Proverbs · chapter 19 · verse 8
Proverbs 19:8 in Kannada
ಜ್ಞಾನವನ್ನು ಸಂಪಾದಿಸಿಕೊಳ್ಳುವವನು ತನ್ನ ಪ್ರಾಣ ವನ್ನು ಪ್ರೀತಿಸುತ್ತಾನೆ; ವಿವೇಕವನ್ನು ಕೈಕೊಳ್ಳುವವನು ಒಳ್ಳೇದನ್ನು ಕಂಡುಕೊಳ್ಳುವನು.
Jnyaanavannu sampaadisikolluvavanu tanna praana vannu preetisuttaane; vivekavannu kaikolluvavanu olledannu kandukolluvanu.
Proverbs 19:8 in English
- King James Version (KJV)
- He that getteth wisdom loveth his own soul: he that keepeth understanding shall find good.
- World English Bible (WEB)
- He who gets wisdom loves his own soul. He who keeps understanding shall find good.
- American Standard Version (ASV)
- He that getteth wisdom loveth his own soul: He that keepeth understanding shall find good.
- Bible in Basic English (BBE)
- He who gets wisdom has love for his soul: he who keeps good sense will get what is truly good.
- Darby Translation (DBY)
- He that getteth sense loveth his own soul; he that keepeth understanding shall find good.
- Webster's Bible (WBS)
- He that getteth wisdom loveth his own soul: he that keepeth understanding shall find good.
- Young's Literal Translation (YLT)
- Whoso is getting heart is loving his soul, He is keeping understanding to find good.
Read in context
- 6ಅಧಿಪ ತಿಯ ದಯೆಗಾಗಿ ಅನೇಕರು ಬಿನ್ನವಿಸುವರು; ದಾನಗ ಳನ್ನು ಕೊಡುವವನಿಗೆ ಪ್ರತಿಯೊಬ್ಬನೂ ಸ್ನೇಹಿತನೇ.
- 7ಬಡವನ ಸಹೋದರರೆಲ್ಲಾ ಅವನನ್ನು ಹಗೆಮಾಡು ತ್ತಾರೆ. ತನ್ನ ಸ್ನೇಹಿತರು ತನ್ನಿಂದ ಎಷ್ಟೋ ಹೆಚ್ಚಾಗಿ ದೂರ ಹೋಗುತ್ತಾರಲ್ಲವೇ? ಮಾತುಗಳಿಂದ ಅವನು ಹಿಂಬಾಲಿಸಿದರೂ ಅವು ಅವನಿಗೆ ಸಾಲುವದಿಲ್ಲ.
- 8ಜ್ಞಾನವನ್ನು ಸಂಪಾದಿಸಿಕೊಳ್ಳುವವನು ತನ್ನ ಪ್ರಾಣ ವನ್ನು ಪ್ರೀತಿಸುತ್ತಾನೆ; ವಿವೇಕವನ್ನು ಕೈಕೊಳ್ಳುವವನು ಒಳ್ಳೇದನ್ನು ಕಂಡುಕೊಳ್ಳುವನು.
- 9ಸುಳ್ಳು ಸಾಕ್ಷಿಯು ಶಿಕ್ಷಿಸಲ್ಪಡದೆ ಇರುವದಿಲ್ಲ; ಸುಳ್ಳಾಡುವವನು ನಾಶವಾ ಗುವನು.
- 10ಬುದ್ಧಿಹೀನನಿಗೆ ಆನಂದವು ಯುಕ್ತವಲ್ಲ; ಅಧಿಪತಿಗಳ ಮೇಲೆ ದೊರೆತನ ಮಾಡುವದು ಸೇವಕ ನಿಗೆ ಯುಕ್ತವೇ ಅಲ್ಲ.
Cross references
- Proverbs 16:20 ಜ್ಞಾನೋಕ್ತಿಗಳು 16:20ಕಾರ್ಯವನ್ನು ಜ್ಞಾನದಿಂದ ನಡಿಸುವವನು ಒಳ್ಳೇದನ್ನು ಪಡೆಯುವನು; ಕರ್ತನಲ್ಲಿ ಭರವಸವಿಡುವವನು ಧನ್ಯನು.
- Proverbs 8:35–36 ಜ್ಞಾನೋಕ್ತಿಗಳು 8:35–36ನನ್ನನ್ನು ಕಂಡುಕೊಳ್ಳುವವನು ಜೀವವನ್ನು ಕಂಡುಕೊಂಡು ಕರ್ತನ ದಯವನ್ನು ಹೊಂದುವನು.ಆದರೆ ನನಗೆ ವಿರೋಧವಾಗಿ ಪಾಪಮಾಡುವವನು ತನ್ನ ಸ್ವಂತ ಪ್ರಾಣಕ್ಕೆ ಕೇಡುಮಾಡಿಕೊಳ್ಳುತ್ತಾನೆ. ನನ್ನನ್ನು ಹಗೆಮಾಡುವವರೆಲ್ಲರೂ ಮರಣವನ್ನು ಪ್ರೀತಿಸುತ್ತಾರೆ. ಆದರೆ ನನಗೆ ವಿರೋಧವಾಗಿ ಪಾಪಮಾಡುವವನು ತನ್ನ ಸ್ವಂತ ಪ್ರಾಣಕ್ಕೆ ಕೇಡುಮಾಡಿಕೊಳ್ಳುತ್ತಾನೆ. ನನ್ನನ್ನು ಹಗೆಮಾಡುವವರೆಲ್ಲರೂ ಮರಣವನ್ನು ಪ್ರೀತಿಸುತ್ತಾರೆ.
- Proverbs 4:6 ಜ್ಞಾನೋಕ್ತಿಗಳು 4:6ಅವುಗಳನ್ನು ತ್ಯಜಿಸ ದಿದ್ದರೆ ಅವು ನಿನ್ನನ್ನು ಕಾಯುವವು, ಅವುಗಳನ್ನು ಪ್ರೀತಿಸಿದರೆ ಅವು ನಿನ್ನನ್ನು ಕಾಪಾಡುವವು.
- Proverbs 3:18 ಜ್ಞಾನೋಕ್ತಿಗಳು 3:18ತನ್ನನ್ನು ಹಿಡಿದುಕೊಳ್ಳುವ ವರಿಗೆ ಆಕೆಯು ಜೀವದ ವೃಕ್ಷವಾಗಿದ್ದಾಳೆ; ಆಕೆಯನ್ನು ಭದ್ರವಾಗಿ ಇಟ್ಟುಕೊಳ್ಳುವ ಪ್ರತಿಯೊಬ್ಬನೂ ಧನ್ಯನು.
- 1 Peter 3:10 1 ಪೇತ್ರನು 3:10ಜೀವವನ್ನು ಪ್ರೀತಿಸಿ ಸುದಿನಗಳನ್ನು ನೋಡುವದಕ್ಕೆ ಇಷ್ಟವುಳ್ಳವನು ಕೆಟ್ಟ ದ್ದನ್ನು ನುಡಿಯದಂತೆ ತನ್ನ ನಾಲಿಗೆಯನ್ನೂ ವಂಚನೆಯ ಮಾತುಗಳನ್ನಾಡದ ಹಾಗೆ ತನ್ನ ತುಟಿಗಳನ್ನೂ ಬಿಗಿ ಹಿಡಿಯಲಿ.
- John 14:21 ಯೋಹಾನನು 14:21ನನ್ನ ಆಜ್ಞೆಗಳನ್ನು ಹೊಂದಿ ಅವುಗಳನ್ನು ಅನುಸರಿಸುವವನೇ ನನ್ನನ್ನು ಪ್ರೀತಿಸುವವನು; ನನ್ನನ್ನು ಪ್ರೀತಿಸುವವನನ್ನು ನನ್ನ ತಂದೆಯೂ ಪ್ರೀತಿಸುವನು. ನಾನು ಅವನನ್ನು ಪ್ರೀತಿಸಿ ಅವನಿಗೆ ನನ್ನನ್ನು ವ್ಯಕ್ತಪಡಿಸಿ ಕೊಳ್ಳುವೆನು ಎಂದು ಹೇಳಿದನು.
- Proverbs 2:1–9 ಜ್ಞಾನೋಕ್ತಿಗಳು 2:1–9ನನ್ನ ಮಗನೇ, ನನ್ನ ಮಾತುಗಳನ್ನು ನೀನು ಅಂಗೀಕರಿಸಿ ನನ್ನ ಆಜ್ಞೆಗಳನ್ನು ನಿನ್ನಲ್ಲಿ ಬಚ್ಚಿಟ್ಟುಕೊಂಡರೆ ನೀನು ಜ್ಞಾನಕ್ಕೆ ಕಿವಿಗೊಡು ವಂತೆಯೂ ತಿಳುವಳಿಕೆಗೆ ನಿನ್ನ ಹೃದಯವನ್ನು ತಿರು ಗಿಸುವಂತೆಯೂ ಹೌದು, ತಿಳುವಳಿಕೆಗಾಗಿ ಮೊರೆ ಯಿಟ್ಟು ವಿವೇಕಕ್ಕಾಗಿ ನಿನ್ನ ಸ್ವರವನ್ನು ಎತ್ತಿ ಬೆಳ್ಳಿ ಯಂತೆ ನೀನು ಅದನ್ನು ಹುಡುಕಿ ಬಚ್ಚಿಡಲ್ಪಟ್ಟ ಸಂಪ ತ್ತಿನಂತೆ ಅದಕ್ಕಾಗಿ ಹುಡುಕಿದರೆ, ನೀನು ಕರ್ತನ ಭಯವನ್ನು ತಿಳಿದುಕೊಳ್ಳುವಿ. ದೇವರ ಜ್ಞಾನವನ್ನು ಕಂಡುಕೊಳ್ಳುವಿ. ಜ್ಞಾನವನ್ನು ಕರ್ತನೇ ಕೊಡುತ್ತಾನೆ; ಆತನ ಬಾಯಿಂದಲೇ ತಿಳುವಳಿಕೆಯೂ ವಿವೇಕವೂ ಹೊರಟು ಬರುತ್ತವೆ. ನೀತಿವಂತರಿಗೋಸ್ಕರ ಆತನು ಸುಜ್ಞಾನವನ್ನು ಕೂಡಿಸುವನು. ಯಥಾರ್ಥದಿಂದ ನಡೆದುಕೊಳ್ಳುವವರಿಗೆ ಆತನು ಗುರಾಣಿಯಾಗಿದ್ದಾನೆ. ತೀರ್ಪಿನ ದಾರಿಗಳನ್ನು ಆತನು ಕಾಯುತ್ತಾನೆ. ತನ್ನ ಪರಿಶುದ್ಧರ ಮಾರ್ಗವನ್ನು ಭದ್ರಪಡಿಸುತ್ತಾನೆ. ಆಗ ನೀನು ನ್ಯಾಯವನ್ನೂ ತೀರ್ಪನ್ನೂ ನೀತಿಯನ್ನೂ ಮಾತ್ರವಲ್ಲದೆ ಪ್ರತಿಯೊಂದು ಸನ್ಮಾರ್ಗವನ್ನೂ ತಿಳಿದು ಕೊಳ್ಳುವಿ.
- Psalm 19:11 ಕೀರ್ತನೆಗಳು 19:11ನಿನ್ನ ಸೇವಕನು ಅವುಗಳಿಂದ ಎಚ್ಚರಿಸಲ್ಪಡು ತ್ತಾನೆ; ಅವುಗಳನ್ನು ಕೈಕೊಳ್ಳುವದರಲ್ಲಿ ದೊಡ್ಡ ಪ್ರತಿ ಫಲ ಉಂಟು.
- Proverbs 4:21 ಜ್ಞಾನೋಕ್ತಿಗಳು 4:21ಅವುಗಳು ನಿನ್ನ ಕಣ್ಣುಗಳಿಗೆ ತಪ್ಪಿಹೋಗದೆ ಇರಲಿ; ಅವುಗಳನ್ನು ನಿನ್ನ ಹೃದಯದ ಮಧ್ಯದಲ್ಲಿ ಇಟ್ಟುಕೋ.
- Ezekiel 36:26 ಯೆಹೆಜ್ಕೇಲನು 36:26ನಿನಗೆ ಹೊಸ ಹೃದಯವನ್ನು ಕೊಟ್ಟು ಹೊಸ ಆತ್ಮ ವನ್ನು ನಿಮ್ಮೊಳಗೆ ಇಡುವೆನು; ನಿಮ್ಮ ದೇಹದಿಂದ ಕಲ್ಲಿನ ಹೃದಯವನ್ನು ಹೊರಗೆ ತೆಗೆದು ನಿಮಗೆ ಮಾಂಸದ ಹೃದಯವನ್ನು ಕೊಡುತ್ತೇನೆ.
- Proverbs 4:4 ಜ್ಞಾನೋಕ್ತಿಗಳು 4:4ಅವನು ಬೋಧಿಸಿ ನನಗೆ ಹೇಳಿದ್ದೇ ನಂದರೆ--ನನ್ನ ಮಾತುಗಳನ್ನು ನಿನ್ನ ಹೃದಯವು ಹಿಡಿದುಕೊಳ್ಳಲಿ; ನನ್ನ ಆಜ್ಞೆಗಳನ್ನು ಕೈಕೊಂಡು ಜೀವಿಸು.
- Proverbs 17:16 ಜ್ಞಾನೋಕ್ತಿಗಳು 17:16ಬುದ್ಧಿಹೀನನಿಗೆ ಮನಸ್ಸಿಲ್ಲದೆ ಇರು ವದರಿಂದ ಜ್ಞಾನವನ್ನು ಸಂಪಾದಿಸುವದಕ್ಕೆ ಅವನ ಕೈಯಲ್ಲಿ ಕ್ರಯ ಯಾಕೆ?