Matthew · chapter 17 · verse 3
Matthew 17:3 in Kannada
ಇಗೋ, ಮೋಶೆಯೂ ಎಲೀಯನೂ ಅವರಿಗೆ ಕಾಣಿಸಿಕೊಂಡು ಆತನ ಕೂಡ ಮಾತನಾಡು ತ್ತಿದ್ದರು.
Igo, mosheyoo eleeyanoo avarige kaanisikondu aatana kooda maatanaadu ttiddaru.
Matthew 17:3 in English
- King James Version (KJV)
- And, behold, there appeared unto them Moses and Elias talking with him.
- World English Bible (WEB)
- Behold, Moses and Elijah appeared to them talking with him.
- American Standard Version (ASV)
- And behold, there appeared unto them Moses and Elijah talking with him.
- Bible in Basic English (BBE)
- And Moses and Elijah came before their eyes, talking with him.
- Darby Translation (DBY)
- and lo, Moses and Elias appeared to them talking with him.
- Webster's Bible (WBS)
- And behold, there appeared to them Moses and Elijah talking with him.
- Young's Literal Translation (YLT)
- and lo, appear to them did Moses and Elijah, talking together with him.
Read in context
- 1ಆರು ದಿನಗಳಾದ ಮೇಲೆ ಯೇಸು ಪೇತ್ರನನ್ನೂ ಯಾಕೋಬನನ್ನೂ ಅವನ ಸಹೋದರನಾದ ಯೋಹಾನನನ್ನೂ ವಿಂಗಡವಾಗಿ ಕರಕೊಂಡು ಎತ್ತರವಾದ ಒಂದು ಬೆಟ್ಟಕ್ಕೆ ಹೋದನು.
- 2ಅಲ್ಲಿ ಆತನು ಅವರ ಮುಂದೆ ರೂಪಾಂತರ ಗೊಂಡನು. ಆತನ ಮುಖವು ಸೂರ್ಯನಂತೆ ಪ್ರಕಾಶಿಸಿತು; ಮತ್ತು ಆತನ ಉಡುಪು ಬೆಳಕಿನಂತೆ ಬೆಳ್ಳಗಿತ್ತು.
- 3ಇಗೋ, ಮೋಶೆಯೂ ಎಲೀಯನೂ ಅವರಿಗೆ ಕಾಣಿಸಿಕೊಂಡು ಆತನ ಕೂಡ ಮಾತನಾಡು ತ್ತಿದ್ದರು.
- 4ಆಗ ಪೇತ್ರನು ಯೇಸುವಿಗೆ--ಕರ್ತನೇ, ಇಲ್ಲಿಯೇ ಇರುವದು ನಮಗೆ ಒಳ್ಳೇದು. ನಿನಗೆ ಮನಸ್ಸಿದ್ದರೆ ನಾವು ನಿನಗೊಂದು ಮೋಶೆಗೊಂದು ಮತ್ತು ಎಲೀಯನಿಗೊಂದು ಇಲ್ಲಿ ಮೂರು ಗುಡಾರಗಳನ್ನು ಕಟ್ಟುವೆವು ಎಂದು ಹೇಳಿದನು.
- 5ಅವನು ಇನ್ನೂ ಮಾತನಾಡುತ್ತಿರುವಾಗಲೇ ಇಗೋ, ಪ್ರಕಾಶಮಾನವಾದ ಮೇಘವು ಅವರ ಮೇಲೆ ಕವಿದುಕೊಂಡಿತು; ಆಗ ಇಗೋ--ನಾನು ಬಹಳವಾಗಿ ಮೆಚ್ಚಿಕೊಂಡಿರುವ ಪ್ರಿಯನಾದ ನನ್ನ ಮಗನು ಈತನೇ; ಈತನ ಮಾತನ್ನು ನೀವು ಕೇಳಿರಿ ಎಂದು ಹೇಳುವ ಧ್ವನಿಯು ಮೇಘದೊಳಗಿಂದ ಉಂಟಾಯಿತು.
Cross references
- Malachi 4:5 ಮಲಾಕಿಯ 4:5ಇಗೋ, ಕರ್ತನ ದೊಡ್ಡ ಭಯಂಕರವಾದ ದಿನವು ಬರುವದಕ್ಕಿಂತ ಮುಂಚೆ ನಿಮಗೆ ಪ್ರವಾದಿಯಾದ ಎಲೀಯನನ್ನು ಕಳುಹಿಸುತ್ತೇನೆ.ನಾನು ಬಂದು ಭೂಮಿಯನ್ನು ಶಾಪದಿಂದ ಹೊಡೆಯದ ಹಾಗೆ ಅವನು ತಂದೆಗಳ ಹೃದಯವನ್ನು ಮಕ್ಕಳ ಕಡೆಗೂ ಮಕ್ಕಳ ಹೃದಯವನ್ನು ತಮ್ಮ ತಂದೆಗಳ ಕಡೆಗೂ ತಿರುಗಿಸುವನು.
- Luke 24:44 ಲೂಕನು 24:44ಆಗ ಆತನು ಅವರಿಗೆ--ಮೋಶೆಯ ನ್ಯಾಯ ಪ್ರಮಾಣದಲ್ಲಿಯೂ ಪ್ರವಾದನೆಗಳಲ್ಲಿಯೂ ಕೀರ್ತನೆ ಗಳಲ್ಲಿಯೂ ನನ್ನನ್ನು ಕುರಿತಾಗಿ ಬರೆಯಲ್ಪಟ್ಟವು ಗಳೆಲ್ಲವು ನೆರವೇರುವದು ಅಗತ್ಯವಾಗಿದೆ ಎಂಬ ಈ ಮಾತುಗಳನ್ನು ನಾನು ನಿಮ್ಮೊಂದಿಗೆ ಇದ್ದಾಗಲೇ ಹೇಳಿದ್ದೆನು ಅಂದನು.
- Mark 9:4 ಮಾರ್ಕನು 9:4ಆಗ ಅಲ್ಲಿ ಎಲೀಯನು ಮೋಶೆ ಯೊಂದಿಗೆ ಅವರಿಗೆ ಕಾಣಿಸಿಕೊಂಡು ಯೇಸುವಿನೊ ಂದಿಗೆ ಮಾತನಾಡುತ್ತಿದ್ದರು.
- 1 Kings 18:36–40 1 ಅರಸುಗಳು 18:36–40ಸಾಯಂಕಾಲದ ಬಲಿಯನ್ನು ಅರ್ಪಿಸುವ ವೇಳೆ ಯಲ್ಲಿ ಪ್ರವಾದಿಯಾದ ಎಲೀಯನು ಸವಿಾಪಕ್ಕೆ ಬಂದು--ಅಬ್ರಹಾಮನಿಗೂ ಇಸಾಕನಿಗೂ ಇಸ್ರಾ ಯೇಲಿಗೂ ದೇವರಾದ ಕರ್ತನೇ, ಇಸ್ರಾಯೇಲಿನಲ್ಲಿ ನೀನು ದೇವರೆಂದೂ ನಾನು ನಿನ್ನ ಸೇವಕನೆಂದೂ ನಾನು ಈ ಕಾರ್ಯಗಳನ್ನೆಲ್ಲಾ ನಿನ್ನ ಮಾತಿನ ಹಾಗೆಯೇ ಮಾಡಿದೆನೆಂದೂ ಇಂದು ತಿಳಿಯಲ್ಪಡಲಿ. ನೀನು ದೇವರಾದ ಕರ್ತನೆಂದೂ ನೀನು ಅವರ ಹೃದಯವನ್ನು ಮರಳಿ ತಿರಿಗಿಸುತ್ತಿ ಎಂದೂ ಈ ಜನವು ತಿಳಿಯುವ ಹಾಗೆ ನನಗೆ ಉತ್ತರಕೊಡು, ಓ ಕರ್ತನೇ, ನನಗೆ ಉತ್ತರಕೊಡು ಎಂದು ಬೇಡಿದನು. ಆಗ ಕರ್ತನ ಬೆಂಕಿಯು ಇಳಿದು ಬಂದು ದಹನಬಲಿಯನ್ನೂ ಕಟ್ಟಿಗೆ ಗಳನ್ನೂ ಕಲ್ಲುಗಳನ್ನೂ ಮಣ್ಣನ್ನೂ ಸುಟ್ಟುಬಿಟ್ಟು ಕಾಲುವೆ ಯಲ್ಲಿದ್ದ ನೀರನ್ನು ಹೀರಿಬಿಟ್ಟಿತು. ಜನರೆಲ್ಲರು ಇದನ್ನು ನೋಡಿದಾಗ ಬೋರಲು ಬಿದ್ದು--ಕರ್ತನು ತಾನೇ ದೇವರು, ಕರ್ತನು ತಾನೇ ದೇವರು ಅಂದರು. ಆಗ ಎಲೀಯನು ಅವರಿಗೆ--ನೀವು ಬಾಳನ ಪ್ರವಾದಿಗಳನ್ನು ಹಿಡಿಯಿರಿ; ಅವರಲ್ಲಿ ಒಬ್ಬನೂ ತಪ್ಪಿಸಿ ಕೊಳ್ಳದೆ ಇರಲಿ ಅಂದನು. ಇವರು ಅವರನ್ನು ಹಿಡಿ ದರು; ಎಲೀಯನು ಅವರನ್ನು ಕೀಷೋನ್ಹಳ್ಳದ ಬಳಿಗೆ ತಕ್ಕೊಂಡುಹೋಗಿ ಅಲ್ಲಿ ಅವರನ್ನು ಕೊಂದು ಹಾಕಿದನು.
- Deuteronomy 34:10 ಧರ್ಮೋಪದೇಶಕಾಂಡ 34:10ಆದರೆ ಐಗುಪ್ತದೇಶದಲ್ಲಿ ಫರೋಹನಿಗೂ ಅವನ ಎಲ್ಲಾ ಸೇವಕರಿಗೂ ಅವನ ಎಲ್ಲಾ ದೇಶಕ್ಕೂ ಮಾಡಿ ದಕ್ಕೆ ಕರ್ತನು ಅವನನ್ನು ಕಳುಹಿಸಿದ ಸಮಸ್ತ ಗುರುತು ಗಳ ಮತ್ತು ಅದ್ಭುತಗಳ ವಿಷಯದಲ್ಲಿಯೂ
- Matthew 17:10–13 ಮತ್ತಾಯನು 17:10–13ಆಗ ಆತನ ಶಿಷ್ಯರು ಆತನಿಗೆ--ಎಲೀಯನು ಮೊದಲು ಬರುವದು ಅಗತ್ಯವೆಂದು ಶಾಸ್ತ್ರಿಗಳು ಯಾಕೆ ಹೇಳುತ್ತಾರೆ ಎಂದು ಕೇಳಿದರು. ಯೇಸು ಪ್ರತ್ಯುತ್ತರವಾಗಿ ಅವ ರಿಗೆ -- ಎಲೀಯನು ಮೊದಲು ಬಂದು ಎಲ್ಲವುಗಳನ್ನು ತಿರಿಗಿ ಯಥಾಸ್ಥಾನ ಪಡಿಸುವದು ನಿಜವೇ; ಆದರೆ ಎಲೀಯನು ಆಗಲೇ ಬಂದನು. ಮತ್ತು ಅವರು ಅವನನ್ನು ಅರಿಯದೆ ತಮಗೆ ಇಷ್ಟಬಂದಂತೆ ಅವನಿಗೆ ಮಾಡಿದ್ದಾಯಿತು. ಅದರಂತೆಯೇ ಮನುಷ್ಯಕುಮಾರ ನು ಸಹ ಅವರಿಂದ ಶ್ರಮೆಯನ್ನು ಅನುಭವಿಸುವನು ಎಂದು ನಾನು ನಿಮಗೆ ಹೇಳುತ್ತೇನೆ ಅಂದನು. ಬಾಪ್ತಿಸ್ಮ ಮಾಡಿಸುವ ಯೋಹಾನನ ವಿಷಯದಲ್ಲಿ ಆತನು ತಮ್ಮೊಂದಿಗೆ ಮಾತನಾಡಿದನೆಂದು ಶಿಷ್ಯರು ಆಗ ಗ್ರಹಿಸಿಕೊಂಡರು.
- Deuteronomy 34:5–6 ಧರ್ಮೋಪದೇಶಕಾಂಡ 34:5–6ಕರ್ತನ ಮಾತಿನ ಹಾಗೆ ಕರ್ತನ ದಾಸನಾದ ಮೋಶೆಯು ಅಲ್ಲಿ ಮೋವಾಬಿನ ದೇಶದಲ್ಲಿ ಸತ್ತನು. ಆತನು ಅವನನ್ನು ಮೋವಾಬಿನ ದೇಶದ ತಗ್ಗಿನಲ್ಲಿ ಬೇತ್ಪಯೋರಿಗೆ ಎದುರಾಗಿ ಹೂಣಿಟ್ಟನು; ಅವನ ಸಮಾಧಿ ಇಂದಿನ ವರೆಗೆ ಯಾರಿಗೂ ಗೊತ್ತಿಲ್ಲ.
- 1 Kings 17:1 1 ಅರಸುಗಳು 17:1ಗಿಲ್ಯಾದಿನ ನಿವಾಸಿಗಳಲ್ಲಿ ತಿಷ್ಬೀಯನಾದ ಎಲೀಯನು ಅಹಾಬನಿಗೆ--ಯಾವಾತನ ಸಮ್ಮುಖದಲ್ಲಿ ನಿಲ್ಲುತ್ತೇನೋ ಆ ಇಸ್ರಾಯೇಲಿನ ದೇವ ರಾದ ಕರ್ತನ ಜೀವದಾಣೆ, ನನ್ನ ಮಾತಿನ ಪ್ರಕಾರ ವಲ್ಲದೆ ಈ ವರ್ಷಗಳಲ್ಲಿ ಮಂಜೂ ಮಳೆಯೂ ಬೀಳು ವದಿಲ್ಲ ಅಂದನು.
- Luke 16:16 ಲೂಕನು 16:16ನ್ಯಾಯ ಪ್ರಮಾಣವೂ ಪ್ರವಾದನೆಗಳೂ ಯೋಹಾ ನನವರೆಗೆ ಇದ್ದವು; ದೇವರ ರಾಜ್ಯವು ಅಂದಿನಿಂದ ಸಾರಲ್ಪಡುತ್ತಾ ಇದೆ, ಪ್ರತಿಯೊಬ್ಬನು ಬಲವಂತದಿಂದ ಅದರೊಳಗೆ ನುಗ್ಗುತ್ತಾನೆ.
- 2 Corinthians 3:7–11 2 ಕೊರಿಂಥದವರಿಗೆ 3:7–11ಆದರೆ ಮರಣದ ಸೇವೆಯು ಕಲ್ಲಿನ ಮೇಲೆ ಲಿಖಿತವಾದ ಅಕ್ಷರಗಳಲ್ಲಿದ್ದರೂ ಪ್ರಭಾವದಿಂದ ಕೂಡಿದ್ದಾಗಿತ್ತು; ಆ ಪ್ರಭಾವದಿಂದ ಮೋಶೆಯ ಮುಖಕ್ಕೆ ಬಂದ ಪ್ರಕಾಶವು ಕುಂದಿ ಹೋಗುವಂಥ ದ್ದಾಗಿದ್ದರೂ ಅದರ ನಿಮಿತ್ತ ಇಸ್ರಾಯೇಲ್ಯರು ಅವನ ಮುಖವನ್ನು ದೃಷ್ಟಿಸಿ ನೋಡಲಾರದೆ ಇದ್ದರು. ಹೀಗಿದ್ದ ಮೇಲೆ ಆತ್ಮ ಸಂಬಂಧವಾದ ಸೇವೆಯು ಎಷ್ಟೋ ಹೆಚ್ಚಾಗಿ ಪ್ರಭಾವದಿಂದಿರುವದಲ್ಲವೇ? ಅಪರಾಧ ನಿರ್ಣಯದ ಸೇವೆಯು ಪ್ರಭಾವದಿಂದಿರುವದಾದರೆ ನೀತಿಯ ಸೇವೆಯು ಎಷ್ಟೋ ಅಧಿಕವಾದ ಪ್ರಭಾವವುಳ್ಳದ್ದಾಗಿರಬೇಕು. ಈಗ ಅತ್ಯಧಿಕವಾದ ಪ್ರಭಾವವುಳ್ಳದ್ದು ಬಂದದ್ದರಿಂದ ಪ್ರಭಾವವಾಗಿದ್ದದ್ದು ಈ ವಿಷಯದಲ್ಲಿ ಪ್ರಭಾವ ವಿಲ್ಲದ್ದಾಯಿತು. ಇಲ್ಲದೆ ಹೋಗುವಂಥದ್ದು ಪ್ರಭಾವ ವುಳ್ಳದ್ದಾಗಿದ್ದರೆ ಇರುವಂಥದ್ದು ಬಹು ಹೆಚ್ಚಾಗಿ ಪ್ರಭಾವವುಳ್ಳದ್ದಾಗಿರಬೇಕಲ್ಲವೇ?
- 2 Kings 2:11–14 2 ಅರಸುಗಳು 2:11–14ಅವರು ನಡೆದು ಬಂದು ಮಾತನಾಡಿಕೊಂಡಿರುವಾಗ ಆದದ್ದೇನಂದರೆ, ಇಗೋ, ಬೆಂಕಿಯ ರಥವೂ ಬೆಂಕಿಯ ಕುದುರೆ ಗಳೂ ಅವರಿಬ್ಬರನ್ನು ವಿಂಗಡಿಸಿದವು; ಎಲೀಯನು ಬಿರುಗಾಳಿಯಲ್ಲಿ ಆಕಾಶಕ್ಕೆ ಏರಿಹೋದನು. ಎಲೀ ಷನು ಅದನ್ನು ನೋಡಿ--ನನ್ನ ತಂದೆಯೇ, ನನ್ನ ತಂದೆಯೇ, ಇಸ್ರಾಯೇಲಿನ ರಥವೇ, ಅದರ ಕುದುರೆ ರಾಹುತರಾಗಿದ್ದವನೇ ಎಂದು ಕೂಗಿದನು. ಮತ್ತೆ ಅವ ನನ್ನು ಕಾಣಲಿಲ್ಲ. ಆಗ ಅವನು ತನ್ನ ವಸ್ತ್ರಗಳನ್ನು ತೆಗೆದು ಎರಡು ತುಂಡಾಗಿ ಹರಿದನು. ಅವನು ಎಲೀಯನಿಂದ ಬಿದ್ದ ಹೊದಿಕೆಯನ್ನು ಎತ್ತಿಕೊಂಡು ಹಿಂದಕ್ಕೆಹೋಗಿ ಯೊರ್ದನಿನ ತೀರದಲ್ಲಿ ನಿಂತನು. ಎಲೀಯನಿಂದ ಬಿದ್ದ ಹೊದಿಕೆಯನ್ನು ತಕ್ಕೊಂಡು ನೀರನ್ನು ಹೊಡೆದು--ಎಲೀಯನ ದೇವರಾದ ಕರ್ತನು ಎಲ್ಲಿದ್ದಾನೆ ಅಂದನು. ಅವನು ಹಾಗೆ ನೀರನ್ನು ಹೊಡೆದ ತರುವಾಯ ಅದು ಎರಡು ಭಾಗವಾದದ್ದರಿಂದ ಎಲೀ ಷನು ದಾಟಿಹೋದನು.
- Luke 9:33 ಲೂಕನು 9:33ಇದಾದ ಮೇಲೆ ಅವರು ಹೋಗುತ್ತಿದ್ದಾಗ ಪೇತ್ರನು ಯೇಸುವಿಗೆ--ಬೋಧಕನೇ, ನಾವು ಇಲ್ಲೇ ಇರುವದು ನಮಗೆ ಒಳ್ಳೇದು; ನಾವು ನಿನಗೊಂದು ಮೋಶೆಗೊಂದು ಮತ್ತು ಎಲೀಯನಿಗೊಂದು ಮೂರು ಗುಡಾರಗಳನ್ನು ಮಾಡುವೆವು ಅಂದನು. ತಾನು ಹೇಳಿದ್ದನ್ನು ಅವನು ಅರಿಯದೆ ಇದ್ದನು.