Proverbs · chapter 13 · verse 23
Proverbs 13:23 in Kannada
ಬಡವರಿಗೆ ಭೂಮಿಯ ಸಾಗುವಳಿಯಲ್ಲಿ ಬಹಳ ಆಹಾರವು ಸಿಕ್ಕುತ್ತದೆ; ನ್ಯಾಯ ತೀರ್ಪಿನ ಕೊರತೆಯಿಂದ ಹಾಳಾಗುವದು ಉಂಟು.
Badavarige bhoomiya saaguvaliyalli bahala aahaaravu sikkuttade; nyaaya teerpina korateyinda haalaaguvadu untu.
Proverbs 13:23 in English
- King James Version (KJV)
- Much food [is in] the tillage of the poor: but there is [that is] destroyed for want of judgment.
- World English Bible (WEB)
- An abundance of food is in poor people’s fields, but injustice sweeps it away.
- American Standard Version (ASV)
- Much food [is in] the tillage of the poor; But there is that is destroyed by reason of injustice.
- Bible in Basic English (BBE)
- There is much food in the ploughed land of the poor; but it is taken away by wrongdoing.
- Darby Translation (DBY)
- Much food is in the tillage of the poor; but there is that is lost for want of judgment.
- Webster's Bible (WBS)
- Much food [is in] the tillage of the poor: but there is [that is] destroyed for want of judgment.
- Young's Literal Translation (YLT)
- Abundance of food — the tillage of the poor, And substance is consumed without judgment.
Read in context
- 21ದುಷ್ಟತ್ವವು ಪಾಪಿಗಳನ್ನು ಹಿಂದಟ್ಟುತ್ತದೆ; ನೀತಿ ವಂತರಿಗೆ ಒಳ್ಳೇದು ಪ್ರತಿಫಲವಾಗುವದು.
- 22ಒಳ್ಳೆಯವನು ಮೊಮ್ಮಕ್ಕಳಿಗೆ ಆಸ್ತಿಯನ್ನು ಬಿಡುವನು; ಪಾಪಿಯ ಸೊತ್ತು ನೀತಿ ವಂತರಿಗೆ ಇಡಲ್ಪಟ್ಟಿದೆ.
- 23ಬಡವರಿಗೆ ಭೂಮಿಯ ಸಾಗುವಳಿಯಲ್ಲಿ ಬಹಳ ಆಹಾರವು ಸಿಕ್ಕುತ್ತದೆ; ನ್ಯಾಯ ತೀರ್ಪಿನ ಕೊರತೆಯಿಂದ ಹಾಳಾಗುವದು ಉಂಟು.
- 24ಬೆತ್ತವನ್ನು ಹಿಡಿಯದವನು ತನ್ನ ಮಗನನ್ನು ಹಗೆ ಮಾಡುತ್ತಾನೆ; ಮುಂಚಿತವಾಗಿ ಶಿಕ್ಷಿಸುವವನು ಅವನನ್ನು ಪ್ರೀತಿಸುತ್ತಾನೆ.ತನಗೆ ತೃಪ್ತಿಯಾಗುವ ವರೆಗೆ ನೀತಿವಂತನು ತಿನ್ನುತ್ತಾನೆ; ದುಷ್ಟರ ಹೊಟ್ಟೆಗೆ ಕೊರತೆಯಾಗುವದು.
- 25ತನಗೆ ತೃಪ್ತಿಯಾಗುವ ವರೆಗೆ ನೀತಿವಂತನು ತಿನ್ನುತ್ತಾನೆ; ದುಷ್ಟರ ಹೊಟ್ಟೆಗೆ ಕೊರತೆಯಾಗುವದು.
Cross references
- Proverbs 12:11 ಜ್ಞಾನೋಕ್ತಿಗಳು 12:11ತನ್ನ ಹೊಲವನ್ನು ವ್ಯವಸಾಯ ಮಾಡುವವನು ರೊಟ್ಟಿಯಿಂದ ತೃಪ್ತಿ ಹೊಂದುವನು; ನಿಷ್ಪ್ರಯೋಜಕರನ್ನು ಹಿಂಬಾಲಿಸುವ ವನು ವಿವೇಕ ಶೂನ್ಯನು.
- Proverbs 28:19 ಜ್ಞಾನೋಕ್ತಿಗಳು 28:19ತನ್ನ ಭೂಮಿಯನ್ನು ವ್ಯವಸಾಯ ಮಾಡುವ ವನಿಗೆ ಸಮೃದ್ಧಿಯಾದ ರೊಟ್ಟಿ ಇರುವದು; ಆದರೆ ವ್ಯರ್ಥ ಜನರನ್ನು ಹಿಂಬಾಲಿಸುವವನಿಗೆ ಸಾಕಾದಷ್ಟು ಬಡತನವು ಇರುವದು.
- Ecclesiastes 5:9 ಪ್ರಸಂಗಿ 5:9ಇದಲ್ಲದೆ ಭೂಮಿಯ ಲಾಭವು ಎಲ್ಲರಿಗೂ ಇದೆ; ಭೂಮಿಯಿಂದಲೇ ಅರಸನಿಗೆ ಸೇವೆ ಯಾಗುತ್ತದೆ.
- Psalm 112:5 ಕೀರ್ತನೆಗಳು 112:5ಒಳ್ಳೇಮನುಷ್ಯನು ದಯೆ ತೋರಿಸಿ ಸಾಲಕೊಡುತ್ತಾನೆ; ತನ್ನ ಕಾರ್ಯಗಳನ್ನು ನ್ಯಾಯದಿಂದ ನಡಿಸುವನು.
- Ecclesiastes 8:5–6 ಪ್ರಸಂಗಿ 8:5–6ಆಜ್ಞೆ ಯನ್ನು ಕೈಕೊಳ್ಳುವವನು ಯಾವನೂ ಕೆಟ್ಟದ್ದನ್ನು ಅನು ಭವಿಸನು: ಜ್ಞಾನಿಯ ಹೃದಯವು ಕಾಲ ನ್ಯಾಯ ಎರಡನ್ನೂ ತಿಳಿದುಕೊಳ್ಳುತ್ತದೆ. ಪ್ರತಿಯೊಂದು ಕಾರ್ಯಕ್ಕೂ ಕಾಲ ಮತ್ತು ನ್ಯಾಯಗಳಿವೆ, ಆದದರಿಂದ ಮನುಷ್ಯನ ಕಷ್ಟವು ಅವನ ಮೇಲೆ ದೊಡ್ಡದಾಗಿ ಘೋರವಾಗಿದೆ.
- Proverbs 27:23–27 ಜ್ಞಾನೋಕ್ತಿಗಳು 27:23–27ನಿನ್ನ ಹಿಂಡುಗಳ ಸ್ಥಿತಿಯನ್ನು ತಿಳಿದುಕೊಳ್ಳುವಂತೆ ಶ್ರದ್ಧೆವಹಿಸು; ನಿನ್ನ ಮಂದೆಗಳನ್ನು ಚೆನ್ನಾಗಿ ನೋಡಿಕೋ. ಐಶ್ವರ್ಯವು ಶಾಶ್ವತವಲ್ಲ; ಕಿರೀಟವು ಪ್ರತಿಯೊಂದು ವಂಶಾವಳಿಗೆ ಇರುತ್ತದೋ? ಹುಲ್ಲು ಕಾಣುತ್ತದೆ; ಹಸಿ ಹುಲ್ಲು ತನ್ನನ್ನೇ ತೋರುತ್ತದೆ, ಬೆಟ್ಟಗಳ ಸೊಪ್ಪು ಕೂಡಿಸಲ್ಪಡುತ್ತದೆ. ನಿನ್ನ ವಸ್ತ್ರಕ್ಕಾಗಿ ಕುರಿಮರಿಗಳು ಮತ್ತು ಹೊಲದ ಕ್ರಯಕ್ಕಾಗಿ ನಿನ್ನ ಆಡುಗಳು ಇವೆ.ನಿನ್ನ ಊಟಕ್ಕಾಗಿಯೂ ನಿನ್ನ ಮನೆಯವರ ಆಹಾರ ಕ್ಕಾಗಿಯೂ ನಿನ್ನ ದಾಸಿಯರ ಜೀವನಕ್ಕಾಗಿಯೂ ಆಡುಗಳ ಹಾಲು ಸಾಕಾಗುತ್ತದೆ. ನಿನ್ನ ಊಟಕ್ಕಾಗಿಯೂ ನಿನ್ನ ಮನೆಯವರ ಆಹಾರ ಕ್ಕಾಗಿಯೂ ನಿನ್ನ ದಾಸಿಯರ ಜೀವನಕ್ಕಾಗಿಯೂ ಆಡುಗಳ ಹಾಲು ಸಾಕಾಗುತ್ತದೆ.
- Proverbs 27:18 ಜ್ಞಾನೋಕ್ತಿಗಳು 27:18ಅಂಜೂರದ ಮರವನ್ನು ಕಾಯುವವನು ಅದರ ಫಲವನ್ನು ತಿನ್ನುವನು; ಹಾಗೆಯೇ ತನ್ನ ಯಜಮಾನ ನಿಗಾಗಿ ಕಾಯುವವನು ಸನ್ಮಾನ ಹೊಂದುವನು.
- Proverbs 12:14 ಜ್ಞಾನೋಕ್ತಿಗಳು 12:14ತನ್ನ ಬಾಯಿಯ ಫಲದ ಮುಖಾಂತರ ಒಬ್ಬ ಮನುಷ್ಯನು ಒಳ್ಳೆಯದ ರಿಂದ ತೃಪ್ತನಾಗುವನು; ಅವನ ಕೈಗಳ ಪ್ರತಿಫಲವು ಅವನಿಗೆ ಕೊಡಲ್ಪಡುವದು.
- Proverbs 11:5–6 ಜ್ಞಾನೋಕ್ತಿಗಳು 11:5–6ಸಂಪೂರ್ಣನ ನೀತಿಯು ಅವನ ಮಾರ್ಗವನ್ನು ಸರಾಗಮಾಡುವದು; ದುಷ್ಟನು ತನ್ನ ದುಷ್ಟತ್ವದಿಂದಲೇ ಬೀಳುವನು. ಯಥಾರ್ಥವಂತರ ನೀತಿಯು ಅವರನ್ನು ಬಿಡಿಸುವದು; ತಮ್ಮ ಸ್ವಂತ ತುಂಟ ತನದಲ್ಲಿ ದೋಷಿಗಳು ಸಿಕ್ಕಿಬೀಳುವರು.
- Jeremiah 8:7–10 ಯೆರೆಮೀಯ 8:7–10ಹೌದು, ಆಕಾಶ ದಲ್ಲಿ ಬಕಪಕ್ಷಿಯು ತನ್ನ ನಿಯಮಿತ ಕಾಲಗಳನ್ನು ತಿಳಿ ಯುತ್ತದೆ; ಪಾರಿವಾಳವೂ ಬಾನಕ್ಕಿಯೂ ಕೊಕ್ಕರೆಯೂ ತಾವು ಬರತಕ್ಕ ಸಮಯವನ್ನು ಗಮನಿಸುತ್ತವೆ. ಆದರೆ ನನ್ನ ಜನರು ಕರ್ತನ ನ್ಯಾಯ ತೀರ್ಪನ್ನು ಅರಿಯರು. ಹೀಗಿರಲು--ನಾವು ಜ್ಞಾನಿಗಳು, ಕರ್ತನ ನ್ಯಾಯ ಪ್ರಮಾಣವು ನಮ್ಮ ಸಂಗಡ ಇದೆ ಎಂದು ನೀವು ಹೇಳುವದು ಹೇಗೆ? ಇಗೋ, ನಿಶ್ಚಯವಾಗಿ ಆತನು ಅದನ್ನು ವ್ಯರ್ಥವಾಗಿ ಮಾಡಿದ್ದಾನೆ. ಶಾಸ್ತ್ರಿಗಳ ಲೇಖ ನಿಯು ವ್ಯರ್ಥವಾಗಿದೆ. ಜ್ಞಾನಿಗಳು ನಾಚಿಕೊಂಡಿ ದ್ದಾರೆ, ದಿಗಿಲುಪಟ್ಟು ಸಿಕ್ಕಿಕೊಂಡಿದ್ದಾರೆ; ಇಗೋ, ಕರ್ತನ ವಾಕ್ಯವನ್ನು ನಿರಾಕರಿಸಿದ್ದಾರೆ. ಹಾಗಾದರೆ ಅವರಲ್ಲಿ ಎಂಥಾ ಜ್ಞಾನವಿದೆ? ಆದದರಿಂದ ಅವರ ಹೆಂಡತಿಯರನ್ನು ಬೇರೊಬ್ಬರಿಗೂ ಅವರ ಹೊಲಗಳನ್ನು ಸ್ವಾಧೀನಮಾಡಿಕೊಳ್ಳುವವರಿಗೂ ನಾನು ಕೊಡುವೆನು; ಚಿಕ್ಕವನು ಮೊದಲುಗೊಂಡು ದೊಡ್ಡವನ ತನಕ ಅವರೆಲ್ಲರು ಲೋಭಕ್ಕೆ ಒಪ್ಪಿಸಿಕೊಟ್ಟಿದ್ದಾರೆ. ಪ್ರವಾದಿ ಮೊದಲುಗೊಂಡು ಯಾಜಕನ ವರೆಗೂ ಪ್ರತಿ ಯೊಬ್ಬನು ಮೋಸದಿಂದ ವರ್ತಿಸುತ್ತಾನೆ.
- Proverbs 6:6–11 ಜ್ಞಾನೋಕ್ತಿಗಳು 6:6–11ಸೋಮಾರಿಯೇ, ನೀನು ಇರುವೆಯ ಹತ್ತಿರ ಹೋಗಿ ಅದರ ಮಾರ್ಗಗಳನ್ನು ಆಲೋಚಿಸಿ ಜ್ಞಾನ ವಂತನಾಗಿರು. ನಾಯಕನಾಗಲಿ ಮೇಲ್ವಿಚಾರಕನಾ ಗಲಿ ಅಧಿಕಾರಿಯಾಗಲಿ ಅದಕ್ಕೆ ಇಲ್ಲದೆ ಹೋದರೂ ಬೇಸಿಗೆಯಲ್ಲಿ ಅದು ತನ್ನ ಅಹಾರವನ್ನು ಸಂಗ್ರಹಿಸಿ ಕೊಂಡು ಸುಗ್ಗಿಯಲ್ಲಿ ತನ್ನ ಆಹಾರವನ್ನು ಕೂಡಿಸಿ ಕೊಳ್ಳುವದು. ಓ ಸೋಮಾರಿಯೇ, ಎಷ್ಟು ಹೊತ್ತು ನೀನು ನಿದ್ರೆಮಾಡುವದು? ನಿನ್ನ ನಿದ್ರೆಯಿಂದ ಯಾವಾ ಗ ಎಚ್ಚರಗೊಳ್ಳುವಿ? ಇನ್ನು ಸ್ವಲ್ಪ ನಿದ್ರೆ, ಇನ್ನು ಸ್ವಲ್ಪ ತೂಕಡಿಕೆ, ನಿದ್ರೆಗಾಗಿ ಇನ್ನೂ ಸ್ವಲ್ಪ ಕೈ ಮುದುರಿ ಕೊಳ್ಳುವಿ? ಹೀಗೆ ದಾರಿದ್ರ್ಯವು ಪ್ರಯಾಣ ಮಾಡು ವವನ ಹಾಗೂ ನಿನ್ನ ಕೊರತೆಯು ಯುದ್ಧಸ್ಥರ ಹಾಗೂ ಬರುವದು.