Psalms · chapter 44 · verse 22
Psalm 44:22 in Kannada
ಹೌದು, ನಿನ್ನ ನಿಮಿತ್ತ ದಿನ ವೆಲ್ಲಾ ಕೊಲ್ಲಲ್ಪಡುತ್ತೇವೆ; ಕೊಯ್ಗುರಿಗಳ ಹಾಗೆ ಎಣಿಸಲ್ಪಡುತ್ತೇವೆ.
Haudu, ninna nimitta dina vellaa kollalpadutteve; koygurigala haage enisalpadutteve.
Psalm 44:22 in English
- King James Version (KJV)
- Yea, for thy sake are we killed all the day long; we are counted as sheep for the slaughter.
- World English Bible (WEB)
- Yes, for your sake we are killed all day long. We are regarded as sheep for the slaughter.
- American Standard Version (ASV)
- Yea, for thy sake are we killed all the day long; We are accounted as sheep for the slaughter.
- Bible in Basic English (BBE)
- Truly, because of you we are put to death every day; we are numbered like sheep for destruction.
- Darby Translation (DBY)
- But for thy sake are we killed all the day long; we are reckoned as sheep for slaughter.
- Webster's Bible (WBS)
- Yes, for thy sake are we killed all the day long; we are counted as sheep for the slaughter.
- Young's Literal Translation (YLT)
- Surely, for Thy sake we have been slain all the day, Reckoned as sheep of the slaughter.
Read in context
- 20ನಾವು ನಮ್ಮ ದೇವರ ಹೆಸರನ್ನು ಮರೆತು ಅನ್ಯ ದೇವರಿಗೆ ನಮ್ಮ ಕೈಗಳನ್ನು ಚಾಚಿದರೆ
- 21ದೇವರು ಅದನ್ನು ವಿಚಾರಿಸನೋ? ಆತನು ಹೃದಯದ ಮರ್ಮ ಗಳನ್ನು ತಿಳಿದಿದ್ದಾನೆ.
- 22ಹೌದು, ನಿನ್ನ ನಿಮಿತ್ತ ದಿನ ವೆಲ್ಲಾ ಕೊಲ್ಲಲ್ಪಡುತ್ತೇವೆ; ಕೊಯ್ಗುರಿಗಳ ಹಾಗೆ ಎಣಿಸಲ್ಪಡುತ್ತೇವೆ.
- 23ಓ ಕರ್ತನೇ, ಎಚ್ಚರವಾಗು, ಯಾಕೆ ನಿದ್ರೆ ಮಾಡುತ್ತೀ? ಎದ್ದೇಳು; ಸದಾಕಾಲಕ್ಕೂ ನಮ್ಮನ್ನು ತಳ್ಳಿಬಿಡಬೇಡ.
- 24ಯಾಕೆ ನಿನ್ನ ಮುಖವನ್ನು ಮರೆ ಮಾಡಿ ನಮ್ಮ ಸಂಕಟವನ್ನೂ ಬಾಧೆಯನ್ನೂ ಮರೆತು ಬಿಡುತ್ತೀ.
Cross references
- Romans 8:36 ರೋಮಾಪುರದವರಿಗೆ 8:36ನಾವು ನಿನ್ನ ನಿಮಿತ್ತ ದಿನವೆಲ್ಲಾ ಕೊಲೆಗೆ ಗುರಿಯಾಗಿದ್ದೇವೆ; ನಾವು ಕೊಯ್ಗುರಿಗಳಂತೆ ಎಣಿಸಲ್ಪಡುತ್ತಿದ್ದೇವೆ ಎಂದು ಬರೆಯಲ್ಪಟ್ಟಿದೆ.
- Isaiah 53:7 ಯೆಶಾಯ 53:7ಆತನು ಪೀಡಿಸಲ್ಪಟ್ಟವನೂ ಮತ್ತು ಹಿಂಸಿಸಲ್ಪಟ್ಟವನೂ ಆಗಿದ್ದನು. ಆದರೂ ಆತನು ತನ್ನ ಬಾಯನ್ನು ತೆರೆಯಲೇ ಇಲ್ಲ; ವಧಿಸುವದಕ್ಕೆ ತರಲ್ಪ ಡುವ ಕುರಿಮರಿಯಂತೆಯೂ ಉಣ್ಣೆ ಕತ್ತರಿಸುವವರ ಮುಂದೆ ಇದ್ದ ಕುರಿಯ ಹಾಗೆಯೂ ಆತನು ಮೌನ ವಾಗಿದ್ದನು. ಹೀಗೆ ಆತನು ತನ್ನ ಬಾಯನ್ನು ತೆರೆಯಲೇ ಇಲ್ಲ.
- Psalm 44:11 ಕೀರ್ತನೆಗಳು 44:11ತಿನ್ನತಕ್ಕ ಕುರಿಗಳ ಹಾಗೆ ನಮ್ಮನ್ನು ಅವರಿಗೆ ಒಪ್ಪಿಸಿದ್ದೀ; ಅನ್ಯಜನಾಂಗ ಗಳಲ್ಲಿ ನಮ್ಮನ್ನು ಚದರಿಸಿದ್ದೀ.
- John 15:21 ಯೋಹಾನನು 15:21ಆದರೆ ಅವರು ನನ್ನನ್ನು ಕಳುಹಿಸಿದಾತನನ್ನು ತಿಳಿಯದಿರುವದರಿಂದ ನನ್ನ ಹೆಸ ರಿನ ನಿಮಿತ್ತ ಇವುಗಳನ್ನೆಲ್ಲಾ ನಿಮಗೆ ಮಾಡುವರು.
- 1 Corinthians 4:9 1 ಕೊರಿಂಥದವರಿಗೆ 4:9ಹಾಗಾಗದೆ ದೇವರು ಅಪೊಸ್ತಲರಾದ ನಮ್ಮನ್ನು ಮರಣಕ್ಕೆ ನೇಮಿಸಿದನೋ ಎಂಬಂತೆ ಕಡೆಯವರಾಗಿ ತೋರಿಸಿದ್ದಾನೆಂದು ನನಗೆ ತೋಚುತ್ತದೆ; ನಾವು ಲೋಕಕ್ಕೂ ದೂತರಿಗೂ ಮನುಷ್ಯರಿಗೂ ನೋಟವಾದೆವು.
- John 16:2–3 ಯೋಹಾನನು 16:2–3ಅವರು ನಿಮ್ಮನ್ನು ಸಭಾಮಂದಿರಗಳಿಂದ ಹೊರಗೆ ಹಾಕುವರು; ಹೌದು, ನಿಮ್ಮನ್ನು ಕೊಲ್ಲುವವನು ದೇವರ ಸೇವೆ ಮಾಡುತ್ತಾನೆಂದು ನೆನಸುವ ಗಳಿಗೆ ಬರುತ್ತದೆ. ಅವರು ತಂದೆಯನ್ನಾಗಲಿ ಇಲ್ಲವೆ ನನ್ನನ್ನಾ ಗಲಿ ತಿಳಿಯದಿರುವ ಕಾರಣ ಇವೆಲ್ಲವುಗಳನ್ನು ನಿಮಗೆ ಮಾಡುವರು.
- 1 Corinthians 15:30–31 1 ಕೊರಿಂಥದವರಿಗೆ 15:30–31ನಾವು ಸಹ ಪ್ರತಿಗಳಿಗೆಯಲ್ಲಿಯೂ ಯಾಕೆ ಜೀವದ ಭಯದಿಂದಿ ದ್ದೇವೆ? ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿ ನಿಮ್ಮ ವಿಷಯವಾಗಿ ನನಗಿರುವ ಸಂತೋಷದ ನಿಮಿತ್ತ ನಾನು ದಿನಾಲು ಸಾಯುತ್ತಲಿದ್ದೇನೆ ಎಂದು ಹೇಳುತ್ತೇನೆ.
- Matthew 5:10–12 ಮತ್ತಾಯನು 5:10–12ನೀತಿಯ ನಿಮಿತ್ತವಾಗಿ ಹಿಂಸಿಸಲ್ಪಡುವವರು ಧನ್ಯರು; ಯಾಕಂದರೆ ಪರಲೋಕರಾಜ್ಯವು ಅವರದು. ನನ್ನ ನಿಮಿತ್ತವಾಗಿ ಜನರು ನಿಮ್ಮನ್ನು ದೂಷಿಸಿ ಹಿಂಸಿಸಿ ನಿಮಗೆ ವಿರೋಧವಾಗಿ ಎಲ್ಲಾ ತರದ ಕೆಟ್ಟದ್ದನ್ನು ಸುಳ್ಳಾಗಿ ಹೇಳಿದರೆ ನೀವು ಧನ್ಯರು. ಸಂತೋಷಿಸಿರಿ, ಅತಿ ಉಲ್ಲಾಸದಿಂದಿರ್ರಿ; ಯಾಕಂದರೆ ಪರಲೋಕದಲ್ಲಿ ನಿಮ್ಮ ಪ್ರತಿಫಲವು ದೊಡ್ಡದಾಗಿದೆ; ನಿಮಗಿಂತ ಮುಂಚೆ ಇದ್ದ ಪ್ರವಾದಿ ಗಳನ್ನು ಅವರು ಹೀಗೆಯೇ ಹಿಂಸಿಸಿದರಲ್ಲಾ.
- 1 Samuel 22:17–19 1 ಸಮುವೇಲನು 22:17–19ಅರಸನು ತನ್ನ ಬಳಿಯಲ್ಲಿ ನಿಂತಿರುವ ಕಾಲಾಳಿಗೆನೀವು ತಿರುಗಿಕೊಂಡು ಕರ್ತನ ಯಾಜಕರನ್ನು ಕೊಂದು ಹಾಕಿರಿ. ಅವರ ಕೈ ದಾವೀದನ ಸಂಗಡ ಸಹಾಯ ವಾಗಿದೆ. ಅವನು ಓಡಿಹೋಗುವದನ್ನು ಅವರು ತಿಳಿದಿದ್ದು ಅದನ್ನು ನನಗೆ ತಿಳಿಸದೆ ಹೋದರು ಅಂದನು. ಆದರೆ ಅರಸನ ಸೇವಕರು ಕರ್ತನ ಯಾಜಕರ ಮೇಲೆ ಬೀಳಲು ತಮ್ಮ ಕೈಯನ್ನು ಚಾಚಲೊಲ್ಲದೆ ಹೋದರು. ಅರಸನು ದೋಯೇಗನಿಗೆ--ನೀನು ತಿರುಗಿಕೊಂಡು ಯಾಜಕರ ಮೇಲೆ ಬೀಳು ಅಂದನು. ಆಗ ಎದೋಮ್ಯನಾದ ದೋಯೇಗನು ತಿರುಗಿಕೊಂಡು ಯಾಜಕರ ಮೇಲೆ ಬಿದ್ದು ನಾರುಬಟ್ಟೆಯ ಎಫೋದನ್ನು ಧರಿಸಿಕೊಳ್ಳುವವರಾದ ಎಂಭತ್ತೈದು ಜನರನ್ನು ಆ ದಿನದಲ್ಲಿ ಕೊಂದನು. ಇದಲ್ಲದೆ ಯಾಜಕರ ಪಟ್ಟಣ ವಾದ ನೋಬಿನಲ್ಲಿ ಇರುವ ಪುರುಷರನ್ನೂ ಸ್ತ್ರೀಯ ರನ್ನೂ ಮಕ್ಕಳನ್ನೂ ಕೂಸುಗಳನ್ನೂ ಎತ್ತುಗಳನ್ನೂ ಕತ್ತೆಗಳನ್ನೂ ಕುರಿಗಳನ್ನೂ ಕತ್ತಿಯಿಂದ ಸಂಹರಿಸಿದನು.
- 1 Kings 19:10 1 ಅರಸುಗಳು 19:10ಅದಕ್ಕವನು--ಸೈನ್ಯಗಳ ದೇವ ರಾದ ಕರ್ತನಿಗೋಸ್ಕರ ನಾನು ಬಹು ರೋಷವುಳ್ಳವ ನಾಗಿದ್ದೇನೆ; ಯಾಕಂದರೆ ಇಸ್ರಾಯೇಲಿನ ಮಕ್ಕಳು ನಿನ್ನ ಒಡಂಬಡಿಕೆಯನ್ನು ಬಿಟ್ಟು ನಿನ್ನ ಬಲಿ ಪೀಠಗಳನ್ನು ಕೆಡವಿ ನಿನ್ನ ಪ್ರವಾದಿಗಳನ್ನು ಕತ್ತಿಯಿಂದ ಕೊಂದು ಹಾಕಿದ್ದಾರೆ; ನಾನು ಹೌದು, ನಾನೊಬ್ಬನೇ ಉಳಿದಿ ದ್ದೇನೆ; ಆದರೆ ಅವರು ನನ್ನ ಪ್ರಾಣವನ್ನು ತೆಗೆದುಬಿಡಲು ಹುಡುಕುತ್ತಾರೆ ಅಂದನು.
- Psalm 79:2–3 ಕೀರ್ತನೆಗಳು 79:2–3ನಿನ್ನ ಸೇವಕರ ಹೆಣಗಳನ್ನು ಆಕಾಶದ ಪಕ್ಷಿಗಳಿಗೂ ಪರಿಶುದ್ಧರ ಮಾಂಸ ವನ್ನು ಭೂಮಿಯ ಮೃಗಗಳಿಗೂ ಆಹಾರವಾಗಿ ಕೊಟ್ಟಿ ದ್ದಾರೆ. ಅವರ ರಕ್ತವನ್ನು ಯೆರೂಸಲೇಮಿನ ಸುತ್ತಲೂ ನೀರಿನ ಹಾಗೆ ಚೆಲ್ಲಿದ್ದಾರೆ; ಅವರನ್ನು ಹೂಣಿಡುವ ವನೊಬ್ಬನೂ ಇಲ್ಲ.
- Revelation 11:3–9 ಪ್ರಕಟನೆ 11:3–9ಇದಲ್ಲದೆ ನನ್ನ ಇಬ್ಬರು ಸಾಕ್ಷಿಗಳು ಗೋಣಿತಟ್ಟನ್ನು ಹೊದ್ದುಕೊಂಡು ಸಾವಿರದ ಇನ್ನೂರ ಅರವತ್ತು ದಿನಗಳ ತನಕ ಪ್ರವಾದಿಸುವ ಹಾಗೆ ಅವರಿಗೆ ಅಧಿಕಾರ ಕೊಡುವೆನು. ಭೂಲೋಕದ ದೇವರ ಮುಂದೆ ನಿಂತಿರುವ ಎರಡು ಎಣ್ಣೆಯ ಮರಗಳೂ ಎರಡು ದೀಪಸ್ತಂಭಗಳೂ ಇವರೇ. ಇವರಿಗೆ ಯಾವ ನಾದರೂ ಕೇಡನ್ನು ಮಾಡಬೇಕೆಂದಿದ್ದರೆ ಇವರ ಬಾಯೊಳಗಿಂದ ಬೆಂಕಿ ಹೊರಟು ಇವರ ಶತ್ರುಗಳನ್ನು ನುಂಗಿ ಬಿಡುವದು; ಇವರಿಗೆ ಯಾವನಾದರೂ ಕೇಡನ್ನು ಉಂಟು ಮಾಡಬೇಕೆಂದಿದ್ದರೆ ಅವನು ಈ ರೀತಿಯಾಗಿ ಕೊಲೆಯಾಗಬೇಕು. ಅವರ ಪ್ರವಾದನೆಯ ದಿನ ಗಳಲ್ಲಿ ಮಳೆಬೀಳದಂತೆ ಆಕಾಶವನ್ನು ಮುಚ್ಚುವ ಅಧಿಕಾರ ಇವರಿಗೆ ಉಂಟು. ಇದಲ್ಲದೆ ಇವರಿಗೆ ಇಷ್ಟ ಬಂದಾಗೆಲ್ಲಾ ನೀರು ರಕ್ತವಾಗುವಂತೆ ಮಾಡುವದಕ್ಕೂ ಸಕಲ ವಿಧವಾದ ಉಪದ್ರವಗಳಿಂದ ಭೂಮಿಯನ್ನು ಹೊಡೆಯುವದಕ್ಕೂ ಅಧಿಕಾರ ಉಂಟು. ಇವರು ತಮ್ಮ ಸಾಕ್ಷಿಯನ್ನು ಹೇಳಿ ಮುಗಿಸಿದ ನಂತರ ತಳವಿಲ್ಲದ ತಗ್ಗಿನಿಂದ ಏರಿ ಬರುವ ಮೃಗವು ಇವರಿಗೆ ವಿರೋಧವಾಗಿ ಯುದ್ಧಮಾಡಿ ಇವರನ್ನು ಜಯಿಸಿ ಕೊಲ್ಲುವದು. ಇವರ ಶವಗಳು ಮಹಾ ಪಟ್ಟಣದ ಬೀದಿಯಲ್ಲಿ ಬಿದ್ದಿರುವವು. ಆ ಪಟ್ಟಣಕ್ಕೆ ಆತ್ಮಿಕವಾಗಿ ಸೊದೋಮ್ ಎಂತಲೂ ಐಗುಪ್ತ ಎಂತಲೂ ಕರೆಯುವರು; ನಮ್ಮ ಕರ್ತನು ಅಲ್ಲಿಯೇ ಶಿಲುಬೆಗೆ ಹಾಕಲ್ಪಟ್ಟನು. ಆಗ ಪ್ರಜೆ ಕುಲ ಭಾಷೆ ಜನಾಂಗಗಳವರು ಸತ್ತುಹೋದ ಅವರ ಶವಗಳನ್ನು ಮೂರುವರೆ ದಿನಗಳು ನೋಡುವರು, ಸತ್ತುಹೋದ ಅವರ ಶವಗಳನ್ನು ಸಮಾಧಿಯಲ್ಲಿ ಇಡ ಗೊಡಿಸುವದಿಲ್ಲ.