Matthew · chapter 5 · verse 7
Matthew 5:7 in Kannada
ಕರುಣೆಯುಳ್ಳವರು ಧನ್ಯರು; ಯಾಕಂದರೆ ಅವರು ಕರುಣೆ ಹೊಂದುವರು.
Karuneyullavaru dhanyaru; yaakandare avaru karune honduvaru.
Matthew 5:7 in English
- King James Version (KJV)
- Blessed [are] the merciful: for they shall obtain mercy.
- World English Bible (WEB)
- Blessed are the merciful, for they shall obtain mercy.
- American Standard Version (ASV)
- Blessed are the merciful: for they shall obtain mercy.
- Bible in Basic English (BBE)
- Happy are those who have mercy: for they will be given mercy.
- Darby Translation (DBY)
- Blessed the merciful, for they shall find mercy.
- Webster's Bible (WBS)
- Blessed [are] the merciful: for they shall obtain mercy.
- Young's Literal Translation (YLT)
- 'Happy the kind — because they shall find kindness.
Read in context
- 5ಸಾತ್ವಿಕರು ಧನ್ಯರು; ಯಾಕಂದರೆ ಅವರು ಭೂಮಿಯನ್ನು ಬಾಧ್ಯವಾಗಿ ಹೊಂದುವರು.
- 6ನೀತಿಗೋಸ್ಕರ ಹಸಿದು ಬಾಯಾರಿದವರು ಧನ್ಯರು; ಯಾಕಂದರೆ ಅವರು ತೃಪ್ತಿ ಹೊಂದುವರು.
- 7ಕರುಣೆಯುಳ್ಳವರು ಧನ್ಯರು; ಯಾಕಂದರೆ ಅವರು ಕರುಣೆ ಹೊಂದುವರು.
- 8ಶುದ್ಧ ಹೃದಯವುಳ್ಳವರು ಧನ್ಯರು; ಯಾಕಂದರೆ ಅವರು ದೇವರನ್ನು ನೋಡುವರು.
- 9ಸಮಾಧಾನ ಮಾಡುವವರು ಧನ್ಯರು; ಯಾಕಂದರೆ ಅವರು ದೇವರ ಮಕ್ಕಳೆಂದು ಕರೆಯಲ್ಪಡುವರು.
Cross references
- Matthew 6:14–15 ಮತ್ತಾಯನು 6:14–15ಆದದರಿಂದ ನೀವು ಮನುಷ್ಯರ ಅಪರಾಧ ಗಳನ್ನು ಕ್ಷಮಿಸುವದಾದರೆ ಪರಲೋಕದ ನಿಮ್ಮ ತಂದೆಯು ಸಹ ನಿಮ್ಮನ್ನು ಕ್ಷಮಿಸುವನು. ನೀವು ಮನುಷ್ಯರ ಅಪರಾಧಗಳನ್ನು ಕ್ಷಮಿಸದೆ ಹೋದರೆ ನಿಮ್ಮ ತಂದೆಯೂ ನಿಮ್ಮ ಅಪರಾಧಗಳನ್ನು ಕ್ಷಮಿಸು ವದಿಲ್ಲ.
- 2 Samuel 22:26 2 ಸಮುವೇಲನು 22:26ಕೃಪೆಯುಳ್ಳವನಿಗೆ ಕೃಪೆಯುಳ್ಳವ ನಾಗಿರುವಿ; ಸಂಪೂರ್ಣನಾದ ಮನುಷ್ಯನಿಗೆ ಸಂಪೂರ್ಣನಾಗಿರುವಿ.
- Matthew 18:33–35 ಮತ್ತಾಯನು 18:33–35ನಾನು ನಿನ್ನ ಮೇಲೆ ಕರುಣೆ ತೋರಿಸಿದಂತೆಯೇ ನೀನು ಸಹ ನಿನ್ನ ಜೊತೇ ಸೇವಕನ ಮೇಲೆ ಕರುಣೆಯನ್ನು ತೋರಿಸಬೇಕಾಗಿ ತ್ತಲ್ಲವೇ ಎಂದು ಹೇಳಿದನು. ಅವನ ಧಣಿಯು ಕೋಪಗೊಂಡು ತನಗೆ ಕೊಡಬೇಕಾದ ಸಾಲವನ್ನೆಲ್ಲಾ ತೀರಿಸುವ ತನಕ ಅವನನ್ನು ಸಂಕಟಪಡಿಸುವವರಿಗೆ ಒಪ್ಪಿಸಿದನು.ಅದರಂತೆಯೇ ನಿಮ್ಮಲ್ಲಿ ಪ್ರತಿಯೊ ಬ್ಬನು ಹೃದಯಪೂರ್ವಕವಾಗಿ ತನ್ನ ಸಹೋದರನ ತಪ್ಪುಗಳನ್ನು ಕ್ಷಮಿಸದೆಹೋದರೆ ಪರಲೋಕದಲ್ಲಿರುವ ನನ್ನ ತಂದೆಯೂ ನಿಮಗೆ ಹಾಗೆಯೇ ಮಾಡುವನು ಅಂದನು. ಅದರಂತೆಯೇ ನಿಮ್ಮಲ್ಲಿ ಪ್ರತಿಯೊ ಬ್ಬನು ಹೃದಯಪೂರ್ವಕವಾಗಿ ತನ್ನ ಸಹೋದರನ ತಪ್ಪುಗಳನ್ನು ಕ್ಷಮಿಸದೆಹೋದರೆ ಪರಲೋಕದಲ್ಲಿರುವ ನನ್ನ ತಂದೆಯೂ ನಿಮಗೆ ಹಾಗೆಯೇ ಮಾಡುವನು ಅಂದನು.
- Psalm 18:25 ಕೀರ್ತನೆಗಳು 18:25ನೀನು ಕರುಣೆಯು ಳ್ಳವನಿಗೆ ಕರುಣೆಯನ್ನು ತೋರಿಸುವಿ; ಸಂಪೂರ್ಣ ನಾದ ಮನುಷ್ಯನಿಗೆ ಸಂಪೂರ್ಣನಾಗಿರುವಿ.
- James 2:13 ಯಾಕೋಬನು 2:13ಕರುಣೆ ತೋರಿಸದೆ ಇರುವವನಿಗೆ ನ್ಯಾಯತೀರ್ಪಿನಲ್ಲಿ ಕರುಣೆಯು ತೋರಿಸಲ್ಪಡುವದಿಲ್ಲ. ಕರುಣೆಯು ನ್ಯಾಯತೀರ್ಪಿಗಿಂತ ಮೇಲಾಗಿ ಹಿಗ್ಗುತ್ತದೆ.
- James 3:17 ಯಾಕೋಬನು 3:17ಆದರೆ ಮೇಲಣಿಂದ ಬರುವ ಜ್ಞಾನವು ಮೊದಲು ನಿರ್ಮಲವಾದದ್ದು, ಆಮೇಲೆ ಸಮಾಧಾನಕರವಾದದ್ದು, ವಿನಯವುಳ್ಳದ್ದು, ಸುಲಭವಾಗಿ ಒಪ್ಪಿಕೊಳ್ಳುವಂಥದು, ಕರುಣೆಯಿಂದಲೂ ಒಳ್ಳೇ ಫಲಗಳಿಂದಲೂ ತುಂಬಿರುವಂಥದ್ದು ಆಗಿದೆ; ಅದರಲ್ಲಿ ಪಕ್ಷಪಾತವೂ ಕಪಟವೂ ಇಲ್ಲ.ಸಮಾಧಾನ ಪಡಿಸುವವರಿಗೆ ಸಮಾಧಾನದಲ್ಲಿ ನೀತಿಯ ಫಲವು ಬಿತ್ತಲ್ಪಡುತ್ತದೆ.
- Colossians 3:12 ಕೊಲೊಸ್ಸೆಯವರಿಗೆ 3:12ಆದದರಿಂದ ನೀವು ದೇವರಿಂದ ಆರಿಸಿಕೊಂಡ ವರೂ ಪರಿಶುದ್ಧರೂ ಪ್ರಿಯರೂ ಆಗಿರುವವರಿಗೆ ತಕ್ಕಂತೆ ಕನಿಕರ ದಯೆ ದೀನಮನಸ್ಸು ಸಾತ್ವಿಕತ್ವ ದೀರ್ಘಶಾಂತಿ ಎಂಬ ಸದ್ಗುಣಗಳನ್ನು ಧರಿಸಿಕೊಳ್ಳಿರಿ.
- Micah 6:8 ಮೀಕ 6:8ಮನುಷ್ಯನೇ, ಉತ್ತಮವಾದ ದ್ದನ್ನು ನಿನಗೆ ಆತನು ತಿಳಿಸಿದ್ದಾನೆ; ಹೌದು, ನ್ಯಾಯ ವನ್ನು ಮಾಡುವದೂ ಕರುಣೆಯನ್ನು ಪ್ರೀತಿಮಾಡು ವದೂ ನಿನ್ನ ದೇವರ ಸಂಗಡ ವಿನಯವಾಗಿ ನಡ ಕೊಳ್ಳುವದೂ ಇದನ್ನೇ ಹೊರತು ಕರ್ತನು ಇನ್ನೇನು ನಿನ್ನಿಂದ ಕೇಳುತ್ತಾನೆ.
- Luke 6:35 ಲೂಕನು 6:35ಆದರೆ ನೀವು ನಿಮ್ಮ ವೈರಿಗಳನ್ನು ಪ್ರೀತಿಸಿರಿ, ಮತ್ತು ಒಳ್ಳೇದನ್ನು ಮಾಡಿರಿ. ಏನನ್ನೂ ತಿರಿಗಿ ನಿರೀಕ್ಷಿಸದೆ ಸಾಲ ಕೊಡಿರಿ; ಆಗ ನಿಮ್ಮ ಬಹುಮಾನವು ದೊಡ್ಡದಾಗಿರುವದು; ನೀವು ಮಹೋ ನ್ನತನ ಮಕ್ಕಳಾಗಿರುವಿರಿ; ಯಾಕಂದರೆ ಆತನು ಕೃತಜ್ಞತೆ ಯಿಲ್ಲದವರಿಗೂ ಕೆಟ್ಟವರಿಗೂ ದಯೆಯುಳ್ಳವನಾಗಿ ದ್ದಾನೆ,
- Proverbs 19:17 ಜ್ಞಾನೋಕ್ತಿಗಳು 19:17ಬಡವರಿಗೆ ದಯೆತೋರಿಸು ವವನು. ಕರ್ತನಿಗೆ ಸಾಲ ಕೊಡುತ್ತಾನೆ; ಅವನು ಕೊಟ್ಟದ್ದನ್ನು ಆತನು ತಿರುಗಿ ಅವನಿಗೆ ಕೊಡುತ್ತಾನೆ.
- Daniel 4:27 ದಾನಿಯೇಲನು 4:27ಆದದರಿಂದ ಓ ಅರಸನೇ, ನನ್ನ ಆಲೋಚನೆಯು ನಿನಗೆ ಸಮ್ಮತಿ ಯಾಗಿ ನಿನ್ನ ಪಾಪಗಳನ್ನು ನೀತಿಯಿಂದ ಅಳಿಸಿ ನಿನ್ನ ಅನ್ಯಾಯಗಳನ್ನು ಬಡವರಿಗೆ ದಯೆ ತೋರಿಸುವದ ರಿಂದ ಬಿಟ್ಟುಬಿಡು. ಒಂದು ವೇಳೆ ಇದರಿಂದ ನಿನ್ನ ನೆಮ್ಮದಿಯು ಹೆಚ್ಚಾಗಬಹುದು.