Proverbs · chapter 12 · verse 8
Proverbs 12:8 in Kannada
ತನ್ನ ಜ್ಞಾನಕ್ಕನುಸಾರವಾಗಿ ಒಬ್ಬ ಮನುಷ್ಯನು ಹೊಗ ಳಲ್ಪಡುವನು; ವಕ್ರಹೃದಯವುಳ್ಳವನು ತಿರಸ್ಕರಿಸಲ್ಪಡು ವನು.
Tanna jnyaanakkanusaaravaagi obba manushyanu hoga lalpaduvanu; vakrahrudayavullavanu tiraskarisalpadu vanu.
Proverbs 12:8 in English
- King James Version (KJV)
- A man shall be commended according to his wisdom: but he that is of a perverse heart shall be despised.
- World English Bible (WEB)
- A man shall be commended according to his wisdom, but he who has a warped mind shall be despised.
- American Standard Version (ASV)
- A man shall be commended according to his wisdom; But he that is of a perverse heart shall be despised.
- Bible in Basic English (BBE)
- A man will be praised in the measure of his wisdom, but a wrong-minded man will be looked down on.
- Darby Translation (DBY)
- A man is commended according to his wisdom; but he that is of a perverted heart shall be despised.
- Webster's Bible (WBS)
- A man shall be commended according to his wisdom: but he that is of a perverse heart shall be despised.
- Young's Literal Translation (YLT)
- According to his wisdom is a man praised, And the perverted of heart becometh despised.
Read in context
- 6ದುಷ್ಟರ ಮಾತುಗಳು ರಕ್ತಕ್ಕಾಗಿ ಹೊಂಚು ಹಾಕುತ್ತವೆ; ಯಥಾರ್ಥವಂತರ ಬಾಯಿಯು ಅವರನ್ನು ಬಿಡಿಸುವದು.
- 7ದುಷ್ಟರು ಕೆಡವಲ್ಪಟ್ಟು ಇಲ್ಲದೇ ಹೋಗುವರು; ನೀತಿವಂತರ ಮನೆಯು ನಿಲ್ಲುವದು.
- 8ತನ್ನ ಜ್ಞಾನಕ್ಕನುಸಾರವಾಗಿ ಒಬ್ಬ ಮನುಷ್ಯನು ಹೊಗ ಳಲ್ಪಡುವನು; ವಕ್ರಹೃದಯವುಳ್ಳವನು ತಿರಸ್ಕರಿಸಲ್ಪಡು ವನು.
- 9ರೊಟ್ಟಿಯ ಕೊರತೆ ಇದ್ದು ತನ್ನನ್ನು ತಾನೇ ಘನಪಡಿಸಿಕೊಳ್ಳುವವನಿಗಿಂತಲೂ ಸೇವಕನುಳ್ಳವನಾಗಿ ತಿರಸ್ಕರಿಸಲ್ಪಡುವವನೇ ಲೇಸು.
- 10ನೀತಿವಂತನು ತನ್ನ ಪಶುವಿನ ಪ್ರಾಣವನ್ನು ರಕ್ಷಿಸುತ್ತಾನೆ. ಆದರೆ ದುಷ್ಟರ ಅಂತಃಕರುಣೆಯು ಕ್ರೂರತನವೇ.
Cross references
- Proverbs 3:35 ಜ್ಞಾನೋಕ್ತಿಗಳು 3:35ಜ್ಞಾನಿಯು ಮಹಿಮೆಗೆ ಬಾಧ್ಯನಾಗುವನು, ಜ್ಞಾನ ಹೀನರ ಏಳಿಗೆಯು ಅವಮಾನವಾಗುವದು.
- 2 Corinthians 10:18 2 ಕೊರಿಂಥದವರಿಗೆ 10:18ತನ್ನನ್ನು ತಾನೇ ಹೊಗಳಿಕೊಳ್ಳುವವನು ಯೋಗ್ಯ ನಲ್ಲ; ಕರ್ತನು ಯಾರನ್ನು ಹೊಗಳುತ್ತಾನೋ ಅವನೇ ಯೋಗ್ಯನು.
- 1 Corinthians 4:5 1 ಕೊರಿಂಥದವರಿಗೆ 4:5ಆದದರಿಂದ ಕಾಲಕ್ಕೆ ಮೊದಲು ಕರ್ತನು ಬರುವತನಕ ಯಾವದನ್ನೂ ಕುರಿತು ತೀರ್ಪು ಮಾಡಬೇಡಿರಿ; ಆತನು ಕತ್ತಲೆಯ ಲ್ಲಿರುವ ಗುಪ್ತಕಾರ್ಯಗಳನ್ನು ಬೆಳಕಿಗೆ ತರುವನು; ಹೃದಯದ ಯೋಚನೆಗಳನ್ನು ಪ್ರತ್ಯಕ್ಷಪಡಿಸುವನು; ಆಗ ಪ್ರತಿಯೊಬ್ಬನಿಗೆ ಬರತಕ್ಕ ಹೊಗಳಿಕೆಯು ದೇವ ರಿಂದ ಬರುವದು.
- Malachi 2:8–9 ಮಲಾಕಿಯ 2:8–9ಆದರೆ ನೀವು ಮಾರ್ಗವನ್ನು ಬಿಟ್ಟುಹೋಗಿದ್ದೀರಿ; ಅನೇಕರನ್ನು ನ್ಯಾಯಪ್ರಮಾಣಕ್ಕೆ ಎಡವುವಂತೆ ಮಾಡಿದ್ದೀರಿ; ಲೇವಿಯ ಒಡಂಬಡಿಕೆಯನ್ನು ಕೆಡಿಸಿದ್ದೀರೆಂದು ಸೈನ್ಯ ಗಳ ಕರ್ತನು ಹೇಳುತ್ತಾನೆ. ಆದದರಿಂದ ನೀವು ನನ್ನ ಮಾರ್ಗಗಳನ್ನು ಕೈಕೊಳ್ಳದೆ, ನನ್ನ ನ್ಯಾಯ ಪ್ರಮಾಣದ ವಿಷಯವಾಗಿ ಮುಖದಾಕ್ಷಿಣ್ಯ ತೋರಿಸಿದ ಪ್ರಕಾರವೇ ನಾನು ನಿಮ್ಮನ್ನು ಜನರೆಲ್ಲರ ಮುಂದೆ ಅಸಡ್ಡೆ ಮಾಡಲ್ಪಟ್ಟ ವರನ್ನಾಗಿಯೂ ನೀಚರನ್ನಾಗಿಯೂ ಮಾಡಿದ್ದೇನೆ.
- 1 Corinthians 3:10–15 1 ಕೊರಿಂಥದವರಿಗೆ 3:10–15ದೇವರು ನನಗೆ ಕೃಪೆಯನ್ನು ಕೊಟ್ಟ ಪ್ರಕಾರ ನಾನು ಪ್ರವೀಣಶಿಲ್ಪಿಯಂತೆ ಆಸ್ತಿವಾರ ಹಾಕಿದೆನು. ಮತ್ತೊಬ್ಬನು ಅದರ ಮೇಲೆ ಕಟ್ಟುತ್ತಾನೆ; ಪ್ರತಿಯೊಬ್ಬನು ತಾನು ಅದರ ಮೇಲೆ ಹೇಗೆ ಕಟ್ಟುತ್ತಾನೋ ಎಚ್ಚರಿಕೆಯಾಗಿರಬೇಕು. ಹಾಕಿರುವ ಅಸ್ತಿವಾರವು ಯೇಸು ಕ್ರಿಸ್ತನೇ; ಆ ಅಸ್ತಿವಾರವನ್ನಲ್ಲದೆ ಮತ್ತೊಂದು ಅಸ್ತಿವಾರವನ್ನು ಯಾರೂ ಹಾಕಲಾರರಷ್ಟೆ. ಈ ಅಸ್ತಿವಾರದ ಮೇಲೆ ಚಿನ್ನ ಬೆಳ್ಳಿ ಅಮೂಲ್ಯವಾದ ಕಲ್ಲುಗಳು ಕಟ್ಟಿಗೆ ಹುಲ್ಲು ಆಪು ಇವುಗಳಲಿ ಯಾವದರಿಂದ ಕಟ್ಟಿದರೂ ಅವನವನ ಕೆಲಸವು ವ್ಯಕ್ತವಾಗುವದು; ಯಾಕಂದರೆ ಆ ದಿನವು ಬೆಂಕಿ ಯೊಡನೆ ಪ್ರತ್ಯಕ್ಷವಾಗಿ ಆ ಕೆಲಸವನ್ನು ಸ್ಪಷ್ಟವಾಗಿ ತೋರಿಸುವದು; ಅವನವನ ಕೆಲಸವೆಂಥದೋ ಆ ಬೆಂಕಿ ಶೋಧಿಸುವದು. ಒಬ್ಬನು ಆ ಅಸ್ತಿವಾರದ ಮೇಲೆ ಕಟ್ಟಿದ್ದು ಉಳಿದರೆ ಅವನಿಗೆ ಪ್ರತಿಫಲ ದೊರೆಯುವದು; ಒಬ್ಬನು ಕಟ್ಟಿದ್ದು ಸುಟ್ಟು ಹೋದರೆ ಅವನಿಗೆ ನಷ್ಟವಾಗುವದು; ತಾನಾದರೋ ರಕ್ಷಣೆ ಹೊಂದುವನು. ಆದರೂ ಬೆಂಕಿಯೊಳಗಿಂದ ತಪ್ಪಿಸಿ ಕೊಂಡವನ ಹಾಗಿರುವನು.
- Matthew 27:4–5 ಮತ್ತಾಯನು 27:4–5ಅವನು--ನಾನು ನಿರಪರಾಧದ ರಕ್ತವನ್ನು ಹಿಡುಕೊಟ್ಟು ಪಾಪಮಾಡಿದ್ದೇನೆ ಅಂದನು. ಅದಕ್ಕೆ ಅವರು--ಅದು ನಮಗೇನು? ನೀನೇ ಅದನ್ನು ನೋಡಿಕೋ ಅಂದರು. ಮತ್ತು ಅವನು ಆ ಬೆಳ್ಳಿಯ ನಾಣ್ಯಗಳನ್ನು ದೇವಾಲಯದಲ್ಲಿ ಬಿಸಾಡಿಬಿಟ್ಟು ಹೊರಟುಹೋಗಿ ಉರ್ಲು ಹಾಕಿಕೊಂಡನು.
- Genesis 41:39 ಆದಿಕಾಂಡ 41:39ಫರೋಹನು ಯೋಸೇಫನಿಗೆ--ದೇವರು ನಿನಗೆ ಇವುಗಳೆನ್ನಲ್ಲಾ ತೋರಿಸಿದ ಮೇಲೆ ನಿನ್ನ ಹಾಗೆ ವಿವೇಕಿಯೂ ಬುದ್ಧಿವಂತನೂ ಯಾರೂ ಇಲ್ಲ.
- Daniel 12:2 ದಾನಿಯೇಲನು 12:2ಭೂಮಿಯ ಧೂಳಿನೊಳಗೆ ನಿದ್ರೆಮಾಡುವವ ರಲ್ಲಿ ಅನೇಕರು ಎಚ್ಚತ್ತು ಕೆಲವರು ನಿತ್ಯಜೀವವನ್ನೂ ಕೆಲವರು ನಿತ್ಯ ನಾಚಿಕೆಗಳನ್ನೂ ಅನುಭವಿಸುವರು.
- Luke 16:8 ಲೂಕನು 16:8ಆಗ ಯಜಮಾನನು ಅನ್ಯಾಯಗಾರನಾದ ಆ ಮನೆವಾರ್ತೆಯವನು ಜಾಣತನ ಮಾಡಿದನೆಂದು ಅವನನ್ನು ಹೊಗಳಿದನು; ಯಾಕಂದರೆ ಈ ಲೋಕದ ಮಕ್ಕಳು ತಮ್ಮ ಸಂತತಿಯವರಲ್ಲಿ ಬೆಳಕಿನ ಮಕ್ಕಳಿಗಿಂತ ಜಾಣರಾಗಿದ್ದಾರೆ.
- Psalm 132:18 ಕೀರ್ತನೆಗಳು 132:18ಅವನ ಶತ್ರುಗಳಿಗೆ ನಾಚಿಕೆಯನ್ನು ಹೊದಿಸುವೆನು; ಆದರೆ ಅವನ ಮೇಲೆ ಅವನ ಕಿರೀಟವು ಶೋಭಿಸುವದು ಎಂದು ಹೇಳಿದ್ದಾನೆ.
- Luke 12:42–44 ಲೂಕನು 12:42–44ಕರ್ತನು--ಹಾಗಾದರೆ ತಕ್ಕಕಾಲದಲ್ಲಿ ಅವರ ಪಾಲಿನ ಆಹಾರವನ್ನು ಕೊಡುವದಕ್ಕಾಗಿ ಒಡೆಯನು ತನ್ನ ಮನೆಯಮೇಲೆ ನೇಮಿಸುವ ನಂಬಿಗಸ್ತನೂ ವಿವೇಕಿಯೂ ಆಗಿರುವ ಮನೇವಾರ್ತೆಯವನು ಯಾರು? ತನ್ನ ಒಡೆಯನು ಬಂದಾಗ ಯಾವನು ಹೀಗೆ ಮಾಡುವದನ್ನು ಕಾಣುವನೋ ಆ ಸೇವಕನು ಧನ್ಯನು; ಅವನು ತನಗಿರುವ ಎಲ್ಲಾದರ ಮೇಲೆ ಅವನನ್ನು ಅಧಿಕಾರಿಯನ್ನಾಗಿ ನೇಮಿಸುವನು ಎಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ.
- Acts 12:23 ಅಪೊಸ್ತಲರ ಕೃತ್ಯಗಳು 12:23ಅವನು ದೇವರಿಗೆ ಮಹಿಮೆ ಸಲ್ಲಿಸದೆ ಹೋದದರಿಂದ ಕರ್ತನ ದೂತನು ಆ ಕ್ಷಣದಲ್ಲೇ ಅವನನ್ನು ಹೊಡೆದನು; ಆಗ ಅವನನ್ನು ಹುಳಗಳು ತಿಂದದ್ದರಿಂದ ಅವನು ಪ್ರಾಣ ಬಿಟ್ಟನು.