Numbers · chapter 5 · verse 9
Numbers 5:9 in Kannada
ಇದಲ್ಲದೆ ಇಸ್ರಾಯೇಲ್ ಮಕ್ಕಳು ತರುವ ಸಕಲ ಪರಿಶುದ್ಧವಾದ ಬಲಿಗಳೆಲ್ಲಾ ಯಾಜಕನಿಗೇ ಸಲ್ಲಬೇಕು.
Idallade israayel makkalu taruva sakala parishuddhavaada baligalellaa yaajakanige sallabeku.
Numbers 5:9 in English
- King James Version (KJV)
- And every offering of all the holy things of the children of Israel, which they bring unto the priest, shall be his.
- World English Bible (WEB)
- Every heave offering of all the holy things of the children of Israel, which they present to the priest, shall be his.
- American Standard Version (ASV)
- And every heave-offering of all the holy things of the children of Israel, which they present unto the priest, shall be his.
- Bible in Basic English (BBE)
- And every offering lifted up of all the holy things which the children of Israel give to the priest, will be his.
- Darby Translation (DBY)
- And every heave-offering of all the holy things of the children of Israel, which they present unto the priest, shall be his.
- Webster's Bible (WBS)
- And every offering of all the holy things of the children of Israel, which they bring to the priest, shall be his.
- Young's Literal Translation (YLT)
- 'And every heave-offering of all the holy things of the sons of Israel, which they bring near to the priest, becometh his;
Read in context
- 7ಆಗ ಅವರು ಮಾಡಿದ ಪಾಪವನ್ನು ಅರಿಕೆಮಾಡಿ ಅವರ ಅಪರಾಧದ ಬದಲು ಕೊಟ್ಟು ಅದರ ಸಂಗಡ ಐದನೇ ಪಾಲನ್ನು ಕೂಡಿಸಿ ಯಾರಿಗೆ ಅಪರಾಧ ಮಾಡಿ ದರೋ ಅವರಿಗೆ ಕೊಡಬೇಕು.
- 8ಆದರೆ ಅಪರಾಧಕ್ಕೆ ಬದಲು ಕೊಡುವದಕ್ಕೆ ಆ ಮನುಷ್ಯನಿಗೆ ಸಂಬಂಧಿಕನು ಇಲ್ಲದಿದ್ದರೆ ಸಲ್ಲಿಸಿದ ಆ ಅಪರಾಧವು ಅವನ ನಿಮಿತ್ತ ಪಾಪ ಮುಚ್ಚುವ ಟಗರಿನ ಹೊರತಾಗಿ ಅದು ಕರ್ತನದೂ ಯಾಜಕನದೂ ಆಗಿರಬೇಕು.
- 9ಇದಲ್ಲದೆ ಇಸ್ರಾಯೇಲ್ ಮಕ್ಕಳು ತರುವ ಸಕಲ ಪರಿಶುದ್ಧವಾದ ಬಲಿಗಳೆಲ್ಲಾ ಯಾಜಕನಿಗೇ ಸಲ್ಲಬೇಕು.
- 10ಪ್ರತಿ ಮನುಷ್ಯನ ಪರಿಶುದ್ಧವಾದವುಗಳು ಅವನಿಗೇ ಸಲ್ಲಬೇಕು. ಯಾವನಾದರೂ ಏನಾದರೂ ಯಾಜಕನಿಗೆ ಕೊಟ್ಟದ್ದು ಅವನಿಗೇ ಆಗಬೇಕು ಎಂದು ಹೇಳಿದನು.
- 11ಕರ್ತನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನಂದರೆ--
Cross references
- Exodus 29:28 ವಿಮೋಚನಕಾಂಡ 29:28ಅದು ಆರೋನನಿಗೂ ಅವನ ಕುಮಾರರಿಗೂ ಇಸ್ರಾಯೇಲ್ ಮಕ್ಕಳಿಗೆ ನಿತ್ಯ ಕಟ್ಟಳೆಯಾಗಿರತಕ್ಕದ್ದು. ಯಾಕಂದರೆ ಅದು ಎತ್ತುವ ಅರ್ಪಣೆಯಾಗಿದೆ. ಇಸ್ರಾಯೇಲ್ ಮಕ್ಕಳಿಂದ ಎತ್ತುವ ಅರ್ಪಣೆಯೂ ಅವರ ಸಮಾ ಧಾನದ ಬಲಿಗಳ ಅರ್ಪಣೆಗಳಿಂದ ಅವರು ಕರ್ತನಿಗೆ ಎತ್ತುವ ಅರ್ಪಣೆಯೂ ಆಗಿರಬೇಕು.
- Leviticus 7:6–14 ಯಾಜಕಕಾಂಡ 7:6–14ಯಾಜಕರಲ್ಲಿ ಗಂಡಸರೆಲ್ಲರೂ ಅದನ್ನು ಪರಿಶುದ್ಧವಾದ ಸ್ಥಳದಲ್ಲಿ ತಿನ್ನಬೇಕು. ಅದು ಅತಿ ಪರಿಶುದ್ಧವಾದದ್ದು. ಪಾಪದ ಬಲಿಯ ಹಾಗೆಯೇ ಅತಿಕ್ರಮದ ಬಲಿಯೂ ಆಗಿದೆ. ಅವುಗಳಿಗೆ ಇರುವದು ಒಂದೇ ನಿಯಮ; ಅವುಗಳಿಂದ ಪ್ರಾಯಶ್ಚಿತ್ತಮಾಡುವ ಯಾಜಕನೇ ಅವುಗಳನ್ನು ತೆಗೆದುಕೊಳ್ಳಬೇಕು. ಒಬ್ಬನ ದಹನಬಲಿಯನ್ನು ಸಮರ್ಪಿಸುವ ಯಾಜಕನು ತಾನು ಸಮರ್ಪಿಸಿದ ದಹನಬಲಿಯ ತೊಗಲನ್ನು ತಾನೇ ತೆಗೆದುಕೊಳ್ಳಬೇಕು. ಒಲೆಯಲ್ಲಿ ಬೇಯಿಸಿದ್ದೂ ಬಾಂಡ್ಲೆಯಲ್ಲಿಯೂ ಬೋಗುಣಿಯಲ್ಲಿಯೂ ತಯಾ ರಿಸಿದ ಎಲ್ಲಾ ಆಹಾರದ ಅರ್ಪಣೆಯೂ ಸಮರ್ಪಿಸಿದ ಯಾಜಕನದಾಗಿರಬೇಕು. ಎಣ್ಣೆಯಿಂದ ಮಿಶ್ರಿತ ವಾದ ಮತ್ತು ಒಣಗಿದ ಪ್ರತಿಯೊಂದು ಆಹಾರ ಬಲಿಯನ್ನು ಆರೋನನ ಕುಮಾರರು ಸರಿಸಮವಾಗಿ ತೆಗೆದುಕೊಳ್ಳಬೇಕು. ಅವನು ಕರ್ತನಿಗೆ ಸಮರ್ಪಿಸಬೇಕಾದ ಸಮಾ ಧಾನ ಯಜ್ಞಸಮರ್ಪಣೆಗಳ ನಿಯಮವು ಇದೇ: ಅವನು ಉಪಕಾರಸ್ತುತಿಗಾಗಿ ಅರ್ಪಿಸುವದಾದರೆ, ಉಪಕಾರಸ್ತುತಿ ಬಲಿಯನ್ನು ಹುಳಿಯಿಲ್ಲದ ಎಣ್ಣೆ ಬೆರೆ ಸಿದ ರೊಟ್ಟಿಗಳೊಂದಿಗೆ ಹುಳಿಯಿಲ್ಲದ ಎಣ್ಣೆಹೊಯ್ದ ದೋಸೆಗಳೊಂದಿಗೂ ಮತ್ತು ನಯವಾದ ಹಿಟ್ಟಿನ ಎಣ್ಣೆ ಬೆರೆಸಿದ ಹುರಿದರೊಟ್ಟಿಗಳೊಂದಿಗೂ ಸಮರ್ಪಿಸ ಬೇಕು. ರೊಟ್ಟಿಗಳಲ್ಲದೆ ಅವನು ಸಮಾಧಾನದ ಬಲಿಗಳನ್ನು ಉಪಕಾರಸ್ತುತಿ ಯಜ್ಞದೊಂದಿಗೆ ತನ್ನ ಸಮರ್ಪಣೆಗಾಗಿ ಹುಳಿರೊಟ್ಟಿಗಳನ್ನು ಸಮರ್ಪಿಸ ಬೇಕು. ಅವನು ಇಡೀ ಕಾಣಿಕೆಯಲ್ಲಿ ಒಂದನ್ನು ಎತ್ತುವ ಕಾಣಿಕೆಯನ್ನಾಗಿ ಕರ್ತನಿಗೆ ಅರ್ಪಿಸಬೇಕು. ಅದು ಸಮಾಧಾನ ಬಲಿಗಳ ರಕ್ತವನ್ನು ಚಿಮುಕಿಸುವ ಯಾಜಕನದಾಗಬೇಕು.
- Leviticus 6:17–18 ಯಾಜಕಕಾಂಡ 6:17–18ಅದನ್ನು ಹುಳಿಯೊಂದಿಗೆ ಬೇಯಿಸಬಾರದು. ನಾನು ಅದನ್ನು ಅವರಿಗೆ ಬೆಂಕಿಯಿಂದ ಮಾಡಿದ ನನ್ನ ಸಮರ್ಪಣೆ ಗಳಲ್ಲಿ ಅವರ ಪಾಲನ್ನು ಅವರಿಗೆ ಕೊಟ್ಟಿದ್ದೇನೆ. ಅದು ಅತಿಕ್ರಮದ ಬಲಿಯ ಹಾಗೆಯೂ ಪಾಪದ ಬಲಿಯ ಹಾಗೆಯೂ ಅತಿ ಪರಿಶುದ್ಧವಾದದ್ದು. ಆರೋನನ ಮಕ್ಕಳಲ್ಲಿ ಎಲ್ಲಾ ಗಂಡು ಮಕ್ಕಳು ಅದನ್ನು ತಿನ್ನಬೇಕು, ಕರ್ತನಿಗೆ ಬೆಂಕಿಯಿಂದ ಮಾಡಿದ ಸಮರ್ಪಣೆಗಳ ವಿಷಯದಲ್ಲಿ ನಿಮ್ಮ ಸಂತತಿಗಳಿಗೆ ಇದು ಒಂದು ಶಾಶ್ವತ ಕಟ್ಟಳೆಯಾಗಿರುವದು; ಅವುಗಳನ್ನು ಮುಟ್ಟುವ ಪ್ರತಿ ಯೊಬ್ಬನು ಪರಿಶುದ್ಧನಾಗಿರಬೇಕು ಅಂದನು.
- Deuteronomy 18:3–4 ಧರ್ಮೋಪದೇಶಕಾಂಡ 18:3–4ಎತ್ತಾಗಲಿ ಕುರಿಯಾಗಲಿ ಒಂದು ಬಲಿಯನ್ನು ಅರ್ಪಿಸುವವರ ಕಡೆಯಿಂದಲೂ ಜನರ ಕಡೆಯಿಂದ ಲೂ ಯಾಜಕರಿಗೆ ಬರತಕ್ಕದ್ದು ಇದೇ: ಮುಂದೊಡೆ ಯನ್ನೂ ಎರಡು ದವಡೆಗಳನ್ನೂ ಕೋಷ್ಟವನ್ನೂ ಯಾಜ ಕನಿಗೆ ಕೊಡಬೇಕು. ನಿನ್ನ ಧಾನ್ಯ ದ್ರಾಕ್ಷಾರಸ ಎಣ್ಣೆ ಗಳ ಪ್ರಥಮ ಫಲವನ್ನೂ ನಿನ್ನ ಕುರಿಗಳ ಉಣ್ಣೆ ಯಲ್ಲಿ ಪ್ರಥಮವಾದದ್ದನ್ನೂ ಅವನಿಗೆ ಕೊಡಬೇಕು.
- Numbers 18:19 ಅರಣ್ಯಕಾಂಡ 18:19ಇಸ್ರಾಯೇಲ್ ಮಕ್ಕಳು ಕರ್ತನಿಗೆ ಎತ್ತುವ ಪರಿಶುದ್ಧವಾದ ಅರ್ಪಣೆಗಳನ್ನೆಲ್ಲಾ ನಿನಗೂ ನಿನ್ನ ಕುಮಾರರಿಗೂ ಕುಮಾರ್ತೆಯರಿಗೂ ನಿತ್ಯ ಕಟ್ಟಳೆ ಯಾಗಿ ಕೊಟ್ಟಿದ್ದೇನೆ; ಇದು ಕರ್ತನ ಮುಂದೆ ನಿನಗೂ ನಿನ್ನ ಸಂಗಡ ಇರುವ ನಿನ್ನ ಸಂತತಿಗೂ ನಿತ್ಯವಾದ ಉಪ್ಪಿನ ಒಡಂಬಡಿಕೆಯಾಗಿರಬೇಕು.
- 1 Corinthians 9:7–13 1 ಕೊರಿಂಥದವರಿಗೆ 9:7–13ಸ್ವಂತ ಖರ್ಚಿನಿಂದ ಯಾರಾದರೂ ಯಾವಾಗಲಾದರೂ ಯುದ್ಧಕ್ಕೆ ಹೋಗುವದುಂಟೇ? ದ್ರಾಕ್ಷೇ ತೋಟವನ್ನು ನೆಟ್ಟ ಯಾರಾದರೂ ಅದರ ಫಲವನ್ನು ತಿನ್ನದಿರುವ ದುಂಟೇ? ಇಲ್ಲವೆ ಮಂದೆಯನ್ನು ಮೇಯಿಸಿದ ಯಾರಾದರೂ ಮಂದೆಯ ಹೈನವನ್ನು ತಿನ್ನದಿರುವ ದುಂಟೇ? ಮನುಷ್ಯ ರೀತಿಯಲ್ಲಿ ನಾನು ಇವುಗಳನ್ನು ಹೇಳುತ್ತೇನೋ? ಇಲ್ಲವೆ ನ್ಯಾಯ ಪ್ರಮಾಣವು ಸಹ ಇದನ್ನು ಹೇಳುವದಿಲ್ಲವೋ? ಕಣತುಳಿಯುವ ಎತ್ತಿನ ಬಾಯನ್ನು ನೀನು ಕಟ್ಟಬಾರದು ಎಂದು ಮೋಶೆಯ ನ್ಯಾಯಪ್ರಮಾಣದಲ್ಲಿ ಬರೆದದೆ. ದೇವರು ಚಿಂತಿಸು ವದು ಎತ್ತುಗಳಿಗಾಗಿಯೋ? ಇಲ್ಲವೆ ನಮಗೋಸ್ಕರ ವಾಗಿಯೇ ಆತನು ಹೇಳುತ್ತಾನೋ? ಉಳುವವನು ನಿರೀಕ್ಷೆಯಿಂದ ಉಳಬೇಕು, ನಿರೀಕ್ಷೆಯಲ್ಲಿ ಕಣತುಳಿಸು ವವನು ತನ್ನ ನಿರೀಕ್ಷೆಯಲ್ಲಿ ಪಾಲುಗಾರನಾಗಿರಬೇಕು ಎಂದು ನಮಗೋಸ್ಕರ ನಿಸ್ಸಂದೇಹವಾಗಿ ಇದು ಬರೆಯಲ್ಪಟ್ಟಿತು. ನಾವು ನಿಮಗೋಸ್ಕರ ಆತ್ಮಸಂಬಂಧ ವಾದವುಗಳನ್ನು ಬಿತ್ತಿದ ಮೇಲೆ ನಿಮ್ಮಿಂದ ಶಾರೀರಿಕ ವಾದವುಗಳನ್ನು ಕೊಯ್ಯುವದು ದೊಡ್ಡದೋ? ನಿಮ್ಮ ಮೇಲಿರುವ ಅಧಿಕಾರದಲ್ಲಿ ಇತರರಿಗೆ ಪಾಲು ಇದ್ದರೆ ಅವರಿಗಿಂತ ನಮಗೆ ಎಷ್ಟೋ ಹೆಚ್ಚಾಗಿ ಇರಬೇಕಲ್ಲಾ. ಆದರೂ ನಾವು ಈ ಅಧಿಕಾರವನ್ನು ನಡಿಸದೆ ಕ್ರಿಸ್ತನ ಸುವಾರ್ತೆಗೆ ಅಡ್ಡಿಮಾಡಬಾರದೆಂದು ಎಲ್ಲವನ್ನು ಸಹಿಸಿ ಕೊಂಡಿರುತ್ತೇವೆ. ಪವಿತ್ರವಾದವುಗಳ ಸೇವೆ ಮಾಡುವವರು ಆಲಯದವುಗಳಿಂದ ಜೀವಿಸುವರೆಂದೂ ಯಜ್ಞವೇದಿಯ ಬಳಿಯಲ್ಲಿ ಸೇವೆ ಮಾಡುವವರು ಯಜ್ಞವೇದಿಯೊಂದಿಗೆ ಪಾಲುಗಾರರೆಂದೂ ನಿಮಗೆ ಗೊತ್ತಿಲ್ಲವೋ?
- Leviticus 10:13 ಯಾಜಕಕಾಂಡ 10:13ನೀವು ಅದನ್ನು ಪರಿಶುದ್ಧವಾದ ಸ್ಥಳದಲ್ಲಿ ತಿನ್ನಬೇಕು. ಬೆಂಕಿಯಿಂದ ಮಾಡಿದ ಕರ್ತನ ಯಜ್ಞಗಳಲ್ಲಿ ನಿನಗೂ ನಿನ್ನ ಕುಮಾರರಿಗೂ ಇವು ಸಲ್ಲತಕ್ಕವುಗಳು. ಹೀಗೆ ನಾನು ಆಜ್ಞೆ ಹೊಂದಿದ್ದೇನೆ.
- Malachi 3:8–10 ಮಲಾಕಿಯ 3:8–10ಮನುಷ್ಯನು ದೇವರದನ್ನು ಕಳ್ಳತನ ಮಾಡುವನೋ? ಆದರೆ ನೀವು ನನ್ನದನ್ನು ಕಳ್ಳತನ ಮಾಡಿದ್ದೀರಿ; ಆದರೆ ನೀವು--ಯಾವದರಲ್ಲಿ ನಿನ್ನದನ್ನು, ಕಳ್ಳತನ ಮಾಡಿದ್ದೇವೆಂದು ಅನ್ನುತ್ತೀರಿ? ದಶಮಭಾಗ ಮತ್ತು ಅರ್ಪಣೆಗಳನ್ನೇ. ಇದರ ಮೂಲಕ ಶಪಿಸಲ್ಪಟ್ಟಿ; ನೀವು, ಹೌದು, ಈ ಸಮಸ್ತ ಜನಾಂಗವೇ ನನ್ನದನ್ನು ಕಳ್ಳತನ ಮಾಡಿದ್ದೀರಿ. ನನ್ನ ಆಲಯದಲ್ಲಿ ಆಹಾರವಿರುವ ಹಾಗೆ ಹತ್ತನೇ ಪಾಲು ಗಳನ್ನೆಲ್ಲಾ ಬೊಕ್ಕಸದ ಮನೆಯಲ್ಲಿ ತನ್ನಿರಿ; ಇದರಿಂದ ನನ್ನನ್ನು ಪರೀಕ್ಷಿಸಿರಿ; ನಾನು ನಿಮಗೆ ಆಕಾಶದ ಕಿಟಕಿ ಗಳನ್ನು ತೆರೆದು ಸಾಕಾಗುವಷ್ಟಕ್ಕಿಂತ ಹೆಚ್ಚಾಗುವಷ್ಟು ಆಶೀರ್ವಾದ ನಿಮಗೆ ಸುರಿಸದಿರುವೆನೇ? ಎಂದು ಸೈನ್ಯಗಳ ಕರ್ತನು ಹೇಳುತ್ತಾನೆ.
- Leviticus 6:26 ಯಾಜಕಕಾಂಡ 6:26ಪಾಪಕ್ಕಾಗಿ ಸಮರ್ಪಣೆ ಮಾಡುವ ಯಾಜಕನು ಅದನ್ನು ತಿನ್ನಬೇಕು; ಅದನ್ನು ಸಭೆಯ ಗುಡಾರ ಅಂಗಳದ ಪರಿಶುದ್ಧ ಸ್ಥಳದಲ್ಲಿ ತಿನ್ನಬೇಕು.
- Numbers 18:8–9 ಅರಣ್ಯಕಾಂಡ 18:8–9ಕರ್ತನು ಮಾತನಾಡಿ ಆರೋನನಿಗೆ--ಇಗೋ, ನಾನು ನಿನಗೆ ಎತ್ತುವ ಅರ್ಪಣೆಗಳ ಅಪ್ಪಣೆಗಳನ್ನು ಕೊಟ್ಟಿದ್ದೇನೆ. ಇಸ್ರಾಯೇಲ್ ಮಕ್ಕಳು ಪರಿಶುದ್ಧ ಮಾಡುವ ಎಲ್ಲಾದರಲ್ಲಿ ನಾನು ಅವುಗಳನ್ನು ಅಭಿಷೇಕ ಕ್ಕೋಸ್ಕರ ನಿನಗೂ ನಿನ್ನ ಮಕ್ಕಳಿಗೂ ನಿತ್ಯಕಟ್ಟಳೆಯಾಗಿ ಕೊಟ್ಟಿದ್ದೇನೆ. ಬೆಂಕಿಗೆ ಒಳಗಾಗದ ಅತೀ ಪರಿಶುದ್ಧ ವಾದವುಗಳಲ್ಲಿ ನಿನಗಾಗಬೇಕಾದವುಗಳು ಯಾವ ವೆಂದರೆ--ಅವರ ಅರ್ಪಣೆಗಳೆಲ್ಲಾ ಅಂದರೆ ಅವರು ನನಗೆ ತರುವ ಆಹಾರ ಸಮರ್ಪಣೆಗಳು ಪಾಪದ ಬಲಿಗಳು ಅಪರಾಧದ ಬಲಿಗಳು ಇವೆಲ್ಲಾ ಅತೀ ಪರಿಶುದ್ಧವಾಗಿ ನಿನಗೂ ನಿನ್ನ ಕುಮಾರರಿಗೂ ಇರಬೇಕು.
- Leviticus 22:2–3 ಯಾಜಕಕಾಂಡ 22:2–3ಆರೋನನೊಂದಿಗೂ ಅವನ ಕುಮಾರರೊಂದಿಗೂ ಮಾತನಾಡು; ಅವರು ನನ್ನ ಪರಿಶುದ್ಧ ಹೆಸರನ್ನು ಅಪವಿತ್ರ ಮಾಡದಂತೆ ಇಸ್ರಾಯೇಲ್ ಮಕ್ಕಳು ನನಗೆ ಸಲ್ಲಿಸುವ ಪರಿಶುದ್ಧವಾದವುಗಳಿಂದ ಅವರು ಪ್ರತ್ಯೇಕ ವಾಗಿರಬೇಕು; ನಾನೇ ಕರ್ತನು. ಅವರಿಗೆ ನೀನು ಹೀಗೆ ಹೇಳು--ನಿಮ್ಮ ಎಲ್ಲಾ ಸಂತತಿಯ ವಂಶಾವಳಿ ಗಳಲ್ಲಿ ಅಶುದ್ಧತ್ವವಿರುವ ಇಸ್ರಾಯೇಲ್ ಮಕ್ಕಳು ಕರ್ತನಿಗೆ ಸಲ್ಲಿಸುವ ಪರಿಶುದ್ಧವಾದವುಗಳ ಬಳಿಗೆ ಯಾವನು ಬರುವನೋ ಅವನು ನನ್ನ ಸನ್ನಿಧಿ ಯಿಂದ ತೆಗೆದುಹಾಕಲ್ಪಡಬೇಕು; ನಾನೇ ಕರ್ತನು.
- Ezekiel 44:29–30 ಯೆಹೆಜ್ಕೇಲನು 44:29–30ಆಹಾರದ ಅರ್ಪಣೆಯನ್ನು ಪಾಪ ಬಲಿಯನ್ನೂ ಅಪರಾಧ ಬಲಿಯನ್ನೂ ಅವರು ತಿನ್ನಬೇಕು; ಇಸ್ರಾಯೇಲಿನಲ್ಲಿ ಪ್ರತಿಷ್ಠೆ ಮಾಡಿದ್ದೆಲ್ಲವೂ ಅವರಿಗೆ ಸಲ್ಲಬೇಕು. ಇದಲ್ಲದೆ ಎಲ್ಲಾ ಪ್ರಥಮ ಫಲಗಳಲ್ಲಿ ಉತ್ಕೃಷ್ಟ ವಾದದ್ದೂ ನೀವು ನನಗೆ ಪ್ರತ್ಯೇ ಕಿಸಿ ಸಮರ್ಪಿಸಿದ ಎಲ್ಲಾ ಪದಾರ್ಥಗಳು ಯಾಜಕ ನದ್ದಾಗಬೇಕು; ನಿಮ್ಮ ಮನೆಯು ಆಶೀರ್ವಾದಕ್ಕೆ ನೆಲೆಯಾಗುವಂತೆ ಮೊದಲನೇ ಹಿಟ್ಟನ್ನು ನೀವು ಯಾಜಕ ರಿಗೆ ಕೊಡ ತಕ್ಕದ್ದು.ಯಾಜಕರು, ತಾನಾಗಿ ಸತ್ತು ಬಿದ್ದ ಅಥವಾ ಕಾಡುಮೃಗದಿಂದ ಕೊಲ್ಲಲ್ಪಟ್ಟಂತ ಪಕ್ಷಿಯನ್ನಾಗಲಿ ಪಶುವನ್ನಾಗಲಿ ತಿನ್ನಬಾರದು.