Psalms · chapter 103 · verse 3
Psalm 103:3 in Kannada
ಆತನು ನಿನ್ನ ಅಪ ರಾಧಗಳನ್ನೆಲ್ಲಾ ಮನ್ನಿಸಿ ನಿನ್ನ ರೋಗಗಳನ್ನೆಲ್ಲಾ ಸ್ವಸ್ಥ ಮಾಡಿ
Aatanu ninna apa raadhagalannellaa mannisi ninna rogagalannellaa svastha maadi
Psalm 103:3 in English
- King James Version (KJV)
- Who forgiveth all thine iniquities; who healeth all thy diseases;
- World English Bible (WEB)
- who forgives all your sins, who heals all your diseases,
- American Standard Version (ASV)
- Who forgiveth all thine iniquities; Who healeth all thy diseases;
- Bible in Basic English (BBE)
- He has forgiveness for all your sins; he takes away all your diseases;
- Darby Translation (DBY)
- Who forgiveth all thine iniquities, who healeth all thy diseases;
- Webster's Bible (WBS)
- Who forgiveth all thy iniquities; who healeth all thy diseases;
- Young's Literal Translation (YLT)
- Who is forgiving all thine iniquities, Who is healing all thy diseases,
Read in context
- 1ಓ ನನ್ನ ಮನವೇ, ಕರ್ತನನ್ನೂ ನನ್ನ ಎಲ್ಲಾ ಅಂತರಂಗವೇ, ಆತನ ಪರಿಶುದ್ಧವಾದ ಹೆಸರನ್ನೂ ಸ್ತುತಿಸು.
- 2ಓ ನನ್ನ ಮನವೇ, ಕರ್ತನನ್ನು ಸ್ತುತಿಸು. ಆತನ ಉಪಕಾರಗಳಲ್ಲಿ ಒಂದನ್ನೂ ಮರೆತುಬಿಡಬೇಡ.
- 3ಆತನು ನಿನ್ನ ಅಪ ರಾಧಗಳನ್ನೆಲ್ಲಾ ಮನ್ನಿಸಿ ನಿನ್ನ ರೋಗಗಳನ್ನೆಲ್ಲಾ ಸ್ವಸ್ಥ ಮಾಡಿ
- 4ನಿನ್ನ ಜೀವವನ್ನು ನಾಶದೊಳಗಿಂದ ವಿಮೋ ಚಿಸಿ ಪ್ರೀತಿ ಕೃಪೆಯನ್ನೂ ಅಂತಃಕರಣಗಳನ್ನೂ ನಿನಗೆ ಕಿರೀಟವಾಗಿ ಇಟ್ಟು
- 5ನಿನ್ನ ಯೌವನವು ಹದ್ದಿನಂತೆ ಹೊಸದಾಗುವ ಹಾಗೆ ನಿನ್ನ ಬಾಯಿಯನ್ನು ಒಳ್ಳೇದ ರಿಂದ ತೃಪ್ತಿಪಡಿಸುತ್ತಾನೆ.
Cross references
- Exodus 15:26 ವಿಮೋಚನಕಾಂಡ 15:26ಆತನು-- ನೀನು ನಿನ್ನ ದೇವರಾದ ಕರ್ತನ ಸ್ವರಕ್ಕೆ ಶ್ರದ್ಧೆಯಿಂದ ಕಿವಿಗೊಟ್ಟು ಆತನ ದೃಷ್ಟಿಯಲ್ಲಿ ಸರಿಯಾದದ್ದನ್ನು ಮಾಡಿ ಆತನ ಆಜ್ಞೆಗಳಿಗೆ ಕಿವಿಗೊಟ್ಟು ಆತನ ನಿಯಮ ಗಳನ್ನು ಕೈಕೊಂಡರೆ ಐಗುಪ್ತ್ಯರ ಮೇಲೆ ಬರಮಾಡಿದ ಯಾವ ವ್ಯಾಧಿಯನ್ನೂ ನಿನ್ನ ಮೇಲೆ ಬರಮಾಡುವದಿಲ್ಲ; ನಿನ್ನನ್ನು ಸ್ವಸ್ಥಪಡಿಸುವ ಕರ್ತನು ನಾನೇ ಆಗಿದ್ದೇನೆ ಅಂದನು.ತರುವಾಯ ಅವರು ಹನ್ನೆರಡು ನೀರಿನ ಬಾವಿಗಳೂ ಎಪ್ಪತ್ತು ಖರ್ಜೂರದ ಮರಗಳೂ ಇದ್ದ ಏಲೀಮಿಗೆ ಬಂದರು. ಅವರು ಆ ನೀರುಗಳ ಬಳಿಯಲ್ಲಿ ಇಳುಕೊಂಡರು.
- Isaiah 53:5 ಯೆಶಾಯ 53:5ನಮ್ಮ ದ್ರೋಹಗಳ ನಿಮಿತ್ತ ಆತನಿಗೆ ಗಾಯವಾಯಿತು, ನಮ್ಮ ದುಷ್ಕೃತ್ಯಗಳ ನಿಮಿತ್ತ ಆತನು ಜಜ್ಜಲ್ಪಟ್ಟನು; ನಮ್ಮ ಸಮಾಧಾನಕ್ಕೆ ಕಾರಣವಾದ ಶಿಕ್ಷೆಯು ಆತನ ಮೇಲೆ ಬಿತ್ತು; ಆತನ ಬಾಸುಂಡೆ ಗಳಿಂದ ನಮಗೆ ಸ್ವಸ್ಥವಾಯಿತು.
- Jeremiah 17:14 ಯೆರೆಮೀಯ 17:14ಓ ಕರ್ತನೇ, ನನ್ನನ್ನು ಸ್ವಸ್ಥಮಾಡು, ಆಗ ಸ್ವಸ್ಥನಾಗು ವೆನು; ನನ್ನನ್ನು ರಕ್ಷಿಸು, ಆಗ ರಕ್ಷಿಸಲ್ಪಡುವೆನು; ನೀನೇ ನನ್ನ ಸ್ತೋತ್ರವು.
- Psalm 30:2 ಕೀರ್ತನೆಗಳು 30:2ನನ್ನ ದೇವರಾದ ಓ ಕರ್ತನೇ, ನಿನಗೆ ಮೊರೆಯಿಡಲು ನನ್ನನ್ನು ಸ್ವಸ್ಥಮಾಡಿದ್ದೀ.
- Psalm 41:3–4 ಕೀರ್ತನೆಗಳು 41:3–4ಹಾಸಿಗೆಯ ಮೇಲೆ ಕ್ಷೀಣಿಸುವ ವನನ್ನು ಕರ್ತನು ಬಲಪಡಿಸುವನು. ನೀನು ಅವನ ರೋಗದಲ್ಲಿ ಹಾಸಿಗೆಯನ್ನು ಸರಿಮಾಡುವಿ. ಕರ್ತನೇ, ನನಗೆ ಕರುಣೆ ತೋರಿಸಿ ನನ್ನ ಪ್ರಾಣವನ್ನು ಸ್ವಸ್ಥಮಾಡು; ನಿನಗೆ ವಿರೋಧವಾಗಿ ಪಾಪಮಾಡಿದೆ ನೆಂದು ನಾನು ಹೇಳಿದೆನು.
- Psalm 147:3 ಕೀರ್ತನೆಗಳು 147:3ಆತನು ಮುರಿದ ಹೃದಯದವರನ್ನು ಸ್ವಸ್ಥಮಾಡಿ ಅವರ ಗಾಯಗಳನ್ನು ಕಟ್ಟುತ್ತಾನೆ.
- Mark 2:10–11 ಮಾರ್ಕನು 2:10–11ಆದರೆ ಪಾಪಗಳನ್ನು ಕ್ಷಮಿಸಿಬಿಡುವದಕ್ಕೆ ಮನುಷ್ಯಕುಮಾರನಿಗೆ ಭೂಲೋಕದಲ್ಲಿ ಅಧಿಕಾರ ಉಂಟೆಂಬದು ನಿಮಗೆ ತಿಳಿಯಬೇಕು ಎಂದು ಹೇಳಿ (ಪಾರ್ಶ್ವವಾಯು ರೋಗಿಗೆ)-- ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಿನ್ನ ಮನೆಗೆ ಹೋಗು ಎಂದು ನಾನು ನಿನಗೆ ಹೇಳುತ್ತೇನೆ ಅಂದನು.
- James 5:15 ಯಾಕೋಬನು 5:15ನಂಬಿಕೆಯಿಂದ ಮಾಡಿದ ಪ್ರಾರ್ಥನೆ ಯು ರೋಗಿಯನ್ನು ರಕ್ಷಿಸುವದು; ಕರ್ತನು ಅವನನ್ನು ಎಬ್ಬಿಸುವನು, ಪಾಪಗಳನ್ನು ಮಾಡಿದವನಾಗಿದ್ದರೆ ಅವು ಕ್ಷಮಿಸಲ್ಪಡುವವು.
- Isaiah 43:25 ಯೆಶಾಯ 43:25ನಾನಾಗಿ ನಾನೇ ನನಗೋಸ್ಕರ ನಿನ್ನ ದ್ರೋಹಗಳನ್ನು ಅಳಿಸಿಬಿಡುತ್ತೇನೆ. ನಿನ್ನ ಪಾಪ ಗಳನ್ನು ನನ್ನ ನೆನಪಿನಲ್ಲಿಡೆನು.
- Mark 2:5 ಮಾರ್ಕನು 2:5ಯೇಸು ಅವರ ನಂಬಿಕೆಯನ್ನು ನೋಡಿ ಆ ಪಾರ್ಶ್ವವಾಯು ರೋಗಿಗೆ--ಮಗನೇ, ನಿನ್ನ ಪಾಪಗಳು ನಿನಗೆ ಕ್ಷಮಿಸಲ್ಪಟ್ಟಿವೆ ಎಂದು ಹೇಳಿದನು.
- Luke 7:47–48 ಲೂಕನು 7:47–48ಆದದರಿಂದ ನಾನು ಹೇಳುವದೇ ನಂದರೆ--ಬಹಳವಾಗಿರುವ ಅವಳ ಪಾಪಗಳು ಕ್ಷಮಿಸ ಲ್ಪಟ್ಟಿವೆ. ಯಾಕಂದರೆ ಅವಳು ಬಹಳವಾಗಿ ಪ್ರೀತಿಸಿ ದಳು; ಆದರೆ ಯಾವನಿಗೆ ಸ್ವಲ್ಪವಾಗಿ ಕ್ಷಮಿಸಲ್ಪಡು ವದೋ ಅವನು ಸ್ವಲ್ಪವಾಗಿ ಪ್ರೀತಿಸುವನು. ಆತನು ಆಕೆಗೆ--ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ ಅಂದನು.
- Psalm 107:17–22 ಕೀರ್ತನೆಗಳು 107:17–22ಮೂಢರು ತಮ್ಮ ದ್ರೋಹದಿಂದಲೂ ಅಕ್ರಮಗಳಿಂದಲೂ ಶ್ರಮೆಪಡುತ್ತಾರೆ. ಅವರ ಪ್ರಾಣವು ಎಲ್ಲಾ ಆಹಾರವನ್ನು ಅಸಹ್ಯಿಸುತ್ತದೆ; ಅವರು ಮರಣದ ಬಾಗಲುಗಳಿಗೆ ಸವಿಾಪಿಸುತ್ತಾರೆ. ಆಗ ಅವರು ತಮ್ಮ ಇಕ್ಕಟ್ಟಿನಲ್ಲಿ ಕರ್ತನಿಗೆ ಕೂಗಲು ಆತನು ಅವರನ್ನು ಅವರ ಸಂಕಟಗಳೊಳಗಿಂದ ರಕ್ಷಿಸುತ್ತಾನೆ. ಆತನು ತನ್ನ ವಾಕ್ಯವನ್ನು ಕಳುಹಿಸಿ ಅವರನ್ನು ಸ್ವಸ್ಥಮಾಡಿ ಅವರ ನಾಶನಗಳಿಂದ ಅವರನ್ನು ತಪ್ಪಿಸಿ ದನು. ಅವರು ಕರ್ತನನ್ನು ಆತನ ಒಳ್ಳೆಯತನ ಕ್ಕೋಸ್ಕರವೂ ಆತನು ಮನುಷ್ಯನ ಮಕ್ಕಳಿಗೆ ಮಾಡುವ ಅದ್ಭುತಗಳಿಗೋಸ್ಕರವೂ ಕೊಂಡಾಡಲಿ. ಸ್ತೋತ್ರದ ಬಲಿಗಳನ್ನು ಅರ್ಪಿಸಿ ಆತನ ಕೆಲಸಗಳನ್ನು ಉತ್ಸಾಹ ದಿಂದ ಸಾರಲಿ.