Psalms · chapter 30 · verse 2
Psalm 30:2 in Kannada
ನನ್ನ ದೇವರಾದ ಓ ಕರ್ತನೇ, ನಿನಗೆ ಮೊರೆಯಿಡಲು ನನ್ನನ್ನು ಸ್ವಸ್ಥಮಾಡಿದ್ದೀ.
Nanna devaraada o kartane, ninage moreyidalu nannannu svasthamaadiddee.
Psalm 30:2 in English
- King James Version (KJV)
- O LORD my God, I cried unto thee, and thou hast healed me.
- World English Bible (WEB)
- LORD my God, I cried to you, and you have healed me.
- American Standard Version (ASV)
- O Jehovah my God, I cried unto thee, and thou hast healed me.
- Bible in Basic English (BBE)
- O Lord my God, I sent up my cry to you, and you have made me well.
- Darby Translation (DBY)
- Jehovah my God, I cried unto thee, and thou hast healed me.
- Webster's Bible (WBS)
- O LORD my God, I cried to thee, and thou hast healed me.
- Young's Literal Translation (YLT)
- Jehovah my God, I have cried to Thee, And Thou dost heal me.
Read in context
- 1ಓ ಕರ್ತನೇ, ನಿನ್ನನ್ನು ಕೊಂಡಾಡುವೆನು; ನೀನು ನನ್ನ ಶತ್ರುಗಳು ನನ್ನ ವಿಷಯದಲ್ಲಿ ಸಂತೋಷಪಡದಂತೆ ಮಾಡಿ ನನ್ನನ್ನು ಮೇಲಕ್ಕೆ ಎತ್ತಿದ್ದೀ.
- 2ನನ್ನ ದೇವರಾದ ಓ ಕರ್ತನೇ, ನಿನಗೆ ಮೊರೆಯಿಡಲು ನನ್ನನ್ನು ಸ್ವಸ್ಥಮಾಡಿದ್ದೀ.
- 3ಓ ಕರ್ತನೇ, ನನ್ನ ಪ್ರಾಣವನ್ನು ಸಮಾಧಿಯಿಂದ ಎತ್ತಿದ್ದೀ; ನಾನು ತಗ್ಗಿಗೆ ಇಳಿಯದಂತೆ ನನ್ನನ್ನು ಜೀವದಲ್ಲಿ ಕಾಪಾಡಿದ್ದೀ.
- 4ಓ ಕರ್ತನ ಪರಿಶುದ್ಧರೇ, ಆತನನ್ನು ಕೀರ್ತಿಸಿರಿ; ಆತನ ಪರಿಶುದ್ಧತ್ವವನ್ನು ಜ್ಞಾಪಕಮಾಡಿ ಕೊಂಡಾಡಿರಿ.
Cross references
- Psalm 103:3–4 ಕೀರ್ತನೆಗಳು 103:3–4ಆತನು ನಿನ್ನ ಅಪ ರಾಧಗಳನ್ನೆಲ್ಲಾ ಮನ್ನಿಸಿ ನಿನ್ನ ರೋಗಗಳನ್ನೆಲ್ಲಾ ಸ್ವಸ್ಥ ಮಾಡಿ ನಿನ್ನ ಜೀವವನ್ನು ನಾಶದೊಳಗಿಂದ ವಿಮೋ ಚಿಸಿ ಪ್ರೀತಿ ಕೃಪೆಯನ್ನೂ ಅಂತಃಕರಣಗಳನ್ನೂ ನಿನಗೆ ಕಿರೀಟವಾಗಿ ಇಟ್ಟು
- 2 Kings 20:5 2 ಅರಸುಗಳು 20:5ನೀನು ತಿರುಗಿಕೊಂಡು ನನ್ನ ಜನರ ನಾಯಕನಾದ ಹಿಜ್ಕೀಯನಿಗೆ ಹೇಳಬೇಕಾದದ್ದೇ ನಂದರೆ--ನಾನು ನಿನ್ನ ಪ್ರಾರ್ಥನೆಯನ್ನು ಕೇಳಿದ್ದೇನೆ; ನಿನ್ನ ಕಣ್ಣೀರನ್ನು ನೋಡಿದ್ದೇನೆ; ಇಗೋ, ನಾನು ನಿನ್ನನ್ನು ಸ್ವಸ್ಥಮಾಡುತ್ತೇನೆ; ಮೂರನೇ ದಿವಸದಲ್ಲಿ ಕರ್ತನ ಮನೆಗೆ ಹೋಗುವಿ.
- Psalm 147:3 ಕೀರ್ತನೆಗಳು 147:3ಆತನು ಮುರಿದ ಹೃದಯದವರನ್ನು ಸ್ವಸ್ಥಮಾಡಿ ಅವರ ಗಾಯಗಳನ್ನು ಕಟ್ಟುತ್ತಾನೆ.
- Psalm 6:2 ಕೀರ್ತನೆಗಳು 6:2ಓ ಕರ್ತನೇ, ನನ್ನ ಮೇಲೆ ದಯವಿಡು; ಯಾಕಂದರೆ ನಾನು ಬಲಹೀನನಾಗಿದ್ದೇನೆ. ಓ ಕರ್ತನೇ, ನನ್ನನ್ನು ಸ್ವಸ್ಥಮಾಡು, ನನ್ನ ಎಲುಬುಗಳು ತಲ್ಲಣಿಸುತ್ತವೆ.
- Genesis 20:17 ಆದಿಕಾಂಡ 20:17ಆಗ ಅಬ್ರಹಾಮನು ದೇವರಿಗೆ ಪ್ರಾರ್ಥನೆ ಮಾಡಿದ್ದರಿಂದ ದೇವರು ಅಬೀಮೆಲೆಕನನ್ನೂ ಅವನ ಹೆಂಡತಿಯನ್ನೂ ಅವನ ದಾಸಿಯರನ್ನೂ ವಾಸಿಮಾಡಿ ದನು; ಆದದರಿಂದ ಅವರಿಗೆ ಮಕ್ಕಳಾದರು.ಕರ್ತನು ಅಬ್ರಹಾಮನ ಹೆಂಡತಿಯಾದ ಸಾರಳ ನಿಮಿತ್ತ ಅಬೀಮೆಲೆಕನ ಮನೆಯಲ್ಲಿದ್ದ ಸ್ತ್ರೀಯರೆಲ್ಲರೂ ಬಂಜೆಯರಾಗುವಂತೆ ಮಾಡಿದ್ದನು.
- Exodus 15:26 ವಿಮೋಚನಕಾಂಡ 15:26ಆತನು-- ನೀನು ನಿನ್ನ ದೇವರಾದ ಕರ್ತನ ಸ್ವರಕ್ಕೆ ಶ್ರದ್ಧೆಯಿಂದ ಕಿವಿಗೊಟ್ಟು ಆತನ ದೃಷ್ಟಿಯಲ್ಲಿ ಸರಿಯಾದದ್ದನ್ನು ಮಾಡಿ ಆತನ ಆಜ್ಞೆಗಳಿಗೆ ಕಿವಿಗೊಟ್ಟು ಆತನ ನಿಯಮ ಗಳನ್ನು ಕೈಕೊಂಡರೆ ಐಗುಪ್ತ್ಯರ ಮೇಲೆ ಬರಮಾಡಿದ ಯಾವ ವ್ಯಾಧಿಯನ್ನೂ ನಿನ್ನ ಮೇಲೆ ಬರಮಾಡುವದಿಲ್ಲ; ನಿನ್ನನ್ನು ಸ್ವಸ್ಥಪಡಿಸುವ ಕರ್ತನು ನಾನೇ ಆಗಿದ್ದೇನೆ ಅಂದನು.ತರುವಾಯ ಅವರು ಹನ್ನೆರಡು ನೀರಿನ ಬಾವಿಗಳೂ ಎಪ್ಪತ್ತು ಖರ್ಜೂರದ ಮರಗಳೂ ಇದ್ದ ಏಲೀಮಿಗೆ ಬಂದರು. ಅವರು ಆ ನೀರುಗಳ ಬಳಿಯಲ್ಲಿ ಇಳುಕೊಂಡರು.
- James 5:14–15 ಯಾಕೋಬನು 5:14–15ನಿಮ್ಮಲ್ಲಿ ಯಾವ ನಾದರೂ ಅಸ್ವಸ್ಥನಾಗಿರುವವನು ಇದ್ದಾನೋ? ಅವನು ಸಭೆಯ ಹಿರಿಯರನ್ನು ಕರೇಕಳುಹಿಸಲಿ; ಅವರು ಕರ್ತನ ಹೆಸರಿನಿಂದ ಎಣ್ಣೆಹಚ್ಚಿ ಅವನಿಗೋಸ್ಕರ ಪ್ರಾರ್ಥಿಸಲಿ. ನಂಬಿಕೆಯಿಂದ ಮಾಡಿದ ಪ್ರಾರ್ಥನೆ ಯು ರೋಗಿಯನ್ನು ರಕ್ಷಿಸುವದು; ಕರ್ತನು ಅವನನ್ನು ಎಬ್ಬಿಸುವನು, ಪಾಪಗಳನ್ನು ಮಾಡಿದವನಾಗಿದ್ದರೆ ಅವು ಕ್ಷಮಿಸಲ್ಪಡುವವು.
- Psalm 88:13 ಕೀರ್ತನೆಗಳು 88:13ಆದರೆ ನಾನು ಓ ಕರ್ತನೇ, ನಿನ್ನ ಕಡೆಗೆ ಮೊರೆಯಿಡುತ್ತೇನೆ. ಹೊತ್ತಾರೆ ನನ್ನ ಪ್ರಾರ್ಥ ನೆಯು ನಿನ್ನನ್ನು ಎದುರುಗೊಳ್ಳುವದು.
- Psalm 51:8 ಕೀರ್ತನೆಗಳು 51:8ನಾನು ಉತ್ಸಾಹವನ್ನೂ ಸಂತೋಷವನ್ನೂ ಕೇಳುವ ಹಾಗೆ ಮಾಡು. ಆಗ ನನ್ನ ಮುರಿದ ಎಲುಬುಗಳು ಆನಂದಿಸುವವು.
- Psalm 107:17–22 ಕೀರ್ತನೆಗಳು 107:17–22ಮೂಢರು ತಮ್ಮ ದ್ರೋಹದಿಂದಲೂ ಅಕ್ರಮಗಳಿಂದಲೂ ಶ್ರಮೆಪಡುತ್ತಾರೆ. ಅವರ ಪ್ರಾಣವು ಎಲ್ಲಾ ಆಹಾರವನ್ನು ಅಸಹ್ಯಿಸುತ್ತದೆ; ಅವರು ಮರಣದ ಬಾಗಲುಗಳಿಗೆ ಸವಿಾಪಿಸುತ್ತಾರೆ. ಆಗ ಅವರು ತಮ್ಮ ಇಕ್ಕಟ್ಟಿನಲ್ಲಿ ಕರ್ತನಿಗೆ ಕೂಗಲು ಆತನು ಅವರನ್ನು ಅವರ ಸಂಕಟಗಳೊಳಗಿಂದ ರಕ್ಷಿಸುತ್ತಾನೆ. ಆತನು ತನ್ನ ವಾಕ್ಯವನ್ನು ಕಳುಹಿಸಿ ಅವರನ್ನು ಸ್ವಸ್ಥಮಾಡಿ ಅವರ ನಾಶನಗಳಿಂದ ಅವರನ್ನು ತಪ್ಪಿಸಿ ದನು. ಅವರು ಕರ್ತನನ್ನು ಆತನ ಒಳ್ಳೆಯತನ ಕ್ಕೋಸ್ಕರವೂ ಆತನು ಮನುಷ್ಯನ ಮಕ್ಕಳಿಗೆ ಮಾಡುವ ಅದ್ಭುತಗಳಿಗೋಸ್ಕರವೂ ಕೊಂಡಾಡಲಿ. ಸ್ತೋತ್ರದ ಬಲಿಗಳನ್ನು ಅರ್ಪಿಸಿ ಆತನ ಕೆಲಸಗಳನ್ನು ಉತ್ಸಾಹ ದಿಂದ ಸಾರಲಿ.
- Psalm 118:18 ಕೀರ್ತನೆಗಳು 118:18ಕರ್ತನು ನನ್ನನ್ನು ಕಠಿಣವಾಗಿ ಶಿಕ್ಷಿಸಿದನು; ಮರಣಕ್ಕೆ ನನ್ನನ್ನು ಒಪ್ಪಿಸಲಿಲ್ಲ.