Numbers · chapter 3 · verse 18
Numbers 3:18 in Kannada
ಗೇರ್ಷೋನನ ಕುಮಾರರ ಹೆಸರುಗಳು ತಮ್ಮ ಕುಟುಂಬಗಳ ಪ್ರಕಾರ ಇವೇ; ಲಿಬ್ನೀಯೂ ಶಿಮ್ಮಿಯೂ.
Gershonana kumaarara hesarugalu tamma kutumbagala prakaara ive; libneeyoo shimmiyoo.
Numbers 3:18 in English
- King James Version (KJV)
- And these [are] the names of the sons of Gershon by their families; Libni, and Shimei.
- World English Bible (WEB)
- These are the names of the sons of Gershon by their families: Libni and Shimei.
- American Standard Version (ASV)
- And these are the names of the sons of Gershon by their families: Libni and Shimei.
- Bible in Basic English (BBE)
- And these are the names of the sons of Gershon, by their families: Libni and Shimei.
- Darby Translation (DBY)
- And these are the names of the sons of Gershon according to their families: Libni and Shimei.
- Webster's Bible (WBS)
- And these [are] the names of the sons of Gershon by their families; Libni, and Shimei.
- Young's Literal Translation (YLT)
- And these [are] the names of the sons of Gershon by their families: Libni and Shimei.
Read in context
- 16ಆಗ ಮೋಶೆಯು ತನಗೆ ಕರ್ತನು ಆಜ್ಞಾಪಿಸಿದ ಮಾತಿನ ಪ್ರಕಾರವಾಗಿ ಎಣಿಸಿದನು.
- 17ಲೇವಿಯ ಕುಮಾರರ ಹೆಸರುಗಳು ಇವೇ: ಗೇರ್ಷೋನನೂ ಕೆಹಾತನೂ ಮೆರಾರೀಯೂ.
- 18ಗೇರ್ಷೋನನ ಕುಮಾರರ ಹೆಸರುಗಳು ತಮ್ಮ ಕುಟುಂಬಗಳ ಪ್ರಕಾರ ಇವೇ; ಲಿಬ್ನೀಯೂ ಶಿಮ್ಮಿಯೂ.
- 19ಕೆಹಾತನ ಕುಮಾರರು ತಮ್ಮ ಕುಟುಂಬಗಳ ಪ್ರಕಾರ ಅಮ್ರಾಮನೂ ಇಚ್ಹಾರನೂ ಹೆಬ್ರೋನನೂ ಉಜ್ಜೀಯೇಲನೂ.
- 20ಮೆರಾರೀಯ ಕುಮಾರರು ತಮ್ಮ ಕುಟುಂಬಗಳ ಪ್ರಕಾರ ಮಹ್ಲೀಯೂ ಮೂಷೀಯೂ. ತಂದೆಗಳ ಮನೆಯ ಪ್ರಕಾರವಾಗಿ ಲೇವಿಯರ ಕುಟುಂಬಗಳು ಇವೇ.
Cross references
- Exodus 6:17–19 ವಿಮೋಚನಕಾಂಡ 6:17–19ಗೇರ್ಷೋನನ ಕುಮಾರರು ಅವರ ಗೋತ್ರಗಳಿಗನುಸಾರವಾಗಿ: ಲಿಬ್ನೀ ಶಿವ್ಮೆಾಯರು. ಕೆಹಾತನ ಕುಮಾರರು: ಅಮ್ರಾಮ್ ಇಚ್ಹಾರ್ ಹೆಬ್ರೋನ್ ಉಜ್ಜೀಯೇಲ್. ಕೆಹಾತನು ಜೀವಿಸಿದ ವರುಷಗಳು ನೂರ ಮೂವತ್ತುಮೂರು. ಮೆರಾರೀಯ ಕುಮಾರರು: ಮಹ್ಲೀ ಮೂಷೀ. ವಂಶಾ ವಳಿಗಳ ಪ್ರಕಾರ ಇವರೇ ಲೇವಿಯ ಗೋತ್ರಗಳು.
- 1 Chronicles 6:17 1 ಪೂರ್ವಕಾಲವೃತ್ತಾಂತ 6:17ಗೇರ್ಷೋನನ ಕುಮಾರರ ಹೆಸರುಗಳು--ಲಿಬ್ನೀಯು ಶಿವ್ಮೆಾಯು.
- Nehemiah 12:1–26 ನೆಹೆಮೀಯ 12:1–26ಶೆಯಲ್ತಿಯೇಲನ ಮಗನಾದ ಜೆರುಬ್ಬಾಬೆಲನ ಸಂಗಡಲೂ ಯೇಷೂವನ ಸಂಗ ಡಲೂ ಹೋದ ಯಾಜಕರೂ ಲೇವಿಯರೂ ಯಾರ ಂದರೆ, ಸೆರಾಯನು ಯೆರೆವಿಾಯನು ಎಜ್ರನು ಅಮರ್ಯನು; ಮಲ್ಲೂಕನು ಹಟ್ಟೂಷನು ಶೆಕನ್ಯನು ರೆಹುಮನು ಮೆರೇಮೋತನು ಇದ್ದೋನು ಗಿನ್ನೆತೋ ನನು ಅಬೀಯನು ಮಿಯ್ಯಾವಿಾನನು ಮಾದ್ಯನು ಬಿಲ್ಗಯನು ಶೆಮಾಯನು ಯೋಯಾರೀಬನು, ಯೆದಾಯನು ಸಲ್ಲೂವು ಆಮೋಕನು ಹಿಲ್ಕೀಯನು ಯೆದಾಯನು. ಇವರು ಯೇಷೂವನ ದಿವಸಗಳಲ್ಲಿ ಯಾಜಕರಲ್ಲಿಯೂ ಅವರ ಸಹೋದರರಲ್ಲಿಯೂ ಮುಖ್ಯಸ್ಥರಾಗಿದ್ದರು. ಲೇವಿಯರು ಯಾರಂದರೆ -- ಯೇಷೂವನು ಬಿನ್ನೂಯನು ಕದ್ಮೀಯೇಲನು ಶೇರೇಬ್ಯನು ಯೆಹೂ ದನು, ಸ್ತುತಿಸುವ ಕಾರ್ಯದ ಮೇಲಾಗಿದ್ದ ಮತ್ತನ್ಯನೂ ಅವನ ಸಹೋದರರೂ. ಇದಲ್ಲದೆ ಅವರ ಸಹೋ ದರರಾದ ಬಕ್ಬುಕ್ಯನು ಉನ್ನೀಯು ವರ್ಗಗಳಲ್ಲಿ ಅವರಿಗೆ ಎದುರಾಗಿದ್ದರು. ಇದಲ್ಲದೆ ಯೇಷೂವನು ಯೋಯಾಕೀಮ ನನ್ನೂ ಪಡೆದನು; ಯೋಯಾಕೀಮನು ಎಲ್ಯಾಷೀಬ ನನ್ನೂ ಪಡೆದನು; ಎಲ್ಯಾಷೀಬನು ಯೋಯಾದನನ್ನು ಪಡೆದನು; ಯೋಯಾದನು ಯೋನಾತಾನನನ್ನೂ ಪಡೆದನು; ಯೋನಾತಾನನು ಯದ್ದೂವನನ್ನೂ ಪಡೆದನು. ಯೋಯಾಕೀಮನ ದಿನಗಳಲ್ಲಿ ಪಿತೃಗಳಲ್ಲಿ ಮುಖ್ಯಸ್ಥರಾಗಿದ್ದ ಯಾಜಕರು ಯಾರಂದರೆ--ಸೆರಾ ಯನ ವಂಶದವನಾದ ಮೆರಾಯನು, ಯೆರೆವಿಾ ಯನ ವಂಶದವರಾದ ಹನನ್ಯನು, ಎಜ್ರನ ವಂಶದ ವನಾದ ಮೆಷುಲ್ಲಾಮನು, ಅಮರ್ಯನ ವಂಶದವ ನಾದ ಯೆಹೋಹಾನಾನನು, ಮಲ್ಲೂಕಿಯ ವಂಶ ದವನಾದ ಯೋನಾತಾನನು, ಶೆಬನ್ಯನ ವಂಶದವ ನಾದ ಯೋಸೇಫನು, ಹಾರಿಮನ ವಂಶದವನಾದ ಅದ್ನನು, ಮೆರಾಯೋತನ ವಂಶದವನಾದ ಹೆಲ್ಕೈ ನು, ಇದ್ದೋನನ ವಂಶದವನಾದ ಜೆಕರ್ಯನು, ಗಿನ್ನೆ ತೋನನ ವಂಶದವನಾದ ಮೆಷುಲ್ಲಾಮನು, ಅಬೀ ಯನ ವಂಶದವನಾದ ಜಿಕ್ರಿಯು, ಮಿನ್ಯಾವಿಾ ನನ, ಮೋವದ್ಯನ ವಂಶದವನಾದ ಪಿಲ್ಟೈಯನು; ಬಿಲ್ಗಾನ ವಂಶದವನಾದ ಶಮ್ಮೂವನು, ಶೆಮಾಯನ ವಂಶದವನಾದ ಯೆಹೋನಾತಾನನು, ಯೋಯಾ ರೀಬನ ವಂಶದವನಾದ ಮತ್ತೆನೈಯನು, ಯೆದಾ ಯನ ವಂಶದವನಾದ ಉಜ್ಜೀಯು, ಸಲ್ಲೈಯನ ವಂಶ ದವನಾದ ಕಲ್ಲೈಯನು, ಅಮೋಕನ ವಂಶದವ ನಾದ ಏಬರನು, ಹಿಲ್ಕೀಯನ ವಂಶದವನಾದ ಹಷ ಬ್ಯನು, ಯೆದಾಯನ ವಂಶದವನಾದ ನೆತನೇಲನು. ಎಲ್ಯಾಷೀಬನು, ಯೋಯಾದನು, ಯೋಹಾ ನಾನನು, ಯದ್ದೂವನು, ಇವರ ದಿವಸಗಳಲ್ಲಿ ಲೇವಿಯರೂ ಯಾಜಕರೂ ಪಾರಸಿಯನಾದ ದಾರ್ಯಾವೆ ಷನ ಆಳಿಕೆಯ ವರೆಗೆ ಪಿತೃಗಳ ಮುಖ್ಯಸ್ಥರಾಗಿ ಬರೆ ಯಲ್ಪಟ್ಟಿದ್ದರು. ಎಲ್ಯಾಷೀಬನ ಮಗನಾದ ಯೋಹಾ ನಾನನ ಕಾಲದ ವರೆಗೆ ಲೇವಿ ಎಂಬವನ ಮಕ್ಕಳಾದ ಪಿತೃಗಳ ಮುಖ್ಯಸ್ಥರು ವೃತಾಂತಗಳ ಪುಸ್ತಕದಲ್ಲಿ ಬರೆ ಯಲ್ಪಟ್ಟಿದ್ದರು. ಲೇವಿಯರ ಮುಖ್ಯಸ್ಥರಾದ ಹಷ ಬ್ಯನೂ ಶೇರೇಬ್ಯನೂ ಕದ್ಮೀಯೇಲನ ಮಗನಾದ ಯೇಷೂವನೂ ಅವರಿಗೆದುರಾಗಿ ನಿಂತ ಅವರ ಸಹೋದರರೂ ದೇವರ ಮನುಷ್ಯನಾದ ದಾವೀದನ ಆಜ್ಞೆಯ ಪ್ರಕಾರ ಹೊಗಳುವದಕ್ಕೂ ಸ್ತೋತ್ರಮಾಡು ವದಕ್ಕೂ ವರ್ಗ ವರ್ಗಗಳಾಗಿದ್ದರು. ಮತ್ತನ್ಯನೂ ಬಕ್ಬುಕ್ಯನೂ ಒಬದ್ಯನೂ ಮೆಷುಲ್ಲಾಮನೂ ಟಲ್ಮೋ ನನೂ ಅಕ್ಕೂಬನೂ ಬೊಕ್ಕಸಗಳ ಬಾಗಲುಗಳನ್ನು ಕಾಯುವವರಾಗಿದ್ದರು. ಯೋಚಾದಾಕನ ಮಗ ನಾದ ಯೇಷೂವನ ಮಗನಾದ ಯೋಯಾಕೀಮನ ದಿವಸಗಳಲ್ಲಿಯೂ ಅಧಿಪತಿಯಾದ ನೆಹೆವಿಾಯನ ದಿವಸಗಳಲ್ಲಿಯೂ ಶಾಸ್ತ್ರಿಯೂ ಯಾಜಕನೂ ಆದ ಎಜ್ರನ ದಿವಸಗಳಲ್ಲಿಯೂ ಇವರು ಇದ್ದರು.
- 1 Chronicles 23:7–11 1 ಪೂರ್ವಕಾಲವೃತ್ತಾಂತ 23:7–11ಗೇರ್ಷೋನ್ಯರಲ್ಲಿ ಲದ್ದಾನನು ಶಿವ್ಮೆಾ: ಲದ್ದಾನನ ಕುಮಾರರು -- ಮುಖ್ಯಸ್ಥರಾದ ಯೆಹೀಯೇಲನು ಜೇತಾಮನು ಯೋವೇಲನು ಎಂಬ ಮೂರು ಮಂದಿಯು. ಶಿಮ್ಮಿಯ ಕುಮಾರರು ಶೆಲೋಮೊ ತನು ಹಜೀಯೇಲನು ಹಾರಾನನು ಎಂಬ ಮೂರು ಮಂದಿಯು. ಇವರು ಲದ್ದಾನನ ಪಿತೃಗಳಲ್ಲಿ ಮುಖ್ಯಸ್ಥ ರಾಗಿದ್ದರು. ಶಿಮ್ಮನ ಕುಮಾರರು--ಯಹತನು ಜೀನನು ಯೆಯೂಷನು ಬೆರೀಯನು. ಶಿಮ್ಮನ ಈ ನಾಲ್ಕು ಮಂದಿ ಕುಮಾರರಲ್ಲಿ ಯಹತನು ಮುಖ್ಯಸ್ಥನು. ಜೀಜನು ಎರಡನೆಯವನಾಗಿದ್ದನು; ಆದರೆ ಯೆಯೂಷ ನಿಗೂ ಬೆರೀಯನಿಗೂ ಬಹಳ ಮಂದಿ ಮಕ್ಕಳು ಇಲ್ಲ ದ್ದರಿಂದ ಇವರು ತಮ್ಮ ತಂದೆಯ ಮನೆಯಲ್ಲಿ ಒಂದೇ ಲೆಕ್ಕವಾಗಿ ಎಣಿಸಲ್ಪಟ್ಟಿದ್ದರು.
- 1 Chronicles 6:20–21 1 ಪೂರ್ವಕಾಲವೃತ್ತಾಂತ 6:20–21ಗೇರ್ಷೋನಿನವರು--ಇವನ ಮಗನಾದ ಲಿಬ್ನೀಯು; ಇವನ ಮಗನಾದ ಯಹತ್; ಇವನ ಮಗನಾದ ಜಿಮ್ಮನು; ಇವನ ಮಗನಾದ ಯೋವಾಹನು; ಇವನ ಮಗನಾದ ಇದ್ದೋನು; ಇವನ ಮಗನಾದ ಜೆರಹನು; ಇವನ ಮಗನಾದ ಯೆವತ್ರೈಯನು.
- Numbers 3:21 ಅರಣ್ಯಕಾಂಡ 3:21ಗೇರ್ಷೋನಿಗೆ ಸೇರಿದವರು ಲಿಬ್ನೀಯ ಕುಟುಂಬ ದವರೂ ಶಿವ್ಮೆಾಯ ಕುಟುಂಬದವರೂ, ಗೇರ್ಷೋನನ ಕುಟುಂಬಗಳು ಇವೇ.
- 1 Chronicles 26:1–32 1 ಪೂರ್ವಕಾಲವೃತ್ತಾಂತ 26:1–32ದ್ವಾರಪಾಲಕರ ವರ್ಗಗಳನ್ನು ಕುರಿತು ಏನಂದರೆ--ಕೊರಹೀಯರೊಳಗೆ ಆಸಾ ಫನ ಕುಮಾರರಲ್ಲಿ ಒಬ್ಬನಾಗಿರುವ ಕೋರೆಯನ ಮಗನಾದ ಮೆಷೆಲೆಮ್ಯನು. ಮೆಷೆಲೆಮ್ಯನ ಕುಮಾ ರರು--ಚೊಚ್ಚಲ ಮಗನು ಜೆಕರ್ಯನು, ಎರಡನೆ ಯವನು ಎದೀಯಯೇಲನು, ಮೂರನೆ ಯವನು ಜೆಬದ್ಯನು, ನಾಲ್ಕನೆಯವನು ಯತ್ನಿಯೇಲನು, ಐದನೆ ಯವನು ಎಲಾಮನು, ಆರನೆಯವನು ಯೆಹೋ ಹಾನಾನನು, ಏಳನೆಯವನು ಎಲ್ಯೆಹೋಯೇನೈ. ಇದಲ್ಲದೆ ಒಬೇದೆದೋಮನ ಕುಮಾರರು-- ಚೊಚ್ಚಲ ಮಗನು ಶೆಮಾಯನು, ಎರಡನೆಯವನು ಯೆಹೋಜಾಬಾದನು, ಮೂರನೆಯವನು ಯೋವಾ ಹನು, ನಾಲ್ಕನೆಯವನು ಸಾಕಾರನು, ಐದನೆಯವನು ನೆತನೇಲನು ಆರನೆಯವನು ಅವ್ಮೆಾಯೇಲನು, ಏಳನೆಯವನು ಇಸ್ಸಾಕಾರನು, ಎಂಟನೆಯವನು ಪೆಯುಲ್ಲೆತೈನು. ದೇವರು ಅವನನ್ನು ಆಶೀರ್ವದಿ ಸಿದನು. ಅದಲ್ಲದೆ ತನ್ನ ಮಗನಾದ ಶೆಮಾಯನಿಗೆ ತಮ್ಮ ತಂದೆಯ ಮನೆಯಲ್ಲಿ ಆಳುವ ಕುಮಾರರು ಹುಟ್ಟಿದರು; ಅವರು ಪರಾಕ್ರಮಶಾಲಿಗಳಾಗಿದ್ದರು. ಶೆಮಾಯನ ಕುಮಾರರು ಯಾರಂದರೆ--ಒತ್ನೀಯು, ರೆಫಾಯೇಲನು, ಒಬೇದನು, ಎಲ್ಜಾಬಾದನು; ಇವರ ಸಹೋದರರಾದ ಪರಾಕ್ರಮವುಳ್ಳ ಎಲೀಹುವು, ಸೆಮಕ್ಯನು. ಇವರೆಲ್ಲರು ಒಬೇದೆದೋಮನ ಕುಮಾ ರರು; ಇವರೂ ತಮ್ಮ ಕುಮಾರರೂ ತಮ್ಮ ಸಹೋ ದರರೂ ಸೇವೆಗೆ ಶಕ್ತಿಯುಳ್ಳ ಸ್ಥಿತಿವಂತರು; ಒಬೇದೆ ದೋಮನವರು ಅರವತ್ತೆರಡು ಮಂದಿಯಾಗಿದ್ದರು. ಮೆಷೆಲೆಮ್ಯನಿಗೂ ಬಲವುಳ್ಳ ಕುಮಾರರೂ ಸಹೋ ದರರೂ ಹದಿನೆಂಟು ಮಂದಿಯಾಗಿದ್ದರು. ಇದಲ್ಲದೆ ಮೆರಾರಿಯ ಮಕ್ಕಳಲ್ಲಿರುವ ಹೋಸನಿಗೆ ಮಕ್ಕಳಿದ್ದರು; ಮುಖ್ಯನಾದವನು ಶಿಮ್ರಿಯು; (ಅವನು ಚೊಚ್ಚಲ ಮಗನಲ್ಲ) ಆದರೆ ಅವನ ತಂದೆ ಅವನನ್ನು ಮುಖ್ಯಸ್ಥನನ್ನಾಗಿ ಮಾಡಿದನು; ಎರಡನೆಯವನು ಹಿಲ್ಕೀಯನು, ಮೂರನೆಯವನು ಟೆಬಲ್ಯನು, ನಾಲ್ಕನೆ ಯವನು ಜೆಕರ್ಯನು; ಹೋಸನ ಸಮಸ್ತ ಕುಮಾರರೂ ಹದಿಮೂರು ಮಂದಿಯಾಗಿದ್ದರು. ಇದರಲ್ಲಿ ದ್ವಾರಪಾಲಕರ ವರ್ಗಗಳು ಕರ್ತನ ಮನೆಯಲ್ಲಿ ಸೇವಿಸುವದಕ್ಕೆ ವರ್ಗವರ್ಗಕ್ಕೆದುರಾಗಿ ಮುಖ್ಯಸ್ಥರಲ್ಲಿ ವಿಭಾಗಿಸಲ್ಪಟ್ಟಿದ್ದವು. ಅವರು ಕಿರಿ ಯರು ಹಿರಿಯರ ಹಾಗೆ ತಮ್ಮ ಪಿತೃಗಳ ಮನೆಯ ಪ್ರಕಾರ ಬಾಗಲು ಬಾಗಲುಗಳಿಗೂ ಚೀಟುಗಳನ್ನು ಹಾಕಿದರು. ಮೂಡಣ ಭಾಗದ ಚೀಟು ಶೆಲೆಮ್ಯನಿಗೆ ಬಿತ್ತು. ಅವನ ಮಗನೂ ಬುದ್ಧಿಯುಳ್ಳ ಆಲೋಚನೆ ಯುಳ್ಳವನಾಗಿರುವ ಜೆಕರ್ಯನಿಗೋಸ್ಕರ ಚೀಟುಗ ಳನ್ನು ಹಾಕಿದರು; ಅವನ ಚೀಟು ಉತ್ತರ ಭಾಗಕ್ಕೆ ಬಿತ್ತು. ಒಬೇದೆದೋಮನಿಗೆ ದಕ್ಷಿಣ ಭಾಗಕ್ಕೆ ಬಿತ್ತು. ಅವನ ಕುಮಾರರಿಗೆ ಶುಪ್ಪೀಮ್ ಎಂಬ ಮನೆ ಬಂತು. ಶುಪ್ಪೀಮನಿಗೂ ಹೋಸನಿಗೂ ಪಶ್ಚಿಮದಲ್ಲಿರುವ ಶಲ್ಲೆಕೆತೆಂಬ ಬಾಗಲು ಬಂತು. ಹೋಗುವ ರಾಜ ಮಾರ್ಗದ ಬಳಿಯಲ್ಲಿ ಒಂದಕ್ಕೊಂದು ಎದುರಾಗಿ ವರ್ಗಗಳಿದ್ದವು. ಮೂಡಣ ಕಡೆಯಾಗಿ ಆರು ಮಂದಿ ಲೇವಿಯರಿದ್ದರು. ಉತ್ತರ ಭಾಗವಾಗಿ ದಿನಕ್ಕೆ ನಾಲ್ಕು ಮಂದಿಯೂ ಶುಪ್ಪೀಮಿನ ಬಳಿಯಲ್ಲಿ ಇಬ್ಬರಿ ಬ್ಬರಾಗಿಯೂ ಪಶ್ಚಿಮ ಭಾಗವಾದ ಪರ್ಬರಿಗೆ ಹೋಗುವ ರಾಜ ಮಾರ್ಗದಲ್ಲಿ ನಾಲ್ಕು ಮಂದಿಯೂ ಪರ್ಬರಿನ ಬಳಿಯಲ್ಲಿ ಇಬ್ಬರು ಇದ್ದರು. ಕೋರ ಹೀಯರು ಮೆರಾರೀಯರ ಕುಮಾರರಲ್ಲಿಯೂ ವಿಭಾ ಗಿಸಿದ ದ್ವಾರಪಾಲಕರ ವರ್ಗಗಳು ಇವೇ. ಇದಲ್ಲದೆ ಲೇವಿಯರಲ್ಲಿ ಅಹೀಯನು ದೇವರ ಮನೆಯ ಬೊಕ್ಕಸದ ಮೇಲೆಯೂ ಪ್ರತಿಷ್ಠಿತವಾದ ವುಗಳ ಬೊಕ್ಕಸದ ಮೇಲೆಯೂ ಅಧಿಕಾರಿಯಾ ಗಿದ್ದನು. ಲದ್ದಾನನ ಕುಮಾರರು; ಗೇರ್ಷೋನ್ಯ ನಾದ ಲದ್ದಾನನ ಕುಮಾರರು ಮುಖ್ಯಸ್ಥರಾದ ಪಿತೃ ಗಳಾಗಿದ್ದರು. ಈ ಗೇರ್ಷೋನ್ಯನಾದ ಲದ್ದಾನನ ಮಗನು ಯೆಹೀಯೇಲನು. ಯೆಹೀಯೇಲನ ಕುಮಾರರು--ಜೇತಾಮನು, ಅವನ ಸಹೋದರನಾದ ಯೋವೇಲನು; ಇವರು ಕರ್ತನ ಮನೆಯ ಬೊಕ್ಕಸಗಳ ಮೇಲೆ ಇದ್ದರು. ಅಮ್ರಾಮ್ಯರಲ್ಲಿಯೂ ಇಚ್ಹಾರಲ್ಲಿಯೂ ಹೆಬ್ರೋ ನ್ಯರಲ್ಲಿಯೂ ಉಜ್ಜೀಯೇಲ್ಯರಲ್ಲಿಯೂ ಸಹ ಕೆಲವರು. ಮೋಶೆಯ ಮಗನಾದ ಗೇರ್ಷೋನನ ಮಗನಾದ ಶೆಬೂವೇಲನು ಬೊಕ್ಕಸಗಳ ಮೇಲೆ ಅಧಿಕಾರಿಯಾಗಿ ದ್ದನು. ಇವನ ಸಹೋದರರು--ಎಲಿಯೇಜೆರನ ಮಗನು ರೆಹಬ್ಯನು, ಇವನ ಮಗನು ಯೆಶಾಯನು, ಇವನ ಮಗನು ಯೋರಾಮನು, ಇವನ ಮಗನು ಜಿಕ್ರೀಯು, ಇವನ ಮಗನು ಶೆಲೋಮೊತನು. ಈ ಶೆಲೋಮೊತನೂ ಅವನ ಸಹೋದರರೂ ಅರಸ ನಾದ ದಾವೀದನೂ ಮುಖ್ಯಸ್ಥರಾದ ಪಿತೃಗಳೂ ಸೈನ್ಯಾಧಿಪತಿಗಳಾದ ಸಹಸ್ರಗಳ ಮೇಲೆಯೂ ಶತಗಳ ಮೇಲೆಯೂ ಅಧಿಪತಿಗಳಾದವರೂ ಪ್ರತಿಷ್ಠೆಮಾಡಿದ ಪ್ರತಿಷ್ಠವಾದವುಗಳ ಬೊಕ್ಕಸಗಳ ಮೇಲೆಯೂ ಇದ್ದರು. ಅವರು ಕರ್ತನ ಮನೆಯನ್ನು ಬಲಪಡಿಸುವದಕ್ಕೆ ಯುದ್ಧಗಳಿಂದಲೂ ಕೊಳ್ಳೆಯಿಂದಲೂ ಸಂಪಾದಿಸಿ ದವುಗಳನ್ನು ಪ್ರತಿಷ್ಠೆಮಾಡಿದರು. ಇದಲ್ಲದೆ ಪ್ರವಾ ದಿಯಾದ ಸಮುವೇಲನೂ ಕೀಷನ ಮಗನಾದ ಸೌಲನೂ ನೇರನ ಮಗನಾದ ಅಬ್ನೇರನೂ ಚೆರೂ ಯಳ ಮಗನಾದ ಯೋವಾಬನೂ ಪ್ರತಿಷ್ಠೆಮಾಡಿ ದೆಲ್ಲವೂ ಮತ್ತು ಯಾರು ಪ್ರತಿಷ್ಠೆಮಾಡಿದ್ದರೋ ಅವೆ ಲ್ಲವೂ ಶೆಲೋಮೊತನ ಕೈಕೆಳಗೂ ಅವನ ಸಹೋ ದರರ ಕೈಕೆಳಗೂ ಇತ್ತು. ಇಚ್ಹಾರ್ಯರಲ್ಲಿ ಕೆನನ್ಯನೂ ಅವನ ಕುಮಾರರೂ ಪಾರುಪತ್ಯಗಾರರಿಗೋಸ್ಕರವೂ ನ್ಯಾಯಾಧಿಪತಿಗಳಿ ಗೋಸ್ಕರವೂ ಇಸ್ರಾಯೇಲಿನ ಮೇಲೆ ಹೊರಗಿನ ಕಾರ್ಯಗಳನ್ನು ನೋಡಲು ಇಡಲ್ಪಟ್ಟಿದ್ದರು. ಹೆಬ್ರೋನ್ಯರಲ್ಲಿ ಬಲವುಳ್ಳವರಾದ ಹಷಬ್ಯನೂ ಅವನ ಸಹೋದರರೂ ಕರ್ತನ ಸಮಸ್ತ ಕಾರ್ಯ ಗಳಲ್ಲಿಯೂ ಅರಸನ ಸೇವೆಯಲ್ಲಿಯೂ ಸಾವಿರದ ಏಳುನೂರು ಮಂದಿ ಪಶ್ಚಿಮವಾಗಿ ಯೊರ್ದನಿನ ಈಚೆ ಯಲ್ಲಿ ಇಸ್ರಾಯೇಲ್ಯರೊಳಗೆ ಅಧಿಪತಿಗಳಾಗಿದ್ದರು. ಯೆರೀಯನು ತನ್ನ ಪಿತೃಗಳ ಸಂತತಿಗಳ ಪ್ರಕಾರ ಹೆಬ್ರೋನ್ಯರಲ್ಲಿ ಮುಖ್ಯಸ್ಥನಾಗಿದ್ದನು. ಇವರು ದಾವೀ ದನ ಆಳಿಕೆಯ ನಾಲ್ವತ್ತನೇ ವರುಷದಲ್ಲಿ ಹುಡುಕ ಲ್ಪಟ್ಟಿದ್ದರು; ಆಗ ಗಿಲ್ಯಾದಿನ ಯಾಜೇರಿನಲ್ಲಿ ಅವರೊಳಗೆ ಬಲವುಳ್ಳ ಪರಾಕ್ರಮಶಾಲಿಗಳು ಸಿಕ್ಕಿದರು.ಇದ ಲ್ಲದೆ ಬಲವುಳ್ಳವರಾದ ಯೆರೀಯನ ಸಹೋದರರು ಎರಡು ಸಾವಿರದ ಏಳು ನೂರು ಮಂದಿ ಮುಖ್ಯ ಪಿತೃಗಳಾಗಿದ್ದರು. ಅರಸನಾದ ದಾವೀದನು ಇವರನ್ನು ದೇವರ ಸಮಸ್ತ ಕಾರ್ಯಗಳ ನಿಮಿತ್ತವಾಗಿಯೂ ಅರಸುಗಳ ಕಾರ್ಯಗಳ ನಿಮಿತ್ತವಾಗಿಯೂ ರೂಬೇ ನ್ಯರ ಮೇಲೆಯೂ ಗಾದ್ಯರ ಮೇಲೆಯೂ ಮನಸ್ಸೆಯ ಅರ್ಧ ಗೋತ್ರದ ಮೇಲೆಯೂ ಅಧಿಪತಿಗಳನ್ನಾಗಿ ಮಾಡಿದನು. ಇದ ಲ್ಲದೆ ಬಲವುಳ್ಳವರಾದ ಯೆರೀಯನ ಸಹೋದರರು ಎರಡು ಸಾವಿರದ ಏಳು ನೂರು ಮಂದಿ ಮುಖ್ಯ ಪಿತೃಗಳಾಗಿದ್ದರು. ಅರಸನಾದ ದಾವೀದನು ಇವರನ್ನು ದೇವರ ಸಮಸ್ತ ಕಾರ್ಯಗಳ ನಿಮಿತ್ತವಾಗಿಯೂ ಅರಸುಗಳ ಕಾರ್ಯಗಳ ನಿಮಿತ್ತವಾಗಿಯೂ ರೂಬೇ ನ್ಯರ ಮೇಲೆಯೂ ಗಾದ್ಯರ ಮೇಲೆಯೂ ಮನಸ್ಸೆಯ ಅರ್ಧ ಗೋತ್ರದ ಮೇಲೆಯೂ ಅಧಿಪತಿಗಳನ್ನಾಗಿ ಮಾಡಿದನು.
- 1 Chronicles 25:4 1 ಪೂರ್ವಕಾಲವೃತ್ತಾಂತ 25:4ಹೆಮಾನನ ಕುಮಾರರಲ್ಲಿ ಬುಕ್ಕೀಯನು, ಮತ್ತನ್ಯನು, ಉಜ್ಜಿಯೇ ಲನು, ಶೆಬೂವೇಲನು, ಯೆರೀಮೋತನು, ಹನನ್ಯನು, ಹನಾನೀಯು, ಎಲೀಯಾತನು, ಗಿದ್ದಲ್ತಿಯು, ರೋಮ ಮ್ತಿಯೆಜರನು, ಯೊಷ್ಬೆಕಾಷನು, ಮಲ್ಲೋತೀಯು, ಹೋತೀರನು, ಮಹಜೀಯೋತನು.