Numbers · chapter 13 · verse 2
Numbers 13:2 in Kannada
ನಾನು ಇಸ್ರಾಯೇಲ್ ಮಕ್ಕಳಿಗೆ ಕೊಡುವ ಕಾನಾನ್ ದೇಶವನ್ನು ಪರೀಕ್ಷಿಸುವ ಹಾಗೆ ನೀನು ಮನುಷ್ಯರನ್ನು ಕಳುಹಿಸು. ಅವರವರ ಪಿತೃಗಳ ಗೋತ್ರದ ಪ್ರಕಾರ ಅವರೊಳಗೆ ಅಧಿಕಾರಿಯಾಗಿರುವ ಪ್ರತಿಯೊಬ್ಬನನ್ನು ಕಳುಹಿಸು ಅಂದನು.
Naanu israayel makkalige koduva kaanaan deshavannu pareekshisuva haage neenu manushyarannu kaluhisu. Avaravara pitrugala gotrada prakaara avarolage adhikaariyaagiruva pratiyobbanannu kaluhisu andanu.
Numbers 13:2 in English
- King James Version (KJV)
- Send thou men, that they may search the land of Canaan, which I give unto the children of Israel: of every tribe of their fathers shall ye send a man, every one a ruler among them.
- World English Bible (WEB)
- “Send men, that they may spy out the land of Canaan, which I give to the children of Israel. Of every tribe of their fathers, you shall send a man, every one a prince among them.”
- American Standard Version (ASV)
- Send thou men, that they may spy out the land of Canaan, which I give unto the children of Israel: of every tribe of their fathers shall ye send a man, every one a prince among them.
- Bible in Basic English (BBE)
- Send men to get knowledge about the land of Canaan, which I am giving to the children of Israel; from every tribe of their fathers you are to send a man, every one a chief among them.
- Darby Translation (DBY)
- Send thou men, that they may search out the land of Canaan, which I give unto the children of Israel. Ye shall send a man of every tribe of his fathers, each a prince among them.
- Webster's Bible (WBS)
- Send thou men, that they may search the land of Canaan, which I give to the children of Israel: of every tribe of their fathers shall ye send a man, every one a ruler among them.
- Young's Literal Translation (YLT)
- 'Send for thee men, and they spy the land of Canaan, which I am giving to the sons of Israel; one man, one man for the tribe of his fathers ye do send, every one a prince among them.'
Read in context
- 1ಕರ್ತನು ಮೋಶೆಯ ಸಂಗಡ ಮಾತನಾಡಿ
- 2ನಾನು ಇಸ್ರಾಯೇಲ್ ಮಕ್ಕಳಿಗೆ ಕೊಡುವ ಕಾನಾನ್ ದೇಶವನ್ನು ಪರೀಕ್ಷಿಸುವ ಹಾಗೆ ನೀನು ಮನುಷ್ಯರನ್ನು ಕಳುಹಿಸು. ಅವರವರ ಪಿತೃಗಳ ಗೋತ್ರದ ಪ್ರಕಾರ ಅವರೊಳಗೆ ಅಧಿಕಾರಿಯಾಗಿರುವ ಪ್ರತಿಯೊಬ್ಬನನ್ನು ಕಳುಹಿಸು ಅಂದನು.
- 3ಆಗ ಮೋಶೆಯು ಕರ್ತನ ಆಜ್ಞೆಯಂತೆ ಪಾರಾನ್ ಅರಣ್ಯ ದಿಂದ ಅವರನ್ನು ಕಳುಹಿಸಿದನು. ಅವರೆಲ್ಲರೂ ಇಸ್ರಾ ಯೇಲ್ ಮಕ್ಕಳ ಮುಖ್ಯಸ್ಥರಾಗಿದ್ದರು.
- 4ಅವರ ಹೆಸರುಗಳು ಯಾವವಂದರೆ: ರೂಬೇನ್ ಗೋತ್ರದ ಜಕ್ಕೂರನ ಮಗನಾದ ಶಮ್ಮೂವನು,
Cross references
- Deuteronomy 1:22–25 ಧರ್ಮೋಪದೇಶಕಾಂಡ 1:22–25ಆಗ ನೀವೆಲ್ಲರೂ ನನ್ನ ಬಳಿಗೆ ಬಂದು--ನಮ್ಮ ಮುಂದಾಗಿ ಮನುಷ್ಯರನ್ನು ಕಳುಹಿಸೋಣ, ಅವರು ನಮಗೆ ಆ ದೇಶವನ್ನು ಪರಿಶೀಲಿಸಿ ನೋಡಿ ನಾವು ಮೇಲೆ ಹೋಗತಕ್ಕ ಮಾರ್ಗದ ವಿಷಯದಲ್ಲಿಯೂ ನಾವು ಪ್ರವೇಶಿಸುವ ಪಟ್ಟಣಗಳ ವಿಷಯದಲ್ಲಿಯೂ ನಮಗೆ ಸಮಾಚಾರವನ್ನು ತಿಳಿಸಲಿ ಅಂದಿರಿ. ಆ ಮಾತು ನನಗೆ ಒಳ್ಳೇದೆಂದು ತೋಚಿತು; ನಾನು ನಿಮ್ಮಲ್ಲಿ ಕುಲಕ್ಕೆ ಒಬ್ಬನ ಪ್ರಕಾರ ಹನ್ನೆರಡು ಮಂದಿ ಯನ್ನು ತಕ್ಕೊಂಡೆನು. ಅವರು ಹೋಗಿ ಬೆಟ್ಟವನ್ನೇರಿ ಎಷ್ಕೋಲೆಂಬ ಹಳ್ಳದ ಬಳಿಗೆ ಬಂದು ಅದನ್ನು ಹೊಂಚಿ ನೋಡಿ ದೇಶದ ಫಲದಲ್ಲಿ ಕೆಲವನ್ನು ಕೈಯಲ್ಲಿ ತಕ್ಕೊಂಡು ನಮ್ಮ ಬಳಿಗೆ ತಂದು ನಮಗೆ ಸಮಾಚಾರ ವನ್ನು ತಿಳಿಸಿ--ನಮ್ಮ ದೇವರಾದ ಕರ್ತನು ನಮಗೆ ಕೊಡುವ ದೇಶವು ಒಳ್ಳೇದು ಎಂದು ಹೇಳಿದಿರಿ.
- Numbers 32:8 ಅರಣ್ಯಕಾಂಡ 32:8ನಾನು ದೇಶವನ್ನು ನೋಡುವದಕ್ಕೆ ಕಾದೇಶ್ಬರ್ನೇಯದಿಂದ ಅವರನ್ನು ಕಳುಹಿಸಿದಾಗ ನಿಮ್ಮ ಪಿತೃಗಳು ಹಾಗೆಯೇ ಮಾಡಿದರು.
- Numbers 34:18 ಅರಣ್ಯಕಾಂಡ 34:18ದೇಶದ ಸ್ವಾಸ್ತ್ಯವನ್ನು ಹಂಚುವದಕ್ಕೆ ನೀವು ಒಂದೊಂದು ಗೋತ್ರದಿಂದ ಒಬ್ಬೊಬ್ಬ ಪ್ರಧಾನನನ್ನು ತಕ್ಕೊಳ್ಳಿರಿ.
- Joshua 2:1–24 ಯೆಹೋಶುವ 2:1–24ನೂನನ ಮಗನಾದ ಯೆಹೋಶುವನು ಪಾಳತಿ ನೋಡುವವರಾದ ಇಬ್ಬರು ಮನುಷ್ಯರನ್ನು ಶಿಟ್ಟೀಮಿನಿಂದ ಗುಪ್ತ ಮಾರ್ಗವಾಗಿ ಕಳುಹಿಸಿ ಅವರಿಗೆ--ನೀವು ಹೋಗಿ ದೇಶವನ್ನು ಮತ್ತು ಯೆರಿಕೋವನ್ನು ನೋಡಿರಿ ಅಂದನು. ಅವರು ಹೋಗಿ ರಾಹಾಬಳೆಂಬ ಹೆಸರುಳ್ಳ ಒಬ್ಬ ಸೂಳೆಯ ಮನೆಯಲ್ಲಿ ಇಳಿದುಕೊಂಡರು. ಆದರೆ ಯೆರಿಕೋವಿನ ಅರಸ ನಿಗೆ--ಇಗೋ, ಇಸ್ರಾಯೇಲ್ ಮನುಷ್ಯರು ದೇಶವನ್ನು ಪರಿಶೋಧನೆ ಮಾಡಲು ರಾತ್ರಿಯಲ್ಲಿ ಇಲ್ಲಿಗೆ ಬಂದಿದ್ದಾ ರೆಂದು ತಿಳಿಸಲ್ಪಟ್ಟಿತು. ಆಗ ಯೆರಿಕೋವಿನ ಅರಸನು ರಾಹಾಬಳ ಬಳಿಗೆ ಕಳುಹಿಸಿ--ನಿನ್ನ ಬಳಿಗೆ ಬಂದು ನಿನ್ನ ಮನೆಯಲ್ಲಿ ಪ್ರವೇಶಿಸಿದ ಮನುಷ್ಯರನ್ನು ಹೊರಗೆ ಕರಕೊಂಡು ಬಾ. ಅವರು ದೇಶವನ್ನೆಲ್ಲಾ ಶೋಧಿಸಲು ಬಂದಿದ್ದಾರೆ ಅಂದನು. ಸ್ತ್ರೀಯು ಆ ಇಬ್ಬರನ್ನು ಅಡಗಿ ಸಿಟ್ಟು--ನನ್ನ ಬಳಿಗೆ ಮನುಷ್ಯರು ಬಂದಿದ್ದರು; ಆದರೆ ನಾನು ಅವರನ್ನು ಯಾವ ಕಡೆಯವರೆಂದು ತಿಳಿಯದೆ ಇದ್ದೆನು. ಬಾಗಲನ್ನು ಮುಚ್ಚುವ ವೇಳೆಯಲ್ಲಿ ಆ ಮನುಷ್ಯರು ಕತ್ತಲೆಯಲ್ಲಿ ಹೊರಟುಹೋದರು. ಅವರು ಎಲ್ಲಿ ಹೋದರೋ ನಾನು ಅರಿಯೆ; ಅವರನ್ನು ಬೇಗ ಹಿಂದಟ್ಟಿರಿ; ನಿಮಗೆ ಸಿಕ್ಕುವರು ಅಂದಳು. ಆದರೆ ಆಕೆಯು ಅವರನ್ನು ಮೇಲೆ ಏರಿಸಿ ಮಾಳಿಗೆಯ ಮೇಲೆ ಸಾಲಾಗಿ ಇಟ್ಟಿದ್ದ ಸಣಬಿನೊಳಗೆ ಬಚ್ಚಿಟ್ಟಳು. ಆ ಮನುಷ್ಯರು ಯೊರ್ದನಿಗೆ ಹೋಗುವ ಹಾದಿಯಲ್ಲಿ ನದಿಯ ರೇವುಗಳ ವರೆಗೂ ಅವರನ್ನು ಹಿಂದಟ್ಟಿದರು. ಅವರನ್ನು ಹಿಂದಟ್ಟುವವರು ಹೊರಟುಹೋದ ಕೂಡಲೆ ಹೆಬ್ಬಾಗಲನ್ನು ಮುಚ್ಚಿದರು. ಆದರೆ ಈ ಮನುಷ್ಯರು ಮಲಗುವದಕ್ಕಿಂತ ಮುಂಚೆ ಆಕೆಯು ಮಾಳಿಗೆಯ ಮೇಲಕ್ಕೇರಿ ಅವರ ಬಳಿಗೆ ಬಂದು ಅವರಿಗೆ-- ಕರ್ತನು ನಿಮಗೆ ದೇಶವನ್ನು ಕೊಟ್ಟಿದ್ದಾನೆಂದೂ ನಿಮ್ಮ ನಿಮಿತ್ತ ನಮಗೆ ಮಹಾಭೀತಿ ಯಾಗಿದೆ ಎಂದೂ ನಿಮಗೋಸ್ಕರ ದೇಶದ ನಿವಾಸಿ ಗಳೆಲ್ಲರು ಕಂಗೆಟ್ಟು ಹೋಗಿದ್ದಾರೆಂದೂ ನಾನು ಬಲ್ಲೆನು. ನೀವು ಐಗುಪ್ತದಿಂದ ಹೊರಡುವಾಗ ಕರ್ತನು ನಿಮಗೋಸ್ಕರ ಕೆಂಪು ಸಮುದ್ರದ ನೀರನ್ನು ಬತ್ತಿಹೋಗ ಮಾಡಿದ್ದನ್ನೂ ಯೊರ್ದನಿಗೆ ಆಚೆಯಲ್ಲಿದ್ದ ಅಮೋರಿ ಯರ ಇಬ್ಬರು ಅರಸುಗಳಾದ ಸೀಹೋನನನ್ನು ಓಗನನ್ನು ನೀವು ಸಂಪೂರ್ಣ ನಿರ್ಮೂಲ ಮಾಡಿದ್ದನ್ನೂ ನಾವು ಕೇಳಿದ್ದೇವೆ. ಇವುಗಳನ್ನು ನಾವು ಕೇಳಿದಾಗಲೇ ನಮ್ಮ ಹೃದಯವು ಕರಗಿಹೋಯಿತು. ಇನ್ನು ನಿಮ್ಮ ನಿಮಿತ್ತ ಯಾವನಲ್ಲಿಯೂ ಧೈರ್ಯವಿಲ್ಲದೆ ಹೋಯಿತು. ಯಾಕಂದರೆ ನಿಮ್ಮ ದೇವರಾದ ಕರ್ತನೇ ಮೇಲಿರುವ ಆಕಾಶದಲ್ಲಿಯೂ ಕೆಳಗಿರುವ ಭೂಮಿಯ ಮೇಲೆಯೂ ದೇವರಾಗಿದ್ದಾನೆ. ಈಗ ನಾನು ನಿಮಗೆ ದಯ ತೋರಿಸಿದ್ದರಿಂದ ನೀವು ನನಗೆ ಮತ್ತು ನನ್ನ ತಂದೆಯ ಮನೆಗೆ ದಯತೋರಿಸಬೇಕು. ನನಗೆ ಸತ್ಯವಾದ ಗುರುತನ್ನು ಕೊಡಬೇಕು. ನನ್ನ ತಂದೆತಾಯಿಯನ್ನೂ ಸಹೋದರ ಸಹೋದರಿಯರನ್ನೂ ಅವರಿಗೆ ಇರುವದೆ ಲ್ಲವನ್ನೂ ಜೀವದಿಂದಿರಿಸಿ ನಮ್ಮ ಪ್ರಾಣಗಳನ್ನು ಸಾವಿ ನಿಂದ ಉಳಿಸುವದಾಗಿ ಕರ್ತನ ಮೇಲೆ ಪ್ರಮಾಣ ಮಾಡಬೇಕೆಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ ಅಂದಳು. ಆ ಮನುಷ್ಯರು ಆಕೆಗೆ--ನೀನು ಈ ನಮ್ಮ ಕಾರ್ಯವನ್ನು ಬಹಿರಂಗಮಾಡದೆ ಇದ್ದರೆ ನಮ್ಮ ಪ್ರಾಣವು ನಿಮಗೋಸ್ಕರ ಇರುವದು. ಕರ್ತನು ನಮಗೆ ಈ ದೇಶವನ್ನು ಕೊಟ್ಟಾಗ ಸತ್ಯದಿಂದಲೂ ದಯ ದಿಂದಲೂ ನಡೆದುಕೊಳ್ಳುವೆವು ಅಂದರು. ಆಗ ಅವರನ್ನು ಹಗ್ಗದಿಂದ ಕಿಟಿಕಿಯ ಮೂಲಕ ಇಳಿಸಿ ಬಿಟ್ಟಳು. ಯಾಕಂದರೆ ಆಕೆಯ ಮನೆಯು ಪಟ್ಟಣದ ಗೋಡೆಯ ಮೇಲೆ ಇತ್ತು. ಗೋಡೆಯ ಮೇಲೆ ಆಕೆಯು ವಾಸವಾಗಿದ್ದಳು. ನಿಮ್ಮನ್ನು ಹಿಂದಟ್ಟುವವರು ನಿಮಗೆ ಅಡ್ಡಬಾರದ ಹಾಗೆ ನೀವು ಬೆಟ್ಟಕ್ಕೆ ಹೋಗಿ ಅವರು ತಿರಿಗಿ ಬರುವ ವರೆಗೂ ಅಲ್ಲಿ ಮೂರು ದಿವಸ ಅಡಗಿ ಕೊಂಡಿದ್ದು ತರುವಾಯ ನಿಮ್ಮ ಮಾರ್ಗವಾಗಿ ಹೋಗಿರಿ ಅಂದಳು. ಆಗ ಆ ಮನುಷ್ಯರು ಆಕೆಗೆನೀನು ನಮಗೆ ಇಟ್ಟ ನಿನ್ನ ಆಣೆಯ ನಿಮಿತ್ತ ನಾವು ನಿರಪರಾಧಿಗಳಾಗಿರಬೇಕು. ಇಗೋ, ನಾವು ದೇಶ ದಲ್ಲಿ ಪ್ರವೇಶಿಸುವಾಗ ನೀನು ನಮ್ಮನ್ನು ಕಿಟಿಕಿಯಿಂದ ಇಳಿಯಬಿಟ್ಟ ಈ ಕೆಂಪು ನೂಲಿನ ದಾರವನ್ನು ಕಟ್ಟಿ ನಿನ್ನ ತಂದೆತಾಯಿಯನ್ನೂ ಸಹೋದರರನ್ನೂ ನಿನ್ನ ತಂದೆಯ ಮನೆಯವರೆಲ್ಲರನ್ನೂ ನಿನ್ನ ಮನೆಯಲ್ಲಿ ಕೂಡಿಸಿಕೊಳ್ಳಬೇಕು. ಯಾವನಾದರೂ ನಿನ್ನ ಮನೆಯ ಬಾಗಲಿಂದ ಹೊರಟು ಬೀದಿಗೆ ಬಂದರೆ ಅವನ ರಕ್ತವು ಅವನ ತಲೆಯಮೇಲೆ ಇರುವದು. ನಾವು ನಿರಪರಾಧಿಗಳಾಗಿರುವೆವು. ಆದರೆ ನಿನ್ನ ಸಂಗಡ ಮನೆಯಲ್ಲಿ ಇರುವ ಯಾವನ ಮೇಲಾದರೂ ಕೈ ಹಾಕಲ್ಪಟ್ಟರೆ ಅವನ ರಕ್ತದ ಅಪರಾಧವು ನಮ್ಮ ತಲೆಯ ಮೇಲೆ ಇರುವದು. ಇದಲ್ಲದೆ ಈ ನಮ್ಮ ಕಾರ್ಯ ವನ್ನು ತಿಳಿಸಿದರೆ ನೀನು ನಮಗೆ ಇಟ್ಟ ಆಣೆಗೆ ನಾವು ಬಿಡುಗಡೆಯಾಗಿರುವೆವು ಅಂದರು. ಅದಕ್ಕೆ ಆಕೆಯು--ನಿಮ್ಮ ಮಾತುಗಳ ಪ್ರಕಾರವೇ ಆಗಲಿ ಎಂದು ಹೇಳಿ ಅವರನ್ನು ಕಳುಹಿಸಿಬಿಟ್ಟಳು; ಅವರು ಹೋದಾಗ ಆ ಕೆಂಪು ನೂಲಿನ ದಾರವನ್ನು ಕಿಟಿಕಿಯಲ್ಲಿ ಕಟ್ಟಿದಳು. ಅವರು ಹೋಗಿ ಬೆಟ್ಟಕ್ಕೆ ಸೇರಿ ಹಿಂದಟ್ಟುವವರು ತಿರಿಗಿ ಬರುವ ಪರಿಯಂತರ ಮೂರು ದಿವಸ ಅಲ್ಲೇ ಇದ್ದರು. ಹಿಂದಟ್ಟುವವರು ಮಾರ್ಗದಲ್ಲೆಲ್ಲಾ ಅವ ರನ್ನು ಹುಡುಕಿ ಕಾಣದೆ ಹೋದರು. ಆ ಇಬ್ಬರು ಮನುಷ್ಯರು ಹಿಂತಿರುಗಿಕೊಂಡು ಬೆಟ್ಟದಿಂದ ಇಳಿದು ನದಿಯನ್ನು ದಾಟಿ ನೂನನ ಮಗನಾದ ಯೆಹೋಶು ವನ ಬಳಿಗೆ ಬಂದು ತಮಗೆ ಸಂಭವಿಸಿದ್ದನ್ನೆಲ್ಲಾ ಅವನಿಗೆ ವಿವರಿಸಿದರು.ಅವರು ಯೆಹೋಶುವನಿಗೆ--ನಿಶ್ಚಯ ವಾಗಿ ಕರ್ತನು ಆ ದೇಶವನ್ನೆಲ್ಲಾ ನಮ್ಮ ಕೈಯಲ್ಲಿ ಒಪ್ಪಿಸಿಕೊಟ್ಟನು. ದೇಶದ ನಿವಾಸಿಗಳೆಲ್ಲರು ನಮ್ಮ ನಿಮಿತ್ತ ಕಂಗೆಟ್ಟು ಹೋಗಿದ್ದಾರೆ ಎಂದು ಹೇಳಿದರು. ಅವರು ಯೆಹೋಶುವನಿಗೆ--ನಿಶ್ಚಯ ವಾಗಿ ಕರ್ತನು ಆ ದೇಶವನ್ನೆಲ್ಲಾ ನಮ್ಮ ಕೈಯಲ್ಲಿ ಒಪ್ಪಿಸಿಕೊಟ್ಟನು. ದೇಶದ ನಿವಾಸಿಗಳೆಲ್ಲರು ನಮ್ಮ ನಿಮಿತ್ತ ಕಂಗೆಟ್ಟು ಹೋಗಿದ್ದಾರೆ ಎಂದು ಹೇಳಿದರು.
- Numbers 1:4 ಅರಣ್ಯಕಾಂಡ 1:4ತನ್ನ ತಂದೆಯ ಮನೆಗೆ ಮುಖ್ಯಸ್ಥನಾದ ಪ್ರತಿಯೊಬ್ಬನು ಒಂದೊಂದು ಗೋತ್ರಕ್ಕೋಸ್ಕರ ನಿಮ್ಮ ಸಂಗಡ ಇರಲಿ.
- Deuteronomy 1:15 ಧರ್ಮೋಪದೇಶಕಾಂಡ 1:15ನಾನು ನಿಮ್ಮ ಕುಟುಂಬಗಳ ಮುಖ್ಯಸ್ಥರಾಗಿದ್ದ ಜ್ಞಾನಿಗಳಾದ ಪ್ರಸಿದ್ಧ ಮನುಷ್ಯರನ್ನು ತಕ್ಕೊಂಡು ನಿಮ್ಮ ಮೇಲೆ ಮುಖ್ಯಸ್ಥರಾಗಿರುವ ಹಾಗೆ ಸಹಸ್ರಾಧಿ ಪತಿಗಳಾಗಿಯೂ ಶತಾಧಿಪತಿಗಳಾಗಿಯೂ ಪಂಚಶ ತಾಧಿಪತಿಗಳಾಗಿಯೂ ದಶಾಧಿಪತಿಗಳಾಗಿಯೂ
- Numbers 11:16 ಅರಣ್ಯಕಾಂಡ 11:16ಕರ್ತನು ಮೋಶೆಗೆ ಹೇಳಿದ್ದೇನಂದರೆ--ಜನರ ಹಿರಿಯರೆಂದೂ ಅವರ ಮೇಲಿನ ಉದ್ಯೋಗಸ್ಥರೆಂದೂ ನೀನು ತಿಳಿದುಕೊಂಡಂಥ ಇಸ್ರಾಯೇಲ್ಯರ ಹಿರಿಯರೊ ಳಗೆ ಎಪ್ಪತ್ತು ಮಂದಿಯನ್ನು ನನ್ನ ಬಳಿಗೆ ಕೂಡಿಸಿ ಸಭೆಯ ಗುಡಾರದ ಕಡೆಗೆ ಕರಕೊಂಡು ಬಾ. ಅವರು ಅಲ್ಲಿ ನಿನ್ನ ಸಂಗಡ ನಿಂತಿರಲಿ.
- Exodus 18:25 ವಿಮೋಚನಕಾಂಡ 18:25ಮೋಶೆಯು ಇಸ್ರಾಯೇಲ್ಯರಲ್ಲಿ ಸಮರ್ಥರನ್ನು ಆರಿಸಿಕೊಂಡು ಜನರ ಮೇಲೆ ಮುಖ್ಯಸ್ಥರನ್ನಾಗಿ ಮಾಡಿ ಸಾವಿರ ಜನರ ಮೇಲೆಯೂ ನೂರು ಜನರ ಮೇಲೆಯೂ ಐವತ್ತು ಜನರ ಮೇಲೆಯೂ ಹತ್ತು ಜನರ ಮೇಲೆಯೂ ಅಧಿಕಾರಿಗಳನ್ನಾಗಿ ನೇಮಿಸಿದನು.
Original words (Hebrew)
- Send · H7971שָׁלַח shâlach
- men · H582אֱנוֹשׁ ʼĕnôwsh
- search · H8446תּוּר tûwr
- land · H776אֶרֶץ ʼerets
- Canaan · H3667כְּנַעַן Kᵉnaʻan
- give · H5414נָתַן nâthan
- children · H1121בֵּן bên
- Israel · H3478יִשְׂרָאֵל Yisrâʼêl
- every · H376אִישׁ ʼîysh
- tribe · H4294מַטֶּה maṭṭeh
- fathers · H1אָב ʼâb
- send · H7971שָׁלַח shâlach
- man · H259אֶחָד ʼechâd
- ruler · H5387נָשִׂיא nâsîyʼ