Psalms · chapter 104 · verse 21
Psalm 104:21 in Kannada
ಸಿಂಹದ ಮರಿಗಳು ಬೇಟೆ ಗೋಸ್ಕರವೂ ದೇವರಿಂದ ತಮ್ಮ ಆಹಾರವನ್ನು ಹುಡು ಕುವದಕ್ಕೋಸ್ಕರವೂ ಗರ್ಜಿಸುತ್ತವೆ.
Sinhada marigalu bete goskaravoo devarinda tamma aahaaravannu hudu kuvadakkoskaravoo garjisuttave.
Psalm 104:21 in English
- King James Version (KJV)
- The young lions roar after their prey, and seek their meat from God.
- World English Bible (WEB)
- The young lions roar after their prey, and seek their food from God.
- American Standard Version (ASV)
- The young lions roar after their prey, And seek their food from God.
- Bible in Basic English (BBE)
- The young lions go thundering after their food; searching for their meat from God.
- Darby Translation (DBY)
- The young lions roar after the prey, and to seek their food from God.
- Webster's Bible (WBS)
- The young lions roar after their prey, and seek their food from God.
- Young's Literal Translation (YLT)
- The young lions are roaring for prey, And to seek from God their food.
Read in context
- 19ನೇಮಿಸಿದ ಕಾಲಗಳಿಗೋಸ್ಕರ ಚಂದ್ರನನ್ನು ಉಂಟು ಮಾಡಿದ್ದಾನೆ; ಸೂರ್ಯನು ತನ್ನ ಅಸ್ತಮಾನ ವನ್ನು ತಿಳಿದಿದ್ದಾನೆ.
- 20ನೀನು ಕತ್ತಲನ್ನು ಬರಮಾಡುತ್ತೀ; ಆಗ ರಾತ್ರಿಯಾಗುತ್ತದೆ; ಅದರಲ್ಲಿ ಅಡವಿಯ ಮೃಗ ಗಳೆಲ್ಲಾ ಸಂಚರಿಸುತ್ತವೆ.
- 21ಸಿಂಹದ ಮರಿಗಳು ಬೇಟೆ ಗೋಸ್ಕರವೂ ದೇವರಿಂದ ತಮ್ಮ ಆಹಾರವನ್ನು ಹುಡು ಕುವದಕ್ಕೋಸ್ಕರವೂ ಗರ್ಜಿಸುತ್ತವೆ.
- 22ಸೂರ್ಯನು ಹುಟ್ಟಲು ಅವು ಕೂಡಿ ಬಂದು ತಮ್ಮ ಗವಿಗಳಲ್ಲಿ ಮಲಗುತ್ತವೆ.
- 23ಮನುಷ್ಯನು ತನ್ನ ಕೆಲಸಕ್ಕೂ ಸಾಯಂ ಕಾಲದ ವರೆಗೆ ತನ್ನ ಪ್ರಯಾಸಕ್ಕೂ ಹೊರಡುತ್ತಾನೆ.
Cross references
- Joel 1:20 ಯೋವೇಲ 1:20ಅಡವಿಯ ಮೃಗಗಳು ಸಹ ನಿನ್ನ ಕಡೆಗೆ ಹೂಂಕರಿಸುತ್ತವೆ; ನೀರಿನ ಹೊಳೆಗಳು ಬತ್ತಿ ಹೋಗಿವೆ; ಬೆಂಕಿಯು ಅಡವಿಯ ಮೇವಿನ ಸ್ಥಳಗಳನ್ನು ದಹಿಸಿಬಿಟ್ಟಿದೆ.
- Job 38:39 ಯೋಬನು 38:39ಸಿಂಹಕ್ಕೋಸ್ಕರ ನೀನು ಬೇಟೆಯಾಡುವಿಯೋ?
- Psalm 34:10 ಕೀರ್ತನೆಗಳು 34:10ಪ್ರಾಯದ ಸಿಂಹಗಳು ಕೊರತೆಯಾಗಿ ಹಸಿಯುತ್ತವೆ; ಆದರೆ ಕರ್ತನನ್ನು ಹುಡುಕುವವರು ಯಾವ ಒಳ್ಳೆಯ ದಕ್ಕಾದರೂ ಕೊರತೆ ಪಡುವದಿಲ್ಲ.
- Ezekiel 19:2–14 ಯೆಹೆಜ್ಕೇಲನು 19:2–14ಹೀಗೆ ಹೇಳು--ನಿನ್ನ ತಾಯಿ ಏನು? ಒಂದು ಸಿಂಹಿಣಿಯೇ, ಆಕೆ ಸಿಂಹಗಳ ಜೊತೆ ಮಲಗಿ ಪ್ರಾಯದ ಸಿಂಹಗಳ ಮಧ್ಯದಲ್ಲಿ ತನ್ನ ಮರಿಗಳನ್ನು ಸಾಕಿದಳು. ತನ್ನ ಮರಿಗಳಲ್ಲಿ ಒಂದನ್ನು ಬೆಳೆಸಿದಳು; ಇದು ಪ್ರಾಯದ ಸಿಂಹವಾಯಿತು, ಇದು ಕೊಳ್ಳೆ ಹೊಡೆಯು ವದನ್ನು ಕಲಿತು ಮನುಷ್ಯರನ್ನು ನುಂಗಿಬಿಟ್ಟಿತು. ಜನಾಂಗಗಳವರು ಅದರ ಸುದ್ದಿಯನ್ನು ಕೇಳಿದರು; ಅವರ ಹಳ್ಳದಲ್ಲಿ ಇದನ್ನು ಹಿಡಿದುಕೊಂಡರು, ಸಂಕೋ ಲೆಗಳಿಂದ ಬಂಧಿಸಿ ಐಗುಪ್ತದೇಶಕ್ಕೆ ತೆಗೆದುಕೊಂಡು ಹೋದರು. ಆಗ ಅವಳು ಅದನ್ನು ನೋಡಿ ತನ್ನ ನಿರೀಕ್ಷೆ ಕೆಟ್ಟುಹೋಯಿತೆಂದು ಕಾದು ತನ್ನ ಮರಿಗಳಲ್ಲಿ ಮತ್ತೊಂದನ್ನು ತೆಗೆದುಕೊಂಡು ಅದನ್ನು ಪ್ರಾಯದ ಸಿಂಹವಾಗಿ ಮಾಡಿದಳು. ಅದು ಸಿಂಹಗಳ ಮಧ್ಯೆ ತಿರುಗಾಡಿ ಪ್ರಾಯದ ಸಿಂಹವಾಗಿ ಕೊಳ್ಳೆ ಹೊಡೆ ಯುವದನ್ನು ಕಲಿತು ಮನುಷ್ಯರನ್ನು ನುಂಗಿಬಿಟ್ಟಿತು. ಅವರ ಅರಮನೆಗಳನ್ನು ಹಾಳು ಮಾಡಿತು; ಅವರ ನಗರಗಳನ್ನೂ ನಾಶಮಾಡಿತು. ಅದರ ಗರ್ಜನೆಯ ಶಬ್ದದಿಂದಾಗಿ ದೇಶವೂ ಅದರ ಪರಿಪೂರ್ಣತೆಯೂ ಬೀಡಾಗಿದ್ದನ್ನು ಅದು ತಿಳಿದುಕೊಂಡಿತು. ಆಗ ಜನಾಂಗಗಳು ಸುತ್ತಲಿನ ಪ್ರಾಂತ್ಯಗಳೊಳಗಿಂದ ಕೂಡಿ ಬಂದು ಅದಕ್ಕೆ ವಿರೋಧವಾಗಿ ನಿಂತು ಅದರ ಮೇಲೆ ಬಲೆಯನ್ನೊಡ್ಡಿದರು. ಆಗ ಅದು ಅವರ ಹಳ್ಳದಲ್ಲಿ ಸಿಕ್ಕಿ ಬಿದ್ದಿತು. ಅದಕ್ಕೆ ಸಂಕೋಲೆಗಳನ್ನು ತೊಡಿಸಿ, ಕಾವಲಿರಿಸಿ, ಬಾಬೆಲಿನ ಅರಸನ ಬಳಿಗೆ ತೆಗೆದುಕೊಂಡು ಹೋದರು. ಅದರ ಶಬ್ದವು ಇನ್ನು ಮೇಲೆ ಇಸ್ರಾ ಯೇಲಿನ ಪರ್ವತಗಳ ಮೇಲೆ ಕೇಳಲ್ಪಡದ ಹಾಗೆ ಅದನ್ನು ದುರ್ಗದಲ್ಲಿರಿಸಿದರು. ನಿನ್ನ ತಾಯಿ ನಿನ್ನ ರಕ್ತದಲ್ಲಿ ನೀರಿನ ಬಳಿ ನೆಟ್ಟ ದ್ರಾಕ್ಷೆಯ ಗಿಡದ ಹಾಗೆ ಇದ್ದಾಳೆ; ಅದು ನೀರಾವರಿ ಯಿಂದಲೂ ಫಲವುಳ್ಳದ್ದಾಗಿಯೂ ತುಂಬಾ ಕೊಂಬೆ ಗಳುಳ್ಳದ್ದಾಗಿಯೂ ಇದೆ. ಆಳುವವರ ರಾಜದಂಡ ಗಳಿಗೆ ತಕ್ಕ ಬಲವುಳ್ಳ ಬಳ್ಳಿಗಳು ಅದರಲ್ಲಿವೆ; ಅದರ ಉದ್ದವು ಎಲ್ಲಾ ರೆಂಬೆಗಳಿಗಿಂತ ಹೆಚ್ಚಾಗಿವೆ; ಹಾಗೆಯೇ ಅದು ತನ್ನ ಎತ್ತರಕ್ಕೆ ಬಹು ಕೊಂಬೆಗಳ ಮಧ್ಯದಲ್ಲಿ ಉದ್ದವಾಗಿ ಕಾಣಬರುತ್ತಿದೆ. ಆದರೆ ಅದು ರೋಷ ದಲ್ಲಿ ಕೀಳಲ್ಪಟ್ಟು ನೆಲಕ್ಕೆ ಹಾಕಲ್ಪಟ್ಟಿತು; ಮೂಡಣ ಗಾಳಿಯು ಅದರ ಫಲವನ್ನು ಒಣಗಿಸಿತು; ಬಲವಾದ ಬಳ್ಳಿಗಳು ಮುರಿಯಲ್ಪಟ್ಟು ಒಣಗಿ ಹೋದವು; ಬೆಂಕಿಯು ಅವುಗಳನ್ನು ಸುಟ್ಟುಹಾಕಿತು. ಈಗ ಅದು ಅರಣ್ಯದಲ್ಲಿ ಒಣಗಿ ನೀರಿಲ್ಲದಂಥ ಪ್ರದೇಶದಲ್ಲಿ ನೆಡಲ್ಪಟ್ಟಿದೆ.ಅದರ ಕೊಂಬೆಗಳ ಬಳ್ಳಿಗಳೊಳಗಿಂದ ಬೆಂಕಿಯು ಹೊರಟು ಅದರಲ್ಲಿ ಫಲವನ್ನು ತಿಂದು ಬಿಟ್ಟಿದೆ; ಅದರಲ್ಲಿ ಆಳುವದಕ್ಕೆ ರಾಜದಂಡಕ್ಕಾಗಿ ತಕ್ಕದಾದ ಬಲವುಳ್ಳ ಬಳ್ಳಿಯು ಈಗ ಇಲ್ಲ; ಇದು ಪ್ರಲಾಪವಾಗಿದೆ; ಪ್ರಲಾಪಕ್ಕಾಗಿಯೇ ಇದೆ. ಅದರ ಕೊಂಬೆಗಳ ಬಳ್ಳಿಗಳೊಳಗಿಂದ ಬೆಂಕಿಯು ಹೊರಟು ಅದರಲ್ಲಿ ಫಲವನ್ನು ತಿಂದು ಬಿಟ್ಟಿದೆ; ಅದರಲ್ಲಿ ಆಳುವದಕ್ಕೆ ರಾಜದಂಡಕ್ಕಾಗಿ ತಕ್ಕದಾದ ಬಲವುಳ್ಳ ಬಳ್ಳಿಯು ಈಗ ಇಲ್ಲ; ಇದು ಪ್ರಲಾಪವಾಗಿದೆ; ಪ್ರಲಾಪಕ್ಕಾಗಿಯೇ ಇದೆ.
- Joel 2:22 ಯೋವೇಲ 2:22ಹೊಲದ ಮೃಗಗಳೇ, ಭಯಪಡಬೇಡಿರಿ; ಅಡ ವಿಯ ಮೇವಿನ ಸ್ಥಳಗಳು ಮೊಳೆಯುತ್ತವೆ; ಮರಗಳು ತಮ್ಮ ಫಲವನ್ನು ಫಲಿಸುತ್ತವೆ; ಅಂಜೂರದ ಗಿಡವೂ ದ್ರಾಕ್ಷೇ ಬಳ್ಳಿಯೂ ತಮ್ಮ ಫಲವನ್ನು ಕೊಡುತ್ತವೆ.
- Job 38:41 ಯೋಬನು 38:41ಅದರ ಮರಿಗಳು ತಿನ್ನುವದಕ್ಕೆ ಇಲ್ಲದೆ ಅಲೆದು, ದೇವರಿಗೆ ಮೊರೆಯಿಡುವಾಗ ಕಾಗೆಗೆ ಅದರ ಆಹಾರವನ್ನು ಸಿದ್ಧಮಾಡುವವನಾರು?
- Psalm 147:9 ಕೀರ್ತನೆಗಳು 147:9ಆತನು ಪಶುಗಳಿಗೂ ಕೂಗುವ ಕಾಗೆ ಮರಿಗಳಿಗೂ ಆಹಾರ ಕೊಡುತ್ತಾನೆ.
- Psalm 145:15 ಕೀರ್ತನೆಗಳು 145:15ಎಲ್ಲರ ಕಣ್ಣುಗಳು ನಿನಗೆ ಕಾದುಕೊಳ್ಳುತ್ತವೆ; ನೀನು ಅವರಿಗೆ ಅವರ ಆಹಾರವನ್ನು ತಕ್ಕ ಕಾಲದಲ್ಲಿ ಕೊಡುತ್ತೀ.
- Amos 3:4 ಆಮೋಸ 3:4ಬೇಟೆ ಇಲ್ಲದಿದ್ದರೆ ಅಡವಿಯಲ್ಲಿ ಸಿಂಹವು ಗರ್ಜಿಸುವದೇ? ಏನಾದರೂ ಹಿಡಿಯದಿದ್ದರೆ ಗುಹೆಯಲ್ಲಿರುವ ಎಳೇ ಸಿಂಹವು ಅರ ಚುವದೇ?
- Isaiah 31:4 ಯೆಶಾಯ 31:4ಕರ್ತನು ನನಗೆ ಹೀಗೆ ಹೇಳಿದ್ದಾನೆ -- ಸಿಂಹವು, ಪ್ರಾಯದ ಸಿಂಹವು ಬೇಟೆಯ ಮೇಲೆ ಬಿದ್ದು ಗುರು ಗುಟ್ಟುತ್ತಿರುವಾಗ ಕಾವಲುಗಾರನ ಕೂಗನ್ನು ಕೇಳಿ ಕುರುಬರ ಗುಂಪು ಅದಕ್ಕೆ ವಿರುದ್ಧವಾಗಿ ಕೂಡಿ ಬಂದರೂ ಹೇಗೆ ಅವರ ಶಬ್ದಕ್ಕೆ ಭಯಪಡದೆ ಇಲ್ಲವೆ ಅವರ ಗದ್ದಲಕ್ಕೆ ಕುಂದಿಹೋಗದೆ ಇರುವದೋ ಹಾಗೆಯೇ ಸೈನ್ಯಗಳ ಕರ್ತನು ಚೀಯೋನ್ ಪರ್ವತ ಕ್ಕೋಸ್ಕರವೂ ಅದರ ಗುಡ್ಡಕ್ಕೋಸ್ಕರವೂ ಯುದ್ಧ ಮಾಡಲು ಇಳಿದು ಬರುವನು.
- Joel 1:18 ಯೋವೇಲ 1:18ಪಶುಗಳು ಎಷ್ಟೋ ಮುಲುಗುತ್ತವೆ; ದನದ ಹಿಂಡುಗಳು ಕಳವಳಗೊಂಡಿವೆ; ಅವಕ್ಕೆ ಮೇವು ಇಲ್ಲ; ಕುರಿಮಂದೆಗಳು ಸಹ ನಾಶ ವಾಗುತ್ತವೆ.