Matthew · chapter 5 · verse 39
Matthew 5:39 in Kannada
ಆದರೆ ನಾನು ನಿಮಗೆ ಹೇಳುವದೇನಂದರೆ--ನೀವು ಕೆಟ್ಟದ್ದನ್ನು ಎದುರಿಸಬೇಡಿರಿ; ಯಾವನಾದರೂ ನಿನ್ನ ಬಲ ಗೆನ್ನೆಯ ಮೇಲೆ ಹೊಡೆದರೆ ಮತ್ತೊಂದನ್ನು ಸಹ ಅವನಿಗೆ ತಿರುಗಿಸು.
Aadare naanu nimage heluvadenandare--neevu kettaddannu edurisabediri; yaavanaadaroo ninna bala genneya mele hodedare mattondannu saha avanige tirugisu.
Matthew 5:39 in English
- King James Version (KJV)
- But I say unto you, That ye resist not evil: but whosoever shall smite thee on thy right cheek, turn to him the other also.
- World English Bible (WEB)
- But I tell you, don’t resist him who is evil; but whoever strikes you on your right cheek, turn to him the other also.
- American Standard Version (ASV)
- but I say unto you, Resist not him that is evil: but whosoever smiteth thee on thy right cheek, turn to him the other also.
- Bible in Basic English (BBE)
- But I say to you, Do not make use of force against an evil man; but to him who gives you a blow on the right side of your face let the left be turned.
- Darby Translation (DBY)
- But I say unto you, not to resist evil; but whoever shall strike thee on thy right cheek, turn to him also the other;
- Webster's Bible (WBS)
- But I say to you, That ye resist not evil: but whoever shall strike thee on thy right cheek, turn to him the other also.
- Young's Literal Translation (YLT)
- but I — I say to you, not to resist the evil, but whoever shall slap thee on thy right cheek, turn to him also the other;
Read in context
- 37ಆದರೆ ನಿನ್ನ ಮಾತು ಹೌದಾಗಿದ್ದರೆ ಹೌದು, ಅಲ್ಲವಾಗಿದ್ದರೆ ಅಲ್ಲ ಎಂದಿರಲಿ; ಇವುಗಳಿಗಿಂತ ಹೆಚ್ಚಾದದ್ದು ಕೆಟ್ಟದ್ದ ರಿಂದ ಬರುವಂಥದ್ದು.
- 38ಇದಲ್ಲದೆ--ಕಣ್ಣಿಗೆ ಪ್ರತಿಯಾಗಿ ಕಣ್ಣನ್ನೂ ಹಲ್ಲಿಗೆ ಪ್ರತಿಯಾಗಿ ಹಲ್ಲನ್ನೂ ತೆಗಿಸು ಎಂದು ಹೇಳಿರುವದನ್ನು ನೀವು ಕೇಳಿದ್ದೀರಿ.
- 39ಆದರೆ ನಾನು ನಿಮಗೆ ಹೇಳುವದೇನಂದರೆ--ನೀವು ಕೆಟ್ಟದ್ದನ್ನು ಎದುರಿಸಬೇಡಿರಿ; ಯಾವನಾದರೂ ನಿನ್ನ ಬಲ ಗೆನ್ನೆಯ ಮೇಲೆ ಹೊಡೆದರೆ ಮತ್ತೊಂದನ್ನು ಸಹ ಅವನಿಗೆ ತಿರುಗಿಸು.
- 40ಯಾವನಾದರೂ ನಿನ್ನ ಸಂಗಡ ವ್ಯಾಜ್ಯವಾಡಿ ನಿನ್ನ ಮೇಲಂಗಿಯನ್ನು ತಕ್ಕೊಳ್ಳ ಬೇಕೆಂದಿದ್ದರೆ ಒಳಂಗಿಯನ್ನೂ ಕೊಟ್ಟುಬಿಡು.
- 41ಮತ್ತು ಯಾವನಾದರೂ ಒಂದು ಮೈಲು ಹೋಗುವಂತೆ ನಿನ್ನನ್ನು ಬಲವಂತ ಮಾಡಿದರೆ ಅವನೊಂದಿಗೆ ಎರಡು ಮೈಲು ಹೋಗು.
Cross references
- 1 Thessalonians 5:15 1 ಥೆಸಲೊನೀಕದವರಿಗೆ 5:15ಯಾರೂ ಅಪಕಾರಕ್ಕೆ ಅಪಕಾರ ಮಾಡದಂತೆ ನೋಡಿ ಕೊಳ್ಳಿರಿ; ಯಾವಾಗಲೂ ನೀವು ಒಬ್ಬರಿಗೊಬ್ಬರು ಹಿತವನ್ನು ಮಾಡಿಕೊಂಡಿರುವದಲ್ಲದೆ ಎಲ್ಲರಿಗೂ ಹಿತ ವನ್ನು ಮಾಡುವವರಾಗಿರ್ರಿ.
- 1 Peter 3:9 1 ಪೇತ್ರನು 3:9ಅಪಕಾರಕ್ಕೆ ಅಪಕಾರವನ್ನೂ ನಿಂದೆಗೆ ನಿಂದೆಯನ್ನು ಮಾಡದೆ ಆಶೀರ್ವದಿಸಿರಿ. ಇದಕ್ಕಾಗಿ ದೇವರು ನಿಮ್ಮನ್ನು ಕರೆದನಲ್ಲಾ; ಹೀಗೆ ಮಾಡುವವರಾದ ನೀವು ಆಶೀರ್ವಾದವನ್ನು ಬಾಧ್ಯವಾಗಿ ಹೊಂದುವಿ ರೆಂದು ನಿಮಗೆ ತಿಳಿದದೆಯಲ್ಲಾ.
- Romans 12:17–19 ರೋಮಾಪುರದವರಿಗೆ 12:17–19ಯಾರಿಗೂ ಕೆಟ್ಟದ್ದಕ್ಕೆ ಪ್ರತಿಯಾಗಿ ಕೆಟ್ಟದ್ದನ್ನು ಮಾಡಬೇಡಿರಿ. ಎಲ್ಲರ ದೃಷ್ಟಿಯಲ್ಲಿ ಯಾವದು ಗೌರವ ವಾದದ್ದೋ ಅದನ್ನೇ ಮಾಡುವವರಾಗಿರ್ರಿ. ಸಾಧ್ಯ ವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರ ಸಂಗಡ ಸಮಾಧಾನವಾಗಿರ್ರಿ. ಅತಿ ಪ್ರಿಯರೇ, ನೀವೇ ಮುಯ್ಯಿಗೆ ಮುಯ್ಯಿ ತೀರಿಸದೆ ಶಿಕ್ಷಿಸುವದನ್ನು ದೇವರಿಗೆ ಬಿಡಿರಿ. ಯಾಕಂದರೆ--ಮುಯ್ಯಿಗೆ ಮುಯ್ಯಿ ತೀರಿಸು ವದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನು ಎಂದು ಕರ್ತನು ಹೇಳುತ್ತಾನೆ ಎಂಬದಾಗಿ ಬರೆದದೆ.
- Proverbs 20:22 ಜ್ಞಾನೋಕ್ತಿಗಳು 20:22ನೀನು--ಕೇಡಿಗೆ ಮುಯ್ಯಿ ತೀರಿಸುವೆನು ಅನ್ನಬೇಡ; ಕರ್ತನನ್ನು ನಿರೀಕ್ಷಿಸು; ಆಗ ಆತನು ನಿನ್ನನ್ನು ರಕ್ಷಿಸುವನು.
- Luke 6:29–30 ಲೂಕನು 6:29–30ಒಂದು ಕೆನ್ನೆಯ ಮೇಲೆ ನಿನ್ನನ್ನು ಹೊಡೆಯುವವನಿಗೆ ಮತ್ತೊಂದನ್ನು ಸಹ ಕೊಡು; ನಿನ್ನ ಮೇಲಂಗಿಯನ್ನು ತಕ್ಕೊಳ್ಳುವವನಿಗೆ ನಿನ್ನ ಒಳಂಗಿಯನ್ನು ತಡೆಯಬೇಡ. ನಿನ್ನಿಂದ ಕೇಳುವ ಪ್ರತಿ ಮನುಷ್ಯನಿಗೆ ಕೊಡು; ನಿನ್ನ ಸೊತ್ತನ್ನು ತಕ್ಕೊಳ್ಳುವವನಿಂದ ಅವುಗಳನ್ನು ತಿರಿಗಿ ಕೇಳಬೇಡ.
- 1 Peter 2:20–23 1 ಪೇತ್ರನು 2:20–23ತಪ್ಪುಮಾಡಿ ಗುದ್ದು ತಿನ್ನುವದರಲ್ಲಿ ನೀವು ತಾಳ್ಮೆ ಯಿಂದಿದ್ದರೆ ಅದರಿಂದೇನು ಹೆಚ್ಚಳ? ಆದರೆ ಒಳ್ಳೇ ದನ್ನು ಮಾಡಿ ಬಾಧೆಪಡುವದರಲ್ಲಿ ನೀವು ತಾಳ್ಮೆಯಿಂದಿ ದ್ದರೆ ಇದು ದೇವರಿಗೆ ಅಂಗೀಕೃತವಾಗಿದೆ. ಇದ ಕ್ಕಾಗಿಯೇ ನೀವು ಕರೆಯಲ್ಪಟ್ಟಿರಿ; ಕ್ರಿಸ್ತನು ಸಹ ನಮಗೋಸ್ಕರ ಬಾಧೆಯನ್ನನುಭವಿಸಿ ನೀವು ತನ್ನ ಹೆಜ್ಜೆಯ ಜಾಡಿನಲ್ಲಿ ನಡೆಯಬೇಕೆಂದು ನಮಗೆ ಮಾದರಿಯನ್ನು ಬಿಟ್ಟು ಹೋದನು. ಆತನು ಯಾವ ಪಾಪವನ್ನೂ ಮಾಡಲಿಲ್ಲ, ಆತನ ಬಾಯಲ್ಲಿ ಯಾವ ವಂಚನೆಯೂ ಸಿಕ್ಕಲಿಲ್ಲ. ಬೈಯುವವರನ್ನು ಆತನು ಪ್ರತಿಯಾಗಿ ಬೈಯಲಿಲ್ಲ; ಆತನು ಬಾಧೆಯನ್ನನು ಭವಿಸಿದಾಗ ಯಾರನ್ನೂ ಬೆದರಿಸದೆ ನ್ಯಾಯವಾಗಿ ತೀರ್ಪುಮಾಡುವಾತನಿಗೆ ತನ್ನನ್ನು ಒಪ್ಪಿಸಿದನು.
- Leviticus 19:18 ಯಾಜಕಕಾಂಡ 19:18ನಿನ್ನ ಜನರ ಮಕ್ಕಳ ಮೇಲೆ ಮುಯ್ಯಿಗೆಮುಯ್ಯಿ ತೀರಿಸದವ ನಾಗಿಯೂ ಸೇಡು ತೀರಿಸದೆಯೂ ಇರು. ಆದರೆ ನೀನು ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು; ನಾನೇ ಕರ್ತನು.
- Lamentations 3:30 ಪ್ರಲಾಪಗಳು 3:30ಆತನು ತನ್ನನ್ನು ಹೊಡೆಯುವವನಿಗೆ ಕೆನ್ನೆ ಕೊಡುತ್ತಾನೆ ಆತನು ನಿಂದೆಯಿಂದಲೇ ತುಂಬಿದ್ದಾನೆ.
- Proverbs 24:29 ಜ್ಞಾನೋಕ್ತಿಗಳು 24:29ನನಗೆ ಅವನು ಮಾಡಿದಂತೆ ನಾನೂ ಅವನಿಗೆ ಮಾಡುವೆನು; ಅವನು ಮಾಡಿದ್ದಕ್ಕೆ ಸರಿಯಾಗಿ ಮುಯ್ಯಿ ತೀರಿಸುವೆನು ಎಂದು ಹೇಳಬೇಡ.
- Isaiah 50:6 ಯೆಶಾಯ 50:6ನಾನು ಹೊಡೆಯುವವರಿಗೆ ಬೆನ್ನನ್ನು ಮತ್ತು ಕೂದಲು ಕೀಳುವವರಿಗೆ ನನ್ನ ಕೆನ್ನೆಯನ್ನು ಕೊಟ್ಟೆನು; ನನ್ನ ಮುಖವನ್ನು ನಿಂದೆಗೂ ಉಗುಳುವಿಕೆಗೂ ಮರೆ ಮಾಡಲಿಲ್ಲ.
- 1 Corinthians 6:7 1 ಕೊರಿಂಥದವರಿಗೆ 6:7ಆದದರಿಂದ ಈಗ ನಿಮ್ಮಲ್ಲಿ ಒಬ್ಬನಿಗೆ ವಿರೋಧವಾಗಿ ಇನ್ನೊಬ್ಬನು ನ್ಯಾಯಸ್ಥಾನಕ್ಕೆ ಹೋಗುವದು ಶುದ್ಧ ತಪ್ಪು; ಇದಕ್ಕಿಂತ ನೀವು ಅನ್ಯಾಯವನ್ನು ಯಾಕೆ ಸಹಿಸಬಾರದು? ಇಲ್ಲವೆ (ಸೊತ್ತನ್ನು ಅಪಹರಿಸುವದನ್ನು) ನೀವು ಯಾಕೆ ಸಹಿಸಿಕೊಳ್ಳಬಾರದು?
- 1 Samuel 26:8–10 1 ಸಮುವೇಲನು 26:8–10ಆಗ ಅಬೀಷೈಯು ದಾವೀ ದನಿಗೆ--ಈ ಹೊತ್ತು ದೇವರು ನಿನ್ನ ಶತ್ರುವನ್ನು ನಿನ್ನ ಕೈಯಲ್ಲಿ ಒಪ್ಪಿಸಿಕೊಟ್ಟಿದ್ದಾನೆ; ಈಗ ನಾನು ಅವನನ್ನು ಈಟಿಯಿಂದ ಒಂದೇ ಪೆಟ್ಟಿನಲ್ಲಿ ನೆಲಕ್ಕೆ ಹತ್ತುವಂತೆ ಹೊಡೆಯಲು ಅಪ್ಪಣೆ ಕೊಡಬೇಕು; ಎರಡು ಸಾರಿ ಹೊಡೆಯುವದಿಲ್ಲ ಅಂದನು. ಆದರೆ ದಾವೀದನು ಅಬೀಷೈಯನಿಗೆ -- ಅವನನ್ನು ಸಂಹರಿಸಬೇಡ; ಯಾಕಂದರೆ ಕರ್ತನ ಅಭಿಷಿಕ್ತನಿಗೆ ವಿರೋಧವಾಗಿ ಕೈ ಹಾಕುವವನು ನಿರಪರಾಧಿಯಾಗುವದಿಲ್ಲ ಅಂದನು. ಇದಲ್ಲದೆ ಇನ್ನೂ ದಾವೀದನು--ಕರ್ತನ ಜೀವ ದಾಣೆ, ಕರ್ತನು ಅವನನ್ನು ಹೊಡೆಯುವನು; ಇಲ್ಲವೆ ಅವನ ಕಾಲ ಬಂದು ಅವನು ಸಾಯುವನು; ಇಲ್ಲವೆ ಯುದ್ಧಕ್ಕೆ ಹೋಗಿ ನಾಶವಾಗುವನು.