Psalms · chapter 104 · verse 19
Psalm 104:19 in Kannada
ನೇಮಿಸಿದ ಕಾಲಗಳಿಗೋಸ್ಕರ ಚಂದ್ರನನ್ನು ಉಂಟು ಮಾಡಿದ್ದಾನೆ; ಸೂರ್ಯನು ತನ್ನ ಅಸ್ತಮಾನ ವನ್ನು ತಿಳಿದಿದ್ದಾನೆ.
Nemisida kaalagaligoskara chandranannu untu maadiddaane; sooryanu tanna astamaana vannu tilididdaane.
Psalm 104:19 in English
- King James Version (KJV)
- He appointed the moon for seasons: the sun knoweth his going down.
- World English Bible (WEB)
- He appointed the moon for seasons. The sun knows when to set.
- American Standard Version (ASV)
- He appointed the moon for seasons: The sun knoweth his going down.
- Bible in Basic English (BBE)
- He made the moon for a sign of the divisions of the year; teaching the sun the time of its going down.
- Darby Translation (DBY)
- He made the moon for seasons: the sun knoweth its going down.
- Webster's Bible (WBS)
- He appointeth the moon for seasons: the sun knoweth his going down.
- Young's Literal Translation (YLT)
- He made the moon for seasons, The sun hath known his place of entrance.
Read in context
- 17ಅಲ್ಲಿ ಹಕ್ಕಿಗಳು ಗೂಡು ಕಟ್ಟುತ್ತವೆ; ಬಕದ ಮನೆಯು ತುರಾಯಿ ಗಿಡಗಳಲ್ಲಿ ಅದೆ.
- 18ಎತ್ತರವಾದ ಬೆಟ್ಟಗಳು ಕಾಡುಮೇಕೆಗಳಿಗೆ, ಬಂಡೆ ಗಳು ಮೊಲಗಳಿಗೆ ಆಶ್ರಯವಾಗಿವೆ.
- 19ನೇಮಿಸಿದ ಕಾಲಗಳಿಗೋಸ್ಕರ ಚಂದ್ರನನ್ನು ಉಂಟು ಮಾಡಿದ್ದಾನೆ; ಸೂರ್ಯನು ತನ್ನ ಅಸ್ತಮಾನ ವನ್ನು ತಿಳಿದಿದ್ದಾನೆ.
- 20ನೀನು ಕತ್ತಲನ್ನು ಬರಮಾಡುತ್ತೀ; ಆಗ ರಾತ್ರಿಯಾಗುತ್ತದೆ; ಅದರಲ್ಲಿ ಅಡವಿಯ ಮೃಗ ಗಳೆಲ್ಲಾ ಸಂಚರಿಸುತ್ತವೆ.
- 21ಸಿಂಹದ ಮರಿಗಳು ಬೇಟೆ ಗೋಸ್ಕರವೂ ದೇವರಿಂದ ತಮ್ಮ ಆಹಾರವನ್ನು ಹುಡು ಕುವದಕ್ಕೋಸ್ಕರವೂ ಗರ್ಜಿಸುತ್ತವೆ.
Cross references
- Jeremiah 31:35 ಯೆರೆಮೀಯ 31:35ಕರ್ತನು ಹೀಗೆ ಹೇಳುತ್ತಾನೆ--ಸೂರ್ಯನನ್ನು ಹಗಲಿಗೆ ಬೆಳಕಾಗಿಯೂ ಚಂದ್ರ ನಕ್ಷತ್ರಗಳ ನಿಯಮ ಗಳನ್ನು ರಾತ್ರಿಗೆ ಬೆಳಕಾಗಿಯೂ ಕೊಡುವವನೂ ಅದರ ತೆರೆಗಳು ಘೋಷಿಸುವಾಗ ಸಮುದ್ರವನ್ನು ವಿಭಾಗಿಸು ವವನೂ ಸೈನ್ಯಗಳ ಕರ್ತನೆಂದು ಹೆಸರುಳ್ಳವನೂ ಹೇಳು ವದೇನಂದರೆ--
- Genesis 1:14–18 ಆದಿಕಾಂಡ 1:14–18ದೇವರು--ಹಗಲನ್ನು ರಾತ್ರಿಯಿಂದ ಬೇರೆ ಮಾಡುವದಕ್ಕೆ ಆಕಾಶದ ವಿಶಾಲದಲ್ಲಿ ಬೆಳಕುಗಳಿರಲಿ; ಅವು ಹಗಲಿರುಳುಗಳನ್ನೂ ಸಮಯ ದಿನ ಸಂವತ್ಸರ ಗಳನ್ನೂ ತೋರಿಸುವದಕ್ಕೆ ಗುರುತುಗಳಾಗಿರಲಿ; ಅವು ಭೂಮಿಯ ಮೇಲೆ ಬೆಳಕುಕೊಡುವಂತೆ ಆಕಾಶದ ವಿಶಾಲದಲ್ಲಿ ಬೆಳಕುಗಳಾಗಿರಲಿ ಅಂದನು. ಅದು ಹಾಗೆಯೇ ಆಯಿತು. ದೇವರು ಎರಡು ದೊಡ್ಡ ಬೆಳಕುಗಳನ್ನು ಮಾಡಿದನು; ದೊಡ್ಡ ಬೆಳಕು ಹಗಲನ್ನಾಳುವದಕ್ಕೂ ಚಿಕ್ಕ ಬೆಳಕು ರಾತ್ರಿಯನ್ನಾಳು ವದಕ್ಕೂ ಮಾಡಿದ್ದಲ್ಲದೆ ನಕ್ಷತ್ರಗಳನ್ನು ಸಹ ಮಾಡಿ ದನು. ಭೂಮಿಯ ಮೇಲೆ ಬೆಳಕುಕೊಡುವದಕ್ಕಾಗಿ ದೇವರು ಆಕಾಶದ ವಿಶಾಲದಲ್ಲಿ ಅವುಗಳನ್ನು ಇರಿಸಿದನು. ಇದಲ್ಲದೆ ಅವು ಹಗಲನ್ನು ಮತ್ತು ರಾತ್ರಿಯನ್ನು ಆಳುವದಕ್ಕೂ ಬೆಳಕನ್ನು ಕತ್ತಲೆಯಿಂದ ಬೇರೆ ಮಾಡುವದಕ್ಕೂ ಇರಿಸಿದನು. ದೇವರು ಅದನ್ನು ಒಳ್ಳೆಯದೆಂದು ನೋಡಿದನು.
- Psalm 136:7–9 ಕೀರ್ತನೆಗಳು 136:7–9ದೊಡ್ಡ ಬೆಳಕುಗಳನ್ನು ಉಂಟು ಮಾಡಿದಾತ ನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ. ಹಗಲನ್ನು ಆಳುವದಕ್ಕೆ ಸೂರ್ಯನನ್ನು ಉಂಟು ಮಾಡಿದಾತನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ. ಇರುಳನ್ನು ಆಳುವದಕ್ಕೆ ಚಂದ್ರ ನಕ್ಷತ್ರಗಳನ್ನು ಉಂಟು ಮಾಡಿದಾತನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.
- Job 38:12 ಯೋಬನು 38:12ನಿನ್ನ ದಿವಸಗಳಾರಭ್ಯ ಬೆಳಿಗ್ಗೆಗೆ ಅಪ್ಪಣೆ ಕೊಟ್ಟಿಯೋ?
- Psalm 8:3 ಕೀರ್ತನೆಗಳು 8:3ನಿನ್ನ ಕೈಕೆಲಸವಾದ ಆಕಾಶಗಳನ್ನೂ ನೀನು ಸಿದ್ಧ ಮಾಡಿದ ಚಂದ್ರ ನಕ್ಷತ್ರಗಳನ್ನೂ ನಾನು ಆಲೋ ಚಿಸುವಾಗ
- Psalm 19:6 ಕೀರ್ತನೆಗಳು 19:6ಆಕಾಶದ ಅಂತ್ಯದಿಂದ ಹೊರಟು ಅದರ ಅಂತ್ಯಗಳ ವರೆಗೆ ಸುತ್ತುತ್ತಾನೆ; ಅವನ ಬಿಸಿಲಿಗೆ ಮರೆಯಾದದ್ದು ಒಂದೂ ಇಲ್ಲ.
- Job 31:26–28 ಯೋಬನು 31:26–28ಸೂರ್ಯನು ಹೊಳೆಯುವದನ್ನು ಚಂದ್ರನು ಪ್ರಭೆಯಲ್ಲಿ ನಡೆಯುವದನ್ನು ನಾನು ನೋಡಲಾಗಿ, ನನ್ನ ಹೃದಯವು ಅಂತರಂಗದಲ್ಲಿ ಮರುಳುಗೊಂಡು, ನನ್ನ ಬಾಯಿಂದ ನನ್ನ ಕೈಯನ್ನು ಮುದ್ದಿಟ್ಟಿದ್ದರೆ; ಇದು ಸಹ ನ್ಯಾಯಾಧಿಪತಿಯಿಂದ ಶಿಕ್ಷಿಸಲ್ಪಡುವ ಅಪರಾಧವಾಗಿದೆ; ಯಾಕಂದರೆ ಉನ್ನತ ದಲ್ಲಿರುವ ದೇವರನ್ನು ಬೊಂಕಿದವನಾಗಿರುವೆನು.
- Deuteronomy 4:19 ಧರ್ಮೋಪದೇಶಕಾಂಡ 4:19ನೀನು ನಿನ್ನ ಕಣ್ಣು ಗಳನ್ನು ಆಕಾಶದ ಕಡೆಗೆ ಎತ್ತಿ ಸೂರ್ಯ, ಚಂದ್ರ, ನಕ್ಷತ್ರಗಳ ಆಕಾಶ ಸೈನ್ಯವನ್ನೆಲ್ಲಾ ನೋಡಲಾಗಿ ನಿನ್ನ ದೇವರಾದ ಕರ್ತನು ಆಕಾಶದ ಕೆಳಗಿರುವ ಎಲ್ಲಾ ಜನಾಂಗಗಳಿಗೆ ಹಂಚಿಕೊಟ್ಟ ಇವುಗಳಿಗೆ ಅಡ್ಡಬಿದ್ದು ಇವುಗಳನ್ನು ಸೇವಿಸುವದಕ್ಕೆ ನಡಿಸಲ್ಪಡದಂತೆಯೂ ನೋಡಿಕೊಳ್ಳಿರಿ.