Proverbs · chapter 22 · verse 3
Proverbs 22:3 in Kannada
ಜಾಣನು ಕೇಡನ್ನು ಮುಂದಾಗಿ ನೋಡಿ ಅಡಗಿಕೊಳ್ಳುತ್ತಾನೆ; ಬುದ್ಧಿಹೀನರು ಮುಂದೆ ಹೋಗಿ ಶಿಕ್ಷೆಯನ್ನು ಹೊಂದುತ್ತಾರೆ.
Jaananu kedannu mundaagi nodi adagikolluttaane; buddhiheenaru munde hogi shiksheyannu honduttaare.
Proverbs 22:3 in English
- King James Version (KJV)
- A prudent [man] foreseeth the evil, and hideth himself: but the simple pass on, and are punished.
- World English Bible (WEB)
- A prudent man sees danger and hides himself; but the simple pass on, and suffer for it.
- American Standard Version (ASV)
- A prudent man seeth the evil, and hideth himself; But the simple pass on, and suffer for it.
- Bible in Basic English (BBE)
- The sharp man sees the evil and takes cover: the simple go straight on and get into trouble.
- Darby Translation (DBY)
- A prudent [man] seeth the evil, and hideth himself; but the simple pass on, and are punished.
- Webster's Bible (WBS)
- A prudent [man] foreseeth the evil, and hideth himself: but the simple pass on, and are punished.
- Young's Literal Translation (YLT)
- The prudent hath seen the evil, and is hidden, And the simple have passed on, and are punished.
Read in context
- 1ಬಹು ಐಶ್ವರ್ಯಕ್ಕಿಂತಲೂ ಒಳ್ಳೆಯ ಹೆಸರನ್ನೂ ಬೆಳ್ಳಿ ಬಂಗಾರಕ್ಕಿಂತ ಪ್ರೀತಿಯ ದಯವನ್ನೂ ಆರಿಸಿಕೊಳ್ಳುವದು ಉತ್ತಮ.
- 2ಧನಿಕರು, ಬಡವರು ಒಟ್ಟಾಗಿ ಸಂಧಿಸುತ್ತಾರೆ; ಅವರೆಲ್ಲರನ್ನು ಸೃಷ್ಟಿಸಿದಾತನು ಕರ್ತನೇ.
- 3ಜಾಣನು ಕೇಡನ್ನು ಮುಂದಾಗಿ ನೋಡಿ ಅಡಗಿಕೊಳ್ಳುತ್ತಾನೆ; ಬುದ್ಧಿಹೀನರು ಮುಂದೆ ಹೋಗಿ ಶಿಕ್ಷೆಯನ್ನು ಹೊಂದುತ್ತಾರೆ.
- 4ಐಶ್ವ ರ್ಯವೂ ಮಾನವೂ ಜೀವವೂ ವಿನಯ ಕರ್ತನ ಭಯದಿಂದಲೇ.
- 5ಮೂಢರ ದಾರಿಯಲ್ಲಿ ಮುಳ್ಳು ಗಳೂ ಉರುಲುಗಳೂ ಇವೆ; ತನ್ನ ಪ್ರಾಣವನ್ನು ಕಾಪಾ ಡಿಕೊಳ್ಳುವವನು ಅವುಗಳಿಂದ ದೂರವಾಗಿರುವನು.
Cross references
- Proverbs 27:12 ಜ್ಞಾನೋಕ್ತಿಗಳು 27:12ಜಾಣನು ಕೇಡನ್ನು ಮುಂದಾಗಿ ನೋಡಿ ಅಡಗಿಕೊಳ್ಳುತ್ತಾನೆ; ಬುದ್ಧಿಹೀನನು ಮುಂದೆ ಹೋಗಿ ಶಿಕ್ಷಿಸಲ್ಪಡುತ್ತಾನೆ.
- Proverbs 14:16 ಜ್ಞಾನೋಕ್ತಿಗಳು 14:16ಜ್ಞಾನಿ ಯು ಭಯಪಟ್ಟು ಕೆಟ್ಟತನದಿಂದ ಹೊರಟುಹೋಗು ವನು; ಬುದ್ಧಿಹೀನನು ಕೋಪಿಸಿಕೊಂಡು ಧೈರ್ಯದಿಂದ ಇರುತ್ತಾನೆ.
- Proverbs 29:1 ಜ್ಞಾನೋಕ್ತಿಗಳು 29:1ಅನೇಕ ಸಲ ಗದರಿಸಲ್ಪಟ್ಟರೂ ಬಗ್ಗದಕುತ್ತಿಗೆಯವನು ಏಳದ ಹಾಗೆ ಫಕ್ಕನೆ ಮುರಿದು ಬೀಳುವನು.
- 1 Thessalonians 5:2–6 1 ಥೆಸಲೊನೀಕದವರಿಗೆ 5:2–6ರಾತ್ರಿ ಕಾಲದಲ್ಲಿ ಕಳ್ಳನು ಹೇಗೆ ಬರುತ್ತಾನೋ ಹಾಗೆಯೇ ಕರ್ತನ ದಿನವು ಬರುವ ದೆಂದು ನೀವೇ ಚೆನ್ನಾಗಿ ತಿಳಿದಿದ್ದೀರಲ್ಲಾ. ಆದರೆ--ಸಮಾಧಾನವಾಗಿಯೂ ಸುರಕ್ಷಿತವಾಗಿಯೂ ಇರುತ್ತೇ ವೆಂದು ಜನರು ಹೇಳುತ್ತಿರುವಾಗಲೇ ಅವರ ಮೇಲೆ ನಾಶನವು ಗರ್ಭಿಣಿಗೆ ಪ್ರಸವವೇದನೆ ಬರುವ ಪ್ರಕಾರ ಬರುವದು; ಅವರು ಹೇಗೂ ತಪ್ಪಿಸಿಕೊಳ್ಳಲಾರರು. ಆದರೆ ಸಹೋದರರೇ, ಆ ದಿನವು ಕಳ್ಳನಂತೆ ನಿಮ್ಮ ಮೇಲೆ ಬರತಕ್ಕದ್ದಲ್ಲ; ನೀವು ಕತ್ತಲೆಯಲ್ಲಿರುವವರಲ್ಲ. ನೀವೆಲ್ಲರೂ ಬೆಳಕಿನ ಮಕ್ಕಳೂ ಹಗಲಿನ ಮಕ್ಕಳೂ ಆಗಿದ್ದೀರಷ್ಟೆ; ನಾವು ರಾತ್ರಿಯವರೂ ಅಲ್ಲ, ಕತ್ತಲೆ ಯವರೂ ಅಲ್ಲ. ಆದಕಾರಣ ನಾವು ಇತರರಂತೆ ನಿದ್ರೆಮಾಡದೆ ಎಚ್ಚರವಾಗಿರೋಣ, ಸ್ವಸ್ಥಚಿತ್ತರಾಗಿ ರೋಣ.
- Hebrews 11:7 ಇಬ್ರಿಯರಿಗೆ 11:7ನಂಬಿಕೆಯಿಂದಲೇ ನೋಹನು ಇನ್ನೂ ಕಾಣದಿದ್ದವುಗಳ ವಿಷಯವಾಗಿ ದೇವರಿಂದ ಎಚ್ಚರಿಸ ಲ್ಪಟ್ಟು ಭಯಗ್ರಸ್ತನಾಗಿ ತನ್ನ ಮನೆಯವರ ರಕ್ಷಣೆಗಾಗಿ ನಾವೆಯನ್ನು ಸಿದ್ಧ ಮಾಡಿದನು. ಆದರಿಂದ ಅವನು ಲೋಕದವರನ್ನು ಖಂಡಿಸಿ ತರುವಾಯ ನಂಬಿಕೆಯಿಂ ದುಂಟಾಗುವ ನೀತಿಗೆ ಬಾಧ್ಯನಾದನು.
- Proverbs 7:7 ಜ್ಞಾನೋಕ್ತಿಗಳು 7:7ಯುವಕರ ಮಧ್ಯದಲ್ಲಿ ತಿಳುವಳಿಕೆಯಿಲ್ಲದ ಒಬ್ಬ ಯೌವನಸ್ಥನನ್ನು ಕಂಡೆನು.
- Proverbs 7:22–23 ಜ್ಞಾನೋಕ್ತಿಗಳು 7:22–23ಎತ್ತು ವಧೆಯ ಸ್ಥಾನಕ್ಕೆ ಹೋಗುವಂತೆ ಇಲ್ಲವೆ ಮೂರ್ಖನು ಶಿಕ್ಷೆಯ ದಂಡನೆಗೆ ಹೋಗುವಂತೆ ಒಂದು ಬಾಣವು ತನ್ನ ಕಾಳಿಜವನ್ನು ತಿವಿಯುವ ವರೆಗೆ ತನ್ನ ಪ್ರಾಣಕ್ಕಾಗಿ ಬಲೆಯನ್ನು ಒಡ್ಡಿದ್ದಾನೆಂದು ತಿಳಿಯದೆ ಪಕ್ಷಿಯು ಬಲೆಯ ಕಡೆಗೆ ಓಡುವ ಹಾಗೆ ಅವನು ತಟ್ಟನೆ ಅವಳ ಹಿಂದೆ ಹೋಗುತ್ತಾನೆ.
- Hebrews 6:18 ಇಬ್ರಿಯರಿಗೆ 6:18ಆಶ್ರಯವನ್ನು ಹೊಂದುವದಕ್ಕೆ ಓಡಿ ಬಂದು ನಮ್ಮ ಮುಂದೆ ಇಟ್ಟಿರುವ ನಿರೀಕ್ಷೆಯನ್ನು ಹಿಡುಕೊಂಡವರಾದ ನಮಗೆ ಸುಳ್ಳಾಡದ ದೇವರ ಎರಡು ನಿಶ್ಚಲವಾದ ಆಧಾರಗಳಲ್ಲಿ ನಮಗೆ ಬಲವಾದ ಆದರಣೆ ಉಂಟಾ ಯಿತು.
- Isaiah 26:20–21 ಯೆಶಾಯ 26:20–21ನನ್ನ ಜನರೇ, ಬನ್ನಿರಿ, ನಿಮ್ಮ ಕೋಣೆಗಳಲ್ಲಿ ಸೇರಿ ಬಾಗಲನ್ನು ಮುಚ್ಚಿಕೊಳ್ಳಿರಿ; ಸ್ವಲ್ಪ ಹೊತ್ತು ಅಡಗಿಕೊಂಡು ರೋಷವು ಹಾದುಹೋಗುವ ತನಕ ಇರ್ರಿ.ಇಗೋ, ಭೂನಿವಾಸಿಗಳ ದುಷ್ಕೃತ್ಯಗಳನ್ನು ಶಿಕ್ಷಿಸು ವದಕ್ಕೆ ಕರ್ತನು ತನ್ನ ಸ್ಥಳದಿಂದ ಹೊರಟಿದ್ದಾನೆ; ಭೂಮಿಯು ಸಹ ತನ್ನಲ್ಲಿ ಕೊಂದು ಹಾಕಿದವರನ್ನು ಇನ್ನು ಮುಚ್ಚಿಕೊಳ್ಳದೆ ತನ್ನಲ್ಲಿರುವ ರಕ್ತಾಪರಾಧವನ್ನು ಪ್ರಕಟಮಾಡುವದು. ಇಗೋ, ಭೂನಿವಾಸಿಗಳ ದುಷ್ಕೃತ್ಯಗಳನ್ನು ಶಿಕ್ಷಿಸು ವದಕ್ಕೆ ಕರ್ತನು ತನ್ನ ಸ್ಥಳದಿಂದ ಹೊರಟಿದ್ದಾನೆ; ಭೂಮಿಯು ಸಹ ತನ್ನಲ್ಲಿ ಕೊಂದು ಹಾಕಿದವರನ್ನು ಇನ್ನು ಮುಚ್ಚಿಕೊಳ್ಳದೆ ತನ್ನಲ್ಲಿರುವ ರಕ್ತಾಪರಾಧವನ್ನು ಪ್ರಕಟಮಾಡುವದು.
- Exodus 9:20–21 ವಿಮೋಚನಕಾಂಡ 9:20–21ಆಗ ಫರೋಹನ ಸೇವಕರಲ್ಲಿ ಕರ್ತನ ವಾಕ್ಯಕ್ಕೆ ಭಯಪಟ್ಟವರೆಲ್ಲರೂ ತಮ್ಮ ದಾಸರನ್ನೂ ಪಶುಗಳನ್ನೂ ಮನೆಗಳಿಗೆ ಓಡಿಬರುವಂತೆ ಮಾಡಿದರು. ಆದರೆ ಕರ್ತನ ವಾಕ್ಯಕ್ಕೆ ಮನಸ್ಸು ಕೊಡದವರು ತಮ್ಮ ದಾಸ ರನ್ನೂ ಪಶುಗಳನ್ನೂ ಹೊಲದಲ್ಲಿ ಬಿಟ್ಟರು.
- Matthew 24:15–18 ಮತ್ತಾಯನು 24:15–18ಆದದರಿಂದ ಪ್ರವಾದಿಯಾದ ದಾನಿಯೇಲನಿಂದ ಹೇಳಲ್ಪಟ್ಟ ಹಾಳುಮಾಡುವ ಅಸಹ್ಯವು ಪರಿಶುದ್ಧ ಸ್ಥಳದಲ್ಲಿ ನಿಂತಿರುವದನ್ನು ನೀವು ನೋಡುವಾಗ (ಓದುವವನು ಗ್ರಹಿಸಲಿ) ಯೂದಾಯದಲ್ಲಿ ದ್ದವರು ಬೆಟ್ಟಗಳಿಗೆ ಓಡಿ ಹೋಗಲಿ; ಮಾಳಿಗೆಯ ಮೇಲಿರುವವನು ತನ್ನ ಮನೆಯೊಳಗಿಂದ ಏನಾದರೂ ತಕ್ಕೊಳ್ಳುವದಕ್ಕಾಗಿ ಕೆಳಗೆ ಇಳಿಯದಿರಲಿ; ಇಲ್ಲವೆ ಹೊಲದಲ್ಲಿರುವವನು ತನ್ನ ಬಟ್ಟೆಗಳನ್ನು ತಕ್ಕೊಳ್ಳುವ ದಕ್ಕಾಗಿ ಹಿಂತಿರುಗದೆ ಇರಲಿ.
- Proverbs 9:16–18 ಜ್ಞಾನೋಕ್ತಿಗಳು 9:16–18ಯಾವನು ಮೂಢನೋ ಅವನು ಇಲ್ಲಿಗೆ ತಿರುಗಲಿ; ವಿವೇಕವಿಲ್ಲದವನಿಗೆ ಆಕೆಯು-- ಕದಿಯಲ್ಪಟ್ಟ ನೀರುಗಳು ಸಿಹಿಯಾಗಿವೆ ರಹಸ್ಯ ದಲ್ಲಿ ತಿನ್ನುವ ರೊಟ್ಟಿಯು ರುಚಿಯಾಗಿದೆ ಎಂದು ಹೇಳುತ್ತಾಳೆ.ಆದರೆ ಸತ್ತವರು ಅಲ್ಲಿದ್ದಾರೆಂದೂ ಪಾತಾಳದ ಅಗಾಧಗಳಲ್ಲಿ ಅವಳ ಅಥಿತಿಗಳು ಇದ್ದಾ ರೆಂದೂ ಅವನಿಗೆ ತಿಳಿಯದು. ಆದರೆ ಸತ್ತವರು ಅಲ್ಲಿದ್ದಾರೆಂದೂ ಪಾತಾಳದ ಅಗಾಧಗಳಲ್ಲಿ ಅವಳ ಅಥಿತಿಗಳು ಇದ್ದಾ ರೆಂದೂ ಅವನಿಗೆ ತಿಳಿಯದು.