Proverbs · chapter 19 · verse 20
Proverbs 19:20 in Kannada
ಆಲೋಚನೆಯನ್ನು ಕೇಳಿ ಶಿಕ್ಷಣವನ್ನು ಅಂಗೀಕರಿಸು. ಕಡೆಯಲ್ಲಿ ನೀನು ಜ್ಞಾನಿ ಯಾಗುವಿ.
Aalochaneyannu keli shikshanavannu angeekarisu. Kadeyalli neenu jnyaani yaaguvi.
Proverbs 19:20 in English
- King James Version (KJV)
- Hear counsel, and receive instruction, that thou mayest be wise in thy latter end.
- World English Bible (WEB)
- Listen to counsel and receive instruction, that you may be wise in your latter end.
- American Standard Version (ASV)
- Hear counsel, and receive instruction, That thou mayest be wise in thy latter end.
- Bible in Basic English (BBE)
- Let your ear be open to suggestion and take teaching, so that at the end you may be wise.
- Darby Translation (DBY)
- Hear counsel, and receive instruction, that thou mayest be wise in thy latter end.
- Webster's Bible (WBS)
- Hear counsel, and receive instruction, that thou mayest be wise in thy latter end.
- Young's Literal Translation (YLT)
- Hear counsel and receive instruction, So that thou art wise in thy latter end.
Read in context
- 18ಇನ್ನೂ ನಿರೀಕ್ಷೆ ಇರುವಾಗಲೇ ನಿನ್ನ ಮಗನನ್ನು ಶಿಕ್ಷಿಸು; ಅವನ ಅಳುವಿಕೆಗೆ ನೀನು ಕನಿಕರಿಸದೆ ಇರು.
- 19ಮಹಾಕೋಪಿಷ್ಠನು ಶಿಕ್ಷೆಯನ್ನು ಅನುಭವಿಸುವನು; ಅವನನ್ನು ನೀನು ಬಿಡಿಸಿದರೆ ತಿರುಗಿ ನೀನು ಅದನ್ನು ಮಾಡಬೇಕಾಗುತ್ತದೆ.
- 20ಆಲೋಚನೆಯನ್ನು ಕೇಳಿ ಶಿಕ್ಷಣವನ್ನು ಅಂಗೀಕರಿಸು. ಕಡೆಯಲ್ಲಿ ನೀನು ಜ್ಞಾನಿ ಯಾಗುವಿ.
- 21ಮನುಷ್ಯನ ಹೃದಯದಲ್ಲಿ ಅನೇಕ ಕಲ್ಪನೆಗಳಿವೆ; ಆದರೂ ಕರ್ತನ ಸಂಕಲ್ಪವೇ ಈಡೇರು ವದು.
- 22ಮನುಷ್ಯನ ಆಕಾಂಕ್ಷೆಯು ಆತನ ದಯೆಯೇ; ಬಡವನು ಸುಳ್ಳುಗಾರನಿಗಿಂತ ಒಳ್ಳೆಯವನು.
Cross references
- Proverbs 12:15 ಜ್ಞಾನೋಕ್ತಿಗಳು 12:15ಅವಿವೇಕಿಯ ಮಾರ್ಗ ವು ತನ್ನ ಕಣ್ಣುಗಳಿಗೆ ನೆಟ್ಟಗಾಗಿದೆ; ಆಲೋಚನೆಗೆ ಕಿವಿಗೊಡುವವನು ಜ್ಞಾನಿಯಾಗಿದ್ದಾನೆ.
- Proverbs 8:34–35 ಜ್ಞಾನೋಕ್ತಿಗಳು 8:34–35ನನ್ನ ದ್ವಾರಗಳ ಬಳಿಯಲ್ಲಿ ಪ್ರತಿದಿನ ಕಾಯುತ್ತಾ ನನ್ನ ಬಾಗಲುಗಳ ನಿಲುವು ಗಳಲ್ಲಿ ನಿರೀಕ್ಷಿಸುತ್ತಾ ನನ್ನ ಮಾತುಗಳನ್ನು ಕೇಳುವವನು ಧನ್ಯನು. ನನ್ನನ್ನು ಕಂಡುಕೊಳ್ಳುವವನು ಜೀವವನ್ನು ಕಂಡುಕೊಂಡು ಕರ್ತನ ದಯವನ್ನು ಹೊಂದುವನು.ಆದರೆ ನನಗೆ ವಿರೋಧವಾಗಿ ಪಾಪಮಾಡುವವನು ತನ್ನ ಸ್ವಂತ ಪ್ರಾಣಕ್ಕೆ ಕೇಡುಮಾಡಿಕೊಳ್ಳುತ್ತಾನೆ. ನನ್ನನ್ನು ಹಗೆಮಾಡುವವರೆಲ್ಲರೂ ಮರಣವನ್ನು ಪ್ರೀತಿಸುತ್ತಾರೆ.
- Proverbs 2:1–9 ಜ್ಞಾನೋಕ್ತಿಗಳು 2:1–9ನನ್ನ ಮಗನೇ, ನನ್ನ ಮಾತುಗಳನ್ನು ನೀನು ಅಂಗೀಕರಿಸಿ ನನ್ನ ಆಜ್ಞೆಗಳನ್ನು ನಿನ್ನಲ್ಲಿ ಬಚ್ಚಿಟ್ಟುಕೊಂಡರೆ ನೀನು ಜ್ಞಾನಕ್ಕೆ ಕಿವಿಗೊಡು ವಂತೆಯೂ ತಿಳುವಳಿಕೆಗೆ ನಿನ್ನ ಹೃದಯವನ್ನು ತಿರು ಗಿಸುವಂತೆಯೂ ಹೌದು, ತಿಳುವಳಿಕೆಗಾಗಿ ಮೊರೆ ಯಿಟ್ಟು ವಿವೇಕಕ್ಕಾಗಿ ನಿನ್ನ ಸ್ವರವನ್ನು ಎತ್ತಿ ಬೆಳ್ಳಿ ಯಂತೆ ನೀನು ಅದನ್ನು ಹುಡುಕಿ ಬಚ್ಚಿಡಲ್ಪಟ್ಟ ಸಂಪ ತ್ತಿನಂತೆ ಅದಕ್ಕಾಗಿ ಹುಡುಕಿದರೆ, ನೀನು ಕರ್ತನ ಭಯವನ್ನು ತಿಳಿದುಕೊಳ್ಳುವಿ. ದೇವರ ಜ್ಞಾನವನ್ನು ಕಂಡುಕೊಳ್ಳುವಿ. ಜ್ಞಾನವನ್ನು ಕರ್ತನೇ ಕೊಡುತ್ತಾನೆ; ಆತನ ಬಾಯಿಂದಲೇ ತಿಳುವಳಿಕೆಯೂ ವಿವೇಕವೂ ಹೊರಟು ಬರುತ್ತವೆ. ನೀತಿವಂತರಿಗೋಸ್ಕರ ಆತನು ಸುಜ್ಞಾನವನ್ನು ಕೂಡಿಸುವನು. ಯಥಾರ್ಥದಿಂದ ನಡೆದುಕೊಳ್ಳುವವರಿಗೆ ಆತನು ಗುರಾಣಿಯಾಗಿದ್ದಾನೆ. ತೀರ್ಪಿನ ದಾರಿಗಳನ್ನು ಆತನು ಕಾಯುತ್ತಾನೆ. ತನ್ನ ಪರಿಶುದ್ಧರ ಮಾರ್ಗವನ್ನು ಭದ್ರಪಡಿಸುತ್ತಾನೆ. ಆಗ ನೀನು ನ್ಯಾಯವನ್ನೂ ತೀರ್ಪನ್ನೂ ನೀತಿಯನ್ನೂ ಮಾತ್ರವಲ್ಲದೆ ಪ್ರತಿಯೊಂದು ಸನ್ಮಾರ್ಗವನ್ನೂ ತಿಳಿದು ಕೊಳ್ಳುವಿ.
- Proverbs 4:1 ಜ್ಞಾನೋಕ್ತಿಗಳು 4:1ಮಕ್ಕಳಿರಾ, ತಂದೆಯ ಶಿಕ್ಷಣವನ್ನು ನೀವು ಕೇಳಿರಿ. ವಿವೇಕವನ್ನು ಗ್ರಹಿಸುವಂತೆ ನೋಡಿರಿ.
- Proverbs 1:8 ಜ್ಞಾನೋಕ್ತಿಗಳು 1:8ನನ್ನ ಮಗನೇ, ನಿನ್ನ ತಂದೆಯ ಶಿಕ್ಷಣವನ್ನು ಕೇಳು, ನಿನ್ನ ತಾಯಿಯ ಕಟ್ಟಳೆಯನ್ನು ತೊರೆಯಬೇಡ;
- Luke 16:19–23 ಲೂಕನು 16:19–23ಊದಾಬಣ್ಣದ ವಸ್ತ್ರಗಳನ್ನೂ ನಯವಾದ ನಾರು ಮಡಿಯನ್ನೂ ಧರಿಸಿಕೊಂಡು ಪ್ರತಿದಿನವೂ ಸಮೃದ್ಧಿ ಯಾಗಿ ಭೋಜನಮಾಡುತ್ತಿದ್ದ ಒಬ್ಬಾನೊಬ್ಬ ಐಶ್ವರ್ಯ ವಂತನಿದ್ದನು. ಅವನ ಬಾಗಲಿನಲ್ಲಿ ಲಾಜರನೆಂಬ ಒಬ್ಬ ಭಿಕ್ಷುಕನು ಬಿದ್ದುಕೊಂಡಿದ್ದನು; ಅವನು ಮೈ ತುಂಬಾ ಹುಣ್ಣೆದ್ದವನು. ಐಶ್ವರ್ಯವಂತನ ಮೇಜಿ ನಿಂದ ಬೀಳುವ (ರೊಟ್ಟಿ) ತುಂಡುಗಳನ್ನು ತಿನ್ನುವದಕ್ಕೆ ಅವನು ಆಶೆಪಡುತ್ತಿದ್ದನು; ಇದಲ್ಲದೆ ನಾಯಿಗಳು ಬಂದು ಅವನ ಹುಣ್ಣುಗಳನ್ನು ನೆಕ್ಕುತ್ತಿದ್ದವು. ಇದಾದ ಮೇಲೆ ಆ ಭಿಕ್ಷುಕನು ಸತ್ತನು; ದೂತರು ಅವನನ್ನು ಅಬ್ರಹಾಮನ ಎದೆಗೆ ತೆಗೆದುಕೊಂಡು ಹೋದರು; ಐಶ್ವರ್ಯವಂತನು ಸಹ ಸತ್ತನು; ಅವನನ್ನು ಹೂಣಿ ಟ್ಟರು. ಆಗ ಅವನು ಪಾತಾಳದೊಳಗೆ ಯಾತನೆಯಲ್ಲಿ ದ್ದವನಾಗಿ ತನ್ನ ಕಣ್ಣುಗಳನ್ನು ಮೇಲಕ್ಕೆತ್ತಿ ದೂರದಿಂದ ಅಬ್ರಹಾಮನನ್ನೂ ಅವನ ಎದೆಯಲ್ಲಿದ್ದ ಲಾಜರನನೂ ನೋಡಿದನು.
- Numbers 23:10 ಅರಣ್ಯಕಾಂಡ 23:10ಯಾಕೋಬನ ಧೂಳನ್ನು ಎಣಿಸುವದಕ್ಕೂ ಇಸ್ರಾಯೇಲಿನ ನಾಲ್ಕನೇ ಒಂದು ಪಾಲನ್ನಾದರೂ ಲೆಕ್ಕ ಮಾಡುವದಕ್ಕೂ ಯಾರಿಂದಾದೀತು? ನೀತಿವಂತನು ಸಾಯುವಂತೆ ನಾನೂ ಸಾಯಬೇಕು, ನನ್ನ ಕಡೇ ಅಂತ್ಯವು ಅವನಂತೆಯೇ ಆಗಲಿ ಎಂದು ಹೇಳಿದನು.
- Psalm 90:14 ಕೀರ್ತನೆಗಳು 90:14ಬೆಳಿಗ್ಗೆ ನಿನ್ನ ಕರುಣೆಯಿಂದ ನಮಗೆ ತೃಪ್ತಿಪಡಿಸು; ಆಗ ನಮ್ಮ ದಿವಸಗಳಲ್ಲೆಲ್ಲಾ ಉತ್ಸಾಹಧ್ವನಿಗೈದು ಸಂತೋಷ ಪಡುವೆವು.
- Psalm 90:12 ಕೀರ್ತನೆಗಳು 90:12ನಾವು ಜ್ಞಾನವುಳ್ಳ ಹೃದಯವನ್ನು ಹೊಂದುವ ಹಾಗೆ, ನಮ್ಮ ದಿವಸಗಳನ್ನು ಲೆಕ್ಕಿಸುವದಕ್ಕೆ ನಮಗೆ ಕಲಿಸು.
- Psalm 37:37 ಕೀರ್ತನೆಗಳು 37:37ಸಂಪೂರ್ಣನನ್ನು ಗಮನಿಸು, ಯಥಾರ್ಥನನ್ನು ನೋಡು; ಆ ಮನುಷ್ಯನ ಅಂತ್ಯವು ಸಮಾಧಾನವಾಗಿದೆ.
- Deuteronomy 8:16 ಧರ್ಮೋಪದೇಶಕಾಂಡ 8:16ನಿನ್ನನ್ನು ಕುಂದಿಸಿ ಶೋಧಿಸಿ ಕಡೆಯಲ್ಲಿ ನಿನಗೆ ಒಳ್ಳೇದನ್ನು ಮಾಡುವಂತೆ, ನಿನ್ನ ಪಿತೃಗಳು ಅರಿಯದ ಮನ್ನವನ್ನು ಅರಣ್ಯದಲ್ಲಿ ನಿನಗೆ ತಿನ್ನಿಸಿ ದಂಥ ನಿನ್ನ ದೇವರಾದ ಕರ್ತನನ್ನು ಮರೆತು--
- Deuteronomy 32:29 ಧರ್ಮೋಪದೇಶಕಾಂಡ 32:29ಅವರು ಜ್ಞಾನವಂತರಾಗಿ ಇದರ ವಿಷಯ ಬುದ್ಧಿ ತಂದುಕೊಂಡು ತಮ್ಮ ಕಡೇಕಾಲಕ್ಕಾಗಿ ಗ್ರಹಿಕೆಯುಳ್ಳ ವರಾದರೆ ಎಷ್ಟೋ ಒಳ್ಳೇದು!