Numbers · chapter 3 · verse 17
Numbers 3:17 in Kannada
ಲೇವಿಯ ಕುಮಾರರ ಹೆಸರುಗಳು ಇವೇ: ಗೇರ್ಷೋನನೂ ಕೆಹಾತನೂ ಮೆರಾರೀಯೂ.
Leviya kumaarara hesarugalu ive: gershonanoo kehaatanoo meraareeyoo.
Numbers 3:17 in English
- King James Version (KJV)
- And these were the sons of Levi by their names; Gershon, and Kohath, and Merari.
- World English Bible (WEB)
- These were the sons of Levi by their names: Gershon, Kohath, and Merari.
- American Standard Version (ASV)
- And these were the sons of Levi by their names: Gershon, and Kohath, and Merari.
- Bible in Basic English (BBE)
- These were the sons of Levi by name: Gershon and Kohath and Merari.
- Darby Translation (DBY)
- And these are the sons of Levi by their names: Gershon, and Kohath, and Merari.
- Webster's Bible (WBS)
- And these were the sons of Levi, by their names; Gershon, and Kohath, and Merari.
- Young's Literal Translation (YLT)
- And these are sons of Levi by their names: Gershon, and Kohath, and Merari.
Read in context
- 15ಲೇವಿಯ ಕುಮಾರರನ್ನು ಅವರ ತಂದೆಗಳ ಮನೆಯ ಪ್ರಕಾರ ವಾಗಿಯೂ ಅವರ ಕುಟುಂಬಗಳ ಪ್ರಕಾರವಾಗಿಯೂ ಎಣಿಸು. ಒಂದು ತಿಂಗಳು ಮೊದಲುಗೊಂಡು ಮೇಲ್ಪಟ್ಟ ಪ್ರಾಯವುಳ್ಳ ಗಂಡಸರೆಲ್ಲರನ್ನೂ ನೀನು ಎಣಿಸು ಅಂದನು.
- 16ಆಗ ಮೋಶೆಯು ತನಗೆ ಕರ್ತನು ಆಜ್ಞಾಪಿಸಿದ ಮಾತಿನ ಪ್ರಕಾರವಾಗಿ ಎಣಿಸಿದನು.
- 17ಲೇವಿಯ ಕುಮಾರರ ಹೆಸರುಗಳು ಇವೇ: ಗೇರ್ಷೋನನೂ ಕೆಹಾತನೂ ಮೆರಾರೀಯೂ.
- 18ಗೇರ್ಷೋನನ ಕುಮಾರರ ಹೆಸರುಗಳು ತಮ್ಮ ಕುಟುಂಬಗಳ ಪ್ರಕಾರ ಇವೇ; ಲಿಬ್ನೀಯೂ ಶಿಮ್ಮಿಯೂ.
- 19ಕೆಹಾತನ ಕುಮಾರರು ತಮ್ಮ ಕುಟುಂಬಗಳ ಪ್ರಕಾರ ಅಮ್ರಾಮನೂ ಇಚ್ಹಾರನೂ ಹೆಬ್ರೋನನೂ ಉಜ್ಜೀಯೇಲನೂ.
Cross references
- Genesis 46:11 ಆದಿಕಾಂಡ 46:11ಲೇವಿಯ ಮಕ್ಕಳು: ಗೆರ್ಷೋನ್ ಕೆಹಾತ್ ಮೆರಾರೀ ಎಂಬವರು.
- Exodus 6:16–19 ವಿಮೋಚನಕಾಂಡ 6:16–19ತಮ್ಮ ತಮ್ಮ ವಂಶಾವಳಿಗಳ ಪ್ರಕಾರವಾಗಿರುವ ಲೇವಿಯ ಕುಮಾರರ ಹೆಸರುಗಳು ಇವೇ: ಗೇರ್ಷೋನ್ ಕೆಹಾತ್ ಮೆರಾರೀ. ಲೇವಿಯು ನೂರ ಮೂವತ್ತೇಳು ವರುಷ ಬದುಕಿದನು. ಗೇರ್ಷೋನನ ಕುಮಾರರು ಅವರ ಗೋತ್ರಗಳಿಗನುಸಾರವಾಗಿ: ಲಿಬ್ನೀ ಶಿವ್ಮೆಾಯರು. ಕೆಹಾತನ ಕುಮಾರರು: ಅಮ್ರಾಮ್ ಇಚ್ಹಾರ್ ಹೆಬ್ರೋನ್ ಉಜ್ಜೀಯೇಲ್. ಕೆಹಾತನು ಜೀವಿಸಿದ ವರುಷಗಳು ನೂರ ಮೂವತ್ತುಮೂರು. ಮೆರಾರೀಯ ಕುಮಾರರು: ಮಹ್ಲೀ ಮೂಷೀ. ವಂಶಾ ವಳಿಗಳ ಪ್ರಕಾರ ಇವರೇ ಲೇವಿಯ ಗೋತ್ರಗಳು.
- Numbers 24:1–25 ಅರಣ್ಯಕಾಂಡ 24:1–25ಆದರೆ ಇಸ್ರಾಯೇಲನ್ನು ಆಶೀರ್ವದಿಸು ವದಕ್ಕೆ ಕರ್ತನ ದೃಷ್ಟಿಗೆ ಒಳ್ಳೇದೆಂದು ಬಿಳಾಮನು ನೋಡಿದಾಗ ಅವನು ಮುಂಚಿನ ಹಾಗೆ ಶಕುನಗಳನ್ನು ಕಂಡುಕೊಳ್ಳುವದಕ್ಕೆ ಹೋಗದೆ ತನ್ನ ಮುಖವನ್ನು ಅರಣ್ಯದ ಕಡೆಗೆ ತಿರುಗಿಸಿಕೊಂಡನು. ಬಿಳಾಮನು ತನ್ನ ಕಣ್ಣುಗಳನ್ನೆತ್ತಿ ಇಸ್ರಾಯೇಲು ತನ್ನ ಕುಟುಂಬಗಳ ಪ್ರಕಾರ ತನ್ನ ಡೇರೆಗಳಲ್ಲಿ ವಾಸವಾಗಿ ರುವದನ್ನು ನೋಡಿದಾಗ ದೇವರ ಆತ್ಮನು ಅವನ ಮೇಲೆ ಬಂದನು. ಆಗ ಅವನು ಸಾಮ್ಯರೂಪ ವಾಗಿ--ಬೆಯೋರನ ಮಗನಾದ ಬಿಳಾಮನು ಹೇಳಿದ್ದು, ತೆರೆದ ಕಣ್ಣುಳ್ಳ ಪುರುಷನು ಹೇಳಿದ್ದು. ದೇವರ ಮಾತು ಗಳನ್ನು ಕೇಳಿದವನೂ ಸರ್ವಶಕ್ತನ ದರ್ಶನವನ್ನು ನೋಡಿದವನೂ ಪರವಶನಾಗಿ ತೆರೆದ ಕಣ್ಣುಳ್ಳವನೂ ಹೇಳಿದ್ದು-- ಓ ಯಾಕೋಬೇ, ನಿನ್ನ ಡೇರೆಗಳು, ಇಸ್ರಾಯೇಲೇ, ನಿನ್ನ ಗುಡಾರಗಳು, ಎಷ್ಟು ಉತ್ತಮ ವಾಗಿವೆ! ಅವು ಕಣಿವೆಗಳ ಹಾಗೆ ವಿಸ್ತರಿಸಿ ಅವೆ; ನದಿ ತೀರದಲ್ಲಿರುವ ತೋಟಗಳ ಹಾಗೆಯೂ ಕರ್ತನು ನೆಟ್ಟ ಅಗರು ಮರಗಳ ಹಾಗೆಯೂ ನೀರಿನ ಬಳಿ ಯಲ್ಲಿರುವ ದೇವದಾರುಗಳ ಹಾಗೆಯೂ ಇರುತ್ತವೆ. ತನ್ನ ತೊಟ್ಟಿಗಳಿಂದ ನೀರು ಹರಿಯಮಾಡುವನು; ಅವನ ಸಂತತಿಯೂ ಅನೇಕ ಜಲಗಳಲ್ಲಿ ಇರುವದು; ಅವನ ಅರಸನು ಅಗಾಗನಿಗಿಂತ ಉನ್ನತವಾಗಿರುವನು; ಅವನ ರಾಜ್ಯವು ಘನತೆಗೇರಿರುವದು. ದೇವರು ಅವನನ್ನು ಐಗುಪ್ತದಿಂದ ಹೊರಗೆ ತಂದನು. ಒಂದು ಕೊಂಬುಳ್ಳ ಪ್ರಾಣಿಯಂತೆ ಬಲ ಅವನಿಗೆ ಉಂಟು. ಅವನು ತನ್ನ ವೈರಿಗಳಾಗಿರುವ ಜನಾಂಗಗಳನ್ನು ತಿಂದು ಅವರ ಎಲುಬುಗಳನ್ನು ಚೂರು ಮಾಡಿ ತನ್ನ ಬಾಣ ಗಳಿಂದ ಗಾಯಮಾಡುವನು. ಅವನು ಸಿಂಹದ ಹಾಗೆಯೂ ದೊಡ್ಡ ಸಿಂಹದ ಹಾಗೆಯೂ ಬಾಗಿ ಮಲಗುತ್ತಾನೆ; ಅವನನ್ನು ಎಬ್ಬಿಸುವವರು ಯಾರು? ನಿನ್ನನ್ನು ಆಶೀರ್ವದಿಸುವವರಿಗೆ ಆಶೀರ್ವಾದ, ನಿನ್ನನ್ನು ಶಪಿಸುವವರಿಗೆ ಶಾಪ ಉಂಟು. ಆಗ ಬಾಲಾಕನು ಬಿಳಾಮನ ಮೇಲೆ ಕೋಪಗೊಂಡು ಚಪ್ಪಾಳೆ ಹೊಡೆದು ಅವನಿಗೆ--ನನ್ನ ಶತ್ರುಗಳನ್ನು ಶಪಿಸುವದಕ್ಕೆ ನಿನ್ನನ್ನು ಕರೆದೆನು; ಆದರೆ ಇಗೋ, ನೀನು ಈ ಮೂರುಸಾರಿ ಆಶೀರ್ವದಿಸೇ ಆಶೀರ್ವದಿಸಿದಿ. ಈಗ ನಿನ್ನ ಸ್ಥಳಕ್ಕೆ ಓಡಿಹೋಗು; ನಾನು ನಿನ್ನನ್ನು ಬಹು ಘನಪಡಿಸ ಬೇಕೆಂದು ಅಂದುಕೊಂಡೆನು; ಆದರೆ ಇಗೋ, ಕರ್ತನು ನಿನಗೆ ಘನಬಾರದಂತೆ ತಡೆದಿದ್ದಾನೆ ಅಂದನು. ಬಿಳಾಮನು ಬಾಲಾಕನಿಗೆ--ನೀನು ನನ್ನ ಬಳಿಗೆ ಕಳುಹಿಸಿದ ದೂತರಿಗೆ-- ಬಾಲಾಕನು ನನಗೆ ತನ್ನ ಮನೆ ತುಂಬ ಬೆಳ್ಳಿ ಬಂಗಾರಗಳನ್ನು ಕೊಟ್ಟರೂ ನನ್ನ ಹೃದಯದಿಂದ ಒಳ್ಳೇದನ್ನಾದರೂ ಕೆಟ್ಟದ್ದನ್ನಾದರೂ ಮಾಡುವದಕ್ಕೆ ಕರ್ತನ ಆಜ್ಞೆಯನ್ನು ವಿಾರಲಾರೆನು; ಕರ್ತನು ಏನು ಹೇಳುತ್ತಾನೋ ಅದನ್ನು ಹೇಳುವೆನೆಂದು ನಾನು ಹೇಳಲಿಲ್ಲವೋ? ಇಗೋ, ನನ್ನ ಜನರ ಬಳಿಗೆ ಹೋಗುತ್ತೇನೆ; ಬಾ, ಈ ಜನರು ನಿನ್ನ ಜನರಿಗೆ ಕಡೇ ದಿವಸಗಳಲ್ಲಿ ಏನು ಮಾಡುವರೋ ಅದನ್ನು ನಿನಗೆ ತಿಳಿಸುವೆನು ಅಂದನು. ಆಗ ಅವನು ಸಾಮ್ಯ ರೂಪವಾಗಿ--ಬೆಯೋರನ ಮಗನಾದ ಬಿಳಾಮನು ಹೇಳಿದ್ದು--ತೆರೆದ ಕಣ್ಣುಳ್ಳ ಮನುಷ್ಯನು ಹೇಳಿದ್ದು. ದೇವರ ಮಾತುಗಳನ್ನು ಕೇಳಿದವನೂ ಮಹೋನ್ನ ತನ ಜ್ಞಾನವನ್ನು ತಿಳಿದವನೂ ಸರ್ವಶಕ್ತನ ದರ್ಶನವನ್ನು ನೋಡಿದವನೂ ಪರವಶನಾಗಿದ್ದು ತೆರೆದ ಕಣ್ಣುಳ್ಳ ವನೂ ಹೇಳಿದ್ದು-- ನಾನು ಅವನನ್ನು ನೋಡು ವೆನು, ಈಗಲ್ಲ; ಅವನನ್ನು ದೃಷ್ಟಿಸುವೆನು, ಸವಿಾಪದಲ್ಲಿ ಅಲ್ಲ; ಯಾಕೋಬನಿಂದ ನಕ್ಷತ್ರ ಉದಯಿಸುವದು; ಇಸ್ರಾಯೇಲ್ನಿಂದ ರಾಜದಂಡ ಏಳುವದು; ಅದು ಮೋವಾಬಿನ ಮೂಲೆಗಳನ್ನು ಹೊಡೆದು ಶೇತನ ಸಕಲ ಮಕ್ಕಳನ್ನು ಸಂಹರಿಸುವದು. ಎದೋಮು ಸ್ವಾಸ್ತ್ಯವಾಗುವದು; ಸೇಯಾರು ತನ್ನ ಶತ್ರುಗಳಿಗೆ ಸ್ವಾಸ್ತ್ಯವಾಗುವದು; ಮತ್ತು ಇಸ್ರಾಯೇಲು ಪರಾಕ್ರಮ ಕಾರ್ಯ ಮಾಡುವದು, ಯಾಕೋಬನೊಳಗಿಂದ ಒಬ್ಬನು ಬಂದು ಆಳುವನು; ಅವನು ಪಟ್ಟಣದಲ್ಲಿ ಉಳಿದದ್ದನ್ನು ನಾಶಮಾಡುವನು ಎಂದು ಹೇಳಿದನು. ತರುವಾಯ ಅವನು ಅಮಾಲೇಕ್ಯರನ್ನು ನೋಡಿ ಸಾಮ್ಯರೂಪವಾಗಿ--ಜನಾಂಗಗಳಲ್ಲಿ ಮೊದಲನೆ ಯವನೇ ಅಮಾಲೇಕ್ಯನು; ಆದರೆ ಅವನ ಅಂತ್ಯವು ಸದಾಕಾಲಕ್ಕೆ ನಾಶವಾಗುವದು ಅಂದನು. ಬಳಿಕ ಕೇನ್ಯರನ್ನು ಅವನು ನೋಡಿ ಸಾಮ್ಯರೂಪವಾಗಿ--ನಿನ್ನ ನಿವಾಸವು ಬಲವಾಗಿದೆ. ನಿನ್ನ ಗೂಡನ್ನು ಬಂಡೆಯಲ್ಲಿ ಹಾಕಿದಿ. ಆದಾಗ್ಯೂ ಅಶ್ಶೂರ್ಯರನು ನಿನ್ನನ್ನು ಸೆರೆಯಾಗಿ ಒಯ್ಯುವ ವರೆಗೆ ಕೇನ್ಯನು ಹಾಳಾಗುವನು ಅಂದನು. ಇದಲ್ಲದೆ ಅವನು ಸಾಮ್ಯರೂಪವಾಗಿಅಯ್ಯೋ! ದೇವರು ಇದನ್ನು ಮಾಡುವಾಗ ಯಾರು ಬದುಕುವರು? ಕಿತ್ತೀಮಿನ ತೀರದಿಂದ ಹಡಗುಗಳು ಬಂದು ಅಶ್ಶೂರ್ಯರನ್ನೂ ಏಬೆರರನ್ನೂ ಶ್ರಮೆ ಪಡಿಸುವವು. ಅವನು ಸಹ ಸದಾಕಾಲಕ್ಕೂ ನಾಶವಾಗು ವನು ಎಂದು ಹೇಳಿದನು.ಆಗ ಬಿಳಾಮನು ಎದ್ದು ತನ್ನ ಸ್ಥಳಕ್ಕೆ ತಿರಿಗಿ ಹೋದನು. ಬಾಲಾಕನು ಸಹ ತನ್ನ ಮಾರ್ಗವಾಗಿ ಹೋದನು. ಆಗ ಬಿಳಾಮನು ಎದ್ದು ತನ್ನ ಸ್ಥಳಕ್ಕೆ ತಿರಿಗಿ ಹೋದನು. ಬಾಲಾಕನು ಸಹ ತನ್ನ ಮಾರ್ಗವಾಗಿ ಹೋದನು.
- 1 Chronicles 6:16–19 1 ಪೂರ್ವಕಾಲವೃತ್ತಾಂತ 6:16–19ಲೇವಿಯ ಕುಮಾರರು--ಗೇರ್ಷೋನನು ಕೆಹಾ ತನು ಮೆರಾರೀಯು. ಗೇರ್ಷೋನನ ಕುಮಾರರ ಹೆಸರುಗಳು--ಲಿಬ್ನೀಯು ಶಿವ್ಮೆಾಯು. ಕೆಹಾತನ ಕುಮಾರರು--ಅಮ್ರಾಮನು ಇಚ್ಹಾರನು ಹೆಬ್ರೋ ನನು ಉಜ್ಜೀಯೇಲನು. ಮೆರಾರೀಯ ಕುಮಾರರುಮಹ್ಲೀಯು ಮೂಷೀಯು. ಲೇವಿಯರ ಸಂತತಿಗಳು ತಮ್ಮ ಪಿತೃಗಳ ಪ್ರಕಾರ ವಾಗಿ ಯಾವವೆಂದರೆ--
- 1 Chronicles 6:1–2 1 ಪೂರ್ವಕಾಲವೃತ್ತಾಂತ 6:1–2ಲೇವಿಯ ಕುಮಾರರು--ಗೇರ್ಷೋನನು, ಕೆಹಾತನು, ಮೆರಾರೀಯು. ಕೆಹಾತನ ಕುಮಾರರು ಅಮ್ರಾಮನು ಇಚ್ಹಾರ್ ಹೆಬ್ರೋನನು ಉಜ್ಜೀಯೇಲನು.
- Numbers 26:57–58 ಅರಣ್ಯಕಾಂಡ 26:57–58ಲೇವಿಯರಲ್ಲಿ ಕುಟುಂಬಗಳ ಪ್ರಕಾರ ಎಣಿಸಲ್ಪ ಟ್ಟವರು ಇವರೇ. ಗೆರ್ಷೋನನಿಂದ ಗೆರ್ಷೋನ್ಯರ ಕುಟುಂಬ; ಕೆಹಾತನಿಂದ ಕೆಹಾತ್ಯರ ಕುಟುಂಬ; ಮೆರಾರೀಯಿಂದ ಮೆರಾರೀಯರ ಕುಟುಂಬ. ಲೇವಿಯರ ಕುಟುಂಬಗಳು ಇವೇ: ಲಿಬ್ನೀಯರ ಕುಟುಂಬ; ಹೆಬ್ರೋನ್ಯರ ಕುಟುಂಬ; ಮಹ್ಲೀಯರ ಕುಟುಂಬ; ಮೂಷೀಯರ ಕುಟುಂಬ; ಕೋರಹಿಯರ ಕುಟುಂಬ;
- Joshua 21:1–45 ಯೆಹೋಶುವ 21:1–45ಲೇವಿಯರ ಪಿತೃಗಳ ಹಿರಿಯರು ಕಾನಾನ್ ದೇಶದ ಶೀಲೋವಿನಲ್ಲಿರುವ ಯಾಜಕ ನಾದ ಎಲಿಯಾಜರನ ಬಳಿಗೂ ನೂನನ ಮಗನಾದ ಯೆಹೋಶುವನ ಬಳಿಗೂ ಇಸ್ರಾಯೇಲ್ ಮಕ್ಕಳ ಗೋತ್ರಗಳ ಪಿತೃಗಳಲ್ಲಿರುವ ಹಿರಿಯರ ಬಳಿಗೂ ಬಂದು ಅವರ ಸಂಗಡ ಮಾತನಾಡಿ-- ನಾವು ವಾಸವಾಗಿರುವ ಪಟ್ಟಣಗಳನ್ನು ನಮ್ಮ ಪಶುಗಳಿಗೋಸ್ಕರ ಅವುಗಳ ಉಪನಗರಗಳೊಂದಿಗೆ ನಮಗೆ ಕೊಡಬೇಕೆಂದು ಕರ್ತನು ಮೋಶೆಯ ಮುಖಾಂತರವಾಗಿ ಆಜ್ಞಾಪಿಸಿ ದ್ದಾನೆ ಅಂದರು. ಹಾಗೆಯೇ ಇಸ್ರಾಯೇಲ್ ಮಕ್ಕಳು ತಮ್ಮ ಬಾಧ್ಯತೆಯಲ್ಲಿ ಲೇವಿಯರಿಗೆ ಕರ್ತನ ಅಜ್ಞೆಯ ಪ್ರಕಾರ ಪಟ್ಟಣಗಳನ್ನೂ ಅವುಗಳ ಉಪನಗರಗಳನ್ನೂ ಕೊಟ್ಟರು. ಅವು ಯಾವವೆಂದರೆ-- ಕೆಹಾತ್ಯರ ಗೋತ್ರಗಳಿಗೆ ಚೀಟು ಹಾಕಿದಾಗ ಲೇವಿಯರಲ್ಲಿ ಯಾಜಕನಾದ ಆರೋನನ ಮಕ್ಕಳಿಗೆ ಯೂದನ ಗೋತ್ರದಲ್ಲಿಯೂ ಸಿಮೆಯೋನನ ಗೋತ್ರ ದಲ್ಲಿಯೂ ಬೆನ್ಯಾವಿಾನನ ಗೋತ್ರದಲ್ಲಿಯೂ ಹದಿ ಮೂರು ಪಟ್ಟಣಗಳು ದೊರಕಿದವು. ಕೆಹಾತನ ಉಳಿದ ಮಕ್ಕಳಿಗೆ ಎಫ್ರಾಯಾಮನ ಗೊತ್ರದಲ್ಲಿಯೂ ದಾನನ ಗೋತ್ರದಲ್ಲಿಯೂ ಮನಸ್ಸೆಯ ಅರ್ಧಗೋತ್ರದ ಲ್ಲಿಯೂ ಹತ್ತು ಪಟ್ಟಣಗಳೂ ದೊರಕಿದವು. ಗೆರ್ಷೋನ್ಯನ ಮಕ್ಕಳಿಗೆ ಚೀಟಿ ಹಾಕಿದಾಗ ಇಸ್ಸಾಕಾರನ ಗೋತ್ರಗಳ ಕುಟುಂಬಗಳಲ್ಲಿಯೂ ಆಶೇರನ ಗೋತ್ರದಲ್ಲಿಯೂ ನಫ್ತಾಲಿಯ ಗೋತ್ರ ದಲ್ಲಿಯೂ ಬಾಷಾನಿನಲ್ಲಿರುವ ಮನಸ್ಸೆಯ ಅರ್ಧ ಗೋತ್ರದಲ್ಲಿಯೂ ಹದಿಮೂರು ಪಟ್ಟಣಗಳು ದೊರ ಕಿದವು. ಇದಲ್ಲದೆ ಮೆರಾರಿಯ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ರೂಬೇನನ ಗೋತ್ರದಲ್ಲಿಯೂ ಗಾದನ ಗೋತ್ರದಲ್ಲಿಯೂ ಜೆಬುಲೂನನ ಗೋತ್ರ ದಲ್ಲಿಯೂ ಹನ್ನೆರಡು ಪಟ್ಟಣಗಳು ದೊರಕಿದವು. ಈ ಪಟ್ಟಣಗಳನ್ನು ಅವುಗಳ ಉಪನಗರಗಳನ್ನು ಇಸ್ರಾಯೇಲ್ ಮಕ್ಕಳು ಕರ್ತನು ಮೋಶೆಯ ಮುಖಾಂತರ ಆಜ್ಞಾಪಿಸಿದ ಪ್ರಕಾರ ಲೇವಿಯರಿಗೆ ಚೀಟುಹಾಕಿ ಕೊಟ್ಟರು. ಆದರೆ ಲೇವಿಯ ಮಕ್ಕಳಲ್ಲಿ ಮೊದಲನೇ ಚೀಟು ಬಿದ್ದ ಕೆಹಾತ್ಯರ ಗೋತ್ರಗಳಲ್ಲಿ ಇರುವ ಆರೋನನ ಮಕ್ಕಳಿಗೆ ಯೂದನ ಮಕ್ಕಳ ಗೋತ್ರದಲ್ಲಿಯೂ ಸಿಮೆಯೋನನ ಮಕ್ಕಳ ಗೋತ್ರದಲ್ಲಿಯೂ ಕೊಡಲ್ಪಟ್ಟ ಪಟ್ಟಣಗಳ ಹೆಸರುಗಳು ಯಾವವಂದರೆ--ಲೇವಿ ಕುಲದವರೂ ಕೆಹಾತನ ಗೋತ್ರದವರೂ ಆದ ಆರೋನನ ಕುಟುಂಬದವರಿಗೆ ಚೀಟು ಮೊದಲು ಬಿದದ್ದರಿಂದ ಯೂದನ ಬೆಟ್ಟಗಳಲ್ಲಿರುವ ಅನಾಕನ ತಂದೆಯಾದ ಅರ್ಬನ ಹೆಸರಿನ ಪಟ್ಟಣ ಹೆಬ್ರೋ ನನ್ನೂ ಅದರ ಸುತ್ತಲಿರುವ ಉಪನಗರಗಳನ್ನೂ ಅವ ರಿಗೆ ಕೊಟ್ಟರು. ಆದರೆ ಆ ಪಟ್ಟಣದ ಹೊಲಗ ಳನ್ನೂ ಗ್ರಾಮಗಳನ್ನೂ ಯೆಫುನ್ನೆಯ ಮಗನಾದ ಕಾಲೇಬನಿಗೆ ಬಾಧ್ಯತೆಯಾಗಿ ಕೊಟ್ಟರು. ಹೀಗೆಯೇ ಯಾಜಕನಾದ ಆರೋನನ ಮಕ್ಕಳಿಗೆ ಕೊಲೆ ಮಾಡಿದವನಿಗೆ ಆಶ್ರಯ ಪಟ್ಟಣವಾದ ಹೆಬ್ರೋನನ್ನೂ ಅದರ ಉಪನಗರಗಳನ್ನೂ ಲಿಬ್ನಾವನ್ನೂ ಅದರ ಉಪ ನಗರಗಳನ್ನೂ ಯತ್ತೀರನ್ನೂ ಅದರ ಉಪನಗರ ಗಳನ್ನೂ ಎಷ್ಟೆಮೋಹವನ್ನೂ ಅದರ ಉಪನಗರಗ ಳನ್ನೂ ಹೋಲೋನನ್ನೂ ಅದರ ಉಪನಗರಗ ಳನ್ನೂ ದೆಬೀರನ್ನೂ ಅದರ ಉಪನಗರಗಳನ್ನೂ ಆಯಿನನ್ನೂ ಅದರ ಉಪನಗರಗಳನ್ನೂ ಯುಟ್ಟಾ ವನ್ನೂ ಅದರ ಉಪನಗರಗಳನ್ನೂ ಬೇತ್ಷೆಮೆಷನ್ನೂ ಅದರ ಉಪನಗರಗಳನ್ನೂ; ಹೀಗೆಯೇ ಆ ಎರಡು ಗೋತ್ರಗಳಿಂದ ಈ ಒಂಭತ್ತು ಪಟ್ಟಣಗಳನ್ನು ಕೊಟ್ಟರು. ಇದಲ್ಲದೆ ಬೆನ್ಯಾವಿಾನನ ಗೋತ್ರದಲ್ಲಿ ಗಿಬ್ಯೋ ನನ್ನೂ ಅದರ ಉಪನಗರಗಳನ್ನೂ ಗೆಬವನ್ನೂ ಅದರ ಉಪನಗರಗಳನ್ನೂ ಅನಾತೋತನ್ನೂ ಅದರ ಉಪನಗರಗಳನ್ನೂ ಅಲ್ಮೋನನ್ನೂ ಅದರ ಉಪನಗರ ಗಳನ್ನೂ; ಹೀಗೆ ನಾಲ್ಕು ಪಟ್ಟಣಗಳನ್ನು ಕೊಟ್ಟರು. ಯಾಜಕನಾದ ಆರೋನನ ಮಕ್ಕಳ ಪಟ್ಟಣಗಳೆಲ್ಲಾ ಹದಿಮೂರು ಪಟ್ಟಣಗಳೂ ಅವುಗಳ ಉಪನಗರಗಳೂ. ಇದಲ್ಲದೆ ಲೇವಿಯರಾದ ಕೆಹಾತನ ಮಕ್ಕಳ ಕುಟುಂಬದಲ್ಲಿ ಉಳಿದವರಿಗೆ ಎಫ್ರಾಯಾಮನ ಗೋತ್ರದಲ್ಲಿ ಚೀಟಿನಿಂದ ದೊರಕಿದ ಪಟ್ಟಣಗಳು, ಕೊಲೆಮಾಡಿದವನಿಗೆ ಆಶ್ರಯ ಪಟ್ಟಣವಾದ ಎಫ್ರಾಯಾಮನ ಬೆಟ್ಟಗಳಲ್ಲಿರುವ ಶೆಕೇಮನ್ನೂ ಅದರ ಉಪನಗರಗಳನ್ನೂ ಗೆಜೆರನ್ನೂ ಅದರ ಉಪನಗರ ಗಳನ್ನೂ ಕಿಬ್ಚೈಮನ್ನೂ ಅದರ ಉಪನಗರಗಳನ್ನೂ; ಬೇತ್ಹೋರೋನನ್ನೂ ಆದರ ಉಪನಗರಗಳನ್ನೂ ಹೀಗೆ ನಾಲ್ಕು ಪಟ್ಟಣಗಳನ್ನು ಕೊಟ್ಟರು. ಇದಲ್ಲದೆ ದಾನನ ಗೋತ್ರದಲ್ಲಿ ಎಲ್ತೆಕೇಯನ್ನೂ ಅದರ ಉಪ ನಗರಗಳನ್ನೂ ಗಿಬ್ಬೆತೋನನ್ನೂ ಅದರ ಉಪನಗರ ಗಳನ್ನೂ; ಅಯ್ಯಾಲೋನನ್ನೂ ಅದರ ಉಪನಗರ ಗಳನ್ನೂ ಗತ್ರಿಮ್ಮೋನನ್ನೂ ಅದರ ಉಪನಗರಗಳನ್ನೂ ಹೀಗೆ ನಾಲ್ಕು ಪಟ್ಟಣಗಳನ್ನು ಕೊಟ್ಟರು. ಮನಸ್ಸೆಯ ಅರ್ಧಗೋತ್ರದಲ್ಲಿ ತಾನಾಕನ್ನೂ ಅದರ ಉಪನಗರ ಗಳನ್ನೂ; ಗತ್ರಿಮ್ಮೋನನ್ನೂ ಅದರ ಉಪನಗರ ಗಳನ್ನೂ ಹೀಗೆ ಎರಡು ಪಟ್ಟಣಗಳನ್ನು ಕೊಟ್ಟರು. ಹಾಗೆಯೇ ಉಳಿದಂಥ ಕೆಹಾತನ ಮಕ್ಕಳ ಕುಟುಂಬಗಳಿಗೆ ದೊರೆತ ಪಟ್ಟಣಗಳೆಲ್ಲಾ ಹತ್ತು ಪಟ್ಟಣಗಳೂ ಅವುಗಳ ಉಪನಗರಗಳೂ. ಲೇವಿಯರ ಕುಟುಂಬಗಳಲ್ಲಿರುವ ಗೆರ್ಷೋನಿನ ಮಕ್ಕಳಿಗೆ ಮನಸ್ಸೆಯ ಅರ್ಧ ಗೋತ್ರದಲ್ಲಿ ಕೊಲೆ ಮಾಡಿದವನಿಗೆ ಆಶ್ರಯ ಪಟ್ಟಣವಾದ ಬಾಷಾನಿ ನಲ್ಲಿರುವ ಗೋಲಾನನ್ನೂ ಅದರ ಉಪನಗರಗಳನ್ನೂ ಬೆಯೆಷ್ಟೆರಾವನ್ನೂ ಅದರ ಉಪನಗರಗಳನ್ನೂ; ಹೀಗೆ ಎರಡು ಪಟ್ಟಣಗಳನ್ನು ಕೊಟ್ಟರು. ಇದಲ್ಲದೆ ಇಸ್ಸಾಕಾರನ ಗೋತ್ರದಲ್ಲಿ ಕಿಷ್ಯೋನನ್ನೂ ಅದರ ಉಪ ನಗರಗಳನ್ನೂ ದಾಬೆರತನ್ನೂ ಅದರ ಉಪನಗರ ಗಳನ್ನೂ ಯರ್ಮೂತನ್ನೂ ಅದರ ಉಪನಗರ ಗಳನ್ನೂ ಏಂಗನ್ನೀಮನ್ನೂ ಅದರ ಉಪನಗರಗಳನ್ನೂ; ಹೀಗೆ ನಾಲ್ಕು ಪಟ್ಟಣಗಳನ್ನು ಕೊಟ್ಟರು. ಆಶೇರನ ಗೋತ್ರದಲ್ಲಿ ಮಿಷಾಲನ್ನೂ ಅದರ ಉಪನಗರ ಗಳನ್ನೂ ಅಬ್ದೋನನ್ನೂ ಅದರ ಉಪನಗರಗಳನ್ನೂ ಹೆಲ್ಕಾತನ್ನೂ ಅದರ ಉಪನಗರಗಳನ್ನೂ ರೆಹೋ ಬನ್ನೂ ಅದರ ಉಪನಗರಗಳನ್ನೂ; ಹೀಗೆ ನಾಲ್ಕು ಪಟ್ಟಣಗಳನ್ನು ಕೊಟ್ಟರು. ನಫ್ತಾಲಿಯ ಗೋತ್ರ ದಲ್ಲಿ ಕೊಲೆಮಾಡಿದವನಿಗೆ ಆಶ್ರಯ ಪಟ್ಟಣವಾದ ಗಲಿಲಾಯದಲ್ಲಿರುವ ಕೆದೆಷನ್ನೂ ಅದರ ಉಪನಗರ ಗಳನ್ನೂ ಹಮ್ಮೋತ್ದೋರನ್ನೂ ಅದರ ಉಪನಗರ ಗಳನ್ನೂ ಕರ್ತಾನನ್ನೂ ಅದರ ಉಪನಗರಗಳನ್ನೂ; ಹೀಗೆ ಮೂರು ಪಟ್ಟಣಗಳನ್ನು ಕೊಟ್ಟರು. ಗೆರ್ಷೋನ್ಯರಿಗೆ ಅವರ ಕುಟುಂಬಗಳ ಪ್ರಕಾರ ಉಂಟಾದ ಪಟ್ಟಣಗಳೆಲ್ಲಾ ಹದಿಮೂರು ಪಟ್ಟಣಗಳೂ ಅವುಗಳ ಉಪನಗರಗಳೂ. ಉಳಿದ ಲೇವಿಯರಾದ ಮೆರಾರೀಯ ಮಕ್ಕಳ ಕುಟುಂಬಗಳಿಗೆ ಜೆಬುಲೂನನ ಗೋತ್ರದಲ್ಲಿ ಯೊಕ್ನೆ ಯಾಮನ್ನೂ ಆದರ ಉಪನಗರಗಳನ್ನೂ ಕರ್ತಾನನ್ನೂ ಅದರ ಉಪನಗರಗಳನ್ನೂ ದಿಮ್ನಾವನ್ನೂ ಅದರ ಉಪನಗರಗಳನ್ನೂ ನಹಲಾಲನ್ನೂ ಅದರ ಉಪ ನಗರಗಳನ್ನೂ ಹೀಗೆ ನಾಲ್ಕು ಪಟ್ಟಣಗಳನ್ನು ಕೊಟ್ಟರು. ಇದಲ್ಲದೆ ರೂಬೇನನ ಗೋತ್ರದಲ್ಲಿ ಬೆಚೆರನ್ನೂ ಅದರ ಉಪನಗರಗಳನ್ನೂ ಯಹಚಾ ವನ್ನೂ ಅದರ ಉಪನಗರಗಳನ್ನೂ ಕೆದೇಮೋತನ್ನೂ ಅದರ ಉಪನಗರಗಳನ್ನೂ ಮೆಫಾಗತನ್ನೂ ಅದರ ಉಪ ನಗರಗಳನ್ನೂ; ಹೀಗೆ ನಾಲ್ಕು ಪಟ್ಟಣಗಳನ್ನು ಕೊಟ್ಟರು. ಗಾದನ ಗೋತ್ರದಲ್ಲಿ ಕೊಲೆ ಮಾಡಿ ದವನಿಗೆ ಆಶ್ರಯ ಪಟ್ಟಣವಾದ ಗಿಲ್ಯಾದಿನಲ್ಲಿರುವ ರಾಮೋತನ್ನೂ ಅದರ ಉಪನಗರಗಳನ್ನೂ ಮಹನ ಯಿಮನ್ನೂ ಅದರ ಉಪನಗರಗಳನ್ನೂ ಹೆಷ್ಬೋ ನನ್ನೂ ಅದರ ಉಪನಗರಗಳನ್ನೂ ಯಗ್ಜೇರನ್ನೂ ಅದರ ಉಪನಗರಗಳನ್ನೂ; ಹೀಗೆ ನಾಲ್ಕು ಪಟ್ಟಣ ಗಳನ್ನು ಕೊಟ್ಟರು. ಹೀಗೆಯೇ ಲೇವಿಯರ ಕುಟುಂಬಗಳಲ್ಲಿ ಉಳಿದಂಥ ಮೆರಾರೀಯ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಚೀಟಿನಿಂದ ದೊರೆತ ಪಟ್ಟಣಗಳೆಲ್ಲಾ ಹನ್ನೆರಡು ಪಟ್ಟಣಗಳೂ ಅವುಗಳ ಉಪನಗರಗಳೂ. ಇಸ್ರಾಯೇಲ್ ಮಕ್ಕಳ ಸ್ವಾಸ್ತ್ಯದ ಮಧ್ಯದಲ್ಲಿ ಇರುವ ಲೇವಿಯರ ಎಲ್ಲಾ ಪಟ್ಟಣಗಳೂ ಅವುಗಳ ಉಪನಗರಗಳೂ ನಾಲ್ವತ್ತೆಂಟು ಪಟ್ಟಣಗಳು. ಈ ಪಟ್ಟಣಗಳಲ್ಲಿ ಪ್ರತಿಯೊಂದಕ್ಕೂ ಅದರದರ ಸುತ್ತಲೂ ಉಪನಗರಗಳು ಇದ್ದವು; ಪಟ್ಟಣಗಳಿಗೆಲ್ಲಾ ಹೀಗೆಯೇ ಇದ್ದವು. ಕರ್ತನು ಅವರ ತಂದೆಗಳಿಗೆ ಕೊಡುವೆನೆಂದು ಆಣೆ ಇಟ್ಟ ದೇಶವನ್ನೆಲ್ಲಾ ಇಸ್ರಾಯೇಲಿಗೆ ಕೊಟ್ಟನು; ಅವರು ಅದನ್ನು ಸ್ವಾಧೀನಮಾಡಿಕೊಂಡು ಅದರಲ್ಲಿ ವಾಸವಾಗಿದ್ದರು. ಕರ್ತನು ಅವರ ತಂದೆಗಳಿಗೆ ಆಣೆ ಇಟ್ಟ ಪ್ರಕಾರವೆಲ್ಲಾ ಅವರ ಸುತ್ತಲೂ ಅವರಿಗೆ ವಿಶ್ರಾಂತಿ ಕೊಟ್ಟನು; ಅವರ ಎಲ್ಲಾ ಶತ್ರುಗಳಲ್ಲಿ ಒಬ್ಬನಾದರೂ ಅವರ ಮುಂದೆ ನಿಲ್ಲಲಿಲ್ಲ; ಅವರ ಶತ್ರುಗಳನ್ನೆಲ್ಲಾ ಕರ್ತನು ಅವರ ಕೈಗಳಿಗೆ ಒಪ್ಪಿಸಿದನು.ಕರ್ತನು ಇಸ್ರಾಯೇಲ್ ಮನೆಗೆ ಹೇಳಿದ ಒಳ್ಳೇ ವಿಷಯಗಳಲ್ಲಿ ಒಂದಾದರೂ ಬಿದ್ದು ಹೋಗಲಿಲ್ಲ; ಎಲ್ಲಾ ನೆರವೇರಿದವು. ಕರ್ತನು ಇಸ್ರಾಯೇಲ್ ಮನೆಗೆ ಹೇಳಿದ ಒಳ್ಳೇ ವಿಷಯಗಳಲ್ಲಿ ಒಂದಾದರೂ ಬಿದ್ದು ಹೋಗಲಿಲ್ಲ; ಎಲ್ಲಾ ನೆರವೇರಿದವು.
- Numbers 23:6–23 ಅರಣ್ಯಕಾಂಡ 23:6–23ಆಗ ಅವನು ಬಾಲಾಕನ ಬಳಿಗೆ ತಿರಿಗಿ ಬಂದನು; ಅಗೋ, ಬಾಲಾಕನೂ ಮೋವಾಬಿನ ಸಕಲ ಪ್ರಭುಗಳೂ ಅವನು ಮಾಡಿದ ದಹನಬಲಿಯ ಹತ್ತಿರ ನಿಂತಿದ್ದರು. ಆಗ ಅವನು ಸಾಮ್ಯರೂಪವಾಗಿ--ಮೋವಾಬಿನ ಅರಸನಾದ ಬಾಲಾಕನು ನನ್ನನ್ನು ಅರಾಮಿನಿಂದಲೂ ಪೂರ್ವ ಪರ್ವತಗಳಿಂದಲೂ ಕರೆಯಿಸಿ--ನನಗೋ ಸ್ಕರ ಯಾಕೋಬನನ್ನು ಶಪಿಸ ಬಾ; ಇಸ್ರಾಯೇಲನ್ನು ಎದುರಿಸುವದಕ್ಕೆ ಬಾ ಎಂದು ನನಗೆ ಹೇಳಿದ್ದಾನೆ. ದೇವರು ಶಪಿಸದವನನ್ನು ನಾನು ಹೇಗೆ ಶಪಿಸಲಿ? ಕರ್ತನು ಎದುರಿಸದವನನ್ನು ನಾನು ಹೇಗೆ ಎದುರಿ ಸಲಿ? ಬಂಡೆಗಳ ತುದಿಯಿಂದ ಅವನನ್ನು ನೋಡು ತ್ತೇನೆ; ಗುಡ್ಡಗಳಿಂದ ಅವನನ್ನು ದೃಷ್ಟಿಸಿದ್ದೇನೆ; ಇಗೋ, ಆ ಜನಾಂಗವು ಒಂಟಿಯಾಗಿ ವಾಸಿಸುವದು, ಜನಾಂಗ ಗಳಲ್ಲಿ ಅದು ಎಣಿಸಲ್ಪಡುವದಿಲ್ಲ. ಯಾಕೋಬನ ಧೂಳನ್ನು ಎಣಿಸುವದಕ್ಕೂ ಇಸ್ರಾಯೇಲಿನ ನಾಲ್ಕನೇ ಒಂದು ಪಾಲನ್ನಾದರೂ ಲೆಕ್ಕ ಮಾಡುವದಕ್ಕೂ ಯಾರಿಂದಾದೀತು? ನೀತಿವಂತನು ಸಾಯುವಂತೆ ನಾನೂ ಸಾಯಬೇಕು, ನನ್ನ ಕಡೇ ಅಂತ್ಯವು ಅವನಂತೆಯೇ ಆಗಲಿ ಎಂದು ಹೇಳಿದನು. ಆಗ ಬಾಲಾಕನು ಬಿಳಾಮನಿಗೆ--ಇದೇನು ನೀನು ನನಗೆ ಮಾಡಿದ್ದು? ನನ್ನ ಶತ್ರುಗಳನ್ನು ಶಪಿಸುವದಕ್ಕೆ ನಿನ್ನನ್ನು ಕರೆಯಿಸಿದೆನು; ಇಗೋ, ನೀನು ಅವರನ್ನು ಸಂಪೂರ್ಣ ವಾಗಿ ಆಶೀರ್ವದಿಸಿದಿ ಅಂದನು. ಅದಕ್ಕೆ ಅವನು ಪ್ರತ್ಯುತ್ತರವಾಗಿ--ಕರ್ತನು ನನ್ನ ಬಾಯೊಳಗೆ ಇಡುವದನ್ನು ಹೇಳುವದಕ್ಕೆ ನಾನು ಜಾಗ್ರತೆಯಾಗಿರ ಬೇಕಲ್ಲವೋ ಅಂದನು. ಬಾಲಾಕನು ಅವನಿಗೆ--ನೀನು ಅವರನ್ನು ನೋಡತಕ್ಕ ಮತ್ತೊಂದು ಸ್ಥಳಕ್ಕೆ ನನ್ನೊಂದಿಗೆ ಬಾ; ಅವರನ್ನೆಲ್ಲಾ ನೋಡದೆ ಅವರ ಅಂತ್ಯ ಭಾಗವನ್ನು ಮಾತ್ರ ನೋಡುವಿ; ಅಲ್ಲಿಂದ ಅವರನ್ನು ನನಗೋ ಸ್ಕರ ಶಪಿಸು ಅಂದನು. ಹಾಗೆ ಬಾಲಾಕನು ಬಿಳಾಮ ನನ್ನು ಪಿಸ್ಗಾದ ತುದಿಗೆ ಚೋಫೀಮನ ಬೈಲಿಗೆ ಕರ ಕೊಂಡು ಹೋಗಿ ಏಳು ಬಲಿಪೀಠಗಳನ್ನು ಕಟ್ಟಿ ಒಂದೊಂದು ಬಲಿಪೀಠದ ಮೇಲೆ ಒಂದೊಂದು ಹೋರಿಯನ್ನೂ ಒಂದೊಂದು ಟಗರನ್ನೂ ಅರ್ಪಿಸಿ ದನು. ಆಗ ಅವನು ಬಾಲಾಕನಿಗೆ--ಇಲ್ಲಿ ನಿನ್ನ ದಹನಬಲಿಯ ಹತ್ತಿರ ನಿಂತುಕೋ; ನಾನು ಅಲ್ಲಿ ಕರ್ತನನ್ನು ಆಚೆಯಲ್ಲಿ ಎದುರುಗೊಳ್ಳುವೆನು ಅಂದನು. ಕರ್ತನು ಬಿಳಾಮನ ಎದುರಿಗೆ ಬಂದು ಅವನ ಬಾಯೊಳಗೆ ವಾಕ್ಯವನ್ನಿಟ್ಟು--ನೀನು ಬಾಲಾಕನ ಬಳಿಗೆ ತಿರುಗಿ ಹೋಗಿ ಈ ಪ್ರಕಾರ ಮಾತನಾಡು ಅಂದನು. ಇವನು ಅವನ ಬಳಿಗೆ ಬಂದಾಗ ಇಗೋ, ಅವನೂ ಅವನ ಸಂಗಡ ಮೋವಾಬಿನ ಪ್ರಧಾನರೂ ಅವನ ದಹನಬಲಿಯ ಹತ್ತಿರ ನಿಂತುಕೊಂಡಿದ್ದರು; ಬಾಲಾ ಕನು ಅವನಿಗೆ--ಕರ್ತನು ಏನು ಹೇಳಿದ್ದಾನೆ ಅಂದನು. ಅವನು ಸಾಮ್ಯರೂಪವಾಗಿ--ಬಾಲಾಕನೇ, ಎದ್ದು ಕೇಳು; ಚಿಪ್ಪೋರನ ಮಗನೇ, ನನಗೆ ಕಿವಿಗೊಡು. ಸುಳ್ಳಾಡುವ ಹಾಗೆ ದೇವರು ಮನುಷ್ಯನಲ್ಲ, ಪಶ್ಚಾತ್ತಾಪಪಡುವ ಹಾಗೆ ನರಪುತ್ರನಲ್ಲ; ಆತನು ನುಡಿದದ್ದನ್ನು ಮಾಡದಿರುವನೇ? ಮಾತನಾಡಿದ್ದನ್ನು ಆತನು ಸ್ಥಾಪಿಸನೇ? ಇಗೋ, ಆಶೀರ್ವದಿಸು ವದಕ್ಕೆ ಅಪ್ಪಣೆ ಹೊಂದಿದ್ದೇನೆ; ಆತನು ಆಶೀರ್ವದಿ ಸುತ್ತಿದ್ದಾನೆ; ನಾನು ಅದನ್ನು ಬದಲು ಮಾಡುವದ ಕ್ಕಾಗದು. ಆತನು ಯಾಕೋಬನಲ್ಲಿ ಪಾಪವನ್ನು ಕಾಣಲಿಲ್ಲ; ಇಸ್ರಾಯೇಲನಲ್ಲಿ ವಕ್ರತೆಯನ್ನು ನೋಡಲಿಲ್ಲ; ಅವನ ದೇವರಾದ ಕರ್ತನು ಅವನ ಸಂಗಡ ಇದ್ದಾನೆ; ಅರಸನ ಜಯ ಧ್ವನಿಯು ಅವರಲ್ಲಿ ಉಂಟು. ದೇವರು ಅವರನ್ನು ಐಗುಪ್ತದೊಳಗಿಂದ ಹೊರಗೆ ಬರಮಾಡಿದ್ದಾನೆ. ಅವನಿಗೆ ಒಂದು ಕೊಂಬುಳ್ಳ ಪ್ರಾಣಿಯಂತೆ ಬಲ ಉಂಟು. ನಿಶ್ಚಯ ವಾಗಿ ಯಾಕೋಬನಿಗೆ ವಿರೋಧವಾಗಿ ಶಕುನವಿಲ್ಲ; ಇಸ್ರಾಯೇಲನಿಗೆ ವಿರೋಧವಾಗಿ ಯಾವ ಕಣಿ ಇಲ್ಲ; ತತ್ಕಾಲದಲ್ಲಿ ದೇವರು ಏನು ಮಾಡಿದನೆಂದು ಯಾಕೋಬನ ವಿಷಯವಾಗಿಯೂ ಇಸ್ರಾಯೇಲಿನ ವಿಷಯವಾಗಿಯೂ ಹೇಳುವರು.
- Numbers 15:5–23 ಅರಣ್ಯಕಾಂಡ 15:5–23ಪಾನದ ಅರ್ಪಣೆಗಾಗಿ ದಹನಬಲಿಯ ಸಂಗಡವೂ ಇಲ್ಲವೆ ಬಲಿಯ ಸಂಗಡವೂ ಒಂದು ಕುರಿಗೋಸ್ಕರ ಹಿನ್ನಿನ ನಾಲ್ಕನೇ ಭಾಗದ ದ್ರಾಕ್ಷಾರಸವನ್ನು ಅರ್ಪಿಸಬೇಕು. ಇಲ್ಲವೆ ಟಗರಿಗೋಸ್ಕರ ಆಹಾರದ ಅರ್ಪಣೆಯಾಗಿ ಹಿನ್ನಿನ ಮೂರನೇ ಪಾಲು ಎಣ್ಣೇ ಬೆರೆಸಿದ ಹಿಟ್ಟಿನ ಎರಡು ದಶಮಾಂಶಗಳನ್ನು ನೀನು ಸಿದ್ಧಮಾಡಬೇಕು. ಪಾನದ ಅರ್ಪಣೆಯನ್ನು ಕರ್ತನಿಗೆ ಸುವಾಸನೆಗಾಗಿ ಹಿನ್ನಿನ ಮೂರನೇ ಪಾಲು ದ್ರಾಕ್ಷಾರಸವನ್ನು ಅರ್ಪಿಸ ಬೇಕು. ನೀನು ಕರ್ತನಿಗೆ ದಹನಬಲಿಗಾಗಿ ಇಲ್ಲವೆ ಪ್ರಮಾಣವನ್ನು ಈಡೇರಿಸುವ ಬಲಿಗಾಗಿ ಇಲ್ಲವೆ ಸಮಾ ಧಾನದ ಅರ್ಪಣೆಗಳಿಗಾಗಿ ಕರ್ತನಿಗೆ ಹೋರಿಯನ್ನು ನೀನು ಸಿದ್ಧಮಾಡುವಾಗ ಅವನು ಆಹಾರದ ಅರ್ಪಣೆಗಾಗಿ ಅರ್ಧ ಹಿನ್ನಿನ ಎಣ್ಣೇ ಬೆರೆಸಿದ ಮೂರು ದಶಮಾಂಶದ ಹಿಟ್ಟನ್ನು ಒಂದು ಹೋರಿಯೊಂದಿಗೆ ತರಬೇಕು. ಪಾನದ ಅರ್ಪಣೆಗಾಗಿ ಅರ್ಧ ಹಿನ್ನಿನ ದ್ರಾಕ್ಷಾರಸವನ್ನು ಬೆಂಕಿಯಿಂದ ಮಾಡಿದ ಅರ್ಪಣೆ ಗಾಗಿ ಕರ್ತನಿಗೆ ಸುವಾಸನೆಯಾದ ದಹನಬಲಿಗಾಗಿ ತರಬೇಕು. ಹೀಗೆ ಅದು ಒಂದು ಹೋರಿಗೂ ಇಲ್ಲವೆ ಒಂದು ಟಗರಿಗೂ ಒಂದು ಕುರಿಮರಿಗೂ ಒಂದು ಮೇಕೆಗೂ ಮಾಡತಕ್ಕದ್ದು. ನೀವು ಸಿದ್ಧಪಡಿಸಿದ ಬಲಿಗಳ ಲೆಕ್ಕದ ಪ್ರಕಾರ ನೀವು ಒಂದೊಂದನ್ನು ಅದರ ಲೆಕ್ಕದ ಪ್ರಕಾರ ಮಾಡಬೇಕು. ಕರ್ತನಿಗೆ ಸುವಾಸನೆ ಬೆಂಕಿಯ ಅರ್ಪ ಣೆಯ ವಿಷಯ ದೇಶದಲ್ಲಿ ಹುಟ್ಟಿದವರೆಲ್ಲರೂ ಇವುಗ ಳನ್ನು ಹಾಗೆಯೇ ಅರ್ಪಿಸಬೇಕು. ನಿಮ್ಮ ಸಂಗಡ ಪ್ರಯಾಣಮಾಡುವ ಪರದೇಶಿಯಾಗಲಿ ಇಲ್ಲವೆ ನಿಮ್ಮ ಮುಂದಿನ ಸಂತತಿಯವರ ಸಂಗಡ ಇರುವವನಾಗಲಿ ಕರ್ತನಿಗೆ ಸುವಾಸನೆಯನ್ನುಂಟುಮಾಡುವ ಬೆಂಕಿಯ ಅರ್ಪಣೆಯನ್ನು ಅರ್ಪಿಸುವಾಗ ನೀವು ಹೇಗೆ ಮಾಡು ತ್ತೀರೋ ಹಾಗೆಯೇ ಅವನು ಮಾಡಲಿ. ಸಭೆಗೂ ನಿಮಗೂ ನಿಮ್ಮ ಕೂಡ ಪ್ರಯಾಣಮಾಡುವ ಪರಕೀಯ ನಿಗೂ ಒಂದೇ ಕಟ್ಟಳೆ; ಇದು ನಿಮ್ಮ ಸಂತಾನಗಳಿಗೆ ನಿತ್ಯವಾದ ಕಟ್ಟಳೆ; ಕರ್ತನ ಎದುರಿನಲ್ಲಿ ನೀವು ಇರುವ ಪ್ರಕಾರ ಪರಕೀಯನೂ ಇರಬೇಕು. ನಿಮಗೂ ನಿಮ್ಮ ಕೂಡ ಪ್ರಯಾಣಮಾಡುವ ಪರಕೀಯನಿಗೂ ಒಂದೇ ಪ್ರಮಾಣವೂ ಒಂದೇ ನ್ಯಾಯವೂ ಇರಬೇಕು ಎಂದು ಹೇಳಿದನು. ಕರ್ತನು ಮೋಶೆಗೆ ಹೇಳಿದ್ದೇನಂದರೆ-- ಇಸ್ರಾಯೇಲ್ ಮಕ್ಕಳ ಸಂಗಡ ಮಾತನಾಡಿ ಅವ ರಿಗೆ--ನಾನು ನಿಮ್ಮನ್ನು ತರುವ ದೇಶಕ್ಕೆ ಬಂದು ಆ ದೇಶದ ರೊಟ್ಟಿಯನ್ನು ತಿನ್ನುವಾಗ ನೀವು ಕರ್ತನಿಗೆ ಎತ್ತುವ ಅರ್ಪಣೆಯನ್ನು ಅರ್ಪಿಸಬೇಕು. ನಿಮ್ಮ ಪ್ರಥಮ ಹಿಟ್ಟಿನ ರೊಟ್ಟಿಯನ್ನೂ ಎತ್ತುವ ಅರ್ಪಣೆ ಯನ್ನೂ ಅರ್ಪಿಸಬೇಕು. ನಿಮ್ಮ ಕಣದಿಂದ ಎತ್ತುವ ಅರ್ಪಣೆಯಂತೆ ಅದನ್ನು ಎತ್ತಬೇಕು. ನಿಮ್ಮ ಸಂತತಿಗಳ ವರೆಗೂ ನಿಮ್ಮ ಹಿಟ್ಟಿನ ಪ್ರಥಮವಾದದ್ದನ್ನು ಕರ್ತನಿಗೆ ಎತ್ತುವ ಅರ್ಪಣೆಯಾಗಿ ಅರ್ಪಿಸಬೇಕು. ನೀವು ತಪ್ಪಿ ಕರ್ತನು ಮೋಶೆಗೆ ಹೇಳಿದ ಈ ಸಕಲ ಆಜ್ಞೆಗಳ ಪ್ರಕಾರ ಮಾಡದಿದ್ದರೆ ಆತನು ನಿಮಗೆ ಆಜ್ಞೆಗಳನ್ನು ಕೊಟ್ಟ ದಿವಸ ಮೊದಲುಗೊಂಡು ನಿಮ್ಮ ಸಂತತಿಗಳವರೆಗೂ ಕರ್ತನು ಮೋಶೆಯ ಕೈಯಿಂದ ನಿಮಗೆ ಆಜ್ಞಾಪಿಸಿದ ಪ್ರಕಾರ ನೀವು ಮಾಡದೆ ಹೋದರೆ
- Nehemiah 11:1–12 ನೆಹೆಮೀಯ 11:1–12ಅಧಿಕಾರಿಗಳು ಯೆರೂಸಲೇಮಿನಲ್ಲಿ ವಾಸವಾಗಿದ್ದರು. ಇದಲ್ಲದೆ ಹತ್ತು ಮಂದಿ ಯಲ್ಲಿ ಒಬ್ಬನು ಪರಿಶುದ್ಧ ಪಟ್ಟಣವಾದ ಯೆರೂ ಸಲೇಮಿನಲ್ಲಿ ವಾಸವಾಗಿರುವದಕ್ಕೂ ಉಳಿದ ಒಂಭತ್ತು ಮಂದಿ ಇತರ ಪಟ್ಟಣಗಳಲ್ಲಿ ವಾಸವಾಗಿರುವದಕ್ಕೂ ಚೀಟುಗಳನ್ನು ಹಾಕಿದರು. ಆಗ ಜನರು ಯೆರೂ ಸಲೇಮಿನಲ್ಲಿ ವಾಸವಾಗಿರಲು ಸಮ್ಮತಿಸಿದವರನ್ನೆಲ್ಲಾ ಆಶೀರ್ವದಿಸಿದರು. ಯೆಹೂದದ ಪಟ್ಟಣಗಳಲ್ಲಿ ಇಸ್ರಾಯೇಲ್ಯರೂ ಯಾಜಕರೂ ಲೇವಿಯರೂ ನೆತಿನಿಯರೂ ಸೊಲೊ ಮೋನನ ಸೇವಕರ ಮಕ್ಕಳೂ ಅವರವರು ತಮ್ಮ ತಮ್ಮ ಪಟ್ಟಣಗಳ ಸ್ವಾಸ್ತ್ಯಗಳಲ್ಲಿ ವಾಸವಾಗಿದ್ದರು;ಆದರೆ ವಾಸವಾಗಿದ್ದ ಸೀಮೆಯ ಮುಖ್ಯಸ್ಥರು ಯಾರಂದರೆ-- ಯೆರೂಸಲೇಮಿನೊಳಗೆ ಯೂದನ ಮಕ್ಕಳಲ್ಲಿಯೂ ಬೆನ್ಯಾವಿಾನನ ಮಕ್ಕಳಲ್ಲಿಯೂ ಕೆಲ ವರು ವಾಸವಾಗಿದ್ದರು. ಯೆಹೂದನ ಮಕ್ಕಳು ಯಾರಂದರೆ--ಪೆರೆಚನ ಮಕ್ಕಳಲ್ಲಿ ಮಹಲಲೇಲನ ಮಗನಾದ ಶೆಫಟ್ಯನ ಮಗ ನಾದ ಅಮರ್ಯನ ಮಗನಾದ ಜೆಕರ್ಯನ ಮಗನಾದ ಉಜ್ಜೀಯನ ಮಗನಾದ ಅತಾಯನೂ. ಶಿಲೋನಿಯ ಮಗನಾದ ಜೆಕರೀಯನ ಮಗನಾದ ಯೋಯಾರೀಬನ ಮಗನಾದ ಅದಾಯನ ಮಗನಾದ ಹಜಾಯನ ಮಗನಾದ ಕೊಲ್ಹೋಜೆಯ ಮಗನಾದ ಬಾರೂಕನ ಮಗನಾದ ಮಾಸೇಯನೂ, ಯೆರೂ ಸಲೇಮಿನಲ್ಲಿ ವಾಸವಾಗಿರುವ ಪೆರೆಚನ ಕುಮಾರರೆಲ್ಲಾ ನಾನೂರ ಅರವತ್ತೆಂಟು ಮಂದಿ. ಇವರು ಪರಾಕ್ರಮಶಾಲಿಗಳು. ಬೆನ್ಯಾವಿಾನನ ಕುಮಾರರು ಯಾರಂದರೆ--ಯೆಶಾ ಯನ ಮಗನಾದ ಈತೀಯೇಲನ ಮಗನಾದ ಮಾಸೇ ಯನ ಮಗನಾದ ಕೋಲಾಯನ ಮಗನಾದ ಪೆದಾ ಯನ ಮಗನಾದ ಯೋವೇದನ ಮಗನಾದ ಮೆಷು ಲ್ಲಾಮನ ಮಗನಾದ ಸಲ್ಲುವು. ಅವನ ತರುವಾಯ ಗಬ್ಬಾಯನು, ಸಲ್ಲಾಯನು, ಮೊದಲಾದ ಒಂಭೈನೂರ ಇಪ್ಪತ್ತೆಂಟು ಮಂದಿಯು. ಜಿಕ್ರಿಯ ಮಗನಾದ ಯೋವೇಲನು ಅವರಿಗೆ ಮೇಲ್ವಿಚಾರಕನಾಗಿದ್ದನು. ಹಸ್ಸೆನೂವನ ಮಗನಾದ ಯೆಹೂದನು ಪಟ್ಟಣದ ಮೇಲೆ ಎರಡನೆಯವನಾಗಿದ್ದನು. ಯಾಜಕರಲ್ಲಿ ಯಾರಂದರೆ--ಯೋಯಾರೀಬನ ಮಗನಾದ ಯೆದಾಯನು, ಯಾಕೀನನು. ಅಹೀ ಟೂಬನ ಮಗನಾದ ಮೆರಾಯೋತನ ಮಗನಾದ ಚಾದೋಕನ ಮಗನಾದ ಮೆಷುಲ್ಲಾಮನ ಮಗನಾದ ಹಿಲ್ಕೀಯನ ಮಗನಾದ ಸೆರಾಯನು ದೇವರ ಆಲ ಯದ ನಾಯಕನಾಗಿದ್ದನು. ಮನೆಯ ಕೆಲಸವನ್ನು ನಡಿಸುವ ಅವರ ಸಹೋದರರು ಎಂಟು ನೂರ ಇಪ್ಪತ್ತೆರಡು ಮಂದಿ ಇದ್ದರು. ಮಲ್ಕೀಯನ ಮಗನಾದ ಪಷ್ಹೂರನ ಮಗನಾದ ಜೆಕರೀಯನ ಮಗನಾದ ಅಮ್ಜಿಯ ಮಗನಾದ ಪೆಲಲ್ಯನ ಮಗನಾದ ಯೆರೋ ಹಾಮನ ಮಗನಾದ ಅದಾಯನೂ.