Proverbs · chapter 11 · verse 28
Proverbs 11:28 in Kannada
ತನ್ನ ಐಶ್ವರ್ಯವನ್ನು ನಂಬಿದವನು ಬಿದ್ದುಹೋಗುವನು; ನೀತಿವಂತರು ಕೊಂಬೆಯ ಹಾಗೆ ಚಿಗುರುವರು.
Tanna aishvaryavannu nambidavanu bidduhoguvanu; neetivantaru kombeya haage chiguruvaru.
Proverbs 11:28 in English
- King James Version (KJV)
- He that trusteth in his riches shall fall: but the righteous shall flourish as a branch.
- World English Bible (WEB)
- He who trusts in his riches will fall, but the righteous shall flourish as the green leaf.
- American Standard Version (ASV)
- He that trusteth in his riches shall fall; But the righteous shall flourish as the green leaf.
- Bible in Basic English (BBE)
- He who puts his faith in wealth will come to nothing; but the upright man will be full of growth like the green leaf.
- Darby Translation (DBY)
- He that trusteth in his riches shall fall; but the righteous shall flourish as a leaf.
- Webster's Bible (WBS)
- He that trusteth in his riches shall fall: but the righteous shall flourish as a branch.
- Young's Literal Translation (YLT)
- Whoso is confident in his wealth he falleth, And as a leaf, the righteous flourish.
Read in context
- 26ಧಾನ್ಯವನ್ನು ಬಿಗಿಹಿಡಿಯುವವನನ್ನು ಜನರು ಶಪಿಸುವರು; ಅದನ್ನು ಮಾರುವವನ ತಲೆಯ ಮೇಲೆ ಆಶೀರ್ವಾದವು ನೆಲೆಯಾಗಿರುವದು.
- 27ಒಳ್ಳೇದನ್ನು ಸೂಕ್ಷ್ಮವಾಗಿ ಹುಡುಕುವವನು ದಯೆಯನ್ನು ಹೊಂದು ತ್ತಾನೆ; ಆದರೆ ಕೇಡನ್ನು ಹುಡುಕುವವನಿಗೆ ಕೇಡೇ ಆಗುವದು.
- 28ತನ್ನ ಐಶ್ವರ್ಯವನ್ನು ನಂಬಿದವನು ಬಿದ್ದುಹೋಗುವನು; ನೀತಿವಂತರು ಕೊಂಬೆಯ ಹಾಗೆ ಚಿಗುರುವರು.
- 29ತನ್ನ ಮನೆಯವರನ್ನು ಬಾಧಿಸುವವನು ಗಾಳಿಯನ್ನು ಬಾಧ್ಯವಾಗಿ ಹೊಂದುವನು; ಜ್ಞಾನವುಳ್ಳ ಹೃದಯದವನಿಗೆ ಅವಿವೇಕಿಯು ಸೇವಕನಾಗಿರುವನು.
- 30ನೀತಿವಂತರ ಫಲವು ಜೀವವೃಕ್ಷ; ಆತ್ಮಗಳನ್ನು ಗೆಲ್ಲು ವವನು ಜ್ಞಾನಿಯಾಗಿದ್ದಾನೆ.ಇಗೋ, ಭೂಮಿಯ ಮೇಲೆ ನೀತಿವಂತರು ಪ್ರತಿಫಲವನ್ನು ಹೊಂದುವರು; ದುಷ್ಟನೂ ಪಾಪಿಯೂ ಎಷ್ಟೋ ಹೆಚ್ಚಾಗಿ ಪ್ರತಿಫಲ ವನ್ನು ಹೊಂದುತ್ತಾರೆ.
Cross references
- 1 Timothy 6:17 1 ತಿಮೊಥೆಯನಿಗೆ 6:17ಈ ಲೋಕದಲ್ಲಿ ಐಶ್ವರ್ಯವುಳ್ಳವರು ಅಹಂಕಾರಿ ಗಳಾಗಿರದೆ, ಅಸ್ಥಿರವಾದ ಐಶ್ವರ್ಯದ ಮೇಲೆ ಭರವಸ ವನ್ನಿಡದೆ ನಮ್ಮ ಅನುಭೋಗಕ್ಕೋಸ್ಕರ ನಮಗೆ ಎಲ್ಲ ವನ್ನೂ ಹೇರಳವಾಗಿ ದಯಪಾಲಿಸುವ ಜೀವವುಳ್ಳ ದೇವರ ಮೇಲೆ ಭರವಸವನ್ನಿಡಬೇಕೆಂತಲೂ
- Jeremiah 17:8 ಯೆರೆಮೀಯ 17:8ಅವನು ನೀರಿನ ಬಳಿಯಲ್ಲಿ ನೆಡಲ್ಪಟ್ಟು ಹೊಳೆಯ ಬಳಿಯಲ್ಲಿ ತನ್ನ ಬೇರುಗಳನ್ನು ಹರಡಿರುವ ಮರದ ಹಾಗಿರುವನು; ಧಗೆಯು ಬರುವಾಗ ಅದು ಬಾಡಿಹೋಗದೆ ಅದರ ಎಲೆ ಹಸುರಾಗಿರುವದು; ಕ್ಷಾಮದ ವರುಷದಲ್ಲಿ ಅದಕ್ಕೆ ಚಿಂತೆ ಇರುವದಿಲ್ಲ ಇಲ್ಲವೆ ಫಲಫಲಿಸುವದನ್ನು ನಿಲ್ಲಿಸುವದಿಲ್ಲ.
- Psalm 52:7–8 ಕೀರ್ತನೆಗಳು 52:7–8ಇಗೋ, ದೇವರನ್ನು ತನ್ನ ಬಲವಾಗಿ ಆಶ್ರಯಿಸದೆ ತನ್ನ ಅಧಿಕವಾದ ಐಶ್ವರ್ಯದಲ್ಲಿ ಭರವಸವಿಟ್ಟು ತನ್ನ ಕೆಟ್ಟತನದಲ್ಲಿ ಬಲಗೊಂಡ ಮನುಷ್ಯನು ಇವನೇ. ಆದರೆ ನಾನು ದೇವರ ಆಲಯದಲ್ಲಿರುವ ಹಸು ರಾದ ಇಪ್ಪೇ ಮರದಹಾಗೆ ಇದ್ದೇನೆ. ದೇವರ ಕರು ಣೆಯಲ್ಲಿ ಯುಗಯುಗಾಂತರಗಳಲ್ಲಿಯೂ ನಾನು ಭರವಸವಿಟ್ಟಿದ್ದೇನೆ.ನಾನು ಎಂದೆಂದಿಗೂ ನಿನ್ನನ್ನು ಕೊಂಡಾಡುವೆನು; ನೀನು ಅದನ್ನು ಮಾಡಿದಿ; ನಿನ್ನ ಹೆಸರನ್ನು ನಿರೀಕ್ಷಿಸುವೆನು; ನಿನ್ನ ಪರಿಶುದ್ಧರ ಮುಂದೆ ಅದು ಒಳ್ಳೇದಾಗಿದೆ.
- Psalm 1:3 ಕೀರ್ತನೆಗಳು 1:3ಅವನು ತನ್ನ ಕಾಲದಲ್ಲಿ ತನ್ನ ಫಲಕೊಡುವಂಥ, ಎಲೆ ಬಾಡದಂಥ, ನೀರಿನ ಹೊಳೆಗಳ ಬಳಿಯಲ್ಲಿ ನೆಡಲ್ಪಟ್ಟಂಥ ಮರದ ಹಾಗಿರುವನು; ಅವನು ಮಾಡು ವದೆಲ್ಲಾ ಸಫಲವಾಗುವದು.
- Psalm 92:12–14 ಕೀರ್ತನೆಗಳು 92:12–14ನೀತಿವಂತನು ಖರ್ಜೂರ ಮರದ ಹಾಗೆ ಚಿಗುರುವನು; ಲೆಬನೋನಿ ನಲ್ಲಿರುವ ದೇವದಾರಿನ ಹಾಗೆ ಬೆಳೆಯುವನು. ಅವರು ಕರ್ತನ ಆಲಯದಲ್ಲಿ ನೆಡಲ್ಪಟ್ಟು ನಮ್ಮ ದೇವರ ಅಂಗಳಗಳಲ್ಲಿ ವೃದ್ಧಿಯಾಗುವರು. ಮುದಿ ಪ್ರಾಯದಲ್ಲಿಯೂ ಫಲ ಫಲಿಸುವರು. ಅವರು ಪುಷ್ಟಿಯಾಗಿ ವೃದ್ಧಿಯಾಗುವರು.ಕರ್ತನು ಯಥಾರ್ಥನೂ ನನ್ನ ಬಂಡೆಯೂ ಆಗಿದ್ದಾನೆ; ಆತನಲ್ಲಿ ಅನೀತಿ ಇರುವದಿಲ್ಲ.
- Mark 10:24–25 ಮಾರ್ಕನು 10:24–25ಆಗ ಶಿಷ್ಯರು ಆತನ ಮಾತುಗಳಿಗೆ ಬೆರಗಾದರು; ಆದರೆ ಯೇಸು ತಿರಿಗಿ ಉತ್ತರಕೊಟ್ಟು ಅವರಿಗೆ-- ಮಕ್ಕಳಿರಾ, ಐಶ್ವರ್ಯದಲ್ಲಿ ನಂಬಿಕೆ ಇಟ್ಟವರು ದೇವರ ರಾಜ್ಯದಲ್ಲಿ ಪ್ರವೇಶಿಸುವದು ಎಷ್ಟೋ ಕಷ್ಟ. ಒಬ್ಬ ಐಶ್ವರ್ಯವಂತನು ದೇವರ ರಾಜ್ಯದೊಳಗೆ ಸೇರುವದಕ್ಕಿಂತ ಒಂಟೆಯು ಸೂಜಿಯ ಕಣ್ಣಿನಲ್ಲಿ ನುಗ್ಗುವದು ಸುಲಭ ಅಂದನು.
- Psalm 62:10 ಕೀರ್ತನೆಗಳು 62:10ಅನ್ಯಾಯದಲ್ಲಿ ಭರ ವಸವಿಡಬೇಡಿರಿ; ಸುಲಿಗೆಯಲ್ಲಿ ವ್ಯರ್ಥರಾಗಬೇಡಿರಿ; ಆಸ್ತಿಯು ಹೆಚ್ಚಿದರೆ ಅದರ ಮೇಲೆ ಮನಸ್ಸಿಡಬೇಡಿರಿ.
- Job 31:24–25 ಯೋಬನು 31:24–25ನಾನು ಬಂಗಾರವನ್ನು ನನ್ನ ನಿರೀಕ್ಷೆಯನ್ನಾಗಿ ಇಟ್ಟಿದ್ದರೆ, ಅಪ ರಂಜಿಗೆ--ನೀನು ನನ್ನ ಭರವಸವು ಎಂದು ಹೇಳಿದ್ದರೆ, ನನ್ನ ಐಶ್ವರ್ಯವು ಬಹಳವಾಗಿದೆ ಎಂದು ನನ್ನ ಕೈ ಬಹಳವಾಗಿ ಸಂಪಾದಿಸಿ ಕೊಂಡಿತೆಂದು ನಾನು ಸಂತೋಷಿಸಿದ್ದರೆ,
- Isaiah 60:21 ಯೆಶಾಯ 60:21ನಿನ್ನ ಜನರೆಲ್ಲರು ನೀತಿವಂತರಾಗಿರುವರು, ದೇಶವನ್ನು ಸದಾ ಕಾಲಕ್ಕೆ ಸ್ವಾಧೀನ ಮಾಡಿಕೊಳ್ಳುವರು; ನಾನು ಮಹಿಮೆ ಹೊಂದುವದಕ್ಕೋಸ್ಕರ ನಾನು ನೆಟ್ಟ ಕೊಂಬೆಯೂ ನನ್ನ ಕೈ ಸೃಷ್ಟಿಯೂ ದೇಶವನ್ನು ಸದಾ ಅನುಭವಿಸುವರು.ಚಿಕ್ಕವನಿಂದ ಸಾವಿರವಾಗುವರು. ಅಲ್ಪನಿಂದ ಬಲ ವಾದ ಜನಾಂಗವಾಗುವದು; ಕರ್ತನೆಂಬ ನಾನು ಕ್ಲುಪ್ತಕಾಲದಲ್ಲಿ ಇದನ್ನು ಬಹು ಬೇಗನೆ ಉಂಟು ಮಾಡುವೆನು.
- Deuteronomy 8:12–14 ಧರ್ಮೋಪದೇಶಕಾಂಡ 8:12–14ನೀನು ತಿಂದು ತೃಪ್ತಿಹೊಂದಿದಾಗಲೂ ಒಳ್ಳೇ ಮನೆಗಳನ್ನು ಕಟ್ಟಿ ಅವುಗಳಲ್ಲಿ ವಾಸಮಾಡುವಾಗಲೂ ನಿನ್ನ ಪಶು ಕುರಿಗಳು ಹೆಚ್ಚಿದಾಗಲೂ ಬೆಳ್ಳಿ ಬಂಗಾರ ನಿನಗೆ ಹೆಚ್ಚಿದಾಗಲೂ ನಿನಗಿರುವಂಥದ್ದೆಲ್ಲಾ ಹೆಚ್ಚಿದಾ ಗಲೂ ನಿನ್ನ ಹೃದಯವು ಉಬ್ಬಿಕೊಳ್ಳದ ಹಾಗೆಯೂ ನಿನ್ನನ್ನು ಐಗುಪ್ತದೇಶದ ದಾಸತ್ವದ ಮನೆಯೊಳಗಿಂದ ಹೊರಗೆ ಬರಮಾಡಿದಂಥ,
- Proverbs 10:15 ಜ್ಞಾನೋಕ್ತಿಗಳು 10:15ಐಶ್ವರ್ಯವಂತನ ಸಂಪತ್ತು ಅವನ ಬಲವಾದ ಪಟ್ಟಣ; ಬಡವರ ನಾಶನವು ಅವರ ಬಡತನವೇ.
- Psalm 49:6 ಕೀರ್ತನೆಗಳು 49:6ಅವರು ತಮ್ಮ ಸಂಪತ್ತಿನಲ್ಲಿ ಭರವಸವಿಟ್ಟು ಅಧಿಕ ಐಶ್ವರ್ಯಗಳಲ್ಲಿ ಹೆಚ್ಚಳಪಡುವರು.