Proverbs · chapter 19 · verse 6
Proverbs 19:6 in Kannada
ಅಧಿಪ ತಿಯ ದಯೆಗಾಗಿ ಅನೇಕರು ಬಿನ್ನವಿಸುವರು; ದಾನಗ ಳನ್ನು ಕೊಡುವವನಿಗೆ ಪ್ರತಿಯೊಬ್ಬನೂ ಸ್ನೇಹಿತನೇ.
Adhipa tiya dayegaagi anekaru binnavisuvaru; daanaga lannu koduvavanige pratiyobbanoo snehitane.
Proverbs 19:6 in English
- King James Version (KJV)
- Many will intreat the favour of the prince: and every man [is] a friend to him that giveth gifts.
- World English Bible (WEB)
- Many will entreat the favor of a ruler, and everyone is a friend to a man who gives gifts.
- American Standard Version (ASV)
- Many will entreat the favor of the liberal man; And every man is a friend to him that giveth gifts.
- Bible in Basic English (BBE)
- Great numbers will make attempts to get the approval of a ruler: and every man is the special friend of him who has something to give.
- Darby Translation (DBY)
- Many court the favour of a noble; and every one is friend to a man that giveth.
- Webster's Bible (WBS)
- Many will entreat the favor of the prince: and every man [is] a friend to him that giveth gifts.
- Young's Literal Translation (YLT)
- Many entreat the face of the noble, And all have made friendship to a man of gifts.
Read in context
- 4ಐಶ್ವ ರ್ಯವು ಅನೇಕ ಮಂದಿ ಸ್ನೇಹಿತರನ್ನು ಮಾಡಿಕೊಳ್ಳು ತ್ತದೆ; ಬಡವನು ತನ್ನ ನೆರೆಯವನಿಂದ ಪ್ರತ್ಯೇಕಿಸಲ್ಪ ಡುತ್ತಾನೆ.
- 5ಸುಳ್ಳುಸಾಕ್ಷಿಯು ಶಿಕ್ಷಿಸಲ್ಪಡದೆ ಇರುವದಿಲ್ಲ; ಸುಳ್ಳಾಡುವವನು ತಪ್ಪಿಸಿಕೊಳ್ಳದೆ ಇರನು.
- 6ಅಧಿಪ ತಿಯ ದಯೆಗಾಗಿ ಅನೇಕರು ಬಿನ್ನವಿಸುವರು; ದಾನಗ ಳನ್ನು ಕೊಡುವವನಿಗೆ ಪ್ರತಿಯೊಬ್ಬನೂ ಸ್ನೇಹಿತನೇ.
- 7ಬಡವನ ಸಹೋದರರೆಲ್ಲಾ ಅವನನ್ನು ಹಗೆಮಾಡು ತ್ತಾರೆ. ತನ್ನ ಸ್ನೇಹಿತರು ತನ್ನಿಂದ ಎಷ್ಟೋ ಹೆಚ್ಚಾಗಿ ದೂರ ಹೋಗುತ್ತಾರಲ್ಲವೇ? ಮಾತುಗಳಿಂದ ಅವನು ಹಿಂಬಾಲಿಸಿದರೂ ಅವು ಅವನಿಗೆ ಸಾಲುವದಿಲ್ಲ.
- 8ಜ್ಞಾನವನ್ನು ಸಂಪಾದಿಸಿಕೊಳ್ಳುವವನು ತನ್ನ ಪ್ರಾಣ ವನ್ನು ಪ್ರೀತಿಸುತ್ತಾನೆ; ವಿವೇಕವನ್ನು ಕೈಕೊಳ್ಳುವವನು ಒಳ್ಳೇದನ್ನು ಕಂಡುಕೊಳ್ಳುವನು.
Cross references
- Proverbs 18:16 ಜ್ಞಾನೋಕ್ತಿಗಳು 18:16ಮನುಷ್ಯನ ದಾನವು ತನಗೆ ಅನುಕೂಲವಾಗಿದ್ದು ದೊಡ್ಡವರ ಸನ್ನಿಧಾನಕ್ಕೆ ಅವನನ್ನು ಕರಕೊಂಡು ಹೋಗುತ್ತದೆ.
- Proverbs 29:26 ಜ್ಞಾನೋಕ್ತಿಗಳು 29:26ಅನೇಕರು ಅಧಿ ಪತಿಯ ದಯೆಯನ್ನು ಹುಡುಕುತ್ತಾರೆ; ಕರ್ತನಿಂದಲೇ ಪ್ರತಿಯೊಬ್ಬನ ನ್ಯಾಯತೀರ್ಪು ಬರುತ್ತದೆ.ಅನೀತಿ ವಂತನು ನೀತಿವಂತರಿಗೆ ಅಸಹ್ಯ; ತನ್ನ ಮಾರ್ಗದಲ್ಲಿ ಯಥಾರ್ಥವಾಗಿರುವವನು ದುಷ್ಟರಿಗೆ ಅಸಹ್ಯ.
- Proverbs 17:8 ಜ್ಞಾನೋಕ್ತಿಗಳು 17:8ತಕ್ಕೊಳ್ಳುವವನ ಕಣ್ಣುಗಳಿಗೆ ಲಂಚವು ಬೆಲೆಯುಳ್ಳ ಕಲ್ಲಿನಂತಿದೆ; ಅದನ್ನು ಹೇಗೆ ತಿರುಗಿಸಿದರೂ ಅಭಿವೃದ್ಧಿಯಾಗುತ್ತದೆ.
- Genesis 42:6 ಆದಿಕಾಂಡ 42:6ಆಗ ಯೋಸೇಫನು ದೇಶದ ಮೇಲೆಲ್ಲಾ ಅಧಿಪತಿಯಾ ಗಿದ್ದನು. ದೇಶದ ಜನರಿಗೆಲ್ಲಾ ಧಾನ್ಯವನ್ನು ಮಾರು ವವನು ಅವನೇ ಆಗಿದ್ದನು. ಹೀಗಿರಲಾಗಿ ಯೋಸೇಫನ ಸಹೋದರರು ಬಂದು ತಮ್ಮ ಮುಖಗಳನ್ನು ನೆಲದ ಮಟ್ಟಿಗೂ ತಗ್ಗಿಸಿ ಅವನಿಗೆ ಅಡ್ಡಬಿದ್ದರು.
- Romans 6:23 ರೋಮಾಪುರದವರಿಗೆ 6:23ಯಾಕಂದರೆ ಪಾಪದ ಸಂಬಳ ಮರಣ. ಆದರೆ ದೇವರ ದಾನವು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮುಖಾಂತರ ನಿತ್ಯಜೀವವು.
- Proverbs 19:12 ಜ್ಞಾನೋಕ್ತಿಗಳು 19:12ಅರಸನ ಕೋಪವು ಸಿಂಹದ ಘರ್ಜನೆಯಂತಿದೆ; ಅವನ ದಯೆಯು ಹುಲ್ಲಿನ ಮೇಲಿರುವ ಇಬ್ಬನಿಯಂತಿದೆ.
- Proverbs 21:14 ಜ್ಞಾನೋಕ್ತಿಗಳು 21:14ಗುಪ್ತ ಲಂಚವು ಕೋಪವನ್ನು ಅಡಗಿಸುವದು; ಎದೆಯಲ್ಲಿ ಕೊಟ್ಟ ಬಹುಮಾನವು ರೌದ್ರವನ್ನು ಆರಿಸುತ್ತದೆ.
- Job 29:24–25 ಯೋಬನು 29:24–25ನಂಬಿಕೆ ಇಲ್ಲದವರ ಕಡೆಗೆ ನಗೆ ತೋರಿಸಿದೆನು; ನನ್ನ ಮುಖದ ಕಳೆಯನ್ನು ಅವರು ಕುಂದಿಸಲಿಲ್ಲ.ಅವರ ಮಾರ್ಗವನ್ನು ಆದುಕೊಂಡು ಪ್ರಧಾನನಾಗಿ ಕೂತು ಗೋಳಾಡುವವರನ್ನು ಸಂತೈಸುವವನಾಗಿಯೇ ಅರಸನಂತೆ ಸೈನ್ಯದಲ್ಲಿ ಆಸೀನನಾಗಿದ್ದೆನು. ಅವರ ಮಾರ್ಗವನ್ನು ಆದುಕೊಂಡು ಪ್ರಧಾನನಾಗಿ ಕೂತು ಗೋಳಾಡುವವರನ್ನು ಸಂತೈಸುವವನಾಗಿಯೇ ಅರಸನಂತೆ ಸೈನ್ಯದಲ್ಲಿ ಆಸೀನನಾಗಿದ್ದೆನು.
- 2 Samuel 19:19–39 2 ಸಮುವೇಲನು 19:19–39ನನ್ನ ಒಡೆಯನೇ, ನನ್ನ ಅಕ್ರಮವನ್ನು ನನಗೆ ಎಣಿಸದೆ ಅರಸನಾದ ನನ್ನ ಒಡೆಯನು ಯೆರೂಸಲೇಮಿನಿಂದ ಹೊರಟು ಬರುವ ದಿವಸದಲ್ಲಿ ತನ್ನ ದಾಸನು ಮೂರ್ಖ ತನದಿಂದ ಮಾಡಿದ ಕಾರ್ಯವನ್ನು ನೆನಸದೆ ಅದನ್ನು ತನ್ನ ಹೃದಯದಲ್ಲಿ ಇಡದೆ ಇರಲಿ. ಯಾಕಂದರೆ ಪಾಪಮಾಡಿದೆನೆಂದು ನಿನ್ನ ಸೇವಕನಾಗಿರುವ ನಾನು ತಿಳಿದಿದ್ದೇನೆ. ಆದದರಿಂದ ಇಗೋ, ಅರಸನಾದ ನನ್ನ ಒಡೆಯನನ್ನು ಎದುರುಗೊಳ್ಳಲು ಯೋಸೇಫನ ಮನೆಯ ಎಲ್ಲರಿಗಿಂತ ಮುಂದಾಗಿ ಈ ದಿನ ಬಂದೆನು ಅಂದನು. ಆಗ ಚೆರೂಯಳ ಮಗನಾದ ಅಬೀ ಷೈಯು ಪ್ರತ್ಯುತ್ತರವಾಗಿ--ಕರ್ತನ ಅಭಿಷಿಕ್ತನನ್ನು ಶಿಮ್ಮಿಯು ಶಪಿಸಿದ್ದರಿಂದ ಅವನು ಅದಕ್ಕಾಗಿ ಕೊಲ್ಲಲ್ಪಡ ಬೇಕಲ್ಲವೋ ಅಂದನು. ಆದರೆ ದಾವೀದನು--ಚೆರೂಯಳ ಮಕ್ಕಳೇ, ಈಹೊತ್ತು ನೀವು ನನಗೆ ಶತ್ರುಗಳಾಗಿರುವ ಹಾಗೆ ನಿಮ್ಮೊಂದಿಗೆ ನನಗೆ ಏನು? ಈಹೊತ್ತು ಇಸ್ರಾಯೇಲಿನಲ್ಲಿ ಯಾವನಾದರೂ ಕೊಲೆಯಾಗಬಾರದು; ಯಾಕಂದರೆ ಈಹೊತ್ತು ನಾನು ಇಸ್ರಾಯೇಲಿನ ಮೇಲೆ ಅರಸನಾಗಿದ್ದೇನೆಂದು ನಾನು ತಿಳಿಯುತ್ತೇನಲ್ಲಾ ಅಂದನು. ಆಗ ಅರಸನು ಶಿಮ್ಮಿಗೆ --ನೀನು ಸಾಯುವದಿಲ್ಲ ಅಂದನು. ಇದಲ್ಲದೆ ಅರಸನು ಅವನಿಗೆ ಆಣೆ ಇಟ್ಟನು. ಸೌಲನ ಮಗನಾದ ಮೆಫೀಬೋಶೆತನು ಅರಸ ನನ್ನು ಎದುರುಗೊಳ್ಳಲು ಬಂದನು. ಅರಸನು ಹೋದಂದಿನಿಂದ ಅವನು ಮರಳಿ ಸಮಾಧಾನವಾಗಿ ಬರುವ ವರೆಗೂ ಅವನು ತನ್ನ ಪಾದಗಳನ್ನು ಕಟ್ಟಿ ಕೊಳ್ಳಲಿಲ್ಲ, ತನ್ನ ಗಡ್ಡವನ್ನು ಕತ್ತರಿಸಿಕೊಳ್ಳಲಿಲ್ಲ; ತನ್ನ ಬಟ್ಟೆಗಳನ್ನು ಒಗೆದುಕೊಳ್ಳಲಿಲ್ಲ. ಅವನು ಯೆರೂಸಲೇಮಿನಿಂದ ಅರಸನನ್ನು ಎದುರುಗೊಳ್ಳಲು ಬಂದಾಗ ಅರಸನು ಅವನಿಗೆ--ಮೆಫೀಬೋಶೆತನೇ, ನೀನು ಯಾಕೆ ನನ್ನ ಸಂಗಡ ಬಾರದೆಹೋದಿ ಅಂದನು. ಅದಕ್ಕವನು--ಅರಸನಾದ ನನ್ನ ಒಡೆಯನೇ, ನನ್ನ ಸೇವಕನು ನನ್ನನ್ನು ಮೋಸ ಮಾಡಿದನು. ಯಾಕಂದರೆ ನಿನ್ನ ಸೇವಕನು ಕುಂಟನಾಗಿರುವದರಿಂದ ಒಂದು ಕತ್ತೆಯ ಮೇಲೆ ತಡಿಯನ್ನು ಹಾಕು ಅದರ ಮೇಲೇರಿ ಅರಸನ ಸಂಗಡ ಹೋಗುವೆನೆಂದು ನಿನ್ನ ಸೇವಕನಾದ ನಾನು ಅವನಿಗೆ ಹೇಳಿದೆನು. ಅವನು ಅರಸನಾದ ನನ್ನ ಒಡೆಯನಿಗೆ ನಿನ್ನ ಸೇವಕನ ಮೇಲೆ ಚಾಡಿಯನ್ನು ಹೇಳಿದನು. ಆದರೆ ಅರಸನಾದ ನನ್ನ ಒಡೆಯನು ದೇವದೂತನ ಹಾಗೆಯೇ ಇದ್ದಾನೆ. ನಿನ್ನ ದೃಷ್ಟಿಗೆ ಒಳ್ಳೇದಾಗಿರುವದನ್ನು ಮಾಡು. ಅರಸನಾದ ನನ್ನ ಒಡೆಯನಿಗೆ ನನ್ನ ತಂದೆಯ ಮನೆಯವರೆಲ್ಲರು ಸತ್ತ ವರ ಹಾಗೆ ಇದ್ದಾಗ್ಯೂ ನಿನ್ನ ಮೇಜಿನಲ್ಲಿ ಭೋಜನ ಮಾಡುವವರೊಳಗೆ ನಿನ್ನ ಸೇವಕನನ್ನು ಇಟ್ಟಿ. ನಾನು ಇನ್ನು ಅರಸನಿಗೆ ಹೆಚ್ಚು ಮೊರೆಯಿಡುವದಕ್ಕೆ ಯೋಗ್ಯನೋ ಅಂದನು. ಆಗ ಅರಸನು ಅವನಿಗೆಇನ್ನು ನಿನ್ನ ಕಾರ್ಯಗಳನ್ನು ಕುರಿತು ಮಾತನಾಡು ವದೇನು? ನೀನೂ ಚೀಬನೂ ಭೂಮಿಯಲ್ಲಿ ಪಾಲು ಹಂಚಿಕೊಳ್ಳಿರಿ ಎಂದು ಹೇಳಿದ್ದೇನೆ ಅಂದನು. ಮೆಫೀಬೋಶೆತನು ಅರಸನಿಗೆ--ಹೌದು, ಅರಸ ನಾದ ನನ್ನ ಒಡೆಯನು ಸಮಾಧಾನದಿಂದ ತಿರಿಗಿ ತನ್ನ ಮನೆಗೆ ಬಂದದ್ದೇ ಸಾಕು. ಅವನೇ ಎಲ್ಲವನ್ನು ತಕ್ಕೊಳ್ಳಲಿ ಅಂದನು. ಇದಲ್ಲದೆ ಗಿಲ್ಯಾದ್ಯನಾದ ಬರ್ಜಿಲ್ಲೈಯು ಅರಸ ನನ್ನು ಎನ್ರೋಗೆಲೀಮಿನಿಂದ ಯೊರ್ದನನ್ನು ದಾಟಿ ಸಲು ಬಂದನು. ಈ ಬರ್ಜಿಲ್ಲೈಯು ಎಂಭತ್ತು ವರುಷ ದವನಾಗಿ ಮಹಾವೃದ್ಧನಾಗಿದ್ದನು. ಅರಸನು ಮಹನ ಯಿಮಿನಲ್ಲಿ ವಾಸಿಸಿರುವ ವರೆಗೂ ಇವನು ಅವನನ್ನು ಸಂರಕ್ಷಿಸಿದನು; ಯಾಕಂದರೆ ಅವನು ಮಹಾ ದೊಡ್ಡ ಮನುಷ್ಯನಾಗಿದ್ದನು. ಆದದರಿಂದ ಅರಸನು ಬರ್ಜಿಲ್ಲೈಗೆ--ನೀನು ನನ್ನ ಸಂಗಡ ಬಾ, ಯೆರೂಸ ಲೇಮಿನಲ್ಲಿ ನಿನ್ನನ್ನು ನನ್ನ ಬಳಿಯಲ್ಲಿ ಸಂರಕ್ಷಿಸುವೆನು ಅಂದನು. ಆದರೆ ಬರ್ಜಿಲ್ಲೈಯು ಅರಸನಿಗೆ--ನಾನು ಅರಸನ ಸಂಗಡ ಯೆರೂಸಲೇಮಿಗೆ ಹೋಗುವ ಹಾಗೆ ನಾನು ಬದುಕುವ ವರುಷ ಎಷ್ಟು ಉಂಟು? ನಾನು ಈಹೊತ್ತು ಎಂಭತ್ತು ವರುಷದವನು; ಇನ್ನು ಒಳ್ಳೇದು ಕೆಟ್ಟದ್ದು ಎಂಬ ಭೇದ ತಿಳಿಯುವೆನೋ? ತಿನ್ನುವದೂ ಕುಡಿಯುವದೂ ನಿನ್ನ ಸೇವಕನಿಗೆ ರುಚಿಕರ ವಾಗಿರುವದೋ? ಸಂಗೀತಗಾರರ ಸಂಗೀತಗಾರ್ತಿ ಯರ ಶಬ್ದವನ್ನು ಇನ್ನು ಕೇಳುವೆನೋ? ಹಾಗಾದರೆ ನಿನ್ನ ಸೇವಕನು ಅರಸನಾದ ನನ್ನ ಒಡೆಯನಿಗೆ ಯಾಕೆ ಇನ್ನು ಭಾರವಾಗಿರಬೇಕು? ನಿನ್ನ ಸೇವಕನು ಸ್ವಲ್ಪ ದೂರ ಯೊರ್ದನನ್ನು ದಾಟುವ ವರೆಗೂ ಅರಸನ ಸಂಗಡ ಬರುವನು; ಅದಕ್ಕೆ ಇಂಥಾ ಬಹುಮಾನ ಕೊಡುವದೇನು? ಅಪ್ಪಣೆ ಆದರೆ ನಿನ್ನ ಸೇವಕನಾದ ನಾನು ತಿರಿಗಿ ಹೋಗಿ ನನ್ನ ಪಟ್ಟಣದಲ್ಲಿ ನನ್ನ ತಂದೆ ತಾಯಿಗಳ ಸಮಾಧಿಯ ಬಳಿಯಲ್ಲಿ ಸಾಯುತ್ತೇನೆ. ಆದರೆ ಅರಸನಾದ ನನ್ನ ಒಡೆಯನ ಸಂಗಡ ಇಗೋ, ನಿನ್ನ ಸೇವಕನಾದ ಕಿಮ್ಹಾಮನು ಬರುವನು; ನಿನ್ನ ದೃಷ್ಟಿಗೆ ಒಳ್ಳೇದಾಗಿರುವದನ್ನು ಅವನಿಗೆ ಮಾಡು ಅಂದನು. ಅರಸನು--ಕಿಮ್ಹಾಮನು ನನ್ನ ಸಂಗಡ ಬರಲಿ; ನಿನ್ನ ದೃಷ್ಟಿಗೆ ಒಳ್ಳೇದಾಗಿರುವದನ್ನು ನಾನು ಅವನಿಗೆ ಮಾಡುವೆನು; ನಿನಗೆ ನನ್ನಿಂದ ಬೇಕಾದದ್ದೆಲ್ಲಾ ಮಾಡುವೆನು ಅಂದನು. ಜನರೆಲ್ಲರು ಯೊರ್ದನನ್ನು ದಾಟಿದರು. ಅರಸನು ದಾಟಿ ಬಂದಾಗ ಬರ್ಜಿಲ್ಲೈ ಯನ್ನು ಮುದ್ದಿಟ್ಟು ಅವನನ್ನು ಆಶೀರ್ವದಿಸಿದನು.
- Psalm 45:12 ಕೀರ್ತನೆಗಳು 45:12ತೂರಿನ ಮಗಳು ಕಾಣಿಕೆಯೊಂದಿಗೆ ಅಲ್ಲಿ ಇರುವಳು; ಅಂದರೆ ಪ್ರಜೆ ಗಳಲ್ಲಿ ಸ್ಥಿತಿವಂತರು ನಿನ್ನ ದಯೆಯನ್ನು ಕೋರುವರು.
- Genesis 43:15 ಆದಿಕಾಂಡ 43:15ಆಗ ಅವರು ಆ ಕಾಣಿಕೆಯನ್ನೂ ತಮ್ಮ ಕೈಗಳಲ್ಲಿ ಎರಡರಷ್ಟು ಹಣವನ್ನೂ ತೆಗೆದುಕೊಂಡು ಬೆನ್ಯಾವಿಾನ ನನ್ನೂ ಕರಕೊಂಡು ಐಗುಪ್ತಕ್ಕೆ ಇಳಿದುಹೋಗಿ ಯೋಸೇಫನ ಮುಂದೆ ನಿಂತರು.
- Genesis 32:20 ಆದಿಕಾಂಡ 32:20ಇದಲ್ಲದೆ--ನಿನ್ನ ದಾಸನಾದ ಯಾಕೋಬನು ನಮ್ಮ ಹಿಂದೆ ಬರುತ್ತಾನೆಂದು ಹೇಳಬೇಕು ಎಂದು ಆಜ್ಞಾಪಿಸಿದನು. ಯಾಕಂದರೆ ನನ್ನ ಮುಂದೆ ಹೋಗುವ ಕಾಣಿಕೆಯಿಂದ ಅವನನ್ನು ಸಮಾಧಾನಪಡಿಸುವೆನು. ತರುವಾಯ ಅವನ ಮುಖವನ್ನು ನೋಡುವೆನು; ಅವನು ನನ್ನನ್ನು ಅಂಗೀಕರಿಸುವನೇನೋ ಎಂದು ಅಂದು ಕೊಂಡನು.