Philippians · chapter 1 · verse 12
Philippians 1:12 in Kannada
ಸಹೋದರರೇ, ನನಗೆ ಸಂಭವಿಸಿರುವದು ಸುವಾರ್ತೆಯ ಪ್ರಸಾರಣೆಗೇ ಸಹಾಯವಾಯಿತೆಂದು ನೀವು ತಿಳಿಯಬೇಕೆಂಬದಾಗಿ ನಾನು ಅಪೇಕ್ಷಿಸುತ್ತೇನೆ.
Sahodarare, nanage sambhavisiruvadu suvaarteya prasaaranege sahaayavaayitendu neevu tiliyabekembadaagi naanu apekshisuttene.
Philippians 1:12 in English
- King James Version (KJV)
- But I would ye should understand, brethren, that the things [which happened] unto me have fallen out rather unto the furtherance of the gospel;
- World English Bible (WEB)
- Now I desire to have you know, brothers, that the things which happened to me have turned out rather to the progress of the Good News,
- American Standard Version (ASV)
- Now I would have you know, brethren, that the things [which happened] unto me have fallen out rather unto the progress of the gospel;
- Bible in Basic English (BBE)
- Now it is my purpose to make clear to you, brothers, that the cause of the good news has been helped by my experiences;
- Darby Translation (DBY)
- But I would have you know, brethren, that the circumstances in which I am have turned out rather to the furtherance of the glad tidings,
- Webster's Bible (WBS)
- But I would ye should understand, brethren, that the things [which happened] to me have fallen out rather to the furtherance of the gospel;
- Young's Literal Translation (YLT)
- And I wish you to know, brethren, that the things concerning me, rather to an advancement of the good news have come,
Read in context
- 10ಉತ್ತಮ ಕಾರ್ಯ ಗಳು ಯಾವವೆಂದು ನೀವು ವಿವೇಚಿಸುವವರಾಗ ಬೇಕೆಂತಲೂ ಕ್ರಿಸ್ತನ ದಿನದವರೆಗೆ ನೀವು ಸರಳ ರಾಗಿಯೂ ನಿರ್ಮಲರಾಗಿಯೂ ಇರಬೇಕೆಂತಲೂ
- 11ಯೇಸು ಕ್ರಿಸ್ತನ ಮೂಲಕ ನೀತಿಯೆಂಬ ಫಲಗಳಿಂದ ತುಂಬಿದವರಾಗಿ ದೇವರಿಗೆ ಮಹಿಮೆಯನ್ನೂ ಸ್ತೋತ್ರ ವನ್ನೂ ತರುವವರಾಗಿರಬೇಕೆಂತಲೂ ಪ್ರಾರ್ಥಿಸುತ್ತೇನೆ.
- 12ಸಹೋದರರೇ, ನನಗೆ ಸಂಭವಿಸಿರುವದು ಸುವಾರ್ತೆಯ ಪ್ರಸಾರಣೆಗೇ ಸಹಾಯವಾಯಿತೆಂದು ನೀವು ತಿಳಿಯಬೇಕೆಂಬದಾಗಿ ನಾನು ಅಪೇಕ್ಷಿಸುತ್ತೇನೆ.
- 13ಹೇಗಂದರೆ ನನ್ನ ಬೇಡಿಗಳು ಕ್ರಿಸ್ತನ ನಿಮಿತ್ತವೇ ಎಂದು ಎಲ್ಲಾ ಅರಮನೆಯಲ್ಲಿಯೂ ಮಿಕ್ಕಾದ ಎಲ್ಲಾ ಸ್ಥಳಗಳಲ್ಲಿಯೂ ಪ್ರಸಿದ್ಧವಾಯಿತು.
- 14ಇದಲ್ಲದೆ ಕರ್ತನಲ್ಲಿ ಅನೇಕ ಸಹೋದರರು ನನ್ನ ಬೇಡಿಗ ಳಿಂದಲೇ ಭರವಸವುಳ್ಳವರಾಗಿ ವಾಕ್ಯವನ್ನು ನಿರ್ಭಯ ದಿಂದ ಹೇಳುವದಕ್ಕೆ ಇನ್ನೂ ವಿಶೇಷ ಧೈರ್ಯವನ್ನು ಹೊಂದಿದ್ದಾರೆ.
Cross references
- 2 Timothy 2:9 2 ತಿಮೊಥೆಯನಿಗೆ 2:9ಇದರಲ್ಲಿ ನಾನು ಕಷ್ಟವನ್ನನುಭವಿಸಿ ದುಷ್ಕರ್ಮಿಯಂತೆ ಸಂಕೋಲೆಯಿಂದ ಕಟ್ಟಲ್ಪಟ್ಟವನಾ ಗಿದ್ದೇನೆ; ಆದರೆ ದೇವರ ವಾಕ್ಯಕ್ಕೆ ಬಂಧನವಿಲ್ಲ.
- Romans 8:28 ರೋಮಾಪುರದವರಿಗೆ 8:28ಇದಲ್ಲದೆ ದೇವರ ಸಂಕಲ್ಪದ ಮೇರೆಗೆ ಕರೆಯ ಲ್ಪಟ್ಟು ಆತನನ್ನು ಪ್ರಿತಿಸುವವರ ಒಳ್ಳೇದಕ್ಕಾಗಿ ಎಲ್ಲವು ಗಳು ಒಟ್ಟಾಗಿ ಸಂಭವಿಸುತ್ತವೆಯೆಂದು ನಾವು ಬಲ್ಲೆವು.
- Acts 11:19–21 ಅಪೊಸ್ತಲರ ಕೃತ್ಯಗಳು 11:19–21ಸ್ತೆಫನನ ವಿಷಯದಲ್ಲಿ ಉಂಟಾದ ಹಿಂಸೆಯಿಂದ ಚದರಿಹೊದವರು ಯೆಹೂದ್ಯರಿಗೇ ಹೊರತು ಮತ್ತಾ ರಿಗೂ ವಾಕ್ಯವನ್ನು ಸಾರದೆ ಫೊಯಿನಿಕೆ ಕುಪ್ರ ಅಂತಿ ಯೋಕ್ಯಗಳ ವರೆಗೂ ಸಂಚರಿಸಿದರು. ಅವರಲ್ಲಿ ಕೆಲವರು ಕುಪ್ರ ಮತ್ತು ಕುರೇನ್ಯದವರಾಗಿದ್ದರು. ಅವರು ಅಂತಿಯೋಕ್ಯಕ್ಕೆ ಬಂದು ಗ್ರೀಕರ ಸಂಗಡ ಮಾತನಾಡಿ ಕರ್ತನಾದ ಯೇಸುವಿನ ವಿಷಯವಾಗಿ ಸಾರಿದರು. ಕರ್ತನ ಹಸ್ತವು ಅವರೊಂದಿಗಿದ್ದದ ರಿಂದ ಬಹು ಜನರು ನಂಬಿ ಕರ್ತನ ಕಡೆಗೆ ತಿರುಗಿ ಕೊಂಡರು.
- Romans 8:37 ರೋಮಾಪುರದವರಿಗೆ 8:37ಹೌದು, ನಮ್ಮನ್ನು ಪ್ರಿತಿಸಿದಾತನ ಮೂಲಕವಾಗಿ ನಾವು ಈ ಎಲ್ಲವುಗಳಲ್ಲಿ ಜಯಶಾಲಿ ಗಳಿಗಿಂತಲೂ ಹೆಚ್ಚಿನವರಾಗಿದ್ದೇವೆ.
- Acts 8:4 ಅಪೊಸ್ತಲರ ಕೃತ್ಯಗಳು 8:4ಚದರಿಹೋದವರು ಎಲ್ಲಾ ಕಡೆಗೂ ಹೋಗಿ ವಾಕ್ಯವನ್ನು ಸಾರುತ್ತಿದ್ದರು.
- Acts 22:1–30 ಅಪೊಸ್ತಲರ ಕೃತ್ಯಗಳು 22:1–30ಜನರೇ, ಸಹೋದರರೇ, ತಂದೆಗಳೇ, ನಾನು ಈಗ ನಿಮಗೆ ಮಾಡುವ ನನ್ನ ಪ್ರತಿವಾದವನ್ನು ಕೇಳಿರಿ. (ಅವನು ತಮ್ಮೊಂದಿಗೆ ಇಬ್ರಿಯ ಭಾಷೆಯಲ್ಲಿ ಮಾತನಾಡಿದ್ದನ್ನು ಅವರು ಕೇಳಿ ಮತ್ತೂ ನಿಶ್ಶಬ್ದ ವಾದರು). ಆಗ ಅವನು-- ನಿಜವಾಗಿಯೂ ನಾನು ಕಿಲಿಕ್ಯದ ತಾರ್ಸ ಪಟ್ಟಣದಲ್ಲಿ ಹುಟ್ಟಿದ ಒಬ್ಬ ಯೆಹೂದ್ಯನು; ಆದರೂ ಈ ಪಟ್ಟಣದಲ್ಲಿ ಗಮಲಿ ಯೇಲನ ಪಾದದ ಬಳಿಯಲ್ಲಿ ಬೆಳೆದವನಾಗಿದ್ದು ಪಿತೃಗಳ ನ್ಯಾಯಪ್ರಮಾಣದ ಸಂಪೂರ್ಣಕ್ರಮಕ್ಕನು ಸಾರವಾಗಿ ಶಿಕ್ಷಣ ಹೊಂದಿ ಈ ದಿನ ನೀವೆಲ್ಲರೂ ಹೇಗೋ ಹಾಗೇ ದೇವರ ಕಡೆಗೆ ಆಸಕ್ತಿಯುಳ್ಳ ವನಾಗಿದ ನಾನು ಈ ಮಾರ್ಗವನ್ನು ಹಿಡಿದ ಗಂಡಸರನ್ನೂ ಹೆಂಗಸರನ್ನೂ ಬಂಧಿಸಿ ಸೆರೆಮನೆ ಯೊಳಗೆ ಹಾಕಿಸುತ್ತಾ ಅವರನ್ನು ಕೊಲ್ಲುವ ಮಟ್ಟಿಗೂ ಹಿಂಸಿಸಿದೆನು. ಇದಕ್ಕೆ ಮಹಾಯಾಜಕನೂ ಹಿರೀಸಭೆ ಯವರೆಲ್ಲರೂ ನನಗೆ ಸಾಕ್ಷಿಗಳಾಗಿದ್ದಾರೆ. ಇವರಿಂದಲೇ ಅಲ್ಲಿದ್ದ ಸಹೋದರರಿಗೆ ನಾನು ಪತ್ರಗಳನ್ನು ಪಡೆದು ದಮಸ್ಕದಲ್ಲಿದ್ದವರನ್ನು ಬಂಧಿಸಿ ಯೆರೂಸಲೇಮಿಗೆ ತಂದು ಶಿಕ್ಷಿಸುವದಕ್ಕಾಗಿ ನಾನು ಅಲ್ಲಿಗೆ ಹೋದೆನು. ತರುವಾಯ ನಾನು ಪ್ರಯಾಣಮಾಡುತ್ತಾ ಸುಮಾರು ಮಧ್ಯಾಹ್ನದ ಸಮಯದಲ್ಲಿ ದಮಸ್ಕದ ಹತ್ತಿರ ಬಂದಾಗ ಫಕ್ಕನೆ ಆಕಾಶದಿಂದ ಒಂದು ದೊಡ್ಡ ಬೆಳಕು ನನ್ನ ಸುತ್ತಲೂ ಹೊಳೆಯಿತು. ಆಗ ನಾನು ನೆಲಕ್ಕೆ ಬಿದ್ದು--ಸೌಲನೇ, ಸೌಲನೇ, ನೀನು ನನ್ನನ್ನು ಯಾಕೆ ಹಿಂಸಿಸುತ್ತೀ? ಎಂದು ಹೇಳುವ ಧ್ವನಿಯನ್ನು ಕೇಳಿದೆನು. ಅದಕ್ಕೆ ನಾನು ಪ್ರತ್ಯುತ್ತರವಾಗಿ--ಕರ್ತನೇ, ನೀನು ಯಾರು ಎಂದು ಕೇಳಿದಾಗ ಆತನು--ನೀನು ಹಿಂಸಿಸುತ್ತಿರುವ ನಜರೇತಿನ ಯೇಸುವೇ ನಾನು ಎಂದು ನನಗೆ ಹೇಳಿದನು. ಆಗ ನನ್ನೊಂದಿಗಿದ್ದವರು ನಿಜವಾಗಿಯೂ ಆ ಬೆಳಕನ್ನು ನೋಡಿ ಭಯಪಟ್ಟರು; ಆದರೆ ನನ್ನೊಂದಿಗೆ ಮಾತನಾಡಿದ ಆತನ ಧ್ವನಿಯನ್ನು ಅವರು ಕೇಳಲಿಲ್ಲ. ನಾನು--ಕರ್ತನೇ, ನಾನೇನು ಮಾಡಬೇಕು ಎಂದು ಕೇಳಿದೆನು; ಅದಕ್ಕೆ ಕರ್ತನು ನನಗೆ--ನೀನೆದ್ದು ದಮಸ್ಕದೊಳಕ್ಕೆ ಹೋಗು; ನಿನಗೆ ನೇಮಿಸಲ್ಪ ಟ್ಟವುಗಳೆಲ್ಲವು ಅಲ್ಲಿ ನಿನಗೆ ತಿಳಿಸಲ್ಪಡುವವು ಎಂದು ಹೇಳಿದನು. ಆ ಬೆಳಕಿನ ಪ್ರಭಾವದ ನಿಮಿತ್ತವಾಗಿ ನನ್ನ ಕಣ್ಣು ಕಾಣಲಾರದೆ ಇದ್ದಾಗ ನನ್ನ ಜೊತೆಯಲ್ಲಿ ದ್ದವರು ನನ್ನ ಕೈ ಹಿಡಿದು ಕರಕೊಂಡು ಹೋದದ್ದರಿಂದ ನಾನು ದಮಸ್ಕಕ್ಕೆ ಬಂದೆನು. ಅಲ್ಲಿ ವಾಸಿಸುತ್ತಿದ್ದ ಅನನೀಯ ಎಂಬ ಒಬ್ಬ ಮನುಷ್ಯನು ಎಲ್ಲಾ ಯೆಹೂದ್ಯರಿಂದ ಒಳ್ಳೆಯವನೆಂದು ಸಾಕ್ಷಿಪಡೆದು ನ್ಯಾಯಪ್ರಮಾಣದ ಪ್ರಕಾರ ಭಕ್ತಿಯುಳ್ಳವನಾಗಿದ್ದನು. ಅವನು ನನ್ನ ಬಳಿಗೆ ಬಂದು ನಿಂತು--ಸಹೋದರನಾದ ಸೌಲನೇ, ನಿನ್ನ ದೃಷ್ಟಿಯನ್ನು ಹೊಂದು ಎಂದು ಹೇಳಿದನು. ಅದೇ ಗಳಿಗೆಯಲ್ಲಿ ನಾನು ಅವನನ್ನು ನೋಡಿದೆನು. ಆಗ ಅವನು--ನಮ್ಮ ಪಿತೃಗಳ ದೇವರ ಚಿತ್ತವನ್ನು ನೀನು ತಿಳುಕೊಳ್ಳು ವಂತೆಯೂ ಆ ನೀತಿವಂತನನ್ನು ನೋಡುವಂತೆಯೂ ಆತನ ಬಾಯಿಂದ ಬಂದ ಸ್ವರವನ್ನು ಕೇಳುವಂತೆಯೂ ಆತನು ನಿನ್ನನ್ನು ಆರಿಸಿಕೊಂಡಿದ್ದಾನೆ. ನೀನು ನೋಡಿ ಕೇಳಿದವುಗಳ ವಿಷಯವಾಗಿ ಎಲ್ಲಾ ಮನುಷ್ಯ ರಿಗೆ ಆತನ ಸಾಕ್ಷಿಯಾಗಿರುವಿ. ಈಗ ನೀನು ತಡಮಾಡುವದು ಯಾಕೆ? ಎದ್ದು ಬಾಪ್ತಿಸ್ಮ ಮಾಡಿಸಿ ಕೊಂಡು ಕರ್ತನ ಹೆಸರನ್ನು ಹೇಳಿಕೊಳ್ಳುವವನಾಗಿ ನಿನ್ನ ಪಾಪಗಳನ್ನು ತೊಳೆದುಕೋ ಎಂದು ಹೇಳಿದನು. ಇದಾದ ಮೇಲೆ ನಾನು ಯೆರೂಸಲೇಮಿಗೆ ತಿರಿಗಿ ಬಂದು ದೇವಾಲಯದಲ್ಲಿ ಪ್ರಾರ್ಥಿಸುತ್ತಾ ಪರವಶ ನಾಗಿದ್ದೆನು; ಆಗ-- ನೀನು ತ್ವರೆಪಟ್ಟು ಯೆರೂಸ ಲೇಮಿನಿಂದ ಬೇಗನೆ ಹೊರಟು ಹೋಗು; ನನ್ನ ವಿಷಯವಾದ ಸಾಕ್ಷಿಯನ್ನು ಅವರು ಅಂಗೀಕರಿಸುವದಿಲ್ಲ ಎಂದು ನನಗೆ ಹೇಳಿದಾತನನ್ನು ನಾನು ಕಂಡೆನು. ಅದಕ್ಕೆ ನಾನು--ಕರ್ತನೇ, ಪ್ರತಿಯೊಂದು ಸಭಾ ಮಂದಿರದಲ್ಲಿ ನಿನ್ನ ಮೇಲೆ ನಂಬಿಕೆಯಿಟ್ಟವರನ್ನು ನಾನು ಸೆರೆಮನೆಯಲ್ಲಿ ಹಾಕಿಸಿ ಹೊಡೆದೆನೆಂದು ಅವರಿಗೆ ತಿಳಿದದೆ; ಹತಸಾಕ್ಷಿಯಾದ ಸ್ತೆಫನನ ರಕ್ತವು ಸುರಿಯಲ್ಪಟ್ಟಿದ್ದಾಗ ನಾನು ಸಹ ಹತ್ತಿರ ನಿಂತು ಅವನ ಸಾವಿಗೆ ಒಪ್ಪಿದವನಾಗಿ ಅವನನ್ನು ಕೊಂದವರ ವಸ್ತ್ರವನ್ನು ಕಾಯುತ್ತಿದ್ದೆನು ಎಂದು ಹೇಳಿದೆನು. ಅದಕ್ಕೆ ಆತನು--ಹೋಗು, ನಾನು ನಿನ್ನನ್ನು ದೂರಕ್ಕೆ ಅನ್ಯಜನರ ಬಳಿಗೆ ಕಳುಹಿಸುವೆನು ಎಂದು ನನಗೆ ಹೇಳಿದನು. ಈ ಮಾತಿನತನಕ ಅವನು ಹೇಳಿದ್ದನ್ನು ಅವರು ಕೇಳಿ ತಮ್ಮ ಧ್ವನಿಗಳನ್ನೆತ್ತಿ--ಇಂಥವನನ್ನು ಭೂಮಿ ಯಿಂದ ತೆಗೆದುಹಾಕಿರಿ; ಇವನು ಜೀವಿಸುವದು ಯುಕ್ತವಲ್ಲ ಎಂದು ಕೂಗಿದರು. ಅವರು ಕೂಗಾಡಿ ತಮ್ಮ ವಸ್ತ್ರಗಳನ್ನು ಕಿತ್ತುಹಾಕುತ್ತಾ ಧೂಳನ್ನು ಗಾಳಿಗೆ ತೂರುತ್ತಿದ್ದಾಗ ಯಾವದಕ್ಕಾಗಿ ಅವರು ಅವನಿಗೆ ವಿರೋಧವಾಗಿ ಕೂಗಿಕೊಂಡರೆಂಬದನ್ನು ಮುಖ್ಯ ನಾಯಕನು ತಿಳುಕೊಳ್ಳುವಂತೆ ಅವನನ್ನು ಕೋಟೆ ಯೊಳಕ್ಕೆ ತರಬೇಕೆಂದು ಆಜ್ಞಾಪಿಸಿ ಕೊರಡೆಗಳಿಂದ ಹೊಡೆದು ವಿಚಾರಿಸಬೇಕೆಂದು ಅಪ್ಪಣೆಕೊಟ್ಟನು; ಅವರು ಅವನನ್ನು ಬಾರುಗಳಿಂದ ಕಟ್ಟುತ್ತಿರುವಾಗ ಪೌಲನು ಹತ್ತಿರ ನಿಂತಿದ್ದ ಶತಾಧಿಪತಿಗೆ--ರೋಮ್ ನವನಾದ ಒಬ್ಬನನ್ನು ನ್ಯಾಯವಿಚಾರಣೆ ಮಾಡದೆ ಕೊರಡೆಯಿಂದ ಹೊಡಿಸುವದು ನಿಮಗೆ ನ್ಯಾಯವೋ ಎಂದು ಕೇಳಿದನು. ಆಗ ಶತಾಧಿಪತಿಯು ಅದನ್ನು ಕೇಳಿ ಅಲ್ಲಿಂದ ಹೋಗಿ ಮುಖ್ಯ ನಾಯಕನಿಗೆ--ನೀನು ಮಾಡುವದರಲ್ಲಿ ಎಚ್ಚರಿಕೆಯಾಗಿರು; ಈ ಮನುಷ್ಯನು ರೋಮ್ನವನು ಎಂದು ಹೇಳಿದನು. ಆಗ ಮುಖ್ಯ ನಾಯಕನು ಬಂದು ಅವನಿಗೆ--ನೀನು ರೋಮ್ನವನೋ? ನನಗೆ ಹೇಳು ಎಂದು ಕೇಳಿದ್ದಕ್ಕೆ ಅವನು--ಹೌದು ಅಂದನು. ಅದಕ್ಕೆ ಮುಖ್ಯ ನಾಯಕನು ಪ್ರತ್ಯುತ್ತರವಾಗಿ--ನಾನು ಬಹಳ ಹಣ ಕೊಟ್ಟು ಪೌರತ್ವವನ್ನು ಪಡೆದುಕೊಂಡಿರುವೆನು ಅಂದನು. ಅದಕ್ಕೆ ಪೌಲನು--ನಾನಾದರೋ ಹುಟ್ಟು ಪೌರತ್ವನು ಎಂದು ಹೇಳಿದನು. ಆಗ ಅವನನ್ನು ವಿಚಾರಿಸಬೇಕೆಂದಿದ್ದವರು ಕೂಡಲೆ ಅವನನ್ನು ಬಿಟ್ಟು ಹೋದರು; ಇದಲ್ಲದೆ ಆ ಮುಖ್ಯನಾಯಕನು ಸಹ ತಾನು ಬಂಧಿಸಿದವನು ರೋಮ್ನವನೆಂದು ತಿಳಿದು ಭಯಪಟ್ಟನು.ಅವನ ಮೇಲೆ ಯೆಹೂದ್ಯರು ತಪ್ಪು ಹೊರಿಸಿದ ನಿಜವಾದ ವಿಷಯವನ್ನು ತಿಳಿಯಬೇಕೆಂದು ಅಪೇಕ್ಷಿಸಿ ಮುಖ್ಯ ನಾಯಕನು ಮರುದಿನ ಅವನ ಬೇಡಿಗಳನ್ನು ಬಿಚ್ಚಿ ಪ್ರಧಾನಯಾಜಕರೂ ಆಲೋಚನಾ ಸಭೆಯವ ರೆಲ್ಲರೂ ಸೇರಿಬರಬೇಕೆಂದು ಅಪ್ಪಣೆ ಕೊಟ್ಟ ಪೌಲನನ್ನು ಕರೆದುಕೊಂಡು ಹೋಗಿ ಅವರ ಮುಂದೆ ನಿಲ್ಲಿಸಿದ ಅವನ ಮೇಲೆ ಯೆಹೂದ್ಯರು ತಪ್ಪು ಹೊರಿಸಿದ ನಿಜವಾದ ವಿಷಯವನ್ನು ತಿಳಿಯಬೇಕೆಂದು ಅಪೇಕ್ಷಿಸಿ ಮುಖ್ಯ ನಾಯಕನು ಮರುದಿನ ಅವನ ಬೇಡಿಗಳನ್ನು ಬಿಚ್ಚಿ ಪ್ರಧಾನಯಾಜಕರೂ ಆಲೋಚನಾ ಸಭೆಯವ ರೆಲ್ಲರೂ ಸೇರಿಬರಬೇಕೆಂದು ಅಪ್ಪಣೆ ಕೊಟ್ಟ ಪೌಲನನ್ನು ಕರೆದುಕೊಂಡು ಹೋಗಿ ಅವರ ಮುಂದೆ ನಿಲ್ಲಿಸಿದ
- Esther 9:1 ಎಸ್ತೇರಳು 9:1ಅಡಾರ್ ತಿಂಗಳೆಂಬ ಹನ್ನೆರಡನೇ ತಿಂಗಳ ಹದಿಮೂರನೇ ದಿನದಲ್ಲಿ ಅರಸನ ಮಾತೂ ಅವನ ಆಜ್ಞೆಯೂ ಮಾಡಲ್ಪಡುವದಕ್ಕೆ ಸವಿಾ ಪಿಸಿದಾಗ ಯೆಹೂದ್ಯರ ಶತ್ರುಗಳು ಅದೇ ದಿನದಲ್ಲಿ ಅವರ ಮೇಲೆ ದೊರೆತನ ಮಾಡುವೆವೆಂದು ಭರವಸೆ ಕೊಟ್ಟಿದ್ದರು. ಅದಕ್ಕೆ ಬದಲಾಗಿ ಯೆಹೂದ್ಯರು ತಮ್ಮನ್ನು ಹಗೆಮಾಡುವವರ ಮೇಲೆ ದೊರೆತನ ಮಾಡಿದರು.
- Acts 28:1–31 ಅಪೊಸ್ತಲರ ಕೃತ್ಯಗಳು 28:1–31ಅವರು ಪಾರಾದಾಗ ಆ ದ್ವೀಪದ ಹೆಸರು ಮೆಲೀತೆ ಎಂದು ತಿಳಿದು ಕೊಂಡರು. ಅಲ್ಲಿಯ ಅನಾಗರಿಕ ಜನರು ನಮಗೆ ತೋರಿಸಿದ ದಯೆಯು ಅಪಾರವಾಗಿತ್ತು; ಆ ಸಮಯ ದಲ್ಲಿ ಮಳೆಯೂ ಚಳಿಯೂ ಇದ್ದದರಿಂದ ಅವರು ಬೆಂಕಿಯನ್ನು ಹೊತ್ತಿಸಿ ನಮ್ಮೆಲ್ಲರನ್ನು ಸೇರಿಸಿಕೊಂಡರು. ಪೌಲನು ಕಟ್ಟಿಗೆಯ ಹೊರೆಯನ್ನು ಕೂಡಿಸಿ ಬೆಂಕಿಯ ಮೇಲೆ ಹಾಕಿದಾಗ ಆ ಕಾವಿನ ದೆಸೆಯಿಂದ ಒಂದು ವಿಷ ಸರ್ಪವು ಹೊರಗೆ ಬಂದು ಅವನ ಕೈಯನ್ನು ಬಿಗಿಯಾಗಿ ಸುತ್ತಿಕೊಂಡಿತು. ಆ ವಿಷಜಂತು ಅವನ ಕೈಯಿಂದ ಜೋತಾಡುವದನ್ನು ಆ ಅನಾಗರಿಕರು ನೋಡಿ--ಈ ಮನುಷ್ಯನು ಸಮುದ್ರದಿಂದ ತಪ್ಪಿಸಿ ಕೊಂಡರೂ ಪ್ರತೀಕಾರವು ಇವನನ್ನು ಬದುಕಗೊಡಿಸು ವದಿಲ್ಲ. ಇವನು ನಿಸ್ಸಂದೇಹವಾಗಿ ಕೊಲೆ ಪಾತಕನು ಎಂದು ತಮ್ಮತಮ್ಮಲ್ಲಿ ಮಾತನಾಡಿಕೊಂಡರು. ಆಗ ಅವನು ಆ ಜಂತನ್ನು ಬೆಂಕಿಯೊಳಕ್ಕೆ ಝಾಡಿಸಿಬಿಟ್ಟನು; ಯಾವ ಅಪಾಯವೂ ಅವನಿಗೆ ಆಗಲಿಲ್ಲ. ಹೇಗಿದ್ದರೂ ಅವನು ಬಾತುಹೋದಾನು ಇಲ್ಲವೆ ಅಕಸ್ಮಾತ್ತಾಗಿ ಸತ್ತುಬಿದ್ದಾನು ಎಂದು ಅವರು ನೋಡಿಕೊಂಡೇ ಇದ್ದರು; ಬಹಳ ಹೊತ್ತಿನವರೆಗೂ ಅವರು ನೋಡಿದ ಮೇಲೆ ಯಾವ ಅಪಾಯವೂ ಅವನಿಗೆ ಬಾರದೆ ಇರುವದನ್ನು ಕಂಡು ಅವರು ತಮ್ಮ ಮನಸ್ಸುಗಳನ್ನು ಬದಲಾಯಿಸಿಕೊಂಡು ಅವನೊಬ್ಬ ದೇವರೆಂ ಅದೇ ಸ್ಥಳದಲ್ಲಿ ಪೊಪ್ಲಿಯ ಎಂಬ ಆ ದ್ವೀಪದ ಮುಖ್ಯಸ್ಥನಿಗೆ ಆಸ್ತಿ ಇತ್ತು; ಅವನು ನಮ್ಮನ್ನು ಸೇರಿಸಿಕೊಂಡು ಮೂರು ದಿವಸ ಆದರದಿಂದ ಸತ್ಕರಿಸಿ ದನು. ಇದಾದ ಮೇಲೆ ಪೊಪ್ಲಿಯನ ತಂದೆಯು ಜ್ವರದಿಂದಲೂ ರಕ್ತಭೇದಿಯಿಂದಲೂ ಬಿದ್ದುಕೊಂಡಿ ದ್ದಾಗ ಪೌಲನು ಒಳಗೆ ಪ್ರವೇಶಿಸಿ ಪ್ರಾರ್ಥನೆ ಮಾಡಿ ಅವನ ಮೇಲೆ ತನ್ನ ಕೈಗಳನ್ನಿಟ್ಟು ಅವನನ್ನು ಸ್ವಸಮಾಡಿದನು. ಇದಾದ ಮೇಲೆ ಆ ದ್ವೀಪದಲ್ಲಿ ರೋಗಗಳಿದ್ದ ಬೇರೆಯವರೂ ಬಂದು ಸ್ವಸ್ಥರಾದರು. ಅವರು ಸಹ ನಮ್ಮನ್ನು ಬಹಳವಾಗಿ ಗೌರವಿಸಿ ಸನ್ಮಾನಿಸಿದರು; ನಾವು ಹೊರಟಾಗ ನಮಗೆ ಅವಶ್ಯ ವಾದವುಗಳನ್ನು ತಂದು ಹಡಗಿನಲ್ಲಿಟ್ಟರು. ಮೂರು ತಿಂಗಳಾದ ಮೇಲೆ ಆ ದ್ವೀಪದಲ್ಲಿ ಶೀತಕಾಲ ಕಳೆದ ನಂತರ ಅಶ್ವಿನೀ ದೇವತೆಯ ಚಿನ್ಹೆ ಇದ್ದ ಅಲೆಕ್ಸಾಂದ್ರಿಯದ ಹಡಗನ್ನು ಹತ್ತಿ ನಾವು ಹೊರಟೆವು. ತರುವಾಯ ಸುರಕೂಸಿಗೆ ಸೇರಿ ನಾವು ಅಲ್ಲಿ ಮೂರು ದಿವಸಗಳು ಇದ್ದೆವು. ಅಲ್ಲಿಂದ ನಾವು ಸುತ್ತಿಕೊಂಡು ರೇಗಿಯಕ್ಕೆ ಬಂದೆವು; ಒಂದು ದಿವಸವಾದ ಮೇಲೆ ದಕ್ಷಿಣದ ಗಾಳಿಯು ಬೀಸಿದಾಗ ಮರುದಿನ ನಾವು ಪೊತಿಯೋಲಕ್ಕೆ ಸೇರಿದೆವು. ಅಲ್ಲಿ ನಾವು ಸಹೋದರರನ್ನು ನೋಡಿದಾಗ ಅವರು ನಮ್ಮನ್ನು ಏಳು ದಿವಸ ತಮ್ಮೊಂದಿಗೆ ಇರಬೇಕೆಂದು ಬೇಡಿಕೊಂಡರು; ಹೀಗೆ ನಾವು ರೋಮ್ ಕಡೆಗೆ ಹೊರಟೆವು. ಅಲ್ಲಿದ್ದ ಸಹೋದರರು ನಮ್ಮ ವಿಷಯ ವಾಗಿ ಕೇಳಿ ನಮ್ಮನ್ನು ಸಂಧಿಸುವದಕ್ಕಾಗಿ ಅಪ್ಪಿಯ ಪೇಟೆ ಮತ್ತು ತ್ರಿಛತ್ರದ ವರೆಗೆ ಬಂದಾಗ ಪೌಲನು ಅವರನ್ನು ನೋಡಿ ದೇವರಿಗೆ ಸ್ತೋತ್ರಮಾಡಿ ಧೈರ್ಯ ಗೊಂಡನು. ನಾವು ರೋಮ್ಗೆ ಬಂದಾಗ ಕಾವಲುಗಾರರ ನಾಯಕನಿಗೆ ಶತಾಧಿಪತಿಯು ಸೆರೆಯವರನ್ನು ಒಪ್ಪಿಸಿ ದನು; ಆದರೆ ತನ್ನನ್ನು ಕಾಯುತ್ತಿದ್ದ ಒಬ್ಬ ಸೈನಿಕನೊಂದಿಗೆ ಪೌಲನು ಪ್ರತ್ಯೇಕವಾಗಿ ಇರಬಹುದೆಂದು ಅಪ್ಪಣೆ ಹೊಂದಿದನು. ಮೂರು ದಿವಸಗಳಾದ ಮೇಲೆ ಪೌಲನು ಯೆಹೂದ್ಯರ ಮುಖ್ಯಸ್ಥರನ್ನು ಒಟ್ಟಾಗಿ ಕರೆದನು. ಅವರು ಕೂಡಿ ಬಂದಾಗ ಅವನು ಅವರಿಗೆ--ಜನರೇ, ಸಹೊ ದರರೇ, ಜನರಿಗಾಗಲೀ ನಮ್ಮ ಪಿತೃಗಳ ಆಚಾರಗಳಿ ಗಾಗಲೀ ವಿರೋಧವಾಗಿ ಯಾವದನ್ನೂ ಮಾಡ ದಿದ್ದರೂ ಯೆರೂಸಲೇಮಿನಿಂದ ರೋಮ್ನವರ ಕೆ ಅವರು ನನ್ನನ್ನು ಪರೀಕ್ಷಿಸಿ ನನ್ನಲ್ಲಿ ಮರಣದಂಡನೆಗೆ ಕಾರಣವೇನೂ ಇಲ್ಲದ್ದರಿಂದ ನನ್ನನ್ನು ಬಿಡಿಸಬೇಕೆಂದಿ ದ್ದರು. ಆದರೆ ಯೆಹೂದ್ಯರು ಅದಕ್ಕೆ ವಿರೋಧವಾಗಿ ಮಾತನಾಡಿದಾಗ ಕೈಸರನಿಗೆ ಹೇಳಿಕೊಳ್ಳುವಂತೆ ನಾನು ಒತ್ತಾಯ ಮಾಡಲ್ಪಟ್ಟೆನು; ಆದರೆ ನನ್ನ ಸ್ವದೇಶದವರ ಮೇಲೆ ತಪ್ಪು ಹೊರಿಸುವದಕ್ಕಾಗಿ ಅಲ್ಲ. ಈ ಕಾರಣ ದಿಂದಲೇ ನಿಮ್ಮನ್ನು ನೋಡುವದಕ್ಕೂ ನಿಮ್ಮೊಂದಿಗೆ ಮಾತನಾಡುವದಕ್ಕೂ ನಾನು ನಿಮ್ಮನ್ನು ಕರೆಯಿಸಿದೆನು; ಇಸ್ರಾಯೇಲ್ಯರ ನಿರೀಕ್ಷೆಯ ನಿಮಿತ್ತವಾಗಿ ನಾನು ಈ ಸರಪಣಿಯಿಂದ ಕಟ್ಟಲ್ಪಟ್ಟಿದ್ದೇನೆ ಎಂದು ಹೇಳಿದನು. ಆಗ ಅವರು ಅವನಿಗೆ--ನಿನ್ನ ವಿಷಯವಾಗಿ ಯೂದಾಯದಿಂದ ನಮಗೆ ಯಾವ ಪತ್ರಗಳು ಬಂದಿಲ್ಲ, ಇಲ್ಲವೆ ಇಲ್ಲಿ ಬಂದ ಸಹೋದರರಲ್ಲಿ ಯಾವನೂ ನಿನ್ನ ವಿಷಯವಾಗಿ ಕೆಟ್ಟದ್ದೇನೂ ತೋರಿಸ ಲಿಲ್ಲ ಮತ್ತು ಹೇಳಲಿಲ್ಲ. ಆದರೆ ನಿನ್ನ ಅಭಿಪ್ರಾಯ ವೇನೆಂದು ನಿನ್ನಿಂದಲೇ ಕೇಳುವದಕ್ಕೆ ನಾವು ಅಪೇಕ್ಷಿಸು ತ್ತೇವೆ; ಎಲ್ಲಾ ಕಡೆಯಲ್ಲಿಯೂ ಈ ಪಂಗಡದ ವಿಷಯ ದಲ್ಲಿ ಜನರು ವಿರುದ್ಧವಾಗಿ ಮಾತನಾಡುತ್ತಾರೆಂಬದು ನಮಗೆ ಗೊತ್ತದೆ ಎಂದು ಹೇಳಿದರು. ಅವರು ಅವನಿಗೆ ಒಂದು ದಿನವನ್ನು ನೇಮಿಸಿ ದಾಗ ಅನೇಕರು ಅವನ ನಿವಾಸಕ್ಕೆ ಬಂದರು; ಆಗ ಬೆಳಗಿನಿಂದ ಸಾಯಂಕಾಲದವರೆಗೆ ಮೋಶೆಯ ನ್ಯಾಯ ಪ್ರಮಾಣದಿಂದಲೂ ಪ್ರವಾದನೆಗಳಿಂದಲೂ ಯೇಸು ವಿನ ವಿಷಯದಲ್ಲಿ ಅವರನ್ನು ಒಡಂಬಡಿಸುತ್ತಾ ಅವರಿಗೆ ದೇವರ ರಾಜ್ಯವನ್ನು ವಿವರಿಸಿ ಸಾಕ್ಷೀಕರಿಸಿದನು. ಅವನು ಹೇಳಿದ ಮಾತುಗಳನ್ನು ಕೆಲವರು ನಂಬಿ ದರು; ಆದರೆ ಕೆಲವರು ನಂಬದೆ ಹೋದರು. ಹೀಗೆ ಅವರಲ್ಲಿ ವಿಭಾಗವಾದಾಗ ಪೌಲನು ಅವರಿಗೆ--ಯೆಶಾಯನು ಪವಿತ್ರಾತ್ಮನಿಂದ ನಮ್ಮ ಪಿತೃಗಳಿಗೆ ವಿಹಿತ ವಾಗಿ ಹೇಳಿದ್ದೇನಂದರೆ-- ನೀವು ಕೇಳಿದರೂ ಕೇಳಿ ಗ್ರಹಿಸುವದಿಲ್ಲ; ನೋಡಿದರೂ ನೋಡಿ ಕಾಣುವದಿಲ್ಲ; ಯಾಕಂದರೆ ಅವರು ತಮ್ಮ ಕಣ್ಣುಗಳಿಂದ ನೋಡಿ ಕಿವಿಗಳಿಂದ ಕೇಳಿ ಹೃದಯದಿಂದ ಗ್ರಹಿಸಿ ಮಾರ್ಪಾಟು ಹೊಂದದಂತೆಯೂ ನಾನು ಅವರನ್ನು ಸ್ವಸ್ಥ ಮಾಡ ದಂತೆಯೂ ಈ ಜನರ ಹೃದಯವು ಕೊಬ್ಬೇರಿತು; ಕೇಳುವದಕ್ಕೆ ಅವರ ಕಿವಿಗಳು ಮಂದವಾದವು; ಅವರು ತಮ್ಮ ಕಣ್ಣುಗಳನ್ನು ಮುಚ್ಚಿಕೊಂಡಿದ್ದಾರೆ ಆದಕಾರಣ ದೇವರ ರಕ್ಷಣೆಯು ಅನ್ಯಜನಾಂಗದವರಿಗೆ ಕಳುಹಿಸಲ್ಪಟ್ಟಿದೆ; ಅದನ್ನು ಅವರು ಕೇಳುವರು ಎಂಬದಾಗಿ ನಿಮಗೆ ತಿಳಿದಿರಲಿ ಅಂದನು. ಅವನು ಈ ಮಾತುಗಳ ನ್ನಾಡಿದಾಗ ಯೆಹೂದ್ಯರು ಹೊರಟುಹೊಗಿ ತಮ್ಮಲ್ಲಿ ತಾವು ಬಹಳವಾಗಿ ತರ್ಕಿಸಿಕೊಂಡರು. ಪೌಲನು ತನ್ನ ಸ್ವಂತ ಬಾಡಿಗೆಯ ಮನೆಯಲ್ಲಿ ಪೂರಾ ಎರಡು ವರಷವಿದ್ದು ತನ್ನ ಬಳಿಗೆ ಬರುವವರ ನ್ನೆಲ್ಲಾ ಸೇರಿಸಿಕೊಂಡನು.ಅವನು ತುಂಬಾ ಧೈರ್ಯ ದೊಂದಿಗೆ ದೇವರರಾಜ್ಯವನ್ನು ಸಾರುತ್ತಾ ಕರ್ತನಾದ ಯೇಸು ಕ್ರಿಸ್ತನ ವಿಷಯವಾದವುಗಳನ್ನು ಬೋಧಿಸುತ್ತಿ ದ್ದನು. ಯಾವ ಮನುಷ್ಯನೂಅವನಿಗೆ ಅಡ್ಡಿಮಾಡಲಿಲ್ಲ. ಅವನು ತುಂಬಾ ಧೈರ್ಯ ದೊಂದಿಗೆ ದೇವರರಾಜ್ಯವನ್ನು ಸಾರುತ್ತಾ ಕರ್ತನಾದ ಯೇಸು ಕ್ರಿಸ್ತನ ವಿಷಯವಾದವುಗಳನ್ನು ಬೋಧಿಸುತ್ತಿ ದ್ದನು. ಯಾವ ಮನುಷ್ಯನೂಅವನಿಗೆ ಅಡ್ಡಿಮಾಡಲಿಲ್ಲ.
- Psalm 76:10 ಕೀರ್ತನೆಗಳು 76:10ನಿಶ್ಚಯವಾಗಿ ಮನುಷ್ಯನ ಕೋಪವು ನಿನ್ನನ್ನು ಕೊಂಡಾಡುವದು; ಕೋಪಶೇಷವನ್ನು ನೀನು ಬಿಗಿ ಹಿಡಿದು ಕೊಳ್ಳುವಿ.
- Exodus 18:11 ವಿಮೋಚನಕಾಂಡ 18:11ಎಲ್ಲಾ ದೇವರು ಗಳಿಗಿಂತ ಕರ್ತನೇ ದೊಡ್ಡವನೆಂದು ಈಗ ನಾನು ತಿಳಿದುಕೊಂಡಿದ್ದೇನೆ. ಐಗುಪ್ತ್ಯರು ಗರ್ವಪಟ್ಟಿದ್ದರಿಂದ ಆತನು ಅವರನ್ನು ತಗ್ಗಿಸಿದನು ಅಂದನು.
- Acts 21:28–36 ಅಪೊಸ್ತಲರ ಕೃತ್ಯಗಳು 21:28–36ಇಸ್ರಾಯೇಲ್ ಜನರೇ, ಸಹಾಯ ಮಾಡಿರಿ; ಎಲ್ಲಾ ಕಡೆಯಲ್ಲಿ ಜನರಿಗೂ ಈ ನ್ಯಾಯ ಪ್ರಮಾಣಕ್ಕೂ ಈ ಸ್ಥಳಕ್ಕೂ ವಿರೋಧವಾಗಿ ಎಲ್ಲರಿಗೂ ಬೋಧಿಸುತ್ತಿದ್ದವನು ಈ ಮನುಷ್ಯನೇ; ಇದಲ್ಲದೆ ಗ್ರೀಕರನ್ನು ಸಹ ಈ ದೇವಾಲಯದೊಳಗೆ ಕರೆದು ಕೊಂಡು ಬಂದು ಈ ಪರಿಶುದ್ಧಸ್ಥಳವನ್ನು ಹೊಲೆ ಮಾಡಿದ್ದಾನೆ ಎಂದು ಕೂಗಿ (ಮುಂಚೆ ಎಫೆಸದವನಾದ ತ್ರೊಫಿಮನನ್ನು ಪೌಲನೊಂದಿಗೆ ಆ ಪಟ್ಟಣದಲ್ಲಿ ಅವರು ಕಂಡಿದ್ದರಿಂದ ಅವನನ್ನು ದೇವಾಲಯದೊಳಗೆ ಪೌಲನು ಕರೆದುಕೊಂಡು ಬಂದಿದ್ದನೆಂದು ಭಾವಿಸಿದರು). ಆಗ ಪಟ್ಟಣವೆಲ್ಲಾ ಕದಲಿಹೋಯಿತು. ಜನರು ಒಟ್ಟಾಗಿ ಓಡಿಬಂದು ಪೌಲನನ್ನು ಹಿಡಿದು ದೇವಾಲಯದ ಹೊರಗೆ ಎಳೆದುಕೊಂಡು ಬಂದ ಕೂಡಲೆ ಬಾಗಿಲುಗಳು ಮುಚ್ಚಲ್ಪಟ್ಟವು. ಅವರು ಅವನನ್ನು ಕೊಲ್ಲಬೇಕೆಂ ದಿದ್ದಾಗ ಯೆರೂಸಲೇಮಿನಲ್ಲೆಲ್ಲಾ ಗಲಭೆ ಆಯಿತೆಂದು ಪಟಾಲಮಿನ ಮುಖ್ಯ ನಾಯಕನಿಗೆ ವರದಿ ಬಂತು. ಅವನು ತಕ್ಷಣವೇ ಸೈನಿಕರನ್ನೂ ಶತಾಧಿಪತಿಗಳನ್ನೂ ತೆಗೆದುಕೊಂಡು ಅವರ ಬಳಿಗೆ ಓಡಿ ಬಂದನು. ಅವರು ಮುಖ್ಯ ನಾಯಕನನ್ನೂ ಸೈನಿಕರನ್ನೂ ನೋಡಿ ಪೌಲನನ್ನು ಹೊಡೆಯುವದನ್ನು ಬಿಟ್ಟರು. ಮುಖ್ಯ ನಾಯಕನು ಹತ್ತರಕ್ಕೆ ಬಂದು ಅವನನ್ನು ಹಿಡಿದು ಅವನಿಗೆ ಜೋಡು ಸರಪಣಿಯಿಂದ ಕಟ್ಟಬೇಕೆಂದು ಅಪ್ಪಣೆ ಕೊಟ್ಟು--ಅವನು ಯಾರು? ಏನು ಮಾಡಿದ್ದಾನೆ ಎಂದು ಕೇಳಿದನು. ಆಗ ಸಮೂಹದಲ್ಲಿ ಕೆಲವರು ಒಂದು ವಿಧವಾಗಿ ಬೇರೆ ಕೆಲವರು ಇನ್ನೊಂದು ವಿಧವಾಗಿ ಕೂಗಿದಾಗ ಆ ಗದ್ದಲದ ನಿಜಸ್ಥಿತಿಯನ್ನು ಅವನು ತಿಳಿಯಲಾರದೆ ಅವನನ್ನು ಕೋಟೆಯೊಳಗೆ ತೆಗೆದುಕೊಂಡು ಹೋಗಬೇಕೆಂದು ಅಪ್ಪಣೆಕೊಟ್ಟನು. ಅವನು ಮೆಟ್ಟಲುಗಳ ಮೇಲೆ ಬಂದಾಗ ಜನರ ಬಲಾತ್ಕಾರದ ನಿಮಿತ್ತ ಸೈನಿಕರು ಅವನನ್ನು ಹೊತ್ತು ಕೊಂಡು ಹೋದರು. ಯಾಕಂದರೆ ಗುಂಪಾಗಿ ಕೂಡಿದ ಜನರು ಹಿಂದಿನಿಂದ ಬಂದು--ಅವನನ್ನು ತೆಗೆದುಹಾಕು ಎಂದು ಕೂಗುತ್ತಿದ್ದರು.
Original words (Greek)
- But · G1161δέ dé
- would · G1014βούλομαι boúlomai
- ye · G5209ὑμᾶς hymâs
- understand · G1097γινώσκω ginṓskō
- brethren · G80ἀδελφός adelphós
- that · G3754ὅτι hóti
- things · G3588ὁ ho
- unto · G2596κατά katá
- me · G1691ἐμέ emé
- out · G2064ἔρχομαι érchomai
- rather · G3123μᾶλλον mâllon
- unto · G1519εἰς eis
- furtherance · G4297προκοπή prokopḗ
- gospel · G2098εὐαγγέλιον euangélion