Proverbs · chapter 28 · verse 23
Proverbs 28:23 in Kannada
ತನ್ನ ನಾಲಿಗೆಯಿಂದ ಮುಖಸ್ತುತಿ ಮಾಡುವವನಿಗಿಂತ ಒಬ್ಬನನ್ನು ಗದರಿಸುವವನು ತರುವಾಯ ಹೆಚ್ಚು ದಯಾಪಾತ್ರನಾಗುವನು.
Tanna naaligeyinda mukhastuti maaduvavaniginta obbanannu gadarisuvavanu taruvaaya hechchu dayaapaatranaaguvanu.
Proverbs 28:23 in English
- King James Version (KJV)
- He that rebuketh a man afterwards shall find more favour than he that flattereth with the tongue.
- World English Bible (WEB)
- One who rebukes a man will afterward find more favor than one who flatters with the tongue.
- American Standard Version (ASV)
- He that rebuketh a man shall afterward find more favor Than he that flattereth with the tongue.
- Bible in Basic English (BBE)
- He who says words of protest to a man will later have more approval than one who says smooth words with his tongue.
- Darby Translation (DBY)
- He that rebuketh a man shall afterwards find more favour than he that flattereth with the tongue.
- Webster's Bible (WBS)
- He that rebuketh a man afterward shall find more favor than he that flattereth with the tongue.
- Young's Literal Translation (YLT)
- Whoso is reproving a man afterwards findeth grace, More than a flatterer with the tongue.
Read in context
- 21ಪಕ್ಷಪಾತವು ಸರಿಯಲ್ಲ; ತುತ್ತು ರೊಟ್ಟಿಗಾಗಿ ಒಬ್ಬನು ದ್ರೋಹಮಾಡುವನು.
- 22ಧನ ವಂತನಾಗಲು ಆತುರಪಡುವವನು ಕೆಟ್ಟ ಕಣ್ಣುಳ್ಳವ ನಾಗಿದ್ದಾನೆ; ತನಗೆ ಬಡತನವು ಬರುವದನ್ನು ಅವನು ಯೋಚಿಸುವದಿಲ್ಲ.
- 23ತನ್ನ ನಾಲಿಗೆಯಿಂದ ಮುಖಸ್ತುತಿ ಮಾಡುವವನಿಗಿಂತ ಒಬ್ಬನನ್ನು ಗದರಿಸುವವನು ತರುವಾಯ ಹೆಚ್ಚು ದಯಾಪಾತ್ರನಾಗುವನು.
- 24ತನ್ನ ತಂದೆ ತಾಯಿಯನ್ನಾಗಲಿ ದೋಚಿಕೊಂಡು--ಇದು ದೋಷವಲ್ಲ ಎಂದು ಹೇಳುವವನು ಕೆಡುಕನಿಗೆ ಜೊತೆಗಾರನು.
- 25ಗರ್ವದ ಹೃದಯವುಳ್ಳವನು ಕಲಹ ವನ್ನೆಬ್ಬಿಸುವನು; ಕರ್ತನಲ್ಲಿ ಭರವಸವಿಡುವವನು ಪುಷ್ಟ ನಾಗುವನು.
Cross references
- Proverbs 27:5–6 ಜ್ಞಾನೋಕ್ತಿಗಳು 27:5–6ರಹಸ್ಯವಾದ ಪ್ರೀತಿಗಿಂತಲೂ ಬಹಿರಂಗವಾದ ಗದರಿಕೆಯೇ ಲೇಸು. ಸ್ನೇಹಿತನು ಮಾಡುವ ಗಾಯಗಳು ನಂಬಿಕೆಯುಳ್ಳವುಗಳಾಗಿವೆ; ಶತ್ರುವಿನ ಮುದ್ದುಗಳು ಮೋಸಕರವಾಗಿವೆ.
- Matthew 18:15 ಮತ್ತಾಯನು 18:15ಇದಲ್ಲದೆ ನಿನ್ನ ಸಹೋದರನು ನಿನಗೆ ವಿರೋಧ ವಾಗಿ ತಪ್ಪು ಮಾಡಿದರೆ ನೀನೂ ಅವನೂ ಮಾತ್ರ ಇರುವಾಗ ಅವನ ತಪ್ಪನ್ನು ಅವನಿಗೆ ತಿಳಿಸು; ಅವನು ನಿನ್ನ ಮಾತನ್ನು ಕೇಳಿದರೆ ನೀನು ನಿನ್ನ ಸಹೋದರನನ್ನು ಸಂಪಾದಿಸಿಕೊಂಡಿರುವಿ.
- Psalm 141:5 ಕೀರ್ತನೆಗಳು 141:5ನೀತಿವಂತನು ನನ್ನನ್ನು ಹೊಡೆಯಲಿ; ಅದು ಕರುಣೆಯೇ; ಅವನು ನನ್ನನ್ನು ಗದರಿಸಲಿ; ಅದು ನನ್ನ ತಲೆಗೆ ಶ್ರೇಷ್ಠ ಎಣ್ಣೆಯೇ. ಅದನ್ನು ನನ್ನ ತಲೆ ಬೇಡವೆನ್ನದಿರಲಿ; ಆದರೆ ಇನ್ನೂ ಅವರ ಕೇಡುಗಳಲ್ಲಿ ನನ್ನ ಪ್ರಾರ್ಥನೆ ಇರುವದು.
- 1 Kings 1:32–40 1 ಅರಸುಗಳು 1:32–40ಆಗ ಅರಸನಾದ ದಾವೀದನು--ಯಾಜಕನಾದ ಚಾದೋಕನನ್ನೂ ಪ್ರವಾದಿಯಾದ ನಾತಾನನನ್ನೂ ಯೆಹೋಯಾದಾವನ ಮಗನಾದ ಬೆನಾಯನನ್ನೂ ನನ್ನ ಬಳಿಗೆ ಕರೆಯಿರಿ ಅಂದನು. ಅವರು ಅರಸನ ಸಮ್ಮುಖಕ್ಕೆ ಬಂದಾಗ ಅರಸನು ಅವರಿಗೆ--ನೀವು ನಿಮ್ಮ ಯಜಮಾನನ ಸೇವಕರನ್ನು ಕರಕೊಂಡುಹೋಗಿ ನನ್ನ ಮಗನಾದ ಸೊಲೊಮೋನನನ್ನು ನನ್ನ ಸ್ವಂತ ಹೇಸರಕತ್ತೆಯ ಮೇಲೆ ಏರಿಸಿ ಗೀಹೋನಿಗೆ ಅವ ನನ್ನು ಕರಕೊಂಡು ಹೋಗಿರಿ. ಅಲ್ಲಿ ಯಾಜಕನಾದ ಚಾದೋಕನೂ ಪ್ರವಾದಿಯಾದ ನಾತಾನನೂ ಅವ ನನ್ನು ಇಸ್ರಾಯೇಲಿನ ಮೇಲೆ ಅರಸನಾಗಿರಲು ಅಭಿ ಷೇಕಿಸಲಿ. ತುತೂರಿಯನ್ನು ಊದಿ--ಅರಸನಾದ ಸೊಲೊಮೋನನನ್ನು ದೇವರು ರಕ್ಷಿಸಲಿ ಅನ್ನಿರಿ. ಆಗ ಅವನು ಬಂದು ನನ್ನ ಸಿಂಹಾಸನದ ಮೇಲೆ ಕೂತು ಕೊಳ್ಳುವ ಹಾಗೆ ನೀವು ಅವನ ಹಿಂದೆ ಬನ್ನಿರಿ; ಅವನು ನನಗೆ ಬದಲಾಗಿ ಅರಸನಾಗಿರುವನು; ಇಸ್ರಾಯೇಲಿನ ಮೇಲೆಯೂ ಯೆಹೂದದ ಮೇಲೆಯೂ ನಾಯಕ ನಾಗಿರಲು ನಾನು ಅವನನ್ನು ನೇಮಿಸಿದ್ದೇನೆ ಅಂದನು. ಯೆಹೋಯಾದಾವನ ಮಗನಾದ ಬೆನಾಯನು ಅರಸನಿಗೆ ಪ್ರತ್ಯುತ್ತರವಾಗಿ--ಆಮೆನ್: ಅರಸನಾದ ನನ್ನ ಒಡೆಯನ ದೇವರಾದ ಕರ್ತನು ಹಾಗೆಯೇ ಹೇಳಲಿ. ಕರ್ತನು ಅರಸನಾದ ನನ್ನ ಒಡೆಯನ ಸಂಗಡ ಹೇಗೆ ಇದ್ದನೋ ಹಾಗೆಯೇ ಸೊಲೊ ಮೋನನ ಸಂಗಡ ಇದ್ದು ನನ್ನ ಒಡೆಯನೂ ಅರಸನೂ ಆದ ದಾವೀದನ ಸಿಂಹಾಸನಕ್ಕಿಂತ ಇವನ ಸಿಂಹಾಸನ ವನ್ನು ಅಧಿಕವಾಗಮಾಡಲಿ ಅಂದನು. ಹಾಗೆಯೇ ಯಾಜಕನಾದ ಚಾದೋಕನೂ ಪ್ರವಾದಿಯಾದ ನಾತಾನನೂ ಯೆಹೋಯಾದಾವನ ಮಗನಾದ ಬೆನಾಯನೂ ಕೆರೆತ್ಯರೂ ಪೆಲೇತ್ಯರೂ ಹೋಗಿ ಸೊಲೊಮೋನನನ್ನು ಅರಸನಾದ ದಾವೀ ದನ ಹೇಸರ ಕತ್ತೆಯ ಮೇಲೆ ಏರಿಸಿ ಗೀಹೋನಿಗೆ ಕರತಂದರು. ಆಗ ಯಾಜಕನಾದ ಚಾದೋಕನು ಗುಡಾರದೊಳಗಿಂದ ತೈಲದ ಕೊಂಬನ್ನು ತಂದು ಸೊಲೊಮೋನನನ್ನು ಅಭಿಷೇಕಿಸಿದನು. ಅವರು ತುತೂರಿಯನ್ನು ಊದಿದರು. ಆಗ ಜನರೆಲ್ಲರು--ಅರಸನಾದ ಸೊಲೊಮೋನನನ್ನು ದೇವರು ರಕ್ಷಿಸಲಿ ಅಂದರು. ಇದಲ್ಲದೆ ಜನರೆಲ್ಲರು ಅವನ ಹಿಂದೆ ಬಂದರು. ಜನರು ಪಿಳ್ಳಂಗೋವಿಗಳನ್ನು ಊದಿ ಮಹಾ ಆನಂದದಿಂದ ಸಂತೋಷಿಸಿದರು. ಅವರ ಶಬ್ದದಿಂದ ಭೂಮಿಯು ಕಂಪಿಸಿತು.
- Galatians 2:11 ಗಲಾತ್ಯದವರಿಗೆ 2:11ಪೇತ್ರನು ಅಂತಿಯೋಕ್ಯಕ್ಕೆ ಬಂದಾಗ ಅವನು ದೋಷಿಯಾಗಿ ಕಾಣಿಸಿಕೊಂಡದ್ದರಿಂದ ನಾನು ಅವ ನನ್ನು ಮುಖಾಮುಖಿಯಾಗಿ ಎದುರಿಸಿದೆನು.
- 2 Samuel 12:7 2 ಸಮುವೇಲನು 12:7ಆಗ ನಾತಾನನು ದಾವೀದನಿಗೆ--ನೀನೇ ಆ ಮನು ಷ್ಯನು. ಇಸ್ರಾಯೇಲಿನ ದೇವರಾದ ಕರ್ತನು--ನಾನು ನಿನ್ನನ್ನು ಇಸ್ರಾಯೇಲಿನ ಮೇಲೆ ಅರಸನಾಗಿ ಅಭಿಷೇಕ ಮಾಡಿ ನಿನ್ನನ್ನು ಸೌಲನ ಕೈಗೆ ತಪ್ಪಿಸಿಬಿಟ್ಟು
- 2 Peter 3:15–16 2 ಪೇತ್ರನು 3:15–16ನಮ್ಮ ಕರ್ತನ ದೀರ್ಘಶಾಂತಿಯು ನಮ್ಮ ರಕ್ಷಣಾರ್ಥವಾಗಿ ಅದೆ ಎಂದು ಎಣಿಸಿಕೊಳ್ಳಿರಿ. ನಮ್ಮ ಪ್ರಿಯ ಸಹೋದರನಾದ ಪೌಲನು ಸಹ ತನಗೆ ಅನುಗ್ರಹಿಸಿರುವ ಜ್ಞಾನದ ಪ್ರಕಾರ ನಿಮಗೆ ಬರೆದನು. ಅವನು ತನ್ನ ಎಲ್ಲಾ ಪತ್ರಿಕೆಗಳಲ್ಲಿಯೂ ಈ ವಿಷಯ ಗಳನ್ನು ಕುರಿತು ಹೇಳಿದ್ದಾನೆ. ಆ ಪತ್ರಿಕೆಗಳಲ್ಲಿರುವ ಕೆಲವು ವಿಷಯಗಳು ತಿಳಿಯುವದಕ್ಕೆ ಕಷ್ಟವಾಗಿವೆ. ವಿದ್ಯಾಹೀನರೂ ಚಪಲಚಿತ್ತರೂ ಮಿಕ್ಕಾದ ಬರಹಗಳಿಗೆ ಸಹ ತಪ್ಪಾದ ಅರ್ಥಮಾಡಿಕೊಂಡ ಹಾಗೆಯೇ ಇವುಗಳಿಗೂ ತಪ್ಪಾದ ಅರ್ಥಮಾಡಿಕೊಂಡು ತವ
- 1 Kings 1:23 1 ಅರಸುಗಳು 1:23ಆಗ ಅರಸನಿಗೆ--ಇಗೋ, ಪ್ರವಾದಿ ಯಾದ ನಾತಾನನು ಅಂದರು. ಅವನು ಒಳಗೆ ಅರಸನ ಮುಂದೆ ಬಂದಾಗ ಮೋರೆ ಕೆಳಗಾಗಿ ನೆಲಕ್ಕೆ ಅಡ್ಡ ಬಿದ್ದನು. ಆಗ ನಾತಾನನು--ಓ ಅರಸನಾದ ನನ್ನ ಒಡೆಯನೇ,
- Proverbs 29:5 ಜ್ಞಾನೋಕ್ತಿಗಳು 29:5ತನ್ನ ನೆರೆಯವ ನನ್ನು ಮುಖಸ್ತುತಿ ಮಾಡುವವನು ಅವನ ಪಾದಗಳಿಗೆ ಬಲೆಯನ್ನು ಒಡ್ಡುತ್ತಾನೆ.