Matthew · chapter 6 · verse 31
Matthew 6:31 in Kannada
ಆದಕಾರಣ--ನಾವು ಏನು ಊಟಮಾಡಬೇಕು? ಇಲ್ಲವೆ ಏನು ಕುಡಿಯಬೇಕು? ಇಲ್ಲವೆ ಯಾವದನ್ನು ಧರಿಸಿಕೊಳ್ಳಬೇಕು ಎಂದು ಹೇಳುತ್ತಾ ಚಿಂತೆಮಾಡ ಬೇಡಿರಿ.
Aadakaarana--naavu enu ootamaadabeku? Illave enu kudiyabeku? Illave yaavadannu dharisikollabeku endu heluttaa chintemaada bediri.
Matthew 6:31 in English
- King James Version (KJV)
- Therefore take no thought, saying, What shall we eat? or, What shall we drink? or, Wherewithal shall we be clothed?
- World English Bible (WEB)
- “Therefore don’t be anxious, saying, ‘What will we eat?’, ‘What will we drink?’ or, ‘With what will we be clothed?’
- American Standard Version (ASV)
- Be not therefore anxious, saying, What shall we eat? or, What shall we drink? or, Wherewithal shall we be clothed?
- Bible in Basic English (BBE)
- Then do not be full of care, saying, What are we to have for food or drink? or, With what may we be clothed?
- Darby Translation (DBY)
- Be not therefore careful, saying, What shall we eat? or What shall we drink? or What shall we put on?
- Webster's Bible (WBS)
- Therefore be not anxious, saying, What shall we eat? or what shall we drink? or, with what shall we be clothed?
- Young's Literal Translation (YLT)
- therefore ye may not be anxious, saying, What may we eat? or, What may we drink? or, What may we put round?
Read in context
- 29ಆದರೂ ನಾನು ನಿಮಗೆ ಹೇಳುವದೇನಂದರೆ-- ಸೊಲೊಮೋನನು ಸಹ ತನ್ನ ಎಲ್ಲಾ ವೈಭವದಲ್ಲಿಯೂ ಇವುಗಳಲ್ಲಿ ಒಂದರಂತೆಯಾದರೂ ಧರಿಸಿರಲಿಲ್ಲ.
- 30ಆದದರಿಂದ ಈ ಹೊತ್ತು ಇದ್ದು ನಾಳೆ ಒಲೆಗೆ ಹಾಕಲ್ಪಡುವ ಹೊಲದ ಹುಲ್ಲಿಗೆ ದೇವರು ಹೀಗೆ ಉಡಿಸಿದರೆ ಓ ಅಲ್ಪ ವಿಶ್ವಾಸಿಗಳೇ, ಆತನು ಇನ್ನೂ ಎಷ್ಟೋ ಹೆಚ್ಚಾಗಿ ನಿಮಗೆ ಉಡಿಸುವನಲ್ಲವೇ?
- 31ಆದಕಾರಣ--ನಾವು ಏನು ಊಟಮಾಡಬೇಕು? ಇಲ್ಲವೆ ಏನು ಕುಡಿಯಬೇಕು? ಇಲ್ಲವೆ ಯಾವದನ್ನು ಧರಿಸಿಕೊಳ್ಳಬೇಕು ಎಂದು ಹೇಳುತ್ತಾ ಚಿಂತೆಮಾಡ ಬೇಡಿರಿ.
- 32(ಯಾಕಂದರೆ ಇವೆಲ್ಲವುಗಳಿಗಾಗಿ ಅನ್ಯಜನರು ತವಕ ಪಡುತ್ತಾರೆ;) ಆದರೆ ಇವೆಲ್ಲವುಗಳು ನಿಮಗೆ ಅಗತ್ಯವಾಗಿವೆ ಎಂದು ಪರಲೋಕದ ನಿಮ್ಮ ತಂದೆಗೆ ತಿಳಿದದೆ.
- 33ಆದರೆ ಮೊದಲು ನೀವು ದೇವರ ರಾಜ್ಯವನ್ನೂ ಆತನ ನೀತಿಯನ್ನೂ ಹುಡುಕಿರಿ. ಇವುಗಳ ಕೂಡ ಅವೆಲ್ಲವುಗಳು ಕೂಡಿಸಲ್ಪಡುವವು.ಆದಕಾರಣ ನಾಳೆಗೋಸ್ಕರ ಚಿಂತೆ ಮಾಡಬೇಡಿರಿ; ಯಾಕಂದರೆ ನಾಳಿನ ದಿನವು ತನಗೆ ಸಂಬಂಧ ಪಟ್ಟವುಗಳಿಗಾಗಿ ತಾನೇ ಚಿಂತಿಸುವದು. ಆ ದಿನಕ್ಕೆ ಅದರ ಕಾಟ ಸಾಕು.
Cross references
- 1 Peter 5:7 1 ಪೇತ್ರನು 5:7ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಆತನು ನಿಮಗೋಸ್ಕರ ಚಿಂತಿಸುತ್ತಾನೆ.
- Luke 12:29 ಲೂಕನು 12:29ನೀವು ಏನು ತಿನ್ನಬೇಕು ಇಲ್ಲವೆ ನೀವು ಏನು ಕುಡಿಯಬೇಕು ಎಂದು ತವಕಪಡಬೇಡಿರಿ; ನೀವು ಅನುಮಾನದ ಮನಸ್ಸಿನವ ರಾಗಿರಬೇಡಿರಿ.
- Matthew 4:4 ಮತ್ತಾಯನು 4:4ಆದರೆ ಆತನು ಪ್ರತ್ಯುತ್ತರವಾಗಿ--ಮನುಷ್ಯನು ರೊಟ್ಟಿ ಮಾತ್ರದಿಂದಲೇ ಜೀವಿಸುವದಿಲ್ಲ, ಆದರೆ ದೇವರ ಬಾಯೊಳಗಿಂದ ಹೊರಡುವ ಪ್ರತಿಯೊಂದು ಮಾತಿನಿಂದ ಜೀವಿಸುವನು ಎಂದು ಬರೆದದೆ ಅಂದನು.
- Psalm 55:22 ಕೀರ್ತನೆಗಳು 55:22ನಿನ್ನ ಭಾರವನ್ನು ಕರ್ತನ ಮೇಲೆ ಹಾಕು; ಆತನು ನಿನಗೆ ಆಧಾರವಾಗಿರುವನು. ಆತನು ಎಂದೆಂದಿಗೂ ನೀತಿವಂತನನ್ನು ಕದಲಗೊಡಿಸನು.ಓ ದೇವರೇ, ನೀನು ಅವರನ್ನು ನಾಶನದ ಕುಣಿಯಲ್ಲಿ ಇಳಿಯ ಮಾಡುವಿ. ಕೊಲೆಪಾತಕರೂ ಮೋಸಗಾರರೂ ತಮ್ಮ ಆಯುಷ್ಯದ ದಿವಸಗಳಲ್ಲಿ ಅರ್ದದಷ್ಟಾದರೂ ಜೀವಿ ಸುವದಿಲ್ಲ; ನಾನು ನಿನ್ನಲ್ಲಿ ಭರವಸವಿಡುತ್ತೇನೆ.
- Matthew 15:33 ಮತ್ತಾಯನು 15:33ಅದಕ್ಕೆ ಆತನ ಶಿಷ್ಯರು ಆತನಿಗೆ--ಇಂಥಾ ದೊಡ್ಡ ಸಮೂಹವನ್ನು ತೃಪ್ತಿಪಡಿಸುವಂತೆ ಈ ಅರಣ್ಯದಲ್ಲಿ ನಮಗೆ ಎಲ್ಲಿಂದ ರೊಟ್ಟಿಯು ಸಿಕ್ಕೀತು ಅಂದರು.
- 2 Chronicles 25:9 2 ಪೂರ್ವಕಾಲವೃತ್ತಾಂತ 25:9ಆಗ ಅಮಚ್ಯನು ದೇವರ ಮನುಷ್ಯನಿಗೆ--ಆದರೆ ಇಸ್ರಾಯೇಲಿನ ದಂಡಿಗೆ ನಾನು ಕೊಟ್ಟ ನೂರು ತಲಾಂತುಗಳಿಗೋಸ್ಕರ ಏನು ಮಾಡಬೇಕು ಅಂದನು. ಅದಕ್ಕೆ ದೇವರ ಮನುಷ್ಯನು--ಕರ್ತನು ಇದಕ್ಕಿಂತ ಅಧಿಕವಾಗಿ ನಿನಗೆ ಕೊಡಲು ಶಕ್ತನು ಅಂದನು.
- Psalm 37:3 ಕೀರ್ತನೆಗಳು 37:3ಕರ್ತನಲ್ಲಿ ಭರವಸವಿಟ್ಟು ಒಳ್ಳೆಯದನ್ನು ಮಾಡು; ಆಗ ದೇಶದಲ್ಲಿ ವಾಸಮಾಡಿ ನಿಜವಾಗಿ ತೃಪ್ತಿ ಹೊಂದು ವಿ.
- Psalm 78:18–31 ಕೀರ್ತನೆಗಳು 78:18–31ದೇವರನ್ನು ತಮ್ಮ ಹೃದಯದಲ್ಲಿ ಶೋಧಿಸು ವವರಾಗಿ ತಮ್ಮ ದುರಾಶೆಗಳಿಗ್ಕೋಸ್ಕರ ಆಹಾರವನ್ನು ಕೇಳಿದರು. ಹೌದು, ಅವರು ದೇವರಿಗೆ ವಿರೋಧ ವಾಗಿ ಮಾತನಾಡಿ--ದೇವರು ಅರಣ್ಯದಲ್ಲಿ ಮೇಜನ್ನು ಸಿದ್ಧ ಮಾಡಬಲ್ಲನೋ ಅಂದರು. ಇಗೋ, ಆತನು ಬಂಡೆಯನ್ನು ಹೊಡೆಯಲಾಗಿ ನೀರು ಹೊರಟಿತು; ಹಳ್ಳಗಳು ಹರಿದವು; ರೊಟ್ಟಿಯನ್ನೂ ಕೊಡಬಲ್ಲನೋ? ತನ್ನ ಜನರಿಗೆ ಮಾಂಸವನ್ನು ಸಿದ್ಧ ಮಾಡುವನೋ ಅಂದರು. ಆದದರಿಂದ ಕರ್ತನು ಇದನ್ನು ಕೇಳಿದಾಗ ಉಗ್ರನಾದನು; ಯಾಕೋಬನಲ್ಲಿ ಬೆಂಕಿ ಹೊತ್ತಿತ್ತು; ಇಸ್ರಾಯೇಲಿನ ಮೇಲೆ ಕೋಪವು ಸಹ ಎದ್ದಿತು. ಅವರು ದೇವರಲ್ಲಿ ನಂಬಿಕೆ ಇಡಲಿಲ್ಲ; ಆತನ ರಕ್ಷಣೆಯಲ್ಲಿ ಭರವಸವಿಡಲಿಲ್ಲ. ಆದರೆ ಆತನು ಮೇಲಿರುವ ಮೇಘಗಳಿಗೆ ಆಜ್ಞಾಪಿಸಿ ಪರಲೋಕದ ಕದಗಳನ್ನು ತೆರೆದನು. ಉಣ್ಣುವದಕ್ಕೆ ಮನ್ನವನ್ನು ಅವರ ಮೇಲೆ ಸುರಿಸಿ ಪರಲೋಕದ ಧಾನ್ಯವನ್ನು ಅವರಿಗೆ ಕೊಟ್ಟನು. ಮನುಷ್ಯನು ದೂತರ ಆಹಾರ ವನ್ನು ತಿಂದನು; ತೃಪ್ತಿಯಾಗುವಷ್ಟು ಆಹಾರವನ್ನು ಅವರಿಗೆ ಆತನು ಕಳುಹಿಸಿದನು. ಮೂಡಣ ಗಾಳಿ ಯನ್ನು ಆಕಾಶದಲ್ಲಿ ಹುಟ್ಟಿಸಿ ತನ್ನ ಬಲದಿಂದ ದಕ್ಷಿಣ ಗಾಳಿಯನ್ನು ತಂದನು. ಧೂಳಿನಂತೆ ಮಾಂಸವನ್ನೂ ಸಮುದ್ರದ ಮರಳಿನಂತೆ ರೆಕ್ಕೆಯುಳ್ಳ ಪಕ್ಷಿಗಳನ್ನೂ ಅವರ ಮೇಲೆ ಸುರಿಸಿ ಅವರ ಮಧ್ಯದಲ್ಲಿಯೂ ಅವರ ನಿವಾಸಗಳ ಸುತ್ತಲೂ ಬೀಳಮಾಡಿದನು. ಅವರು ತಿಂದು ಬಹಳ ತೃಪ್ತಿಯಾದರು; ಅವರು ಆಶಿಸಿದ್ದನ್ನು ಆತನು ಅವರಿಗೆ ಕೊಟ್ಟನು. ಅವರು ತಮ್ಮ ಆಶೆಯನ್ನು ಬಿಡದೆ ಅವರ ಊಟವು ಇನ್ನೂ ಅವರ ಬಾಯಿಯಲ್ಲಿ ಇರುವಾಗ ದೇವರ ಕೋಪವು ಅವರ ಮೇಲೆ ಎದ್ದು ಅವರಲ್ಲಿ ಕೊಬ್ಬಿದವ ರನ್ನು ಕೊಂದುಹಾಕಿ ಇಸ್ರಾಯೇಲಿನ ಪ್ರಾಯಸ್ಥರನ್ನು ಹೊಡೆದು ಬೀಳಿಸಿತು.
- Leviticus 25:20–22 ಯಾಜಕಕಾಂಡ 25:20–22ನೀವು--ಇಗೋ, ನಾವು ಬಿತ್ತುವದಿಲ್ಲ ಇಲ್ಲವೆ ನಮ್ಮ ಹುಟ್ಟುವಳಿಯಲ್ಲಿ ಕೂಡಿಸಿಕೊಳ್ಳುವದಿಲ್ಲ, ಏಳ ನೆಯ ವರುಷದಲ್ಲಿ ನಾವು ಏನು ತಿನ್ನೋಣ ಎಂದು ಅನ್ನುವಿರಿ. ಆಗ ನಾನು ಆರನೆಯ ವರುಷದಲ್ಲಿ ಮೂರು ವರುಷಗಳಿಗೆ ಫಲಫಲಿಸುವಂತೆ ನಿಮ್ಮ ಮೇಲೆ ನನ್ನ ಆಶೀರ್ವಾದವನ್ನು ಆಜ್ಞಾಪಿಸುವೆನು. ನೀವು ಎಂಟನೆಯ ವರುಷದಲ್ಲಿ ಬಿತ್ತಿ ಅದರ ಫಲವನ್ನು ಒಂಭತ್ತನೆಯ ವರುಷದ ವರೆಗೆ ತಿನ್ನುವಿರಿ; ಅದರ ಫಲ ಬರುವ ವರೆಗೆ ನೀವು ಸಂಗ್ರಹಿಸಿದ ಹಳೇದನ್ನೇ ತಿನ್ನುವಿರಿ.