Numbers · chapter 16 · verse 13
Numbers 16:13 in Kannada
ನೀನು ಅರಣ್ಯ ದಲ್ಲಿ ನಮ್ಮನ್ನು ಸಾಯಿಸುವದಕ್ಕೆ ಹಾಲೂ ಜೇನೂ ಹರಿಯುವ ದೇಶದೊಳಗಿಂದ ನಮ್ಮನ್ನು ಕರೆದುಕೊಂಡು ಬಂದದ್ದು ನಿನಗೆ ಅಲ್ಪವಾಯಿತೋ? ಮತ್ತು ನೀನು ಅರಸನಾಗಿ ನಮ್ಮನ್ನು ಆಳಬೇಕೋ?
Neenu aranya dalli nammannu saayisuvadakke haaloo jenoo hariyuva deshadolaginda nammannu karedukondu bandaddu ninage alpavaayito? Mattu neenu arasanaagi nammannu aalabeko?
Numbers 16:13 in English
- King James Version (KJV)
- [Is it] a small thing that thou hast brought us up out of a land that floweth with milk and honey, to kill us in the wilderness, except thou make thyself altogether a prince over us?
- World English Bible (WEB)
- Is it a small thing that you have brought us up out of a land flowing with milk and honey, to kill us in the wilderness, but you must also make yourself a prince over us?
- American Standard Version (ASV)
- is it a small thing that thou hast brought us up out of a land flowing with milk and honey, to kill us in the wilderness, but thou must needs make thyself also a prince over us?
- Bible in Basic English (BBE)
- Is it not enough that you have taken us from a land flowing with milk and honey, to put us to death in the waste land, but now you are desiring to make yourself a chief over us?
- Darby Translation (DBY)
- Is it a small thing that thou hast brought us up out of a land flowing with milk and honey, to kill us in the wilderness, that thou must make thyself altogether a ruler over us?
- Webster's Bible (WBS)
- [Is it] a small thing that thou hast brought us out of a land that floweth with milk and honey, to kill us in the wilderness, except thou make thyself altogether a prince over us?
- Young's Literal Translation (YLT)
- is it little that thou hast brought us up out of a land flowing with milk and honey to put us to death in a wilderness that thou also certainly makest thyself prince over us?
Read in context
- 11ಈ ಕಾರಣದಿಂದ ನೀನೂ ನಿನ್ನ ಸಮಸ್ತ ಗುಂಪೂ ಕರ್ತನಿಗೆ ವಿರೋಧವಾಗಿ ಒಟ್ಟಾಗಿ ಕೂಡಿಕೊಂಡಿರಿ; ನೀವು ಅವನಿಗೆ ವಿರೋಧವಾಗಿ ಗುಣುಗುಟ್ಟುವ ಹಾಗೆ ಆರೋನನು ಯಾರು ಎಂದು ಹೇಳಿದನು.
- 12ಆಗ ಮೋಶೆ ಎಲೀಯಾಬನ ಕುಮಾರರಾದ ದಾತಾನನನ್ನೂ ಅಬೀರಾಮನನ್ನೂ ಕರೇಕಳುಹಿಸಿದನು. ಆದರೆ ಅವರು--ನಾವು ಬರುವದಿಲ್ಲ,
- 13ನೀನು ಅರಣ್ಯ ದಲ್ಲಿ ನಮ್ಮನ್ನು ಸಾಯಿಸುವದಕ್ಕೆ ಹಾಲೂ ಜೇನೂ ಹರಿಯುವ ದೇಶದೊಳಗಿಂದ ನಮ್ಮನ್ನು ಕರೆದುಕೊಂಡು ಬಂದದ್ದು ನಿನಗೆ ಅಲ್ಪವಾಯಿತೋ? ಮತ್ತು ನೀನು ಅರಸನಾಗಿ ನಮ್ಮನ್ನು ಆಳಬೇಕೋ?
- 14ಇದಲ್ಲದೆ ನೀನು ನಮ್ಮನ್ನು ಹಾಲೂ ಜೇನೂ ಹರಿಯುವ ದೇಶಕ್ಕೆ ತಕ್ಕೊಂಡು ಬರಲಿಲ್ಲ; ಇಲ್ಲವೆ ಹೊಲಗಳನ್ನೂ ದ್ರಾಕ್ಷೇ ತೋಟಗಳನ್ನೂ ನಮಗೆ ಸ್ವಾಸ್ತ್ಯವಾಗಿ ಕೊಡಲಿಲ್ಲ; ಈ ಮನುಷ್ಯರ ಕಣ್ಣುಗಳನ್ನು ಕಿತ್ತುಬಿಡುವಿಯೋ? ನಾವು ಬರುವದಿಲ್ಲ ಅಂದರು.
- 15ಆಗ ಮೋಶೆಯು ಬಹಳ ವಾಗಿ ಕೋಪಿಸಿಕೊಂಡು ಕರ್ತನಿಗೆ--ಅವರ ಬಲಿಯನ್ನು ನೀನು ಗೌರವಿಸಬೇಡ; ನಾನು ಅವರಿಂದ ಒಂದು ಕತ್ತೆಯನ್ನಾದರೂ ತೆಗೆದುಕೊಳ್ಳಲಿಲ್ಲ; ಇಲ್ಲವೆ ಅವರಲ್ಲಿ ಒಬ್ಬನಿಗಾದರೂ ಕೇಡು ಮಾಡಲಿಲ್ಲ ಎಂದು ಹೇಳಿದನು.
Cross references
- Acts 7:35 ಅಪೊಸ್ತಲರ ಕೃತ್ಯಗಳು 7:35ಅವರು ಯಾವ ಮೋಶೆಗೆ--ನಿನ್ನನ್ನು ಅಧಿಕಾರಿ ಯನ್ನಾಗಿಯೂ ನ್ಯಾಯಾಧಿಪತಿಯನ್ನಾಗಿಯೂ ಮಾಡಿ ದವರು ಯಾರೆಂದು ಹೇಳಿ ಬೇಡವೆಂದರೋ ಅವ ನನ್ನೇ ದೇವರು ಪೊದೆಯಲ್ಲಿ ಕಾಣಿಸಿಕೊಂಡ ದೂತನ ಕೈಯಿಂದ ಅಧಿಕಾರಿಯನ್ನಾಗಿರುವಂತೆಯೂ ಬಿಡುಗಡೆ ಮಾಡುವವನನ್ನಾಗಿರುವಂತೆಯೂ ಕಳುಹಿಸಿದನು.
- Numbers 11:5 ಅರಣ್ಯಕಾಂಡ 11:5ನಾವು ಐಗುಪ್ತದೇಶದಲ್ಲಿ ಉಚಿತ ವಾಗಿ ತಿಂದ ವಿಾನು ಸವತೆಕಾಯಿ ಕರ್ಬೂಜ ಕಾಡುಳ್ಳಿ ನೀರುಳ್ಳಿ ಬೆಳ್ಳುಳ್ಳಿ ಇವುಗಳನ್ನು ಜ್ಞಾಪಿಸಿಕೊಳ್ಳುತ್ತೇವೆ.
- Exodus 2:14 ವಿಮೋಚನಕಾಂಡ 2:14ಅದಕ್ಕ ವನು--ಯಾರು ನಿನ್ನನ್ನು ನಮ್ಮ ಮೇಲೆ ಪ್ರಭುವ ನ್ನಾಗಿಯೂ ನ್ಯಾಯಾಧಿಪತಿಯನ್ನಾಗಿಯೂ ನೇಮಿಸಿ ದ್ದಾರೆ? ಆ ಐಗುಪ್ತ್ಯನನ್ನು ಕೊಂದುಹಾಕಿದಂತೆ ನನ್ನನ್ನೂ ಕೊಂದುಹಾಕಬೇಕೆಂದಿದ್ದೀಯೋ ಅಂದನು. ಆಗ ಮೋಶೆಯು ಭಯಪಟ್ಟು--ನಿಶ್ಚಯವಾಗಿ ಈ ಕಾರ್ಯವು ತಿಳಿದುಬಂತು ಎಂದು ಅಂದುಕೊಂಡನು.
- Exodus 16:3 ವಿಮೋಚನಕಾಂಡ 16:3ಇಸ್ರಾಯೇಲ್ ಮಕ್ಕಳು ಅವರಿಗೆ--ನಾವು ಐಗುಪ್ತದೇಶದಲ್ಲಿ ಮಾಂಸದ ಪಾತ್ರೆ ಗಳ ಬಳಿಯಲ್ಲಿ ಕೂತುಕೊಂಡು ಸಾಕಾಗುವಷ್ಟು ರೊಟ್ಟಿ ಯನ್ನು ತಿನ್ನುತ್ತಿದ್ದಾಗ ಕರ್ತನ ಕೈಯಿಂದ ಸತ್ತುಹೋಗಿದ್ದರೆ ಒಳ್ಳೆದಾಗಿತ್ತು. ಈ ಸಭೆಯನ್ನೆಲ್ಲಾ ಸಾಯಿಸುವಂತೆ ನಮ್ಮನ್ನು ಈ ಅರಣ್ಯಕ್ಕೆ ಬರಮಾಡಿದ್ದೀರಿ ಅಂದರು.
- Numbers 14:2 ಅರಣ್ಯಕಾಂಡ 14:2ಇಸ್ರಾಯೇಲ್ ಮಕ್ಕಳೆಲ್ಲರೂ ಮೋಶೆಗೂ ಆರೋನ ರಿಗೂ ವಿರೋಧವಾಗಿ ಗುಣುಗುಟ್ಟಿದರು. ಸಭೆಯಲ್ಲಾ ಅವರಿಗೆ--ನಾವು ಐಗುಪ್ತ ದೇಶದಲ್ಲಿ ಸತ್ತಿದ್ದರೆ ಇಲ್ಲವೆ ಈ ಅರಣ್ಯದಲ್ಲಿ ಸತ್ತರೆ ನಮಗೆ ಒಳ್ಳೇದಾಗಿತ್ತು.
- Exodus 17:3 ವಿಮೋಚನಕಾಂಡ 17:3ಅಲ್ಲಿ ಜನರು ದಾಹಗೊಂಡು ಮೋಶೆಗೆ ವಿರುದ್ಧವಾಗಿ ಗುಣು ಗುಟ್ಟಿ--ನಮ್ಮನ್ನೂ ನಮ್ಮ ಮಕ್ಕಳನ್ನೂ ನಮ್ಮ ದನಗಳನ್ನೂ ದಾಹದಿಂದ ಕೊಲ್ಲುವದಕ್ಕಾಗಿ ಯಾಕೆ ಐಗುಪ್ತದೊಳ ಗಿಂದ ಇಲ್ಲಿಗೆ ಬರಮಾಡಿದಿ ಅಂದರು.
- Psalm 2:2–3 ಕೀರ್ತನೆಗಳು 2:2–3ಕರ್ತನಿಗೆ ವಿರೋಧ ವಾಗಿಯೂ ಆತನ ಅಭಿಷಕ್ತನಿಗೆ ವಿರೋಧವಾಗಿಯೂ ಭೂರಾಜರು ನಿಂತುಕೊಳ್ಳುತ್ತಾರೆ; ಪ್ರಭುಗಳು ಒಟ್ಟಾಗಿ ಆಲೋಚಿಸುತ್ತಾರೆ. ಅವರು--ಅವರ ಬಂಧನಗಳನ್ನು ತುಂಡುತುಂಡಾಗಿ ಮುರಿದು ಅವರ ಕಟ್ಟುಗಳನ್ನು ನಮ್ಮಿಂದ ಬಿಸಾಡೋಣ ಅನ್ನುತ್ತಾರೆ.
- Exodus 2:23 ವಿಮೋಚನಕಾಂಡ 2:23ಹೀಗಿರಲಾಗಿ ಬಹಳ ದಿನಗಳಾದ ಮೇಲೆ ಐಗುಪ್ತದ ಅರಸನು ಸತ್ತನು. ಇಸ್ರಾಯೇಲ್ ಮಕ್ಕಳು ದಾಸತ್ವದ ಕಾರಣದಿಂದ ನಿಟ್ಟುಸುರುಬಿಟ್ಟು ಕೂಗು ತ್ತಿದ್ದರು. ದಾಸತ್ವದ ನಿಮಿತ್ತವಾಗಿ ಅವರ ಕೂಗು ದೇವರ ಬಳಿಗೆ ಬಂತು.
- Exodus 1:11 ವಿಮೋಚನಕಾಂಡ 1:11ಆಗ ಅವರನ್ನು ತಮ್ಮ ಬಿಟ್ಟೀಕೆಲಸಗಳಿಂದ ಶ್ರಮೆಪಡಿಸುವ ಹಾಗೆ ಬಿಟ್ಟೀಕೆಲಸ ಮಾಡಿಸುವ ಅಧಿಕಾರಿಗಳನ್ನು ಅವರ ಮೇಲೆ ನೇಮಿಸಿದರು. ಅವರು ಫರೋಹನಿಗೆ ಪಿತೋಮ್ ರಾಮ್ಸೇಸ್ ಎಂಬ ಉಗ್ರಾಣ ಪಟ್ಟಣಗಳನ್ನು ಕಟ್ಟಿಸಿದರು.
- Numbers 20:3–4 ಅರಣ್ಯಕಾಂಡ 20:3–4ಜನರು ಮೋಶೆಯ ಸಂಗಡ ವ್ಯಾಜ್ಯವಾಡಿ ಹೇಳಿದ್ದೇನಂದರೆ--ನಮ್ಮ ಸಹೋದರರು ಕರ್ತನ ಮುಂದೆ ಸತ್ತುಹೋದಾಗಲೇ ನಾವು ಸಹ ಸತ್ತು ಹೋಗಿದ್ದರೆ ಚೆನ್ನಾಗಿತ್ತು. ನಾವೂ ನಮ್ಮ ಪಶುಗಳೂ ಸಾಯುವ ಹಾಗೆ ನೀವು ಯಾಕೆ ಕರ್ತನ ಸಭೆಯನ್ನು ಈ ಅರಣ್ಯಕ್ಕೆ ತಂದಿರಿ?
- Exodus 1:22 ವಿಮೋಚನಕಾಂಡ 1:22ಆದರೆ ಫರೋಹನು ತನ್ನ ಜನರಿಗೆಲ್ಲಾ--(ಇಬ್ರಿಯರಿಗೆ) ಹುಟ್ಟುವ ಗಂಡು ಮಕ್ಕಳನ್ನೆಲ್ಲಾ ನದಿಯಲ್ಲಿ ಹಾಕಬೇಕು. ಹೆಣ್ಣು ಮಕ್ಕಳ ನ್ನೆಲ್ಲಾ ಜೀವದಿಂದ ಉಳಿಸಬೇಕು ಎಂದು ಅಪ್ಪಣೆ ಕೊಟ್ಟನು.
- Luke 19:14 ಲೂಕನು 19:14ಆದರೆ ಅವರ ಪಟ್ಟಣದವರು ಅವನನ್ನು ದ್ವೇಷಿಸಿ--ಇವನು ನಮ್ಮ ಮೇಲೆ ಆಡಳಿತ ಮಾಡುವದು ನಮಗೆ ಮನಸ್ಸಿಲ್ಲ ಎಂದು ಹೇಳಿ ಅವನ ಹಿಂದೆ ಸಂದೇಶವನ್ನು ಕಳುಹಿಸಿದರು.