Proverbs · chapter 11 · verse 22
Proverbs 11:22 in Kannada
ಹಂದಿಯ ಮೂಗಿನಲ್ಲಿರುವ ಬಂಗಾರದ ಒಡವೆಯು ಹೇಗೋ ಹಾಗೆಯೇ ವಿವೇಕವಿಲ್ಲದ ಸುಂದರವಾದ ಸ್ತ್ರೀಯು ಇರುವಳು.
Handiya mooginalliruva bangaarada odaveyu hego haageye vivekavillada sundaravaada streeyu iruvalu.
Proverbs 11:22 in English
- King James Version (KJV)
- [As] a jewel of gold in a swine’s snout, [so is] a fair woman which is without discretion.
- World English Bible (WEB)
- Like a gold ring in a pig’s snout, is a beautiful woman who lacks discretion.
- American Standard Version (ASV)
- [As] a ring of gold in a swine’s snout, [So is] a fair woman that is without discretion.
- Bible in Basic English (BBE)
- Like a ring of gold in the nose of a pig, is a beautiful woman who has no sense.
- Darby Translation (DBY)
- A fair woman who is without discretion, is [as] a gold ring in a swine's snout.
- Webster's Bible (WBS)
- [As] a jewel of gold in a swine's snout, [so is] a fair woman who is without discretion.
- Young's Literal Translation (YLT)
- A ring of gold in the nose of a sow — A fair woman and stubborn of behaviour.
Read in context
- 20ಮೂರ್ಖ ಹೃದಯವುಳ್ಳವರು ಕರ್ತನಿಗೆ ಅಸಹ್ಯವಾದವರು; ತಮ್ಮ ಮಾರ್ಗದಲ್ಲಿ ಯಥಾರ್ಥವಾಗಿ ಇರುವವರು ಆತನ ಆನಂದವಾಗಿ ದ್ದಾರೆ.
- 21ಕೈಗೆ ಕೈ ಕೊಟ್ಟರೂ ದುಷ್ಟನು ಶಿಕ್ಷಿಸಲ್ಪಡದೆ ಇರುವದಿಲ್ಲ; ನೀತಿವಂತರ ವಂಶವು ತಪ್ಪಿಸಿಕೊಳ್ಳುವದು.
- 22ಹಂದಿಯ ಮೂಗಿನಲ್ಲಿರುವ ಬಂಗಾರದ ಒಡವೆಯು ಹೇಗೋ ಹಾಗೆಯೇ ವಿವೇಕವಿಲ್ಲದ ಸುಂದರವಾದ ಸ್ತ್ರೀಯು ಇರುವಳು.
- 23ನೀತಿವಂತರು ಒಳ್ಳೇಯದನ್ನು ಮಾತ್ರ ಅಪೇಕ್ಷಿಸುತ್ತಾರೆ; ದುಷ್ಟರ ಅಪೇಕ್ಷೆಯು ಕೋಪ ವಾಗಿದೆ.
- 24ಚದುರಿಸಿದಾಗ್ಯೂ ವೃದ್ಧಿಯಾಗುತ್ತದೆ; ಬೇಕಾದದ್ದಕ್ಕಿಂತ ಹೆಚ್ಚಿನದನ್ನು ಬಿಗಿಹಿಡಿಯುವಂಥದ್ದು ಬಡತನಕ್ಕೆ ನಡಿಸುತ್ತದೆ.
Cross references
- 1 Peter 3:3–4 1 ಪೇತ್ರನು 3:3–4ಜಡೆ ಹೆಣೆದುಕೊ ಳ್ಳುವದೂ ಚಿನ್ನದ ಒಡವೆಗಳನ್ನು ಇಟ್ಟುಕೊಳ್ಳುವದೂ ಇಲ್ಲವೆ ಉಡಿಗೆಗಳನ್ನು ಧರಿಸಿಕೊಳ್ಳುವದೂ ಈ ಹೊರ ಗಣ ಅಲಂಕಾರವು ಬೇಡ. ಆದರೆ ಸಾತ್ವಿಕವಾದ ಶಾಂತ ಮನಸ್ಸು ಎಂಬ ಹೃದಯದ ಮರೆಯಾದ ಮನುಷ್ಯನ ಅಲಂಕಾರವೇ ನಿಮಗಿರಲಿ. ಇದು ಅಕ್ಷಯ ವಾಗಿದ್ದು ದೇವರ ದೃಷ್ಟಿಗೆ ಬಹು ಬೆಲೆಯುಳ್ಳದ್ದಾಗಿದೆ.
- Proverbs 31:30 ಜ್ಞಾನೋಕ್ತಿಗಳು 31:30ಸೌಂದ ರ್ಯವು ಮೋಸಕರ; ಲಾವಣ್ಯವು ವ್ಯರ್ಥ; ಕರ್ತನಿಗೆ ಭಯಪಡುವವಳು ಹೊಗಳಲ್ಪಡುವಳು.ಆಕೆಯ ಕೈಕೆಲಸದ ಪ್ರತಿಫಲವನ್ನು ಸಲ್ಲಿಸಿರಿ; ದ್ವಾರಗಳಲ್ಲಿ ಆಕೆಯ ಕಾರ್ಯಗಳು ಆಕೆಯನ್ನು ಹೊಗಳಲಿ.
- Nahum 3:4–6 ನಹೂಮ 3:4–6ಸೌಂದರ್ಯವುಳ್ಳ ಮಾಟಗಾರ್ತಿಯಾದ ಸೂಳೆಯ ಸೂಳೆತನಗಳು ಬಹಳ; ಅವಳು ತನ್ನ ಸೂಳೆತನಗಳಿಂದ ಜನಾಂಗಗಳನ್ನೂ ತನ್ನ ಮಾಟಗಳಿಂದ ಗೋತ್ರಗಳನ್ನೂ ಮಾರಿದಳಲ್ಲಾ? ಸೈನ್ಯಗಳ ಕರ್ತನು ಹೇಳುವದೇ ನಂದರೆ--ಇಗೋ, ನಾನು ನಿನಗೆ ವಿರೋಧವಾಗಿ ದ್ದೇನೆ; ನಿನ್ನ ಸೆರಗುಗಳನ್ನು ನಿನ್ನ ಮುಖದ ಮೇಲೆ ಎತ್ತಿ ಜನಾಂಗಗಳಿಗೆ ನಿನ್ನ ನಾಚಿಕೆಯನ್ನೂ ರಾಜ್ಯಗಳಿಗೆ ನಿನ್ನ ನಿಂದೆಯ ಬೆತ್ತಲೆತನವನ್ನೂ ತೋರಿಸುತ್ತೇನೆ. ಅಸಹ್ಯವಾದವುಗಳನ್ನು ನಿನ್ನ ಮೇಲೆ ಹಾಕಿ ನಿನ್ನನ್ನು ನೀಚಳನ್ನಾಗಿ ಮಾಡಿ ನಿನ್ನನ್ನು ನೋಟಕ್ಕೆ ಇಡುತ್ತೇನೆ.
- Proverbs 9:13 ಜ್ಞಾನೋಕ್ತಿಗಳು 9:13ಬುದ್ಧಿಹೀನಳಾದ ಸ್ತ್ರೀಯು ಕೂಗಾಟದವಳು. ಅವಳು ಅಜ್ಞಾನಿ; ಏನೂ ತಿಳಿಯದವಳು.
- Proverbs 7:10 ಜ್ಞಾನೋಕ್ತಿಗಳು 7:10ಇಗೋ, ವೇಶ್ಯಳ ವಸ್ತ್ರವನ್ನು ಧರಿಸಿ ಕೊಂಡು ಒಬ್ಬ ಕಪಟ ಸ್ತ್ರೀಯು ಅವನನ್ನು ಎದುರು ಗೊಂಡಳು.
- 2 Peter 2:22 2 ಪೇತ್ರನು 2:22ನಾಯಿ ತಾನು ಕಕ್ಕಿದ್ದನ್ನು ನೆಕ್ಕುವದಕ್ಕೆ ತಿರುಗಿ ಕೊಂಡಿತು ಮತ್ತು ತೊಳೆದ ಹಂದಿ ಕೆಸರಿನಲ್ಲಿ ಹೊರಳಾಡುವದಕ್ಕೆ ತಿರುಗಿಕೊಂಡಿತು ಎಂಬ ನಿಜವಾದ ಗಾದೆಗೆ ಸರಿಯಾಗಿ ಅವರಿಗೆ ಸಂಭವಿಸಿತು.
- Genesis 24:47 ಆದಿಕಾಂಡ 24:47ನಾನು ಆಕೆಗೆ--ನೀನು ಯಾರ ಮಗಳು ಎಂದು ಕೇಳಿದೆನು. ಅದಕ್ಕವಳು--ನಾಹೋರ ನಿಗೆ ಮಿಲ್ಕಳು ಹೆತ್ತ ಮಗನಾದ ಬೆತೊವೇಲನ ಮಗಳು ಅಂದಳು. ಆಗ ನಾನು ಆಕೆಗೆ ವಾಲೆಯನ್ನೂ ಕೈಗಳಿಗೆ ಕಡಗಗಳನ್ನೂ ಇಟ್ಟು
- Ezekiel 16:15–22 ಯೆಹೆಜ್ಕೇಲನು 16:15–22ಆದರೆ ನೀನು ನಿನ್ನ ಸೌಂದರ್ಯದಲ್ಲಿ ಭರವಸ ವಿಟ್ಟು ನಿನ್ನ ಕೀರ್ತಿಯ ನಿಮಿತ್ತವಾಗಿ ಸೂಳೆತನ ಮಾಡಿದೆ; ಹಾದುಹೋಗುವ ಪ್ರತಿಯೊಬ್ಬನ ಸಂಗಡ ಮಿತಿವಿಾರಿ ಹಾದರತನ ಮಾಡಿದೆ; ಒಬ್ಬೊಬ್ಬನಿಗೂ ಒಳಗಾದೆ. ನಿನ್ನ ವಸ್ತ್ರಗಳನ್ನು ತೆಗೆದುಕೊಂಡು ಚಿತ್ರ ವಿಚಿತ್ರ ಮಾಡಿ ಅಲಂಕರಿಸಿಕೊಂಡು ಪೂಜಾಸ್ಥಳದಲ್ಲಿ ವ್ಯಭಿಚಾರ ಮಾಡಿದೆ, ಇದು ನಡೆಯತಕ್ಕದ್ದಲ್ಲ ಮತ್ತು ನಡೆಯಬಾರದಂಥ ಕೆಲಸವಾಗಿದೆ. ಇದಲ್ಲದೆ ನಾನು ನಿನಗೆ ಬೆಳ್ಳಿ ಬಂಗಾರದಿಂದ ಮಾಡಿಸಿಕೊಟ್ಟಿದ್ದ ನಿನ್ನ ಅಂದವಾದ ಆಭರಣಗಳನ್ನು ತೆಗೆದು ಅವುಗಳಿಂದ ಪುರುಷ ರೂಪಗಳನ್ನು ಮಾಡಿಕೊಂಡು ಅದರ ಸಂಗಡ ವ್ಯಭಿಚಾರ ಮಾಡಿದಿ. ನಿನ್ನ ಕಸೂತಿಯ ಬಟ್ಟೆಗಳನ್ನು ತೆಗೆದು ಅವರಿಗೆ ಹೊದಿಸಿ ನನ್ನ ಎಣ್ಣೆಯನ್ನೂ ಧೂಪ ವನ್ನೂ ಅವರ ಮುಂದೆ ಇಟ್ಟೆ. ನಾನು ನಿನಗೆ ನನ್ನ ಆಹಾರವನ್ನೂ ನಿನಗೆ ನಯವಾದ ಹಿಟ್ಟನ್ನೂ ಎಣ್ಣೆ ಮತ್ತು ಜೇನುಗಳನ್ನೂ ಸುವಾಸನೆಗಾಗಿ ಕೊಟ್ಟೆ. ಆದರೆ ನೀನು ಅವುಗಳನ್ನು ಅವರ ಮುಂದೆ ಇಟ್ಟೆ ಎಂದು ದೇವರಾದ ಕರ್ತನು ಹೇಳುತ್ತಾನೆ. ಇದಾದ ಮೇಲೆ ನನಗೆ ಹುಟ್ಟಿದ್ದ ನನ್ನ ಕುಮಾರರನ್ನೂ ಕುಮಾರ್ತೆ ಯರನ್ನೂ ಅವರ ಆಹಾರಕ್ಕಾಗಿ ಅರ್ಪಿಸಿದಿ. ಈ ನಿನ್ನ ವ್ಯಭಿಚಾರ ಸಾಮಾನ್ಯವಾದದ್ದಲ್ಲ, ನೀನು ನನ್ನ ಮಕ್ಕಳನ್ನು ಕೊಂದು ಅವರಿಗೆ ಬೆಂಕಿಯನ್ನು ದಾಟುವ ಹಾಗೆ ಒಪ್ಪಿಸಿದಿಯಲ್ಲಾ; ನಿನ್ನ ಎಲ್ಲಾ ಅಸಹ್ಯಗಳ ಲ್ಲಿಯೂ ನಿನ್ನ ವ್ಯಭಿಚಾರಗಳಲ್ಲಿಯೂ ನಿನ್ನ ಎಳೆಯ ಪ್ರಾಯದ ದಿವಸಗಳನ್ನು ನೀನು ಬರೀ ಬೆತ್ತಲೆಯಾಗಿ ನಿನ್ನ ರಕ್ತದಲ್ಲಿ ಹೊರಳಾಡುತ್ತಿದ್ದದ್ದನ್ನು ನೀನು ಜ್ಞಾಪಕ ಮಾಡಲಿಲ್ಲ.