Proverbs · chapter 23 · verse 28
Proverbs 23:28 in Kannada
ಪ್ರಾಣಿಗಾಗಿಯೋ ಎಂಬಂತೆ ಅವಳು ಹೊಂಚು ಹಾಕಿ ಮನುಷ್ಯರಲ್ಲಿ ದೋಷಗಳನ್ನು ಹೆಚ್ಚಿಸುತ್ತಾಳೆ.
Praanigaagiyo embante avalu honchu haaki manushyaralli doshagalannu hechchisuttaale.
Proverbs 23:28 in English
- King James Version (KJV)
- She also lieth in wait as [for] a prey, and increaseth the transgressors among men.
- World English Bible (WEB)
- Yes, she lies in wait like a robber, and increases the unfaithful among men.
- American Standard Version (ASV)
- Yea, she lieth in wait as a robber, And increaseth the treacherous among men.
- Bible in Basic English (BBE)
- Yes, she is waiting secretly like a beast for its food, and deceit by her is increased among men.
- Darby Translation (DBY)
- She also lieth in wait as a robber, and increaseth the treacherous among men.
- Webster's Bible (WBS)
- She also lieth in wait as [for] a prey, and increaseth the transgressors among men.
- Young's Literal Translation (YLT)
- She also, as catching prey, lieth in wait, And the treacherous among men she increaseth.
Read in context
- 26ನನ್ನ ಮಗನೇ, ನಿನ್ನ ಹೃದಯ ವನ್ನು ನನಗೆ ಕೊಡು; ನನ್ನ ಮಾರ್ಗಗಳನ್ನು ನಿನ್ನ ಕಣ್ಣುಗಳು ದೃಷ್ಟಿಯಿಟ್ಟು ನೋಡಲಿ.
- 27ಸೂಳೆಯು ಆಳವಾದ ಕುಣಿ; ಪರಸ್ತ್ರೀಯು ಇಕ್ಕಟ್ಟಾದ ಗುಂಡಿ.
- 28ಪ್ರಾಣಿಗಾಗಿಯೋ ಎಂಬಂತೆ ಅವಳು ಹೊಂಚು ಹಾಕಿ ಮನುಷ್ಯರಲ್ಲಿ ದೋಷಗಳನ್ನು ಹೆಚ್ಚಿಸುತ್ತಾಳೆ.
- 29ಯಾರಿಗೆ ಅಯ್ಯೋ? ಯಾರಿಗೆ ದುಃಖ? ಯಾರಿಗೆ ಕಲಹಗಳು? ಯಾರು ಗೋಳಾಡುತ್ತಾರೆ? ಯಾರು ಸುಮ್ಮಸುಮ್ಮನೆ ಗಾಯ ಪಡುತ್ತಾರೆ? ಯಾರಿಗೆ ಕೆಂಪೇ ರಿದ ಕಣ್ಣುಗಳು?
- 30ದ್ರಾಕ್ಷಾರಸಕ್ಕಾಗಿ ಕಾದಿರುವಂಥ ವರು ಮಿಶ್ರಿತ ದ್ರಾಕ್ಷಾರಸವನ್ನು ಹುಡುಕುವವರಾಗಿ ಇರುತ್ತಾರೆ.
Cross references
- Ecclesiastes 7:26 ಪ್ರಸಂಗಿ 7:26ತನ್ನ ಹೃದಯವು ಉರುಲುಗಳೂ ಬಲೆ ಗಳೂ ಅವಳ ಕೈಗಳ ಕಟ್ಟುಗಳೂ ಆಗಿರುವ ಸ್ತ್ರೀಯು ಮರಣಕ್ಕಿಂತಲೂ ಕಠೋರವಾಗಿದ್ದಾಳೆಂದು ನಾನು ಕಂಡಿದ್ದೇನೆ. ದೇವರನ್ನು ಮೆಚ್ಚಿಸಿದವನು ಅವಳಿಂದ ತಪ್ಪಿಸಿಕೊಳ್ಳುವನು; ಪಾಪಿಯು ಅವಳಿಂದ ಹಿಡಿಯಲ್ಪ ಡುವನು.
- Hosea 4:11 ಹೋಶೇಯ 4:11ವ್ಯಭಿಚಾರವೂ ದ್ರಾಕ್ಷಾರಸವೂ ಹೊಸ ದ್ರಾಕ್ಷಾರಸವೂ ಹೃದಯವನ್ನು ಕೆಡಿಸುತ್ತದೆ.
- 1 Corinthians 10:8 1 ಕೊರಿಂಥದವರಿಗೆ 10:8ಅವರಲ್ಲಿ ಕೆಲವರು ಜಾರತ್ವಮಾಡಿ ಒಂದೇ ದಿನದಲ್ಲಿ ಇಪ್ಪತ್ತುಮೂರು ಸಾವಿರ ಮಂದಿ ಸತ್ತರು; ನಾವು ಜಾರತ್ವ ಮಾಡದೆ ಇರೋಣ.
- Proverbs 7:12 ಜ್ಞಾನೋಕ್ತಿಗಳು 7:12ಒಂದು ಸಮಯದಲ್ಲಿ ಅವಳು ಹೊರಗೆ ಮತ್ತೊಂದು ಸಮಯದಲ್ಲಿ ಬೀದಿಗಳಲ್ಲಿ ಪ್ರತಿಯೊಂದು ಮೂಲೆ ಯಲ್ಲಿ ಹೊಂಚುಹಾಕುವಳು).
- Proverbs 22:14 ಜ್ಞಾನೋಕ್ತಿಗಳು 22:14ಪರಸ್ತ್ರೀಯ ಬಾಯಿ ಆಳವಾದ ಕುಣಿ; ಕರ್ತನಿಗೆ ಅಸಹ್ಯವಾದವನು ಅದರಲ್ಲಿ ಬೀಳುವನು.
- Revelation 17:1–2 ಪ್ರಕಟನೆ 17:1–2ಏಳು ಪಾತ್ರೆಗಳನ್ನು ಹಿಡಿದಿದ್ದ ಏಳು ಮಂದಿ ದೂತರಲ್ಲಿ ಒಬ್ಬನು ಬಂದು ನನ್ನ ಸಂಗಡ ಮಾತನಾಡಿ--ಇಲ್ಲಿಗೆ ಬಾ, ಬಹಳ ನೀರುಗಳ ಮೇಲೆ ಕೂತಿರುವ ಮಹಾ ಜಾರಸ್ತ್ರೀಗೆ ಬರುವ ದಂಡನೆಯನ್ನು ನಾನು ನಿನಗೆ ತೋರಿಸುತ್ತೇನೆ. ಅವಳೊಂದಿಗೆ ಭೂರಾಜರು ಜಾರತ್ವ ಮಾಡಿದರು. ಭೂನಿವಾಸಿಗಳು ಅವಳ ಜಾರತ್ವವೆಂಬ ದ್ರಾಕ್ಷಾರಸವನ್ನು ಕುಡಿದು ಮತ್ತರಾದರು ಎಂದು ಹೇಳಿದನು.
- Proverbs 2:16–19 ಜ್ಞಾನೋಕ್ತಿಗಳು 2:16–19ಪರಸ್ತ್ರೀ ಯಿಂದ ಅಂದರೆ ತನ್ನ ಮಾತುಗಳಿಂದ ಮುಖಸ್ತುತಿ ಮಾಡುವ ಸ್ತ್ರೀಯಿಂದ ತನ್ನ ದೇವರ ಒಡಂಬಡಿಕೆ ಯನ್ನು ಮರೆತು ತನ್ನ ಯೌವನ ಕಾಲದ ಸಂಗಾತಿ ಯನ್ನು ತ್ಯಜಿಸುವವಳಿಂದ ಅದು ನಿನ್ನನ್ನು ತಪ್ಪಿಸುವದು. ಅವಳ ಮನೆಯು ಮರಣದ ಕಡೆಗೆ, ಅವಳ ದಾರಿ ಗಳು ಮೃತರ ಕಡೆಗೆ ಇಳಿಸುತ್ತವೆ. ಅವಳ ಬಳಿಗೆ ಹೋಗುವ ಯಾವನೂ ಹಿಂತಿರುಗುವದಿಲ್ಲ, ಇಲ್ಲವೆ ಜೀವದ ಮಾರ್ಗಗಳನ್ನು ಅವನು ಹಿಡಿಯುವದೇ ಇಲ್ಲ.
- Jeremiah 3:2 ಯೆರೆಮೀಯ 3:2ನಿನ್ನ ಕಣ್ಣುಗಳನ್ನು ಉನ್ನತ ಸ್ಥಳಗಳ ಮೇಲೆತ್ತುಕೊಂಡು ಎಲ್ಲಿ ನಿನ್ನ ಸಂಗಡ ಮಲಗಲಿಲ್ಲವೋ ನೋಡು. ಅರಣ್ಯದಲ್ಲಿ ಅರಬಿಯನ ಹಾಗೆ ದಾರಿಗಳಲ್ಲಿ ಅವರಿಗೋಸ್ಕರ ಕೂತುಕೊಂಡಿದ್ದೀ; ಹೀಗೆ ನಿನ್ನ ಸೂಳೆತನಗಳಿಂದಲೂ ನಿನ್ನ ಕೆಟ್ಟತನಗಳಿಂದಲೂ ದೇಶವನ್ನು ಅಪವಿತ್ರ ಮಾಡಿದ್ದೀ.
- Proverbs 7:22–27 ಜ್ಞಾನೋಕ್ತಿಗಳು 7:22–27ಎತ್ತು ವಧೆಯ ಸ್ಥಾನಕ್ಕೆ ಹೋಗುವಂತೆ ಇಲ್ಲವೆ ಮೂರ್ಖನು ಶಿಕ್ಷೆಯ ದಂಡನೆಗೆ ಹೋಗುವಂತೆ ಒಂದು ಬಾಣವು ತನ್ನ ಕಾಳಿಜವನ್ನು ತಿವಿಯುವ ವರೆಗೆ ತನ್ನ ಪ್ರಾಣಕ್ಕಾಗಿ ಬಲೆಯನ್ನು ಒಡ್ಡಿದ್ದಾನೆಂದು ತಿಳಿಯದೆ ಪಕ್ಷಿಯು ಬಲೆಯ ಕಡೆಗೆ ಓಡುವ ಹಾಗೆ ಅವನು ತಟ್ಟನೆ ಅವಳ ಹಿಂದೆ ಹೋಗುತ್ತಾನೆ. ಆದುದರಿಂದ ಓ ನನ್ನ ಮಕ್ಕಳಿರಾ, ನನ್ನ ಕಡೆಗೆ ಕಿವಿಗೊಡಿರಿ; ನನ್ನ ಬಾಯಿಯ ಮಾತುಗಳನ್ನು ಆಲಿಸಿರಿ. ಅವಳ ಮಾರ್ಗಗಳಿಗೆ ನಿನ್ನ ಹೃದಯವು ತಿರುಗದೆ ಇರಲಿ. ಅವಳ ದಾರಿಗಳಲ್ಲಿ ತಪ್ಪಿಹೋಗದೆ ಇರಲಿ. ಬಹು ಜನರನ್ನು ಅವಳು ಗಾಯಪಡಿಸಿ ಬೀಳಿಸಿ ದ್ದಾಳೆ; ಹೌದು, ಬಲಿಷ್ಠರಾದ ಅನೇಕ ಪುರುಷರು ಅವಳಿಂದ ಹತರಾಗಿದ್ದಾರೆ.ಅವಳ ಮನೆಯು ಪಾತಾಳದ ದಾರಿ, ಅದು ಮೃತ್ಯುವಿನ ಕೊಠಡಿಗೆ ಇಳಿದುಹೋಗುತ್ತದೆ. ಅವಳ ಮನೆಯು ಪಾತಾಳದ ದಾರಿ, ಅದು ಮೃತ್ಯುವಿನ ಕೊಠಡಿಗೆ ಇಳಿದುಹೋಗುತ್ತದೆ.
- Proverbs 9:18 ಜ್ಞಾನೋಕ್ತಿಗಳು 9:18ಆದರೆ ಸತ್ತವರು ಅಲ್ಲಿದ್ದಾರೆಂದೂ ಪಾತಾಳದ ಅಗಾಧಗಳಲ್ಲಿ ಅವಳ ಅಥಿತಿಗಳು ಇದ್ದಾ ರೆಂದೂ ಅವನಿಗೆ ತಿಳಿಯದು.
- Judges 16:4–22 ನ್ಯಾಯಸ್ಥಾಪಕರು 16:4–22ಇದರ ತರುವಾಯ ಆದದ್ದೇನಂದರೆ, ಸೋರೇಕ್ ತಗ್ಗಿನಲ್ಲಿದ್ದ ದೆಲೀಲಾ ಎಂಬ ಹೆಸರುಳ್ಳ ಒಬ್ಬ ಸ್ತ್ರೀಯನ್ನು ಪ್ರೀತಿಮಾಡಿದನು. ಅವಳ ಬಳಿಗೆ ಫಿಲಿಷ್ಟಿಯರ ಅಧಿಪತಿಗಳು ಬಂದು ಅವಳಿಗೆ--ನೀನು ಅವನನ್ನು ಮರುಳುಗೊಳಿಸಿ, ನಾವು ಅವನನ್ನು ಯಾವ ಪ್ರಕಾರ ಗೆದ್ದು ಕಟ್ಟಿ ಬಾಧಿಸಬಹುದೆಂದು ಅವನ ದೊಡ್ಡ ಶಕ್ತಿ ಯಾವದರಲ್ಲಿ ಅದೆ ಎಂದೂ ನೋಡು; ನಾವು ಒಬ್ಬೊಬ್ಬರು ನಿನಗೆ ಸಾವಿರದ ನೂರು ಬೆಳ್ಳಿಯ ನಾಣ್ಯ ಗಳನ್ನು ಕೊಡುವೆವು ಅಂದರು. ಆಗ ದೆಲೀಲಳು ಸಂಸೋನನಿಗೆ--ನಿನ್ನ ದೊಡ್ಡ ಶಕ್ತಿ ಯಾವದರಲ್ಲಿ ಉಂಟೆಂದೂ ನಿನ್ನನ್ನು ಬಾಧಿಸುವದಕ್ಕೆ ನೀನು ಹೇಗೆ ಕಟ್ಟಲ್ಪಡಬಹುದೆಂದೂ ನನಗೆ ದಯಮಾಡಿ ತಿಳಿಸು ಅಂದಳು. ಸಂಸೋನನು ಅವಳಿಗೆ--ಅವರು ನನ್ನನ್ನು ಒಣಗದೆ ಇರುವ ಹಸಿರಾದ ಏಳು ನಾರಿನ ಬರಲು ಗಳಿಂದ ಕಟ್ಟಿದರೆ ನಾನು ಬಲಿಹೀನನಾಗಿ ಮತ್ತೊಬ್ಬ ಮನುಷ್ಯನ ಹಾಗೆ ಇರುವೆನು ಅಂದನು. ಆಗ ಪಿಲಿಷ್ಟಿಯರ ಅಧಿಪತಿಗಳು ಒಣಗದೆ ಇರುವ ಹಸಿರಾದ ಏಳು ನಾರಿನ ಬರಲುಗಳನ್ನು ಅವಳಿಗೆ ಕೊಟ್ಟರು. ಅವಳು ಅವನನ್ನು ಅವುಗಳಿಂದ ಬಂಧಿಸಿದಳು. ಹೊಂಚುಗಾರರು ಅವಳೊಂದಿಗೆ ಕೊಠಡಿಯಲ್ಲಿ ದ್ದರು. ಅವಳು ಅವನಿಗೆ--ಸಂಸೋನನೇ, ಪಿಲಿಷ್ಟಿ ಯರು ನಿನ್ನ ಮೇಲೆ ಬರುತ್ತಾರೆ ಅಂದಳು. ಆಗ ಅವನು ಬೆಂಕಿಗೆ ತೋರಿಸಲ್ಪಟ್ಟ ಸಣಬಿನ ಹುರಿಹರಿದು ಹೋಗುವ ಹಾಗೆಯೇ ನಾರಿನ ಬರಲುಗಳನ್ನು ಹರಿದುಬಿಟ್ಟನು. ಹೀಗೆ ಅವನ ಶಕ್ತಿ ತಿಳಿಯಲ್ಪಡದೆ ಹೋಯಿತು. ದೆಲೀಲಳು ಸಂಸೋನನಿಗೆ--ಇಗೋ, ನೀನು ನನ್ನನ್ನು ವಂಚನೆಮಾಡಿ ನನಗೆ ಸುಳ್ಳುಗಳನ್ನು ಹೇಳಿದಿ. ಈಗ ನೀನು ಯಾವದರಿಂದ ಕಟ್ಟಲ್ಪಡಬಹುದೋ ನನಗೆ ದಯಮಾಡಿ ತಿಳಿಸು ಅಂದಳು. ಅವನು ಅವಳಿಗೆ ಯಾವ ಕೆಲಸಮಾಡದೆ ಇರುವ ಹೊಸ ಹಗ್ಗಗಳಿಂದ ನನ್ನನ್ನು ಕಟ್ಟಿದರೆ ನಾನು ಬಲಹೀನನಾಗಿ ಮತ್ತೊಬ್ಬ ಮನುಷ್ಯನ ಹಾಗೆ ಇರುವೆನು ಅಂದನು. ಆಗ ದೆಲೀಲಳು ಹೊಸ ಹಗ್ಗಗಳನ್ನು ತಕ್ಕೊಂಡು ಅವುಗಳಿಂದ ಅವನನ್ನು ಕಟ್ಟಿ ಅವನಿಗೆ--ಸಂಸೋನನೇ, ಫಿಲಿಷ್ಟಿಯರು ನಿನ್ನ ಮೇಲೆ ಬರುತ್ತಾರೆ ಅಂದಳು. ಹೊಂಚುಗಾರರು ಕೊಠಡಿಯಲ್ಲಿದ್ದರು. ಆದರೆ ಅವನು ತನ್ನ ತೋಳುಗಳಲ್ಲಿ ಇರುವವುಗಳನ್ನು ದಾರದ ಹಾಗೆ ಹರಿದುಬಿಟ್ಟನು. ದೆಲೀಲಳು ಸಂಸೋನನಿಗೆ--ಈ ವರೆಗೂ ನನ್ನನ್ನು ವಂಚನೆಮಾಡಿ ನನಗೆ ಸುಳ್ಳುಗಳನ್ನು ಹೇಳಿದಿ. ನೀನು ಯಾವದರಿಂದ ಕಟ್ಟಲ್ಪಡಬಹುದೋ ತಿಳಿಸು ಅಂದಳು. ಅವನು ಅವಳಿಗೆ--ನೀನು ನನ್ನ ತಲೆಯ ಏಳು ಜಡೆ ಗಳನ್ನು ಮಗ್ಗದಲ್ಲಿ ನೆಯ್ದರೆ ಆಗುವದು ಅಂದನು. ಆಗ ಅವುಗಳನ್ನು ಗೂಟದಿಂದ ಭದ್ರಮಾಡಿ ಅವನಿಗೆ--ಸಂಸೋನನೇ, ಫಿಲಿಷ್ಟಿಯರು ನಿನ್ನ ಮೇಲೆ ಬರುತ್ತಾರೆ ಅಂದಳು. ಅವನು ತನ್ನ ನಿದ್ರೆಯಿಂದ ಎಚ್ಚತ್ತು ಎದ್ದು ಮಗ್ಗವನ್ನೂ ಮಗ್ಗದ ಗೂಟವನ್ನೂ ಕಿತ್ತುಕೊಂಡು ಹೋದನು. ಅವಳು ಅವನಿಗೆ--ನಿನ್ನ ಹೃದಯವು ನನ್ನ ಸಂಗಡ ಇಲ್ಲದೆ ಇರುವಾಗ ನಿನ್ನನ್ನು ಪ್ರೀತಿ ಮಾಡುತ್ತೇನೆ ಎಂದು ನೀನು ಹೇಗೆ ಹೇಳುತ್ತೀ? ನೀನು ಈ ಮೂರು ಸಾರಿ ನನಗೆ ವಂಚನೆಮಾಡಿದಿ; ನಿನ್ನ ದೊಡ್ಡ ಶಕ್ತಿ ಯಾವದರಲ್ಲಿ ಉಂಟೋ ನನಗೆ ತಿಳಿಸಲಿಲ್ಲ ಅಂದಳು. ಅವಳು ಅವನನ್ನು ದಿನದಿನವೂ ತನ್ನ ಮಾತುಗಳಿಂದ ಪೀಡಿಸಿ ತೊಂದರೆಪಡಿಸಿದ್ದರಿಂದ ಅವನ ಪ್ರಾಣವು ಸಾಯು ವಷ್ಟು ವ್ಯಸನಪಟ್ಟಿತು. ಅವನು ತನ್ನ ಹೃದಯವನ್ನೆಲ್ಲಾ ಅವಳಿಗೆ ತಿಳಿಸಿ ಅವಳಿಗೆ--ಕ್ಷೌರದ ಕತ್ತಿ ನನ್ನ ತಲೆಯ ಮೇಲೆ ಬಂದದ್ದಿಲ್ಲ; ನಾನು ನನ್ನ ತಾಯಿಯ ಗರ್ಭ ದಲ್ಲಿಂದ ದೇವರಿಗೆ ನಾಜೀರನಾಗಿದ್ದೇನೆ. ನನ್ನ ತಲೆ ಯನ್ನು ಬೋಳಿಸಿದರೆ ನನ್ನ ಶಕ್ತಿಯು ನನ್ನನ್ನು ಬಿಟ್ಟು ಹೋಗುವದು; ನಾನು ಬಲಹೀನನಾಗಿ ಎಲ್ಲಾ ಮನುಷ್ಯರ ಹಾಗೆ ಇರುವೆನು ಅಂದನು. ಅವನು ತನಗೆ ತನ್ನ ಹೃದಯವನ್ನೆಲ್ಲಾ ತಿಳಿಸಿದ್ದಾನೆಂದು ದೆಲೀಲಳು ತಿಳಿದು ಅವಳು ಫಿಲಿಷ್ಟಿಯರ ಅಧಿಪತಿಗಳಿಗೆ--ನೀವು ಈ ಸಾರಿ ಬನ್ನಿರಿ; ಅವನು ತನ್ನ ಹೃದಯವನ್ನೆಲ್ಲಾ ನನಗೆ ತಿಳಿಸಿದನು ಎಂದು ಕರೇಕಳುಹಿಸಿದಳು. ಆಗ ಫಿಲಿಷ್ಟಿಯರ ಅಧಿಪತಿಗಳು ಹಣವನ್ನು ತಮ್ಮ ಕೈಯಲ್ಲಿ ತಕ್ಕೊಂಡು ಅವಳ ಬಳಿಗೆ ಬಂದರು. ಅವಳು ಅವನನ್ನು ತನ್ನ ತೊಡೆಗಳ ಮೇಲೆ ನಿದ್ರೆಹೋಗುವಂತೆ ಮಾಡಿ ಒಬ್ಬನನ್ನು ಕರೆದು ಅವನ ತಲೆಯ ಏಳು ಜಡೆಗಳನ್ನು ಬೋಳಿಸುವಂತೆ ಮಾಡಿ ಅವನನ್ನು ಬಾಧಿ ಸುವದಕ್ಕೆ ಪ್ರಾರಂಭಿಸಿದಳು. ಆಗ ಅವನ ಶಕ್ತಿ ಅವ ನನ್ನು ಬಿಟ್ಟುಹೋಯಿತು. ಅವಳು--ಸಂಸೋನನೇ, ಫಿಲಿಷ್ಟಿಯರು ನಿನ್ನ ಮೇಲೆ ಬರುತ್ತಾರೆ ಅಂದಳು. ಅವನು ತನ್ನ ನಿದ್ರೆಯಿಂದ ಎಚ್ಚತ್ತು ಕರ್ತನು ತನ್ನನ್ನು ಬಿಟ್ಟು ತೊಲಗಿದ್ದನ್ನು ಅರಿಯದೆ ಬೇರೆ ಸಮಯಗಳಂತೆಯೇನಾನು ಹೊರಟು ಕೊಸರಿಕೊಂಡು ಹೋಗುವೆನು ಅಂದುಕೊಂಡನು. ಆದರೆ ಫಿಲಿಷ್ಟಿ ಯರು ಅವನನ್ನು ಹಿಡಿದು ಅವನ ಕಣ್ಣುಗಳನ್ನು ಕಿತ್ತು ಗಾಜಕ್ಕೆ ಒಯ್ದು ಎರಡು ಹಿತ್ತಾಳೆಯ ಸಂಕೋಲೆಗಳನ್ನು ಹಾಕಿದರು, ಅವನು ಸೆರೆಮನೆಯಲ್ಲಿ ಬೀಸುತ್ತಿದ್ದನು. ಆದರೆ ಅವನ ತಲೆಯ ಕೂದಲು ಕ್ಷೌರಮಾಡಿದ ತರುವಾಯ ತಿರಿಗಿ ಬೆಳೆಯಲಾರಂಭಿಸಿತು.
- Numbers 25:1 ಅರಣ್ಯಕಾಂಡ 25:1ಆಗ ಇಸ್ರಾಯೇಲ್ಯರು ಶಿಟ್ಟೀಮಿನಲ್ಲಿ ವಾಸವಾಗಿದ್ದಾಗ ಜನರು ಮೋವಾಬಿನ ಕುಮಾರ್ತೆಯರ ಸಂಗಡ ಜಾರತ್ವ ಮಾಡಲಾರಂಭಿ ಸಿದರು.