Proverbs · chapter 24 · verse 30
Proverbs 24:30 in Kannada
ಸೋಮಾರಿಯ ಹೊಲದ ಪಕ್ಕದಲ್ಲಿಯೂ ಬುದ್ಧಿ ಹೀನನ ದ್ರಾಕ್ಷೇ ತೋಟದ ಕಡೆಯಲ್ಲಿಯೂ ನಾನು ಹಾದು ಹೋದೆನು;
Somaariya holada pakkadalliyoo buddhi heenana draakshe totada kadeyalliyoo naanu haadu hodenu;
Proverbs 24:30 in English
- King James Version (KJV)
- I went by the field of the slothful, and by the vineyard of the man void of understanding;
- World English Bible (WEB)
- I went by the field of the sluggard, by the vineyard of the man void of understanding.
- American Standard Version (ASV)
- I went by the field of the sluggard, And by the vineyard of the man void of understanding;
- Bible in Basic English (BBE)
- I went by the field of the hater of work, and by the vine-garden of the man without sense;
- Darby Translation (DBY)
- I went by the field of a sluggard, and by the vineyard of a man void of understanding;
- Webster's Bible (WBS)
- I went by the field of the slothful, and by the vineyard of the man void of understanding;
- Young's Literal Translation (YLT)
- Near the field of a slothful man I passed by, And near the vineyard of a man lacking heart.
Read in context
- 28ಕಾರಣವಿಲ್ಲದೆ ನೆರೆಯವನಿಗೆ ವಿರುದ್ಧವಾಗಿ ಸಾಕ್ಷಿ ಹೇಳಬೇಡ; ನಿನ್ನ ತುಟಿಗಳಿಂದ ಮೋಸಮಾಡಬೇಡ.
- 29ನನಗೆ ಅವನು ಮಾಡಿದಂತೆ ನಾನೂ ಅವನಿಗೆ ಮಾಡುವೆನು; ಅವನು ಮಾಡಿದ್ದಕ್ಕೆ ಸರಿಯಾಗಿ ಮುಯ್ಯಿ ತೀರಿಸುವೆನು ಎಂದು ಹೇಳಬೇಡ.
- 30ಸೋಮಾರಿಯ ಹೊಲದ ಪಕ್ಕದಲ್ಲಿಯೂ ಬುದ್ಧಿ ಹೀನನ ದ್ರಾಕ್ಷೇ ತೋಟದ ಕಡೆಯಲ್ಲಿಯೂ ನಾನು ಹಾದು ಹೋದೆನು;
- 31ಆಗ ಇಗೋ, ಹೊಲವೆಲ್ಲವೂ ಮುಳ್ಳು ಗಿಡಗಳಿಂದ ಬೆಳೆದು ಕಳೆಗಳು ಅವುಗಳನ್ನು ಮುಚ್ಚಿ ಅದರ ಕಲ್ಲಿನ ಗೋಡೆಯು ಬಿದ್ದುಹೋಯಿತು.
- 32ಆಗ ನಾನು ನೋಡಿ ಮನಸ್ಸಿಟ್ಟೆನು; ದೃಷ್ಟಿಸಿ ಶಿಕ್ಷಿತನಾದೆನು.
Cross references
- Proverbs 12:11 ಜ್ಞಾನೋಕ್ತಿಗಳು 12:11ತನ್ನ ಹೊಲವನ್ನು ವ್ಯವಸಾಯ ಮಾಡುವವನು ರೊಟ್ಟಿಯಿಂದ ತೃಪ್ತಿ ಹೊಂದುವನು; ನಿಷ್ಪ್ರಯೋಜಕರನ್ನು ಹಿಂಬಾಲಿಸುವ ವನು ವಿವೇಕ ಶೂನ್ಯನು.
- Proverbs 6:6–19 ಜ್ಞಾನೋಕ್ತಿಗಳು 6:6–19ಸೋಮಾರಿಯೇ, ನೀನು ಇರುವೆಯ ಹತ್ತಿರ ಹೋಗಿ ಅದರ ಮಾರ್ಗಗಳನ್ನು ಆಲೋಚಿಸಿ ಜ್ಞಾನ ವಂತನಾಗಿರು. ನಾಯಕನಾಗಲಿ ಮೇಲ್ವಿಚಾರಕನಾ ಗಲಿ ಅಧಿಕಾರಿಯಾಗಲಿ ಅದಕ್ಕೆ ಇಲ್ಲದೆ ಹೋದರೂ ಬೇಸಿಗೆಯಲ್ಲಿ ಅದು ತನ್ನ ಅಹಾರವನ್ನು ಸಂಗ್ರಹಿಸಿ ಕೊಂಡು ಸುಗ್ಗಿಯಲ್ಲಿ ತನ್ನ ಆಹಾರವನ್ನು ಕೂಡಿಸಿ ಕೊಳ್ಳುವದು. ಓ ಸೋಮಾರಿಯೇ, ಎಷ್ಟು ಹೊತ್ತು ನೀನು ನಿದ್ರೆಮಾಡುವದು? ನಿನ್ನ ನಿದ್ರೆಯಿಂದ ಯಾವಾ ಗ ಎಚ್ಚರಗೊಳ್ಳುವಿ? ಇನ್ನು ಸ್ವಲ್ಪ ನಿದ್ರೆ, ಇನ್ನು ಸ್ವಲ್ಪ ತೂಕಡಿಕೆ, ನಿದ್ರೆಗಾಗಿ ಇನ್ನೂ ಸ್ವಲ್ಪ ಕೈ ಮುದುರಿ ಕೊಳ್ಳುವಿ? ಹೀಗೆ ದಾರಿದ್ರ್ಯವು ಪ್ರಯಾಣ ಮಾಡು ವವನ ಹಾಗೂ ನಿನ್ನ ಕೊರತೆಯು ಯುದ್ಧಸ್ಥರ ಹಾಗೂ ಬರುವದು. ದುಷ್ಟನೂ ಕೆಡುಕನೂ ವಕ್ರಬಾಯಿಂದ ನಡೆದು ಕೊಳ್ಳುವನು. ಅವನು ತನ್ನ ಕಣ್ಣುಗಳಿಂದ ಸನ್ನೆಮಾಡಿ ತನ್ನ ಕಾಲುಗಳಿಂದ ಮಾತಾಡುತ್ತಾ ತನ್ನ ಬೆರಳುಗಳಿಂದ ಬೋಧಿಸುತ್ತಾನೆ. ಅವನ ಹೃದಯದಲ್ಲಿ ಮೂರ್ಖ ತನವಿದೆ. ಯಾವಾಗಲೂ ಅವನು ಕೇಡನ್ನು ಕಲ್ಪಿಸು ತ್ತಾನೆ. ಅವನು ವೈಷಮ್ಯವನ್ನು ಬಿತ್ತುತ್ತಾನೆ. ಆದದ ರಿಂದ ಅವನಿಗೆ ತಕ್ಷಣವೇ ವಿಪತ್ತು ಬರುವದು; ತಕ್ಷ ಣವೇ ಯಾವ ಪರಿಹಾರವಿಲ್ಲದೆ ಅವನು ಮುರಿಯಲ್ಪ ಡುವನು. ಈ ಆರು ವಿಷಯಗಳನ್ನು ಕರ್ತನು ಹಗೆಮಾಡುತ್ತಾನೆ; ಹೌದು, ಏಳು ಆತನಿಗೆ ಅಸಹ್ಯವಾಗಿವೆ; ಯಾವವಂದರೆ: ಹೆಮ್ಮೆಯ ದೃಷ್ಟಿ, ಸುಳ್ಳಾ ಡುವ ನಾಲಿಗೆ, ನಿರ್ದೋಷ ರಕ್ತವನ್ನು ಸುರಿಸುವ ಕೈಗಳು, ದುಷ್ಟ ಭಾವನೆಗಳನ್ನು ಕಲ್ಪಿಸುವ ಹೃದಯ, ಕೇಡಿಗೆ ಓಡಾಡುವದರಲ್ಲಿ ತ್ವರೆಪಡುವ ಕಾಲುಗಳು, ಅಸತ್ಯಗಳನ್ನು ಆಡುವ ಸುಳ್ಳು ಸಾಕ್ಷಿ ಮತ್ತು ಸಹೋ ದರರಲ್ಲಿ ವೈಷಮ್ಯವನ್ನು ಬಿತ್ತುವವನು.
- Ecclesiastes 8:9–11 ಪ್ರಸಂಗಿ 8:9–11ನಾನು ಇದನ್ನೆಲ್ಲಾ ನೋಡಿ ಸೂರ್ಯನ ಕೆಳಗೆ ಮಾಡುವ ಪ್ರತಿಯೊಂದು ಕೆಲ ಸಕ್ಕೂ ನನ್ನ ಹೃದಯವನ್ನು ಪ್ರಯೋಗಿಸಿದ್ದೇನೆ; ಒಬ್ಬ ಮನುಷ್ಯನು ಇನ್ನೊಬ್ಬನ ಮೇಲೆ ತನ್ನ ಹಾನಿಗಾಗಿ ಅಧಿಕಾರ ನಡಿಸುವಂತ ಕಾಲವೂ ಇದೆ. ಪರಿಶುದ್ಧ ಸ್ಥಳದಿಂದ ತೊಲಗಿದ ದುಷ್ಟರು ಹೂಣ ಲ್ಪಡುವದನ್ನೂ ನಾನು ನೋಡಿದ್ದೇನೆ; ಅವರು ಹೀಗೆ ಮಾಡಿದ ಪಟ್ಟಣವನ್ನೇ ಮರೆತರು; ಇದೂ ಸಹ ನಿರರ್ಥಕವಾದದ್ದು; ದುಷ್ಟ ಕೆಲಸಕ್ಕೆ ದಂಡನೆಯು ಕೂಡಲೇ ಆಗದಿರುವದರಿಂದ ಮನುಷ್ಯಪುತ್ರರ ಹೃದ ಯವು ಅವರನ್ನು ಕೆಟ್ಟದ್ದನ್ನು ಮಾಡುವದರಲ್ಲಿಯೇ ತುಂಬಿಸುವದು.
- Job 4:8 ಯೋಬನು 4:8ನಾನು ಕಂಡ ಹಾಗೆ ದುಷ್ಟತನವನ್ನು ಉಳುವವರೂ ದುಷ್ಟತನವನ್ನು ಬಿತ್ತುವ ವರೂ ಅದನ್ನೇ ಕೊಯ್ಯುತ್ತಾರೆ.
- Proverbs 6:32 ಜ್ಞಾನೋಕ್ತಿಗಳು 6:32ಒಬ್ಬ ಸ್ತ್ರೀಯೊಂದಿಗೆ ವ್ಯಭಿಚಾರ ಮಾಡುವವನು ವಿವೇಕವಿಲ್ಲದವನಾಗಿದ್ದಾನೆ. ಅದನ್ನು ಮಾಡುವವನು ತನ್ನ ಪ್ರಾಣವನ್ನೇ ನಾಶಪಡಿಸಿಕೊಳ್ಳುವನು.
- Ecclesiastes 4:1–8 ಪ್ರಸಂಗಿ 4:1–8ಹೀಗೆ ನಾನು ತಿರುಗಿಕೊಂಡು ಸೂರ್ಯನ ಕೆಳಗೆ ನಡೆಯುತ್ತಿರುವ ಹಿಂಸೆಗಳನ್ನೆಲ್ಲಾ ನಾನು ಯೋಚಿಸಿದೆನು; ಹಿಂಸಿಸಲ್ಪಟ್ಟವರ ಕಣ್ಣೀರನ್ನೂ ಅವರನ್ನು ಆದರಿಸುವವರು ಯಾರೂ ಇಲ್ಲದಿರುವ ದನ್ನೂ ನೋಡಿದೆನು; ಅವರನ್ನು ಹಿಂಸೆಪಡಿಸುವವರ ಕಡೆಗೆ ಶಕ್ತಿ ಇತ್ತು; ಆದರೆ ಇವರನ್ನು ಆದರಿಸುವವನು ಯಾವನೂ ಇಲ್ಲ. ಆದಕಾರಣ ಇನ್ನೂ ಜೀವ ದಿಂದಿದ್ದು ಬದುಕುವವರಿಗಿಂತ ಆಗಲೇ ಮೃತಪಟ್ಟ ಸತ್ತವರನ್ನು ನಾನು ಹೆಚ್ಚಾಗಿ ಹೊಗಳಿದೆನು. ಹೌದು, ಇನ್ನೂ ಹುಟ್ಟದೆ, ಸೂರ್ಯನ ಕೆಳಗೆ ನಡೆಯುವ ಕೆಟ್ಟ ಕೃತ್ಯವನ್ನು ನೋಡದಿರುವವನೇ ಇವರಿಬ್ಬರಿ ಗಿಂತಲೂ ಶ್ರೇಷ್ಠನು. ತಿರುಗಿ ಎಲ್ಲಾ ಪ್ರಯಾಸಕ್ಕಾಗಿಯೂ ಪ್ರತಿಯೊಂದು ಒಳ್ಳೆಯ ಕಾರ್ಯಕ್ಕಾಗಿಯೂ ಮನುಷ್ಯನು ತನ್ನ ನೆರೆಯವನ ಮೇಲೆ ಅಸೂಯೆ ಪಡುತ್ತಾನೆಂದೂ ನಾನು ತಿಳುಕೊಂಡೆನು. ಇದೂ ಕೂಡ ವ್ಯರ್ಥವೂ ಪ್ರಾಣಕ್ಕೆ ಆಯಾಸಕರವೂ ಆಗಿದೆ. ಬುದ್ಧಿಹೀನನು ತನ್ನ ಕೈಗಳನ್ನು ಒಟ್ಟಿಗೆ ಮಡಚಿಕೊಂಡು ತನ್ನ ಸ್ವಂತ ಮಾಂಸವನ್ನು ತಿನ್ನುತ್ತಾನೆ. ಪ್ರಯಾಸದಿಂದಲೂ ಪ್ರಾಣಕ್ಕೆ ಆಯಾಸದಿಂದಲೂ ತುಂಬಿದ ಎರಡು ಕೈಗಳಿಂದಾದದ್ದಕಿಂತ ನೆಮ್ಮದಿಯಿಂದ ಕೂಡಿದ ಒಂದು ಕೈಯಿಂದಾದದ್ದೇ ಲೇಸು. ಆಗ ನಾನು ತಿರುಗಿಕೊಂಡು ಸೂರ್ಯನ ಕೆಳಗೆ ಇದ್ದ ವ್ಯರ್ಥವನ್ನು ಕಂಡೆನು. ಎರಡನೆಯವನಿಲ್ಲದ ಒಬ್ಬೊಂಟಿಗನು ಒಬ್ಬನಿದ್ದಾನೆ; ಹೌದು, ಅವನಿಗೆ ಮಗುವಾಗಲೀ ಸಹೋದರನಾಗಲೀ ಇಲ್ಲ; ಆದರೂ ಅವನ ಪ್ರಯಾಸಕ್ಕೆ ಕೊನೆಯಿಲ್ಲ. ಅಲ್ಲದೆ ಐಶ್ವರ್ಯ ದಿಂದ ಅವನ ಕಣ್ಣು ತೃಪ್ತಿಹೊಂದದು; ಮಾತ್ರವಲ್ಲದೆ ಅವನು--ನಾನು ಯಾರಿಗೋಸ್ಕರ ಕಷ್ಟಪಟ್ಟು ಪ್ರಾಣ ವನ್ನು ಅದಕ್ಕೆ ಸುಖವಿಲ್ಲದ ಹಾಗೆ ಕೊರೆತೆಪಡಿಸು ತ್ತೇನೆ; ಎಂದು ಅವನು ಅಂದುಕೊಳ್ಳುವನು. ಇದು ಕೂಡ ವ್ಯರ್ಥವೇ; ಹೌದು, ವ್ಯಥೆಯಿಂದಾದ ಪ್ರಯಾಸವೇ.
- Psalm 37:25 ಕೀರ್ತನೆಗಳು 37:25ನಾನು ಬಾಲಕನಾಗಿದ್ದೆನು, ಈಗ ಮುದುಕನಾಗಿದ್ದೇನೆ; ಆದರೆ ನೀತಿವಂತನು ಕೈಬಿಡಲ್ಪಟ್ಟದ್ದನ್ನೂ ಅವನ ಸಂತತಿಯು ರೊಟ್ಟಿಗಾಗಿ ಭಿಕ್ಷೆಬೇಡುವದನ್ನೂ ನಾನು ನೋಡಲಿಲ್ಲ.
- Proverbs 10:13 ಜ್ಞಾನೋಕ್ತಿಗಳು 10:13ವಿವೇಕವುಳ್ಳ ತುಟಿಗಳಲ್ಲಿ ಜ್ಞಾನವು ಸಿಕ್ಕು ತ್ತದೆ; ವಿವೇಕವಿಲ್ಲದವನ ಬೆನ್ನಿಗೆ ಬೆತ್ತವೇ ಸರಿ.