Proverbs · chapter 26 · verse 25
Proverbs 26:25 in Kannada
ಸವಿ ಮಾತನ್ನಾಡಿದರೆ ಅವನನ್ನು ನಂಬಬೇಡ; ಅವನ ಹೃದಯದಲ್ಲಿ ಏಳು ಅಸಹ್ಯಗಳಿವೆ.
Savi maatannaadidare avanannu nambabeda; avana hrudayadalli elu asahyagalive.
Proverbs 26:25 in English
- King James Version (KJV)
- When he speaketh fair, believe him not: for [there are] seven abominations in his heart.
- World English Bible (WEB)
- When his speech is charming, don’t believe him, for there are seven abominations in his heart.
- American Standard Version (ASV)
- When he speaketh fair, believe him not; For there are seven abominations in his heart:
- Bible in Basic English (BBE)
- When he says fair words, have no belief in him; for in his heart are seven evils:
- Darby Translation (DBY)
- when his voice is gracious, believe him not, for there are seven abominations in his heart.
- Webster's Bible (WBS)
- When he speaketh fair, believe him not: for [there are] seven abominations in his heart.
- Young's Literal Translation (YLT)
- When his voice is gracious trust not in him, For seven abominations [are] in his heart.
Read in context
- 23ಉರಿಯುವ ತುಟಿ ಗಳೂ ಕೆಟ್ಟಹೃದಯವೂ ಬೆಳ್ಳಿಯ ಕಿಟ್ಟದಿಂದ ಮುಚ್ಚ ಲ್ಪಟ್ಟ ಬೋಕಿಯಂತೆ ಇದೆ.
- 24ಹಗೆಮಾಡುವವನು ತನ್ನ ತುಟಿಗಳಿಂದ ಮೋಸವನ್ನು ನಟಿಸುತ್ತಾನೆ, ತನ್ನ ಅಂತರಂಗದಲ್ಲಿ ಮೋಸವನ್ನು ಇಟ್ಟುಕೊಳ್ಳುತ್ತಾನೆ.
- 25ಸವಿ ಮಾತನ್ನಾಡಿದರೆ ಅವನನ್ನು ನಂಬಬೇಡ; ಅವನ ಹೃದಯದಲ್ಲಿ ಏಳು ಅಸಹ್ಯಗಳಿವೆ.
- 26ಯಾವನ ಹಗೆ ತನವು ಮೋಸದಿಂದ ಮುಚ್ಚಲ್ಪಟ್ಟಿದೆಯೋ ಅವನ ಕೆಟ್ಟತನವು ಸಭೆಯಲ್ಲಿ ಬಯಲಾಗುವದು.
- 27ಗುಂಡಿ ಯನ್ನು ತೋಡುವವನು ತಾನೇ ಅದರಲ್ಲಿ ಬೀಳುತ್ತಾನೆ; ಕಲ್ಲು ಹೊರಳಿಸುವವನ ಮೇಲೆಯೇ ಅದು ತಿರಿಗಿ ಹೊರಳುವದು.ಸುಳ್ಳು ನಾಲಿಗೆಯಿಂದ ಬಾಧಿಸಲ್ಪ ಟ್ಟವರನ್ನೇ ಅದು ಹಗೆಮಾಡುವದು; ಮುಖಸ್ತುತಿ ಮಾಡುವ ಬಾಯಿಯು ನಾಶನವನ್ನುಂಟುಮಾಡುತ್ತದೆ.
Cross references
- Proverbs 6:16–19 ಜ್ಞಾನೋಕ್ತಿಗಳು 6:16–19ಈ ಆರು ವಿಷಯಗಳನ್ನು ಕರ್ತನು ಹಗೆಮಾಡುತ್ತಾನೆ; ಹೌದು, ಏಳು ಆತನಿಗೆ ಅಸಹ್ಯವಾಗಿವೆ; ಯಾವವಂದರೆ: ಹೆಮ್ಮೆಯ ದೃಷ್ಟಿ, ಸುಳ್ಳಾ ಡುವ ನಾಲಿಗೆ, ನಿರ್ದೋಷ ರಕ್ತವನ್ನು ಸುರಿಸುವ ಕೈಗಳು, ದುಷ್ಟ ಭಾವನೆಗಳನ್ನು ಕಲ್ಪಿಸುವ ಹೃದಯ, ಕೇಡಿಗೆ ಓಡಾಡುವದರಲ್ಲಿ ತ್ವರೆಪಡುವ ಕಾಲುಗಳು, ಅಸತ್ಯಗಳನ್ನು ಆಡುವ ಸುಳ್ಳು ಸಾಕ್ಷಿ ಮತ್ತು ಸಹೋ ದರರಲ್ಲಿ ವೈಷಮ್ಯವನ್ನು ಬಿತ್ತುವವನು.
- Psalm 28:3 ಕೀರ್ತನೆಗಳು 28:3ದುಷ್ಟರ ಸಂಗಡಲೂ ಅಪರಾಧಮಾಡುವವರ ಸಂಗಡಲೂ ನನ್ನನ್ನು ಎಳೆಯಬೇಡ; ತಮ್ಮ ನೆರೆಯವರಿಗೆ ಅವರು ಸಮಾಧಾನವಾಗಿ ಮಾತನಾಡುತ್ತಾರೆ; ಕೇಡು ಅವರ ಹೃದಯದಲ್ಲಿ ಅದೆ.
- Jeremiah 12:6 ಯೆರೆಮೀಯ 12:6ನಿನ್ನ ಸಹೋದರರೂ ನಿನ್ನ ತಂದೆಯ ಮನೆತನದವರೂ ಇವರೇ ನಿನಗೆ ವಂಚನೆ ಮಾಡಿದ್ದಾರೆ; ಹೌದು, ಇವರೇ ನಿನ್ನ ಹಿಂದೆ ಸಮೂಹವನ್ನು ಕರೆದಿದ್ದಾರೆ, ಅವರು ನಿನಗೆ ಒಳ್ಳೇ ಮಾತುಗಳನ್ನು ಹೇಳಿದರೂ ಅವರನ್ನು ನಂಬಬೇಡ.
- Jeremiah 9:2–8 ಯೆರೆಮೀಯ 9:2–8ಹಾ, ಅರಣ್ಯದಲ್ಲಿ ನನಗೆ ಪ್ರಯಾಣಸ್ಥರ ಛತ್ರವು ಇದ್ದರೆ ಒಳ್ಳೇದು, ಆಗ ನನ್ನ ಜನರನ್ನು ಬಿಟ್ಟು ಹೊರಟು ಹೋಗುತ್ತಿದ್ದೆನು; ಅವರೆಲ್ಲರೂ ವ್ಯಭಿಚಾರಿಗಳೇ, ವಂಚಕರ ಕೂಟವೇ. ಅವರು ತಮ್ಮ ನಾಲಿಗೆಗಳನ್ನು ಬಿಲ್ಲಿನಂತೆ ಸುಳ್ಳುಗಳಿಗಾಗಿ ಬೊಗ್ಗಿಸುತ್ತಾರೆ. ಆದರೆ ಭೂಮಿಯಲ್ಲಿ ಸತ್ಯಕ್ಕಾಗಿ ಬಲಿಷ್ಠರಾಗುವದಿಲ್ಲ; ಅವರು ಕೇಡಿನಿಂದ ಕೇಡಿಗೆ ಹೋಗುತ್ತಾ ನನ್ನನ್ನು ಅರಿಯದೆ ಇದ್ದಾರೆಂದು ಕರ್ತನು ಅನ್ನುತ್ತಾನೆ. ನಿಮ್ಮ ನಿಮ್ಮ ನೆರೆಯವರಿಗೆ ಎಚ್ಚರಿಕೆಯಾಗಿರಿ; ಯಾವ ಸಹೋದರ ನಲ್ಲಾದರೂ ನಂಬಿಕೆ ಇಡಬೇಡಿರಿ; ಸಹೋದರರೆಲ್ಲರೂ ಸಂಪೂರ್ಣವಾಗಿ ಮೋಸಮಾಡುವರು, ನೆರೆಯವ ರೆಲ್ಲರು ಚಾಡಿಹೇಳುತ್ತಾ ತಿರುಗಾಡುವರು. ತಮ್ಮ ತಮ್ಮ ನೆರೆಯವರಿಗೆ ವಂಚನೆಮಾಡಿ ಸತ್ಯವನ್ನು ಮಾತಾ ಡರು; ಸುಳ್ಳುಗಳನ್ನು ಹೇಳುವದಕ್ಕೆ ಅವರು ತಮ್ಮ ನಾಲಿಗೆಗೆ ಬೋಧಿಸಿದ್ದಾರೆ. ಅಕ್ರಮ ಮಾಡುವದಕ್ಕೆ ಪ್ರಯಾಸಪಡುತ್ತಾರೆ. 6 ನಿನ್ನ ನಿವಾಸವು ಮೋಸದ ಮಧ್ಯದಲ್ಲಿ ಅದೆ; ಮೋಸದಿಂದಲೇ ನನ್ನನ್ನು ನಿರಾಕರಿಸು ತ್ತಾರೆಂದು ಕರ್ತನು ಅನ್ನುತ್ತಾನೆ. ಆದದರಿಂದ ಸೈನ್ಯಗಳ ಕರ್ತನು ಹೇಳುವದೇ ನಂದರೆ--ಇಗೋ, ನಾನು ಅವರನ್ನು ಕರಗಿಸಿ ಶೋಧಿ ಸುತ್ತೇನೆ; ನನ್ನ ಜನರ ಮಗಳಿಗೋಸ್ಕರ ನಾನು ಹೇಗೆ ಮಾಡಲಿ? ಅವರ ನಾಲಿಗೆ ಎಸೆದ ಬಾಣದಂತಿದೆ, ಅದು ಮೋಸವನ್ನಾಡುತ್ತದೆ. ತನ್ನ ಬಾಯಿಂದ ತನ್ನ ನೆರೆಯವರ ಸಂಗಡ ಸಮಾಧಾನವಾಗಿ ಮಾತನಾಡಿ ಹೃದಯದಲ್ಲಿ ಅವನಿಗೆ ಹೊಂಚುಹಾಕುತ್ತಾನೆ.
- Psalm 12:2 ಕೀರ್ತನೆಗಳು 12:2ಒಬ್ಬೊಬ್ಬನು ತನ್ನ ನೆರೆಯವನ ಸಂಗಡ ವ್ಯರ್ಥವಾದ ಮಾತನ್ನು ಆಡುತ್ತಾನೆ; ಮುಖಸ್ತುತಿಯ ತುಟಿಯಿಂದಲೂ ವಂಚನೆಯ ಹೃದಯದಿಂದಲೂ ಅವರು ಮಾತನಾಡುತ್ತಾರೆ.
- Matthew 24:23 ಮತ್ತಾಯನು 24:23ಆಗ ಯಾರಾದರೂ ನಿಮಗೆ--ಇಗೋ, ಕ್ರಿಸ್ತನು ಇಲ್ಲಿದ್ದಾನೆ ಇಲ್ಲವೆ ಅಲ್ಲಿದ್ದಾನೆ ಎಂದು ಹೇಳಿದರೆ ಅದನ್ನು ನಂಬಬೇಡಿರಿ.
- Micah 7:5 ಮೀಕ 7:5ಸ್ನೇಹಿತನಲ್ಲಿ ನಂಬಿಕೆ ಇಡಬೇಡಿರಿ; ಆಪ್ತಸ್ನೇಹಿತನಲ್ಲಿ ಭರವಸವಿಡಬೇಡಿರಿ; ನಿನ್ನ ಎದೆಯ ಮೇಲೆ ಮಲಗುವವಳಿಗೆ ನಿನ್ನ ಬಾಯಿಯ ಬಾಗಲುಗಳನ್ನು ಕಾಯಿ.