Numbers · chapter 1 · verse 47
Numbers 1:47 in Kannada
ಆದರೆ ಲೇವಿಯರು ತಮ್ಮ ತಂದೆಗಳ ಗೋತ್ರದ ಪ್ರಕಾರ ಅವರೊಳಗೆ ಎಣಿಸಲ್ಪಡಲಿಲ್ಲ.
Aadare leviyaru tamma tandegala gotrada prakaara avarolage enisalpadalilla.
Numbers 1:47 in English
- King James Version (KJV)
- But the Levites after the tribe of their fathers were not numbered among them.
- World English Bible (WEB)
- But the Levites after the tribe of their fathers were not counted among them.
- American Standard Version (ASV)
- But the Levites after the tribe of their fathers were not numbered among them.
- Bible in Basic English (BBE)
- But the Levites, of the tribe of their fathers, were not numbered among them.
- Darby Translation (DBY)
- But the Levites after the tribe of their fathers were not numbered among them.
- Webster's Bible (WBS)
- But the Levites, after the tribe of their fathers, were not numbered among them.
- Young's Literal Translation (YLT)
- And the Levites, for the tribe of their fathers, have not numbered themselves in their midst,
Read in context
- 45ಹೀಗೆ ಇಸ್ರಾಯೇಲ್ ಮಕ್ಕಳಲ್ಲಿ ಎಣಿಸಲ್ಪಟ್ಟವ ರೆಲ್ಲರು ಅವರ ತಂದೆಗಳ ಮನೆಗಳ ಪ್ರಕಾರ ಇಪ್ಪತ್ತು ವರುಷದವರೂ ಅದಕ್ಕಿಂತ ಹೆಚ್ಚಾದ ಪ್ರಾಯವುಳ್ಳ ವರೂ ಇಸ್ರಾಯೇಲಿನಲ್ಲಿ ಯುದ್ಧಕ್ಕೆ ಹೊರಡಲು ಶಕ್ತರಾದವರೂ
- 46ಆರು ಲಕ್ಷದ ಮೂರು ಸಾವಿರದ ಐದುನೂರ ಐವತ್ತು ಮಂದಿಯಾಗಿದ್ದರು.
- 47ಆದರೆ ಲೇವಿಯರು ತಮ್ಮ ತಂದೆಗಳ ಗೋತ್ರದ ಪ್ರಕಾರ ಅವರೊಳಗೆ ಎಣಿಸಲ್ಪಡಲಿಲ್ಲ.
- 48ಇದಲ್ಲದೆ ಕರ್ತನು ಮಾತನಾಡಿ ಮೋಶೆಗೆ ಹೇಳಿದ್ದೇನಂದರೆ--
- 49ಲೇವಿ ಗೋತ್ರವನ್ನು ಮಾತ್ರ ಎಣಿಸದೆ ಇಸ್ರಾ ಯೇಲ್ ಮಕ್ಕಳೊಳಗೆ ಅವರ ಲೆಕ್ಕವನ್ನು ತಕ್ಕೊಳ್ಳಬೇಡ.
Cross references
- Numbers 2:33 ಅರಣ್ಯಕಾಂಡ 2:33ಕರ್ತನು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಲೇವಿಯರು ಇಸ್ರಾಯೇಲ್ ಮಕ್ಕಳೊಳಗೆ ಎಣಿಸಲ್ಪಡಲಿಲ್ಲ.ಕರ್ತನು ಮೋಶೆಗೆ ಆಜ್ಞಾಪಿಸಿದ್ದೆಲ್ಲಾದರ ಪ್ರಕಾರ ಇಸ್ರಾಯೇಲ್ ಮಕ್ಕಳು ಮಾಡಿ ತಮ್ಮ ಧ್ವಜಗಳ ಪ್ರಕಾರವೂ ತಮ್ಮ ತಮ್ಮ ವಂಶಗಳ ಪ್ರಕಾರವೂ ತಮ್ಮ ತಂದೆಗಳ ಮನೆಯ ಪ್ರಕಾರವೂ ಇಳುಕೊಳ್ಳುತ್ತಾ ಮುಂದುವರಿಯುತ್ತಿದ್ದರು.
- Numbers 3:1–49 ಅರಣ್ಯಕಾಂಡ 3:1–49ಕರ್ತನು ಸೀನಾಯಿ ಪರ್ವತದಲ್ಲಿ ಮೋಶೆಯ ಸಂಗಡ ಮಾತನಾಡಿದ ದಿನದಲ್ಲಿ ಆರೋನನ ಮತ್ತು ಮೋಶೆಯ ಸಂತತಿಗಳು ಇವೇ: ಆರೋನನ ಮಕ್ಕಳ ಹೆಸರುಗಳು ಇವೇ; ಚೊಚ್ಚಲ ಮಗನು ನಾದಾಬನು, ತರುವಾಯ ಅಬೀಹೂ, ಎಲ್ಲಾಜಾರನು, ಈತಾಮಾರನು. ಅಭಿಷೇ ಕಿಸಲ್ಪಟ್ಟ ಯಾಜಕರಾದ ಆರೋನನ ಮಕ್ಕಳ ಹೆಸರು ಗಳು ಇವೇ; ಇವರನ್ನು ಯಾಜಕೋದ್ಯೋಗ ಮಾಡುವ ದಕ್ಕೆ ಅವನು ಪ್ರತಿಷ್ಠೆಮಾಡಿದನು. ನಾದಾಬನೂ ಅಬೀಹೂ ಕರ್ತನ ಸಮ್ಮುಖದಲ್ಲಿ ಅನ್ಯಬೆಂಕಿಯನ್ನು ಅರ್ಪಿಸಿದಾಗ ಸೀನಾಯಿ ಅರಣ್ಯದಲ್ಲಿ ಕರ್ತನ ಮುಂದೆ ಸತ್ತರು. ಅವರಿಗೆ ಮಕ್ಕಳು ಇರಲಿಲ್ಲ; ಹೀಗೆ ಎಲ್ಲಾಜಾ ರನು ಈತಾಮಾರನು ತಮ್ಮ ತಂದೆಯಾದ ಆರೋನನ ಎದುರಿನಲ್ಲಿ ಯಾಜಕೋದ್ಯೋಗವನ್ನು ಮಾಡಿದರು. ಕರ್ತನು ಮೋಶೆಯ ಸಂಗಡ ಮಾತನಾಡಿ ಹೇಳಿ ದ್ದೇನಂದರೆ-- ಲೇವಿಯ ಗೋತ್ರವನ್ನು ಹತ್ತಿರ ಸೇರಿಸಿ ಯಾಜಕನಾದ ಆರೋನನ ಮುಂದೆ ನಿಲ್ಲಿಸು; ಅವರು ಅವನಿಗೆ ಸೇವೆಮಾಡಲಿ. ಅವರು ಅವನ ಅಪ್ಪಣೆ ಯನ್ನೂ ಸಮಸ್ತ ಸಭೆಯ ಅಪ್ಪಣೆಯನ್ನೂ ಸಮಸ್ತ ಗುಡಾರದ ಮುಂದೆ ಕಾಪಾಡಲಿ, ಮತ್ತು ಗುಡಾರದ ಸೇವೆಯನ್ನು ಮಾಡಲಿ. ಅವರು ಸಭೆಯ ಗುಡಾರದ ಎಲ್ಲಾ ವಸ್ತುಗಳನ್ನೂ ಇಸ್ರಾಯೇಲ್ ಮಕ್ಕಳ ಅಪ್ಪಣೆ ಯನ್ನೂ ಕಾಪಾಡಿ ಗುಡಾರದ ಸೇವೆಯನ್ನು ಮಾಡ ಬೇಕು. ಲೇವಿಯರನ್ನು ಆರೋನನಿಗೂ ಅವನ ಕುಮಾರರಿಗೂ ಕೊಡಬೇಕು; ಅವರು ಇಸ್ರಾಯೇಲ್ ಮಕ್ಕಳೊಳಗಿಂದ ಅವನಿಗೆ ಪೂರ್ಣವಾಗಿ ಕೊಡಲ್ಪಟ್ಟ ವರೇ. ಇದಲ್ಲದೆ ಆರೋನನನ್ನೂ ಅವನ ಕುಮಾರ ರನ್ನೂ ನೇಮಿಸಬೇಕು. ಅವರು ತಮ್ಮ ಯಾಜಕತ್ವವನ್ನು ನಡಿಸಲಿ. ಪರಕೀಯನು ಸವಿಾಪಿಸಿದರೆ ಸಾಯಬೇಕು. ಕರ್ತನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನಂದರೆ-- ನಾನು ಇಗೋ, ನಾನೇ ಇಸ್ರಾ ಯೇಲ್ ಮಕ್ಕಳಲ್ಲಿ ಗರ್ಭ ತೆರೆಯುವಂಥ ಎಲ್ಲಾ ಚೊಚ್ಚಲಾದವುಗಳಿಗೆ ಬದಲಾಗಿ ಲೇವಿಯರನ್ನು ಇಸ್ರಾಯೇಲ್ ಮಕ್ಕಳೊಳಗಿಂದ ತೆಗೆದುಕೊಂಡಿ ದ್ದೇನೆ. ಆದದರಿಂದ ಲೇವಿಯರು ನನ್ನವರಾಗಿರುವರು. ಚೊಚ್ಚಲಾದವರೆಲ್ಲರೂ ನನ್ನವರೇ. ನಾನು ಐಗುಪ್ತ ದೇಶದಲ್ಲಿ ಚೊಚ್ಚಲಾದವುಗಳನ್ನೆಲ್ಲಾ ಹೊಡೆದ ದಿನ ದಲ್ಲಿ ನಾನು ಇಸ್ರಾಯೇಲಿನಲ್ಲಿ ಮನುಷ್ಯರಲ್ಲಿಯೂ ಪಶುಗಳಲ್ಲಿಯೂ ಚೊಚ್ಚಲಾದದ್ದನ್ನೆಲ್ಲಾ ಪರಿಶುದ್ಧ ಮಾಡಿಕೊಂಡಿದ್ದೇನೆ. ಅವರು ನನ್ನವರಾಗಿರಬೇಕು. ನಾನೇ ಕರ್ತನು. ಕರ್ತನು ಸೀನಾಯಿ ಅರಣ್ಯದಲ್ಲಿ ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನಂದರೆ-- ಲೇವಿಯ ಕುಮಾರರನ್ನು ಅವರ ತಂದೆಗಳ ಮನೆಯ ಪ್ರಕಾರ ವಾಗಿಯೂ ಅವರ ಕುಟುಂಬಗಳ ಪ್ರಕಾರವಾಗಿಯೂ ಎಣಿಸು. ಒಂದು ತಿಂಗಳು ಮೊದಲುಗೊಂಡು ಮೇಲ್ಪಟ್ಟ ಪ್ರಾಯವುಳ್ಳ ಗಂಡಸರೆಲ್ಲರನ್ನೂ ನೀನು ಎಣಿಸು ಅಂದನು. ಆಗ ಮೋಶೆಯು ತನಗೆ ಕರ್ತನು ಆಜ್ಞಾಪಿಸಿದ ಮಾತಿನ ಪ್ರಕಾರವಾಗಿ ಎಣಿಸಿದನು. ಲೇವಿಯ ಕುಮಾರರ ಹೆಸರುಗಳು ಇವೇ: ಗೇರ್ಷೋನನೂ ಕೆಹಾತನೂ ಮೆರಾರೀಯೂ. ಗೇರ್ಷೋನನ ಕುಮಾರರ ಹೆಸರುಗಳು ತಮ್ಮ ಕುಟುಂಬಗಳ ಪ್ರಕಾರ ಇವೇ; ಲಿಬ್ನೀಯೂ ಶಿಮ್ಮಿಯೂ. ಕೆಹಾತನ ಕುಮಾರರು ತಮ್ಮ ಕುಟುಂಬಗಳ ಪ್ರಕಾರ ಅಮ್ರಾಮನೂ ಇಚ್ಹಾರನೂ ಹೆಬ್ರೋನನೂ ಉಜ್ಜೀಯೇಲನೂ. ಮೆರಾರೀಯ ಕುಮಾರರು ತಮ್ಮ ಕುಟುಂಬಗಳ ಪ್ರಕಾರ ಮಹ್ಲೀಯೂ ಮೂಷೀಯೂ. ತಂದೆಗಳ ಮನೆಯ ಪ್ರಕಾರವಾಗಿ ಲೇವಿಯರ ಕುಟುಂಬಗಳು ಇವೇ. ಗೇರ್ಷೋನಿಗೆ ಸೇರಿದವರು ಲಿಬ್ನೀಯ ಕುಟುಂಬ ದವರೂ ಶಿವ್ಮೆಾಯ ಕುಟುಂಬದವರೂ, ಗೇರ್ಷೋನನ ಕುಟುಂಬಗಳು ಇವೇ. ಒಂದು ತಿಂಗಳು ಮೊದಲು ಗೊಂಡು ಮೇಲ್ಪಟ್ಟ ಪ್ರಾಯವುಳ್ಳ ಅವರ ಎಲ್ಲಾ ಗಂಡಸರ ಸಂಖ್ಯೆಯ ಪ್ರಕಾರ ಎಣಿಸಲ್ಪಟ್ಟವರು ಏಳು ಸಾವಿರದ ಐನೂರು ಮಂದಿ. ಗೇರ್ಷೋನ್ಯರ ಕುಟುಂಬಗಳು ಗುಡಾರದ ಹಿಂದುಗಡೆ ಪಶ್ಚಿಮದ ಕಡೆಗೆ ಇಳುಕೊಳ್ಳಬೇಕು. ಲಾಯೇಲನ ಮಗನಾದ ಎಲ್ಯಾಸಾಫನು ಗೇರ್ಷೋನ್ಯರ ತಂದೆ ಮನೆಗೆ ಮುಖ್ಯಸ್ಥನು. ಸಭೆಯ ಗುಡಾರದಲ್ಲಿ ಗೇರ್ಷೋನನ ಕುಮಾರರು ಕಾಪಾಡಿಕೊಳ್ಳಬೇಕಾದವುಗಳು ಗುಡಾ ರವೂ ಅದರ ಹೊದಿಕೆಯೂ ಸಭೆಯ ಗುಡಾರದ ಬಾಗಲಿನ ತೆರೆಯೂ ಅಂಗಳದ ತೆರೆಗಳೂ ಗುಡಾರಕ್ಕೂ ಬಲಿಪೀಠಕ್ಕೂ ಸುತ್ತಲಿರುವ ಅಂಗಳದ ಪರದೆಯೂ ಅಂಗಳದ ಬಾಗಲಿನ ತೆರೆಯೂ ಅದರ ಸಮಸ್ತ ಸೇವೆಗೆ ಬೇಕಾದ ಹಗ್ಗಗಳೂ ಇವೆ. ಅಮ್ರಾಮಿಯರ ಕುಟುಂಬವೂ ಇಚ್ಹಾರರ ಕುಟುಂಬವೂ ಹೆಬ್ರೋನಿಯರ ಕುಟುಂಬವೂ ಉಜ್ಜೀ ಯೇಲರ ಕುಟುಂಬವೂ ಇವು ಕೆಹಾತರ ಕುಟುಂಬ ಗಳು. ಪರಿಶುದ್ಧ ಸ್ಥಳದ ಅಪ್ಪಣೆಯನ್ನು ಕಾಪಾಡು ವವರ ಲೆಕ್ಕ ಒಂದು ತಿಂಗಳು ಮೊದಲುಗೊಂಡು ಮೇಲ್ಪಟ್ಟ ಪ್ರಾಯವುಳ್ಳ ಗಂಡಸರೆಲ್ಲರೂ ಎಂಟು ಸಾವಿರದ ಆರು ನೂರು. ಕೆಹಾತನ ಕುಮಾರರ ಕುಟುಂಬಗಳು ಗುಡಾರದ ಬಳಿಯಲ್ಲಿ ದಕ್ಷಿಣದ ಕಡೆಗೆ ಇಳುಕೊಳ್ಳಬೇಕು. ಉಜ್ಜೀಯೇಲನ ಕುಮಾರನಾದ ಎಲೀಚಾಫಾನು ಕೆಹಾತರ ಕುಟುಂಬಗಳ ತಂದೆಯ ಮನೆಗೆ ಮುಖ್ಯಸ್ಥನು. ಅವರ ಅಪ್ಪಣೆಯೇನಂದರೆ: ಮಂಜೂಷವೂ ಮೇಜೂ ದೀಪಸ್ತಂಭವೂ ಬಲಿಪೀಠ ಗಳೂ ಅವರು ಸೇವೆಮಾಡುವ ಪರಿಶುದ್ಧ ಸ್ಥಳದ ವಸ್ತುಗಳೂ ತೆರೆಯೂ ಅವುಗಳ ಎಲ್ಲಾ ಸೇವೆಯೂ ಆಗಿದೆ. ಇದಲ್ಲದೆ ಯಾಜಕನಾಗಿರುವ ಆರೋನನ ಮಗನಾದ ಎಲ್ಲಾಜಾರನು ಲೇವಿಯರ ಮುಖ್ಯಸ್ಥರ ಮೇಲೆ ಮುಖ್ಯಸ್ಥನು, ಪರಿಶುದ್ಧ ಸ್ಥಳದ ಅಪ್ಪಣೆಯನ್ನು ಕೈಕೊಳ್ಳುವವರ ಮೇಲೆ ವಿಚಾರಕನು ಅವನೇ. ಮಹ್ಲೀಯರ ಕುಟುಂಬವೂ ಮೂಷೀಯರ ಕುಟುಂಬವೂ ಇವು ಮೆರಾರೀಯರ ಕುಟುಂಬಗಳು. ಅದರಲ್ಲಿ ಎಣಿಸಲ್ಪಟ್ಟವರು ಒಂದು ತಿಂಗಳು ಮೊದಲುಗೊಂಡು ಮೇಲ್ಪಟ್ಟ ಪ್ರಾಯವುಳ್ಳ ಗಂಡಸ ರೆಲ್ಲರ ಲೆಕ್ಕದ ಪ್ರಕಾರ ಆರು ಸಾವಿರದ ಇನ್ನೂರು. ಅಬೀಹೈಲನ ಮಗನಾದ ಚೂರೀಯೇಲನು ಮೆರಾ ರೀಯ ಕುಟುಂಬಗಳ ತಂದೆಯ ಮನೆಗೆ ಮುಖ್ಯಸ್ಥನು; ಅವರು ಗುಡಾರದ ಬಳಿಯಲ್ಲಿ ಉತ್ತರದಿಕ್ಕಿನ ಕಡೆಗೆ ಇಳುಕೊಳ್ಳಬೇಕು. ಇದಲ್ಲದೆ ಮೆರಾರೀಯ ಕುಮಾ ರರ ಅಪ್ಪಣೆಯೂ ಅವರ ವಶದಲ್ಲಿ ಇರುವವುಗಳೂ ಯಾವವೆಂದರೆ: ಗುಡಾರದ ಹಲಗೆಗಳೂ ಅಗುಳಿಗಳೂ ಕಂಬಗಳೂ ಕುಣಿಕೆಗಳೂ ಎಲ್ಲಾ ವಸ್ತುಗಳೂ ಅವರ ಎಲ್ಲಾ ಸೇವೆಯೂ ಅಂಗಳದ ಸುತ್ತಮುತ್ತಲಿರುವ ಕಂಬಗಳೂ ಅವುಗಳ ಕುಣಿಕೆಗಳೂ ಗೂಟಗಳೂ ಹಗ್ಗಗಳೂ ಇವುಗಳೇ. ಆದರೆ ಗುಡಾರದ ಎದುರಿನಲ್ಲಿ ಪೂರ್ವದಿಕ್ಕಿಗೆ ಅಂದರೆ ಸಭೆಯ ಗುಡಾರದ ಮುಂದೆ ಪೂರ್ವದಿಕ್ಕಿಗೆ ಇಳುಕೊಳ್ಳುವವರು ಮೋಶೆಯೂ ಆರೋನನೂ ಅವನ ಕುಮಾರರೂ. ಇವರು ಇಸ್ರಾಯೇಲ್ ಮಕ್ಕಳಿಗಾಗಿ ಪರಿಶುದ್ಧಸ್ಥಳದ ಅಪ್ಪಣೆಯನ್ನು ಕಾಪಾ ಡುವವರು. ಪರಕೀಯನು ಸವಿಾಪಿಸಿದರೆ ಅವನು ಸಾಯಬೇಕು. ಮೋಶೆಯೂ ಆರೋನನೂ ಕರ್ತನ ಆಜ್ಞೆಯ ಪ್ರಕಾರ ಕುಟುಂಬಗಳ ಮೇರೆಗೆ ಲೆಕ್ಕ ಮಾಡಿದ ಎಲ್ಲಾ ಲೇವಿಯರು ಒಂದು ತಿಂಗಳು ಮೊದಲುಗೊಂಡು ಮೇಲ್ಪಟ್ಟ ಪ್ರಾಯವುಳ್ಳ ಗಂಡಸರೆಲ್ಲರು ಲೆಕ್ಕದ ಪ್ರಕಾರ ಇಪ್ಪತ್ತೆರಡು ಸಾವಿರ ಮಂದಿ. ಇದಲ್ಲದೆ ಕರ್ತನು ಮೋಶೆಗೆ ಹೇಳಿದ್ದೇನಂದರೆ--ಇಸ್ರಾಯೇಲ್ ಮಕ್ಕಳಲ್ಲಿರುವ ಚೊಚ್ಚಲು ಗಂಡಸರನ್ನೆಲ್ಲಾ ಅವರು ಒಂದು ತಿಂಗಳೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳವರ ಲೆಕ್ಕವನ್ನು ತೆಗೆದುಕೋ. ಇಸ್ರಾಯೇಲ್ ಮಕ್ಕಳಲ್ಲಿರುವ ಚೊಚ್ಚಲಾದವರೆ ಲ್ಲರಿಗೆ ಬದಲಾಗಿ ಲೇವಿಯರನ್ನೂ ಇಸ್ರಾಯೇಲ್ ಮಕ್ಕಳ ದನಗಳಲ್ಲಿರುವ ಸಕಲ ಚೊಚ್ಚಲಾದವುಗಳಿಗೆ ಬದಲಾಗಿ ಲೇವಿಯರ ದನಗಳನ್ನೂ ನನಗೋಸ್ಕರ ತೆಗೆದುಕೋ (ನಾನೇ ಕರ್ತನು) ಎಂದು ಹೇಳಿದನು. ಆಗ ಕರ್ತನು ಮೋಶೆಗೆ ಆಜ್ಞಾಪಿಸಿದ ಹಾಗೆ ಅವನು ಇಸ್ರಾಯೇಲ್ ಮಕ್ಕಳಲ್ಲಿ ಚೊಚ್ಚಲಾಗಿರುವದೆ ಲ್ಲವನ್ನು ಎಣಿಸಿದನು. ಒಂದು ತಿಂಗಳು ಮೊದಲು ಗೊಂಡು ಮೇಲ್ಪಟ್ಟ ಪ್ರಾಯವುಳ್ಳ ಗಂಡಸರಲ್ಲಿ ಚೊಚ್ಚ ಲಾದವರೆಲ್ಲರು ಅಂದರೆ ಹೆಸರುಗಳ ಲೆಕ್ಕದಲ್ಲಿ ಎಣಿಸಲ್ಪಟ್ಟವರು ಇಪ್ಪತ್ತೆರಡು ಸಾವಿರದ ಇನ್ನೂರ ಎಪ್ಪತ್ತುಮೂರು ಮಂದಿಯಾಗಿದ್ದರು. ಕರ್ತನು ಮಾತನಾಡಿ ಮೋಶೆಗೆ ಹೇಳಿದ್ದೇ ನಂದರೆ-- ಇಸ್ರಾಯೇಲ್ ಮಕ್ಕಳಲ್ಲಿ ಚೊಚ್ಚಲಾದ ವರೆಲ್ಲರಿಗೆ ಬದಲಾಗಿ ಲೇವಿಯರನ್ನೂ ಅವರ ದನ ಗಳಿಗೆ ಬದಲಾಗಿ ಲೇವಿಯರ ದನಗಳನ್ನೂ ತೆಗೆದುಕೋ, ಲೇವಿಯರು ನನ್ನವರಾಗಿರುವರು; ನಾನೇ ಕರ್ತನು. ಇಸ್ರಾಯೇಲ್ ಮಕ್ಕಳ ಚೊಚ್ಚಲಾದವರಲ್ಲಿ ಲೇವಿ ಯರಿಗಿಂತ ಹೆಚ್ಚಾಗಿರುವ ಇನ್ನೂರ ಎಪ್ಪತ್ತಮೂರು ಮಂದಿಯ ವಿಮೋಚನೆಯ ಕ್ರಯವಾಗಿ ಒಬ್ಬೊಬ್ಬ ನಿಗೆ ಐದು ಶೇಕೆಲುಗಳನ್ನು ತೆಗೆದುಕೋ. ಪರಿಶುದ್ಧ ಶೇಕೆಲಿನ ಮೇರೆಗೆ (ಶೇಕೆಲಿಗೆ ಇಪ್ಪತ್ತು ಗೇರಾ) ಈ ಪ್ರಕಾರವಾಗಿ ತೆಗೆದುಕೊಳ್ಳಬೇಕು. ಅವರೊಳಗೆ ಹೆಚ್ಚಾಗಿರುವವರ ವಿಮೋಚನೆಯ ಕ್ರಯವನ್ನು ಆರೋ ನನಿಗೂ ಅವನ ಮಕ್ಕಳಿಗೂ ನೀನು ಕೊಡಬೇಕು. ಹೀಗೆ ಮೋಶೆಯು ಲೇವಿಯರಿಂದ ವಿಮೋಚಿಸ ಲ್ಪಟ್ಟವರಿಗೆ ಹೆಚ್ಚು ಜನರ ವಿಮೋಚನೆಯ ಕ್ರಯವಾದ ಹಣವನ್ನು ತೆಗೆದುಕೊಂಡನು.
- Numbers 26:57–62 ಅರಣ್ಯಕಾಂಡ 26:57–62ಲೇವಿಯರಲ್ಲಿ ಕುಟುಂಬಗಳ ಪ್ರಕಾರ ಎಣಿಸಲ್ಪ ಟ್ಟವರು ಇವರೇ. ಗೆರ್ಷೋನನಿಂದ ಗೆರ್ಷೋನ್ಯರ ಕುಟುಂಬ; ಕೆಹಾತನಿಂದ ಕೆಹಾತ್ಯರ ಕುಟುಂಬ; ಮೆರಾರೀಯಿಂದ ಮೆರಾರೀಯರ ಕುಟುಂಬ. ಲೇವಿಯರ ಕುಟುಂಬಗಳು ಇವೇ: ಲಿಬ್ನೀಯರ ಕುಟುಂಬ; ಹೆಬ್ರೋನ್ಯರ ಕುಟುಂಬ; ಮಹ್ಲೀಯರ ಕುಟುಂಬ; ಮೂಷೀಯರ ಕುಟುಂಬ; ಕೋರಹಿಯರ ಕುಟುಂಬ; ಆದರೆ ಕೆಹಾತನು ಅಮ್ರಾಮನನ್ನು ಪಡೆದನು. ಅಮ್ರಾಮನ ಹೆಂಡತಿಯ ಹೆಸರು ಯೋಕೆಬೆದಳು. ಆಕೆಯು ಐಗುಪ್ತದಲ್ಲಿ ಲೇವಿಯಿಂದ ಹುಟ್ಟಿದ ಮಗಳು. ಆಕೆಯು ಅಮ್ರಾಮನಿಗೆ ಆರೋನನನ್ನೂ ಮೋಶೆ ಯನ್ನೂ ಅವರ ಸಹೋದರಿಯಾದ ಮಿರ್ಯಾಮಳನ್ನೂ ಹೆತ್ತಳು. ಆರೋನನಿಗೆ ನಾದಾಬ್ ಅಬೀಹೂ ಎಲ್ಲಾಜರನೂ ಈತಾಮಾರ್ ಹುಟ್ಟಿದರು. ಆದರೆ ನಾದಾಬನೂ ಅಬೀಹೂ ಕರ್ತನ ಮುಂದೆ ಅನ್ಯಅಗ್ನಿಯನ್ನು ಅರ್ಪಿಸಿದ್ದರಿಂದ ಸತ್ತರು. ಇವರಲ್ಲಿ ಎಣಿಸಲ್ಪಟ್ಟವರು ಒಂದು ತಿಂಗಳೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ಗಂಡಸರೆಲ್ಲರು ಇಪ್ಪತ್ತುಮೂರು ಸಾವಿರ ಮಂದಿಯಾಗಿದ್ದರು. ಇವ ರಿಗೆ ಇಸ್ರಾಯೇಲ್ ಮಕ್ಕಳಲ್ಲಿ ಸ್ವಾಸ್ತ್ಯವು ದೊರೆ ಯದ ಕಾರಣ ಅವರು ಇಸ್ರಾಯೇಲ್ ಮಕ್ಕಳೊಳಗೆ ಎಣಿಸಲ್ಪಡಲಿಲ್ಲ.
- 1 Chronicles 6:1–81 1 ಪೂರ್ವಕಾಲವೃತ್ತಾಂತ 6:1–81ಲೇವಿಯ ಕುಮಾರರು--ಗೇರ್ಷೋನನು, ಕೆಹಾತನು, ಮೆರಾರೀಯು. ಕೆಹಾತನ ಕುಮಾರರು ಅಮ್ರಾಮನು ಇಚ್ಹಾರ್ ಹೆಬ್ರೋನನು ಉಜ್ಜೀಯೇಲನು. ಅಮ್ರಾಮನ ಮಕ್ಕಳು--ಆರೋ ನನು, ಮೋಶೆಯು, ಮಿರ್ಯಾಮಳು. ಆರೋನನ ಕುಮಾರರು--ನಾದಬನು ಅಬೀಹೂವು ಎಲ್ಲಾಜಾರನು ಈತಾಮಾರನು. ಎಲ್ಲಾಜಾರನು ಫೀನೆಹಾಸನನ್ನು ಪಡೆ ದನು. ಫೀನೆಹಾಸನು ಅಬೀಷೂವನನ್ನು ಪಡೆದನು. ಅಬೀಷೂವನು ಬುಕ್ಕೀಯನನ್ನು ಪಡೆದನು; ಬುಕ್ಕೀ ಯನು ಉಜ್ಜೀಯನನ್ನು ಪಡೆದನು; ಉಜ್ಜೀಯನು ಜೆರಹ್ಯನನ್ನು ಪಡೆದನು; ಜೆರಹ್ಯನು ಮೆರಾಯೋತ ನನ್ನು ಪಡೆದನು; ಮೆರಾಯೋತನು ಅಮರ್ಯನನ್ನು ಪಡೆದನು; ಅಮರ್ಯನು ಅಹೀಟೂಬನನ್ನು ಪಡೆ ದನು. ಅಹೀಟೂಬನು ಚಾದೋಕನನ್ನು ಪಡೆದನು; ಚಾದೋಕನು ಅಹೀಮಾಚನನ್ನು ಪಡೆದನು; ಅಹೀ ಮಾಚನು ಅಜರ್ಯನನ್ನು ಪಡೆದನು; ಅಜರ್ಯನು ಯೋಹಾನಾನನನ್ನು ಪಡೆದನು; ಯೋಹಾನಾನ ನನು ಯೊರೂಸಲೇಮಿನಲ್ಲಿ ಸೊಲೊಮೋನನು ಕಟ್ಟಿ ಸಿದ ದೇವಾಲಯದೊಳಗೆ ಯಾಜಕಸೇವೆನಡಿಸಿದ ಅಜರ್ಯನನ್ನು ಪಡೆದನು; ಅಜರ್ಯನು ಅಮ ರ್ಯನನ್ನು ಪಡೆದನು; ಅಮರ್ಯನು ಅಹೀಟೂಬ ನನ್ನು ಪಡೆದನು; ಅಹೀಟೂಬನು ಚಾದೋಕನನ್ನು ಪಡೆದನು; ಚಾದೋಕನು ಶಲ್ಲೂಮನನ್ನು ಪಡೆದನು; ಶಲ್ಲೂಮನು ಹಿಲ್ಕೀಯನನ್ನು ಪಡೆದನು; ಹಿಲ್ಕೀ ಯನು ಅಜರ್ಯನನ್ನು ಪಡೆದನು; ಅಜರ್ಯನು ಸೆರಾಯನನ್ನು ಪಡೆದನು; ಸೆರಾಯನು ಯೆಹೋಚಾ ದಾಕನನ್ನು ಪಡೆದನು ಕರ್ತನು ನೆಬೂಕದ್ನೆಚ್ಚರನ ಕೈಯಿಂದ ಯೆಹೂದ್ಯರನ್ನೂ, ಯೆರೂಸಲೇಮಿನ ವರನ್ನೂ ಸೆರೆಯಾಗಿ ಒಯ್ದಾಗ ಯೆಹೋಚಾದಾಕನು ಸೆರೆಯಾಗಿ ಹೋದನು. ಲೇವಿಯ ಕುಮಾರರು--ಗೇರ್ಷೋನನು ಕೆಹಾ ತನು ಮೆರಾರೀಯು. ಗೇರ್ಷೋನನ ಕುಮಾರರ ಹೆಸರುಗಳು--ಲಿಬ್ನೀಯು ಶಿವ್ಮೆಾಯು. ಕೆಹಾತನ ಕುಮಾರರು--ಅಮ್ರಾಮನು ಇಚ್ಹಾರನು ಹೆಬ್ರೋ ನನು ಉಜ್ಜೀಯೇಲನು. ಮೆರಾರೀಯ ಕುಮಾರರುಮಹ್ಲೀಯು ಮೂಷೀಯು. ಲೇವಿಯರ ಸಂತತಿಗಳು ತಮ್ಮ ಪಿತೃಗಳ ಪ್ರಕಾರ ವಾಗಿ ಯಾವವೆಂದರೆ-- ಗೇರ್ಷೋನಿನವರು--ಇವನ ಮಗನಾದ ಲಿಬ್ನೀಯು; ಇವನ ಮಗನಾದ ಯಹತ್; ಇವನ ಮಗನಾದ ಜಿಮ್ಮನು; ಇವನ ಮಗನಾದ ಯೋವಾಹನು; ಇವನ ಮಗನಾದ ಇದ್ದೋನು; ಇವನ ಮಗನಾದ ಜೆರಹನು; ಇವನ ಮಗನಾದ ಯೆವತ್ರೈಯನು. ಕೆಹಾತನ ಕುಮಾರರು--ಇವನ ಮಗನಾದ ಅವ್ಮೆಾನದಾಬನು; ಇವನ ಮಗನಾದ ಕೋರಹನು; ಇವನ ಮಗನಾದ ಅಸ್ಸೀರನು; ಇವನ ಮಗನಾದ ಎಲ್ಕಾನನು; ಇವನ ಮಗನಾದ ಎಬ್ಯಾಸಾಫನು; ಇವನ ಮಗನಾದ ಅಸ್ಸೀರನು; ಇವನ ಮಗನಾದ ತಹತನು; ಇವನ ಮಗನಾದ ಊರಿಯೇಲನು; ಇವನ ಮಗನಾದ ಉಜ್ಜೀಯನು; ಇವನ ಮಗನಾದ ಸೌಲನು. ಎಲ್ಕಾನನ ಕುಮಾರರು--ಅಮಾಸೈಯು ಅಹೀಮೋತನು ಎಲ್ಕಾನನು. ಈ ಎಲ್ಕಾನನ ಕುಮಾರರು ಯಾರಂದರೆ -- ಇವನ ಮಗನಾದ ಚೂಫೈಯು; ಇವನ ಮಗನಾದ ನಹತನು; ಇವನ ಮಗನಾದ ಎಲೀಯಾಬನು; ಇವನ ಮಗನಾದ ಯೆರೋಹಾಮನು; ಇವನ ಮಗನಾದ ಎಲ್ಕಾನನು. ಸಮುವೇಲನ ಕುಮಾರರು--ಚೊಚ್ಚಲ ಮಗನಾದ ವಷ್ನಿಯನು, ಅಬೀಯನು. ಮೆರಾರೀಯ ಕುಮಾರರು--ಮಹ್ಲೀಯು ಇವನ ಮಗನಾದ ಲಿಬ್ನೀಯು; ಇವನ ಮಗನಾದ ಶಿವ್ಮೆಾ; ಇವನ ಮಗನಾದ ಉಜ್ಜಾನು; ಇವನ ಮಗನಾದ ಶಿಮ್ಮಾನು; ಇವನ ಮಗನಾದ ಹಗ್ಗೀಯನು; ಇವನ ಮಗನಾದ ಅಸಾಯನು. ಮಂಜೂಷವನ್ನು ನೆಲೆಯಾಗಿ ಇರಿಸಿದ ತರು ವಾಯ ದಾವೀದನು ಕರ್ತನ ಮನೆಯಲ್ಲಿ ಹಾಡುವ ಸೇವೆಯ ಮೇಲೆ ಇರಿಸಿದವರು ಇವರೇ. ಸೊಲೊ ಮೋನನು ಯೆರೂಸಲೇಮಿನಲ್ಲಿ ಕರ್ತನ ಮನೆಯನ್ನು ಕಟ್ಟುವ ವರೆಗೆ ಇವರು ಹಾಡುವ ಸೇವೆಯಲ್ಲಿ ಸಭೆಯ ಗುಡಾರ ನಿವಾಸದ ಮುಂದೆ ಸೇವಿಸುತ್ತಾ ಇದ್ದರು; ಆಗ ಅವರು ತಮ್ಮ ಸೇವೆಯಲ್ಲಿ ಕ್ರಮದ ಪ್ರಕಾರ ಕಾಯುತ್ತಿದ್ದರು. ತಮ್ಮ ಮಕ್ಕಳ ಸಂಗಡ ಕಾಯುತ್ತಿದ್ದವರು ಯಾರಂದರೆ--ಕೆಹಾತ್ಯರ ಮಕ್ಕಳಲ್ಲಿ ಸಂಗೀತಗಾರನಾದ ಹೇಮಾನನು. ಇವನು ಯೋವೇಲನ ಮಗನು, ಇವನು ಸಮುವೇಲನ ಮಗನು, ಇವನು ಎಲ್ಕಾನನ ಮಗನು, ಇವನು ಯೆರೋಹಾಮನ ಮಗನು, ಇವನು ಎಲೀಯೇಲನ ಮಗನು, ಇವನು ತೋಹನ ಮಗನು, ಇವನು ಚೂಫನ ಮಗನು, ಇವನು ಎಲ್ಕಾನನ ಮಗನು, ಇವನು ಮಹತನ ಮಗನು, ಇವನು ಅಮಾಸೈಯ ಮಗನು, ಇವನು ಎಲ್ಕಾನನ ಮಗನು, ಇವನು ಯೋವೇಲನ ಮಗನು, ಇವನು ಅಜರ್ಯನ ಮಗನು, ಇವನು ಚೆಫನ್ಯನ ಮಗನು, ಇವನು ತಹತನ ಮಗನು, ಇವನು ಅಸೀರನ ಮಗನು, ಇವನು ಎಬ್ಯಾಸಾಫನ ಮಗನು, ಇವನು ಕೋರಹನ ಮಗನು, ಇವನು ಇಚ್ಹಾರನ ಮಗನು ಇವನು ಕೆಹಾತನ ಮಗನು, ಇವನು ಲೇವಿಯನ ಮಗನು, ಇವನು ಇಸ್ರಾಯೇಲನ ಮಗನು. ಇವನ ಬಲಗಡೆ ನಿಂತಿರುವ ಇವನ ಸಹೋ ದರನಾದ ಆಸಾಫನು; ಈ ಆಸಾಫನು ಬೆರೆಕ್ಯನ ಮಗನು, ಇವನು ಶಿಮ್ಮನ ಮಗನು, ಇವನು ವಿಾಕಾಯೇಲನ ಮಗನು, ಇವನು ಬಾಸೇಯನ ಮಗನು, ಇವನು ಮಲ್ಕೀಯನ ಮಗನು, ಇವನು ಎತ್ನಿಯ ಮಗನು, ಇವನು ಜೆರಹನ ಮಗನು, ಇವನು ಅದಾಯನ ಮಗನು, ಇವನು ಏತಾನನ ಮಗನು, ಇವನು ಜಿಮ್ಮನ ಮಗನು, ಇವನು ಶಿವ್ಮೆಾಯ ಮಗನು, ಇವನು ಯಹತನ ಮಗನು, ಇವನು ಗೇರ್ಷೋಮನ ಮಗನು, ಇವನು ಲೇವಿಯ ಮಗನು. ಅವರ ಸಹೋದರರಾದ ಮೆರಾರೀ ಕುಮಾ ರರು ಎಡಗಡೆಯಲ್ಲಿ ನಿಂತಿದ್ದರು. ಏತಾನನು ಕೀಷೀಯ ಮಗನು, ಇವನು ಅಬ್ದೀಯ ಮಗನು, ಇವನು ಮಲ್ಲೂಕನ ಮಗನು, ಇವನು ಹಷಬ್ಯನ ಮಗನು, ಇವನು ಅಮಚ್ಯನ ಮಗನು, ಇವನು ಹಿಲ್ಕೀಯನ ಮಗನು, ಇವನು ಅವ್ಚೆಾಯ ಮಗನು, ಇವನು ಬಾನೀಯ ಮಗನು, ಇವನು ಶೆಮೆರನ ಮಗನು, ಇವನು ಮಹ್ಲೀಯ ಮಗನು, ಇವನು ಮೂಷೀಯ ಮಗನು, ಇವನು ಮೆರಾರಿಯ ಮಗನು, ಇವನು ಲೇವಿಯ ಮಗನು. ಅವರ ಸಹೋದರರಾದ ಲೇವಿಯರು ದೇವರ ಮನೆಯ ಗುಡಾರದ ಸಮಸ್ತ ಸೇವೆಗೆ ನೇಮಿಸಲ್ಪಟ್ಟ ವರಾಗಿದ್ದರು. ಆದರೆ ಆರೋನನು ಅವನ ಕುಮಾ ರರು ದಹನಬಲಿಯ ಪೀಠದ ಮೇಲೆಯೂ ಧೂಪ ಪೀಠದ ಮೇಲೆಯೂ ಅರ್ಪಿಸುತ್ತಿದ್ದರು. ದೇವರ ಸೇವಕನಾದ ಮೋಶೆ ಆಜ್ಞಾಪಿಸಿದ ಎಲ್ಲಾದರ ಪ್ರಕಾರ ಅವರು ಮಹಾಪರಿಶುದ್ಧ ಸ್ಥಾನದ ಸಮಸ್ತ ಕಾರ್ಯಕ್ಕೂ ಇಸ್ರಾಯೇಲಿಗೋಸ್ಕರ ಪ್ರಾಯಶ್ಚಿತ್ತ ಮಾಡುವದಕ್ಕೂ ನೇಮಿಸಲ್ಪಟ್ಟರು. ಆರೋನನ ಕುಮಾರರು-- ಇವನ ಮಗನು ಎಲ್ಲಾಜಾರನು, ಇವನ ಮಗನು ಫಿನೇ ಹಾಸನು, ಇವನ ಮಗನು ಅಬೀಷೂವನು, ಇವನ ಮಗನು ಬುಕ್ಕೀಯು, ಇವನ ಮಗನು ಉಜ್ಜೀಯು, ಇವನ ಮಗನು ಜೆರಹ್ಯಾಹನು, ಇವನ ಮಗನು ಮೆರಾಯೋತನು, ಇವನ ಮಗನು ಅಮರ್ಯನು, ಇವನ ಮಗನು ಅಹೀಟೂಬನು, ಇವನ ಮಗನು ಚಾದೋಕನು, ಇವನ ಮಗನು ಅಹಿಮಾಚನು. ತಮ್ಮ ಮೇರೆಗಳೊಳಗೆ ಇರುವ ತಮ್ಮ ಕೋಟೆ ಗಳಲ್ಲಿ ಆರೋನನ ಕುಮಾರರ ನಿವಾಸ ಸ್ಥಾನಗಳು ಯಾವವೆಂದರೆ--ಕೆಹಾತನ ಕುಟುಂಬಗಳಿಗೆ ಚೀಟು ಬಿದ್ದ ಪ್ರಕಾರ ಯೆಹೂದದ ದೇಶದಲ್ಲಿ ಹೆಬ್ರೋನ್ ಪಟ್ಟಣವೂ ಅದರ ಸುತ್ತಲಿರುವ ಉಪನಗರಗಳೂ ಅವರಿಗೆ ಕೊಡಲ್ಪಟ್ಟವು. ಆದರೆ ಆ ಪಟ್ಟಣದ ಹೊಲಗಳನ್ನೂ ಅದರ ಗ್ರಾಮಗಳನ್ನೂ ಯೆಪುನ್ನೆಯ ಮಗನಾದ ಕಾಲೇಬನಿಗೆ ಕೊಟ್ಟರು. ಯೆಹೂದದ ಕುಲಗಳಲ್ಲಿ ಆರೋನನ ಕುಮಾರರಿಗೆ ಕೊಟ್ಟ ಕುಲಗಳಲ್ಲಿ ಯಾವವಂದರೆ ಆಶ್ರಯವಾದ ಹೆಬ್ರೋನೂ ಲಿಬ್ನವೂ, ಅದರ ಉಪನಗರಗಳೂ, ಯತ್ತೀರೂ ಎಷ್ಟೆಮೋವವೂ ಅವುಗಳ ಉಪನಗರಗಳೂ, ಹೀಲೇನೂ ಅದರ ಉಪನಗರಗಳೂ ದೆಬೀರೂ ಅದರ ಉಪನಗರಗಳೂ, ಆಷಾನೂ ಅದರ ಉಪನಗರಗಳೂ, ಬೇತ್ಷೆಮೆಷೂ ಅದರ ಉಪನಗರಗಳೂ, ಬೆನ್ಯಾವಿಾನನ ಗೋತ್ರ ದಿಂದ ಕೊಟ್ಟವುಗಳು--ಗೆಬವೂ ಅದರ ಉಪನಗರ ಗಳೂ, ಆಲೆಮೆತೂ ಅದರ ಉಪನಗರಗಳೂ, ಅನಾ ತೋತೂ ಅದರ ಉಪನಗರಗಳೂ ಇವರ ಕುಟುಂಬ ಗಳಿಗೆ ಉಂಟಾದ ಎಲ್ಲಾ ಪಟ್ಟಣಗಳು ಹದಿಮೂರು. ಆ ಗೊತ್ರದ ಕುಟುಂಬಗಳಲ್ಲಿ ಉಳಿದ ಕೆಹಾತನ ಕುಮಾರರಿಗೂ ಚೀಟು ಹಾಕಿ ಮನಸ್ಸೆಯ ಅರ್ಧ ಗೋತ್ರದಿಂದ ಹತ್ತು ಪಟ್ಟಣಗಳು ಕೊಡಲ್ಪಟ್ಟಿದ್ದವು. ಗೇರ್ಷೋಮನ ಕುಮಾರರಿಗೆ ತಮ್ಮ ಕುಟುಂಬಗಳ ಪ್ರಕಾರವೇ ಇಸ್ಸಾಕಾರನ ಗೋತ್ರದಿಂದಲೂ, ಆಶೇರನ ಗೋತ್ರದಿಂದಲೂ, ನಫ್ತಾಲಿಯ ಗೋತ್ರದಿಂದಲೂ, ಬಾಷಾನಿನಲ್ಲಿರುವ ಮನಸ್ಸೆಯ ಗೋತ್ರದಿಂದಲೂ, ಹದಿಮೂರು ಪಟ್ಟಣಗಳು ಕೊಡಲ್ಪಟ್ಟಿದ್ದವು. ಮೆರಾ ರೀಯ ಕುಮಾರರಿಗೂ ಅವರ ಕುಟುಂಬಗಳ ಪ್ರಕಾರ ಚೀಟು ಹಾಕಿ ರೂಬೇನನ ಗೋತ್ರದಿಂದಲೂ, ಗಾದನ ಗೋತ್ರದಿಂದಲೂ, ಜೆಬೂಲೂನನ ಗೋತ್ರ ದಿಂದಲೂ, ಹನ್ನೆರಡು ಪಟ್ಟಣಗಳು ಕೊಡಲ್ಪಟ್ಟಿದ್ದವು. ಇಸ್ರಾಯೇಲಿನ ಮಕ್ಕಳು ಲೇವಿಯರಿಗೆ ಈ ಪಟ್ಟಣಗಳನ್ನೂ ಅವುಗಳ ಉಪನಗರಗಳನ್ನೂ ಕೂಡಾ ಕೊಟ್ಟರು. ಅವರು ಯೆಹೂದನ ಮಕ್ಕಳ ಗೋತ್ರ ದಿಂದಲೂ, ಸಿಮೆಯೋನನ ಮಕ್ಕಳ ಗೋತ್ರ ದಿಂದಲೂ, ಬೆನ್ಯಾವಿಾನನ ಮಕ್ಕಳ ಗೋತ್ರ ದಿಂದಲೂ, ಹೆಸರಾಗಿ ಹೇಳಲ್ಪಟ್ಟ ಈ ಪಟ್ಟಣಗಳನ್ನು ಚೀಟುಗಳ ಪ್ರಕಾರ ಕೊಟ್ಟರು. ಕೆಹಾತನ ಕುಮಾರರ ಮಿಕ್ಕಾದ ಕುಟುಂಬಗಳಿಗೂ ಅವರ ಮೇರೆಗಳಲ್ಲಿ ಎಫ್ರಾಯಾಮನ ಗೋತ್ರದೊಳಗೆ ಪಟ್ಟಣಗಳು ದೊರೆತಿದ್ದವು. ಇದಲ್ಲದೆ ಆಶ್ರಯ ಪಟ್ಟಣಗಳಾಗಿರುವ ಹಾಗೆ ಅವರಿಗೆ ಎಫ್ರಾಯಾಮ್ ಬೆಟ್ಟದಲ್ಲಿರುವ ಶೆಕೆಮನ್ನೂ ಅದರ ಉಪನಗರಗಳನ್ನೂ, ಗೆಜರನ್ನೂ ಅದರ ಉಪನಗರಗಳನ್ನೂ, ಯೊಕ್ಮೆಯಾ ಮನ್ನೂ ಅದರ ಉಪನಗರಗಳನ್ನೂ, ಬೇತ್ಹೋ ರೋನನ್ನೂ ಅದರ ಉಪನಗರಗಳನ್ನೂ, ಅಯ್ಯಾ ಲೋನನ್ನೂ ಅದರ ಉಪನಗರಗಳನ್ನೂ, ಗತ್ರಿಮ್ಮೋ ನನ್ನೂ ಅದರ ಉಪನಗರಗಳನ್ನೂ ಕೊಟ್ಟರು. ಇದ ಲ್ಲದೆ ಕೆಹಾತನ ಕುಮಾರರ ಮಿಕ್ಕಾದ ಕುಟುಂಬಕ್ಕೋಸ್ಕರ ಮನಸ್ಸೆಯ ಅರ್ಧ ಗೋತ್ರದಿಂದ ಆನೇರ್ ಅದರ ಉಪನಗರಗಳನ್ನೂ, ಬಿಳ್ಳಾಮನ್ನೂ ಅದರ ಉಪನಗರ ಗಳನ್ನೂ ಕೊಟ್ಟರು. ಮನಸ್ಸೆಯ ಅರ್ಧ ಗೋತ್ರದಿಂದ ಗೇರ್ಷೋ ಮನ ಕುಮಾರರಿಗೆ ಬಾಷಾನಿನಲ್ಲಿರುವ ಗೋಲಾನೂ ಅದರ ಉಪನಗರಗಳೂ, ಅಷ್ಟಾರೋಟ್ ಅದರ ಉಪನಗರಗಳೂ, ಇಸ್ಸಾಕಾರನ ಗೋತ್ರದಿಂದ ಕೆದೆಷೂ ಅದರ ಉಪನಗರಗಳೂ, ದಾಬೆರತೂ ಅದರ ಉಪನಗರಗಳೂ, ರಾಮೋತೂ ಅದರ ಉಪನಗರ ಗಳೂ, ಆನೇಮೂ ಅದರ ಉಪನಗರಗಳೂ, ಆಶೇರನ ಗೋತ್ರದಿಂದ ಮಾಷಾಲೂ ಅದರ ಉಪನಗರಗಳೂ, ಅಬ್ದೋನೂ ಅದರ ಉಪ ನಗರಗಳೂ, ಹೂಕೋಕೂ ಅದರ ಉಪನಗರಗಳೂ, ರೆಹೋಬೂ ಅದರ ಉಪನಗರಗಳೂ, ನಫ್ತಾಲಿ ಗೋತ್ರದಿಂದ ಗಲಿಲಾಯದಲ್ಲಿರುವ ಕೆದೆಷೂ ಅದರ ಉಪನಗರಗಳೂ, ಹಮ್ಮೋನೂ ಅದರ ಉಪನಗರಗಳೂ, ಕಿರ್ಯಾತಯಿಮೂ ಅದರ ಉಪನಗರಗಳೂ ಕೊಡಲ್ಪಟ್ಟಿದ್ದವು. ಮೆರಾರೀಯ ಉಳಿದ ಮಕ್ಕಳಿಗೂ ಜೆಬುಲೂನನ ಗೋತ್ರದಿಂದ ರಿಮ್ಮೋನೋ ಅದರ ಉಪನಗರಗಳೂ, ತಾಬೋರೂ ಅದರ ಉಪನಗರಗಳೂ, ಯೊರ್ದ ನಿನ ಆಚೇ ಕಡೆ ಯೆರಿಕೋವಿನ ಬಳಿಯಲ್ಲಿ ಯೊರ್ದ ನಿಂದ ಮೂಡಣದಿಕ್ಕಿನಲ್ಲಿ ರೂಬೇನನ ಗೋತ್ರದಿಂದ ಅರಣ್ಯದಲ್ಲಿರುವ ಬೆಚರೂ ಅದರ ಉಪನಗರಗಳೂ, ಯಹಚವೂ ಅದರ ಉಪನಗರಗಳೂ, ಕೆದೇ ಮೋತೂ ಅದರ ಉಪನಗರಗಳೂ, ಮೇಫಾತ್ಅದರ ಉಪನಗರಗಳೂ; ಗಾದನ ಗೋತ್ರದಿಂದ ಗಿಲ್ಯಾದಿನಲ್ಲಿರುವ ರಾಮೋತೂ ಅದರ ಉಪನಗರ ಗಳೂ, ಮಹನಯಿಮೂ ಅದರ ಉಪನಗರಗಳೂ,ಹೆಷ್ಬೋನೂ ಅದರ ಉಪನಗರಗಳೂ, ಯಗ್ಜೇರೂ ಅದರ ಉಪನಗರಗಳೂ ಕೊಡಲ್ಪಟ್ಟವು. ಹೆಷ್ಬೋನೂ ಅದರ ಉಪನಗರಗಳೂ, ಯಗ್ಜೇರೂ ಅದರ ಉಪನಗರಗಳೂ ಕೊಡಲ್ಪಟ್ಟವು.
- 1 Chronicles 21:6 1 ಪೂರ್ವಕಾಲವೃತ್ತಾಂತ 21:6ಆದರೆ ಲೇವಿಯರನ್ನೂ ಬೆನ್ಯಾವಿಾನ್ಯ ರನ್ನೂ ಅವರಲ್ಲಿ ಎಣಿಸಲಿಲ್ಲ; ಯಾಕಂದರೆ ಅರಸನ ಮಾತು ಯೋವಾಬನಿಗೆ ಅಸಹ್ಯಕರವಾಗಿತ್ತು.
- Numbers 1:3 ಅರಣ್ಯಕಾಂಡ 1:3ಇಸ್ರಾಯೇಲಿನಲ್ಲಿ ಯುದ್ಧಕ್ಕೆ ಹೊರಡುವವರೆಲ್ಲರನ್ನು ಅಂದರೆ ಇಪ್ಪತ್ತು ವರುಷದವರನ್ನೂ ಅದಕ್ಕೆ ಹೆಚ್ಚಾದ ಪ್ರಾಯವುಳ್ಳವ ರನ್ನೂ ಅವರ ಸೈನ್ಯಗಳ ಪ್ರಕಾರ ನೀನೂ ಆರೋನನೂ ಲೆಕ್ಕಮಾಡಿರಿ.
- Numbers 1:50 ಅರಣ್ಯಕಾಂಡ 1:50ಆದರೆ ನೀನು ಲೇವಿಯರನ್ನು ಸಾಕ್ಷಿಯ ಗುಡಾರ ಕ್ಕೋಸ್ಕರವೂ ಅದರ ಎಲ್ಲಾ ವಸ್ತುಗಳಿಗೋಸ್ಕರವೂ ಅದಕ್ಕೆ ಬೇಕಾದ ಎಲ್ಲವುಗಳಿಗೋಸ್ಕರವೂ ನೇಮಿಸು. ಅವರು ಗುಡಾರವನ್ನೂ ಅದರ ಎಲ್ಲಾ ವಸ್ತುಗಳನ್ನೂ ಹೊತ್ತುಕೊಳ್ಳುವರು, ಇದರ ಸೇವೆಮಾಡಿ ಗುಡಾರದ ಸುತ್ತಮುತ್ತಲೂ ಇಳಿದುಕೊಳ್ಳಬೇಕು.
- Numbers 8:1–26 ಅರಣ್ಯಕಾಂಡ 8:1–26ಕರ್ತನು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನಂದರೆ-- ಆರೋನನ ಸಂಗಡ ಮಾತನಾಡಿ ಅವನಿಗೆ ಹೇಳಬೇಕಾದದ್ದೇನಂದರೆ-- ನೀನು ದೀಪಗಳನ್ನು ಹಚ್ಚುವಾಗ ದೀಪಸ್ತಂಭಕ್ಕೆದುರಾಗಿ ಆ ಏಳು ದೀಪಗಳು ಪ್ರಕಾಶಿಸಬೇಕು. ಆರೋನನು ಹಾಗೆಯೇ ಮಾಡಿ ದೀಪಸ್ತಂಭಕ್ಕೆ ಎದುರಾಗಿ ಅದರ ದೀಪಗಳನ್ನು ಕರ್ತನು ಮೋಶೆಗೆ ಆಜ್ಞಾಪಿಸಿದ ಪ್ರಕಾರವೇ ಹಚ್ಚಿದನು. ದೀಪಸ್ತಂಭದ ಈ ಕೆಲಸವು ಅದರ ಸ್ತಂಭದ ವರೆಗೂ ಅದರ ಹೂವುಗಳ ವರೆಗೂ ಬಂಗಾರದ ನಕ್ಷೆಯ ಕೆಲಸವಾಗಿತ್ತು. ಕರ್ತನು ಮೋಶೆಗೆ ತೋರಿ ಸಿದ ಮಾದರಿಯ ಪ್ರಕಾರವೇ ಅವನು ಅದನ್ನು ಮಾಡಿಸಿದನು. ಕರ್ತನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನಂದರೆ-- ಲೇವಿಯರನ್ನು ಇಸ್ರಾಯೇಲ್ ಮಕ್ಕಳೊಳಗಿಂದ ತೆಗೆದುಕೊಂಡು ಅವರನ್ನು ಶುದ್ಧ ಮಾಡು. ಅವರನ್ನು ಶುದ್ಧಮಾಡುವದಕ್ಕೆ ಅವರಿಗೆ ಮಾಡಬೇಕಾದದ್ದೇನಂದರೆ--ಶುದ್ಧಿಮಾಡುವ ನೀರನ್ನು ಅವರ ಮೇಲೆ ಚಿಮುಕಿಸು. ಆಗ ಅವರು ತಮ್ಮ ಶರೀರವನ್ನೆಲ್ಲಾ ಕ್ಷೌರಮಾಡಿಸಿಕೊಂಡು ಅವರು ತಮ್ಮ ವಸ್ತ್ರಗಳನ್ನು ಒಗೆದುಕೊಳ್ಳಲಿ. ಹೀಗೆ ಅವರು ತಮ್ಮನ್ನು ತಾವೇ ಶುದ್ಧಮಾಡಿಕೊಳ್ಳುವಂತೆ ಮಾಡು. ಅವರು ಒಂದು ಎಳೇ ಹೋರಿಯನ್ನು ಅದರೊಂದಿಗೆ ಆಹಾರ ಸಮರ್ಪಣೆಯನ್ನು ಅಂದರೆ ಎಣ್ಣೇ ಬೆರೆಸಿದ ನಯ ವಾದ ಹಿಟ್ಟನ್ನು ತೆಗೆದುಕೊಳ್ಳಬೇಕು. ಪಾಪದ ಬಲಿ ಗಾಗಿ ಮತ್ತೊಂದು ಎಳೇ ಹೋರಿಯನ್ನೂ ನೀನು ತೆಗೆದುಕೋ. ಆಗ ನೀನು ಲೇವಿಯರನ್ನು ಸಭೆಯ ಗುಡಾರದ ಮುಂದೆ ಕರತಂದು ಇಸ್ರಾಯೇಲ್ಯರ ಸಮಸ್ತ ಸಭೆಯನ್ನು ಒಟ್ಟುಗೂಡಿಸಬೇಕು. ನೀನು ಲೇವಿ ಯರನ್ನು ಕರ್ತನ ಎದುರಿನಲ್ಲಿ ಕರತರಬೇಕು. ಆಗ ಇಸ್ರಾಯೇಲ್ ಮಕ್ಕಳು ತಮ್ಮ ಕೈಗಳನ್ನು ಲೇವಿಯರ ಮೇಲೆ ಇಡಬೇಕು. ಕರ್ತನ ಸೇವೆಯನ್ನು ಮಾಡುವವರಾಗುವಂತೆ ಆರೋನನು ಇಸ್ರಾಯೇಲ್ ಮಕ್ಕಳ ಸಮರ್ಪಣೆಗಾಗಿ ಲೇವಿಯರನ್ನು ಸಮರ್ಪಿಸಬೇಕು. ಲೇವಿಯರು ತಮ್ಮ ಕೈಗಳನ್ನು ಆ ಹೋರಿಗಳ ತಲೆಗಳ ಮೇಲೆ ಇಡಬೇಕು. ಆಗ ನೀನು ಲೇವಿಯರಿಗೋಸ್ಕರ ಪ್ರಾಯಶ್ಚಿತ್ತ ಮಾಡುವದಕ್ಕಾಗಿ ಕರ್ತನಿಗೆ ಒಂದನ್ನು ಪಾಪದ ಬಲಿಗಾಗಿಯೂ ಮತ್ತೊಂದನ್ನು ದಹನ ಬಲಿಗಾಗಿಯೂ ಸಮರ್ಪಿಸಬೇಕು. ತರುವಾಯ ನೀನು ಲೇವಿಯರನ್ನು ಆರೋನನ ಮುಂದೆಯೂ ಅವನ ಕುಮಾರರ ಮುಂದೆಯೂ ನಿಲ್ಲಿಸಿ ಅವರನ್ನು ಕರ್ತನಿಗೆ ಕಾಣಿಕೆಯಂತೆ ಸಮರ್ಪಿಸಬೇಕು. ಹೀಗೆ ನೀನು ಲೇವಿಯರನ್ನು ಇಸ್ರಾಯೇಲ್ ಮಕ್ಕಳೊ ಳಗಿಂದ ಪ್ರತ್ಯೇಕಿಸಬೇಕು; ಲೇವಿಯರು ನನ್ನವರಾಗಿರ ಬೇಕು. ಅದರ ತರುವಾಯ ಲೇವಿಯರು ಸೇವೆ ಮಾಡುವದಕ್ಕೆ ಸಭೆಯ ಗುಡಾರದೊಳಗೆ ಪ್ರವೇಶಿಸು ವರು, ನೀನು ಅವರನ್ನು ಶುದ್ಧಮಾಡಿ ಕಾಣಿಕೆಯಂತೆ ಸಮರ್ಪಿಸಬೇಕು. ಅವರು ಇಸ್ರಾಯೇಲ್ ಮಕ್ಕಳೊ ಳಗಿಂದ ನನಗೆ ಸಂಪೂರ್ಣವಾಗಿ ಕೊಡಲ್ಪಟ್ಟವರು. ಇಸ್ರಾಯೇಲ್ ಮಕ್ಕಳಲ್ಲಿರುವ ಎಲ್ಲಾ ಗರ್ಭಗಳನ್ನು ತೆರೆಯುವಂತದ್ದಕ್ಕೂ ಅಂದರೆ ಚೊಚ್ಚಲಾದವರೆಲ್ಲರಿಗೂ ಬದಲಾಗಿ ಅವರನ್ನು ನನಗೋಸ್ಕರ ತೆಗೆದುಕೊಂಡಿ ದ್ದೇನೆ. ಇಸ್ರಾಯೇಲ್ ಮಕ್ಕಳಲ್ಲಿ ಮನುಷ್ಯರಲ್ಲಾ ದರೂ ಪಶುಗಳಲ್ಲಾದರೂ ಚೊಚ್ಚಲಾದದ್ದೆಲ್ಲಾ ನನ್ನದು; ಐಗುಪ್ತ ದೇಶದಲ್ಲಿ ಎಲ್ಲಾ ಚೊಚ್ಚಲಾದವುಗಳನ್ನು ಹೊಡೆದ ದಿವಸದಲ್ಲಿ ನಾನು ಅವರನ್ನು ನನಗಾಗಿ ಪರಿಶುದ್ಧ ಮಾಡಿಕೊಂಡೆನು. ಇಸ್ರಾಯೇಲ್ ಮಕ್ಕಳಲ್ಲಿರುವ ಎಲ್ಲಾ ಚೊಚ್ಚಲಾದವುಗಳಿಗೋಸ್ಕರ ಲೇವಿಯರನ್ನು ನಾನು ತೆಗೆದುಕೊಂಡೆನು. ಅವರು ಸಭೆಯ ಗುಡಾರದಲ್ಲಿ ಇಸ್ರಾಯೇಲ್ ಮಕ್ಕಳ ಸೇವೆ ಯನ್ನು ಮಾಡುವದಕ್ಕೂ ಪರಿಶುದ್ಧ ಸ್ಥಳಕ್ಕೆ ಇಸ್ರಾಯೇಲ್ ಮಕ್ಕಳು ಸವಿಾಪಿಸುವಾಗ ಇಸ್ರಾಯೇಲ್ ಮಕ್ಕಳೊಳಗೆ ವ್ಯಾಧಿಯು ಇರದಂತೆ ಇಸ್ರಾಯೇಲ್ ಮಕ್ಕಳಿಗೋಸ್ಕರ ಪ್ರಾಯಶ್ಚಿತ್ತಮಾಡುವದಕ್ಕೂ ನಾನು ಲೇವಿಯರನ್ನು ಇಸ್ರಾಯೇಲ್ ಮಕ್ಕಳೊಳಗಿಂದ ಆರೋನನಿಗೂ ಅವನ ಕುಮಾರರಿಗೂ ದಾನವಾಗಿ ಕೊಟ್ಟಿದ್ದೇನೆ. ಮೋಶೆಗೆ ಲೇವಿಯರ ವಿಷಯದಲ್ಲಿ ಕರ್ತನು ಆಜ್ಞಾಪಿಸಿದ್ದೆಲ್ಲಾದರ ಪ್ರಕಾರ ಆಗ ಮೋಶೆಯೂ ಆರೋನನೂ ಇಸ್ರಾಯೇಲ್ ಮಕ್ಕಳ ಸಮಸ್ತ ಸಭೆಯೂ ಲೇವಿಯರಿಗೆ ಮಾಡಿದರು, ಇಸ್ರಾಯೇಲ್ ಮಕ್ಕಳು ಅವರಿಗೆ ಹಾಗೆಯೇ ಮಾಡಿದರು. ಲೇವಿಯರು ತಮ್ಮನ್ನು ಪವಿತ್ರಮಾಡಿಕೊಂಡು ತಮ್ಮ ವಸ್ತ್ರಗಳನ್ನು ತೊಳೆದುಕೊಂಡರು. ಆರೋನನು ಅವರನ್ನು ಕರ್ತನ ಮುಂದೆ ಕಾಣಿಕೆಯಂತೆ ಅರ್ಪಿಸಿದನು; ಅವರು ಶುದ್ಧರಾಗುವ ಹಾಗೆ ಆರೋನನು ಅವರಿಗೋಸ್ಕರ ಪ್ರಾಯಶ್ಚಿತ್ತ ಮಾಡಿದನು. ತರುವಾಯ ಲೇವಿಯರು ಸಭೆಯ ಗುಡಾರದಲ್ಲಿ ಆರೋನನ ಮುಂದೆಯೂ ಅವನ ಕುಮಾರರ ಮುಂದೆಯೂ ಅವರ ಸೇವೆ ಮಾಡು ವದಕ್ಕೆ ಒಳಗೆ ಪ್ರವೇಶಿಸಿದರು. ಕರ್ತನು ಮೋಶೆಗೆ ಲೇವಿಯರ ವಿಷಯವಾಗಿ ಹೇಗೆ ಆಜ್ಞಾಪಿಸಿದನೋ ಹಾಗೆಯೇ ಅವರಿಗೆ ಮಾಡಿದನು. ಕರ್ತನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನಂದರೆ-- ಲೇವಿಯರಿಗೆ ಸಂಬಂಧ ಪಟ್ಟದ್ದು ಇದಾಗಿದೆ; ಇಪ್ಪತ್ತೈದು ವರುಷವೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳವರೂ ಸಭೆಯ ಗುಡಾರದ ಸೇವೆಗಾಗಿ ಒಳಗೆ ಹೋಗುವರು. ಆದರೆ ಐವತ್ತು ವರುಷದವ ರಾಗಿ ಸೇವೆಯನ್ನು ಬಿಟ್ಟುಬಿಟ್ಟವರು ಇನ್ನು ಮೇಲೆ ಸೇವೆಮಾಡಬಾರದು.ಆದರೆ ಅವರು ಸಭೆಯ ಗುಡಾರದಲ್ಲಿ ಅಪ್ಪಣೆಯನ್ನು ಕೈಕೊಂಡು ತಮ್ಮ ಸಹೋದರರೊಂದಿಗೆ ಕೆಲಸ ಮಾಡಲಿ; ಸೇವೆಯನ್ನು ಮಾತ್ರ ಮಾಡಬಾರದು. ಈ ಪ್ರಕಾರ ನೀನು ಲೇವಿಯ ರಿಗೆ ಕಾಪಾಡಬೇಕಾದವುಗಳ ವಿಷಯದಲ್ಲಿ ಹೀಗೆ ಅವರಿಗೆ ನೇಮಿಸಬೇಕು. ಆದರೆ ಅವರು ಸಭೆಯ ಗುಡಾರದಲ್ಲಿ ಅಪ್ಪಣೆಯನ್ನು ಕೈಕೊಂಡು ತಮ್ಮ ಸಹೋದರರೊಂದಿಗೆ ಕೆಲಸ ಮಾಡಲಿ; ಸೇವೆಯನ್ನು ಮಾತ್ರ ಮಾಡಬಾರದು. ಈ ಪ್ರಕಾರ ನೀನು ಲೇವಿಯ ರಿಗೆ ಕಾಪಾಡಬೇಕಾದವುಗಳ ವಿಷಯದಲ್ಲಿ ಹೀಗೆ ಅವರಿಗೆ ನೇಮಿಸಬೇಕು.