ದಿನಕ್ಕೆ ಅದರ ಕಾಟ ಸಾಕು.
- Matthew 27:63 ಮತ್ತಾಯನು 27:63ಅಯ್ಯಾ, ಆ ಮೋಸಗಾರನು ಇನ್ನೂ ಜೀವದಿಂದಿದ್ದಾಗ-- ಮೂರು ದಿನಗಳಾದ ಮೇಲೆ ನಾನು ತಿರಿಗಿ ಏಳುತ್ತೇನೆ ಎಂದು ಹೇಳಿದ್ದು ನಮ್ಮ ನೆನಪಿಗೆ ಬರುತ್ತದೆ.
- 1 Samuel 30:11–12 1 ಸಮುವೇಲನು 30:11–12ಅವರು ಒಬ್ಬ ಐಗುಪ್ತ್ಯನನ್ನು ಅಡವಿಯಲ್ಲಿ ಕಂಡುಕೊಂಡು ಅವನನ್ನು ದಾವೀದನ ಬಳಿಗೆ ತಂದು ಅವನಿಗೆ ರೊಟ್ಟಿಕೊಟ್ಟರು; ಅವನು ತಿಂದನು. ಅವನಿಗೆ ನೀರನ್ನು ಕುಡಿಸಿ ಅಂಜೂರದ ಫಲದ ಅಡೆಯಲ್ಲಿ ಒಂದು ತುಂಡನ್ನೂ ಒಣಗಿದ ಎರಡು ದ್ರಾಕ್ಷೇ ಗೊಂಚಲುಗಳನ್ನೂ ಅವನಿಗೆ ಕೊಟ್ಟರು. ಅವನು ಅವುಗಳನ್ನು ತಿಂದು ಪ್ರಾಣದಲ್ಲಿ ಚೇತರಿಸಿ ಕೊಂಡನು. ಯಾಕಂದರೆ ಅವನು ರಾತ್ರಿ ಹಗಲು ಮೂರು ದಿವಸದಿಂದ ರೊಟ್ಟಿ ತಿಂದಿರಲಿಲ್ಲ, ನೀರನ್ನೂ ಕುಡಿದಿರಲಿಲ್ಲ.
- Matthew 12:40 ಮತ್ತಾಯನು 12:40ಯಾಕಂದರೆ ಯೋನನು ಮೂರು ಹಗಲು ಮತ್ತು ಮೂರು ರಾತ್ರಿ ಮಾನಿನ ಹೊಟ್ಟೆಯಲ್ಲಿ ಇದ್ದ ಹಾಗೆಯೇ ಮನುಷ್ಯಕುಮಾರನು ಮೂರು ಹಗಲು ಮತ್ತು ಮೂರು ರಾತ್ರಿ ಭೂಗರ್ಭ ದಲ್ಲಿರುವನು.
- Luke 7:13 ಲೂಕನು 7:13ಕರ್ತನು ಆಕೆಯನ್ನು ನೋಡಿ ಆಕೆಯ ಮೇಲೆ ಕನಿಕರಪಟ್ಟು ಆಕೆಗೆ--ಅಳಬೇಡ ಅಂದನು.
- Matthew 20:34 ಮತ್ತಾಯನು 20:34ಯೇಸು ಅವರ ಮೇಲೆ ಕನಿಕರಪಟ್ಟು ಅವರ ಕಣ್ಣುಗಳನ್ನು ಮುಟ್ಟಿದನು; ಕೂಡಲೆ ಅವರ ಕಣ್ಣುಗಳು ದೃಷ್ಟಿಹೊಂದಿದವು; ಮತ್ತು ಅವರು ಆತನನ್ನು ಹಿಂಬಾಲಿಸಿದರು.