Matthew · chapter 25 · verse 2
Matthew 25:2 in Kannada
ಅವರಲ್ಲಿ ಐದುಮಂದಿ ಬುದ್ಧಿವಂತೆಯರೂ ಐದು ಮಂದಿ ಬುದ್ಧಿಹೀನರೂ ಇದ್ದರು.
Avaralli aidumandi buddhivanteyaroo aidu mandi buddhiheenaroo iddaru.
Matthew 25:2 in English
- King James Version (KJV)
- And five of them were wise, and five [were] foolish.
- World English Bible (WEB)
- Five of them were foolish, and five were wise.
- American Standard Version (ASV)
- And five of them were foolish, and five were wise.
- Bible in Basic English (BBE)
- And five of them were foolish, and five were wise.
- Darby Translation (DBY)
- And five of them were prudent and five foolish.
- Webster's Bible (WBS)
- And five of them were wise, and five [were] foolish.
- Young's Literal Translation (YLT)
- and five of them were prudent, and five foolish;
Read in context
- 1ಇದಲ್ಲದೆ ಪರಲೋಕ ರಾಜ್ಯವು ತಮ್ಮ ದೀಪಗಳನ್ನು ತಕ್ಕೊಂಡು ಮದಲಿಂಗ ನನ್ನು ಎದುರುಗೊಳ್ಳುವದಕ್ಕಾಗಿ ಹೊರಟುಹೋದ ಹತ್ತುಮಂದಿ ಕನ್ಯೆಯರಿಗೆ ಹೋಲಿಕೆಯಾಗಿರುವದು.
- 2ಅವರಲ್ಲಿ ಐದುಮಂದಿ ಬುದ್ಧಿವಂತೆಯರೂ ಐದು ಮಂದಿ ಬುದ್ಧಿಹೀನರೂ ಇದ್ದರು.
- 3ಬುದ್ಧಿಹೀನರು ತಮ್ಮ ದೀಪಗಳನ್ನು ತಕ್ಕೊಂಡು ತಮ್ಮೊಂದಿಗೆ ಎಣ್ಣೆಯನ್ನು ತಕ್ಕೊಳ್ಳಲಿಲ್ಲ,
- 4ಬುದ್ದಿವಂತೆಯರು ತಮ್ಮ ದೀಪಗಳೊ ಂದಿಗೆ ಪಾತ್ರೆಯಲ್ಲಿ ಎಣ್ಣೆಯನ್ನೂ ತಕ್ಕೊಂಡರು.
Cross references
- Jeremiah 24:2 ಯೆರೆಮೀಯ 24:2ಒಂದು ಪುಟ್ಟಿಯಲ್ಲಿ ಬಹಳ ಒಳ್ಳೇ ಹಣ್ಣುಗಳು ಮೊದಲು ಮಾಗುವ ಹಣ್ಣುಗಳ ಹಾಗೆ ಇರುವವುಗಳೂ ಮತ್ತೊಂದು ಪುಟ್ಟಿಯಲ್ಲಿ ಬಹಳ ಕೆಟ್ಟ ಹಣ್ಣುಗಳು, ತಿನ್ನಕೂಡದ ಹಾಗೆ ಅಷ್ಟು ಕೆಟ್ಟವುಗಳೂ ಇದ್ದವು.
- 1 Corinthians 10:1–5 1 ಕೊರಿಂಥದವರಿಗೆ 10:1–5ಇದಲ್ಲದೆ ಸಹೋದರರೇ, ನೀವು ಈ ವಿಷಯಗಳನ್ನು ಅರಿಯದವರಾಗಿರ ಬಾರದೆಂದು ನನ್ನ ಅಪೇಕ್ಷೆಯಲ್ಲ; ಅದೇನಂದರೆ--ನಮ್ಮ ಪಿತೃಗಳೆಲ್ಲರೂ ಮೇಘದ ಕೆಳಗೆ ಇದ್ದು ಸಮುದ್ರವನ್ನು ದಾಟಿದರು; ಅವರೆಲ್ಲರೂ ಮೋಶೆ ಗಾಗಿ ಮೇಘದಲ್ಲಿಯೂ ಸಮುದ್ರದಲ್ಲಿಯೂ ಬಾಪ್ತಿಸ್ಮ ಹೊಂದಿದರು; ಅವರೆಲ್ಲರೂ ಆತ್ಮಿಕವಾದ ಒಂದೇ ಆಹಾರವನ್ನು ತಿಂದರು; ಅವರೆಲ್ಲರೂ ಆತ್ಮಿಕವಾದ ಒಂದೇ ಪಾನವನ್ನು ಕುಡಿದರು; ಯಾಕಂದರೆ ಅವರನ್ನು ಹಿಂಬಾಲಿಸಿದ ಆ ಆತ್ಮಿಕ ಬಂಡೆಯೊಳಗಿಂದ ಅವರು ಕುಡಿದರು; ಆ ಬಂಡೆಯು ಕ್ರಿಸ್ತನೇ. ಆದರೆ ಅವ ರೊಳಗೆ ಅನೇಕರ ವಿಷಯದಲ್ಲಿ ದೇವರು ಸಂತೋಷಿ ಸಲಿಲ್ಲ; ಯಾಕಂದರೆ ಅವರು ಅಡವಿಯೊಳಗೆ ಸಂಹರಿ ಸಲ್ಪಟ್ಟರು.
- Matthew 13:47–48 ಮತ್ತಾಯನು 13:47–48ಪರಲೋಕರಾಜ್ಯವು ಸಮುದ್ರದಲ್ಲಿ ಬೀಸಲ್ಪಟ್ಟು ಎಲ್ಲಾ ತರವಾದದ್ದನ್ನು (ಮಾನುಗಳನ್ನು) ಕೂಡಿಸಿದ ಬಲೆಗೆ ಹೋಲಿಕೆಯಾಗಿದೆ. ಅದು ತುಂಬಿದಾಗ ಅವರು ಅದನ್ನು ದಡಕ್ಕೆ ಎಳೆದು ಕೂತುಕೊಂಡು ಒಳ್ಳೆಯವುಗಳನ್ನು ಪಾತ್ರೆಗಳಲ್ಲಿ ತುಂಬಿಸಿ ಕೆಟ್ಟವುಗಳನ್ನು ಹೊರಗೆ ಬಿಸಾಡಿದರು.
- Matthew 13:19–23 ಮತ್ತಾಯನು 13:19–23ಯಾವನಾದರೂ ರಾಜ್ಯದ ವಾಕ್ಯವನ್ನು ಕೇಳಿ ಗ್ರಹಿಸದೆ ಇರುವಾಗ ಕೆಡುಕನು ಬಂದು ಅವನ ಹೃದಯದಲ್ಲಿ ಬಿತ್ತಿದ್ದನ್ನು ತೆಗೆದು ಬಿಡು ವನು; ದಾರಿಯ ಮಗ್ಗುಲಲ್ಲಿ ಬೀಜವನ್ನು ಅಂಗೀಕರಿ ಸಿದವನು ಇವನೇ. ಮತ್ತು ಬಂಡೆಯ ಸ್ಥಳಗಳಲ್ಲಿ ಬೀಜವನ್ನು ಅಂಗೀಕರಿಸಿದವನು ಇವನೇ; ಇವನು ವಾಕ್ಯವನ್ನು ಕೇಳಿದ ಕೂಡಲೆ ಸಂತೋಷದಿಂದ ಅದನ್ನು ಅಂಗೀಕರಿಸುತ್ತಾನೆ; ಆದರೂ ಅವನಲ್ಲಿ ಬೇರಿಲ್ಲದ ಕಾರಣ ಸ್ವಲ್ಪಕಾಲ ಮಾತ್ರ ಇರುವನು; ಯಾಕಂದರೆ ವಾಕ್ಯಕ್ಕಾಗಿ ಸಂಕಟ ಇಲ್ಲವೆ ಹಿಂಸೆ ಬಂದಾಗ ತಕ್ಷಣವೇ ಅವನು ಅಭ್ಯಂತರ ಪಡುವನು. ಮುಳ್ಳುಗಳಲ್ಲಿ ಬೀಜವನ್ನು ಅಂಗೀಕರಿಸಿದವನು ಸಹ ಇವನೇ; ಇವನು ವಾಕ್ಯವನ್ನು ಕೇಳುತ್ತಾನೆ; ಆದರೆ ಈ ಪ್ರಪಂಚದ ಚಿಂತೆಯೂ ಐಶ್ವರ್ಯದ ಮೋಸವೂ ವಾಕ್ಯವನ್ನು ಅಡಗಿಸುವ ದರಿಂದ ಅವನು ಫಲ ಕೊಡಲಾರನು. ಆದರೆ ಒಳ್ಳೇ ಭೂಮಿಯಲ್ಲಿ ಬೀಜ ವನ್ನು ಅಂಗೀಕರಿಸಿದವನು ಇವನೇ; ಇವನು ವಾಕ್ಯ ವನ್ನು ಕೇಳಿ ಅದನು ಗ್ರಹಿಸುತ್ತಾನೆ; ಇವನೇ ಫಲಫಲಿ ಸುವವನಾಗಿ ನೂರರಷ್ಟು ಅರವತ್ತರಷ್ಟು ಮತ್ತು ಮೂವತ್ತರಷ್ಟು ಫಲವನ್ನು ಕೊಡುತ್ತಾನೆ.
- 1 John 2:19 1 ಯೋಹಾನನು 2:19ಅವರು ನಮ್ಮಿಂದ ಹೊರಟುಹೋದರು; ಆದರೆ ಅವರು ನಮ್ಮವ ರಾಗಿರಲಿಲ್ಲ. ಯಾಕಂದರೆ ಅವರು ನಮ್ಮವರಾಗಿದ್ದರೆ ನಮ್ಮ ಜೊತೆಯಲ್ಲೇ ಇರುತ್ತಿದ್ದರು. ಆದರೆ ಅವರು ನಮ್ಮಿಂದ ಹೊರಟು ಹೋದದರಿಂದ ಅವರೆಲ್ಲರೂ ನಮ್ಮವರಲ್ಲವೆಂಬದು ತೋರಿಬಂತು.
- Jude 1:5 ಯೂದನು 1:5ನೀವು ಇದನ್ನು ಒಂದು ಸಾರಿ ತಿಳಿದವರಾಗಿದ್ದರೂ ನಾನು ಅದನ್ನೇ ನಿಮ್ಮ ಜ್ಞಾಪಕಕ್ಕೆ ತರಬೇಕೆಂದು ಅಪೇಕ್ಷಿಸುತ್ತೇನೆ. ಅದು ಯಾವದಂದರೆ--ಕರ್ತನು (ತನ್ನ) ಪ್ರಜೆಯನ್ನು ಐಗುಪ್ತದೇಶದೊಳಗಿಂದ ರಕ್ಷಿಸಿ ದರೂ ತರುವಾಯ ಅವರೊಳಗೆ ನಂಬದೆ ಹೋದ ವರನ್ನು ಸಂಹಾರ ಮಾಡಿದನು.
- Matthew 24:45 ಮತ್ತಾಯನು 24:45ಹಾಗಾದರೆ ತನ್ನ ಮನೆಯಲ್ಲಿದ್ದವರಿಗೆ ತಕ್ಕ ಕಾಲ ದಲ್ಲಿ ಆಹಾರ ಕೊಡುವಂತೆ ಅವರ ಮೇಲೆ ತನ್ನ ಯಜಮಾನನು ನೇಮಿಸಿದ ಅಧಿಕಾರಿಯೂ ನಂಬಿಗಸ್ತನೂ ಜ್ಞಾನಿಯೂ ಆದ ಸೇವಕನು ಯಾರು?
- Matthew 13:38–43 ಮತ್ತಾಯನು 13:38–43ಹೊಲವು ಈ ಲೋಕ; ಒಳ್ಳೇ ಬೀಜವು ರಾಜ್ಯದ ಮಕ್ಕಳಾಗಿದ್ದಾರೆ; ಆದರೆ ಹಣಜಿಯು ಕೆಡುಕನ ಮಕ್ಕಳಾಗಿದ್ದಾರೆ. ಅದನ್ನು ಬಿತ್ತಿದ ವೈರಿಯು ಸೈತಾನನೇ; ಸುಗ್ಗೀ ಕಾಲವು ಲೋಕದ ಅಂತ್ಯವಾಗಿದೆ; ಮತ್ತು ಕೊಯ್ಯುವವರು ದೂತರೇ. ಹೇಗೆ ಹಣಜಿಯನ್ನು ಕೂಡಿಸಿ ಬೆಂಕಿಯಲ್ಲಿ ಸುಡು ವರೋ ಹಾಗೆಯೇ ಈ ಲೋಕಾಂತ್ಯದಲ್ಲಿ ಆಗುವದು. ಮನುಷ್ಯಕುಮಾರನು ತನ್ನ ದೂತರನ್ನು ಕಳುಹಿ ಸುವನು; ಅವರು ಆತಂಕ ಮಾಡುವ ಎಲ್ಲವುಗಳನ್ನೂ ದುಷ್ಟತನ ಮಾಡುವವರನ್ನೂ ಆತನ ರಾಜ್ಯದೊಳಗಿಂದ ಕೂಡಿಸಿ ಅವರನ್ನು ಬೆಂಕಿಯ ಆವಿಗೆಯಲ್ಲಿ ಹಾಕುವರು; ಅಲ್ಲಿ ಗೋಳಾಟವೂ ಹಲ್ಲು ಕಡಿಯೋಣವೂ ಇರುವವು. ತರುವಾಯ ನೀತಿವಂತರು ತಮ್ಮ ತಂದೆಯ ರಾಜ್ಯದಲ್ಲಿ ಸೂರ್ಯನಂತೆ ಪ್ರಕಾಶಿಸುವರು. ಕೇಳುವದಕ್ಕೆ ಕಿವಿಗಳುಳ್ಳವನು ಕೇಳಲಿ.
- Matthew 22:10–11 ಮತ್ತಾಯನು 22:10–11ಆಗ ಆ ಸೇವಕರು ಹೆದ್ದಾರಿಗಳಿಗೆ ಹೋಗಿ ತಾವು ಕಂಡವರ ನ್ನೆಲ್ಲಾ ಅಂದರೆ ಕೆಟ್ಟವರನ್ನೂ ಒಳ್ಳೆಯವರನ್ನೂ ಒಟ್ಟು ಗೂಡಿಸಿದರು; ಹೀಗೆ ಮದುವೆಗೆ ಅತಿಥಿಗಳು ತುಂಬಿ ಕೊಂಡರು. ತರುವಾಯ ಅರಸನು ಅತಿಥಿಗಳನ್ನು ನೋಡುವದಕ್ಕಾಗಿ ಒಳಗೆ ಬಂದು ಮದುವೆಯ ಉಡು ಪಿಲ್ಲದೆ ಇದ್ದ ಒಬ್ಬ ಮನುಷ್ಯನನ್ನು ಅಲ್ಲಿ ಕಂಡನು.
- Matthew 7:24–27 ಮತ್ತಾಯನು 7:24–27ಆದದರಿಂದ ಯಾವನಾದರೂ ನಾನು ಹೇಳುವ ಈ ನನ್ನ ಮಾತುಗಳನ್ನು ಕೇಳಿ ಅವುಗಳಂತೆ ಮಾಡುವವನನ್ನು ಬಂಡೆಯ ಮೇಲೆ ತನ್ನ ಮನೆಯನ್ನು ಕಟ್ಟಿದ ಬುದ್ಧಿವಂತನಿಗೆ ಹೋಲಿಸುವೆನು. ಮಳೆಯು ಸುರಿದು ಪ್ರವಾಹಗಳು ಬಂದು ಗಾಳಿಯು ಬೀಸಿ ಆ ಮನೆಗೆ ಬಡಿದವು; ಆದರೂ ಅದು ಬೀಳಲಿಲ್ಲ; ಯಾಕಂದರೆ ಅದರ ಅಸ್ತಿವಾರವು ಬಂಡೆಯ ಮೇಲೆ ಹಾಕಲ್ಪಟ್ಟಿತು. ಈ ನನ್ನ ಮಾತುಗಳನ್ನು ಕೇಳುವ ಪ್ರತಿಯೊಬ್ಬನು ಅವುಗಳಂತೆ ನಡೆಯದೆ ಹೋದರೆ ಅವನು ಮರಳಿನ ಮೇಲೆ ತನ್ನ ಮನೆಯನ್ನು ಕಟ್ಟಿದ ಬುದ್ಧಿಹೀನನಿಗೆ ಹೋಲಿಕೆಯಾಗಿರುವನು. ಹೇಗಂದರೆ ಮಳೆಯು ಸುರಿದು ಪ್ರವಾಹಗಳು ಬಂದು ಗಾಳಿಯು ಬೀಸಿ ಆ ಮನೆಗೆ ಬಡಿದವು; ಆಗ ಅದು ಬಿತ್ತು; ಮತ್ತು ಅದರ ಬೀಳುವಿಕೆಯು ದೊಡ್ಡದಾಗಿತ್ತು.